ಪುತ್ತೂರು

ವಿದ್ಯಾರಶ್ಮಿ ಕಾಲೇಜಿನಲ್ಲಿ ವಿವೇಚನಾ ಶಕ್ತಿಯ ಹೆಚ್ಚಿಸುವಿಕೆಯ ಕುರಿತು ಮಾಹಿತಿ ಕಾರ್ಯಕ್ರಮ

ಸವಣೂರು: ವಿದ್ಯಾರಶ್ಮಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಮಹಿಳಾ ದೌರ್ಜನ್ಯ ನಿಗ್ರಹ ಘಟಕದ ವತಿಯಿಂದ ಮಾನವನಲ್ಲಿ ವಿವೇಚನಾ ಶಕ್ತಿಯ ಹೆಚ್ಚಿಸುವಿಕೆ ವಿಚಾರದ ಕುರಿತು ಮಾಹಿತಿ ಕಾರ್ಯಕ್ರಮ ನಡೆಯಿತು. ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಸಂಸ್ಥೆಯ ಆಡಳಿತಾಧಿಕಾರಿ, ಇಂಜಿನಿಯರ್ ಅಶ್ವಿನ್ ಎಲ್. ಶೆಟ್ಟಿ, ನಾವು ಜೀವನದಲ್ಲಿ ಏನನ್ನಾದರೂ ಸಾಧಿಸಬೇಕಾದರೆ ನಾವು ಮಾಡುವ ಕೆಲಸ ನಿರಂತರವಾದ ಪ್ರಕ್ರಿಯೆಯಾಗಿರುವಂತೆ ನೋಡಿಕೊಳ್ಳಬೇಕು ಎಂದರು. ಸಂಪನ್ಮೂಲ ವ್ಯಕ್ತಿಯಾಗಿ ಪಂಜದ ನೆಮ್ಮದಿ ಕೌನ್ಸೆಲಿಂಗ್ ಸೆಂಟರ್ ನ ಮಾಲಕಿ ಶ್ರದ್ಧಾ ಲಲಿತ್ ರೈ ಮಾತನಾಡಿ, ಮಾನಸಿಕ ಆರೋಗ್ಯ ಮತ್ತು ಸ್ವಾಸ್ಥ್ಯವನ್ನು […]

ವಿದ್ಯಾರಶ್ಮಿ ಕಾಲೇಜಿನಲ್ಲಿ ವಿವೇಚನಾ ಶಕ್ತಿಯ ಹೆಚ್ಚಿಸುವಿಕೆಯ ಕುರಿತು ಮಾಹಿತಿ ಕಾರ್ಯಕ್ರಮ Read More »

ನಾಳೆ ಕ್ಯಾ.ಬ್ರಿಜೇಶ್ ಚೌಟ ಪುತ್ತೂರು ವಿಧಾನಸಭಾ ಕ್ಷೇತ್ರಕ್ಕೆ ಭೇಟಿ

ಪುತ್ತೂರು: ದ.ಕ.ಜಿಲ್ಲಾ ಲೋಕಸಭೆ ಬಿಜೆಪಿ ಅಭ್ಯರ್ಥಿ ಕ್ಯಾ,ಬ್ರಿಜೇಶ್ ಮಾ.22 ರಂದು ಪುತ್ತೂರು ವಿಧಾನಸಭಾ ಕ್ಷೇತ್ರಕ್ಕೆ ಭೇಟಿ ನೀಡಲಿದ್ದಾರೆ. ಬೆಳಿಗ್ಗೆ 8.30 ಕ್ಕೆ ವಿಟ್ಲ ಪಂಚಲಿಂಗೇಶ್ವರ ದೇವಸ್ಥಾನ, ಬಳಿಕ ವಿಟ್ಲ ಅರಮನೆ, ವಿವಿಧ ದೇವಸ್ಥಾನಳಿಗೆ ಭೇಟಿ ನೀಡಲಿದ್ದು.10 ಗಂಟೆಗೆ ಕಂಬಳಬೆಟ್ಟು ಭಜನಾ ಮಂದಿರದ ಬಳಿ ಧರ್ಮನಗರದಲ್ಲಿ ನಡೆಯುವ ವಿಟ್ಲ-ಪುಣಚ ಮಹಾಶಕ್ತಿ ಕೇಂದ್ರದ ಕಾರ್ಯಕರ್ತರ ಸಭೆಯಲ್ಲಿ ಭಾಗವಹಿಸಲಿದ್ದಾರೆ.  11 ಗಂಟೆಗೆ ಪುತ್ತೂರು ನಗರ ಮಂಡಲ ಹಾಗೂ ಬಲ್ನಾಡು, ಕೊಡಿಪಾಡಿ, ಕಬಕ, ಬನ್ನೂರು ಪಂಚಾಯಿತಿ ಕಾರ್ಯಕರ್ತರ ಸಭೆ ಜೈನಭವನದಲ್ಲಿ ನಡೆಯಲಿದ್ದು, ಪಾಲ್ಗೊಳ್ಳಲಿದ್ದಾರೆ.

