ಪುತ್ತೂರು

ರೈ ಎಸ್ಟೇಟ್ ಎಜುಕೇಶನಲ್ ಚಾರಿಟೇಬಲ್ ಟ್ರಸ್ಟ್ ನಿಂದ ವೃತ್ತಿ ಶಿಕ್ಷಣ ಮಾರ್ಗದರ್ಶನ ಕಾರ್ಯಾಗಾರ

ಪುತ್ತೂರು: ರೈ ಎಸ್ಟೇಟ್ಸ್ ಎಜುಕೇಶನಲ್ ಆಂಡ್ ಚಾರಿಟೇಬಲ್ ಟ್ರಸ್ಟ್ ಹಾಗೂ ಕೊಂಬೆಟ್ಟು ಶ್ರೀರಾಮಕೃಷ್ಣ ಪ್ರೌಢ ಶಾಲೆ ವತಿಯಿಂದ ಪುತ್ತೂರಿನ ಬಂಟರ ಭವನದಲ್ಲಿ ದ್ವಿತೀಯ ಪಿಯುಸಿ ವಿದ್ಯಾರ್ಥಿಗಳಿಗೆ ವೃತ್ತಿ  ಶಿಕ್ಷಣ ಮಾರ್ಗದರ್ಶನ ಕಾರ್ಯಾಗಾರ ಮಾ.23 ರಂದು ನಡೆಯಿತು. ರಾಮಕೃಷ್ಣ ಪ್ರೌಢ ಶಾಲಾ ಸಂಚಾಲಕ ಕಾವು ಹೇಮನಾಥ ಶೆಟ್ಟಿ ದೀಪ ಬೆಳಗಿಸಿ ಉದ್ಘಾಟಿಸಿ ಮಾತನಾಡಿ, ಕಳೆದ ಹಲವು ವರ್ಷಗಳಿಂದ ಟ್ರಸ್ಟ್ ಮೂಲಕ ಸಮಾಜದಲ್ಲಿ ನೊಂದವರ ಕಣ್ಣೀರೊರೆಸುತ್ತಿದ್ದ ಶಾಸಕ ಅಶೋಕ್ ರೈ ಯವರು ಶಾಸಕರಾದ ಬಳಿಕ ಎಲ್ಲಾ ರಂಗದಲ್ಲೂ ತನ್ನ ಸೇವೆ […]

ರೈ ಎಸ್ಟೇಟ್ ಎಜುಕೇಶನಲ್ ಚಾರಿಟೇಬಲ್ ಟ್ರಸ್ಟ್ ನಿಂದ ವೃತ್ತಿ ಶಿಕ್ಷಣ ಮಾರ್ಗದರ್ಶನ ಕಾರ್ಯಾಗಾರ Read More »

ಕೊಡಿಪಾಡಿ ಶ್ರೀ ಜನಾರ್ದನ ದೇವಸ್ಥಾನದಲ್ಲಿ ವೈಭವದ ಬ್ರಹ್ಮಕಲಶೋತ್ಸವ : ವಿವಿಧ ವೈದಿಕ ಕಾರ್ಯಕ್ರಮಗಳು

