ಪುತ್ತೂರು

ಮುಗೇರು ಶ್ರೀ ಮಹಾ ವಿಷ್ಣುಮೂರ್ತಿ ದೇವಸ್ಥಾನದಲ್ಲಿ ಶ್ರೀ ರಾಮೋತ್ಸವ | ನೇರ ಪ್ರಸಾರದ ಮೂಲಕ ಶ್ರೀರಾಮನ ಪ್ರಾಣಪ್ರತಿಷ್ಠೆ ವೀಕ್ಷಿಸಿದ ರಾಮಭಕ್ತರು

ಪುತ್ತೂರು: ಅಯೋಧ್ಯೆ ಶ್ರೀರಾಮ ಮಂದಿರ ಲೋಕಾರ್ಪಣೆ, ಶ್ರೀರಾಮ ದೇವರ ಪ್ರತಿಮೆ ಪ್ರಾಣ ಪ್ರತಿಷ್ಠೆ ಪ್ರಯುಕ್ತ ಮುಗೇರು ಶ್ರೀ ಮಹಾ ವಿಷ್ಣುಮೂರ್ತಿ ದೇವಸ್ಥಾನದಲ್ಲಿ ಜ.22 ರಂದು ಶ್ರೀ ರಾಮೋತ್ಸವ ನಡೆಯಿತು. ಬೆಳಿಗ್ಗೆ 6.00 ರಿಂದ  ಶ್ರೀರಾಮ ಜ್ಯೋತಿ ಪ್ರಜ್ವಲನೆ, ಭಜನೆ, ಸತ್ಸಂಗ ರಾಮ ನಾಮದ ಮಹತ್ವ,   ಇನ್ನಿತರ ಧಾರ್ಮಿಕ, ವೈಧಿಕ ಕಾರ್ಯಕ್ರಮಗಳು ಜರಗಿತು. ಕಾರ್ಯಕ್ರಮದಲ್ಲಿ ನೆರೆದಿದ್ದ ರಾಮ ಭಕ್ತರು ನೇರ ಪ್ರಸಾರದ ಮೂಲಕ ಅಯೋಧ್ಯೆ ಕಾರ್ಯಕ್ರಮವನ್ನು ವೀಕ್ಷಿಸಿದರು.  ಮಧ್ಯಾಹ್ನ ದೇವರ ಪ್ರಸಾದ ರೂಪದ ಅನ್ನಸಂತರ್ಪಣೆ ನಡೆಯಿತು.

ಮುಗೇರು ಶ್ರೀ ಮಹಾ ವಿಷ್ಣುಮೂರ್ತಿ ದೇವಸ್ಥಾನದಲ್ಲಿ ಶ್ರೀ ರಾಮೋತ್ಸವ | ನೇರ ಪ್ರಸಾರದ ಮೂಲಕ ಶ್ರೀರಾಮನ ಪ್ರಾಣಪ್ರತಿಷ್ಠೆ ವೀಕ್ಷಿಸಿದ ರಾಮಭಕ್ತರು Read More »

ಬರೆಪ್ಪಾಡಿ ಶ್ರೀ ಪಂಚಲಿಂಗೇಶ್ವರ ದೇವಸ್ಥಾನದಲ್ಲಿ 108 ರಾಮ ಮಂತ್ರ ಜಪಿಸಿ ರಾಮಸ್ತೋತ್ರ ಪಠಣ

ಬರೆಪ್ಪಾಡಿ : ಅಯೋಧ್ಯೆ ಶ್ರೀ ರಾಮಮಂದಿರದಲ್ಲಿ ಶ್ರೀರಾಮನ ಪ್ರಾಣಪ್ರತಿಷ್ಠೆ ಅಂಗವಾಗಿ ಶ್ರೀ ಕ್ಷೇತ್ರ ಬರೆಪ್ಪಾಡಿ ಪಂಚಲಿಂಗೇಶ್ವರ ದೇವಸ್ಥಾನದಲ್ಲಿ 108 ರಾಮ ಮಂತ್ರ ಜಪಿಸಿ ರಾಮಸ್ತ್ರೋತ್ರ ನೆರವೇರಿಸಲಾಯಿತು. ರಾಮ ಭಕ್ತರು ಶ್ರೀರಾಮ ಫೋಟೊ ಇರುವ ಭಗವಾಧ್ವಜ ದೇವಸ್ಥಾನದ ವಠಾರದಲ್ಲಿ ಹಾಕಿ, ಶ್ರೀರಾಮನ ಫೋಟೊ ಇಟ್ಟು ಸಂಭ್ರಮದಿಂದ ಆಚರಿಸಿದರು, ನೂರಾರು ರಾಮಭಕ್ತರು ಈ ಸಂದರ್ಭದಲ್ಲಿ ಪಾಲ್ಗೊಂಡಿದ್ದರು.

