ಪುತ್ತೂರು

ಬಿಟ್ಟಿ ಚಾಕರಿ ಮಾಡಲು ಸಿದ್ಧವಿಲ್ಲ | ಪ್ರತಿಭಟನೆಯಲ್ಲಿ ವಿವಿಧ ಬೇಡಿಕೆ ಮುಂದಿಟ್ಟ ಆಶಾ ಕಾರ್ಯಕರ್ತೆಯರು

ಪುತ್ತೂರು: ವಿವಿಧ ಬೇಡಿಕೆಗಳನ್ನು ಮುಂದಿಟ್ಟುಕೊಂಡು ಆಲ್ ಇಂಡಿಯಾ ಯುನೈಟೆಡ್ ಟ್ರೇಡ್ ಯೂನಿಯನ್ ಸೆಂಟರ್ ಸಂಯೋಜಿತ ಕರ್ನಾಟಕ ರಾಜ್ಯ ಸಂಯುಕ್ತ ಆಶಾ ಕಾರ್ಯಕರ್ತೆಯರ ಸಂಘ ಪುತ್ತೂರು ತಾಲೂಕು ಸಮಿತಿ ಇಲ್ಲಿನ ಅಮರ್ ಜವಾನ್ ಸ್ಮಾರಕದ ಬಳಿ ಶುಕ್ರವಾರ ಬೃಹತ್ ಪ್ರತಿಭಟನೆ ನಡೆಸಿತು. ಆಶಾ ಕಾರ್ಯಕರ್ತೆಯರ ಸೇವೆಗಳಿಗೆ ನಿಗದಿಯಾಗಿರುವ ಕೇಂದ್ರದ ಪ್ರೋತ್ಸಾಹ ಧನವನ್ನು ಆರ್ ಸಿಎಚ್ ಪೋರ್ಟಲ್ ನಿಂದ ಕೈಬಿಡಬೇಕು, ಕನಿಷ್ಠ 15 ಸಾವಿರ ರೂ. ವೇತನ ನೀಡಬೇಕು ಮೊದಲಾದ ಬೇಡಿಕೆಗಳಿಗೆ ಆಗ್ರಹಿಸಿ ಪ್ರತಿಭಟನೆ ನಡೆಸಲಾಯಿತು. ಪ್ರತಿಭಟನೆಗೆ ಮೊದಲು ನಗರದ […]

ಬಿಟ್ಟಿ ಚಾಕರಿ ಮಾಡಲು ಸಿದ್ಧವಿಲ್ಲ | ಪ್ರತಿಭಟನೆಯಲ್ಲಿ ವಿವಿಧ ಬೇಡಿಕೆ ಮುಂದಿಟ್ಟ ಆಶಾ ಕಾರ್ಯಕರ್ತೆಯರು Read More »

ಶ್ರೀ ಮಹಾಲಿಂಗೇಶ್ವರ ದೇವರ ಅಂಗಣದಲ್ಲಿ ತುಳಸಿ ಪೂಜೆ

ಪುತ್ತೂರು: ಇತಿಹಾಸ ಪ್ರಸಿದ್ದ ಪುತ್ತೂರು ಶ್ರೀ ಮಹಾಲಿಂಗೇಶ್ವರ ದೇವಸ್ಥಾನದಲ್ಲಿ ನ. 24ರಂದು ಬೆಳಿಗ್ಗೆ ತುಳಸಿ ಪೂಜೆ ನಡೆಯಿತು. ದೇವಳದ ಪ್ರಧಾನ ಅರ್ಚಕ ವೇ.ಮೂ. ವಸಂತ ಕೆದಿಲಾಯ ಪೂಜೆ ನೆರವೇರಿಸಿದರು. ದೇವಳದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಕೇಶವ ಪ್ರಸಾದ್‌ ಮುಳಿಯ, ಸದಸ್ಯರಾದ ಬಿ. ಐತ್ತಪ್ಪ ನಾಯ್ಕ, ಶೇಖರ್ ನಾರಾವಿ, ರಾಮಚಂದ್ರ ಕಾಮತ್, ವೀಣಾ ಬಿ.ಕೆ, ಡಾ. ಸುಧಾ ಎಸ್. ರಾವ್, ರವೀಂದ್ರನಾಥ ರೈ ಬಳ್ಳಮಜಲು, ದೇವಳದ ಕಾರ್ಯನಿರ್ವಹಣಾಧಿಕಾರಿ ಕೆ.ವಿ. ಶ್ರೀನಿವಾಸ್‌, ಕಚೇರಿ ವ್ಯವಸ್ಥಾಪಕ ಹರೀಶ್ ಶೆಟ್ಟಿ, ಮಾಜಿ ಪುರಸಭೆ