ನಾಳೆ ಕ್ಯಾ.ಬ್ರಿಜೇಶ್ ಚೌಟ ಪುತ್ತೂರು ವಿಧಾನಸಭಾ ಕ್ಷೇತ್ರಕ್ಕೆ ಭೇಟಿ Read More »

ದಶಮಾನೋತ್ಸವ ಸಂಭ್ರಮದಲ್ಲಿರುವ ‘ಲಹರಿ’ ಡ್ರೈ ಫ್ರುಟ್ಸ್ | ಮಾ.24 ರಂದು ನವೀಕೃತಗೊಂಡು ನವೀನ ಮಾದರಿಯಲ್ಲಿ ಶುಭಾರಂಭ

ಪುತ್ತೂರು: ಏಳ್ಮುಡಿ ಮುಖ್ಯರಸ್ತೆಯಲ್ಲಿರುವ ಕೆ.ವಿ.ಶೆಣೈ ಪೆಟ್ರೋಲ್ ಪಂಪ್ ಎದುರು ಕಾರ್ಯಾಚರಿಸುತ್ತಿರುವ ‘ಲಹರಿ’ ಡ್ರೈ ಫ್ರುಟ್ಸ್ ಮಾರಾಟ ಸಂಸ್ಥೆ ನವೀಕೃತ ಮಳಿಗೆಯೊಂದಿಗೆ ನವೀನ ಮಾದರಿಯಲ್ಲಿ ಮಾ.24 ಭಾನುವಾರ ಬೆಳಿಗ್ಗೆ 9.30 ಕ್ಕೆ ಶುಭಾರಂಭಗೊಳ್ಳಲಿದೆ. ದಶಮಾನೋತ್ಸವದ ಸಂಭ್ರಮದಲ್ಲಿರುವ “ಲಹರಿ’ ಸಂಸ್ಥೆ ದಶಮಾನೋತ್ಸವ ಸಂಭ್ರಮಾಚರಣೆಯನ್ನು ಆಚರಿಸಲಿದ್ದು, ಒಡಿಯೂರು ಶ್ರೀ ಗುರುದೇವದತ್ತ ಸಂಸ್ಥಾನದ ಸಾದ್ವಿ ಶ್ರೀ ಮಾತಾನಂದಮಯಿ ದೀಪ ಪ್ರಜ್ವಲನೆ ಮಾಡಿ ಆಶೀರ್ವಚನ ನೀಡುವರು. ಮುಖ್ಯ ಅತಿಥಿಗಳಾಗಿ ಸುಳ್ಯ ಶಾಸಕಿ ಭಾಗೀರಥಿ ಮುರುಳ್ಯ, ಮಾಜಿ ಶಾಸಕಿ ಶಕುಂತಳಾ ಶೆಟ್ಟಿ, ಸಮಾಜ ಸೇವಕಿ ಡಾ.ಗೌರಿ

ದಶಮಾನೋತ್ಸವ ಸಂಭ್ರಮದಲ್ಲಿರುವ ‘ಲಹರಿ’ ಡ್ರೈ ಫ್ರುಟ್ಸ್ | ಮಾ.24 ರಂದು ನವೀಕೃತಗೊಂಡು ನವೀನ ಮಾದರಿಯಲ್ಲಿ ಶುಭಾರಂಭ Read More »

