ಪುತ್ತೂರು

ಮಾ.1-3: ಆರ್ಲಪದವಿನಲ್ಲಿ ಅಂತರ್ ರಾಜ್ಯ ಮಟ್ಟದ ಕಲಾ ಸಮ್ಮೇಳನ ಹಾಗೂ ಸೇವಾ ಸಮ್ಮಿಲನ-2024

ಪುತ್ತೂರು: ಆರ್ಲಪದವು ದಾರುಲ್ ಹಿದಾಯ ಎಜ್ಯುಕೇಶನ್ ಫೌಂಡೇಶನ್ & ಚಾರಿಟೇಬಲ್ ಟ್ರಸ್ಟ್ ಹಾಗೂ ದಾರುಲ್ ಹಿದಾಯ ಮುಸ್ಲಿಂ ಯೂತ್ ಫೆಡರೇಶನ್ ಸಂಯುಕ್ತ ಆಶ್ರಯದಲ್ಲಿ ಅಂತರ್ ರಾಜ್ಯ ಮಟ್ಟದ ಕಲಾ ಸಮ್ಮೇಳನ ಹಾಗೂ ಸೇವಾ ಸಮ್ಮಿಲನ-2024 ಕಾರ್ಯಕ್ರಮ ಮಾ.1 ರಿಂದ 3 ರ ತನಕ ಆರ್ಲಪದವು ಮರ್ಹೂಂ ಸುಲ್ತಾನ್ ಹಾಜಿ ನಗರದಲ್ಲಿ ನಡೆಯಲಿದೆ ಎಂದು ದಾರುಲ್ ಹಿದಾಯ ಎಜ್ಯುಕೇಶನ್ ಫೌಂಡೇಶನ್ & ಚಾರಿಟೇಬಲ್ ಟ್ರಸ್ಟ್ ಅಧ್ಯಕ್ಷ ಪಿ.ಕೆ. ಇಸ್ಮಾಯಿಲ್ ತಿಳಿಸಿದ್ದಾರೆ. ಸೋಮವಾರ ಪತ್ರಿಕಾಗೋಷ್ಠಿಯಲ್ಲಿ ಅವರು ಮಾತನಾಡಿ, ಮಾ.1ರಂದು ಅಪರಾಹ್ನ […]

ಮಾ.1-3: ಆರ್ಲಪದವಿನಲ್ಲಿ ಅಂತರ್ ರಾಜ್ಯ ಮಟ್ಟದ ಕಲಾ ಸಮ್ಮೇಳನ ಹಾಗೂ ಸೇವಾ ಸಮ್ಮಿಲನ-2024 Read More »

ಮಾ.2-3 : ಪುತ್ತೂರು ತುಳುಕೂಟದಿಂದ ‘ತುಳುವೆರೆ ಮೇಳೊ-2024’, ‘ತೆನೆಸ್ ಮೇಳೊ’

ಪುತ್ತೂರು: ತುಳುಕೂಟ ಪುತ್ತೂರು ವತಿಯಿಂದ ‘ತುಳುವೆರೆ ಮೇಳೊ-2024’ ಹಾಗೂ ‘ತೆನೆಸ್ ಮೇಳೊ’ ಮಾ.2 ಹಾಗೂ 3 ರಂದು ಮಂಜಲ್ಪಡ್ಪು ಸುದಾನ ವಸತಿಯುತ ಶಾಲಾ ಎಡ್ವರ್ಡ್ ಸಭಾಂಗಣದಲ್ಲಿ ನಡೆಯಲಿದೆ ಎಂದು ತುಳುವೆರೆ ಮೇಳೊ ಸಮಿತಿ ಗೌರವಾಧ್ಯಕ್ಷ ಕೆ. ಸೀತಾರಾಮ ರೈ ಸವಣೂರು ತಿಳಿಸಿದ್ದಾರೆ. ಸೋಮವಾರ ಪತ್ರಿಕಾಗೋಷ್ಠಿಯಲ್ಲಿ ಅವರು ಮಾತನಾಡಿ, ಶ್ರೀ ಕ್ಷೇತ್ರ ಧರ್ಮಸ್ಥಳದ ಧರ್ಮಾಧಿಕಾರಿ ಡಾ.ಡಿ. ವೀರೇಂದ್ರ ಹೆಗ್ಗಡೆ ಆಶೀರ್ವಾದದೊಂದಿಗೆ ಮಾ.2 ಶನಿವಾರ ಮಧ್ಯಾಹ್ನ 2 ಗಂಟೆಗೆ ಬೇರೊದ ಕಲವನ್ನು ಪುತ್ತೂರು ವಾಣಿಜ್ಯ ಮತ್ತು ಕೈಗಾರಿಕಾ ಸಂಘದ ಅಧ್ಯಕ್ಷ