ಶ್ರೀ ಮಹಾಲಿಂಗೇಶ್ವರ ದೇವರ ಅಂಗಣದಲ್ಲಿ ತುಳಸಿ ಪೂಜೆ Read More »

ಕಾವು: ನ. 25ರಂದು 12ನೇ ವರ್ಷದ ಸಾಮೂಹಿಕ ಗೋಪೂಜೆ, ಧಾರ್ಮಿಕ ಸಭೆ

ಕಾವು: ವಿಶ್ವ ಹಿಂದೂ ಪರಿಷತ್- ಬಜರಂಗದಳ ಕಾವು ಘಟಕ ಹಾಗೂ ಕಾವು ಗೋ ಪೂಜಾ ಸಮಿತಿ ಆಶ್ರಯದಲ್ಲಿ 12ನೇ ವರ್ಷದ ಸಾಮೂಹಿಕ ಗೋಪೂಜೆ ಹಾಗೂ ಧಾರ್ಮಿಕ ಸಭಾ ಕಾರ್ಯಕ್ರಮ ನ. 25ರಂದು ಸಂಜೆ ಕಾವು ಶ್ರೀ ಪಂಚಲಿಂಗೇಶ್ವರ ದೇವಸ್ಥಾನದ ವಠಾರದಲ್ಲಿ ನಡೆಯಲಿದೆ. ಸಂಜೆ 4.30ರಿಂದ ವಿವಿಧ ಭಜನಾ ತಂಡಗಳಿಂದ ಭಜನೆ ನಡೆಯಲಿದ್ದು, ಸಂಜೆ 6.30ರಿಂದ ಸಾಮೂಹಿಕ ಗೋಪೂಜೆ ನಡೆಯಲಿದೆ. ಸಂಜೆ 7ರಿಂದ ಧಾರ್ಮಿಕ ಸಭೆ ನಡೆಯಲಿದ್ದು, ಕಾವು ಗೋಪೂಜಾ ಸಮಿತಿ ಅಧ್ಯಕ್ಷ ನಹುಷ ಭಟ್ ಪಳನೀರು ಅಧ್ಯಕ್ಷತೆ

ಕಾವು: ನ. 25ರಂದು 12ನೇ ವರ್ಷದ ಸಾಮೂಹಿಕ ಗೋಪೂಜೆ, ಧಾರ್ಮಿಕ ಸಭೆ Read More »