ಪಕ್ಷದ ಕಚೇರಿಯಲ್ಲಿ ಜಿಲ್ಲಾಧ್ಯಕ್ಷರ ಸಮ್ಮುಖದಲ್ಲಿ ವಾಗ್ವಾದ್ ನಡೆದಿದೆ ಎನ್ನುವುದು ಸತ್ಯಕ್ಕೆ ದೂರವಾದ ವಿಚಾರ : ಸಾಜ ರಾಧಾಕೃಷ್ಣ ಆಳ್ವ

ಪುತ್ತೂರು: ಇತ್ತೀಚಗೆ ದ.ಕ. ಲೋಕಸಭಾ ಅಭ್ಯರ್ಥಿ ಕ್ಯಾ.ಬ್ರಿಜೇಶ್ ಚೌಟ ಆಯ್ಕೆಯಾದ ನಂತರ ಮತ್ತು ಬಿಜೆಪಿಗೆ ಅರುಣ್ ಕುಮಾರ್ ಪುತ್ತಿಲ ಸೇರ್ಪಡೆಯ ವಿಚಾರವಾಗಿ ಪುತ್ತೂರಿನ ಹಿರಿಯ ಕಿರಿಯ ಕಾರ್ಯಕರ್ತರಲ್ಲಿ ಚರ್ಚಿಸಲು ದ.ಕ. ಜಿಲ್ಲಾಧ್ಯಕ್ಷರು ಪಾರ್ಟಿ ಕಛೇರಿಗೆ ಭೇಟಿ ನೀಡಿದ್ದರು. ಆ ಸಂದರ್ಭದಲ್ಲಿ ಕಛೇರಿಗೆ ಬೀಗ ಹಾಕಿದ್ದರೂ ಮತ್ತು ಸಭೆಯಲ್ಲಿ ವಾಗ್ವಾದಗಳೂ ಜಿಲ್ಲಾಧ್ಯಕ್ಷರ ಎದುರಿಗೆ ಆಗಿವೆ ಎಂದು ವರದಿಯಾಗಿರುವುದು ಸತ್ಯಕ್ಕೆ ದೂರವಾದ ವಿಷಯ ಎಂದು ಬಿಜೆಪಿ ಮಂಡಲ ಅಧ್ಯಕ್ಷ ಸಾಜ ರಾಧಾಕೃಷ್ಣ ಆಳ್ವ ತಿಳಿಸಿದ್ದಾರೆ. ಪತ್ರಿಕಾ ಪ್ರಕಟಣೆ ನೀಡಿರುವ ಅವರು,

ಪಕ್ಷದ ಕಚೇರಿಯಲ್ಲಿ ಜಿಲ್ಲಾಧ್ಯಕ್ಷರ ಸಮ್ಮುಖದಲ್ಲಿ ವಾಗ್ವಾದ್ ನಡೆದಿದೆ ಎನ್ನುವುದು ಸತ್ಯಕ್ಕೆ ದೂರವಾದ ವಿಚಾರ : ಸಾಜ ರಾಧಾಕೃಷ್ಣ ಆಳ್ವ Read More »