ಪುತ್ತೂರು: ಬ್ರಹ್ಮಕಲಶೋತ್ಸವದ ಸಂಭ್ರಮದಲ್ಲಿರುವ ಪುತ್ತೂರು ತಾಲೂಕಿನ ಕೊಡಿಪಾಡಿ ಶ್ರೀ ಜನಾರ್ದನ ದೇವಸ್ಥಾನದಲ್ಲಿ ಶುಕ್ರವಾರ ರಾತ್ರಿ ಶ್ರೀ ಚಕ್ರ ಪೂಜೆ ಸಹಿತ ವಿವಿಧ ವೈದಿಕ ಕಾರ್ಯಕ್ರಮಗಳು ಜರಗಿತು. ಬ್ರಹ್ಮಕಲಶೋತ್ಸವದ ಅಂಗವಾಗಿ ಶುಕ್ರವಾರ ಬೆಳಿಗ್ಗೆ ಉಷಃಪೂಜೆ, ಮಹಾಗಣಪತಿ ಹೋಮ, ಅಂಕುರಪೂಜೆ, ಶ್ವಾನಶಾಂತಿ, ಅದ್ಭುತ ಶಾಂತಿ, ಚೋರಶಾಂತಿ ಹೋಮಾದಿಗಳು ಜರಗಿತು. ಮಧ್ಯಾಹ್ನ 12 ಕ್ಕೆ ಕಲಶಾಭಿಷೇಕ, ಮಹಾಪೂಜೆ ನಡೆದು ಬಳಿಕ ಅನ್ನಸಂತರ್ಪಣೆ ಜರಗಿತು. ಸಂಜೆ 5.30 ರಿಂದ ಅಂಕುರಪೂಜೆ, ಶ್ರೀ ಚಕ್ರಪೂಜೆ, ಮಂಟಪ ಸಂಸ್ಕಾರ, ಮಹಾಪೂಜೆ ಮುಂತಾದ ವಿವಿಧ ವೈದಿಕ ಕಾರ್ಯಕ್ರಮಗಳು

ಕೊಡಿಪಾಡಿ ಶ್ರೀ ಜನಾರ್ದನ ದೇವಸ್ಥಾನದಲ್ಲಿ ವೈಭವದ ಬ್ರಹ್ಮಕಲಶೋತ್ಸವ : ವಿವಿಧ ವೈದಿಕ ಕಾರ್ಯಕ್ರಮಗಳು Read More »

ಪ್ರಪಂಚದ ಆಧ್ಯಾತ್ಮಿಕ ಗುರು ಸ್ವಾಮಿ ವಿವೇಕಾನಂದರು – ಕೃಷ್ಣ ಪ್ರಸಾದ್ | ವಿವೇಕ ಸ್ಮೃತಿ ಉಪನ್ಯಾಸ ಮಾಲಿಕೆ

ಪುತ್ತೂರು: ವಿವೇಕಾನಂದರು ಭಾರತಕ್ಕೆ ಮಾತ್ರವಲ್ಲದೆ ಪ್ರಪಂಚದ ಮೂಲೆ ಮೂಲೆಗೂ ಅವರ ತತ್ವ ಹಾಗೂ ಯುವಪೀಳಿಗೆಗೆ ನೀಡಿದ ಸ್ಪೂರ್ತಿಯ ಕರೆಗಳಿಂದಾಗಿ ಇಡೀ ಪ್ರಪಂಚಕ್ಕೇ ಆಧ್ಯಾತ್ಮಿಕ ಗುರುವಾಗಿ ಮಾರ್ಪಟ್ಟವರು.  ಭಾರತೀಯ ತತ್ವ ಹಾಗೂ ಮಹತ್ವವನ್ನು ಪಾಶ್ಚಿಮಾತ್ಯ ದೇಶಗಳಿಗೆ ಪರಿಚಯಿಸುವಲ್ಲಿ ಮೊದಲಿಗರೆಂದರೆ ತಪ್ಪಾಗುವುದಿಲ್ಲ. ಜೊತೆಗೆ ನುಡಿದಂತೆ ನಡೆದವರು ಸ್ವಾಮಿ ವಿವೇಕಾನಂದರು ಎಂದು ಕಲ್ಲಡ್ಕ ಶ್ರೀರಾಮ ಪದವಿ ಕಾಲೇಜಿನ ಪ್ರಾಂಶುಪಾಲ ಕೃಷ್ಣಪ್ರಸಾದ್ ಕಲ್ಲಡ್ಕ ಹೇಳಿದರು. ಅವರು ವಿವೇಕಾನಂದ ಕಲಾ, ವಿಜ್ಞಾನ ಮತ್ತು ವಾಣಿಜ್ಯ (ಸ್ವಾಯತ್ತ) ಮಹಾವಿದ್ಯಾಲಯದಲ್ಲಿ ನಡೆದ ವಿವೇಕಾನಂದ ಸ್ನಾತಕೋತ್ತರ ಅಧ್ಯಯನ ಕೇಂದ್ರದ

