ಪುತ್ತೂರು

ಮೇರಿಮಾತೆ ಜನ್ಮ ದಿನಾಚರಣೆ ಅಂಗವಾಗಿ ಚರ್ಚ್‌ಗಳಲ್ಲಿ ಮೊಂತಿ ಫೆಸ್ಟ್ | ಮಾಯಿದೆ ದೇವುಸ್ ಚರ್ಚ್‍ನಲ್ಲಿ ಬೈಬಲ್ ವಾಚಿಸಿ ಸಂದೇಶ ನೀಡಿದ ಧರ್ಮಗುರು

ಪುತ್ತೂರು : ಯೇಸುಕ್ರಿಸ್ತ ತಾಯಿ ಮೇರಿ ಮಾತೆಯ ಜನ್ಮ ದಿನವನ್ನು ಸಾರುವ ‘ಮೊಂತಿ ಫೆಸ್ತ್(ತೆನೆ ಹಬ್ಬ)-ಕುಟುಂಬದ ಹಬ್ಬ’ ವನ್ನು ನಗರದ ಮಾಯಿದೆ ದೇವುಸ್ ಚರ್ಚ್‍ನಲ್ಲಿ ಶುಕ್ರವಾರ ಆಚರಿಸಲಾಯಿತು. ಈ ಹಿನ್ನೆಲೆಯಲ್ಲಿ ಮಾಯಿದೆ ದೇವುಸ್ ಚರ್ಚ್‌ನಲ್ಲಿ ಬೈಬಲ್ ವಾಚಿಸಿ ಹಬ್ಬದ ಸಂದೇಶ ನೀಡಲಾಯಿತು. ಭತ್ತದ ತೆನೆಗಳನ್ನು ಆಯಾ ಚರ್ಚ್‌ನಲ್ಲಿ ಪ್ರಮುಖರು ಸಂಗ್ರಹಿಸಿ ಹಬ್ಬದ ದಿನದಂದು ಅವನ್ನು ಧರ್ಮಗುರುಗಳು ಪವಿತ್ರೀಕರಿಸಿ ಭಕ್ತರಿಗೆ ಹಂಚುವುದು ಸಂಪ್ರದಾಯವಾಗಿದ್ದು, ಈ ನಿಟ್ಟಿನಲ್ಲಿ ಪವಿತ್ರೀಕರಿಸಿದ ಭತ್ತದ ತೆ, ಸಿಹಿತ ಪ್ರತೀಕವಾಗಿ ಕಬ್ಬನ್ನು ಆಯಾ ಚರ್ಚ್‌ಗಳಲ್ಲಿ ಭಕ್ತರಿಗೆ […]

ಮೇರಿಮಾತೆ ಜನ್ಮ ದಿನಾಚರಣೆ ಅಂಗವಾಗಿ ಚರ್ಚ್‌ಗಳಲ್ಲಿ ಮೊಂತಿ ಫೆಸ್ಟ್ | ಮಾಯಿದೆ ದೇವುಸ್ ಚರ್ಚ್‍ನಲ್ಲಿ ಬೈಬಲ್ ವಾಚಿಸಿ ಸಂದೇಶ ನೀಡಿದ ಧರ್ಮಗುರು Read More »

ನಗರಸಭೆಯಲ್ಲಿ ಪ್ರಧಾನಮಂತ್ರಿ ಸ್ವ-ನಿಧಿ ಯೋಜನೆಯಡಿ ಬೀದಿ ಬದಿ ವ್ಯಾಪಾರಿಗಳಿಗೆ ತರಬೇತಿ ಕಾರ್ಯಕ್ರಮ

