ಪುತ್ತೂರು

ಬಪ್ಪಳಿಗೆ ಸಿಂಗಾಣಿಯಲ್ಲಿ ನಡೆಯುವ ಶ್ರೀಕೃಷ್ಣ ಜನ್ಮಾಷ್ಟಮಿ, ಮೊಸರುಕುಡಿಕೆ ಉತ್ಸವದ ಆಮಂತ್ರಣ ಪತ್ರಿಕೆ ಬಿಡುಗಡೆ

ಪುತ್ತೂರು: ನಗರದ ಬಪ್ಪಳಿಗೆ ಸಿಂಗಾಣಿಯಲ್ಲಿ ನಡೆಯುವ 2ನೇ ವರ್ಷದ ಶ್ರೀಕೃಷ್ಣ ಜನ್ಮಾಷ್ಠಮಿ ಮೊಸರು ಕುಡಿಕೆ ಉತ್ಸವದ ಆಮಂತ್ರಣ ಪತ್ರಿಕೆ ಬಿಡುಗಡೆ ಕಾರ್ಯಕ್ರಮ ಶ್ರೀ ಮಹಾಲಿಂಗೇಶ್ವರ ದೇವಸ್ಥಾನದಲ್ಲಿ ನಡೆಯಿತು. ಮೊದಲಿಗೆ ಮಹಾಲಿಂಗೇಶ್ವರ ದೇವರಿಗೆ ಎಂಸಿಬಿ ಆರ್ಟ್ಸ್‌ ಆಂಡ್ ಸ್ಪೋರ್ಟ್ಸ್ ಕ್ಲಬ್ ಬಪ್ಪಳಿಗೆ ಮತ್ತು ಸಾರ್ವಜನಿಕ ಶ್ರೀಕೃಷ್ಣ ಜನ್ಮಾಷ್ಠಮಿ ಸಮಿತಿ ವತಿಯಿಂದ ಪೂಜೆ ಸಲ್ಲಿಸಲಾಯಿತು. ಬಳಿಕ ದೇವಾಲಯದ ಪ್ರಧಾನ ಅರ್ಚಕ ವಸಂತ ಕೆದಿಲಾಯ ಅವರು ಆಮಂತ್ರಣ ಪತ್ರಿಕೆಯನ್ನ ಬಿಡುಗಡೆಗೊಳಿಸಿದರು. ಹಾಗೆಯೇ ಬಲ್ನಾಡು ಶ್ರೀ ದಂಡನಾಯಕ ಉಳ್ಳಾಲ್ತಿ ಅಮ್ಮನವರ ಆಶೀರ್ವಾದವನ್ನ ಪಡೆದ […]

ಬಪ್ಪಳಿಗೆ ಸಿಂಗಾಣಿಯಲ್ಲಿ ನಡೆಯುವ ಶ್ರೀಕೃಷ್ಣ ಜನ್ಮಾಷ್ಟಮಿ, ಮೊಸರುಕುಡಿಕೆ ಉತ್ಸವದ ಆಮಂತ್ರಣ ಪತ್ರಿಕೆ ಬಿಡುಗಡೆ Read More »

ಚದುರಂಗ ಸ್ಪರ್ಧೆಯಲ್ಲಿ ವಿವೇಕಾನಂದ ಪದವಿಪೂರ್ವ ಕಾಲೇಜಿನ ಬಾಲಕರ ಹಾಗೂ ಬಾಲಕಿಯರ ತಂಡಕ್ಕೆ ದ್ವಿತೀಯ ಸ್ಥಾನ | ಧನುಷ್‌ರಾಮ್ ರಾಜ್ಯ ಮಟ್ಟದ ಚೆಸ್ ಸ್ಪರ್ಧೆಗೆ ಆಯ್ಕೆ