ಪ್ರಪಂಚದ ಆಧ್ಯಾತ್ಮಿಕ ಗುರು ಸ್ವಾಮಿ ವಿವೇಕಾನಂದರು – ಕೃಷ್ಣ ಪ್ರಸಾದ್ | ವಿವೇಕ ಸ್ಮೃತಿ ಉಪನ್ಯಾಸ ಮಾಲಿಕೆ Read More »

ಟೆಂಪೋ- ಕಾರು ಅಪಘಾತ | ವಾಹನಗಳು ಜಖಂ

ಪುತ್ತೂರು: ಕಾರು ಹಾಗೂ ಟೆಂಪೋ ಡಿಕ್ಕಿ ಹೊಡೆದುಕೊಂಡ ಘಟನೆ ಕೋಡಿಂಬಾಡಿಯ ಅರ್ಬಿಯಲ್ಲಿ ಇಂದು ನಡೆದಿದೆ. ಪುತ್ತೂರಿನಿಂದ ಉಪ್ಪಿನಂಗಡಿಗೆ ತೆರಳುತ್ತಿದ್ದ ಕಾರು ಹಾಗೂ ಪುತ್ತೂರು ಕಡೆಗೆ ಬರುತ್ತಿದ್ದ ಟೆಂಪೋ ನಡುವೆ ಅಪಘಾತ ಸಂಭವಿಸಿದೆ. ಅಪಘಾತದಿಂದ ಎರಡೂ ವಾಹನಗಳು ಜಖಂಗೊಂಡಿದ್ದು, ಪ್ರಾಣಾಪಾಯ ಸಂಭವಿಸಿಲ್ಲ ಎಂದು ತಿಳಿದು ಬಂದಿದೆ.

ಟೆಂಪೋ- ಕಾರು ಅಪಘಾತ | ವಾಹನಗಳು ಜಖಂ Read More »

ಪುತ್ತೂರು ತಾಲೂಕು ಆಸ್ಪತ್ರೆ ಆರೋಗ್ಯ ರಕ್ಷಾ ಸಮಿತಿ ಸದಸ್ಯರ ನೇಮಕ

ಪುತ್ತೂರು: ಪುತ್ತೂರು ತಾಲೂಕು ಆಸ್ಪತ್ರೆ ಆರೋಗ್ಯ ರಕ್ಷಾ ಸಮಿತಿ ಸದಸ್ಯರನ್ನಾಗಿ ನೇಮಿಸಿ ಸರಕಾರ ಅಧಿಸೂಚನೆಯನ್ನು ಹೊರಡಿಸಿದೆ. ಸದಸ್ಯರುಗಳಾಗಿ ಆಸ್ಕರ್ ಆನಂದ್ ಬೊಳುವಾರು, (ಸಾಮಾನ್ಯ ) ಮುಖೇಶ್ ಕೆಮ್ಮಿಂಜೆ( ಪ. ಜಾತಿ) ಅರುಣಾ ಡಿ ರೈ ಪುತ್ತೂರು( ಮಹಿಳಾ) ಸುದೇಶ್ ಆರ್ ಶೆಟ್ಟಿ( ಸಾಮಾನ್ಯ) ಅನ್ವರ್ ಖಾಲಿದ್ ಕಬಕ (ಸಾಮಾನ್ಯ) ಸಿದ್ದಿಕ್ ಸುಲ್ತಾನ್ ಸರ್ವೆ( ಸಾಮಾನ್ಯ)  ಶೇಖರ್ ನಾಯ್ಕ ಕಬಕ( ಪ.ಪಂಗಡ) ಮತ್ತು ವಿಕ್ಟರ್ ಪಾಯಸ್ ನೆಹರೂನಗರ ಸಾಮಾನ್ಯ ಇವರನ್ನು ನೇಮಕಗೊಳಿಸಿ ಸರಕಾರ ಅಧಿಸೂಚನೆಯನ್ನು ಹೊರಡಿಸಿದೆ. 

