ಪುತ್ತೂರು

ಮೋದಿ ಕುರಿತು ತುಚ್ಛವಾಗಿ ಮಾತನಾಡಿದ ರಾಹುಲ್ ಗಾಂಧಿ ದೇಶದ ಕ್ಷಮೆ ಯಾಚಿಸಬೇಕು | ಪ್ರತಿಭಟನೆಯಲ್ಲಿ ಒಬಿಸಿ ಮೋರ್ಚಾ ಜಿಲ್ಲಾ ಅಧ್ಯಕ್ಷ ಆರ್‍.ಸಿ. ನಾರಾಯಣ ಆಗ್ರಹ

ಪುತ್ತೂರು: ಮುಂದಿನ ಲೋಕಸಭೆ ಚುನಾವಣೆಯಲ್ಲಿ ಸೋಲಿನ ಹತಾಶೆಯಲ್ಲಿರುವ ಕಾಂಗ್ರೆಸ್ ಪಕ್ಷದ ನಾಯಕ ರಾಹುಲ್ ಗಾಂಧಿ ದೇಶದ ಪ್ರಧಾನಿ ನರೇಂದ್ರ ಮೋದಿಯವರನ್ನು ಜಾತಿ ವಿಚಾರದಲ್ಲಿ ಅವಮಾನಿಸಿರುವುದು ಖಂಡನೀಯ. ಈ ಕುರಿತು ರಾಹುಲ್ ಗಾಂಧಿ ದೇಶದ ಕ್ಷಮೆಯಾಚಿಸಬೇಕು ಎಂದು ಬಿಜೆಪಿ ಒಬಿಸಿ ಮೋರ್ಚಾ ಜಿಲ್ಲಾ ಅಧ್ಯಕ್ಷ ಆರ್‍.ಸಿ. ನಾರಾಯಣ ಆಗ್ರಹಿಸಿದ್ದಾರೆ. ಅವರು ಮಂಗಳವಾರ ಬಿಜೆಪಿ ಪುತ್ತೂರು ನಗರ ಹಾಗೂ ಗ್ರಾಮಾಂತರ ಮಂಡಲದ ಒಬಿಸಿ ಮೋರ್ಚಾದಿಂದ ಬಿಜೆಪಿ ಕಚೇರಿ ಎದುರು ನಡೆದ ಪ್ರತಿಭಟನೆಯನ್ನುದ್ದೇಶಿಸಿ ಮಾತನಾಡಿದರು. ವಿಶ್ವಗುರು ಎಂದು ಉಲ್ಲೇಖಿಸಲ್ಪಟ್ಟ ನರೇಂದ್ರ ಮೋದಿಯವರ […]

ಮೋದಿ ಕುರಿತು ತುಚ್ಛವಾಗಿ ಮಾತನಾಡಿದ ರಾಹುಲ್ ಗಾಂಧಿ ದೇಶದ ಕ್ಷಮೆ ಯಾಚಿಸಬೇಕು | ಪ್ರತಿಭಟನೆಯಲ್ಲಿ ಒಬಿಸಿ ಮೋರ್ಚಾ ಜಿಲ್ಲಾ ಅಧ್ಯಕ್ಷ ಆರ್‍.ಸಿ. ನಾರಾಯಣ ಆಗ್ರಹ Read More »

ಮಹಾಲಿಂಗೇಶ್ವರ ದೇವಸ್ಥಾನದಲ್ಲಿ ಶಾಸನಗಳನ್ನು ಸಂರಕ್ಷಿಸುವ, ಶಾಸನ ಮಂಟಪ ರಚನೆಗೆ ಪುತ್ತೂರು ತಾಲೂಕು ಕನ್ನಡ ಸಾಹಿತ್ಯ ಪರಿಷತ್ತಿನಿಂದ ಮನವಿ