ಪುತ್ತೂರು : ಪ್ರಧಾನಮಂತ್ರಿ ಸ್ವ-ನಿಧಿ ಯೋಜನೆಯಡಿ ಬೀದಿ ಬದಿಯ ವ್ಯಾಪಾರಕ್ಕೆ ಪ್ರಥಮ ಹಂತದ ಕಿರುಸಾಲ ಪಡೆದ ಫಲಾನುಭವಿಗಳಿಗೆ ಸಾಮಾಜಿಕ, ಆರ್ಥಿಕ ಸಮೀಕ್ಷೆ ನಡೆಸುವ ಕುರಿತು, ಇದರಿಂದ ದೊರೆಯುವ 8 ಕಲ್ಯಾಣ ಯೋಜನೆಗಳ ಸೌಲಭ್ಯಗಳ ಬಗ್ಗೆ ತರಭೇತಿ ಕಾರ್ಯಕ್ರಮ ಶುಕ್ರವಾರ ನಗರಸಭೆ ಸಭಾಭವನದಲ್ಲಿ ನಡೆಯಿತು. ಪೌರಾಯುಕ್ತ ಮಧು ಎಸ್. ಮನೋಹರ್ ಗಿಡಕ್ಕೆ ನೀರೆರೆಯುವ ಮೂಲಕ ತರಭೇತಿಗೆ ಚಾಲನೆ ನೀಡಿ, ಪಿ.ಎಂ.ಸ್ವ-ನಿಧಿಯ ಸೌಲಭ್ಯವನ್ನು ಪಡೆಯುವ ವಿಧಾನದ ಬಗ್ಗೆ ವಿವರಿಸಿದರು. ಕೆನರಾ ಬ್ಯಾಂಕ್ ನ ಅರುಣ್, ಉತ್ತಮ್, ವನಜಾ ಪ್ರಸಾದ್ ಮತ್ತು

ನಗರಸಭೆಯಲ್ಲಿ ಪ್ರಧಾನಮಂತ್ರಿ ಸ್ವ-ನಿಧಿ ಯೋಜನೆಯಡಿ ಬೀದಿ ಬದಿ ವ್ಯಾಪಾರಿಗಳಿಗೆ ತರಬೇತಿ ಕಾರ್ಯಕ್ರಮ Read More »

ರೇವತಿ ಬಾಳಪ್ಪ ಪೂಜಾರಿ ತಿಂಗಳಾಡಿ – ನಿಧನ

ಪುತ್ತೂರು: ತಾಲೂಕಿನ ತಿಂಗಳಾಡಿ ಕನ್ನಡಮೂಲೆಯ ದಿ. ಬಾಳಪ್ಪ ಪೂಜಾರಿ ಅವರ ಧರ್ಮಪತ್ನಿ ರೇವತಿ  ಬಾಳಪ್ಪ ಪೂಜಾರಿ (76) ಅವರು ಸೆ.7 ರಂದು ಸ್ವಗೃಹದಲ್ಲಿ ನಿಧನರಾದರು. ಮನೆಯಲ್ಲಿದ್ದ ಸಂದರ್ಭ ಹೃದಯಾಘಾತ ಉಂಟಾಗಿ ಅವರು ನಿಧನರಾದರು. ಮೃತರು ನಾಲ್ವರು ಪುತ್ರರು, ಒಬ್ಬರು ಪುತ್ರಿ, ಅಳಿಯ, ಸೊಸೆಯಂದಿರು, ಮೊಮ್ಮಕ್ಕಳನ್ನು ಅಗಲಿದ್ದಾರೆ.

ರೇವತಿ ಬಾಳಪ್ಪ ಪೂಜಾರಿ ತಿಂಗಳಾಡಿ – ನಿಧನ Read More »

ಸೌಜನ್ಯ ಕುಟುಂಬಕ್ಕೆ ಇನ್ನೂ ನ್ಯಾಯ ಸಿಗದಿರುವುದು ದುರಾದೃಷ್ಟಕರ | ಸೌಜನ್ಯ ನೈಜ ಆರೋಪಿಗಳನ್ನು  ಪತ್ತೆಹಚ್ಚುವಂತೆ ಎಬಿವಿಪಿ ವತಿಯಿಂದ ಪ್ರತಿಭಟನೆ |