ಪುತ್ತೂರು ತಾಲೂಕು ಆಸ್ಪತ್ರೆ ಆರೋಗ್ಯ ರಕ್ಷಾ ಸಮಿತಿ ಸದಸ್ಯರ ನೇಮಕ Read More »

ಆಶೀರ್ವಾದ್ ಎಂಟರ್ ಪ್ರೈಸಸ್‍ ಲಕ್ಕೀ ಸ್ಕೀಂನ ಮೊದಲ ಡ್ರಾ | ವಿಜೇತರ ಮನೆಗೆ ತೆರಳಿ ಬಹುಮಾನ ಹಸ್ತಾಂತರ

ಪುತ್ತೂರು: ದರ್ಬೆ ಮೊಯಿದೀನ್ ಕಾಂಪ್ಲೆಕ್ಸ್   ನಲ್ಲಿ ಕಾರ್ಯಾಚರಿಸುತ್ತಿರುವ ಆಶೀರ್ವಾದ ಎಂಟರ್ ಪ್ರೈಸಸ್‍ ನ ಲಕ್ಕಿ ಸ್ಕೀಂನ ಮೊದಲ ಡ್ರಾ ಮಾ.15 ರಂದು ನಡೆದಿದ್ದು, ಮೊದಲ ಲಕ್ಕಿ ವಿನ್ನರ್ ಆಗಿ ಹರೀಶ್ ಚಿಕ್ಕಮಗಳೂರು ಆ್ಯಕ್ಸೆಸ್ 125 ಸ್ಕೂಟಿ ತಮ್ಮದಾಗಿಸಿಕೊಂಡರು. 2ನೇ ಬಹುಮಾನ 1 ಲಕ್ಷ ನಗದು ಬಹುಮಾನವನ್ನು ಶ್ರುತಿ ನೆಲ್ಯಾಡಿ ಪಡೆದುಕೊಂಡರು. ಮಾ.16 ರಂದು ಆಶೀರ್ವಾದ ಲಕ್ಕಿ ಸ್ಕೀಂ ತಂಡ ಬಹುಮಾನವನ್ನು ನಗದು ವಿಜೇತೆ ಶ್ರುತಿ ಅವರ ಮನೆಗೆ ತೆರಳಿ ಹಸ್ತಾಂತರಿಸಿದರು. ‘ನಿಮ್ಮ ಕನಸು ನಮ್ಮಲ್ಲಿ ನನಸು’ ಎಂಬ

ಆಶೀರ್ವಾದ್ ಎಂಟರ್ ಪ್ರೈಸಸ್‍ ಲಕ್ಕೀ ಸ್ಕೀಂನ ಮೊದಲ ಡ್ರಾ | ವಿಜೇತರ ಮನೆಗೆ ತೆರಳಿ ಬಹುಮಾನ ಹಸ್ತಾಂತರ Read More »

ಈ ಬಾರಿಯ ಲೋಕಸಭೆ ಚುನಾವಣೆ ರಾಷ್ಟ್ರಭಕ್ತರ ಹಾಗೂ ದೇಶ ದ್ರೋಹಿಗಳ ನಡುವಿನ ಚುನಾವಣೆ : ಕ್ಯಾ.ಬ್ರಿಜೇಶ್ ಚೌಟ | ಪುತ್ತೂರಿನಲ್ಲಿ ಬಿಜೆಪಿ ಕಾರ್ಯಕರ್ತರ ಸಭೆ