ಮಾ.2-3 : ಪುತ್ತೂರು ತುಳುಕೂಟದಿಂದ ‘ತುಳುವೆರೆ ಮೇಳೊ-2024’, ‘ತೆನೆಸ್ ಮೇಳೊ’ Read More »

ಆಟೋ ಚಾಲಕ ನೇಣು ಬಿಗಿದು ಆತ್ಮಹತ್ಯೆ !

ಪುತ್ತೂರು: ಚಿಕ್ಕಮುಡ್ನೂರು ಗ್ರಾಮದ ನೆಕ್ಕರೆ ಎಂಬಲ್ಲಿ ವ್ಯಕ್ತಿಯೊಬ್ಬರು ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡ ಘಟನೆ ನಡೆದಿದೆ. ನೆಕ್ಕರೆ ನಿವಾಸಿ ಆಟೋ ನಡೆಸುತ್ತಿದ್ದ ಕೃಷ್ಣಪ್ಪ ಪೂಜಾರಿ (60) ಆತ್ಮಹತ್ಯೆ ಮಾಡಿಕೊಂಡವರು. ಭಾನುವಾರ ರಾತ್ರಿ ಮನೆಯಲ್ಲಿ ಯಾರೂ ಇಲ್ಲದ ಸಂದರ್ಭದಲ್ಲಿ ಕೃಷ್ಣಪ್ಪ ಈ ಕೃತ್ಯ ಎಸಗಿದ್ದಾರೆ. ಇತ್ತೀಚೆಗಷ್ಟೇ ಹಳೆ ಆಟೋವನ್ನು ಮಾರಿ ಹೊಸ ಆಟೋ ಖರೀದಿಸಿದ್ದರು ಎನ್ನಲಾಗಿದೆ. ವಿಪರೀತ ಕುಡಿತದ ಚಟ ಹೊಂದಿದ್ದ ಅವರು, ಸಾಲದ ಸಮಸ್ಯೆಯಿಂದ ಬಳಲುತ್ತಿದ್ದರು ಎಂದು ತಿಳಿದು ಬಂದಿದೆ.

ಆಟೋ ಚಾಲಕ ನೇಣು ಬಿಗಿದು ಆತ್ಮಹತ್ಯೆ ! Read More »

ಯಕ್ಷಗಾನ ಪೋಷಕ ಪುಳಿತ್ತಡಿ ಪದ್ಮನಾಭ ಆಚಾರ್ಯರಿಗೆ ಶ್ರದ್ಧಾಂಜಲಿ

ಉಪ್ಪಿನಂಗಡಿ: ಶ್ರೀ ಕಾಳಿಕಾಂಬಾ ಯಕ್ಷಗಾನ ಕಲಾ ಸಂಘದ ಅಜೀವ ಸದಸ್ಯರಾಗಿದ್ದು. ಇತ್ತೀಚೆಗೆ ನಿಧನರಾದ ಯಕ್ಷಗಾನ ಪೋಷಕ ಪದ್ಮನಾಭ ಆಚಾರ್ಯ ಪುಳಿತ್ತಡಿ ಅವರಿಗೆ ಯಕ್ಷಗಾನ ಸಂಘದ ವತಿಯಿಂದ ನುಡಿನಮನ ಸಲ್ಲಿಸಲಾಯಿತು.ದಿವಂಗತರ ಬಗ್ಗೆ ನಿವೃತ್ತ ಶಿಕ್ಷಕ ,ಕಲಾವಿದ ಗೋಪಾಲ ಶೆಟ್ಟಿ ಕಳೆಂಜ ಹಾಗೂ ಸಂಘದ ಅಧ್ಯಕ್ಷ ದಿವಾಕರ ಆಚಾರ್ಯ ಗೇರುಕಟ್ಟೆ ಮಾತನಾಡಿದರು.ಕಾರ್ಯದರ್ಶಿ ಶ್ರೀಪತಿ ಭಟ್, ಪ್ರಸಂಗಕರ್ತ ಚಾರ ಪ್ರದೀಪ ಹೆಬ್ಬಾರ್, ಭಾಗವತ ಪದ್ಮನಾಭ ಕುಲಾಲ್, ಹರೀಶ್ ಆಚಾರ್ಯ ಬಾರ್ಯ, ಸಂಜೀವ ಪಾರೆಂಕಿ, ಸುರೇಶ್ ರಾವ್. ಬಿ., ಪ್ರಚೇತ್ ಆಳ್ವ, ಮಲ್ಲಿಕಾ

ಯಕ್ಷಗಾನ ಪೋಷಕ ಪುಳಿತ್ತಡಿ ಪದ್ಮನಾಭ ಆಚಾರ್ಯರಿಗೆ ಶ್ರದ್ಧಾಂಜಲಿ Read More »

ಶ್ರೀಕ್ಷೇತ್ರ ಧರ್ಮಸ್ಥಳ ಗ್ರಾಮಭಿವೃದ್ಧಿ ಯೋಜನೆ ಬಿ. ಸಿ ಟ್ರಸ್ಟ್ ವಿಟ್ಲ ಪೆರ್ನೆ ವಲಯದಿಂದ ಉಚಿತ ಕಣ್ಣು ತಪಾಸಣಾ ಶಿಬಿರ

ಪೆರ್ನೆ: ಶ್ರೀಕ್ಷೇತ್ರ ಧರ್ಮಸ್ಥಳ ಗ್ರಾಮಭಿವೃದ್ಧಿ ಯೋಜನೆ ಬಿ. ಸಿ ಟ್ರಸ್ಟ್ (ರಿ) ವಿಟ್ಲಪೆರ್ನೆ ವಲಯದ ವತಿಯಿಂದ ಕೆಮ್ಮನ್ ಪಲ್ಕೆ, ಪೆರ್ಲಾಪು ಎ ಮತ್ತು ಪೆರ್ಲಾಪು ಬಿ ಒಕ್ಕೂಟ ಹಾಗೂ ಪೆರ್ನೆ ಶೌರ್ಯ ವಿಪತ್ತು ನಿರ್ವಹಣಾ ಘಟಕದ ಪ್ರಾಯೋಜಕತ್ವದಲ್ಲಿ ಉಚಿತ ಕಣ್ಣು ತಪಾಸಣಾ ಶಿಬಿರ ಪೆರ್ಲಾಪು ರೋಟರಿ ಸಮುದಾಯ ಸಭಾಭವನದಲ್ಲಿ ನಡೆಯಿತು. ಕಡೇಶಿವಾಲಯ ರೋಟರಿ ಸಮುದಾಯದಳದ ಅಧ್ಯಕ್ಷ ಕಿಶೋರ್ ಕುಮಾರ್.ಬಿ ಶಿಬಿರ ಉದ್ಘಾಟಿಸಿದರು. ಮಾಜಿ ಅಧ್ಯಕ್ಷ ಸಂಜೀವ ಪೂಜಾರಿ, ಸುರತ್ಕಲ್ ಐ ಮಿತ್ರದ ಡಾ ರಾಮಚಂದ್ರ ಮತ್ತು ಪುಷ್ಪರಾಜ್

ಶ್ರೀಕ್ಷೇತ್ರ ಧರ್ಮಸ್ಥಳ ಗ್ರಾಮಭಿವೃದ್ಧಿ ಯೋಜನೆ ಬಿ. ಸಿ ಟ್ರಸ್ಟ್ ವಿಟ್ಲ ಪೆರ್ನೆ ವಲಯದಿಂದ ಉಚಿತ ಕಣ್ಣು ತಪಾಸಣಾ ಶಿಬಿರ Read More »

ಕುದ್ಮಾರು ಕೆಲಂಬೀರಿ ಶ್ರೀ ಬ್ರಹ್ಮ ಬೈದೆರುಗಳ ಗರಡಿಯಲ್ಲಿ 49ನೇ ವರ್ಷದ ಶ್ರೀ ಬ್ರಹ್ಮ ಬೈದೆರುಗಳ ನೇಮೋತ್ಸವ | ಸಭಾ ಕಾರ್ಯಕ್ರಮ

ಪುತ್ತೂರು: ಕಡಬ ತಾಲೂಕಿನ ಕುದ್ಮಾರು ಗ್ರಾಮದ ಕೆಲಂಬೀರಿ ಶ್ರೀ ಬ್ರಹ್ಮ ಬೈದೆರುಗಳ ಗರಡಿ ಯಲ್ಲಿ 49ನೇ ವರ್ಷದ ಶ್ರೀ ಬ್ರಹ್ಮ ಬೈದೆರುಗಳ ನೇಮೋತ್ಸವ ನಡೆಯಿತು. ಈ ಪ್ರಯುಕ್ತ ನಡೆದ ಸಭಾ ಕಾರ್ಯಕ್ರಮವನ್ನು ಉದ್ಘಾಟಿಸಿದ ಪುತ್ತೂರು ಬ್ರಹ್ಮಶ್ರೀ ನಾರಾಯಣಗುರು ಬಿಲ್ಲವ ಸಂಘದ ಅಧ್ಯಕ್ಷ ಸತೀಶ್ ಕುಮಾರ್ ಕೆಡೆಂಜಿ ಮಾತನಾಡಿ, ಕಳೆದ 48 ವರ್ಷಗಳಿಂದ ಬೈದೆರುಗಳ ನೇಮೋತ್ಸವ ವಿಜೃಂಭಣೆಯಿಂದ ನಡೆಯುವುದರ ಜತೆಗೆ ಊರಿನ ಎಲ್ಲಾ ಸಮುದಾಯದವರು ಕ್ಷೇತ್ರದ ಭಕ್ತರಾಗಿ ಕ್ಷೇತ್ರ ಅಭಿವೃದ್ಧಿಯಾಗಿದೆ. ತೊಂದರೆಗೊಳಗಾದವರಿಗೆ ಕೋಟಿ-ಚೆನ್ನಯರ ಅಭಯ ನೀಡಿದೆ. ಇಲ್ಲಿ ಬೇರೆ

ಕುದ್ಮಾರು ಕೆಲಂಬೀರಿ ಶ್ರೀ ಬ್ರಹ್ಮ ಬೈದೆರುಗಳ ಗರಡಿಯಲ್ಲಿ 49ನೇ ವರ್ಷದ ಶ್ರೀ ಬ್ರಹ್ಮ ಬೈದೆರುಗಳ ನೇಮೋತ್ಸವ | ಸಭಾ ಕಾರ್ಯಕ್ರಮ Read More »

ಎ.2-3 : ಶಾಂತಿಗೋಡು ವಿಷ್ಣುಮೂರ್ತಿ ದೇವಸ್ಥಾನದಲ್ಲಿ ಜಾತ್ರೋತ್ಸವ | ಭಕ್ತರ ಸಮ್ಮುಖದಲ್ಲಿ ನಡೆದ ಪೂರ್ವಭಾವಿ ಸಭೆ

ಪುತ್ತೂರು: ಶಾಂತಿಗೋಡು ವಿಷ್ಣುಮೂರ್ತಿ ದೇವಸ್ಥಾನದಲ್ಲಿ ಎ.2 ಹಾಗೂ 3 ರಂದು ನಡೆಯಲಿರುವ ವರ್ಷಾವಧಿ ಜಾತ್ರೋತ್ಸವದ ಪ್ರಯುಕ್ತ ಪೂರ್ವಭಾವಿ ಸಭೆ ನಡೆಯಿತು. ಸಭೆಯಲ್ಲಿ ಜಾತ್ರೋತ್ಸವದ ಯಶಸ್ಸಿಗಾಗಿ ಚರ್ಚಿಸಲಾಯಿತು. ಈ ಸಂದರ್ಭದಲ್ಲಿ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಸುಬ್ರಹ್ಮಣ್ಯ ತೊಲ್ಪಾಡಿ, ದೇವಸ್ಥಾನದ ಅರ್ಚಕ ರಾಮಕೃಷ್ಣ ಭಟ್, ಜಾತ್ರೋತ್ಸವ ಸಮಿತಿ ಅಧ್ಯಕ್ಷ ಹೊನ್ನಪ್ಪ ಗೌಡ ಕೈಂದಾಡಿ, ಸುಬ್ರಮಣ್ಯ ಹೆಬ್ಬಾರ್ ಸೇರಾಜೆ, ಉದಯ ಶಂಕರ್ ಭಟ್, ನಾಗೇಶ್ ಸರಕಾರೆ, ಹರೀಶ್ ಕೈಂದಾಡಿ, ಬಾಬು ಗೌಡ ಕೈಂದಾಡಿ, ವಿಶ್ವನಾಥ ಬಲ್ಯಾಯ ಮುಂದೋಡಿ, ಬಾಲಕೃಷ್ಣ ಗೌಡ ತೋಟ,

ಎ.2-3 : ಶಾಂತಿಗೋಡು ವಿಷ್ಣುಮೂರ್ತಿ ದೇವಸ್ಥಾನದಲ್ಲಿ ಜಾತ್ರೋತ್ಸವ | ಭಕ್ತರ ಸಮ್ಮುಖದಲ್ಲಿ ನಡೆದ ಪೂರ್ವಭಾವಿ ಸಭೆ Read More »

ಕಾಂಗ್ರೆಸ್ ಮುಖಂಡ ಕಾವು ಹೇಮನಾಥ ಶೆಟ್ಟಿ ಕಾರು ಅಪಘಾತ | ಅಪಾಯದಿಂದ ಪಾರು

ಪುತ್ತೂರು: ಕಾಂಗ್ರೆಸ್ ಮುಖಂಡ ಕಾವು ಹೇಮನಾಥ ಶೆಟ್ಟಿ ಅವರ ಕಾರು ಅಪಘಾತಗೊಂಡ ಘಟನೆ ಬೆದ್ರಾಳದಲ್ಲಿ ನಡೆದಿದೆ. ಪುರುಷರಕಟ್ಟೆ ಕಡೆಯಿಂದ ಪುತ್ತೂರಿಗೆ ಬರುತ್ತಿದ್ದ ಇನ್ನೋವಾ ಕಾರಿಗೆ ಮುಂಭಾಗದಿಂದ ಅಡ್ಡಾದಿಡ್ಡಿಯಾಗಿ ಚಲಿಸುತ್ತಾ ಬಂದ ಕಾರನ್ನು ಗಮನಿಸಿ ಅಪಘಾತ ತಪ್ಪಿಸಲು ಇನ್ನೋವಾ ಕಾರು ಚಾಲಕ ರಸ್ತೆ ಬದಿಯಲ್ಲಿರುವ ಸೇಫ್ ರೂಟಿಗೆ ಚಲಾಯಿಸುವ ಸಂದರ್ಭದಲ್ಲಿ ರಸ್ತೆ ಬದಿಯಲ್ಲಿರುವ ಕೆಂಪು ಕಲ್ಲಿನ ಕಟ್ಟೆಗೆ ಇನ್ನೋವಾ ಕಾರು ಬಡಿದಿದ್ದು ಈ ರಭಸಕ್ಕೆ ಇನ್ನೋವಾ ಕಾರು ಸಂಪೂರ್ಣ ಜಖಂ ಗೊಂಡಿದ್ದು ಎದುರಿಂದ ಬಂದ ಫೋರ್ಡ್ ಕಾರು ಕೂಡ

ಕಾಂಗ್ರೆಸ್ ಮುಖಂಡ ಕಾವು ಹೇಮನಾಥ ಶೆಟ್ಟಿ ಕಾರು ಅಪಘಾತ | ಅಪಾಯದಿಂದ ಪಾರು Read More »

ಬೈಕ್-ಬಸ್ ಡಿಕ್ಕಿ | ಬೈಕ್ ಸವಾರ ಸ್ಥಳದಲ್ಲೇ ಮೃತ್ಯು

ಪುತ್ತೂರು: ಬೈಕ್ ಹಾಗೂ ಬಸ್ ನಡುವೆ ಅಪಘಾತ ಸಂಭವಿಸಿ ಬೈಕ್ ಸವಾರ ಸ್ಥಳದಲ್ಲೇ ಮೃತಪಟ್ಟ ಘಟನೆ ಭಾನುವಾರ ಸಂಜೆ ನಡೆದಿದೆ. ಕಬಕ ಗ್ರಾಮದ ಪೋಳ್ಯದಲ್ಲಿ ಈ ಅಪಘಾತ ನಡೆದಿದೆ. ಮೃತಪಟ್ಟವರ ಬಗ್ಗೆ ಮಾಹಿತಿ ತಿಳಿದು ಬಂದಿಲ್ಲ. ಘಟನಾ ಸ್ಥಳಕ್ಕೆ  ಮಾಜಿ ಶಾಸಕ ಸಂಜೀವ ಮಠಂದೂರು ಭೇಟಿ ನೀಡಿದ್ದಾರೆ.

ಬೈಕ್-ಬಸ್ ಡಿಕ್ಕಿ | ಬೈಕ್ ಸವಾರ ಸ್ಥಳದಲ್ಲೇ ಮೃತ್ಯು Read More »

ಗೇರು ತೋಪಿಗೆ ಅಕಸ್ಮಿಕ ಬೆಂಕಿ : ಅಪಾರ ಗಿಡಗಳ ನಾಶ

ಪುತ್ತೂರು: ಚಿಕ್ಕಮುಡ್ನೂರು ಗ್ರಾಮದ ರಾಗಿದಕುಮೇರು ಬಳಿಯ ಕಡ್ಲಿಮಾರ್ ಎಂಬಲ್ಲಿ ಗೇರು ತೋಪಿಗೆ ಬೆಂಕಿ ತಗುಲಿ ಅಪಾರ ಪ್ರಮಾಣದ ಗೇರು ಗಿಡಗಳು ನಾಶವಾದ ಘಟನೆ ಭಾನುವಾರ ಸಂಜೆ ನಡೆದಿದೆ. ನೂರಾರು ಗೇರು ಗಿಡಗಳಿರುವ ಗುಡ್ಡದಲ್ಲಿ ಒಂದು ಕಾಣಿಸಿಕೊಂಡ ಬೆಂಕಿ ಕ್ಷಣ ಮಾತ್ರದಲ್ಲಿ ಇಡೀ ಗೇರು ತೋಪಿಗೆ ಆವರಿಸಿತ್ತು. ದಿವಾಕರ ರೈ ಎಂಬವರಿಗೆ ಸೇರಿದ ಗೇರು ತೋಟದಲ್ಲಿ ಹೇಗೆ ಬೆಂಕಿ ಹತ್ತಿಕೊಂಡಿದೆ ಎಂಬುದು ಗೊತ್ತಾಗಿಲ್ಲ. ತೋಟದ ಕೆಳಭಾಗದಲ್ಲಿ ವಿದ್ಯುತ್ ತಂತಿ ಹಾದು ಹೋಗಿದ್ದು ಅದರಿಂದ ಶಾರ್ಟ್ ಆಗಿ ಬೆಂಕಿ ಕಿಡಿ

ಗೇರು ತೋಪಿಗೆ ಅಕಸ್ಮಿಕ ಬೆಂಕಿ : ಅಪಾರ ಗಿಡಗಳ ನಾಶ Read More »

error: Content is protected !!
Scroll to Top