ಪುತ್ತೂರು : ಸೌಜನ್ಯ ನೈಜ ಆರೋಪಿಗಳನ್ನು ಪತ್ತೆಮಾಡಿ ಸೌಜನ್ಯ ಕುಟುಂಬಕ್ಕೆ ನ್ಯಾಯ ಒದಗಿಸಬೇಕು, ಘಟನೆಯನ್ನು ದಾಳವಾಗಿ ಉಪಯೋಗಿಸಿ ಧಾರ್ಮಿಕ ಶ್ರದ್ಧಾ ಕೇಂದ್ರಗಳಿಗೆ ಧಕ್ಕೆ ತರುವಂತಹ ಪ್ರಕರಣಗಳನ್ನು ತಕ್ಷಣ ಹತ್ತಿಕ್ಕಬೇಕು ಎಂದು ಒತ್ತಾಯಿಸಿ ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್ ವತಿಯಿಂದ ತಾಲೂಕು ಆಡಳಿತ ಸೌಧದ ಬಳಿ ಇರುವ ಅಮರ್ ಜವಾನ್ ಸ್ಮಾರಕದ ಬಳಿ ಪ್ರತಿಭಟನೆ ನಡೆಯಿತು. ಪ್ರತಿಭಟನೆಯನ್ನುದ್ದೇಶಿಸಿ ಎಬಿವಿಪಿ ಸಹ ಕಾರ್ಯದರ್ಶಿ ಹರ್ಷಿತ್ ಕೊಯಿಲ ಮಾತನಾಡಿ, ಸೌಜನ್ಯ ಹತ್ಯೆಗಾಗಿ 11 ವರ್ಷಗಳಾಗಿದ್ದು ಇನ್ನೂ ನ್ಯಾಯ ಸಿಗದಿರುವುದು ದುರಾದೃಷ್ಟಕರ, ನಿಜವಾದ

ಸೌಜನ್ಯ ಕುಟುಂಬಕ್ಕೆ ಇನ್ನೂ ನ್ಯಾಯ ಸಿಗದಿರುವುದು ದುರಾದೃಷ್ಟಕರ | ಸೌಜನ್ಯ ನೈಜ ಆರೋಪಿಗಳನ್ನು  ಪತ್ತೆಹಚ್ಚುವಂತೆ ಎಬಿವಿಪಿ ವತಿಯಿಂದ ಪ್ರತಿಭಟನೆ | Read More »

ಡಕಾಯಿತರಿಂದ ದರೋಡೆಗೊಳಗಾದ ಗುರುಪ್ರಸಾದ್ ಮನೆಗೆ ಮಾಜಿ ಶಾಸಕ ಸಂಜೀವ ಮಠಂದೂರು ಭೇಟಿ | ಮನೆಯವರಿಗೆ ಧೈರ್ಯ ತುಂಬಿದ ಮಾಜಿ ಶಾಸಕರು

ಪುತ್ತೂರು : ಪುತ್ತೂರು: ಬಡಗನ್ನೂರು ಗ್ರಾ.ಪಂ ಮಾಜಿ ಸದಸ್ಯ ಪಡುವನ್ನೂರು ಗ್ರಾಮದ ಕುದ್ಮಾಡಿ ಗುರುಪ್ರಸಾದ್ ರೈ ಯವರ ಮನೆಗೆ ಡಕಾಯಿತರ ತಂಡವೊಂದು ಮನೆ ಮಂದಿಯನ್ನು ಕಟ್ಟಿ ಹಾಕಿ ದರೋಡೆ ಮಾಡಿದ ಘಟನೆಗೆ ಸಂಬಂಧಿಸಿ ಮಾಜಿ ಶಾಸಕ ಸಂಜೀವ ಮಠಂದೂರು ಶುಕ್ರವಾರ ಭೇಟಿ ನೀಡಿ ಗುರುಪ್ರಸಾದ್ ಅವರ ತಾಯಿಗೆ ಧೈರ್ಯ ತುಂಬಿದರು. ಸಂಜೀವ ಮಠಂದೂರು ಘಟನೆ ಮಾಹಿತಿ ಪಡೆದು ದ.ಕ.ಜಿಲ್ಲಾ ಎಸ್ಪಿಗೆ ಪೋನಾಯಿಸಿ ಇನ್ನಷ್ಟು ಮಾಹಿತಿ ಪಡೆದು ಕೊಂಡು ಆದಷ್ಟು ಬೇಗ ಪ್ರಕರಣ ಡಕಾಯಿತರನ್ನು ಮಟ್ಟಹಾಕಬೇಕು. ಇಲ್ಲವಾದಲ್ಲಿ ಜನರಲ್ಲಿ