ಪುತ್ತೂರು: ದೇವಸ್ಥಾನದ ಹೊರಪ್ರಾಂಗಣದಲ್ಲಿ ನಿರ್ಲಕ್ಷ್ಯಕ್ಕೆ ಒಳಗಾಗಿ ಇರುವ ಪುರಾತನ ಶಾಸನಗಳನ್ನು ಸಂರಕ್ಷಣೆ ಮಾಡುವ ನಿಟ್ಟಿನಲ್ಲಿ  ಪುತ್ತೂರು ತಾಲೂಕು ಕನ್ನಡ ಸಾಹಿತ್ಯ ಪರಿಷತ್ತು ಶಾಸನ ಮಂಟಪವನ್ನು ನಿರ್ಮಿಸುವ ಕುರಿತು ಪುತ್ತೂರು ತಾಲೂಕು ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ಉಮೇಶ್ ನಾಯಕ್ ದೇವಸ್ಥಾನ ಆಡಳಿತಾಧಿಕಾರಿ ನವೀನ್ ಭಂಡಾರಿ ಅವರಿಗೆ  ಮನವಿ ಮಾಡಿದ್ದಾರೆ. ಮನವಿ ಪತ್ರದಲ್ಲಿ ಸದರಿ ಶಾಸನಗಳು ಸುಮಾರು 12ನೇ ಶತಮಾನಕ್ಕೆ ಸೇರಿದ ಪ್ರಾಚೀನ ಕನ್ನಡ ಶಾಸನಗಳಾಗಿವೆ. ಈ ಶಾಸನಗಳಿಂದಾಗಿ 12ನೇ ಶತಮಾನದಲ್ಲಿ ಪ್ರಚಲಿತದಲ್ಲಿ ಇದ್ದ ಕನ್ನಡ ಭಾಷೆ, ಲಿಪಿ,

ಮಹಾಲಿಂಗೇಶ್ವರ ದೇವಸ್ಥಾನದಲ್ಲಿ ಶಾಸನಗಳನ್ನು ಸಂರಕ್ಷಿಸುವ, ಶಾಸನ ಮಂಟಪ ರಚನೆಗೆ ಪುತ್ತೂರು ತಾಲೂಕು ಕನ್ನಡ ಸಾಹಿತ್ಯ ಪರಿಷತ್ತಿನಿಂದ ಮನವಿ Read More »

ದೇಶದ ಭವಿಷ್ಯ ಯುವ ಜನತೆಯ ಕೈಯಲ್ಲಿದೆ: ಸ್ವಾಮಿ ಜಿತ ಕಾಮಾನಂದಜಿ | ವಿಶೇಷ ಉಪನ್ಯಾಸ ಮಾಲಿಕೆ ವಿವೇಕ ಸ್ಮೃತಿ

ಪುತ್ತೂರು: ಶಿಕ್ಷಣ ಒಬ್ಬ ವ್ಯಕ್ತಿಯ ಚಾರಿತ್ರ್ಯ ನಿರ್ಮಾಣ ಮತ್ತು ವ್ಯಕ್ತಿತ್ವ ನಿರ್ಮಾಣಕ್ಕೆ ಕಾರಣವಾಗಬೇಕು. ಕೇವಲ ಪರೀಕ್ಷೆ ಬರೆಯಲು ಮಾತ್ರ ಸೀಮಿತವಾಗದೆ ಉತ್ತಮ ನಾಗರೀಕರನ್ನಾಗಿ ಮಾಡಬೇಕು. ಇಂದಿನ ಭಾರತದ ಭವಿಷ್ಯ ಯುವಜನತೆಯ ಕೈಯಲ್ಲಿದೆ. ಮೊದಲು ನಮ್ಮ ಮೇಲೆ ನಮಗೆ ನಂಬಿಕೆ ಇರಬೇಕು ಜವಬ್ದಾರಿಯನ್ನು ನಿಭಾಯಿಸಲು ಕಲಿಯಬೇಕು ಎಂದು ಮಂಗಳೂರು ಶ್ರೀ ರಾಮಕೃಷ್ಣ ಮಠದ ಅಧ್ಯಕ್ಷ ಸ್ವಾಮಿ ಜಿತ ಕಾಮಾನಂದಜಿ ಹೇಳಿದರು. ವಿವೇಕಾನಂದ ಕಲಾ, ವಿಜ್ಞಾನ ಮತ್ತು ವಾಣಿಜ್ಯ ಮಹಾವಿದ್ಯಾಲಯ (ಸ್ವಾಯತ್ತ)ದಲ್ಲಿ ನಡೆದ ವಿವೇಕಾನಂದ ಸಂಶೋಧನಾ ಅಧ್ಯಯನ ಕೇಂದ್ರ ಮತ್ತು