ಕೀಲೆ: ದಿ.ಶೂರಪ್ಪ ಗೌಡ ಸ್ಮರಣಾರ್ಥ ಪ್ರಯಾಣಿಕರ ತಂಗುದಾಣ ಉದ್ಘಾಟನೆ

ಕಾಣಿಯೂರು: ಇಡ್ಯಡ್ಕ ಕುಟುಂಬದ ಯಜಮಾನರಾಗಿದ್ದ ದಿ. ಶೂರಪ್ಪ ಗೌಡ ಅವರ ಸ್ಮರಣಾರ್ಥ ಕೀಲೆ ಎಂಬಲ್ಲಿ ನೂತನ ಪ್ರಯಾಣಿಕರ ತಂಗುದಾಣವನ್ನು ಉದ್ಘಾಟಿಸಲಾಯಿತು. ಇಡ್ಯಡ್ಕ ಕುಟುಂಬದ ಹಿರಿಯರಾದ ಶೀನಪ್ಪ ಗೌಡ ಅವರು ದೀಪ ಬೆಳಗಿಸಿ, ತಂಗುದಾಣವನ್ನು ಉದ್ಘಾಟಿಸಿದರು. ಸುಮಾರು 85 ಸಾವಿರ ರೂ. ವೆಚ್ಚದಲ್ಲಿ ಪ್ರಯಾಣಿಕರ ತಂಗುದಾಣವನ್ನು ನಿರ್ಮಿಸಲಾಗಿದೆ. ಎ.ಪಿ.ಎಂ.ಸಿ. ಮಾಜಿ ಅಧ್ಯಕ್ಷ ದಿನೇಶ್ ಮೆದು, ನಿವೃತ್ತ  ಮುಖ್ಯಗುರು ಕೆ. ರಘುನಾಥ್ ರೈ ಅವರು ಶುಭ ಹಾರೈಸಿದರು. ಅರಣ್ಯ ಅಧಿಕಾರಿ ಯಶೋದರ ಕೆ., ಮನೋಹರ್, ಸುರೇಶ್ ರೈ ಸುದೀಮುಳ್ಳು, ಸಾಂತಪ್ಪ

ಕೀಲೆ: ದಿ.ಶೂರಪ್ಪ ಗೌಡ ಸ್ಮರಣಾರ್ಥ ಪ್ರಯಾಣಿಕರ ತಂಗುದಾಣ ಉದ್ಘಾಟನೆ Read More »

ಆರ್ಲಪದವು: ದಾಸ್ತಾನಿರಿಸಿದ್ದ ಅಡಿಕೆ ಕಳ್ಳತನ!

ಪುತ್ತೂರು: ದಾಸ್ತಾನಿರಿಸಿದ್ದ ಸುಲಿದ ಅಡಿಕೆ ಕಳ್ಳತನವಾಗಿರುವ ಘಟನೆ ನ. 23ರಂದು ಬೆಳಕಿಗೆ ಬಂದಿದೆ. ಪಾಣಾಜೆ ಗ್ರಾಮದ ಅಬ್ದುಲ್ ಬುರುಹಾನ್ (47) ಎಂಬವರ ಗೊಡೌನ್ ನಿಂದ ಕಳ್ಳತನವಾಗಿದೆ. ಮನೆಯ ಗೋಡೌನ್’ನ ಬೀಗ ಮುರಿದು ಒಳ ಪ್ರವೇಶಿಸಿದ ಕಳ್ಳರು, ಸುಲಿದ ಅಡಿಕೆಯನ್ನು ಕದ್ದೊಯ್ದಿದ್ದಾರೆ. ಸುಮಾರು 90 ಸಾವಿರ ರೂ. ಮೌಲ್ಯದ 02 ಕ್ವಿಂಟಾಲ್ 90 ಕೆಜಿ ಅಡಿಕೆ ಕಳ್ಳತನವಾಗಿರುವ ಬಗ್ಗೆ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಆರ್ಲಪದವು: ದಾಸ್ತಾನಿರಿಸಿದ್ದ ಅಡಿಕೆ ಕಳ್ಳತನ! Read More »

ವ್ಯಕ್ತಿತ್ವ ವಿಕಸನದ ಕಡೆಗೆ ವಿದ್ಯಾರ್ಥಿಗಳು ಗಮನ ಹರಿಸುವುದು ಅತ್ಯಗತ್ಯ: ಪ್ರತಿಭಾ ಶೋಭನಮ್’ನಲ್ಲಿ ಕನಿಷ್ಕ ಎಸ್ ಚಂದ್ರ

ಪುತ್ತೂರು: ಪಠ್ಯೇತರ ಚಟುವಟಿಕೆಗಳಲ್ಲಿ ಭಾಗವಹಿಸುವುದರಿಂದ ನಮ್ಮೊಳಗಿನ ಶಕ್ತಿಯ ಅರಿವುಂಟಾಗುತ್ತದೆ. ಇದು ಹೊಸ ಅನುಭವಗಳನ್ನು ತೆರೆದಿಡಲು ಸಹಾಯವಾಗುತ್ತದೆ.  ಮುಂದಿನ ತಲೆಮಾರಿಗೆ ನಮ್ಮೊಳಗಿನ ಜ್ಞಾನವನ್ನು ಹಂಚಬೇಕು. ಕಾಲಕ್ಕೆ ತಕ್ಕುದಾದ ಬದಲಾವಣೆಗಳನ್ನು ಜೀವನದಲ್ಲಿ ಅಳವಡಿಸಿಕೊಳ್ಳಬೇಕು. ವಿದ್ಯಾರ್ಥಿಗಳು ತಾವು ಯಾವ ಕ್ಷೇತ್ರದಲ್ಲಿ ಮುನ್ನಡೆಯಬೇಕು ಎಂಬುದನ್ನು ನಿರ್ಧರಿಸುವುದು ಉತ್ತಮ ಎಂದು ಪುತ್ತೂರು ಪಿಡಬ್ಲ್ಯುಡಿ ಇಂಜಿನಿಯರ್ ಕನಿಷ್ಕ ಎಸ್ ಚಂದ್ರ ಹೇಳಿದರು. ಪುತ್ತೂರು ವಿವೇಕಾನಂದ ಪದವಿ ಪೂರ್ವ ಕಾಲೇಜಿನಲ್ಲಿ ವಾರ್ಷಿಕೋತ್ಸವದ ಪ್ರಯುಕ್ತ ನಡೆದ ಪ್ರತಿಭಾ ಶೋಭನಮ್ ಕಾರ್ಯಕ್ರಮದ ಮುಖ್ಯ ಅತಿಥಿಯಾಗಿ ಅವರು ಮಾತನಾಡಿದರು. ಅಧ್ಯಕ್ಷತೆ ವಹಿಸಿದ್ದ

ವ್ಯಕ್ತಿತ್ವ ವಿಕಸನದ ಕಡೆಗೆ ವಿದ್ಯಾರ್ಥಿಗಳು ಗಮನ ಹರಿಸುವುದು ಅತ್ಯಗತ್ಯ: ಪ್ರತಿಭಾ ಶೋಭನಮ್’ನಲ್ಲಿ ಕನಿಷ್ಕ ಎಸ್ ಚಂದ್ರ Read More »

ಶೇಟ್ ಇಲೆಕ್ಟ್ರಾನಿಕ್ಸ್ ನಲ್ಲಿ ‘ದೀಪಾವಳಿ ಧಮಾಕಾ ಸೇಲ್’ : ಇನ್ನು ಕೆಲವೇ ದಿನಗಳು ಮಾತ್ರ

ಪುತ್ತೂರು: ಇಲ್ಲಿಯ ಕೋಟ್ ರಸ್ತೆಯ ಸಂತೆ ಕಟ್ಟೆ ಬಳಿ 24 ವರ್ಷಗಳಿಂದ ವ್ಯವಹರಿಸುತ್ತಿರುವ ಶೇಟ್ ಇಲೆಕ್ಟ್ರಾನಿಕ್ಸ್ ನಲ್ಲಿ ವರ್ಷಂಪ್ರತಿಯಂತೆ ಈ ಬಾರಿಯೂ ದೀಪಾವಳಿ ಭರ್ಜರಿ ಸೇಲ್ ಆರಂಭಗೊಂಡಿದ್ದು ಇನ್ನು ಕೆಲವೇ ದಿನಗಳು ಗ್ರಾಹಕರಿಗೆ ಅವಕಾಶವಿರುತ್ತದೆ ಗ್ರಾಹಕರಿಗೆ ದೀಪಾವಳಿ ಹಬ್ಬದ ಕೊಡುಗೆಯಾಗಿ ವಿಶೇಷ ರಿಯಾಯಿತಿ ಮಾರಾಟ ಮತ್ತು ಪ್ರತಿ ರೂ.೨೦೦೦ದ ಖರೀದಿಗೆ ಒಂದು ಉಚಿತ ಕೂಪನ್ ಕೈ, ಪಡೆದು ಟಿವಿಎಸ್ ರೇಡನ್ ಬೈಕ್ ಗೆಲ್ಲುವ ಖರಿ ಸುವರ್ಣಾವಕಾಶವಿದೆ. ಸಂಸ್ಥೆಯಲ್ಲಿ ಈ ಬಾರಿಯ ದೀಪಾವಳಿ ವಿಶೇಷ ಕೊಡುಗೆಯಾಗಿ ಗ್ರಾಹಕರಿಗೆ ಆಫರ್‌ಗಳನ್ನು