ಡಕಾಯಿತರಿಂದ ದರೋಡೆಗೊಳಗಾದ ಗುರುಪ್ರಸಾದ್ ಮನೆಗೆ ಮಾಜಿ ಶಾಸಕ ಸಂಜೀವ ಮಠಂದೂರು ಭೇಟಿ | ಮನೆಯವರಿಗೆ ಧೈರ್ಯ ತುಂಬಿದ ಮಾಜಿ ಶಾಸಕರು Read More »

ಸೆ.10 : ಕಸಾಪ ಪುತ್ತೂರು ತಾಲೂಕು ಘಟಕದ ನೇತೃತ್ವದಲ್ಲಿ “ನೀನೊಂದು ಮುಗಿಯದ ಕವಿತೆ” ಕವನ ಸಂಕಲನ ಲೋಕಾರ್ಪಣೆ

ಪುತ್ತೂರು : ದ.ಕ.ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಪುತ್ತೂರು ತಾಲೂಕು ಘಟಕದ ನೇತೃತ್ವದಲ್ಲಿ ಚಿಗುರೆಲೆ ಸಾಹಿತ್ಯ ಬಳಗದ ಸಂಯೋಜನೆಯಲ್ಲಿ ಸುದಾನ ಶಿಕ್ಷಣ ಸಂಸ್ಥೆಗಳ ಆಶ್ರಯದಲ್ಲಿ ಶಶಿಕಲಾ ವರ್ಕಾಡಿ ಅವರ “ನೀನೊಂದು ಮುಗಿಯದ ಕವಿತೆ” ಕವನ ಸಂಕಲನ ಲೋಕಾರ್ಪಣೆ ಹಾಗೂ ಕವಿತೆ ಕವಿಗೋಷ್ಠಿ ಸೆ.10 ಭಾನುವಾರ ಬೆಳಿಗ್ಗೆ 10 ರಿಂದ ಸುದಾನ ಶಾಲಾ ಎಡ್ವರ್ಡ್ ಸಭಾಂಗಣದಲ್ಲಿ ನಡೆಯಲಿದೆ. ವಿವೇಕಾನಂದ ಮಹಾವಿದ್ಯಾಲಯದ ಪರೀಕ್ಷಾಂಗ ಕುಲಸಚಿವ ಡಾ.ಹೆಚ್‍.ಜಿ.ಶ್ರೀಧರ್ ಸಭಾ ಕಾರ್ಯಕ್ರಮ ಉದ್ಘಾಟಿಸಲಿದ್ದು, ಕಸಾಪ ತಾಲೂಕು ಘಟಕದ ಅಧ್ಯಕ್ಷ ಪುತ್ತೂರು ಉಮೇಶ್ ನಾಯಕ್

ಸೆ.10 : ಕಸಾಪ ಪುತ್ತೂರು ತಾಲೂಕು ಘಟಕದ ನೇತೃತ್ವದಲ್ಲಿ “ನೀನೊಂದು ಮುಗಿಯದ ಕವಿತೆ” ಕವನ ಸಂಕಲನ ಲೋಕಾರ್ಪಣೆ Read More »