ದೇಶದ ಭವಿಷ್ಯ ಯುವ ಜನತೆಯ ಕೈಯಲ್ಲಿದೆ: ಸ್ವಾಮಿ ಜಿತ ಕಾಮಾನಂದಜಿ | ವಿಶೇಷ ಉಪನ್ಯಾಸ ಮಾಲಿಕೆ ವಿವೇಕ ಸ್ಮೃತಿ Read More »

ಪುತ್ತೂರು ಕೋ ಓಪರೇಟಿವ್ ಟೌನ್‍ ಬ್ಯಾಂಕ್‍ ನಲ್ಲಿ ಗ್ರಾಹಕರ ಸಮಾವೇಶ | ನೂತನ ಬ್ಯಾಂಕಿಂಗ್ ತಂತ್ರಜ್ಞಾನ ಉದ್ಘಾಟನೆ

ಪುತ್ತೂರು: ಪುತ್ತೂರು ಕೋ ಓಪರೇಟಿವ್ ಟೌನ್ ಬ್ಯಾಂಕ್ ನಲ್ಲಿ ಗ್ರಾಹಕ ಸಮಾವೇಶವನ್ನು ಸೋಮವಾರ ಬ್ಯಾಂಕ್‍ ಸಭಾಂಗಣದಲ್ಲಿ ಹಮ್ಮಿಕೊಳ್ಳಲಾಯಿತು. ಸಮಾವೇಶದಲ್ಲಿ ಗ್ರಾಹಕರ ಅವಶ್ಯಕತೆಗೆ ಪೂರಕವಾಗಿ ನೂತನ ಬ್ಯಾಂಕಿಂಗ್ ತಂತ್ರಜ್ಞಾನ ಮತ್ತು ನೇರ ಎನ್. ಇ. ಎಫ್.ಟಿ. , ಆರ್. ಟಿ. ಜಿ. ಎಸ್ ಹಾಗೂ ಕ್ಯೂ ಆರ್ ಕೋಡ್ ಸೌಲಭ್ಯಗಳ ಅನುಷ್ಠಾನ ಉದ್ಘಾಟಿಸಲಾಯಿತು ದ. ಕ. ಜಿಲ್ಲಾ ಇಂಡಿಯನ್ ರೆಡ್ ಕ್ರಾಸ್ ಸೊಸೈಟಿಯ ಚೇರ್ ಮ್ಯಾನ್ ಸಿ.ಎ ಶಾಂತರಾಮ ಶೆಟ್ಟಿ ಸಮಾವೇಶ ಉದ್ಘಾಟಿಸಿ ಮಾತನಾಡಿ, ಸಾಲಗಳ ವಿಳಂಬ ಆಗುವಾಗ

ಪುತ್ತೂರು ಕೋ ಓಪರೇಟಿವ್ ಟೌನ್‍ ಬ್ಯಾಂಕ್‍ ನಲ್ಲಿ ಗ್ರಾಹಕರ ಸಮಾವೇಶ | ನೂತನ ಬ್ಯಾಂಕಿಂಗ್ ತಂತ್ರಜ್ಞಾನ ಉದ್ಘಾಟನೆ Read More »

ಬಿಜೆಪಿ ಅಲ್ಪ ಸಂಖ್ಯಾತ ಮೋರ್ಚಾದ ರಾಜ್ಯ ಕಾರ್ಯಕಾರಿಣಿ ಸದಸ್ಯರಾಗಿ ಪುತ್ತೂರಿನ ಅಬ್ದುಲ್ ಮನ್ನಾನ್ ನೇಮಕ