ಪುತ್ತೂರು : ಪದವಿ ಪೂರ್ವ ಶಿಕ್ಷಣ ಶಿಕ್ಷಣ ಇಲಾಖೆ ಹಾಗೂ ವಿವೇಕಾನಂದ ಪದವಿ ಪೂರ್ವ ಕಾಲೇಜಿನ ಸಹಭಾಗಿತ್ವದಲ್ಲಿ ಪುತ್ತೂರಿನ ವಿವೇಕಾನಂದ ಪ.ಪೂ ಕಾಲೇಜಿನಲ್ಲಿ ನಡೆದ ಜಿಲ್ಲಾಮಟ್ಟದ ಚೆಸ್ ಪಂದ್ಯಾಟದಲ್ಲಿ ವಿವೇಕಾನಂದ ಪದವಿ ಪೂರ್ವ ಕಾಲೇಜಿನ ಬಾಲಕರ ಹಾಗೂ ಬಾಲಕಿಯರ ತಂಡ ದ್ವಿತೀಯ ಪ್ರಶಸ್ತಿಯನ್ನು ಪಡೆದಿದೆ. ಬಾಲಕಿಯರ ವಿಭಾಗವನ್ನು ವಿದ್ಯಾರ್ಥಿನಿಯರಾದ ಪ್ರಥಮ ಪಿಯುಸಿ ವಿಜ್ಞಾನ ವಿಭಾಗದ ಅವನಿ ಎಸ್ ನಾಯಕ್, ದ್ವಿತೀಯ ಪಿಯುಸಿ ವಿಜ್ಞಾನ ವಿಭಾಗದ ಮನ್ಯ ಅಂಬೆಕಲ್ಲು, ತೃಪ್ತಿ ಜಿ ಆರ್, ಭೂಮಿಕಾ, ರಕ್ಷಿತಾ ಪ್ರತಿನಿಧಿಸಿದ್ದರು. ಬಾಲಕರ

ಚದುರಂಗ ಸ್ಪರ್ಧೆಯಲ್ಲಿ ವಿವೇಕಾನಂದ ಪದವಿಪೂರ್ವ ಕಾಲೇಜಿನ ಬಾಲಕರ ಹಾಗೂ ಬಾಲಕಿಯರ ತಂಡಕ್ಕೆ ದ್ವಿತೀಯ ಸ್ಥಾನ | ಧನುಷ್‌ರಾಮ್ ರಾಜ್ಯ ಮಟ್ಟದ ಚೆಸ್ ಸ್ಪರ್ಧೆಗೆ ಆಯ್ಕೆ Read More »

ನರೇಂದ್ರ ಪ.ಪೂ.ಕಾಲೇಜಿನಲ್ಲಿ ಓಣಂ ಆಚರಣೆ

ಪುತ್ತೂರು : ಕೇರಳದ ಸಂಸ್ಕೃತಿ ಮತ್ತು ಸಾಂಪ್ರದಾಯಿಕ ಆಚರಣೆ ಈ ಓಣಂ.ಬಲಿ ರಾಜನು ಓಣಂ ಹಬ್ಬದ ದಿನದಂದು ತನ್ನ ಪ್ರಜೆಗಳನ್ನು ಭೇಟಿ ಮಾಡಲು ಮತ್ತು ಅವರ ಎಲ್ಲಾ ತೊಂದರೆಗಳನ್ನು ತೆಗೆದು ಹಾಕಲು ಬರುತ್ತಾನೆ ಎಂಬ ನಂಬಿಕೆಯಿದೆ. ಉತ್ತಮ ಫಸಲು ಮತ್ತು ಇಳುವರಿಗಾಗಿ ಓಣಂ ಹಬ್ಬವನ್ನು ಆಚರಿಸಲಾಗುತ್ತದೆ. ರೈತ ಸಮುದಾಯ ಸೇರಿದಂತೆ ಕೇರಳದ ಎಲ್ಲರಿಗೂ ಇದು ಬಹಳ ದೊಡ್ಡ ಹಬ್ಬ. ಹೊಸತನ,ವೈವಿಧ್ಯತೆಯನ್ನು ಹೊಂದಿರುವ ಈ ಆಚರಣೆಯನ್ನು ಸುಗ್ಗಿಯ ಹಬ್ಬ ಎಂದೂ ಕರೆಯಲಾಗುತ್ತದೆ. ಎಂದು ವಿವೇಕಾನಂದ ಕನ್ನಡ ಮಾಧ್ಯಮ ಶಾಲೆಯ

