ಪುತ್ತೂರು

ಮೇರ್ಲ ನಿವಾಸಿ ಪ್ರಕಾಶ್ ಶೆಟ್ಟಿ ಆತ್ಮಹತ್ಯೆ

ಪುತ್ತೂರು: ವ್ಯಕ್ತಿಯೋರ್ವರು ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡ ಘಟನೆ ಸಂಪ್ಯದಲ್ಲಿ ನಡೆದಿದೆ. ಸಂಪ್ಯ ಮೇರ್ಲ ನಿವಾಸಿ ಪ್ರಕಾಶ್ ಶೆಟ್ಟಿ (46) ಮೃತರು. ಪ್ರಕಾಶ್ ಅವರು ಕೂಲಿ ಕೆಲಸ ಮಾಡಿಕೊಂಡಿದ್ದು, ಮನೆಯವರು ಬೇರೆ ಕಡೆ ತೆರಳಿದ್ದ ವೇಳೆ ಮನೆಯಲ್ಲಿ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದಾರೆನ್ನಲಾಗಿದೆ. ಆತ್ಮಹತ್ಯೆ ಮಾಡಿಕೊಂಡು ಎರಡು, ಮೂರು ದಿನ ಕಳೆದಿದೆ ಎನ್ನಲಾಗಿದ್ದು, ಆತ್ಮಹತ್ಯೆಗೆ ನಿಖರ ಕಾರಣ ತಿಳಿದು ಬಂದಿಲ್ಲ. ಮೃತರು ಪತ್ನಿ, ಮಗ ಹಾಗೂ ಮನೆಯವರನ್ನು ಅಗಲಿದ್ದಾರೆ. ಸಂಪ್ಯ ಠಾಣಾ ಭೇಟಿ ಪರಿಶೀಲನೆ ನಡೆಸುತ್ತಿದ್ದಾರೆ.

ಮೇರ್ಲ ನಿವಾಸಿ ಪ್ರಕಾಶ್ ಶೆಟ್ಟಿ ಆತ್ಮಹತ್ಯೆ Read More »

ಸಮಾಜದ ನಿರ್ಮಾಣಕ್ಕೆ ಶಿಕ್ಷಣವೇ ಅಡಿಪಾಯ | ಬೊಳುವಾರಿನಲ್ಲಿ ನಡೆದ ಗುರುಪಾದ ಪೂಜೆಯಲ್ಲಿ ಆನೆಗುಂದಿ ಶ್ರೀ

ಪುತ್ತೂರು: ಶಿಕ್ಷಣ ಎಲ್ಲಾ ವಿಚಾರಗಳಿಗೂ ಮೂಲ. ಆದ್ದರಿಂದ ಸಮುದಾಯ, ಸಮಾಜವನ್ನು ಕಟ್ಟಲು ಶಿಕ್ಷಣವನ್ನೇ ಅಡಿಪಾಯವಾಗಿ ಬಳಸಿಕೊಳ್ಳಬೇಕು ಎಂದು ಆನೆಗುಂದಿ ಸರಸ್ವತೀ ಪೀಠಾಧೀಶ್ವರ ಶ್ರೀ ಕಾಳಹಸ್ತೇಂದ್ರ ಸರಸ್ವತೀ ಮಹಾಸ್ವಾಮೀಜಿ ಹೇಳಿದರು. ದ.ಕ. ಜಿಲ್ಲಾ ವಿಶ್ವಕರ್ಮ ಹಿತರಕ್ಷಣಾ ಸಂಘ ಪುತ್ತೂರು ಇದರ ಆಶ್ರಯದಲ್ಲಿ ಭಾನುವಾರ ಬೊಳುವಾರು ವಿಶ್ವಕರ್ಮ ಸಭಾಭವನದಲ್ಲಿ ಜರಗಿದ ಸಾಮೂಹಿಕ ಶ್ರೀ ಗುರುಪಾದ ಪೂಜೆಯಲ್ಲಿ ಅವರು ಆಶೀರ್ವಚನ ನೀಡಿದರು. ಶಿಕ್ಷಣದ ಜೊತೆಗೆ ಸಂಯಮವನ್ನು ಜೀವನದಲ್ಲಿ ರೂಢಿಸಿಕೊಳ್ಳಬೇಕು. ಸಂಯಮ ಇದ್ದಾಗ ಮಾತ್ರ ಎಲ್ಲಾ ವ್ಯವಸ್ಥೆಗಳು ನಮ್ಮ ಜೊತೆಗಿರುತ್ತವೆ. ಸಂಯಮದಿಂದ ಯಶಸ್ಸು

