ಪುತ್ತೂರು

ಪುರುಷ ಮೃಗ ತಾಳಮದ್ದಳೆ

ಉಪ್ಪಿನಂಗಡಿ ಶ್ರೀ ಸಹಸ್ರಲಿಂಗೇಶ್ವರ ದೇವಸ್ಥಾನದಲ್ಲಿ ಶ್ರೀ ಕಾಳಿಕಾಂಬಾ ಯಕ್ಷಗಾನ ಕಲಾ ಸೇವಾ ಸಂಘದ 50ನೇ ವರ್ಷದ ಪ್ರಯುಕ್ತ ಮಹಾಭಾರತ ಸರಣಿಯ ಪುರುಷಮೃಗ ತಾಳಮದ್ದಳೆ ಜರಗಿತು. ಭಾಗವತರಾಗಿ ಪದ್ಮನಾಭ ಕುಲಾಲ್, ಡಿ.ಕೆ. ಆಚಾರ್ಯ ಅಲಂಕಾರು. ಹಿಮ್ಮೇಳದಲ್ಲಿ ದಿವಾಕರ ಆಚಾರ್ಯ ನೆರೆಂಕಿ, ಶ್ರೀಪತಿ ಭಟ್ ಉಪ್ಪಿನಂಗಡಿ, ಅರ್ಥಧಾರಿಗಳಾಗಿ ಜಯರಾಮ ಬಲ್ಯ (ಶ್ರೀ ಕೃಷ್ಣ), ಬಾಲಕೃಷ್ಣ ಕೇಪುಳು (ಧರ್ಮರಾಯ), ಗುಡ್ಡಪ್ಪ ಬಲ್ಯ (ಭೀಮ), ಜಯರಾಮ ಭಟ್ ದೇವಸ್ಯ (ಹನುಮಂತ), ಹರೀಶ ಆಚಾರ್ಯ ಬಾರ್ಯ (ಪುರುಷ ಮೃಗ), ಮಹಾಲಿಂಗೇಶ್ವರ ಭಟ್ ಪೆರಿಯಡ್ಕ (ಅರ್ಜುನ) […]

ಪುರುಷ ಮೃಗ ತಾಳಮದ್ದಳೆ Read More »

ಆಕ್ಟಿವಾ-ಕಾರು ಅಪಘಾತ !

ಪುತ್ತೂರು: ನಗರದ ಹೊರವಲಯದ ಮುಕ್ರಂಪಾಡಿಯಲ್ಲಿ ಆಕ್ಟಿವಾ ಹಾಗೂ ಕಾರು ಮುಖಾಮುಖಿ ಡಿಕ್ಕಿ ಹೊಡೆದುಕೊಂಡ ಘಟನೆ ನಡೆದಿದೆ. ಅಪಘಾತದ ಪರಿಣಾಮ ಕೆಲವರಿಗೆ ಗಾಯಗಳಾಗಿವೆ ಎಂದು ಮಾಹಿತಿ ಲಭ್ಯವಾಗಿದೆ. ಸ್ಥಳಕ್ಕೆ ಪುತ್ತೂರು ಸಂಚಾರಿ ಠಾಣಾ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸುತ್ತಿದ್ದಾರೆ ಎನ್ನಲಾಗಿದೆ. ಆಕ್ಟಿವಾ ಸಂಪೂರ್ಣ ನಜ್ಜುಗುಜ್ಜಾಗಿದ್ದು, ಹೆಚ್ಚಿನ ಮಾಹಿತಿ ಇನ್ನಷ್ಟೇ ತಿಳಿದು ಬರಬೇಕಿದೆ.

