ಗಾಂಧಿ ಕಟ್ಟೆ ಬಳಿಯ ಹೊಂಡ – ಗುಂಡಿ ರಸ್ತೆಯ ದುಸ್ಥಿತಿ | ತೇಪೆ ಹಾಕಿದ ಎರಡೇ ದಿನದಲ್ಲಿ ಮತ್ತೆ ಹೊಂಡ – ಗುಂಡಿ ಪ್ರತ್ಯಕ್ಷ | ರಸ್ತೆ ದುಸ್ಥಿತಿಗೆ ಯಾರನ್ನು ಹಳಿಯಲಿ ಎನ್ನುವಂತಿದೆ ಗಾಂಧಿ ತಾತನ ಮೌನ!!
ಪುತ್ತೂರು: ಅದೇಗೊ ಬಹಳ ಪ್ರಯಾಸಪಟ್ಟು ಐತಿಹಾಸಿಕ ಪ್ರಾಧಾನ್ಯತೆಯ ಗಾಂಧಿ ಕಟ್ಟೆ ಉತ್ತಮವಾಗಿ ಮೂಡಿಬಂತು. ಆದರೆ ಗಾಂಧಿಕಟ್ಟೆಯ ಬಳಿಯಲ್ಲೇ ಇರುವ ರಸ್ತೆ ಜಪ್ಪಯ್ಯ ಅಂದರೂ ಸರಿಯಾಗಲು ಕೇಳುತ್ತಿಲ್ಲ. ಇದು ಒಂದೆರಡು ದಿನದ ಕಥೆಯಲ್ಲ. ಕಳೆದ ಹಲವು ದಿನಗಳಿಂದ ವಾಹನ ಸವಾರರು, ಇದೇ ಹೊಂಡ – ಗುಂಡಿಯ ರಸ್ತೆಯಲ್ಲಿ ಸರ್ಕಸ್ ಮಾಡುತ್ತಾ ಸಾಗುತ್ತಿದ್ದಾರೆ. ಆದರೂ ಯಾರೊಬ್ಬರೂ ಈ ರಸ್ತೆ ದುಸ್ಥಿತಿಯ ಬಗ್ಗೆ ಚಕಾರ ಎತ್ತುವಂತೆ ಕಾಣಿಸುತ್ತಿಲ್ಲ. ಪುತ್ತೂರು ಪೇಟೆಯ ಸಂಚಾರ ದಟ್ಟಣೆಗೆ ಇದು ಒಂದು ಕಾರಣ. ವಾಹನಗಳು ಹೊಂಡ ಗುಂಡಿಯನ್ನು […]