ಪುತ್ತೂರು: ಬಿಜೆಪಿ ಅಲ್ಪಸಂಖ್ಯಾತ ಮೋರ್ಚಾದ ರಾಜ್ಯ ಕಾರ್ಯಕಾರಿಣಿ ಸದಸ್ಯರಾಗಿ ಪುತ್ತೂರಿನ ಅಬ್ದುಲ್ ಮನ್ನಾನ್ ರನ್ನು ನೇಮಕ ಮಾಡಲಾಗಿದ್ದು, ಅಲ್ಪಸಂಖ್ಯಾತ ಮೋರ್ಚಾದ ರಾಜ್ಯ ಘಟಕದ ಅಧ್ಯಕ್ಷ – ಡಾ. ಅನಿಲ್ ಥಾಮಸ್ ಈ ನೇಮಕ ಮಾಡಿ ಆದೇಶಿಸಿದ್ದಾರೆ. ಅಬ್ದುಲ್ ಮನ್ನಾನ್ ಬಿ. ಎಸ್. ವಿಜಯೇಂದ್ರ ಆಪ್ತ ವಲಯದಲ್ಲಿ ಗುರುತಿಸಿಕೊಂಡಿದ್ದು, ಬಿ. ಎಸ್ ಯಡಿಯೂರಪ್ಪ ಈ ಹಿಂದೆ ಅಬ್ದುಲ್ ಮನ್ನಾನ್ ಗೆ ಪಕ್ಷದ ಜವಾಬ್ದಾರಿಯನ್ನು ವಹಿಸಿಕೊಟ್ಟಿದ್ದರು. ಚುನಾವಣೆ ಸಂದರ್ಭ ಬೆಂಗಳೂರಿನಲ್ಲಿ ಪಕ್ಷದ ಪ್ರಚಾರದಲ್ಲಿ ಯುವಕರನ್ನ ಒಗ್ಗೂಡಿಸಿ ಕೆಲ ಬಿಜೆಪಿ ನಾಯಕರ

ಬಿಜೆಪಿ ಅಲ್ಪ ಸಂಖ್ಯಾತ ಮೋರ್ಚಾದ ರಾಜ್ಯ ಕಾರ್ಯಕಾರಿಣಿ ಸದಸ್ಯರಾಗಿ ಪುತ್ತೂರಿನ ಅಬ್ದುಲ್ ಮನ್ನಾನ್ ನೇಮಕ Read More »

ಸಾಕೇತನಗರ ಶ್ರೀರಾಮ ಭಜನಾ ಮಂದಿರದಲ್ಲಿ ಬಾಲಗೋಕುಲ ಉದ್ಘಾಟನೆ

ಕೆದಿಲ:  ಸಾಕೇತನಗರದ ಶ್ರೀರಾಮ ಭಜನಾ ಮಂದಿರದಲ್ಲಿ ‘ಬಾಲಗೋಕುಲ’ವನ್ನು ಉದ್ಘಾಟಿಸಲಾಯಿತು. ಮಕ್ಕಳಿಗೆ ಸಂಸ್ಕಾರ ಕೊಡುವ ನಿಟ್ಟಿನಲ್ಲಿ ತೆರಯಲಾದ ಬಾಲಗೋಕುಲವನ್ನು ಭಾಗೀರಥಿ ಮಾತಾಜಿ ದೀಪ ಬೆಳಗಿಸಿ ಉದ್ಘಾಟಿಸಿದರು. ಪ್ರತೀ ಭಾನುವಾರದಂದು 4 ರಿಂದ 5.30 ರ ವರೆಗೆ ಬಾಲಗೋಕುಲ ಕಾರ್ಯಾಚರಿಸಲಿದ್ದು, ಗಾಯತ್ರಿ ಮಾತಾಜಿ, ರಕ್ಷಿತಾ ಮಾತಾಜಿ, ರೇಖಾ ಮಾತಾಜಿ, ಆಶಾ ಮಾತಾಜಿ ಸಂಸ್ಕಾರ ಶಿಕ್ಷಣ ನೀಡಲಿದ್ದಾರೆ. ಉದ್ಘಾಟನಾ ಕಾರ್ಯಕ್ರಮದಲ್ಲಿ ಹಲವಾರು ಮಕ್ಕಳು ಭಾಗವಹಿಸಿದ್ದರು.