ಆಕ್ಟಿವಾ-ಕಾರು ಅಪಘಾತ ! Read More »

ಸೌಜನ್ಯ ಹೋರಾಟದಲ್ಲಿ ನ್ಯಾಯ ಸಿಗುವ ವರೆಗೆ ವಿರಮಿಸಬಾರದು | ಸೌಜನ್ಯಾ ಪರ  ಪ್ರತಿಭಟನಾ ಸಭೆಯಲ್ಲಿ ಮಹೇಶ್ ಶೆಟ್ಟಿ ತಿಮರೋಡಿ | ನ್ಯಾಯ ಸಿಗದಿದ್ದಲ್ಲಿ ದಂಗೆ ಏಳುವ ಪರಿಸ್ಥಿತಿ ಬರಬಹುದು | ಸುರೇಶ್ ಬೈಲು

ಕಡಬ: ಅಮಾಯಕ ಬಾಲಕಿ ಸೌಜನ್ಯಾ ಅತ್ಯಾಚಾರಕ್ಕೊಳಪಟ್ಟು ಕೊಲೆಗೀಡಾಗಿ 11 ವರ್ಷಗಳೇ ಕಳೆದರೂ ನ್ಯಾಯ ಸಿಗದಿರುವುದು ನಾಗರಿಕ ಸಮಾಜದ ಎಲ್ಲರೂ ತಲೆ ತಗ್ಗಿಸುವಂತಹ ವಿಚಾರ. ಆ ನಿಟ್ಟಿನಲ್ಲಿ ಇಡೀ ಸಮಾಜ ಒಂದಾಗಿ ನ್ಯಾಯ ಸಿಗುವ ತನಕ ವಿರಮಿಸಬಾರದು ಎಂದು ರಾಷ್ಟ್ರೀಯ ಹಿಂದೂ ಜಾಗರಣ ವೇದಿಕೆಯ ಸಂಸ್ಥಾಪಕ ಮಹೇಶ್ ಶೆಟ್ಟಿ ತಿಮರೋಡಿ ಕರೆ ನೀಡಿದರು. ಅವರು ರವಿವಾರ ಕಡಬ ತಾಲೂಕಿನ ಮರ್ದಾಳದಲ್ಲಿ  ಸೌಜನ್ಯಾ ಪರ ಹೋರಾಟ ಸಮಿತಿಯ ನೇತೃತ್ವದಲ್ಲಿ ಜರಗಿದ ಪ್ರತಿ‘ಟನಾ ಸಭೆಯನ್ನು ಉದ್ಘಾಟಿಸಿ ಮಾತನಾಡಿದರು. ಒಂದು ನ್ಯಾಯವೂ ಕೂಡ

ಸೌಜನ್ಯ ಹೋರಾಟದಲ್ಲಿ ನ್ಯಾಯ ಸಿಗುವ ವರೆಗೆ ವಿರಮಿಸಬಾರದು | ಸೌಜನ್ಯಾ ಪರ  ಪ್ರತಿಭಟನಾ ಸಭೆಯಲ್ಲಿ ಮಹೇಶ್ ಶೆಟ್ಟಿ ತಿಮರೋಡಿ | ನ್ಯಾಯ ಸಿಗದಿದ್ದಲ್ಲಿ ದಂಗೆ ಏಳುವ ಪರಿಸ್ಥಿತಿ ಬರಬಹುದು | ಸುರೇಶ್ ಬೈಲು Read More »

ತೀರಾ ಕುಗ್ರಾಮದಲ್ಲಿರುವ ಬಲೆರಾವು ಸೇತುವೆಗೆ ಹಲಗೆ ಜೋಡಣೆ ಕಾಮಗಾರಿಗೆ ಚಾಲನೆ | ಪುತ್ತೂರು-ಕಡಬ-ಸುಳ್ಯ ತಾಲೂಕಿನ ಕೊಂಡಿಯಾಗಿರುವ ಬಲೆರಾವು ಸೇತುವೆ

