ಪುತ್ತೂರು

ರಿಕ್ಷಾಗಳೆರಡು ಮುಖಾಮುಖಿ ಡಿಕ್ಕಿ | ಓರ್ವ ಮೃತ್ಯು, 9 ಮಂದಿಗೆ ಗಾಯ

ವಿಟ್ಲ: ಎರಡು ರಿಕ್ಷಾಗಳ ನಡುವೆ ನಡೆದ ಅಪಘಾತದಲ್ಲಿ ಓರ್ವ ಮೃತಪಟ್ಟು, 9 ಮಂದಿ ಗಾಯಗೊಂಡ ಘಟನೆ ಪಡಿಬಾಗಿಲು ಅಳಿಕೆ ಸಮೀಪ ನಡೆದಿದೆ. ಮಡಿಯಾಲ ನಿವಾಸಿ ಅಮ್ಮು ಮೂಲ್ಯ (69) ಮೃತಪಟ್ಟವರು. ಎರುಂಬು ನಿವಾಸಿ ಹಮೀದ್, ಪಡಿಬಾಗಿಲು ನಿವಾಸಿ ರವಿ ಎಂಬವರಿಗೆ ಸೇರಿದ ರಿಕ್ಷಾಗಳಾಗಿದ್ದು, ಅಪಘಾತದ ತೀವ್ರತೆಗೆ ರಿಕ್ಷಾಗಳ ಮುಂಭಾಗ ನಜ್ಜುಗುಜ್ಜಾಗಿದೆ. ಹೆಚ್ಚಿನ ಮಾಹಿತಿ ತಿಳಿದು ಬಂದಿಲ್ಲ.

ರಿಕ್ಷಾಗಳೆರಡು ಮುಖಾಮುಖಿ ಡಿಕ್ಕಿ | ಓರ್ವ ಮೃತ್ಯು, 9 ಮಂದಿಗೆ ಗಾಯ Read More »

ಬೊಳುವಾರು ವಿಶ್ವಕರ್ಮ ಸಭಾಭವನದಲ್ಲಿ ತುಳಸಿಕಟ್ಟೆ ಪ್ರತಿಷ್ಠೆ | ಎಸ್.ಕೆ.ಜಿ.ಐ. ಸೊಸೈಟಿಯ ವಜ್ರ ಮಹೋತ್ಸವ ಅಂಗವಾಗಿ ಕೊಡುಗೆಯಾಗಿ ನೀಡಿದ ಸ್ಟೈನ್’ಲೆಸ್ ಸ್ಟೀಲ್ ಸಿಂಕ್ ಉದ್ಘಾಟನೆ

ಪುತ್ತೂರು: ಬೊಳುವಾರು ವಿಶ್ವಕರ್ಮ ಸಭಾಭವನಕ್ಕೆ ಎಸ್.ಕೆ. ಗೋಲ್ಡ್ ಸ್ಮಿತ್ಸ್ ಇಂಡಸ್ಟ್ರಿಯಲ್ ಕೋ-ಆಪರೇಟಿವ್ ಸೊಸೈಟಿ ಸುಮಾರು 1.5 ಲಕ್ಷ ರೂ. ವೆಚ್ಚದಲ್ಲಿ ಕೊಡುಗೆಯಾಗಿ ನೀಡಿದ ಸ್ಟೈನ್’ಲೆಸ್ ಸ್ಟೀಲ್ ಸಿಂಕ್’ನ ಉದ್ಘಾಟನೆ ಹಾಗೂ ಸ್ಥಳಾಂತರಗೊಂಡ ತುಳಸಿ ಕಟ್ಟೆಯ ಪ್ರತಿಷ್ಠಾಪನಾ ಕಾರ್ಯಕ್ರಮ ಶನಿವಾರ ನಡೆಯಿತು. ಈ ಸಂದರ್ಭದಲ್ಲಿ ನಡೆದ ಸಭಾ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಎಸ್.ಕೆ. ಗೋಲ್ಡ್ ಸ್ಮಿತ್ಸ್ ಇಂಡಸ್ಟ್ರಿಯಲ್ ಕೋ-ಆಪರೇಟಿವ್ ಸೊಸೈಟಿ ಉಪಾಧ್ಯಕ್ಷ ಆನಂದ ಆಚಾರ್ಯ ಅಜ್ಜಿನಡ್ಕ ಮಾತನಾಡಿ, ಸೊಸೈಟಿ ಇಂದು ವಜ್ರ ಮಹೋತ್ಸವದ ಸಂಭ್ರಮದಲ್ಲಿದೆ. ಹಾಗಾಗಿ ಈ ವರ್ಷ