ಸೆ.9 : ಪುತ್ತೂರು ಸಮರ್ಪಣಾ ಚಾರಿಟೇಬಲ್ ಟ್ರಸ್ಟ್ ನ ಸಹಸಂಸ್ಥೆ “ನ್ಯೂಸ್ ಪುತ್ತೂರು” ನೂತನ ಕಚೇರಿ ಶುಭಾರಂಭ | ವರದಿಯಲ್ಲಿ ವಿಶ್ವಾಸಾರ್ಹತೆ, ವಸ್ತುನಿಷ್ಠತೆ, ನಿಖರತೆ “ ನ್ಯೂಸ್ ಪುತ್ತೂರು”ನ ವಿಶೇಷತೆ | 60 ಮಂದಿ ವಿದ್ಯಾರ್ಥಿಗಳಿಗೆ ಪ್ರೇರಣಾ ಸಂಸ್ಥೆ ಪ್ರವರ್ತಿತ “ವಿದ್ಯಾರ್ಥಿ ವೇತನ” ವಿತರಣೆ

ಪುತ್ತೂರು : ಪುತ್ತೂರು ಸಮರ್ಪಣಾ ಚಾರಿಟೇಬಲ್ ಟ್ರಸ್ಟ್ ನ ಸಹಸಂಸ್ಥೆ “ನ್ಯೂಸ್ ಪುತ್ತೂರು” ನೂತನ ಕಚೇರಿ ಉದ್ಘಾಟನಾ ಸಮಾರಂಭ ಸೆ.9 ಶನಿವಾರ ಪುತ್ತೂರು ನಗರದ ಏಳ್ಮುಡಿಯಲ್ಲಿ ಮುಖ್ಯರಸ್ತೆಯಲ್ಲಿರುವ “ಪ್ರಾವಿಡೆನ್ಸ್ ಪ್ಲಾಝಾ”ದ 3ನೇ ಮಹಡಿಯಲ್ಲಿ ಶುಭಾರಂಭಗೊಳ್ಳಲಿದೆ ಎಂದು ಸಮರ್ಪಣಾ ಟ್ರಸ್ಟ್ ಅಧ್ಯಕ್ಷ ರಾಜೇಂದ್ರ ಪ್ರಸಾದ್ ಶೆಟ್ಟಿ ತಿಳಿಸಿದ್ದಾರೆ. ಆವರು ಗುರುವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ಜನಮನದ ಪ್ರತಿಧ್ವನಿ ಎಂಬ ಧ್ಯೇಯ ವಾಕ್ಯದೊಂದಿಗೆ ನ್ಯೂಸ್ ಪುತ್ತೂರು ತಾಲೂಕಿನ ಸಮಗ್ರ ಸುದ್ದಿಯನ್ನು ವಿಶ್ವಾಸಾರ್ಹತೆ, ವಸ್ತುನಿಷ್ಠತೆ, ನಿಖರತೆಯೊಂದಿಗೆ ಕಳೆದ ಒಂದು ವರ್ಷದಿಂದ ಜನಮಾನಸಕ್ಕೆ ತಲುಪಿಸುವ

ಸೆ.9 : ಪುತ್ತೂರು ಸಮರ್ಪಣಾ ಚಾರಿಟೇಬಲ್ ಟ್ರಸ್ಟ್ ನ ಸಹಸಂಸ್ಥೆ “ನ್ಯೂಸ್ ಪುತ್ತೂರು” ನೂತನ ಕಚೇರಿ ಶುಭಾರಂಭ | ವರದಿಯಲ್ಲಿ ವಿಶ್ವಾಸಾರ್ಹತೆ, ವಸ್ತುನಿಷ್ಠತೆ, ನಿಖರತೆ “ ನ್ಯೂಸ್ ಪುತ್ತೂರು”ನ ವಿಶೇಷತೆ | 60 ಮಂದಿ ವಿದ್ಯಾರ್ಥಿಗಳಿಗೆ ಪ್ರೇರಣಾ ಸಂಸ್ಥೆ ಪ್ರವರ್ತಿತ “ವಿದ್ಯಾರ್ಥಿ ವೇತನ” ವಿತರಣೆ Read More »