ಪುತ್ತೂರು: ಪುತ್ತೂರು-ಕಡಬ-ಸುಳ್ಯ ಈ ಮೂರು ತಾಲೂಕಿನ ಕೊಂಡಿಯಾಗಿರುವ ತೀರಾ ಕುಗ್ರಾಮದಲ್ಲಿರುವ ಬಲೆರಾವು ಸೇತುವೆ ಸಹಿತ ಕಿಂಡಿ ಅಣೆಕಟ್ಟಿಗೆ ಇದೀಗ ಹಲಗೆ ಜೋಡಣೆ ಕಾಮಗಾರಿ ಆರಂಭಗೊಂಡಿದೆ. ಹಿಂದಿನ ಬಾರಿ ಶಾಸಕರಾಗಿದ್ದ ಸಂಜೀವ ಮಠಂದೂರು ಅವರ ಮುಂದೆ ಕಿಂಡಿ ಅಣೆಕಟ್ಟಿನ ಪ್ರಸ್ತಾಪ ಇಡಲಾಯಿತು. ಕಿಂಡಿ ಅಣೆಕಟ್ಟಿನ ಅನಿವಾರ್ಯತೆಯನ್ನು ಶಾಸಕರಿಗೆ ತಿಳಿಸಿದಾಗ, ಈ ಪ್ರದೇಶಕ್ಕೊಂದು ರಸ್ತೆ, ಸೇತುವೆ ನಿರ್ಮಿಸಿದರೆ ಬಲೆರಾವು ಪ್ರದೇಶದ ಚಿತ್ರಣವೇ ಬದಲಾದೀತು ಎಂಬ ದೂರದೃಷ್ಟಿಯ ಚಿಂತನೆ ಶಾಸಕರಿಗೆ ಹೊಳೆಯಿತು. ಅಷ್ಟೇ, ಸೇತುವೆ ಸಹಿತ ಕಿಂಡಿಅಣೆಕಟ್ಟನ್ನು ಮಂಜೂರು ಮಾಡಿಯೇ ಬಿಟ್ಟರು.

ತೀರಾ ಕುಗ್ರಾಮದಲ್ಲಿರುವ ಬಲೆರಾವು ಸೇತುವೆಗೆ ಹಲಗೆ ಜೋಡಣೆ ಕಾಮಗಾರಿಗೆ ಚಾಲನೆ | ಪುತ್ತೂರು-ಕಡಬ-ಸುಳ್ಯ ತಾಲೂಕಿನ ಕೊಂಡಿಯಾಗಿರುವ ಬಲೆರಾವು ಸೇತುವೆ Read More »

ಸಮರ್ಪಣಾ ಟ್ರಸ್ಟ್‌ನ ಟ್ರಸ್ಟಿ ಸುಶಾಂತ್ ಕೆಡೆಂಜಿಯವರ ವಿವಾಹ ನಿಶ್ಚಿತಾರ್ಥ

ಪುತ್ತೂರು: ಸಮರ್ಪಣಾ ಟ್ರಸ್ಟ್‌ನ ಟ್ರಸ್ಟಿ ಸುಶಾಂತ್ ಕೆಡೆಂಜಿರವರ ವಿವಾಹ ನಿಶ್ಚಿತಾರ್ಥ ಕೃತಿಕಾರವರೊಂದಿಗೆ ಭಾನುವಾರ ತೆಂಕಿಲ ಬೈಪಾಸ್ ರಸ್ತೆಯಲ್ಲಿರುವ ದರ್ಶನ್ ಕಲಾಮಂದಿರದಲ್ಲಿ ನಡೆಯಿತು. ಕಾರ್ಯಕ್ರಮದಲ್ಲಿ ಹಲವಾರು ಗಣ್ಯರು ಪಾಲ್ಗೊಂಡು ಶುಭ ಹಾರೈಸಿದರು.

ಸಮರ್ಪಣಾ ಟ್ರಸ್ಟ್‌ನ ಟ್ರಸ್ಟಿ ಸುಶಾಂತ್ ಕೆಡೆಂಜಿಯವರ ವಿವಾಹ ನಿಶ್ಚಿತಾರ್ಥ Read More »

ವಿದ್ಯಾರ್ಥಿಗಳು ವಿನಯತೆ ಬೆಳೆಸಿಕೊಳ್ಳಬೇಕು | ಮಾಣಿಲ ಶಾಲಾ ಪ್ರತಿಭಾ ಪುರಸ್ಕಾರ ಕಾರ್ಯಕ್ರಮದಲ್ಲಿ ಸಾಹಿತಿ ಸವಿತಾ ಭಟ್

ಮಾಣಿಲ: ವಿದ್ಯಾರ್ಥಿಗಳು ವಿದ್ಯೆಯೊಂದಿಗೆ ವಿನಯತೆಯನ್ನು ಬೆಳೆಸಿಕೊಳ್ಳಬೇಕು ಎಂದು ಹಿರಿಯ ಸಾಹಿತಿ ಸವಿತಾ ಭಟ್ ಅಡ್ಯಾಯಿ ಹೇಳಿದರು. ಸರಕಾರಿ ಪ್ರೌಢ ಶಾಲೆ ಮಾಣಿಲದಲ್ಲಿ ನಡೆದ ಪ್ರತಿಭಾ ಪುರಸ್ಕಾರದ ಸಭಾ ಕಾರ್ಯಕ್ರಮದಲ್ಲಿ ಅತಿಥಿಯಾಗಿ ಪಾಲ್ಗೊಂಡು ಮಾತನಾಡಿದರು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಎಸ್ ಡಿಎಂಸಿ ಅಧ್ಯಕ್ಷ ಶಿವಪ್ರಸಾದ್ ಸೊರಂಪಳ್ಳ ವಹಿಸಿ ಶಾಲೆಯ ಉನ್ನತಿಗೆ ಎಲ್ಲರ ಸಹಕಾರ ಕೋರಿದರು. ಮಾಣಿಲ ಗ್ರಾ.ಪಂ.ಅಧ್ಯಕ್ಷ ಶ್ರೀಧರ್ ಬಾಳೆಕಲ್ಲು ದೀಪ ಬೆಳಗಿಸುವ ಮೂಲಕ ಚಾಲನೆ ನೀಡಿ ಶುಭ ಹಾರೈಸಿದರು. ಗ್ರಾ.ಪಂ ಸದಸ್ಯ ರಾಜೇಶ್ ಕುಮಾರ್ ಬಾಳೆಕಲ್ಲು, ಶಾಲಾ ಸ್ಥಳದಾನಿ

ವಿದ್ಯಾರ್ಥಿಗಳು ವಿನಯತೆ ಬೆಳೆಸಿಕೊಳ್ಳಬೇಕು | ಮಾಣಿಲ ಶಾಲಾ ಪ್ರತಿಭಾ ಪುರಸ್ಕಾರ ಕಾರ್ಯಕ್ರಮದಲ್ಲಿ ಸಾಹಿತಿ ಸವಿತಾ ಭಟ್ Read More »

ಜ.2 : ಅಕ್ರಮ-ಸಕ್ರಮ ಹಕ್ಕುಪತ್ರ ವಿತರಣೆ

ಪುತ್ತೂರು: ಅಕ್ರಮ ಸಕ್ರಮ ಹಕ್ಕು ಪತ್ರ ವಿತರಣೆ ಕಾರ್ಯಕ್ರಮ ಜ.2 ರಂದು ನಡೆಯಲಿದೆ ಎಂದು ಶಾಸಕರಾದ ಅಶೋಕ್ ರೈ ತಿಳಿಸಿದ್ದಾರೆ. ಶನಿವಾರ ನಡೆದ ಅಕ್ರಮ ಸಕ್ರಮ ಸದಸ್ಯರ ಸಭೆಯಲ್ಲಿ ಮಾಹಿತಿ ನೀಡಿದ ಶಾಸಕರು,  ಶಾಸಕರ ಕಚೇರಿ‌ ಮುಂಭಾಗದಲ್ಲಿ ಬೆಳಿಗ್ಗೆ 10 ರಿಂದ ಕಾರ್ಯಕ್ರಮ ನಡೆಯಲಿದ್ದು, ಅಕ್ರಮ ಸಕ್ರಮ ಮತ್ತು 94 ಸಿ, 94 ಸಿಸಿ ಹಕ್ಕು ಪತ್ರಗಳ ವಿತರಣೆ ನಡೆಯಲಿದೆ. ಪುತ್ತೂರು ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ಪುತ್ತೂರು ಮತ್ತು ಉಪ್ಪಿನಂಗಡಿ ಹೋಬಳಿಯ ಫಲಾನುಭವಿಗಳು ಭಾಗವಹಿಸುವಂತೆ ತಿಳಿಸಿದರು. ಸುಮಾರು

ಜ.2 : ಅಕ್ರಮ-ಸಕ್ರಮ ಹಕ್ಕುಪತ್ರ ವಿತರಣೆ Read More »

ಬಿಜೆಪಿ ಪಕ್ಷಕ್ಕೆ ಡ್ಯಾಮೇಜ್‍ ಮಾಡುವವರನ್ನು ಒದ್ದು ಹೊರಗೆ ಹಾಕಬೇಕು | ನಗರಸಭೆ ಉಪಚುನಾವಣೆ ಕುರಿತು ರಾಜೇಶ್‍ ಬನ್ನೂರು ಪ್ರತಿಕ್ರಿಯೆ

ಪುತ್ತೂರು: ಪುತ್ತೂರು ನಗರಸಭೆಯ ಉಪಚುನಾವಣೆಯಲ್ಲಿ ನೆಲ್ಲಿಕಟ್ಟೆ ವಾರ್ಡಿನಲ್ಲಿ ಬಿಜೆಪಿ ಬಹುಮತದೊಂದಿಗೆ ಗೆಲುವು ಸಾಧಿಸಿದ್ದು, ರಕ್ತೇಶ್ವರಿ ವಾರ್ಡಿನಲ್ಲಿ ಕೆಲವು ಮತಗಳ ಅಂತರದಿಂದ ಸೋಲು ಕಂಡಿದೆ. ಈ ಕುರಿತು ಪ್ರತಿಕ್ರಿಯಿಸಿದ ಪುರಸಭೆ ಮಾಜಿ ಅಧ್ಯಕ್ಷ ರಾಜೇಶ್ ಬನ್ನೂರು, ಎರಡು ವಾರ್ಡುಗಳಲ್ಲಿ ಮತ ನೀಡಿ ಸಹಕರಿಸಿದವರಿಗೆ ಅಭಿನಂದನೆ ಸಲ್ಲಿಸಿ, ಬಿಜೆಪಿ ಯಾವುದೇ ವ್ಯಕ್ತಿಯ ಆಸ್ತಿ ಅಲ್ಲ. ಹಿರಿಯ ಕಾರ್ಯಕರ್ತರು ಕಟ್ಟಿ ಬೆಳೆಸಿದ ಪಾರ್ಟಿ, ಪಕ್ಷಕ್ಕೆ ಡ್ಯಾಮೇಜ್‍ ಆಗುವಂತೆ ಕೆಲವು ವ್ಯಕ್ತಿಗಳು ನಾವು ಮಾಡಿದ್ದು, ಅವರು ಮಾಡಿದ್ದು ಎಂದು ಹೇಳುತ್ತಿದ್ದಾರೆ. ಪಕ್ಷಕ್ಕೆ ಯಾರು

ಬಿಜೆಪಿ ಪಕ್ಷಕ್ಕೆ ಡ್ಯಾಮೇಜ್‍ ಮಾಡುವವರನ್ನು ಒದ್ದು ಹೊರಗೆ ಹಾಕಬೇಕು | ನಗರಸಭೆ ಉಪಚುನಾವಣೆ ಕುರಿತು ರಾಜೇಶ್‍ ಬನ್ನೂರು ಪ್ರತಿಕ್ರಿಯೆ Read More »

ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಒಕ್ಕೂಟಗಳ ಪದಾಧಿಕಾರಿಗಳಿಗೆ ತರಬೇತಿ

ಕಲ್ಲಡ್ಕ: ಶ್ರೀಕ್ಷೇತ್ರ ಧರ್ಮಸ್ಥಳ  ಗ್ರಾಮಾಭಿವೃದ್ಧಿ ಕಲ್ಲಡ್ಕ ವಲಯದ 9 ಒಕ್ಕೂಟಗಳ ಪದಾಧಿಕಾರಿಗಳಿಗೆ   ತರಬೇತಿ – ಮಾಹಿತಿ ಕಾರ್ಯಾಗಾರ ನಡೆಯಿತು. ಶ್ರೀನಿಕೇತನ ಹಾಲ್ ನ ಉಪಾಧ್ಯಕ್ಷ  ಶ್ರೀಧರ್ ಗೌಡ ತರಬೇತಿ ಕಾರ್ಯಕ್ರಮ ಉದ್ಘಾಟಿಸಿದರು. ನಿರ್ದೇಶಕ ಪ್ರವೀಣ್ ತರಬೇತಿ ನೀಡಿದರು  ಚೆನ್ನಪ್ಪ ಯೋಜನಾಧಿಕಾರಿ ಮತ್ತು ಕೇಪು ವಲಯದ  ಮೇಲ್ವಿಚಾರಕ ಜಗದೀಶ್ ಉಪಸ್ಥಿತರಿದ್ದರು. ರೇಣುಕಾ ಸ್ವಾಗತಿಸಿದರು. ಮಾಡಿದರು.ಕಲ್ಲಡ್ಕ ವಲಯ ಮೇಲ್ವಿಚಾರಕಿ ಸುಗುಣ ಕಾರ್ಯಕ್ರಮ ನಿರೂಪಿಸಿದರು. ಸುಕನ್ಯಾ ವಂದಿಸಿದರು.

ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಒಕ್ಕೂಟಗಳ ಪದಾಧಿಕಾರಿಗಳಿಗೆ ತರಬೇತಿ Read More »

ಚಾಲಕನ ನಿಯಂತ್ರಣ ತಪ್ಪಿ ಕಾರು ಪಲ್ಟಿ !

ಪುತ್ತೂರು: ಆಲ್ಟೋ ಕಾರೊಂದು ಚಾಲಕನ ನಿಯಂತ್ರಣ ತಪ್ಪಿ ಪಲ್ಟಿಯಾದ ಘಟನೆ ಸರ್ವೆ ದೇವಸ್ಥಾನ ಬಳಿ ಇಂದು ಮಧ್ಯಾಹ್ನ ನಡೆದಿದೆ. ಆಲ್ಟೋ ಕಾರಿನಲ್ಲಿ ಇಬ್ಬರು ಮಕ್ಕಳು ಸೇರಿದಂತೆ ಆರು ಮಂದಿ ಬೆಳಂದೂರಿನವರೆನ್ನಲಾದ ಮುಸ್ಲಿಂ ಕುಟುಂಬ ಪ್ರಯಾಣಿಸುತ್ತಿದ್ದರು ಎನ್ನಲಾಗಿದ್ದು, ಅಪಘಾತದಿಂದ ಸಣ್ಣ ಪುಟ್ಟ ಗಾಯಗೊಂಡಿದ್ದು, ಅಪಾಯದಿಂದ ಪಾರಾಗಿದ್ದಾರೆ ಎಂದು ತಿಳಿದು ಬಂದಿದೆ. ಅಪಫಾತದ ತೀವ್ರತೆಗೆ ಕಾರಿನ ಎದುರು ಭಾಗ ನಜ್ಜುಗುಜ್ಜಾಗಿದೆ.

ಚಾಲಕನ ನಿಯಂತ್ರಣ ತಪ್ಪಿ ಕಾರು ಪಲ್ಟಿ ! Read More »

error: Content is protected !!
Scroll to Top