ಸಮಾಜದ ನಿರ್ಮಾಣಕ್ಕೆ ಶಿಕ್ಷಣವೇ ಅಡಿಪಾಯ | ಬೊಳುವಾರಿನಲ್ಲಿ ನಡೆದ ಗುರುಪಾದ ಪೂಜೆಯಲ್ಲಿ ಆನೆಗುಂದಿ ಶ್ರೀ Read More »

ಪ್ರೇರಣಾದಿಂದ ಪಿಯುಸಿ ವಿದ್ಯಾರ್ಥಿಗಳಿಗಾಗಿ ರಸಪ್ರಶ್ನೆ ಸ್ಪರ್ಧೆ 2023

ಪುತ್ತೂರು: ಪ್ರೇರಣಾ ಸಂಸ್ಥೆಯ ವತಿಯಿಂದ ಪಿಯುಸಿ ವಿದ್ಯಾರ್ಥಿಗಳಿಗಾಗಿ ತಾಲೂಕು ಮಟ್ಟದ ರಸಪ್ರಶ್ನೆ ಸ್ಪರ್ಧೆ 2023 ಭಾನುವಾರ ತೆಂಕಿಲ ಚುಂಚಶ್ರೀ ಸಭಾಭವನದಲ್ಲಿ ಜರಗಿತು. ಸಭಾ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಸಮರ್ಪಣಾ ಚಾರಿಟೇಬಲ್ ಟ್ರಸ್ಟ್ ನಿರ್ದೇಶಕ ಚಿದಾನಂದ ಬೈಲಾಡಿ, ಕ್ವಿಜ್ ಸ್ಪರ್ಧೆಗಳು ವಿದ್ಯಾರ್ಥಿಗಳ ಭವಿಷ್ಯಕ್ಕೆ ಸಹಕಾರಿ. 4 ಮಂದಿಯಿಂದ ಆರಂಭಗೊಂಡ ರೋಟರಿ ಸಂಸ್ಥೆ, ಇಂದು ವಿಶ್ವಾದ್ಯಂತ ಸೇವಾ ಚಟುವಟಿಕೆ ನಡೆಸುತ್ತಾ ಬರುತ್ತಿದೆ. ಅದೇ ರೀತಿ ಪ್ರೇರಣಾ ಸಂಸ್ಥೆಯೂ ಇನ್ನಷ್ಟು ವಿದ್ಯಾರ್ಥಿಗಳ ಭವಿಷ್ಯವನ್ನು ಬೆಳಗಿಸುವಂತಾಗಲಿ ಎಂದು ಶುಭಹಾರೈಸಿದರು. ನ್ಯೂಸ್ ಪುತ್ತೂರು ಅಧ್ಯಕ್ಷ

ಪ್ರೇರಣಾದಿಂದ ಪಿಯುಸಿ ವಿದ್ಯಾರ್ಥಿಗಳಿಗಾಗಿ ರಸಪ್ರಶ್ನೆ ಸ್ಪರ್ಧೆ 2023 Read More »