ಸಾಕೇತನಗರ ಶ್ರೀರಾಮ ಭಜನಾ ಮಂದಿರದಲ್ಲಿ ಬಾಲಗೋಕುಲ ಉದ್ಘಾಟನೆ Read More »

ಬಿಜೆಪಿ ಮಹಾಶಕ್ತಿ ಕೇಂದ್ರದಿಂದ ಗೋಡೆ ಬರಹ ಅಭಿಯಾನಕ್ಕೆ ಚಾಲನೆ

ವಿಟ್ಲ: ಬಿಜೆಪಿ ಪುತ್ತೂರು ಗ್ರಾಮಾಂತರ ಮಂಡಲದ ವಿಟ್ಲ ಮಹಾಶಕ್ತಿ ಕೇಂದ್ರದ ನೇತೃತ್ವದಲ್ಲಿ ಗೋಡೆ ಬರಹ ಅಭಿಯಾನಕ್ಕೆ ಸೋಮವಾರ ಚಾಲನೆ ನೀಡಲಾಯಿತು. ಬಿಜೆಪಿ ಮುಖಂಡರು ಸಹಿತ ಕಾರ್ಯಕರ್ತರು ಕಮಲ ಚಿಹ್ನೆಯ ಸ್ಟಿಕ್ಕರನ್ನು ಗೋಡೆಗಳಿಗೆ ಅಂಟಿಸಿದರು. ಈ ಸಂದರ್ಭದಲ್ಲಿ ವಿಟ್ಲ ಮಹಾಶಕ್ತಿ ಕೇಂದ್ರ ಅಧ್ಯಕ್ಷ, ಮಂಡಲ ಉಪಾಧ್ಯಕ್ಷ ಅರುಣ್ ವಿಟ್ಲ, ವಿಟ್ಲ ಮಹಾಶಕ್ತಿ ಕೇಂದ್ರ ಕಾರ್ಯದರ್ಶಿ ಕರುಣಾಕರ ನಾಯ್ತೋಟ್ಟು, ಮೋಹನ್ ದಾಸ್ ಉಕ್ಕುಡ, ಪಕ್ಷದ ಪದಾಧಿಕಾರಿಗಳು, ವಿಟ್ಲ ಪಟ್ಟಣ ಪಂಚಾಯತ್ ಸದಸ್ಯರು, ಪಕ್ಷದ ಹಿರಿಯರು, ಬಿಜೆಪಿ ಕಾರ್ಯಕರ್ತರು ಉಪಸ್ಥಿತರಿದ್ದರು.

ಬಿಜೆಪಿ ಮಹಾಶಕ್ತಿ ಕೇಂದ್ರದಿಂದ ಗೋಡೆ ಬರಹ ಅಭಿಯಾನಕ್ಕೆ ಚಾಲನೆ Read More »