ನರೇಂದ್ರ ಪ.ಪೂ.ಕಾಲೇಜಿನಲ್ಲಿ ಓಣಂ ಆಚರಣೆ Read More »

ಪುತ್ತೂರಿನಲ್ಲಿ ಹೊಸ ಶಾಸಕರು ಕೋಟಿ ಕೋಟಿ ಘೋಷಣೆ ಮಾಡ್ತಾರೆ ! ಮುಖ್ಯಮಂತ್ರಿಗಳು ಮುಂದಿನ ಒಂದು ವರ್ಷದ ತನಕ ಅಭಿವೃದ್ಧಿಗೆ ಅನುದಾನ ಇಲ್ಲಾ ಅಂತಾರೆ ! ಹಾಗಾದರೆ ಕೋಟಿ ಎಲ್ಲಿಂದ ಬರ್ತದೆ ? : ಪತ್ರಿಕಾಗೋಷ್ಠಿಯಲ್ಲಿ ಮಾಜಿ ಶಾಸಕ ಸಂಜೀವ ಮಠಂದೂರು ಪ್ರಶ್ನೆ

ಪುತ್ತೂರು : ಒಂದೆಡೆ ಪುತ್ತೂರಿನಲ್ಲಿ ಹೊಸ  ಶಾಸಕ ಅಶೋಕ್ ಕುಮಾರ್ ರೈ ಪುತ್ತೂರಿನ ಅಭಿವೃದ್ಧಿಗೆ ಕೋಟಿ-ಕೋಟಿ ಘೋಷಣೆ ಮಾಡ್ತಾರೆ, ಇನ್ನೊಂದೆಡೆ ಮುಖ್ಯಮಂತ್ರಿ ಸಿದ್ಧರಾಮಯ್ಯ ಮುಂದಿನ ಒಂದು ವರ್ಷದ ತನಕ ಅಭಿವೃದ್ಧಿಗೆ ಯಾವುದೇ ಅನುದಾನ ಇಲ್ಲಾ ಅನ್ತಾರೆ. ಹಾಗಾದರೆ ಕೋಟಿ ಎಲ್ಲಿಂದ ? ಹೀಗೆಂದು ಪ್ರಶ್ನಿಸಿದ್ದಾರೆ ಮಾಜಿ ಶಾಸಕ ಸಂಜೀವ ಮಠಂದೂರು. ಪುತ್ತೂರಿನಲ್ಲಿ ಮಂಗಳವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಈ ರೀತಿಯ ಹೇಳಿಕೆ ನೀಡಿ ಜನರನ್ನು ಗೊಂದಲದಲ್ಲಿ ಸಿಲುಕಿಸುತ್ತಿದ್ದಾರೆ. ತಕ್ಷಣ ಗೊಂದಲ ನಿವಾರಣೆ ಮಾಡಲು ಅವರು ಪ್ರಯತ್ನಿಸಬೇಕು ಎಂದು

ಪುತ್ತೂರಿನಲ್ಲಿ ಹೊಸ ಶಾಸಕರು ಕೋಟಿ ಕೋಟಿ ಘೋಷಣೆ ಮಾಡ್ತಾರೆ ! ಮುಖ್ಯಮಂತ್ರಿಗಳು ಮುಂದಿನ ಒಂದು ವರ್ಷದ ತನಕ ಅಭಿವೃದ್ಧಿಗೆ ಅನುದಾನ ಇಲ್ಲಾ ಅಂತಾರೆ ! ಹಾಗಾದರೆ ಕೋಟಿ ಎಲ್ಲಿಂದ ಬರ್ತದೆ ? : ಪತ್ರಿಕಾಗೋಷ್ಠಿಯಲ್ಲಿ ಮಾಜಿ ಶಾಸಕ ಸಂಜೀವ ಮಠಂದೂರು ಪ್ರಶ್ನೆ Read More »