ಶೇಟ್ ಇಲೆಕ್ಟ್ರಾನಿಕ್ಸ್ ನಲ್ಲಿ ‘ದೀಪಾವಳಿ ಧಮಾಕಾ ಸೇಲ್’ : ಇನ್ನು ಕೆಲವೇ ದಿನಗಳು ಮಾತ್ರ Read More »

ಕರಾವಳಿ ಭಾಗದಿಂದ ಬೆಂಗಳೂರು ಕಂಬಳಕ್ಕೆ ತೆರಳಿದ ಕೋಣಗಳ ದಂಡು | ಕೊಂಬು- ಕಹಳೆ, ಬ್ಯಾಂಡ್-ವಾದ್ಯಗಳ ಸಾಥ್

ಉಪ್ಪಿನಂಗಡಿ: ಬೆಂಗಳೂರಿನ ಅರಮನೆ ಮೈದಾನದಲ್ಲಿ ನಡೆಯಲಿರುವ ‘ಬೆಂಗಳೂರು ಕಂಬಳ- ನಮ್ಮ ಕಂಬಳ’ದಲ್ಲಿ ಭಾಗವಹಿಸಲು ಕೋಣಗಳ ದಂಡೇ ಇಂದು ಬೆಂಗಳೂರಿಗೆ ತೆರಳಿತು. ಕರಾವಳಿಯ ವಿವಿಧ ಕಡೆಗಳಿಂದ ಬಂದ ಕೋಣಗಳ ದಂಡು ಉಪ್ಪಿನಂಗಡಿ ಸರಕಾರಿ ಪ್ರಥಮ ದರ್ಜೆ ಕಾಲೇಜು ಮೈದಾನದಲ್ಲಿ ಬಂದು ಸೇರಿದವು. ಕೋಣಗಳಿಗೆ ಉಪ್ಪಿನಂಗಡಿಯಲ್ಲಿ ನೂರಾರು ಕಂಬಳಾಭಿಮಾನಿಗಳ ಸಮ್ಮುಖದಲ್ಲಿ ಪ್ರೀತಿ- ಗೌರವಾದಾರಗಳ ಸ್ವಾಗತ ನೀಡಲಾಯಿತು. ಬಳಿಕ ಕಂಬಳ ಸಮಿತಿಯ ವತಿಯಿಂದ ಕೋಣಗಳ ಯಜಮಾನರನ್ನು ಶಾಲು ಹೊದೆಸಿ ಸ್ವಾಗತಿಸಲಾಯಿತು. ಕೊಂಬು- ಕಹಳೆಗಳ ಸಹಿತ ಮೆರವಣಿಗೆಯೊಂದಿಗೆ ಕೋಣಗಳನ್ನು ಬೆಂಗಳೂರಿಗೆ ಬೀಳ್ಕೊಡಲಾಯಿತು. ಪಶು

ಕರಾವಳಿ ಭಾಗದಿಂದ ಬೆಂಗಳೂರು ಕಂಬಳಕ್ಕೆ ತೆರಳಿದ ಕೋಣಗಳ ದಂಡು | ಕೊಂಬು- ಕಹಳೆ, ಬ್ಯಾಂಡ್-ವಾದ್ಯಗಳ ಸಾಥ್ Read More »