ಅಮಲು ಪದಾರ್ಥ ಸೇವಿಸಿ ಅನುಚಿತ ವರ್ತನೆ | ಇಬ್ಬರು ಪೊಲೀಸ್ ವಶಕ್ಕೆ

ಪುತ್ತೂರು: ನಗರದ ಕಿಲ್ಲೇ ಮೈದಾನದ ಬಳಿ ಗಾಂಜಾ ಸೇವಿಸಿ ಅನುಚಿತವಾಗಿ ವರ್ತಿಸಿದ ಇಬ್ಬರನ್ನು ಪೊಲೀಸರು ವಶಕ್ಕೆ ಪಡೆದ ಘಟನೆ ನಡೆದಿದೆ. ಬಪ್ಪಳಿಗೆ ನಿವಾಸಿ ಉಮ್ಮರ್ ಫಾರೂಕ್, ಉಳ್ಳಾಲ ಮುಕ್ಕಚೇರಿ ನಿವಾಸಿ ಮೊಹಿದ್ದಿನಿ ಪೊಲೀಸ್ ವಶವಾದವರು. ಪುರಭವನದ ಬಳಿ ಇಬ್ಬರು ಯುವಕರು ಅನುಚಿತವಾಗಿ ವರ್ತಿಸಿರುವ ಕುರಿತು ಮಾಹಿತಿ ತಿಳಿಸಿದ ಪುತ್ತೂರು ನಗರ ಪೊಲೀಸರು ತೆರಳಿದಾಗ ಇಬ್ಬರು ಪರಾರಿಯಾಗಲು ಯತ್ನಿಸಿದ್ದರು. ತಕ್ಷಣ ಇಬ್ಬರನ್ನು ತಡೆದು ವಿಚಾರಿಸಿದಾಗ ಗಾಂಜಾ ನಶೆಯಲ್ಲಿರುವುದು ಕಂಡು ಬಂದಿದೆ. ತಕ್ಷಣ ಅವರನ್ನು ವೈದ್ಯಕೀಯ ಪರೀಕ್ಷೆಗೊಳಪಡಿಸಿದಾಗ ಅಮಲು ಪದಾರ್ಥ

ಅಮಲು ಪದಾರ್ಥ ಸೇವಿಸಿ ಅನುಚಿತ ವರ್ತನೆ | ಇಬ್ಬರು ಪೊಲೀಸ್ ವಶಕ್ಕೆ Read More »

ಪುತ್ತೂರು ಶಾಸಕರು ಕೋಟಿ-ಕೋಟಿ ಅನುದಾನದ ಮಂತ್ರ ಜಪಿಸುವ ಮೂಲಕ ಜನರನ್ನು ದಾರಿತಪ್ಪಿಸುತ್ತಿದ್ದಾರೆ | ಪತ್ರಿಕಾಗೋಷ್ಠಿಯಲ್ಲಿ ಮಾಜಿ ಶಾಸಕ ಸಂಜೀವ ಮಠಂದೂರು ಆರೋಪ | ಅಂಕಿ-ಅಂಶಗಳ ಸಹಿತ ಜನತೆಗೆ ತಿಳಿಸುವ ಕೆಲಸ ಮಾಡಲಿ

ಪುತ್ತೂರು: ರಾಜ್ಯದಲ್ಲಿ ವಿಧಾನ ಸಭೆ ಚುನಾವಣೆ ನಡೆದು 300 ದಿನಗಳು ಕಳೆದಿದ್ದು, ಒಂದೆಡೆ ಮುಖ್ಯಮಂತ್ರಿ ಸಿದ್ಧರಾಮಯ್ಯ ಗ್ಯಾರಂಟಿ ಯೋಜನೆಯಿಂದ ಮುಂದಿನ ಒಂದು ವರ್ಷಗಳ ಕಾಲ ಯಾವುದೇ ಅಭಿವೃದ್ಧಿ ಕಾರ್ಯ ನಡೆಯುವುದಿಲ್ಲ ಎಂದು ಹೇಳಿಕೆ ನೀಡಿದ್ದು, ಇನ್ನೊಂದೆಡೆ ಪುತ್ತೂರು ಶಾಸಕರು ಕೋಟಿ ಕೋಟಿ ಅನುದಾನಕ್ಕೆ ಶಿಲಾನ್ಯಾಸ ನೆರವೇರಿಸು ಮೂಲಕ ಅಭಿವೃದ್ಧಿಯ ಮಂತ್ರ ಜಪಿಸುತ್ತಿದ್ದು, ಈ ಮೂಲಕ ಜನರನ್ನು ದಾರಿತಪ್ಪಿಸುವ ಕೆಲಸ ಮಾಡುತ್ತಿದ್ದಾರೆ. ಎಂದು ಮಾಜಿ ಶಾಸಕ ಸಂಜೀವ ಮಠಂದೂರು ಆರೋಪಿಸಿದ್ದಾರೆ. ಗುರುವಾರ ಪತ್ರಿಕಾಗೋಷ್ಠಿಯಲ್ಲಿ ಅವರು ಮಾತನಾಡಿ, ಪುತ್ತೂರು ವಿಧಾನಸಭಾ