ಸೆ.10 : ಶಾಂತಿಗೋಡು ವಿಕ್ರಂ ಯುವಕ ಮಂಡಲದ ವತಿಯಿಂದ 27ನೇ ವರ್ಷದ ಮೊಸರು ಕುಡಿಕೆ ಉತ್ಸವ

ಶಾಂತಿಗೋಡು : ಶಾಂತಿಗೋಡು ವಿಕ್ರಂ ಯುವಕ ಮಂಡಲದ ವತಿಯಿಂದ ಶ್ರೀ ಕೃಷ್ಣ ಜನ್ಮಾಷ್ಟಮಿ ಪ್ರಯುಕ್ತ 27ನೇ ವರ್ಷದ ಮೊಸರು ಕುಡಿಕೆ ಉತ್ಸವ ಸೆ.10 ಭಾನುವಾರ ಶಾಂತಿಗೋಡು ಶಾಲಾ ವಠಾದಲ್ಲಿ ನಡೆಯಲಿದೆ. ಬೆಳಿಗ್ಗೆ 9.30 ಕ್ಕೆ ನಡೆಯುವ ಉದ್ಘಾಟನಾ ಸಮಾರಂಭವನ್ನು ಶಾಂತಿಗೋಡು ಪ್ರಗತಿಪರ ಕೃಷಿಕ ಶಿವಪ್ಪ ಗೌಡ ಕಂರ್ಬಡ್ಕ ಉದ್ಘಾಟಿಸಲಿದ್ದು, ನರಿಮೊಗರು ಗ್ರಾಪಂ ಅಧ್ಯಕ್ಷೆ ಹರಿಣಿ ಅಧ್ಯಕ್ಷತೆ ವಹಿಸುವರು. ಮುಖ್ಯ ಅತಿಥಿಗಳಾಗಿ ನರಿಮೊಗರು ಗ್ರಾಪಂ ಸದಸ್ಯರಾದ ನಾಗಮ್ಮ ಬಾಲಕೃಷ್ಣ ಗೌಡ ತೋಟ, ಆಶಾ ಸಚೀಂದ್ರ  ಬೊಳ್ಳೆಕ್ಕು. ಶಾಂತಿಗೋಡು ಶಾಲಾ

ಸೆ.10 : ಶಾಂತಿಗೋಡು ವಿಕ್ರಂ ಯುವಕ ಮಂಡಲದ ವತಿಯಿಂದ 27ನೇ ವರ್ಷದ ಮೊಸರು ಕುಡಿಕೆ ಉತ್ಸವ Read More »

ಅಂಬಿಕಾದಲ್ಲಿ ’ನಾಟ’ ತರಗತಿಗಳ ಉದ್ಘಾಟನೆ

ಪುತ್ತೂರು : ಪ್ರಸಕ್ತ ವಿದ್ಯಮಾನದಲ್ಲಿ ಡಾಕ್ಟರ್, ಇಂಜಿನಿಯರ್‌ಗಳ ಸಾಲಿಗೆ ಸೇರುವ ಬಹು ಬೇಡಿಕೆಯ ಇನ್ನೊಂದು ವೃತ್ತಿ ಎಂದರೆ ’ಆರ್ಕಿಟೆಕ್ಟ್’. ಅಂತಾರಾಷ್ಟ್ರೀಯ ಮಟ್ಟದಲ್ಲಿ ಮನ್ನಣೆ ಇರುವ ಈ ವೃತ್ತಿಪರ ಶಿಕ್ಷಣಕ್ಕೆ ಸೇರಬೇಕಾದರೆ ಪಿಯುಸಿಯ ನಂತರ ವಿದ್ಯಾರ್ಥಿಗಳು ನಾಟ (ನ್ಯಾಷನಲ್ ಆಪ್ಟಿಟ್ಯೂಡ್ ಟೆಸ್ಟ್ ಇನ್ ಆರ್ಕಿಟೆಕ್ಚರ್) ಪರೀಕ್ಷೆಯಲ್ಲಿ ಅತ್ಯುತ್ತಮ ಅಂಕಗಳೊಂದಿಗೆ ತೇರ್ಗಡೆಯಾಗಬೇಕು ಎಂದು ನಾಟ ಸಂಪನ್ಮೂಲ ವ್ಯಕ್ತಿ ಸುನಿಲ್ ಅಬ್ರಹಾಂ ಹೇಳಿದರು. ಅವರು ನಗರದ ಅಂಬಿಕಾ ವಸತಿಯುತ ಪದವಿ ಪೂರ್ವ ವಿದ್ಯಾಲಯದಲ್ಲಿ 2023-24ನೇ ಶೈಕ್ಷಣಿಕ ಸಾಲಿನ ನಾಟ ತರಗತಿಗಳನ್ನು ಉದ್ಘಾಟಿಸಿ