ಬೊಳುವಾರು ವಿಶ್ವಕರ್ಮ ಸಭಾಭವನದಲ್ಲಿ ತುಳಸಿಕಟ್ಟೆ ಪ್ರತಿಷ್ಠೆ | ಎಸ್.ಕೆ.ಜಿ.ಐ. ಸೊಸೈಟಿಯ ವಜ್ರ ಮಹೋತ್ಸವ ಅಂಗವಾಗಿ ಕೊಡುಗೆಯಾಗಿ ನೀಡಿದ ಸ್ಟೈನ್’ಲೆಸ್ ಸ್ಟೀಲ್ ಸಿಂಕ್ ಉದ್ಘಾಟನೆ Read More »

ಸಂತ ಫಿಲೋಮಿನಾ ಕಾಲೇಜಿನ ಉಪಪ್ರಾಂಶುಪಾಲ ಪ್ರೊ| ಗಣೇಶ್‌ಭಟ್‌ರವರಿಗೆ ಬೀಳ್ಕೊಡುಗೆ

ಪುತ್ತೂರು: ಸಂತ ಫಿಲೋಮಿನಾ ಕಾಲೇಜಿನಲ್ಲಿ ಉಪನ್ಯಾಸಕರಾಗಿ 36 ವರ್ಷಗಳ ಸಾರ್ಥಕ ಸೇವೆ ಸಲ್ಲಿಸಿ ಸೇವಾನಿವೃತ್ತಿ ಹೊಂದಿದ ಉಪಪ್ರಾಂಶುಪಾಲ ಪ್ರೊ| ಗಣೇಶ್‌ಭಟ್‌ರವರಿಗೆ ಕಾಲೇಜಿನ ಸ್ಟಾಫ್‌ಅಸೋಸಿಯೇಶನ್‌ವತಿಯಿಂದ ಬೀಳ್ಕೊಡುಗೆ ಕಾರ್ಯಕ್ರಮ ನಡೆಯಿತು. ಅಧ್ಯಕ್ಷತೆ ವಹಿಸಿದ್ದ ಕಾಲೇಜಿನ ಸಂಚಾಲಕ ಅತಿ ವಂ| ಲಾರೆನ್ಸ್‌ಮಸ್ಕರೇನಸ್‌ಮಾತನಾಡಿ, ನಿವೃತ್ತಿಯು ಹೊಸ ಜೀವನದ ಬಾಗಿಲನ್ನು ತೆರೆದಿಡುತ್ತದೆ. ಸಾಮಾಜಿಕ ಕಳಕಳಿಯ ಕಾರ್ಯಕ್ರಮಗಳಲ್ಲಿ ಸಕ್ರಿಯವಾಗಿ ಪಾಲ್ಗೊಂಡು ಸಂತೃಪ್ತ ಜೀವನ ನಡೆಸಲು ಸೇವಾ ನಿವೃತ್ತಿಯು ಅನುವು ಮಾಡಿಕೊಡುತ್ತದೆ ಎಂದು ಹೇಳಿದರು. ಮುಖ್ಯ ಅತಿಥಿಯಾಗಿ ಕಾಲೇಜಿನ ಪ್ರಿನ್ಸಿಪಾಲ್ ವಂ| ಡಾ| ಆಂಟೊನಿ ಪ್ರಕಾಶ್‌ಮೊಂತೆರೋರ ಮಾತನಾಡಿ,

ಸಂತ ಫಿಲೋಮಿನಾ ಕಾಲೇಜಿನ ಉಪಪ್ರಾಂಶುಪಾಲ ಪ್ರೊ| ಗಣೇಶ್‌ಭಟ್‌ರವರಿಗೆ ಬೀಳ್ಕೊಡುಗೆ Read More »

ಪುತ್ತೂರು: ಎಸ್‌ಡಿಪಿ ರೆಮಿಡೀಸ್ & ರಿಸರ್ಚ್ ಸೆಂಟರ್‌ ಅರ್ಪಿಸುವ ಕಲೋಪಾಸನಾ’ ಸಾಂಸ್ಕೃತಿಕ ಕಲಾ ಸಂಭ್ರಮಕ್ಕೆ ಚಾಲನೆ