ಯೋಗಾಸನ ಸ್ಪರ್ಧೆ – ವಿವೇಕಾನಂದ ಕನ್ನಡ ಮಾಧ್ಯಮ ಶಾಲೆ ದ್ವಿತೀಯ ಸಮಗ್ರ ಪ್ರಶಸ್ತಿ

ಪುತ್ತೂರು: ವಿದ್ಯಾಭಾರತಿ ಕರ್ನಾಟಕ ವತಿಯಿಂದ ಬೆಳಗಾವಿ ಸಂತ ಮೀರಾ ಆಂಗ್ಲ ಮಾಧ್ಯಮ ಶಾಲೆಯಲ್ಲಿ ನಡೆದ ರಾಜ್ಯಮಟ್ಟದ ಯೋಗಾಸನ ಸ್ಪರ್ಧೆಯಲ್ಲಿ ವಿವೇಕಾನಂದ ಕನ್ನಡ ಮಾಧ್ಯಮ ಶಾಲೆಯ ವಿದ್ಯಾರ್ಥಿಗಳು ಸಮಗ್ರ ದ್ವಿತೀಯ ಸ್ಥಾನ ಪಡೆದುಕೊಂಡಿದ್ದಾರೆ. ಪ್ರೌಢಶಾಲಾ ಬಾಲಕರ ವಿಭಾಗದಲ್ಲಿ ದುರ್ಗಾಪ್ರಸಾದ್, ರಿತೇಶ್, ಸ್ಕಂದ ಬಳ್ಳಕ್ಕುರಾಯ ತಂಡ ದ್ವಿತೀಯ ಸ್ಥಾನ ಪಡೆದುಕೊಂಡಿದೆ.  ಪ್ರೌಢಶಾಲಾ ಬಾಲಕಿಯರ ವಿಭಾಗದಲ್ಲಿ ಪ್ರಜ್ಞಾ ನಿಡ್ವಣ್ಣಾಯ, ಸಾಧನಾ ಗುಂಪು ವಿಭಾಗದಲ್ಲಿ ದ್ವಿತೀಯ ಸ್ಥಾನ ಪಡೆದಿದ್ದಾರೆ. ಕೀರ್ತಿ ಕುಲಾಲ್ ಪ್ರೌಢ  ಶಾಲಾ ಬಾಲಕರ ವಿಭಾಗದ ರಿದಮಿಕ್ ಯೋಗದಲ್ಲಿ ದ್ವಿತೀಯ ಸ್ಥಾನ

ಯೋಗಾಸನ ಸ್ಪರ್ಧೆ – ವಿವೇಕಾನಂದ ಕನ್ನಡ ಮಾಧ್ಯಮ ಶಾಲೆ ದ್ವಿತೀಯ ಸಮಗ್ರ ಪ್ರಶಸ್ತಿ Read More »

ಸೌಜನ್ಯ ಕೊಲೆ ಪ್ರಕರಣದ ನೈಜ ಆರೋಪಿಗಳ ಪತ್ತೆಗೆ ಆಗ್ರಹ | ಅಭಿನವ ಭಾರತ ಮಿತ್ರಮಂಡಳಿ ಹಾಗೂ ಪ್ರಜಾಪ್ರಭುತ್ವ ವೇದಿಕೆ ವತಿಯಿಂದ ಬೃಹತ್ ಜನಜಾಗೃತಿ ಮೆರವಣಿಗೆ