ನ್ಯೂಸ್ ಪುತ್ತೂರು ಏರ್ಪಡಿಸಿದ್ದ ಸರಸ್ವತಿ ಗೀತ ಗಾಯನ ಸ್ಪರ್ಧೆಯ ಬಹುಮಾನ ವಿತರಣೆ

ಪುತ್ತೂರು: ನವರಾತ್ರಿ ಹಬ್ಬದ ಹಿನ್ನಲೆಯಲ್ಲಿ ನ್ಯೂಸ್ ಪುತ್ತೂರು ಏರ್ಪಡಿಸಿದ್ದ ಸರಸ್ವತಿ ಗೀತ ಗಾಯನ ಸ್ಪರ್ಧೆಯ ಬಹುಮಾನ ವಿತರಣೆ ಭಾನುವಾರ ಚುಂಚಶ್ರೀ ಸಭಾಂಗಣದಲ್ಲಿ ನಡೆಯಿತು. ಸಮರ್ಪಣಾ ಚಾರಿಟೇಬಲ್ ಟ್ರಸ್ಟಿನ ಪ್ರೇರಣಾ ಸಂಸ್ಥೆಯ ವತಿಯಿಂದ ನಡೆದ ರಸಪ್ರಶ್ನೆ ಸ್ಪರ್ಧೆ 2023ರ ಉದ್ಘಾಟನಾ ಸಮಾರಂಭದಲ್ಲಿ ಈ ಬಹುಮಾನವನ್ನು ವಿತರಿಸಲಾಯಿತು. ಸಾರ್ವಜನಿಕ ವಿಭಾಗದಲ್ಲಿ ಪ್ರಥಮ ಸ್ಥಾನ ಪಡೆದ ಸುಮಾ ಕೋಟೆ, ದ್ವಿತೀಯ ಸ್ಥಾನ ಪಡೆದ ಸಾನ್ವಿ ಕಜೆ, ತೃತೀಯ ಸ್ಥಾನ ಪಡೆದ ಶಿವಪ್ರಿಯಾ ಪಿ. ಹಾಗೂ ಶಾಲಾ ವಿಭಾಗದಲ್ಲಿ ಪ್ರಥಮ ಸ್ಥಾನ ಪಡೆದ

ನ್ಯೂಸ್ ಪುತ್ತೂರು ಏರ್ಪಡಿಸಿದ್ದ ಸರಸ್ವತಿ ಗೀತ ಗಾಯನ ಸ್ಪರ್ಧೆಯ ಬಹುಮಾನ ವಿತರಣೆ Read More »

ಪ್ರಜ್ಞಾ ಆಶ್ರಮದಲ್ಲಿ ವಿಶ್ವ ವಿಕಲಚೇತನರ ದಿನಾಚರಣೆ | ಕೇಶವ್ ಅಮೈ, ಮನು ಕುಮಾರ್, ನೇಹಾ ರೈ, ಅಬ್ದುಲ್ ಅಯೂಬ್, ಸುಬ್ರಮಣಿಗೆ ದಿವ್ಯಾಂಗ  ಸಾಧಕ ಪ್ರಶಸ್ತಿ ಪ್ರದಾನ

ಪುತ್ತೂರು: ವಿಶ್ವ ವಿಕಲಚೇತನರ ದಿನಾಚರಣೆ ಪ್ರಯುಕ್ತ ದಿವ್ಯಾಂಗ ಪ್ರತಿಭೆಗಳ ಸಾಹಿತ್ಯ ಸಂಭ್ರಮ ಹಾಗೂ ವಿಶಿಷ್ಟ ಸಾಧಕರಿಗೆ ಅಭಿನಂದನಾ ಕಾರ್ಯಕ್ರಮ ಡಿ. 3ರಂದು ಬಿರುಮಲೆ ಬೆಟ್ಟದ ಪ್ರಜ್ಞಾಶ್ರಮದಲ್ಲಿ ನಡೆಯಿತು. ಇದೇ ಸಂದರ್ಭ ವಿಶೇಷ ಚೇತನರಾಗಿ ವಿಶಿಷ್ಟ ಸಾಧನೆಯನ್ನು ಮಾಡಿದ ಯಶಸ್ವಿ ಉದ್ಯಮಿ ಸಮಾಜ ಸೇವಕರಾಗಿ ಗುರುತಿಸಿಕೊಂಡಿರುವ ಎಸ್.ಆರ್.ಕೆ. ಲ್ಯಾಡರ್ಸ್ ಮಾಲಕ ಕೇಶವ್ ಅಮೈ, ಸಾಹಿತ್ಯ ಹಾಗೂ ಸಂಘಟನೆಯಲ್ಲಿ ತೊಡಗಿಸಿಕೊಂಡಿರುವ ಮನು ಕುಮಾರ್, ಶಿಕ್ಷಣ ಕ್ಷೇತ್ರದ ಕುಮಾರಿ ನೇಹಾ ರೈ, ಝೀ ಕನ್ನಡ ಡ್ಯಾನ್ಸ್ ಕರ್ನಾಟಕ ಡ್ಯಾನ್ಸ್ ಕಲಾವಿದ ಅಬ್ದುಲ್