ನಿವೃತ್ತ ಯೋಧನ ಪತ್ನಿಗೆ ಹಲ್ಲೆ | ಗ್ರಾಮಾಂತರ ಮಂಡಲ ಅಧ್ಯಕ್ಷರ ಭೇಟಿ

ಕೆದಿಲ: ಕೆದಿಲ ಗ್ರಾಮದ ನಿವೃತ್ತ ಯೋಧ ಶಿವರಾಮ್ ಭಟ್ ಮತ್ತು ಅವರ ಪತ್ನಿ ಸವಿತಾ ಭಟ್ ರಿಗೆ  ಜಾಗದ ವಿಚಾರವಾಗಿ ಅನ್ಯಕೋಮಿನ ತಂಡವೊಂದು ಹಲ್ಲೆ ನಡೆಸಿದ್ದು, ಸ್ಥಳೀಯ ಗ್ರಾಮ ಪಂಚಾಯತ್ ಸದಸ್ಯರು ಶಾಮೀಲಾಗಿರುವುದು ಖೇದಕರ ಎಂದು ಬಿಜೆಪಿ ಗ್ರಾಮಾಂತರ ಮಂಡಲ ಅಧ್ಯಕ್ಷ ಸಾಜ ರಾಧಕೃಷ್ಣ ಆಳ್ವಾ ಹೇಳಿದ್ದಾರೆ. ಅವರು ಹಲ್ಲೆಗೊಳಗಾಗಿ ಆಸ್ಪತ್ರೆಗೆ ದಾಖಲಾದ ನಿವೃತ್ತ ಯೋಧರ ಪತ್ನಿ ಅವರ ಬಳಿ ತೆರಳಿ ಮನೆಯವರಿಗೆ ಧೈರ್ಯ ತುಂಬಿದರು. ಕೃಷಿ ಕೆಲಸ ಮಾಡಿಕೊಂಡು, ಅನೇಕ ವರ್ಷದಿಂದ ವಾಸ ಮಾಡುತ್ತಾ ಬಂದಿರುವ

ನಿವೃತ್ತ ಯೋಧನ ಪತ್ನಿಗೆ ಹಲ್ಲೆ | ಗ್ರಾಮಾಂತರ ಮಂಡಲ ಅಧ್ಯಕ್ಷರ ಭೇಟಿ Read More »

ಫೆ.18-19: ಒಡಿಯೂರು ಶ್ರೀ ಗುರುದೇವದತ್ತ ಸಂಸ್ಥಾನಮ್‍ ನಲ್ಲಿ ತುಳುನಾಡ ಜಾತ್ರೆ ‘‘ಒಡಿಯೂರು ರಥೋತ್ಸವ’’, ‘ಸಿರಿರಾಮೆ ತುಳು ಸಾಹಿತ್ಯ ಸಮ್ಮೇಳನ’ | ಫೆ.16 ಪುತ್ತೂರಿನಿಂದ ವೈಭವದ ಹಸಿರುವಾಣಿ ಹೊರೆಕಾಣಿಕೆ ಸಮರ್ಪಣೆ ಮೆರವಣಿಗೆ | ಫೆ.14: ಕಾರ್ಯಾಲಯ ಉದ್ಘಾಟನೆ

ಪುತ್ತೂರು: ಫೆ.18 ಹಾಗೂ 19 ರಂದು ಒಡಿಯೂರು ಶ್ರೀ ಗುರುದೇವದತ್ತ ಸಂಸ್ಥಾನಮ್‍ ನಲ್ಲಿ ನಡೆಯಲಿರುವ ತುಳುನಾಡ ಜಾತ್ರೆ ‘ಶ್ರೀ ಒಡಿಯೂರು ರಥೋತ್ಸವ’ ಹಾಗೂ ‘ಸಿರಿರಾಮೆ ತುಳು ಸಾಹಿತ್ಯ ಸಮ್ಮೇಳನ’ದ ಅಂಗವಾಗಿ ಪುತ್ತೂರಿನಿಂದ ತೆರಳುವ ಬೃಹತ್ ವೈಭವದ ಹಸಿರುವಾಣಿ ಹೊರೆಕಾಣಿಕೆ ಸಮರ್ಪಣೆ ಫೆ.16 ರಂದು ಪುತ್ತೂರು ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ವಠಾರದಿಂದ ಬೆಳಿಗ್ಗೆ 10.30 ಕ್ಕೆ ತೆರಳಲಿದೆ ಎಂದು ಪುತ್ತೂರು ಹೊರೆಕಾಣಿಕೆ ಸಮಿತಿ ಅಧ್ಯಕ್ಷ ಸೀತಾರಾಮ ರೈ ಕೆದಂಬಾಡಿಗುತ್ತು ತಿಳಿಸಿದ್ದಾರೆ. ಸೋಮವಾರ ಪತ್ರಿಕಾಗೋಷ್ಠಿಯಲ್ಲಿ ಅವರು ಮಾತನಾಡಿ, ಪುತ್ತೂರು ಭಾಗದಿಂದ