ಪುತ್ತೂರು: ಸೌಜನ್ಯ ಅತ್ಯಾಚಾರ, ಕೊಲೆ ಪ್ರಕರಣದ ಮರು ತನಿಖೆ ನಡೆಸಿ ಹಿಂದಿರುವ ನೈಜ ಆರೋಪಿಗಳಿಗೆ ಶಿಕ್ಷೆಯಾಗುವಂತೆ ಆಗ್ರಹಿಸಿ ಪುತ್ತೂರು ಅಭಿನವ ಭಾರತ ಮಿತ್ರಮಂಡಳಿ ಹಾಗೂ ಬೆಳ್ತಂಗಡಿ ಪ್ರಜಾಪ್ರಭುತ್ವ ವೇದಿಕೆ ವತಿಯಿಂದ ಬೃಹತ್ ಜನಜಾಗೃತಿ ಮೆರವಣಿಗೆ ಸೋಮವಾರ ಸಂಜೆ ನಡೆಯಿತು. ದರ್ಬೆ ನಿರೀಕ್ಷಣಾ ಮಂದಿರದ ಬಳಿಯಿಂದ ಹೊರ ಮೆರವಣಿಗೆ ಮುಖ್ಯರಸ್ತೆಯಲ್ಲಿ ಸಾಗಿ ಶ್ರೀ ಮಹಾಲಿಂಗೇಶ್ವರ ದೇವಸ್ಥಾನಕ್ಕೆ ತೆರಳಿ ಅಲ್ಲಿ ಪ್ರಾರ್ಥನೆ ನೆರವೇರಿಸಿದ ಬಳಿಕ ಖಾಸಗಿ ಬಸ್ ನಿಲ್ದಾಣದಲ್ಲಿ ಪ್ರತಿಭಟನಾ ಸಭೆಯೊಂದಿಗೆ ಸಮಾಪನಗೊಂಡಿತು. ಪ್ರತಿಭಟನೆಯಲ್ಲಿ ಸೌಜನ್ಯಳ ತಾಯಿ ಕುಸುಮಾವತಿ, ಹಿಂದೂ

ಸೌಜನ್ಯ ಕೊಲೆ ಪ್ರಕರಣದ ನೈಜ ಆರೋಪಿಗಳ ಪತ್ತೆಗೆ ಆಗ್ರಹ | ಅಭಿನವ ಭಾರತ ಮಿತ್ರಮಂಡಳಿ ಹಾಗೂ ಪ್ರಜಾಪ್ರಭುತ್ವ ವೇದಿಕೆ ವತಿಯಿಂದ ಬೃಹತ್ ಜನಜಾಗೃತಿ ಮೆರವಣಿಗೆ Read More »

ರಾಷ್ಟ್ರಮಟ್ಟದ ಕರಾಟೆ ಪಂದ್ಯಾಟಕ್ಕೆ ನರೇಂದ್ರ ಪ.ಪೂ.ಕಾಲೇಜಿನ ವಿದ್ಯಾರ್ಥಿನಿ ಸಮೀಕ್ಷ ಆಯ್ಕೆ

ಪುತ್ತೂರು: ಪುಣಚದ ಶ್ರೀದೇವಿ ವಿದ್ಯಾ ಸಂಸ್ಥೆಯಲ್ಲಿ ನಡೆದ ವಿದ್ಯಾಭಾರತಿ ರಾಜ್ಯಮಟ್ಟದ ಕರಾಟೆ ಪಂದ್ಯಾಟದಲ್ಲಿ ನರೇಂದ್ರ ಪ.ಪೂ.ಕಾಲೇಜಿನ ಪ್ರಥಮ ವಾಣಿಜ್ಯ ವಿಭಾಗದ ವಿದ್ಯಾರ್ಥಿನಿ ಸಮೀಕ್ಷ ಪ್ರಥಮ ಸ್ಥಾನವನ್ನು ಪಡೆದು ಅಕ್ಟೋಬರ್ 28 ರಿಂದ 30 ರವರೆಗೆ ಮಧ್ಯಪ್ರದೇಶದ ದೇವಾಸ್ ನಲ್ಲಿ ನಡೆಯಲಿರುವ ರಾಷ್ಟ್ರಮಟ್ಟದ ಕರಾಟೆ ಸ್ಪರ್ಧೆಗೆ ಆಯ್ಕೆಯಾಗಿದ್ದಾರೆ. ಪುಣಚದ ಶ್ರೀದೇವಿ ವಿದ್ಯಾ ಸಂಸ್ಥೆಯಲ್ಲಿ ನಡೆದ ರಾಜ್ಯಮಟ್ಟದ ಕರಾಟೆ ಸ್ಪರ್ಧೆಯಲ್ಲಿ ನರೇಂದ್ರ ಪ.ಪೂ.ಕಾಲೇಜಿನ ಪ್ರಥಮ ವಿಜ್ಞಾನ ವಿಭಾಗದ ಮೋಕ್ಷಿತಾ, ಶಿವಕುಮಾರ್, ದ್ವಿತೀಯ ವಿಜ್ಞಾನ ವಿಭಾಗದ ನಿಶಾಂತ್  ದ್ವಿತೀಯ ಸ್ಥಾನ ಪಡೆದಿದ್ದಾರೆ.ಜಿ

