ವಿಶ್ವಗುರುವಾಗುವತ್ತ ಭಾರತದ ಚಿತ್ತ – ಪ್ರೊ ವಿಷ್ಣುಕಾಂತ್ ಚಟ್ಟಪಲ್ಲಿ| ವಿವೇಕಾನಂದದಲ್ಲಿ ಎರಡು ದಿನಗಳ ರಾಷ್ಟ್ರೀಯ ವಿಚಾರ ಸಂಕಿರಣ
ಪುತ್ತೂರು: ವಿಕಸಿತ ಭಾರತದ ಮುನ್ನೋಟಗಳು ಜಗತ್ತಿಗೆ ಕಾಣಲಾರಂಭಿಸಿವೆ. ವಿಜ್ಞಾನ, ಸಂಶೋಧನೆ, ಕ್ರೀಡೆ, ಆರ್ಥಿಕತೆ, ಕೃಷಿ, ವ್ಯವಹಾರ ನಿರ್ವಹಣೆ ಹೀಗೆ ವಿವಿಧ ಕ್ಷೇತ್ರಗಳಲ್ಲಿ ಸಮರ್ಥವಾಗಿ ಭಾರತವು ವಿಶ್ವಗುರುವಾಗುವುದರತ್ತ ಮುನ್ನಡೆಯುತ್ತಿದೆ ಎಂಬುದು ಹೆಮ್ಮೆಯ ವಿಷಯ. ಈ ಎಲ್ಲಾ ಕ್ಷೇತ್ರಗಳಲ್ಲಿಯೂ ಮಹಿಳೆಯರು ವಿಶೇಷವಾಗಿ ಮುಂಚೂಣಿಯಲ್ಲಿ ನಿಂತು ದುಡಿಯುತ್ತಿದ್ದಾರೆ. ಆದ್ದರಿಂದ ಇದನ್ನು ನಾರೀಶಕ್ತಿ ಯುಗ ಎಂದು ಗದಗ ಕರ್ನಾಟಕ ರಾಜ್ಯ ಗ್ರಾಮೀಣಾಭಿವೃದ್ಧಿ ಹಾಗೂ ಪಂಚಾಯತ್ ರಾಜ್ ವಿಶ್ವವಿದ್ಯಾನಿಲಯದ ಕುಲಪತಿ ಪ್ರೊ. ವಿಷ್ಣುಕಾಂತ್ ಚಟ್ಟಪಲ್ಲಿ ಹೇಳಿದರು. ಅವರು ವಿವೇಕಾನಂದ ಕಲಾ, ವಿಜ್ಞಾನ ಮತ್ತು ವಾಣಿಜ್ಯ […]