ಫೆ.18-19: ಒಡಿಯೂರು ಶ್ರೀ ಗುರುದೇವದತ್ತ ಸಂಸ್ಥಾನಮ್‍ ನಲ್ಲಿ ತುಳುನಾಡ ಜಾತ್ರೆ ‘‘ಒಡಿಯೂರು ರಥೋತ್ಸವ’’, ‘ಸಿರಿರಾಮೆ ತುಳು ಸಾಹಿತ್ಯ ಸಮ್ಮೇಳನ’ | ಫೆ.16 ಪುತ್ತೂರಿನಿಂದ ವೈಭವದ ಹಸಿರುವಾಣಿ ಹೊರೆಕಾಣಿಕೆ ಸಮರ್ಪಣೆ ಮೆರವಣಿಗೆ | ಫೆ.14: ಕಾರ್ಯಾಲಯ ಉದ್ಘಾಟನೆ Read More »

ಭಾರತದಲ್ಲಿ ಜಾತಿ ಗಣತಿ ಯಾಕೆ ಅಪಾಯಕಾರಿ ? : ಅಶ್ವಿನ್ ಎಲ್. ಶೆಟ್ಟಿ

ಭಾಗ-3ಈಗ ನಾವು ಕಾಂಗ್ರೆಸ್ ನ ದಾಖಲೆಗಳನ್ನು ಗಮನಿಸೋಣ, ಕಳೆದ 70 ವರ್ಷಗಳಲ್ಲಿ 52% ಒಬಿಸಿ ಜನಸಂಖ್ಯೆಯಲ್ಲಿ ಕೇವಲ ಇಬ್ಬರು ಒಬಿಸಿ ರಾಷ್ಟ್ರಾಧ್ಯಕ್ಷರನ್ನುಮಾತ್ರ ಹೊಂದಿದ್ದು ಉಳಿದ ಎಲ್ಲಾ ರಾಷ್ಟ್ರಾಧ್ಯಕ್ಷರು ಮೇಲುಜಾತಿಯವರಾಗಿದ್ದಾರೆ. ಒಬಿಸಿ ಮುಖ್ಯಮಂತ್ರಿಗಳನ್ನು ನೋಡುವುದಾದರೆ ಕಾಂಗ್ರೆಸ್ ಪಕ್ಷವು ಕೆಳಮಟ್ಟದಿಂದ ಮೊದಲ ಸ್ಥಾನದಲ್ಲಿದೆ. ಇಲ್ಲೂ ಕೂಡಾ ಪ್ರಬಲ ಒಬಿಸಿ ಜಾತಿಗಳಿಗೆ ಹೆಚ್ಚು ಪ್ರಾತಿನಿಧ್ಯವನ್ನು ನೀಡಿರುವುದನ್ನು ಗಮನಿಸಬಹುದು. ನಾವು ಇಲ್ಲಿ ಇನ್ನೊಂದು ಅಂಶವನ್ನು ಗಮನದಲ್ಲಿಟ್ಟುಕೊಳ್ಳಬೇಕು. ಒಬಿಸಿ ಆಯೋಗಕ್ಕೆ ಸಾಂವಿಧಾನಿಕ ಸ್ಥಾನಮಾನ ನೀಡಿದ್ದು ಬಿಜೆಪಿಯೇ ಹೊರತು ಕಾಂಗ್ರೆಸ್ ಅಲ್ಲ. ಕೇಂದ್ರೀಯ ವಿದ್ಯಾಲಯ ಮತ್ತು

ಭಾರತದಲ್ಲಿ ಜಾತಿ ಗಣತಿ ಯಾಕೆ ಅಪಾಯಕಾರಿ ? : ಅಶ್ವಿನ್ ಎಲ್. ಶೆಟ್ಟಿ Read More »

error: Content is protected !!
Scroll to Top