ಪುತ್ತೂರು: ಪರ್ಲಡ್ಕ ಎಸ್‌ಡಿಪಿ ರೆಮಿಡೀಸ್ ಆಂಡ್ ರಿಸರ್ಚ್ ಸೆಂಟರ್‌ನ ಆವಣದಲ್ಲಿ ಮೂರು ದಿನಗಳ ಕಾಲ ಸಂಭ್ರಮಿಸಲಿರುವ 20 ನೇ ವರ್ಷದ ಎಸ್‌ಡಿಪಿ ‘ಕಲೋಪಾಸನಾ -2024’ ಸಾಂಸ್ಕೃತಿಕ ಕಲಾ ಸಂಭ್ರಮಕ್ಕೆ ಶನಿವಾರ ಸಂಜೆ ಚಾಲನೆ ನೀಡಲಾಯಿತು. ವಿದ್ವಾನ್ ಸಂದೀಪ್ ನಾರಾಯಣ್ ಚೆನ್ನೈ ಹಾಗೂ ಪಂಡಿತ್ ಜಯತೀರ್ಥ ಮೇವುಂಡಿ ಬೆಂಗಳೂರು ಕಾರ್ಯಕ್ರಮವನ್ನು ದೀಪ ಬೆಳಗಿಸಿ ಉದ್ಘಾಟಿಸಿ ಚಾಲನೆ ನೀಡಿದರು. ವಿದ್ವಾನ್ ಸಂದೀಪ್ ನಾರಾಯಣ್ ಚೆನ್ನೈ ಮಾತನಾಡಿ, ಕಳೆದ ಇಪ್ಪತ್ತು ವರ್ಷಗಳಿಂದ ನಿರಂತರವಾಗಿ ಸಂಗೀತದ ಉತ್ತಮ ಕಾರ್ಯಕ್ರಮ ನೀಡುತ್ತಿದ್ದಾರೆ. ಪ್ರತಿ ವರ್ಷ

ಪುತ್ತೂರು: ಎಸ್‌ಡಿಪಿ ರೆಮಿಡೀಸ್ & ರಿಸರ್ಚ್ ಸೆಂಟರ್‌ ಅರ್ಪಿಸುವ ಕಲೋಪಾಸನಾ’ ಸಾಂಸ್ಕೃತಿಕ ಕಲಾ ಸಂಭ್ರಮಕ್ಕೆ ಚಾಲನೆ Read More »

ಅಜಾತಶತ್ರು ಅರಿಯಡ್ಕ ಚಿಕ್ಕಪ್ಪ ನಾಯ್ಕ್ ನವತಿ ಸಂಭ್ರಮಾಚರಣೆ | ಅರಿಯಡ್ಕ ಚಿಕ್ಕಪ್ಪ ನಾಯ್ಕ್ ರಿಗೆ ಸೇವಾರತ್ನ ಬಿರುದಿನೊಂದಿಗೆ ಗೌರವಾರ್ಪಣೆ

ಪುತ್ತೂರು: ಪರಿಪೂರ್ಣ ಜೀವನವನ್ನು ಮೌಲ್ಯಾಧಾರಿತವಾಗಿ ಸಮಾಜದಲ್ಲಿನ ಹಲವಾರು ಸಂಕಷ್ಟಗಳ ನಡುವೆ ನಡೆಸುವುದು ಸುಲಭದ ಕೆಲಸವಲ್ಲ. ಆದರೆ ಅಜಾತಶತ್ರು ಚಿಕ್ಕಪ್ಪ ನಾಯ್ಕ್ ರವರು ಇದಕ್ಕೆ ಹೊರತು ಎಂಬಂತೆ ತನ್ನ ಜೀವನದಲ್ಲಿ ಒಂದು ಸಿದ್ಧಾಂತ ಇಟ್ಟುಕೊಂಡು, ಸಮುದಾಯದ ಬಗ್ಗೆ ಚಿಂತನೆ ಇಟ್ಟುಕೊಂಡು ಬದುಕು ಸಾಗಿಸಿದವರು ಎಂದು ಮೂಡಬಿದ್ರೆ ಆಳ್ವಾಸ್ ಶಿಕ್ಷಣ ಸಂಸ್ಥೆಗಳ ಅಧ್ಯಕ್ಷ ಡಾ.ಮೋಹನ್ ಆಳ್ವ ಹೇಳಿದರು. ಅವರು ಶನಿವಾರ ಕೊಂಬೆಟ್ಟು ಸುಂದರ ರಾಮ ಶೆಟ್ಟಿ ಸ್ಮಾರಕ ಬಂಟರ ಭವನದಲ್ಲಿ ಅಜಾತಶತ್ರು ಅರಿಯಡ್ಕ ಚಿಕ್ಕಪ್ಪ ನಾಯ್ಕ್ ಸಂಭ್ರಮಾಚರಣೆ ಸಮಿತಿ ವತಿಯಿಂದ

ಅಜಾತಶತ್ರು ಅರಿಯಡ್ಕ ಚಿಕ್ಕಪ್ಪ ನಾಯ್ಕ್ ನವತಿ ಸಂಭ್ರಮಾಚರಣೆ | ಅರಿಯಡ್ಕ ಚಿಕ್ಕಪ್ಪ ನಾಯ್ಕ್ ರಿಗೆ ಸೇವಾರತ್ನ ಬಿರುದಿನೊಂದಿಗೆ ಗೌರವಾರ್ಪಣೆ Read More »

ಹೆಣ್ಣು ಗಂಡಿನ ನಡುವೆ ಲಿಂಗಾನುಪಾತ ಅಪಾಯಕಾರಿಯಾಗಿದೆ | ಬೇಟಿ ಬಚಾವೋ ಬೇಟಿ ಪಡಾವೋ ಕಾರ್ಯಕ್ರಮದಲ್ಲಿ ಶಾಸಕ ಅಶೋಕ್ ರೈ

ಪುತ್ತೂರು: ದೇಶದಲ್ಲಿ ಹೆಣ್ಣು ಮತ್ತು ಗಂಡು ಮಕ್ಕಳ ನಡುವಿನ ನಡುವೆ ಅನುಪಾತ ಹೆಚ್ಚಾಗಿದ್ದು ಇದು ಅಪಾಯಕಾರಿ ಬೆಳವಣಿಗೆಯಾಗಿದೆ ಎಂದು ಶಾಸಕ ಅಶೋಕ್ ರೈ ಹೇಳಿದರು. ಅವರು ಪುತ್ತೂರಿನ ಸಂತ ವಿಕ್ಟರನ ಬಾಲಿಕಾ ಪ್ರೌಢ ಶಾಲೆಯಲ್ಲಿ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ, ಶಿಶು ಅಭಿವೃದ್ದಿ ಯೋಜನೆ ಕ್ಷೇತ್ರ ಶಿಕ್ಷಣ ಅಧಿಕಾರಿಗಳ ಕಚೇರಿ ಆಶ್ರಯದಲ್ಲಿ ನಡೆದ ಬೇಟಿ ಬಚಾವೋ ಬೇಟಿ ಪಡಾವೋ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು. ಸಮಾಜದಲ್ಲಿ ವಿದ್ಯಾವಂತ ಹೆಣ್ಣು ಮಕ್ಕಳು ಅಧಿಕವಾದರೆ ಮಾತ್ರ ನಮ್ಮ ದೇಶ ಅಭಿವೃದ್ದಿಯತ್ತ

ಹೆಣ್ಣು ಗಂಡಿನ ನಡುವೆ ಲಿಂಗಾನುಪಾತ ಅಪಾಯಕಾರಿಯಾಗಿದೆ | ಬೇಟಿ ಬಚಾವೋ ಬೇಟಿ ಪಡಾವೋ ಕಾರ್ಯಕ್ರಮದಲ್ಲಿ ಶಾಸಕ ಅಶೋಕ್ ರೈ Read More »

ಆಕರ್ಷಣ್ ಇಂಡಸ್ಟ್ರೀಸ್ ನಿಂದ 5 ತಾಲೂಕಿನ ಗ್ರಾಹಕರಿಗೆ ಭರ್ಜರಿ ಕೊಡುಗೆ | 5 ಚಿನ್ನ, 25 ಬೆಳ್ಳಿ ನಾಣ್ಯ ಗೆಲ್ಲುವ ಸುವರ್ಣಾವಕಾಶ

ಪುತ್ತೂರು: ವಿವಿಧ ಕಾಂಕ್ರೀಟ್ ಉತ್ಪನ್ನಗಳ ಉತ್ಪಾದನಾ ಕ್ಷೇತ್ರದಲ್ಲಿ, ವಿಶೇಷವಾಗಿ ಕೃಷಿಕರಿಗೆ ಅತೀ ಅಗತ್ಯವಿರುವ ಉತ್ಪನ್ನಗಳ ತಯಾರಿಕೆಯಲ್ಲಿ ಕಳೆದ ಇಪ್ಪತ್ತೆಂಟು ವರ್ಷಗಳಿಂದ ಆಕರ್ಷಣ್ ಇಂಡಸ್ಟ್ರೀಸ್ ಸಂಸ್ಥೆಯು ಉತ್ಪನ್ನಗಳ ಗುಣಮಟ್ಟ, ತಂತ್ರಜ್ಞಾನ ಹಾಗೂ ಸೇವೆಯ ಮೂಲಕ ತನ್ನದೇ ಆದ ಛಾಪನ್ನು ಒತ್ತಿ ಯಶಸ್ಸಿನ ಹೆಜ್ಜೆಯನ್ನು ಇಡುತ್ತಿದೆ. ಕೃಷಿಕರ ಅನುಕೂಲಕ್ಕಾಗಿ ವಿವಿಧ ಕೃಷಿ ಉಪಯೋಗಿ ಉತ್ಪನ್ನಗಳಾದ ಡ್ರ್ಯಾಗನ್ ಫ್ರುಟ್ ಸ್ಟ್ಯಾಂಡ್, ಬೇಲಿ ಕಂಬ, ವಿಯೆಟ್ನಾಮ್ ಮಾಡೆಲ್ ಪೆಪ್ಪರ್ ಫಾರ್ಮ್ ಕಾಂಕ್ರೀಟ್ ಪೋಲ್ ಹಾಗೂ ವಯ್ ಪೋಲ್ ಗಳನ್ನು ಮಾರಾಟ ಮಾಡುತ್ತಿದೆ. ಇದೀಗ

ಆಕರ್ಷಣ್ ಇಂಡಸ್ಟ್ರೀಸ್ ನಿಂದ 5 ತಾಲೂಕಿನ ಗ್ರಾಹಕರಿಗೆ ಭರ್ಜರಿ ಕೊಡುಗೆ | 5 ಚಿನ್ನ, 25 ಬೆಳ್ಳಿ ನಾಣ್ಯ ಗೆಲ್ಲುವ ಸುವರ್ಣಾವಕಾಶ Read More »

ಸುಳ್ಯ ಬಿಜೆಪಿ ಮಂಡಲ ಸಮಿತಿ ಕಾರ್ಯದರ್ಶಿಯಾಗಿ ಗಣೇಶ್ ಉದನಡ್ಕ ಆಯ್ಕೆ

ಕಾಣಿಯೂರು: ಸುಳ್ಯ ಬಿಜೆಪಿ ಮಂಡಲ ಸಮಿತಿ ಕಾರ್ಯದರ್ಶಿಯಾಗಿ ಚಾರ್ವಾಕ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಅಧ್ಯಕ್ಷ ಗಣೇಶ್ ಉದನಡ್ಕ ಆಯ್ಕೆಯಾಗಿದ್ದಾರೆ. ಗಣೇಶ್ ಉದನಡ್ಕ ಪುತ್ತೂರು ಪಿ.ಎಲ್.ಡಿ. ಬ್ಯಾಂಕ್ ಮಾಜಿ ನಿರ್ದೇಶಕರಾಗಿದ್ದಾರೆ. ಸವಣೂರು ಬಿಜೆಪಿ ಮಹಾಶಕ್ತಿ ಕೇಂದ್ರದ ಅಧ್ಯಕ್ಷರಾಗಿರುತ್ತಾರೆ. ಕಾಣಿಯೂರು ಗ್ರಾಪಂ ಉಪಾಧ್ಯಕ್ಷರಾಗಿ, ಹಾಲಿ ಸದಸ್ಯರಾಗಿ, ಕಾಣಿಯೂರು ವರ್ತಕ ಸಂಘದ ಅಧ್ಯಕ್ಷರಾಗಿ, ಕಾಣಿಯೂರು ಕಣ್ವರ್ಪಿ ಆಟೋ ರಿಕ್ಷಾ ಚಾಲಕ ಮಾಲಕರ ಸಂಘದ ಗೌರವಾಧ್ಯಕ್ಷರಾಗಿ, ಪುಣ್ಚತ್ತಾರು ಶ್ರೀ ಹರಿ ಆಟೋ ರಿಕ್ಷಾ ಚಾಲಕ ಮಾಲಕ ಸಂಘದ ಗೌರವಾಧ್ಯಕ್ಷರಾಗಿ, ಹಲವಾರು

ಸುಳ್ಯ ಬಿಜೆಪಿ ಮಂಡಲ ಸಮಿತಿ ಕಾರ್ಯದರ್ಶಿಯಾಗಿ ಗಣೇಶ್ ಉದನಡ್ಕ ಆಯ್ಕೆ Read More »

ಇಂದು ಮೆಸ್ಕಾಂ ಪವರ್ ಟ್ರೋಫಿ ಲೀಗ್ ಮಾದರಿಯ ಕ್ರಿಕೆಟ್ ಪಂದ್ಯಾಟ

ಪುತ್ತೂರು: 5ನೇ ವರ್ಷದ ಮೆಸ್ಕಾಂ ಪವರ್ ಟ್ರೋಫಿ ಲೀಗ್ ಮಾದರಿ ಕ್ರಿಕೆಟ್ ಪಂದ್ಯಾಟ ಇಂದು ಕೊಂಬೆಟ್ಟು ತಾಲೂಕು ಕ್ರೀಡಾಂಗಣದಲ್ಲಿ ನಡೆಯಲಿದೆ ಪುತ್ತೂರು ನಗರ ಉಪವಿಭಾಗದ ಸಾರಥ್ಯದಲ್ಲಿ ಪುತ್ತೂರು, ಸುಳ್ಯ, ಕಡಬ, ನೆಲ್ಯಾಡಿ ಮತ್ತು ಸಬ್ರಮಣ್ಯ ಮೆಸ್ಕಾಂ ಉಪವಿಭಾಗಗಳಿಂದ ಸುಮಾರು 12 ತಂಡಗಳು ಆಡಲಿವೆ ಪ್ರತಿ  ದಿನ ಒತ್ತಡದಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ಸಿಬ್ಬಂದಿಗಳಿಗೆ ಒಂದು ದಿನದ ಪಂದ್ಯಾಟವನ್ನು ಪ್ರತಿ ವರ್ಷ ಪುತ್ತೂರು ಮೆಸ್ಕಾಂನ ಸಹಾಯಕ ಕಾರ್ಯನಿರ್ವಾಹಕ ಇಂಜಿನಿಯರ್ ರಾಮಚಂದ್ರ ಎ.  ಇವರ ನೇತೃತ್ವದಲ್ಲಿ ಪುತ್ತೂರಿನಲ್ಲಿ ಆಯೋಜಿಸಲಾಗುತ್ತಿದೆ. ಮೆಸ್ಕಾಂ ನ

ಇಂದು ಮೆಸ್ಕಾಂ ಪವರ್ ಟ್ರೋಫಿ ಲೀಗ್ ಮಾದರಿಯ ಕ್ರಿಕೆಟ್ ಪಂದ್ಯಾಟ Read More »

ಪುತ್ತೂರು ಟೆಕ್ಸ್ ಟೈಲ್ಸ್ ಮಾಲಕ ಯಾಹೀಯಾ ಹಾಜಿ ನಿಧನ

ಪುತ್ತೂರು: ಪುತ್ತೂರಿನ ಕೋರ್ಟ್ ರಸ್ತೆಯಲ್ಲಿ ಕಾರ್ಯಾಚರಿಸುತ್ತಿರುವ ಟೆಕ್ಸ್ ಟೈಲ್ಸ್ ಸೆಂಟರ್ ಮಾಲಕ ಯಾಹೀಯಾ ಹಾಜಿ ಮಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ಶುಕ್ರವಾರ ನಿಧನರಾದರು. ಚಿಕ್ಕಪುತ್ತೂರು ನಿವಾಸಿಯಾಗಿರುವ ಅವರು ಕಂಬಳಬೆಟ್ಟು ದಿ.ಮಹಮ್ಮದ್ ಮುಸ್ಲಿಯಾರ್ ಅವರ ಪುತ್ರರಾಗಿದ್ದಾರೆ. ಮೃತರು ಪತ್ನಿ, ಓರ್ವ ಪುತ್ರನನ್ನು ಅಗಲಿದ್ದಾರೆ.

ಪುತ್ತೂರು ಟೆಕ್ಸ್ ಟೈಲ್ಸ್ ಮಾಲಕ ಯಾಹೀಯಾ ಹಾಜಿ ನಿಧನ Read More »

error: Content is protected !!
Scroll to Top