ಪ್ರಜ್ಞಾ ಆಶ್ರಮದಲ್ಲಿ ವಿಶ್ವ ವಿಕಲಚೇತನರ ದಿನಾಚರಣೆ | ಕೇಶವ್ ಅಮೈ, ಮನು ಕುಮಾರ್, ನೇಹಾ ರೈ, ಅಬ್ದುಲ್ ಅಯೂಬ್, ಸುಬ್ರಮಣಿಗೆ ದಿವ್ಯಾಂಗ  ಸಾಧಕ ಪ್ರಶಸ್ತಿ ಪ್ರದಾನ Read More »

ಕ್ರೀಡಾ ಕಾರಂಜಿಯ ಕ್ರೀಡಾಜ್ಯೋತಿಗೆ ದರ್ಬೆಯಲ್ಲಿ ಭವ್ಯ ಸ್ವಾಗತ

ಪುತ್ತೂರು: ರಾಜ್ಯಮಟ್ಟದ 17ರ ವಯೋಮಾನದ ಪ್ರೌಢಶಾಲಾ ಬಾಲಕ – ಬಾಲಕಿಯರ ಕ್ರೀಡಾಕೂಟಕ್ಕೆ ಶನಿವಾರ ಸಂಜೆ ದರ್ಬೆ ವೃತ್ತದಲ್ಲಿ ಸ್ವಾಗತಿಸಲಾಯಿತು. ಶುಕ್ರವಾರ ಪುತ್ತೂರು ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ಮುಂಭಾಗ ಕ್ರೀಡಾಕೂಟದ ಜ್ಯೋತಿಗೆ ಚಾಲನೆ ನೀಡಿದ್ದು, ತಾಲೂಕಿನ ವಿವಿಧ ಪ್ರದೇಶಗಳಿಗೆ ಸಂಚರಿಸಿ ಇಂದು ದರ್ಬೆಗೆ ತಲುಪಿತು. ದರ್ಬೆಯಲ್ಲಿ ಕ್ರೀಡಾ ಜ್ಯೋತಿಯನ್ನು ಸ್ವಾಗತಿಸಿ, ಬೃಹತ್ ಮೆರವಣಿಗೆಯಲ್ಲಿ ಕೊಂಬೆಟ್ಟು ತಾಲೂಕು ಕ್ರೀಡಾಂಗಣಕ್ಕೆ ತರಲಾಯಿತು. ಪುತ್ತೂರು ಶಾಸಕ ಅಶೋಕ್ ಕುಮಾರ್ ರೈ, ಸುಳ್ಯ ಶಾಸಕಿ ಭಾಗೀರಥಿ ಮುರುಳ್ಯ,  ಮಾಜಿ ಶಾಸಕಿ ಶಕುಂತಳಾ ಶೆಟ್ಟಿ, ಸವಣೂರು

ಕ್ರೀಡಾ ಕಾರಂಜಿಯ ಕ್ರೀಡಾಜ್ಯೋತಿಗೆ ದರ್ಬೆಯಲ್ಲಿ ಭವ್ಯ ಸ್ವಾಗತ Read More »

ಡಿ. 3: ಸರಸ್ವತಿ ಗೀತ ಗಾಯನ ಸ್ಪರ್ಧೆಯ ಬಹುಮಾನ ವಿತರಣೆ

ಪುತ್ತೂರು: ನವರಾತ್ರಿ ಹಬ್ಬದ ಸಂದರ್ಭ ನ್ಯೂಸ್ ಪುತ್ತೂರು ಹಮ್ಮಿಕೊಂಡಿದ್ದ ಸರಸ್ವತಿ ಗೀತ ಗಾಯನ ಸ್ಪರ್ಧೆಯ ಬಹುಮಾನವನ್ನು ಡಿ. 3ರಂದು ತೆಂಕಿಲ ಚುಂಚಶ್ರೀ ಸಭಾಭವನದಲ್ಲಿ ವಿತರಿಸಲಾಗುವುದು. ಸಾರ್ವಜನಿಕ ಹಾಗೂ ಶಾಲಾ ವಿಭಾಗದಲ್ಲಿ ಸರಸ್ವತಿ ಗೀತ ಗಾಯನ ಸ್ಪರ್ಧೆ ನಡೆದಿತ್ತು. ಸ್ಪರ್ಧೆಗೆ ಉತ್ತಮ ಸ್ಪಂದನೆ ವ್ಯಕ್ತವಾಗಿತ್ತು. ತೀರ್ಪುಗಾರರ ತೀರ್ಮಾನದಂತೆ ವಿಜೇತರನ್ನು ಆಯ್ಕೆ ಮಾಡಿದ್ದು, ಅವರಿಗೆ ಡಿ. 3ರಂದು ಬೆಳಿಗ್ಗೆ 9.30ಕ್ಕೆ ನಡೆಯುವ ಸಭಾ ಕಾರ್ಯಕ್ರಮದಲ್ಲಿ ಬಹುಮಾನ ನೀಡಿ ಗೌರವಿಸಲಾಗುವುದು. ಫಲಿತಾಂಶದ ವಿವರ ಹೀಗಿದೆ: ಸಾರ್ವಜನಿಕ ವಿಭಾಗದಲ್ಲಿ ಪ್ರಥಮ ಸುಮಾ ಕೋಟೆ,

ಡಿ. 3: ಸರಸ್ವತಿ ಗೀತ ಗಾಯನ ಸ್ಪರ್ಧೆಯ ಬಹುಮಾನ ವಿತರಣೆ Read More »

ಡಿ. 3: ಪ್ರೇರಣಾದಿಂದ ತಾಲೂಕು ಮಟ್ಟದ ರಸಪ್ರಶ್ನೆ ಸ್ಪರ್ಧೆ – 2023

ಪುತ್ತೂರು: ಸಮರ್ಪಣಾ ಚಾರಿಟೇಬಲ್ ಟ್ರಸ್ಟ್ ಮುನ್ನಡೆಸುತ್ತಿರುವ ಪ್ರೇರಣಾ ಸಂಸ್ಥೆಯ ನೇತೃತ್ವದಲ್ಲಿ ತಾಲೂಕು ಮಟ್ಟದ ರಸಪ್ರಶ್ನೆ ಸ್ಪರ್ಧೆ – 2023 ಡಿ. 3ರಂದು ಬೆಳಿಗ್ಗೆ 9.30ಕ್ಕೆ ತೆಂಕಿಲ ಚುಂಚಶ್ರೀ ಸಭಾಭವನದಲ್ಲಿ ಜರಗಲಿದೆ. ಪಿಯುಸಿ ವಿದ್ಯಾರ್ಥಿಗಳಿಗಾಗಿ ಹಮ್ಮಿಕೊಂಡಿರುವ ಈ ಸ್ಪರ್ಧೆಯು 2 ಸುತ್ತಿನಲ್ಲಿ ನಡೆಯಲಿದೆ. ಸಮರ್ಪಣಾ ಚಾರಿಟೇಬಲ್ ಟ್ರಸ್ಟ್ ನಿರ್ದೇಶಕ ಸೀತಾರಾಮ ಕೇವಳ ಅವರು ರಸಪ್ರಶ್ನೆ ಸ್ಪರ್ಧೆಯನ್ನು ನಡೆಸಿಕೊಡಲಿದ್ದಾರೆ. ಸಭಾ ಕಾರ್ಯಕ್ರಮವನ್ನು ಸಮರ್ಪಣಾ ಚಾರಿಟೇಬಲ್ ಟ್ರಸ್ಟ್ ನಿರ್ದೇಶಕ ಚಿದಾನಂದ ಬೈಲಾಡಿ ಉದ್ಘಾಟಿಸುವರು. ಪ್ರೇರಣಾದ ಆಡಳಿತ ಅಧ್ಯಕ್ಷ ಪ್ರವೀಣ್ ಕುಂಟ್ಯಾನ ಅಧ್ಯಕ್ಷತೆ

ಡಿ. 3: ಪ್ರೇರಣಾದಿಂದ ತಾಲೂಕು ಮಟ್ಟದ ರಸಪ್ರಶ್ನೆ ಸ್ಪರ್ಧೆ – 2023 Read More »

ಶ್ರೀನಿವಾಸ ಕಲ್ಯಾಣೋತ್ಸವ, ಸನಾತನ ಸಮಾಗಮದ ಕಾರ್ಯಾಲಯ, ಮಾಹಿತಿ ಕೇಂದ್ರ ಉದ್ಘಾಟನೆ | ಪುತ್ತಿಲ ಪರಿವಾರದ ವೆಬ್ ಸೈಟ್ ಗೆ ಚಾಲನೆ

ಪುತ್ತೂರು: ಪುತ್ತಿಲ ಪರಿವಾರದ ನೇತೃತ್ವದಲ್ಲಿ ನಡೆಯಲಿರುವ ಶ್ರೀ ಶ್ರೀನಿವಾಸ ಕಲ್ಯಾಣೋತ್ಸವ ಮತ್ತು ಸನಾತನ ಸಮಾಗಮದ ಕಾರ್ಯಾಲಯ ಮತ್ತು ಮಾಹಿತಿ ಕೇಂದ್ರ ಡಿ. 2ರಂದು ಶ್ರೀ ಮಹಾಲಿಂಗೇಶ್ವರ ದೇವಳದ ಬ್ರಹ್ಮರಥ ಮಂದಿರದ ಮುಂಭಾಗ ಉದ್ಘಾಟನೆಗೊಂಡಿತು. ಮಾಣಿಲ ಶ್ರೀ ಧಾಮದ ಶ್ರೀ ಮೋಹನದಾಸ ಪರಮಹಂಸ ಸ್ವಾಮೀಜಿ ಅವರು ಕಾರ್ಯಾಲಯ ಉದ್ಘಾಟಿಸಿ, ಪುತ್ತಿಲ ಪರಿವಾರದ ವತಿಯಿಂದ  ಪ್ರಥಮ ಬಾರಿಗೆ ಡಿ. 24 ಮತ್ತು 25ರಂದು ನಡೆಯಲಿರುವ ಶ್ರೀ ಶ್ರೀನಿವಾಸ ಕಲ್ಯಾಣೋತ್ಸವ ಮತ್ತು ಸನಾತನ ಸಮಾಗಮ ಕಾರ್ಯಕ್ರಮ ಯಶಸ್ವಿಯಾಗಲಿ ಎಂದು ಶುಭ ಹಾರೈಸಿದರು.

ಶ್ರೀನಿವಾಸ ಕಲ್ಯಾಣೋತ್ಸವ, ಸನಾತನ ಸಮಾಗಮದ ಕಾರ್ಯಾಲಯ, ಮಾಹಿತಿ ಕೇಂದ್ರ ಉದ್ಘಾಟನೆ | ಪುತ್ತಿಲ ಪರಿವಾರದ ವೆಬ್ ಸೈಟ್ ಗೆ ಚಾಲನೆ Read More »

ಪುತ್ತೂರು ಗ್ರಾಮಾಂತರ ಠಾಣಾ ಎಸ್.ಐ. ಆಗಿ ನೇಮಕ

ಪುತ್ತೂರು: ಡಿ.ಸಿ.ಆರ್.ಬಿ. ಚಿಕ್ಕಮಗಳೂರು ಘಟಕದಲ್ಲಿದ್ದ ಜಂಬೂರಾಜ್ ಮಹಾಜನ್ ಅವರನ್ನು ಪುತ್ತೂರು ಗ್ರಾಮಾಂತರ ಠಾಣಾ ಪಿ.ಎಸ್.ಐ. ಆಗಿ ನೇಮಕಗೊಳಿಸಿ ಪೊಲೀಸ್ ಉಪ ಮಹಾನಿರೀಕ್ಷಕ ಚಂದ್ರಗುಪ್ತ ಆದೇಶಿಸಿದ್ದಾರೆ. ಇವರು ಈ ಹಿಂದೆ ಪುತ್ತೂರು ನಗರ ಠಾಣೆಯಲ್ಲಿ ಪಿ.ಎಸ್.ಐ. ಆಗಿ ಕರ್ತವ್ಯ ನಿರ್ವಹಿಸಿದ್ದರು. ಪುತ್ತೂರು ಗ್ರಾಮಾಂತರ ಪೊಲೀಸ್ ಠಾಣೆಯ ಪಿ.ಎಸ್.ಐ. ಆಗಿದ್ದ ಧನಂಜಯ ಬಿ.ಸಿ. ಅವರು ಪಶ್ಚಿಮ ವಲಯ ಕಚೇರಿಗೆ ಸ್ಥಳಾಂತರಗೊಂಡಿದ್ದು, ತೆರವಾದ ಹುದ್ದೆಗೆ ಜಂಬೂರಾಜ್ ಮಹಾಜನ್ ವರ್ಗಾವಣೆಗೊಂಡಿದ್ದಾರೆ.

ಪುತ್ತೂರು ಗ್ರಾಮಾಂತರ ಠಾಣಾ ಎಸ್.ಐ. ಆಗಿ ನೇಮಕ Read More »

error: Content is protected !!
Scroll to Top