ಪುತ್ತೂರು: ಈ ಬಾರಿಯ ಲೋಕಸಭಾ ಚುನಾವಣೆ ರಾಷ್ಟ್ರ ಭಕ್ತರ ಹಾಗೂ ದೇಶ ದ್ರೋಹಿಗಳ ನಡುವಿನ ಚುನಾವಣೆಯಾಗಿದ್ದು, ರಾಷ್ಟ್ರದಲ್ಲಿ ಹಿಂದುತ್ವವನ್ನು ಪ್ರತಿಷ್ಠಾಪನೆ ಮಾಡಲು 2024ರ ಚುನಾವಣೆ ಪ್ರಾಮುಖ್ಯತೆಯನ್ನು ಪಡೆದಿದೆ ಎಂದು ದ.ಕ.ಜಿಲ್ಲಾ ಲೋಕಸಭಾ ಬಿಜೆಪಿ ಅಭ್ಯರ್ಥಿ ಕ್ಯಾ.ಬ್ರಿಜೇಶ್‍ ಚೌಟ ಹೇಳಿದರು. ಪುತ್ತೂರಿನ ಜೈನ ಭವನ ದಲ್ಲಿ ಭಾರತೀಯ ಜನತಾ ಪಾರ್ಟಿಯ ಪುತ್ತೂರು ವಿಧಾನ ಸಭಾ ಕ್ಷೇತ್ರದ ಕಾರ್ಯಕರ್ತರ ಸಭೆಯಲ್ಲಿ ಅವರು ಮಾತನಾಡಿದರು. ರಾಷ್ಟ್ರದ ಚಿಂತನೆ ಇಲ್ಲದೆ ಆಡಳಿತ ಮಾಡಬೇಕೆಂಬ ಕಲ್ಪನೆಯನ್ನು ಕಾಂಗ್ರೆಸ್ ಹೊಂದಿದ್ದು, ವ್ಯಕ್ತಿ ಮುಖ್ಯವಾಗಿರದೆ ಸಮಾಜದ ಕೆಲಸವನ್ನು

ಈ ಬಾರಿಯ ಲೋಕಸಭೆ ಚುನಾವಣೆ ರಾಷ್ಟ್ರಭಕ್ತರ ಹಾಗೂ ದೇಶ ದ್ರೋಹಿಗಳ ನಡುವಿನ ಚುನಾವಣೆ : ಕ್ಯಾ.ಬ್ರಿಜೇಶ್ ಚೌಟ | ಪುತ್ತೂರಿನಲ್ಲಿ ಬಿಜೆಪಿ ಕಾರ್ಯಕರ್ತರ ಸಭೆ Read More »

ಕ್ಯಾ.ಬ್ರಿಜೇಶ್ ಚೌಟ ವಿಟ್ಲ ಶ್ರೀ ಪಂಚಲಿಂಗೇಶ್ವರ ದೇವಸ್ಥಾನಕ್ಕೆ ಭೇಟಿ

ವಿಟ್ಲ:  ಬಿಜೆಪಿ ದ.ಕ.ಜಿಲ್ಲಾ ಲೋಕಸಭೆ ಅಭ್ಯರ್ಥಿ ಕ್ಯಾ.ಬ್ರಿಜೇಶ್ ಚೌಟ ವಿಟ್ಲ ಶ್ರೀ ಪಂಚಲಿಂಗೇಶ್ವರ ದೇವಸ್ಥಾನಕ್ಕೆ ಇಂದು ಬೆಳಿಗ್ಗೆ ಭೇಟಿ ನೀಡಿದರು. ಶ್ರೀ ದೇವರಿಗೆ ವಿಶೇಷ ಪೂಜೆ ಸಲ್ಲಿಸಿ, ಪ್ರಾರ್ಥನೆ ನಡೆಸಿದರು. ಈ ಸಂದರ್ಭದಲ್ಲಿ ಮಾಜಿ ಶಾಸಕ ಸಂಜೀವ ಮಠಂದೂರು, ಮುಖಂಡರಾದ ಅರುಣ್ ಕುಮಾರ್ ಪುತ್ತಿಲ, ಬಿಜೆಪಿ ಮಂಡಲ ಅಧ್ಯಕ್ಷ ಸಾಜ ರಾಧಾಕೃಷ್ಣ ಆಳ್ವ ಸಹಿತ ಹಲವಾರು ಮಂದಿ ಪ್ರಮುಖರು, ಕಾರ್ಯಕರ್ತರು ಉಪಸ್ಥಿತರಿದ್ದರು. ಬಳಿಕ ವಿಟ್ಲ ಬಿಜೆಪಿ ಕಚೇರಿಗೆ ಭೇಟಿ ನೀಡಿದರು.