ಅಂಬಿಕಾದಲ್ಲಿ ’ನಾಟ’ ತರಗತಿಗಳ ಉದ್ಘಾಟನೆ Read More »

ನರಿಮೊಗರು ಸರಸ್ವತಿ  ವಿದ್ಯಾ ಮಂದಿರದಲ್ಲಿ ಶ್ರೀ ಕೃಷ್ಣ ಜನ್ಮಾಷ್ಟಮಿ ಸಂಭ್ರಮ

ನರಿಮೊಗರು : ಜಗತ್ತು ತಾನು, ತನ್ನದು ಎಂಬ ಸ್ವಾರ್ಥದಲ್ಲಿ ಮುಳುಗಿರುವಾಗ ಪರಾರ್ಥಕ್ಕೋಸ್ಕರ ಬದುಕಿದ ಪುರುಷೋತ್ತಮ ಶ್ರೀ ಕೃಷ್ಣ ಭಗವಂತ,ಸೇವೆ ಎಂಬ ಮೌಲ್ಯವನ್ನು ಭಾರತೀಯರಲ್ಲಿ ತುಂಬಿದ. ಬೌದ್ಧಿಕ ಹಾಗೂ ಆಧ್ಯಾತ್ಮಿಕ ನಡೆಯನ್ನು ತನ್ನ ಬದುಕಿನಲ್ಲಿ ಬಾಳಿ ತೋರಿಸಿ ಆದರ್ಶವನ್ನು ತುಂಬಿದ ಎಂದು ಸರಸ್ವತಿ ವಿದ್ಯಾ ಮಂದಿರದ ಸಂಚಾಲಕ ಅವಿನಾಶ್ ಕೊಡಂಕಿರಿ ಹೇಳಿದರು. ಶಾಲೆಯಲ್ಲಿ ನಡೆದ ಶ್ರೀಕೃಷ್ಣ ಜನ್ಮಾಷ್ಟಮಿಯ ಸಂದರ್ಭದಲ್ಲಿ ಪೋಷಕರು ಹಾಗೂ ವಿದ್ಯಾರ್ಥಿಗಳನ್ನು ಉದ್ದೇಶಿಸಿ ಮಾತನಾಡಿದ ಅವರು ಭಾರತದಲ್ಲಿ ಇಂದಿಗೂ ಇತರರಿಗಾಗಿ ಮಿಡಿಯುವ ಹೃದಯಗಳಿದ್ದರೆ ಅದಕ್ಕೆ ಶ್ರೀ ಕೃಷ್ಣನ

ನರಿಮೊಗರು ಸರಸ್ವತಿ  ವಿದ್ಯಾ ಮಂದಿರದಲ್ಲಿ ಶ್ರೀ ಕೃಷ್ಣ ಜನ್ಮಾಷ್ಟಮಿ ಸಂಭ್ರಮ Read More »

error: Content is protected !!
Scroll to Top