ಪುತ್ತೂರು ಶಾಸಕರು ಕೋಟಿ-ಕೋಟಿ ಅನುದಾನದ ಮಂತ್ರ ಜಪಿಸುವ ಮೂಲಕ ಜನರನ್ನು ದಾರಿತಪ್ಪಿಸುತ್ತಿದ್ದಾರೆ | ಪತ್ರಿಕಾಗೋಷ್ಠಿಯಲ್ಲಿ ಮಾಜಿ ಶಾಸಕ ಸಂಜೀವ ಮಠಂದೂರು ಆರೋಪ | ಅಂಕಿ-ಅಂಶಗಳ ಸಹಿತ ಜನತೆಗೆ ತಿಳಿಸುವ ಕೆಲಸ ಮಾಡಲಿ Read More »

ಅಕ್ಷಯ ಕಾಲೇಜಿನಲ್ಲಿ ಇಂದು ಯುಜಿ ಮಟ್ಟದ ಇಂಟರ್ ಕೊಲೇಜಿಯೇಟ್ ಫೆಸ್ಟ್ ‘ಕೃತ್ವ-2024’ |ಮಾ.22-23: ಕಾಲೇಜಿನ ವಾರ್ಷಿಕೋತ್ಸವ ಸಮಾರಂಭ

ಪುತ್ತೂರು: ಅಕ್ಷಯ ಕಾಲೇಜಿನಲ್ಲಿ ಇಂದು ಯುಜಿ ಮಟ್ಟದ ಇಂಟರ್ ಕೊಲೇಜಿಯೇಟ್ ಫೆಸ್ಟ್ ‘ಕೃತ್ವ-2024’ ನಡೆಯಲಿದೆ. ಇಂದು ಬೆಳಿಗ್ಗೆ ಕಾಲೇಜು ಚೇರ್ ಮ್ಯಾನ್ ಜಯಂತ ನಡುಬೈಲ್ ಅಧ್ಯಕ್ಷತೆಯಲ್ಲಿ ಸಮಾರಂಭ ಉದ್ಘಾಟನೆಗೊಳ್ಳಲಿದೆ. ಸಂಜೆ 3.30ಕ್ಕೆ ಸಮಾರೋಪ ಸಮಾರಂಭ ನಡೆಯಲಿದೆ. ಮಾ. 22. ಹಾಗೂ 23ರಂದು ಅಕ್ಷಯ ವೈಭವ ಕಾಲೇಜಿನ ವಾರ್ಷಿಕೋತ್ಸವ ಆಚರಣೆ ಜರುಗಲಿದೆ. ಸಂಜೆ ನಡೆಯುವ ಸಭಾ ಕಾರ್ಯಕ್ರಮದ ಅಧ್ಯಕ್ಷತೆಯನ್ನು ಕಾಲೇಜಿನ ಆಡಳಿತ ನಿರ್ದೇಶಕಿ ಕಲಾವತಿ ಜಯಂತ್ ವಹಿಸಲಿದ್ದು, ಮುಖ್ಯ ಅತಿಥಿಗಳಾಗಿ ಆ್ಯಂಕರ್ ಬಡೆಕ್ಕಿಲ ಪ್ರದೀಪ್, ಸಾಲೂನ್ ಗ್ರೂಪ್ಸ್ ನ ಪ್ರಭಾಕರ

ಅಕ್ಷಯ ಕಾಲೇಜಿನಲ್ಲಿ ಇಂದು ಯುಜಿ ಮಟ್ಟದ ಇಂಟರ್ ಕೊಲೇಜಿಯೇಟ್ ಫೆಸ್ಟ್ ‘ಕೃತ್ವ-2024’ |ಮಾ.22-23: ಕಾಲೇಜಿನ ವಾರ್ಷಿಕೋತ್ಸವ ಸಮಾರಂಭ Read More »

ನಾಳೆ ವಿದ್ಯುತ್‍ ನಿಲುಗಡೆ | ಎಲ್ಲೆಲ್ಲಿ ? ಇಲ್ಲಿದೆ ಡಿಟೈಲ್ಸ್

ಪುತ್ತೂರು: ಉಪ್ಪಿನಂಗಡಿ ಪುತ್ತೂರು ಚತುಷ್ಪಥ ಮಾರ್ಗ ಕಾಮಗಾರಿ ನಿಮಿತ್ತ ನಾಳೆ ವಿದ್ಯುತ್‍ ನಿಲುಗಡೆ ಮಾಡಲಾಗುವುದು. 110/33/11ಕೆವಿ ಪುತ್ತೂರು ವಿದ್ಯುತ್ ಕೇಂದ್ರದಿಂದ ಹೊರಡುವ ಉಪ್ಪಿನಂಗಡಿ ಎಕ್ಸ್‌ ಪ್ರೆಸ್, ಕಾಂಚನ & ವಾಟರ್ ಸಪ್ಪೆ ಫೀಡರ್ ಮತ್ತು ಮತ್ತು 110/33/11ಕೆವಿ ಕಲ್ಲೇರಿ ವಿದ್ಯುತ್ ಕೇಂದ್ರದಿಂದ ಹೊರಡುವ ಉಪ್ಪಿನಂಗಡಿ ಟೌನ್ & ಕೆಮ್ಮಾರ ಫೀಡರ್‌ನಲ್ಲಿ ಮಾ.21 ಗುರುವಾರ ಪೂರ್ವಾಹ್ನ 10 ರಿಂದ ಅಪರಾಹ್ನ 5:30 ರ ವರೆಗೆ ವಿದ್ಯುತ್ ನಿಲುಗಡೆ ಮಾಡಲಾಗುವುದು. ಆದುದರಿಂದ, 110/33/11ಕೆವಿ ಪುತ್ತೂರು ವಿದ್ಯುತ್ ಕೇಂದ್ರದಿಂದ ಮತ್ತು 110/11ಕೆವಿ

ನಾಳೆ ವಿದ್ಯುತ್‍ ನಿಲುಗಡೆ | ಎಲ್ಲೆಲ್ಲಿ ? ಇಲ್ಲಿದೆ ಡಿಟೈಲ್ಸ್ Read More »

ಮಂಗಳೂರು ವಿಶ್ವವಿದ್ಯಾನಿಲಯ ಮಟ್ಟದ ಸ್ಪರ್ಧೆಗಳಲ್ಲಿ ಸಂತ ಫಿಲೋಮಿನಾ ಕಾಲೇಜಿನ ವೈಟ್‌ ಲಿಫ್ಟಿಂಗ್‌ ತಂಡ ಉತ್ತಮ ಸಾಧನೆ

ಪುತ್ತೂರು: ವಿಶ್ವವಿದ್ಯಾನಿಲಯ ಮಟ್ಟದ ವೈಟ್ ಲಿಫ್ಟಿಂಗ್ ಸ್ಪರ್ಧೆಯಲ್ಲಿ ಪುತ್ತೂರಿನ ಸಂತ ಫಿಲೋಮಿನಾ ಕಾಲೇಜಿನ ಕ್ರೀಡಾಪಟುಗಳು ಉತ್ತಮ ಪ್ರದರ್ಶನ ನೀಡಿ ಹಲವು ಪದಕಗಳನ್ನು ಪಡೆಯುವುದರ ಮೂಲಕ ಉತ್ತಮ ಸಾಧನೆ ಮಾಡಿದ್ದಾರೆ. ಇತ್ತೀಚೆಗೆ ಮಂಗಳೂರಿನ ಎಸ್.ಡಿ.ಎಂ. ಕಾಲೇಜ್‌ ಆಫ್‌ ಬ್ಯುಸಿನೆಸ್‌ ಮ್ಯಾನೇಜ್‌ಮೆಂಟ್‌ ನಲ್ಲಿ ನಡೆದ ಮಂಗಳೂರು ವಿಶ್ವವಿದ್ಯಾನಿಲಯ ಮಟ್ಟದ 2023-24 ನೇ ಸಾಲಿನ ಪುರುಷರ ವಿಭಾಗದ ಪ್ರೊ| ರಿಚರ್ಡ್‌ ರೆಬೆಲ್ಲೊ ರೋಲಿಂಗ್‌ ಟ್ರೋಫಿ ಹಾಗೂ ಮಹಿಳೆಯರ ವಿಭಾಗದ ಶಿರ್ವ ಬ್ಲಾಸಮ್ ಮ್ಯಾನ್ಷನ್ ಸೆಲೆಸ್ಟಿನ್ ಡಿಸೋಜಾ ಟ್ರೋಫಿಯಲ್ಲಿ ಸಂತ ಫಿಲೋಮಿನಾದ ಕ್ರೀಡಾಪಟುಗಳ

ಮಂಗಳೂರು ವಿಶ್ವವಿದ್ಯಾನಿಲಯ ಮಟ್ಟದ ಸ್ಪರ್ಧೆಗಳಲ್ಲಿ ಸಂತ ಫಿಲೋಮಿನಾ ಕಾಲೇಜಿನ ವೈಟ್‌ ಲಿಫ್ಟಿಂಗ್‌ ತಂಡ ಉತ್ತಮ ಸಾಧನೆ Read More »

ಸುದೀರ್ಘ ಬಾಳಿಕೆಯ ಕಾಂಕ್ರೀಟ್ ಪೀಠೋಪಕರಣಗಳ (Concwood) ನಿರ್ಮಾತೃ ಮಾಸ್ಟರ್ ಪ್ಲಾನರಿಗೆ ಪ್ರಶಂಸೆ

ಪುತ್ತೂರು: ಕಾಂಕ್ರೀಟ್  ಪೀಠೋಪಕರಣಗಳ ನಿರ್ಮಾಣದಲ್ಲಿ ಕರ್ನಾಟಕ ಮತ್ತು ಸುತ್ತಲ ರಾಜ್ಯಗಳಲ್ಲಿ ಮನೆ ಮಾತಾಗಿರುವ  ಮಾಸ್ಟರ್ ಪ್ಲಾನರಿ ಸಂಸ್ಥೆಯು ವಿಶ್ವ ಮಾನ್ಯವಾಗುವತ್ತ ದಾಪುಗಾಲಿಡುತ್ತಿದೆ.  ಪುತ್ತೂರಿನ ನೆಹರೂ ನಗರದ ಮುಖ್ಯರಸ್ತೆಯಲ್ಲಿ ಕಾರ್ಯಾಚರಿಸುತ್ತಿರುವ ಮಾಸ್ಟರ್ ಪ್ಲಾನರಿಯು ಕರ್ನಾಟಕದಾದ್ಯಂತ ಹಲವು ಕಡೆ ಉತ್ಪಾದನಾ ಶಾಖೆಗಳನ್ನು ಹೊಂದಿದೆ. ಇಂದು ಸುಮಾರು ಹತ್ತು ಸಾವಿರಕ್ಕೂ ಮಿಕ್ಕಿದ ಉದ್ಯೋಗಿಗಳಿಗೆ ಅನ್ನ ನೀಡುತ್ತಿದೆ. ಮಾಸ್ಟರ್ ಪ್ಲಾನರಿಯು 32 ವರ್ಷಗಳ ಹಿಂದೆ ಪುತ್ತೂರಿನ ಕೊಂಬೆಟ್ಟಿನಲ್ಲಿರುವ ಸರಕಾರಿ ಪದವಿಪೂರ್ವ ಕಾಲೇಜಿಗೆ ಡೆಸ್ಕ್, ಬೆಂಚುಗಳನ್ನು ಸರಬರಾಜು ಮಾಡಿತ್ತು. ಮೂರು ದಶಕಗಳ ಹಿಂದೆ ನೀಡಿದ್ದ

ಸುದೀರ್ಘ ಬಾಳಿಕೆಯ ಕಾಂಕ್ರೀಟ್ ಪೀಠೋಪಕರಣಗಳ (Concwood) ನಿರ್ಮಾತೃ ಮಾಸ್ಟರ್ ಪ್ಲಾನರಿಗೆ ಪ್ರಶಂಸೆ Read More »

error: Content is protected !!
Scroll to Top