ಕ್ಯಾ.ಬ್ರಿಜೇಶ್ ಚೌಟ ವಿಟ್ಲ ಶ್ರೀ ಪಂಚಲಿಂಗೇಶ್ವರ ದೇವಸ್ಥಾನಕ್ಕೆ ಭೇಟಿ Read More »

ದ.ಕ.ಜಿಲ್ಲಾ ಪೊಲೀಸ್ ಠಾಣಾ ವ್ಯಾಪ್ತಿಯ ರೈತರಿಗೆ ಪರವಾನಿಗೆ ಪಡೆದ ಆಯುಧಗಳನ್ನು ಠೇವಣಿ ಇಡಲು ವಿನಾಯಿತಿ ನೀಡಿ | ರಾಜ್ಯ ರೈತ ಸಂಘ, ಹಸಿರು ಸೇನೆಯಿಂದ ಜಿಲ್ಲಾಧಿಕಾರಿಗಳಿಗೆ ಮನವಿ

ಪುತ್ತೂರು: ಚುನಾವಣೆ ಸಂದರ್ಭದಲ್ಲಿ ರೈತರು ತಮ್ಮ ವ್ಯಾಪ್ತಿಯ ಪೊಲೀಸ್ ಠಾಣೆಯಲ್ಲಿ ಪರವಾನಿಗೆ ಪಡೆದ ಕೋವಿಗಳನ್ನು ಠೇವಣಿ ಇರಿಸಲು ಆದೇಶ ನೀಡಲಾಗಿದ್ದು, ಈ ನಿಟ್ಟಿನಲ್ಲಿ ಠೇವಣಿ ಇಡಲು ವಿನಾಯಿತಿ ನೀಡಬೇಕು ಎಂದು ರಾಜ್ಯ ರೈತ ಸಂಘ, ಹಸಿರು ಸೇನೆ ಜಿಲ್ಲಾಧಿಕಾರಿಗಳಿಗೆ ಮನವಿ ಮಾಡಿದೆ. ಈಗಾಗಲೇ ಕೇರಳ ರಾಜ್ಯದ ಹೈಕೋರ್ಟ್‍ ಪರವಾನಿಗೆ ಪಡೆದ ಆಯುಧಗಳನ್ನು ಠೇವಣಿ ಇಡುವ ವಿಚಾರದಲ್ಲಿ ವಿನಾಯಿತಿ ನೀಡಿದೆ. ಕಳೆದ ಬಾರಿಯೂ ಚುನಾವಣಾ ಸಂದರ್ಭದಲ್ಲಿ ವಿನಾಯಿತಿ ನೀಡುವಂತೆ ನಮ್ಮ ಸಂಘದಿಂದ ಮನವಿ ನೀಡಿದ್ದೆವು. ಆದರೆ ವಿನಾಯಿತಿ ನೀಡಲಾಗಿಲ್ಲ.

ದ.ಕ.ಜಿಲ್ಲಾ ಪೊಲೀಸ್ ಠಾಣಾ ವ್ಯಾಪ್ತಿಯ ರೈತರಿಗೆ ಪರವಾನಿಗೆ ಪಡೆದ ಆಯುಧಗಳನ್ನು ಠೇವಣಿ ಇಡಲು ವಿನಾಯಿತಿ ನೀಡಿ | ರಾಜ್ಯ ರೈತ ಸಂಘ, ಹಸಿರು ