ಪುತ್ತೂರು

ಬಿಜೆಪಿ, ಸಹಕಾರ ಬೆಂಬಲಿತ ನಿರ್ದೇಶಕರನ್ನು ಆಯ್ಕೆ ಮಾಡಿದ ಕಾರ್ಯಕರ್ತರು, ಮತದಾರರಿಗೆ ಅಭಿನಂದನೆ

ಸವಣೂರು: ಸವಣೂರು ಪ್ರಾಥಮಿಕ ಕೃಷಿಪತ್ತಿನ ಸಹಕಾರಿ ಸಂಘ ಹಾಗೂ ಸವಣೂರಿನ ಮೂರು ಶಕ್ತಿ ಕೇಂದ್ರ ವ್ಯಾಪ್ತಿಯ ಹಾಲು ಉತ್ಪಾದಕರ ಸಹಕಾರಿ ಸಂಘದ ಆಡಳಿತ ಮಂಡಳಿಗೆ ಬಿಜೆಪಿ ಸಹಕಾರ ಭಾರತಿ ಬೆಂಬಲಿತ ನಿರ್ದೇಶಕರನ್ನು ಆಯ್ಕೆ ಮಾಡಿದ ಕಾರ್ಯಕರ್ತರಿಗೆ, ಮತದಾರರಿಗೆ ಅಭಿನಂದನಾ ಕಾರ್ಯಕ್ರಮ ನಡೆಯಿತು. ಭಾರತೀಯ ಜನತಾ ಪಾರ್ಟಿ ಸವಣೂರು-ಪಾಲ್ತಾಡಿ-ಪುಂಚಪ್ಪಾಡಿ-ಬೆಳಂದೂರು ಶಕ್ತಿ ಕೇಂದ್ರದ ವತಿಯಿಂದ ಸವಣೂರು ಯುವಸಭಾಭವನದ ವಠಾರದಲ್ಲಿ ನಡೆದ ಸಭೆಯನ್ನು ಸುಳ್ಯ ಶಾಸಕಿ ಭಾಗೀರಥಿ ಮುರುಳ್ಯ ಉದ್ಘಾಟಿಸಿದರು. ಈ ಸಂದರ್ಭದಲ್ಲಿ ಕಾರ್ಯಕರ್ತರ ಸಮಾವೇಶ ನಡೆಯಿತು. ಶಕ್ತಿ ಕೇಂದ್ರದ ಅಧ್ಯಕ್ಷರು, […]

ಬಿಜೆಪಿ, ಸಹಕಾರ ಬೆಂಬಲಿತ ನಿರ್ದೇಶಕರನ್ನು ಆಯ್ಕೆ ಮಾಡಿದ ಕಾರ್ಯಕರ್ತರು, ಮತದಾರರಿಗೆ ಅಭಿನಂದನೆ Read More »

ಫೆ.17 ಮಂಗಳೂರಿನಲ್ಲಿ ರಾಜ್ಯ ಮಟ್ಟದ ಕಾಂಗ್ರೆಸ್ ಕಾರ್ಯಕರ್ತರ ಬೃಹತ್ ಸಮಾವೇಶ | ಪುತ್ತೂರಿನಲ್ಲಿ ನಡೆಯಿತು ಪೂರ್ವಭಾವಿ ಸಭೆ

ಪುತ್ತೂರು: ರಾಜ್ಯದಲ್ಲಿ ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರಕಾರ ಅಧಿಕಾರಕ್ಕೆ ಬಂದ ಬಳಿಕ ರಾಜ್ಯದ ಜನತೆ ನೆಮ್ಮದಿಯಿಂದ ಇದ್ದಾರೆ. ಸರಕಾರದ ಐದು ಗ್ಯಾರಂಟಿ ಯೋಜನೆಗಳು ಪ್ರತೀ ಮನೆಯನ್ನು ಬೆಳಗಿಸಿದೆ ಮತ್ತು ಪ್ರತೀ ಕುಟುಂಬಕ್ಕೂ ತಲುಪಿದೆ. ಶಕ್ತಿ ಯೋಜನೆಯಿಂದ ಕಾಂಗ್ರೆಸ್ ಎಲ್ಲರಿಗೂ ಶಕ್ತಿ ನೀಡಿದ್ದು ನಾವೆಲ್ಲರೂ ಸೇರಿ ಕಾಂಗ್ರೆಸ್ ಗೆ ಶಕ್ತಿ ನೀಡುವ ಕೆಲಸವನ್ನು ಮಾಡಬೇಕು ಎಂದು ಪುತ್ತೂರು ಶಾಸಕರಾದ ಅಶೋಕ್ ರೈ ಹೇಳಿದರು. ಫೆ.17 ರಂದು ಮಂಗಳೂರಿನಲ್ಲಿ ನಡೆಯುವ ಕಾಂಗ್ರೆಸ್ ಸಮಾವೇಶದ ಕುರಿತು ಉದಯಗಿರಿ ಭಾಗೀರಥಿ ಸಭಾಭವನದಲ್ಲಿ ನಡೆದ

ಫೆ.17 ಮಂಗಳೂರಿನಲ್ಲಿ ರಾಜ್ಯ ಮಟ್ಟದ ಕಾಂಗ್ರೆಸ್ ಕಾರ್ಯಕರ್ತರ ಬೃಹತ್ ಸಮಾವೇಶ | ಪುತ್ತೂರಿನಲ್ಲಿ ನಡೆಯಿತು ಪೂರ್ವಭಾವಿ ಸಭೆ Read More »

ಕಡಬದಲ್ಲಿ ಸ್ಪಂದನಾ ಸಮುದಾಯ ಸಹಕಾರ ಸಂಘದ ಶುಭಾರಂಭ | ಸಹಕಾರಿ ಸಂಘಗಳು ಸಮಾಜದಲ್ಲಿ ಸಹಕಾರಿಯಾಗಿ ಕೆಲಸ ಮಾಡುತ್ತಿದೆ – ಭಾಗೀರಥಿ ಮುರುಳ್ಯ | ಇತರ ಸಮುದಾಯದವರಿಗೂ ಸಹಕಾರ ಸಂಘ ಸೇವೆ ನೀಡಲಿದೆ : ಕೇಶವ ಎ.

ಕಾಣಿಯೂರು: ಸಹಕಾರಿ ಸಂಘಗಳು ಸಮಾಜದಲ್ಲಿ ಸಹಕಾರಿಯಾಗಿ ಕೆಲಸ ಮಾಡುತ್ತಿದೆ. ಸಹಕಾರ ಸಂಘಗಳ ಮೂಲಕ ಸದಸ್ಯರು ತಾವು ಪಡೆದ ಸಾಲವನ್ನು ಸಮರ್ಪಕವಾಗಿ ಸಕಾಲದಲ್ಲಿ ಮರುಪಾವತಿ ಮಾಡಿದಲ್ಲಿ ಸಂಘ ಅಭಿವೃದ್ದಿ ಹೊಂದಲು ಸಾಧ್ಯ. ಸ್ವಾಭಿಮಾನದ ಬದುಕು ಕಟ್ಟಿಕೊಂಡು ಜೀವನ ನಡೆಸಲು ಸಹಕಾರ ಸಂಘಗಳು ಸಹಕಾರಿ ಎಂದು ಸುಳ್ಯ ವಿಧಾನಸಭಾ ಕ್ಷೇತ್ರದ ಶಾಸಕಿ ಭಾಗೀರಥಿ ಮುರುಳ್ಯ ಹೇಳಿದರು. ಅವರು ಕಡಬ ಒಕ್ಕಲಿಗ ಗೌಡ ಸಮುದಾಯ ಭವನದಲ್ಲಿ ಫೆ ೧೧ರಂದು ನಡೆದ ಸ್ಪಂದನಾ ಸಮುದಾಯ ಸಹಕಾರ ಸಂಘದ ಶುಭಾರಂಭ ಸಮಾರಂಭವನ್ನು ಉದ್ಘಾಟಿಸಿ ಮಾತನಾಡಿದರು.

ಕಡಬದಲ್ಲಿ ಸ್ಪಂದನಾ ಸಮುದಾಯ ಸಹಕಾರ ಸಂಘದ ಶುಭಾರಂಭ | ಸಹಕಾರಿ ಸಂಘಗಳು ಸಮಾಜದಲ್ಲಿ ಸಹಕಾರಿಯಾಗಿ ಕೆಲಸ ಮಾಡುತ್ತಿದೆ – ಭಾಗೀರಥಿ ಮುರುಳ್ಯ | ಇತರ ಸಮುದಾಯದವರಿಗೂ ಸಹಕಾರ ಸಂಘ ಸೇವೆ ನೀಡಲಿದೆ : ಕೇಶವ ಎ. Read More »

ಹಿರಿಯರು ಮಾಡುವ ಒಳ್ಳೆಯ ಕೆಲಸವನ್ನು ಮುಂದಿನ ಪೀಳಿಗೆಗೆ ತಲುಪಿಸುವ ಕೆಲಸವಾಗಬೇಕು | ಕಡಬ ಸ್ಪಂದನಾ ಸಮುದಾಯ ಸಹಕಾರ ಸಂಘದ ಶುಭಾರಂಭ ಸಮಾರಂಭ ಉದ್ಘಾಟಿಸಿ ಶಾಸಕಿ ಭಾಗೀರಥಿ ಮುರುಳ್ಯ

ಕಡಬ: ಎಲ್ಲಾ ಸಮುದಾಯದ ಜತೆಗೂಡಿ ಒಬ್ಬರಿಗೊಬ್ಬರು ಸಹಕಾರ ನೀಡುವ ನಿಟ್ಟಿನಲ್ಲಿ ರಚನೆಗೊಂಡ ಸ್ಪಂದನಾ ಸಮುದಾಯ ಸಹಕಾರ ಸಂಘ ಮುಂದಿನ ದಿನಗಳಲ್ಲಿ ರಾಜ್ಯಮಟ್ಟದ ಸಹಕಾರ ಸಂಘವಾಗಿ ಬೆಳೆಯಲಿ ಎಂದು ಸುಳ್ಯ ಶಾಸಕಿ ಭಾಗೀರಥಿ ಮುರುಳ್ಯ ಹೇಳಿದರು. ಅವರು ಭಾನುವಾರ ಕಡಬ ಒಕ್ಕಲಿಗ ಗೌಡ ಸಮುದಾಯ ಭವನದಲ್ಲಿ ಕಡಬ ಸ್ಪಂದನಾ ಸಮುದಾಯ ಸಹಕಾರ ಸಂಘದ ಶುಭಾರಂಭ ಸಮಾರಂಭವನ್ನು ದೀಪ ಬೆಳಗಿಸಿ ಉದ್ಘಾಟಿಸಿ ಮಾತನಾಡಿದರು. ಒಳ್ಳೆಯ ಕೆಲಸ ಮಾಡಿದಾಗ ಸಮಾಜದಿಂದ ಸನ್ಮಾನ ಪಡೆಯಲು ಸಾಧ್ಯ. ಈ ನಿಟ್ಟಿನಲ್ಲಿ ಹಿರಿಯರು ಮಾಡುವ ಒಳ್ಳೆಯ

ಹಿರಿಯರು ಮಾಡುವ ಒಳ್ಳೆಯ ಕೆಲಸವನ್ನು ಮುಂದಿನ ಪೀಳಿಗೆಗೆ ತಲುಪಿಸುವ ಕೆಲಸವಾಗಬೇಕು | ಕಡಬ ಸ್ಪಂದನಾ ಸಮುದಾಯ ಸಹಕಾರ ಸಂಘದ ಶುಭಾರಂಭ ಸಮಾರಂಭ ಉದ್ಘಾಟಿಸಿ ಶಾಸಕಿ ಭಾಗೀರಥಿ ಮುರುಳ್ಯ Read More »

ಕಡಬ ಸ್ಪಂದನಾ ಸಮುದಾಯ ಸಹಕಾರ ಸಂಘದ ಸಾಮಾನ್ಯ ಮಹಾಸಭೆ

ಕಡಬ: ಕಡಬ ತಾಲೂಕು ಒಕ್ಕಲಿಗ ಗೌಡ ಸೇವಾ ಸಂಘ ಪ್ರವರ್ತಿತ ಸ್ಪಂದನಾ ಸಮುದಾಯ ಸಹಕಾರ ಸಂಘದ ಸಾಮಾನ್ಯ ಮಹಾಸಭೆ ಭಾನುವಾರ ಕಡಬ ಒಕ್ಕಲಿಗ ಗೌಡ ಸಮುದಾಯ ಭವನದಲ್ಲಿ ನಡೆಯಿತು. ಸಂಘದ ಅಧ್ಯಕ್ಷ ಕೇಶವ ಎ. ಕಲಾಯಿಗುತ್ತು ಅವರು ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿ, ಸಹಕಾರ ಸಂಘದಲ್ಲಿ ಈಗಾಗಲೇ 1088 ಸದಸ್ಯರಿದ್ದು, 28.70 ಲಕ್ಷ ಪಾಲು ಬಂಡವಾಳ ಹೊಂದಿದೆ. 106800 ಶೇರು ಶುಲ್ಕ, 53400 ರೂ. ನೋಂದಣಿ ಶುಲ್ಕ ಸಂಗ್ರಹಿಸಲಾಗಿದೆ. ಸದಸ್ಯರಿಂದ ಉಳಿತಾಯ ಖಾತೆ ತೆರೆದು 22 ಖಾತೆಯಲ್ಲಿ

ಕಡಬ ಸ್ಪಂದನಾ ಸಮುದಾಯ ಸಹಕಾರ ಸಂಘದ ಸಾಮಾನ್ಯ ಮಹಾಸಭೆ Read More »

ಚಾಲಕನ ನಿಯಂತ್ರಣ ತಪ್ಪಿ ಕಾರು ಪಲ್ಟಿ

ಪುತ್ತೂರು: ಕಾರೊಂದು ಚಾಲಕನ ನಿಯಂತ್ರಣ ತಪ್ಪಿ ಪಲ್ಟಿಯಾದ ಘಟನೆ ದರ್ಬೆಯಲ್ಲಿ ನಡೆದಿದೆ. ದರ್ಬೆ ಸಚಿನ್ ಟ್ರೇಡರ್ಸ್ ಅಂಗಡಿ ಎದುರು ನಿಯಂತ್ರಣ ತಪ್ಪಿ ಮರಕ್ಕೆ ಡಿಕ್ಕಿ ಹೊಡೆದು ಪಲ್ಟಿಯಾಗಿದ್ದು, ಕಾರಿನಲ್ಲಿದ್ದವರರು ಪ್ರಾಣಾಪಾಯದಿಂದ ಪಾರಾಗಿದ್ದಾರೆ ಎನ್ನಲಾಗಿದೆ. ಈ ಕುರಿತು ಹೆಚ್ಚಿನ  ಮಾಹಿತಿ ತಿಳಿದು ಬಂದಿಲ್ಲ.

ಚಾಲಕನ ನಿಯಂತ್ರಣ ತಪ್ಪಿ ಕಾರು ಪಲ್ಟಿ Read More »

ಬೆಲೆಬಾಳುವ ಮೊಬೈಲ್‍ ನೊಂದಿಗೆ ಸಪ್ಲೈಯರ್ ಪರಾರಿ | ಪ್ರಕರಣ ದಾಖಲು

ಪುತ್ತೂರು: ನೆಹರುನಗರದ ಹೊಟೇಲ್ ಒಂದರಲ್ಲಿ ಸಪ್ಲೈಯರ್ ಆಗಿ ಕೆಲಸ ನಿರ್ವಹಿಸುತ್ತಿದ್ದಾತ ಬೆಲೆಬಾಳುವ ಮೊಬೈಲ್‍ ನೊಂದಿಗೆ ಪರಾರಿಯಾದ ಘಟನೆ ಇಂದು ನಡೆದಿದೆ. ಸಪ್ಲೈಯರ್ ಗಣೇಶ್‍ ಎಂಬಾತ 69 ಸಾವಿರ ರೂ. ಮೌಲ್ಯದ ಮೊಬೈಲ್‍ ನೊಂದಿಗೆ ಪರಾರಿಯಾದಾತ. ಈತ ನೆಹರೂನಗರದ ಕೋಕೋಗುರು ಅಡುಗೆಮನೆಯಲ್ಲಿ ಕೆಲಸ ಮಾಡುತ್ತಿದ್ದು, ಮಧ್ಯಾಹ್ನ ಈತ ತಾನು ಕ್ಯಾಶ್ ಕೌಂಟರ್ ನೋಡಿಕೊಳ್ಳುವುದಾಗಿ ಹೇಳಿ ಕ್ಯಾಶಿಯರನ್ನು ಊಟಕ್ಕೆ ಕಳುಹಿಸಿದ್ದಾನೆ. ಕ್ಯಾಶಿಯರ್ ಊಟಕ್ಕೆ ತೆರಳುತ್ತಿದ್ದಂತೆ ಡ್ರವರ್‍ ನಲ್ಲಿದ್ದ ಬೆಲೆಬಾಳುವ ಮೊಬೈಲ್‍ ನೊಂದಿಗೆ ಪರಾರಿಯಾಗಿದ್ದಾನೆ ಎನ್ನಲಾಗಿದೆ. ಸಪ್ಲೈಯರ್ ನ ಈ ಕೃತ್ಯ