ಬರೆಪ್ಪಾಡಿ ಶ್ರೀ ಪಂಚಲಿಂಗೇಶ್ವರ ದೇವಸ್ಥಾನದಲ್ಲಿ 108 ರಾಮ ಮಂತ್ರ ಜಪಿಸಿ ರಾಮಸ್ತೋತ್ರ ಪಠಣ Read More »

ಕಲ್ಲಾರೆ ಶ್ರೀ ಗುರು ರಾಘವೇಂದ್ರ ಮಠದಲ್ಲಿ ವಿಶೇಷ ಪೂಜೆ | ಎಲ್‍ ಇಡಿ ಪರದೆ ಮೂಲಕ ಶ್ರೀರಾಮನ ಪ್ರಾಣಪ್ರತಿಷ್ಠೆಯ ವೀಕ್ಷಣೆ

ಪುತ್ತೂರು: ಕಲ್ಲಾರೆ ಶ್ರೀಗುರು ರಾಘವೇಂದ್ರ ಮಠದಲ್ಲಿ ಶ್ರೀ ರಾಮಲಲ್ಲಾನ ಪ್ರತಿಷ್ಠಾಪನೆಯ ಸಂಭ್ರಮವನ್ನು ಶ್ರೀ ಗುರುಗಳ ವಿಶೇಷ ಪೂಜೆಯೊಂದಿಗೆ ನೆರವೇರಿಸಲಾಯಿತು. ಶ್ರೀ ಗುರುರಾಘವೇಂದ್ರ ಮಠದ ಆವರಣದಲ್ಲಿ ಎಲ್‍ ಇಡಿ ಸ್ಕ್ರೀನ್ ಅಳವಡಿಸಿ ಅಯೋಧ್ಯೆಯ ಶ್ರೀರಾಮ ಮಂದಿರದಲ್ಲಿ ಶ್ರೀರಾಮನ ಪ್ರತಿಷ್ಠಾಪನೆಯನ್ನು ನೇರ ಪ್ರಸಾರದ ಮೂಲಕ ವೀಕ್ಷಿಸಲು ವ್ಯವಸ್ಥೆ ಮಾಡಲಾಗಿತ್ತು. ಈ ಸಂದರ್ಭಲದಲ್ಲಿ ಸುಮಾರು 500 ಕ್ಕೂ ಮಿಕ್ಕಿ ಭಕ್ತಾದಿಗಳು ಪಾಲ್ಗೊಂಡಿದ್ದರು. ಬಳಿಕ ವಿಶೇಷ ಪೂಜೆ ನಡೆದ ಬಳಿಕ ಅನ್ನಸಂತರ್ಪಣೆ ನಡೆಯಿತು.

ಕಲ್ಲಾರೆ ಶ್ರೀ ಗುರು ರಾಘವೇಂದ್ರ ಮಠದಲ್ಲಿ ವಿಶೇಷ ಪೂಜೆ | ಎಲ್‍ ಇಡಿ ಪರದೆ ಮೂಲಕ ಶ್ರೀರಾಮನ ಪ್ರಾಣಪ್ರತಿಷ್ಠೆಯ ವೀಕ್ಷಣೆ Read More »

ಪುತ್ತಿಲ ಪರಿವಾರ ಕಚೇರಿಯಲ್ಲಿ ಶ್ರೀರಾಮ ದೇವರಿಗೆ ಪುಷ್ಪಾರ್ಚನೆ

ಪುತ್ತೂರು: ಅಯೋಧ್ಯೆಯಲ್ಲಿ ಶ್ರೀ ರಾಮಲಲ್ಲಾ ಪ್ರಾಣಪ್ರತಿಷ್ಠೆ ಆಗುತ್ತಿದ್ದಂತೆ ಪುತ್ತಿಲ ಪರಿವಾರ ಕಚೇರಿಯಲ್ಲಿ ಪ್ರಭು ಶ್ರೀರಾಮದೇವರಿಗೆ ಪುಷ್ಪಾರ್ಚನೆ ನೆರವೇರಿಸಿ ಪ್ರಾರ್ಥನೆ ನೆರವೇರಿತು. ಹಿಂದೂಗಳು ಶತಶತಮಾನಗಳಿಂದ ಕಾತರದಿಂದ ಕಾಯುತ್ತಿದ್ದ ಅಯೋಧ್ಯೆಯ ಪ್ರಭು ಶ್ರೀರಾಮಮಂದಿರ ಶುಭಮುಹೂರ್ತದಲ್ಲಿ ಲೋಕಾರ್ಪಣೆಗೊಂಡು ಶ್ರೀ ರಾಮಲಲ್ಲಾನ ಪ್ರಾಣಪ್ರತಿಷ್ಠೆಯೂ ನೆರವೇರಿತು. ಅರುಣ್ ಕುಮಾರ್ ಪುತ್ತಿಲ, ಪುತ್ತಿಲ ಪರಿವಾರದ ಅಧ್ಯಕ್ಷ ಪ್ರಸನ್ನ ಮಾರ್ತಾ, ಕಾರ್ಯದರ್ಶಿ  ಉಮೇಶ್ ಕೋಡಿಬೈಲು, ನಗರ ಅಧ್ಯಕ್ಷ ಅನಿಲ್ ತೆಂಕಿಲ ಪ್ರಮುಖರಾದ ರವಿ ರೈ ಕೆದಂಬಾಡಿ ಮಠ, ಭೀಮಯ್ಯ ಭಟ್ ಸಂಪ್ಯ, ಪ್ರವೀಣ್ ಭಂಡಾರಿ,  ರಾಜ್ ಶೆಟ್ಟಿ

ಪುತ್ತಿಲ ಪರಿವಾರ ಕಚೇರಿಯಲ್ಲಿ ಶ್ರೀರಾಮ ದೇವರಿಗೆ ಪುಷ್ಪಾರ್ಚನೆ Read More »

ಶ್ರೀರಾಮ ಪ್ರಾಣ ಪ್ರತಿಷ್ಠೆ | ಅನ್ಯಾಡಿ, ಕೆಡೆಂಜಿ ಯುವಕರಿಂದ ರಾಮಭಕ್ತರಿಗೆ ತಂಪು ಪಾನೀಯ ವಿತರಣೆ

ಸವಣೂರು: ಎಲ್ಲೆಡೆ ಇಂದು ಶ್ರೀರಾಮ ಪ್ರಾಣಪ್ರತಿಷ್ಠೆಯನ್ನು ಸಂಭ್ರಮದಿಂದ ವಿವಿಧ ರೀತಿಯಲ್ಲಿ ಆಚರಣೆ ಮಾಡುತ್ತಿದ್ದು, ಅನ್ಯಾಡಿ ಮತ್ತು ಕೆಡೆಂಜಿ ಯುವಕರಿಂದ ಹತ್ತನೇಕಲ್ಲಿನಲ್ಲಿ ತಂಪು ಪಾನೀಯ ವಿತರಿಸಲಾಯಿತು. ಅಯೋಧ್ಯೆ ಶ್ರೀರಾಮ ಪ್ರತಿಷ್ಠಾಪನೆ ಪ್ರಯುಕ್ತ ರಾಮಭಕ್ತರಿಗೆ, ಸಾರ್ವಜನಿಕರಿಗೆ ತಂಪು ಪಾನೀಯ ವಿತರಿಸಲಾಯಿತು. ಹಲವಾರು ರಾಮಭಕ್ತರು, ಸಾರ್ವಜನಿಕರು ತಂಪು ಪಾನೀಯ ಸ್ವೀಕರಿಸಿದರು.

ಶ್ರೀರಾಮ ಪ್ರಾಣ ಪ್ರತಿಷ್ಠೆ | ಅನ್ಯಾಡಿ, ಕೆಡೆಂಜಿ ಯುವಕರಿಂದ ರಾಮಭಕ್ತರಿಗೆ ತಂಪು ಪಾನೀಯ ವಿತರಣೆ Read More »

ಪಿಎಲ್‍ ಡಿ ಬ್ಯಾಂಕ್‍ ಮಾಜಿ ಅಧ್ಯಕ್ಷ ಹಸಂತಡ್ಕ ರಾಮ ಭಟ್‍ ನಿಧನ

ಪುತ್ತೂರು: ಬಜರಂಗದಳ ಪ್ರಾಂತ ಸಂಯೋಜಕ ಮುರಳೀಕೃಷ್ಣ ಹಸಂತಡ್ಕ ಅವರ ತಂದೆ ಹಸಂತಡ್ಕ ರಾಮ ಭಟ್ ಜ.21 ಭಾನುವಾರ ತಡರಾತ್ರಿ ನಿಧನರಾಗಿದ್ದಾರೆ. ಪಿಎಲ್‍ಡಿ ಬ್ಯಾಂಕ್‍ ಮಾಜಿ ಅಧ್ಯಕ್ಷರಾಗಿದ್ದ ಅವರು, ಸಂಘ ಪರಿವಾರದ ಹಿರಿಯ ಕಾರ್ಯಕರ್ತರಾಗಿದ್ದರು. ಅವರು ಈ ಹಿಂದೆ ಪುತ್ರನ ವಿವಾಹ ಸಂದರ್ಭದಲ್ಲಿ ನೇತ್ರದಾನ ಮಾಡುವ ಕುರಿತು ನೋಂದಾವಣೆ ಮಾಡಿದ್ದರು. ಅದರಂತೆ ಭಾನುವಾರ ರಾತ್ರಿ ಮಂಗಳೂರಿನಿಂದ ನೇತ್ರ ತಜ್ಞರು ಆಗಮಿಸಿದ್ದರು. ಮೃತರರು ಪತ್ನಿ, ಪುತ್ರ ಹಾಗೂ ಇಬ್ಬರು ಪುತ್ರಿಯರನ್ನು ಅಗಲಿದ್ದಾರೆ.

ಪಿಎಲ್‍ ಡಿ ಬ್ಯಾಂಕ್‍ ಮಾಜಿ ಅಧ್ಯಕ್ಷ ಹಸಂತಡ್ಕ ರಾಮ ಭಟ್‍ ನಿಧನ Read More »

ಅಯೋಧ್ಯಾ ಮಂದಿರದ ಚಿತ್ರವಿರುವ ಟಿ-ಶರ್ಟ್ ಧಾರಣೆ | ಹೊಟೇಲ್ ಸಿಬ್ಬಂದಿಗಳಿಂದ ಶ್ರೀರಾಮ ಪ್ರಾಣಪ್ರತಿಷ್ಠೆಯ ಸಂಭ್ರಮ

ಪುತ್ತೂರು: ಇಂದು ಎಲ್ಲೆಲ್ಲೂ ಶ್ರೀ ರಾಮ ಪ್ರಾಣಪ್ರತಿಷ್ಠೆಯ ಸಂಭ್ರಮ. ಈ ಸಂಭ್ರಮವನ್ನು ವಿವಿಧ ರೀತಿಯಲ್ಲಿ ಇಂದು ಎಲ್ಲೆಡೆ ಆಚರಿಸುತ್ತಿದ್ದು, ಪುತ್ತೂರಿನಲ್ಲಿ ಹೊಟೇಲ್ ಒಂದರ ಸಿಬ್ಬಂದಿಗಳು ಆಯೋಧ್ಯಾ ಮಂದಿರದ ಚಿತ್ರವಿರುವ ಟಿ-ಶರ್ಟ್ ಹಾಕಿ ಸಂಭ್ರಮಿಸಿದರು. ಪುತ್ತೂರಿನ ನೆಹರೂನಗರದಲ್ಲಿರುವ ಅಶ್ವಿನಿ ಕಾಂಪ್ಲೆಕ್ಸ್ ನಲ್ಲಿರುವ ಹೊಟೇಲ್ ಶ್ರೀ ಕೃಷ್ಣಭವನ ಸಿಬ್ಬಂದಿಗಳು ಈ ರೀತಿಯಿಂದ ಸಂಭ್ರಮಿಸಿದರು. ಸಿಬ್ಬಂಗಳು ಜತೆ ಹೊಟೇಲ್ ಮಾಲಕ ಕೃಷ್ಣಪ್ಪ ಗೌಡ ಮತ್ತು ಸಂಜೀವಿನಿ ಕ್ಲಿನಿಕ್ ನ ಡಾ|ರವಿನಾರಾಯಣ್  ಅವರು ಫೋಟೋಗೆ ಫೋಸ್ ಕೊಡುವ ಮೂಲಕ ಸಾಥ್ ನೀಡಿದರು.

ಅಯೋಧ್ಯಾ ಮಂದಿರದ ಚಿತ್ರವಿರುವ ಟಿ-ಶರ್ಟ್ ಧಾರಣೆ | ಹೊಟೇಲ್ ಸಿಬ್ಬಂದಿಗಳಿಂದ ಶ್ರೀರಾಮ ಪ್ರಾಣಪ್ರತಿಷ್ಠೆಯ ಸಂಭ್ರಮ Read More »

ಅಂಬಿಕಾ ಅಂಗಳದಲ್ಲಿ ಸೂರ್ಯಗಾಯತ್ರಿ ತಂಡದಿಂದ ಸಂಗೀತ ವೈಭವ | ಜನಮನಸೂರೆಗೊಂಡ ಹಾಡುಗಳು

ಪುತ್ತೂರು: ನಗರದ ಬಪ್ಪಳಿಗೆಯ ಅಂಬಿಕಾ ಸಮೂಹ ಶಿಕ್ಷಣ ಸಂಸ್ಥೆಗಳ ಆವರಣದಲ್ಲಿನ ಶ್ರೀ ಶಂಕರ ಸಭಾಭವನದಲ್ಲಿ ಶನಿವಾರ ಯುವಗಾಯಕಿ ಸೂರ್ಯಗಾಯತ್ರಿ ಹಾಗೂ ತಂಡದವರಿಂದ ಕರ್ನಾಟಕ ಶಾಸ್ತ್ರೀಯ ಸಂಗೀತ ಕಾರ್ಯಕ್ರಮ ನಡೆಯಿತು. ಅಂಬಿಕಾ ವಿದ್ಯಾಲಯ ಸಿಬಿಎಸ್‌ಇ ಸಂಸ್ಥೆಯ ಹತ್ತನೆಯ ವರ್ಷಾಚರಣೆ – ದಶಾಂಬಿಕೋತ್ಸವ ಪ್ರಯುಕ್ತ ನಡೆದ ಈ ವಿಶೇಷ ಕಾರ್ಯಕ್ರಮದಲ್ಲಿ ಸಹಸ್ರಾರು ಜನ ಸಂಗೀತಾಸಕ್ತರು ಭಾಗಿಯಾಗಿ ರಸಾನುಭೂತಿಯನ್ನು ಆಸ್ವಾದಿಸಿದರು. ಪುತ್ತೂರಿಗೆ ಮೊಟ್ಟಮೊದಲ ಬಾರಿಗೆ ಆಗಮಿಸಿದ್ದ ಸೂರ್ಯಗಾಯತ್ರಿ ಅಂಬಿಕಾ ಸಂಸ್ಥೆಯಲ್ಲಿ ತನ್ನ ಹಾಡನ್ನು ಆರಂಭಿಸುವಾಗ ತನ್ನ ತಾಯಿ ರಚಿಸಿದ ಗಣಪತಿ ಸ್ತುತಿ

ಅಂಬಿಕಾ ಅಂಗಳದಲ್ಲಿ ಸೂರ್ಯಗಾಯತ್ರಿ ತಂಡದಿಂದ ಸಂಗೀತ ವೈಭವ | ಜನಮನಸೂರೆಗೊಂಡ ಹಾಡುಗಳು Read More »

ಫೆ.4 : ಮುಂಡೂರು ವಲಯ ಒಕ್ಕಲಿಗ ಗೌಡ ಸೇವಾ ಸಂಘದ ವಾರ್ಷಿಕ ಕ್ರೀಡಾಕೂಟ | ಆಮಂತ್ರಣ ಬಿಡುಗಡೆ ಮಾಡಿದ ಸಂಘದ ಮುಖಂಡರು

ಪುತ್ತೂರು: ಮುಂಡೂರು ವಲಯ ಒಕ್ಕಲಿಗ ಗೌಡ ಸೇವಾ ಸಂಘದ ವಾರ್ಷಿಕ ಕ್ರೀಡಾಕೂಟದ ಆಮಂತ್ರಣ ಪತ್ರಿಕೆ ಬಿಡುಗಡೆ ಭಾನುವಾರ ನಡೆಯಿತು. ಕ್ರೀಡಾಕೂಟ ಫೆ.4 ರಂದು ನರಿಮೊಗರು ಹಿರಿಯ ಪ್ರಾಥಮಿಕ ಶಾಲೆಯಲ್ಲಿ ನಡೆಯಲಿದ್ದು, ಶಾಂತಿಗೋಡಿನ ಕೈಂದಾಡಿ ಶಿರಾಡಿ ರಾಜನ್ ದೈವಸ್ಥಾನದಲ್ಲಿ ಆಮಂತ್ರಣ ಪತ್ರಿಕೆಯನ್ನು ಸಂಘದ ಮುಖಂಡರು ಬಿಡುಗಡೆ ಮಾಡಿದರು. ಈ ಸಂದರ್ಭದಲ್ಲಿ ಒಕ್ಕಲಿಗ ಗೌಡ ಸೇವಾ ಸಂಘ ಮುಂಡೂರು ವಲಯದ ಅಧ್ಯಕ್ಷ ಚೆನ್ನಪ್ಪ ಗೌಡ ಕೋಲಾಡಿ, ಪ್ರಧಾನ ಕಾರ್ಯದರ್ಶಿ ವರುಣ್ ಗೌಡ ಓಲಾಡಿ, ಸಂಘಟನಾ ಕಾರ್ಯದರ್ಶಿ ಮೋಹನ್ ಗೌಡ ನಡುಬೈಲು,

ಫೆ.4 : ಮುಂಡೂರು ವಲಯ ಒಕ್ಕಲಿಗ ಗೌಡ ಸೇವಾ ಸಂಘದ ವಾರ್ಷಿಕ ಕ್ರೀಡಾಕೂಟ | ಆಮಂತ್ರಣ ಬಿಡುಗಡೆ ಮಾಡಿದ ಸಂಘದ ಮುಖಂಡರು Read More »

ಮನೆ ಬಾಗಿಲು ಬಡಿದ ಅಪರಿಚಿತರು | ಓರ್ವ ಪೊಲೀಸ್ ವಶ

ಪುತ್ತೂರು: ಇಲ್ಲಿಯ ಕೊಂಬೆಟ್ಟು ಬಳಿ ಭಾನುವಾರ ನಸುಕಿನ ವೇಳೆ ಅಪರಿಚಿತರು ಮೂರು ಮನೆಗಳ ಬಾಗಿಲು ಬಡಿದು ಆತಂಕದ ವಾತವಾರಣ ಸೃಷ್ಟಿಸಿದ ಘಟನೆ ನಡೆದಿದೆ. ಭಾನುವಾರ ಬೆಳಿಗ್ಗೆ ಸುಮಾರು 5.30ರ ಹೊತ್ತಿಗೆ ಇಬ್ಬರು ಅಪರಿಚಿತರು ಮೂರು ಮನೆಗಳ ಬಾಗಿಲು ಬಡಿದು ಮನೆಯ ಸುತ್ತಾಮುತ್ತಾ ಓಡಾಡಿದ್ದಾರೆ. ಇದನ್ನು ಗಮನಿಸಿದ ಮನೆಯವರು ಹಿಡಿಯಲು ಹೋದಾಗ ಹಲ್ಲೆಗೆ ಮುಂದಾಗಿದ್ದಾರೆ ಎನ್ನಲಾಗಿದೆ. ಈ ಕುರಿತು ಮನೆಯ ಪ್ರವೀಣ್ ರಾವ್ ನಗರ ಪೊಲೀಸ್‌ ಠಾಣೆಗೆ ಮಾಹಿತಿ ನೀಡಿದ್ದಾರೆ. ಜತೆಗೆ ಸ್ಥಳೀಯ ನಗರಸಭಾ ಸದಸ್ಯರಿಗೂ ಮಾಹಿತಿ ನೀಡಿದ್ದಾರೆ.

ಮನೆ ಬಾಗಿಲು ಬಡಿದ ಅಪರಿಚಿತರು | ಓರ್ವ ಪೊಲೀಸ್ ವಶ Read More »

error: Content is protected !!
Scroll to Top