ರಾಷ್ಟ್ರಮಟ್ಟದ ಕರಾಟೆ ಪಂದ್ಯಾಟಕ್ಕೆ ನರೇಂದ್ರ ಪ.ಪೂ.ಕಾಲೇಜಿನ ವಿದ್ಯಾರ್ಥಿನಿ ಸಮೀಕ್ಷ ಆಯ್ಕೆ Read More »

ವಿವೇಕಾನಂದ ಇಂಜಿನಿಯರಿಂಗ್ ಕಾಲೇಜಿನಲ್ಲಿ “ಕಂಪೆನಿ ಕನೆಕ್ಟ್” ಕಾರ್ಯಕ್ರಮ

ಪುತ್ತೂರು: ತಂತ್ರಜ್ಞಾನ ಎಷ್ಟು ಮುಂದುವರಿದರೂ ಕಂಪೆನಿಗಳು ಬಯಸುವ ರೀತಿಯಲ್ಲಿ ನುರಿತ ತಂತ್ರಜ್ಞರು ಸಿಗುತ್ತಿಲ್ಲ ಇದಕ್ಕೆ ಶಿಕ್ಷಣ ವ್ಯವಸ್ಥೆಯ ಪಠ್ಯಕ್ರಮ ಹಾಗೂ ಕಂಪೆನಿಯ ಆವಶ್ಯಕತೆಗಳ ಮಧ್ಯೆ ಇರುವ ಅಂತರವೇ ಕಾರಣ ಎಂದು ಕಾಕುಂಜೆ ಸಾಫ್ಟ್‌ವೇರ್ ಸಿಸ್ಟಮ್ಸ್ ಪ್ರೈವೇಟ್ ಲಿಮಿಟೆಡ್ ಮಂಗಳೂರು ಇದರ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಹಾಗೂ ವ್ಯವಸ್ಥಾಪಕ ನಿರ್ದೇಶಕ ಗೋಪಾಲಕೃಷ್ಣ ಭಟ್ ಹೇಳಿದರು. ಅವರು ಪುತ್ತೂರಿನ ವಿವೇಕಾನಂದ ಕಾಲೇಜ್ ಆಫ್ ಎಂಜಿನಿಯರಿಂಗ್ ಎಂಡ್ ಟೆಕ್ನಾಲಜಿಯ ತರಬೇತಿ ಮತ್ತು ನೇಮಕಾತಿ ವಿಭಾಗದ ಆಶ್ರಯದಲ್ಲಿ ನಡೆದ ಕಂಪೆನಿ ಕನೆಕ್ಟ್-2023ಕ್ಕೆ ಚಾಲನೆ ನೀಡಿ

ವಿವೇಕಾನಂದ ಇಂಜಿನಿಯರಿಂಗ್ ಕಾಲೇಜಿನಲ್ಲಿ “ಕಂಪೆನಿ ಕನೆಕ್ಟ್” ಕಾರ್ಯಕ್ರಮ Read More »

ಮುಳಿಯ ಗಾನರಥ ಸೀಸನ್-1 ಗ್ರ್ಯಾಂಡ್ ಫಿನಾಲೆ: ಜೂನಿಯರ್ ವಿಭಾಗದಲ್ಲಿ ಪಲ್ಲವಿ ಆರ್.ಕೆ. ಸೀನಿಯರ್ ವಿಭಾಗದಲ್ಲಿ ಮಾಳವಿಕಗೆ ಪ್ರಶಸ್ತಿ

ಪುತ್ತೂರು: ಗ್ರಾಮೀಣ ಪ್ರತಿಭೆಗಳಿಗೆ ವೇದಿಕೆ ಒದಗಿಸುವ ನಿಟ್ಟಿನಲ್ಲಿ ಪುತ್ತೂರಿನ ಹೆಸರಾಂತ ಮುಳಿಯ ಜ್ಯುವೆಲ್ಸ್‌ನ ವತಿಯಿಂದ ನಡೆಸಲಾದ ಮುಳಿಯ ಗಾನರಥ ಕರೋಕೆ ಹಾಡುಗಳ ಗಾಯನ ಸ್ಪರ್ಧೆಯ ಗ್ರ್ಯಾಂಡ್‌ ಫಿನಾಲೆಯು ಇನ್ನರ್‌ವೀಲ್‌ ಕ್ಲಬ್‌ನ ಸಹಯೋಗದಲ್ಲಿ ನಡೆಯಿತು. ಜೂನಿಯರ್ ವಿಭಾಗದಲ್ಲಿ ಪಲ್ಲವಿ ಆರ್ (ಪ್ರಥಮ), ಮೃನಾಲ್ (ದ್ವಿತೀಯ), ವಿಭಾಶ್ರೀ (ತೃತೀಯ ಹಾಗೂ ಸೀನಿಯರ್ ವಿಭಾಗದಲ್ಲಿ ಮಾಳವಿಕ (ಪ್ರಥಮ), ವಿನೋದ್ ಜಾಲ್ಸೂರ್ (ದ್ವಿತೀಯ) ಹಾಗೂ ಪವಿತ್ರ ಆರ್ (ತೃತೀಯ) ಬಹುಮಾನಗಳನ್ನು ಪಡೆದರು. ಪ್ರಥಮ ಬಹುಮಾನ ಪಡೆದವರಿಗೆ ಗಾನ ಕೋಗಿಲೆ, ಚಿನ್ನದ ನಾಣ್ಯ ಹಾಗೂ

ಮುಳಿಯ ಗಾನರಥ ಸೀಸನ್-1 ಗ್ರ್ಯಾಂಡ್ ಫಿನಾಲೆ: ಜೂನಿಯರ್ ವಿಭಾಗದಲ್ಲಿ ಪಲ್ಲವಿ ಆರ್.ಕೆ. ಸೀನಿಯರ್ ವಿಭಾಗದಲ್ಲಿ ಮಾಳವಿಕಗೆ ಪ್ರಶಸ್ತಿ Read More »

ದಿಲ್ದೀಪ್ ರೈ ನಿಧನ

ಪುತ್ತೂರು: ಬಡಗನ್ನೂರು ಗ್ರಾಮದ ಪೇರಾಲು ನಿವಾಸಿ ದಿಲ್ದೀಪ್‍ ರೈ ಪೆರಾಲು (60) ನಿಧನರಾಗಿದ್ದಾರೆ. ಅಲ್ಪ ಕಾಲದ ಅಸೌಖ್ಯದಿಂದಿದ್ದ ಅವರು ಸ್ವಗೃಹದಲ್ಲಿನಿಧನರಾದರು. ಮೃತರು ಸಹೋದರರು, ಕುಟುಂಬಸ್ಥರು ಹಾಗೂ ಅಪಾರ ಬಂಧುಮಿತ್ರರನ್ನು ಅಗಲಿದ್ದಾರೆ.

ದಿಲ್ದೀಪ್ ರೈ ನಿಧನ Read More »

error: Content is protected !!
Scroll to Top