ಮಾಂಡೋವಿ ಮೋಟರ್ಸ್ ಪ್ರೈ.ಲಿ.ನಲ್ಲಿ ದೀಪಾವಳಿ ಪ್ರಯುಕ್ತ ಕೊಡುಗೆಗಳ ಸುರಿಮಳೆ

ಪುತ್ತೂರು: ಕರ್ನಾಟಕದ ಮೊದಲ ಮತ್ತು 40 ವರ್ಷಗಳಿಂದ ಲಕ್ಷಾಂತರ ಗ್ರಾಹಕರ ಮನೆಮಾತಾಗಿರುವ ಮಾರುತಿ ಸುಝಕಿ ಕಾರುಗಳ ಅಧಿಕೃತ ವಿತರಕ ಸಂಸ್ಥೆ ಮಾಂಡೋವಿ ಮೋಟರ್ಸ್ ಪ್ರೈ. ಲಿ. ಉಪ್ಪಿನಂಗಡಿ ಶಾಖೆಯು ದೀಪಾವಳಿ ಪ್ರಯುಕ್ತ ಅತ್ಯಧಿಕ ಕೊಡುಗೆಗಳನ್ನು ನೀಡಲಿದೆ. ದಿಪಾವಳಿ ಹಬ್ಬದ ಪ್ರಯುಕ್ತ ಹೊಸ ಮಾರುತಿ ಸುಝಕಿ ಕಾರುಗಳಿಗೆ ಅತ್ಯದಿಕ ಕೊಡುಗೆಗಳು, ದ್ವಿಚಕ್ರ ಹೊಂದಿರುವ ಗ್ರಾಹಕರಿಗೆ ಹೊಸ ಕಾರು ಖರೀದಿಯೊಂದಿಗೆ ವಿಶೇಷ ಕೊಡುಗೆ, ಕೃಷಿಕರಿಗೆ, ಶಿಕ್ಷಕರಿಗೆ, ಗ್ರಾಮೀಣ ಸಹಕಾರಿ ಸೊಸೈಟಿ ಸದಸ್ಯರಿಗೆ, ಗ್ರಾಮೀಣ ವ್ಯಾಪಾರಸ್ತರಿಗೆ ಮತ್ತು ಸರಕಾರಿ ನೌಕರರಿಗೆ ವಿಶೇಷ

ಮಾಂಡೋವಿ ಮೋಟರ್ಸ್ ಪ್ರೈ.ಲಿ.ನಲ್ಲಿ ದೀಪಾವಳಿ ಪ್ರಯುಕ್ತ ಕೊಡುಗೆಗಳ ಸುರಿಮಳೆ Read More »

ಬೆಳಂದೂರು ಕಾಲೇಜಿನಲ್ಲಿ ರಂಗ ತರಬೇತಿ ಶಿಬಿರ

ಬೆಳಂದೂರು: ಇಲ್ಲಿನ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಆಂತರಿಕ ಗುಣಮಟ್ಟ ಭರವಸಾ ಕೋಶ, ಸಾಂಸ್ಕೃತಿಕ ಸಮಿತಿ ಮತ್ತು ಕನ್ನಡ ವಿಭಾಗದ ನೇತೃತ್ವದಲ್ಲಿ ಒಂದು ದಿನದ ರಂಗ ತರಬೇತಿ ಶಿಬಿರ ನಡೆಯಿತು. ತರಬೇತುದಾರರಾಗಿ ಕಾಲೇಜಿನ ಹಿರಿಯ ವಿದ್ಯಾರ್ಥಿ, ರಂಗ ತರಬೇತುದಾರ ರಾಕೇಶ್ ಆಚಾರ್ಯ ಬನಾರಿ ಭಾಗವಹಿಸಿ, ವಿದ್ಯಾರ್ಥಿ ಜೀವನದಲ್ಲಿ ಪಠ್ಯೇತರ ಚಟುವಟಿಕೆಗಳ ಮಹತ್ವ ಮತ್ತು ಕಲೆಯೂ ಹೇಗೆ ವ್ಯಕ್ತಿತ್ವದ ನಿರ್ಮಾಣದಲ್ಲಿ ಪ್ರಮುಖ ಪಾತ್ರ ವಹಿಸುತ್ತದೆ ಎಂಬುದನ್ನು ತಿಳಿಸಿದರು. ಕಾಲೇಜಿನ ಪ್ರಾಂಶುಪಾಲ ಡಾ.ಶಂಕರ ಭಟ್ ಪಿ. ಅಧ್ಯಕ್ಷತೆ ವಹಿಸಿದ್ದರು. ವೇದಿಕೆಯಲ್ಲಿ

ಬೆಳಂದೂರು ಕಾಲೇಜಿನಲ್ಲಿ ರಂಗ ತರಬೇತಿ ಶಿಬಿರ Read More »

error: Content is protected !!
Scroll to Top