ಬೆಲೆಬಾಳುವ ಮೊಬೈಲ್‍ ನೊಂದಿಗೆ ಸಪ್ಲೈಯರ್ ಪರಾರಿ | ಪ್ರಕರಣ ದಾಖಲು Read More »

ಅಡ್ಯನಡ್ಕ ಕರ್ನಾಟಕ ಬ್ಯಾಂಕ್‍ ನಲ್ಲಿ ಕೋಟ್ಯಾಂತರ ನಗ-ನಗದು ಕಳ್ಳತನ | ಇಬ್ಬರು ಪೊಲೀಸ್ ವಶಕ್ಕೆ

ವಿಟ್ಲ : ಕರ್ನಾಟಕ ಬ್ಯಾಂಕ್‌  ಅಡ್ಯನಡ್ಕ ಶಾಖೆಯಲ್ಲಿ ನಡೆದ ದರೋಡೆ ಪ್ರಕರಣಕ್ಕೆ ಸಂಬಂಧಿಸಿದ ಪೊಲೀಸರು ಇಬ್ಬರು ಆರೋಪಿಗಳನ್ನು ವಶಕ್ಕೆ ಪಡೆದಿದ್ದಾರೆ ಎಂದು ತಿಳಿಸಿದು ಬಂದಿದೆ. ಕಳೆದ ವಾರದಲ್ಲಿ ಕರ್ನಾಟಕ ಬ್ಯಾಂಕ್‍ ನ ಕಿಟಕಿಯನ್ನು ತುಂಡರಿಸಿ ಒಳನುಗ್ಗಿದ ಕಳ್ಳರು ಕೋಟ್ಯಾಂತರ ನಗ-ನಗದು ಕಳ್ಳತನ ಮಾಡಿ ಪರಾರಿಯಾಗಿದ್ದರು. ಬಳಿಕ ತನಿಖೆ ಕೈಗೆತ್ತಿಕೊಂಡ ಪೊಲೀಸ್‌ ಇಲಾಖೆಯ ವಿಶೇಷ ತಂಡ ಬ್ಯಾಂಕ್ ಹಾಗೂ ಅಕ್ಕಪಕ್ಕ ಸಿಸಿಟಿವಿ ದೃಶ್ಯಗಳನ್ನು ಸಂಗ್ರಹಿಸಿದೆ. ಈ ಆಧಾರದಲ್ಲಿ ಕಳ್ಳತನಕ್ಕೆ ಆಗಮಿಸಿದ್ದ ವಾಹನದ ಸುಳಿವು ಸಿಕ್ಕಿದ್ದು, ಮತ್ತಷ್ಟು ವಾಹನ ನಿಖರತೆಗಾಗಿ

ಅಡ್ಯನಡ್ಕ ಕರ್ನಾಟಕ ಬ್ಯಾಂಕ್‍ ನಲ್ಲಿ ಕೋಟ್ಯಾಂತರ ನಗ-ನಗದು ಕಳ್ಳತನ | ಇಬ್ಬರು ಪೊಲೀಸ್ ವಶಕ್ಕೆ Read More »

ಫೆ.17 : ರಾಜ್ಯಮಟ್ಟದ ಕಾಂಗ್ರೆಸ್ ಕಾರ್ಯಕರ್ತರ ಸಭೆ | ವಿಟ್ಲದಲ್ಲಿ ನಡೆಯಿತು ಪೂರ್ವಭಾವಿ ಸಭೆ

ವಿಟ್ಲ: ಫೆ.17ರಂದು ಮಂಗಳೂರಿನಲ್ಲಿ ನಡೆಯಲಿರುವ ರಾಜ್ಯ ಮಟ್ಟದ ‘ಕಾಂಗ್ರೆಸ್ ಕಾರ್ಯಕರ್ತರ ಬೃಹತ್ ಸಮಾವೇಶದ ಪೂರ್ವಭಾವಿ ಸಭೆ ವಿಟ್ಲ-ಉಪ್ಪಿನಂಗಡಿ ಬ್ಲಾಕ್ ಕಾಂಗ್ರೆಸ್ ಕಚೇರಿಯಲ್ಲಿ ನಡೆಯಿತು. ಮಾಜಿ ಶಾಸಕಿ ಶಕುಂತಲಾ ಟಿ. ಶೆಟ್ಟಿ ಅವರ ಉಪಸ್ಥಿತಿಯಲ್ಲಿ ನಡೆದ ಸಭೆಯಲ್ಲಿ, ವಿಟ್ಲ-ಉಪ್ಪಿನಂಗಡಿ ಬ್ಲಾಕಿನಿಂದ ಸರ್ಕಾರದ ವಿವಿಧ ಸಮಿತಿ, ಮಂಡಳಿಗೆ ನಾಮ ನಿರ್ದೇಶೀತರಾದ ಪಕ್ಷದ ಪ್ರಮುಖರಾದ ಜಗನ್ನಾಥ್ ಶೆಟ್ಟಿ ನಡುಮನೆ, ನಿರಂಜನ್ ರೈ ಮಠಂದಬೆಟ್ಟು, ದಾಮೋದರ್ ಮುರ, ಅಬ್ದುಲ್ ರಹಿಮಾನ್ ಯುನಿಕ್, ರಾಮಣ್ಣ ಪಿಲಿಂಜ, ಮೊಹಮ್ಮದ್ ಇಕ್ಬಾಲ್, ಶ್ರೀನಿವಾಸ್ ಶೆಟ್ಟಿ ಕೊಲ್ಯ, ಸುನಿತಾ

ಫೆ.17 : ರಾಜ್ಯಮಟ್ಟದ ಕಾಂಗ್ರೆಸ್ ಕಾರ್ಯಕರ್ತರ ಸಭೆ | ವಿಟ್ಲದಲ್ಲಿ ನಡೆಯಿತು ಪೂರ್ವಭಾವಿ ಸಭೆ Read More »

ಉಪ್ಪಿನಂಗಡಿ ಶ್ರೀ ಕಾಳಿಕಾಂಬ ಯಕ್ಷಗಾನ ಕಲಾ ಸೇವಾ ಸಂಘದ 50ನೇ ವರ್ಷಾಚರಣೆ | ಅಗ್ರಪೂಜೆ ತಾಳಮದ್ದಳೆ

ಉಪ್ಪಿನಂಗಡಿ:  ಶ್ರೀ ಕಾಳಿಕಾಂಬ ಯಕ್ಷಗಾನ ಕಲಾ ಸೇವಾ ಸಂಘದ 50ನೇ ವರ್ಷಾಚರಣೆ ಪ್ರಯುಕ್ತ ನಡೆಸಲಾಗುತ್ತಿರುವ  ಶ್ರೀ ಮಹಾಭಾರತ  ಸರಣಿಯಲ್ಲಿ ಅಗ್ರಪೂಜೆ  ತಾಳಮದ್ದಲೆ ಉಪ್ಪಿನಂಗಡಿ ಶ್ರೀ ಸಹಸ್ರಲಿಂಗೇಶ್ವರ ದೇವಾಲಯದಲ್ಲಿ ಜರಗಿತು. ಭಾಗವತರಾಗಿ ಪದ್ಮನಾಭ ಕುಲಾಲ್ ಉಪ್ಪಿನಂಗಡಿ, ಸುರೇಶ್ .ಬಿ., ಹಿಮ್ಮೇಳದಲ್ಲಿ ಶ್ರೀಪತಿ ಭಟ್ ಉಪ್ಪಿನಂಗಡಿ, ಪ್ರಚೇತ್ ಆಳ್ವ ಉಪ್ಪಿನಂಗಡಿ, ಅರ್ಥಧಾರಿಗಳಾಗಿ ಕುಂಬ್ಳೆ ಶ್ರೀಧರ ರಾವ್ (ಭೀಷ್ಮ), ಮಹಾಲಿಂಗೇಶ್ವರ ಭಟ್ ಪೆರಿಯಡ್ಕ (ಧರ್ಮರಾಯ),  ದಿವಾಕರ ಆಚಾರ್ಯ ಗೇರುಕಟ್ಟೆ (ಸಹದೇವ ಮತ್ತು  ಶ್ರೀ ಕೃಷ್ಣ), ಗೋಪಾಲ ಶೆಟ್ಟಿ ಕಳೆಂಜ (ಭೀಮ), ಗೀತಾ

ಉಪ್ಪಿನಂಗಡಿ ಶ್ರೀ ಕಾಳಿಕಾಂಬ ಯಕ್ಷಗಾನ ಕಲಾ ಸೇವಾ ಸಂಘದ 50ನೇ ವರ್ಷಾಚರಣೆ | ಅಗ್ರಪೂಜೆ ತಾಳಮದ್ದಳೆ Read More »

error: Content is protected !!
Scroll to Top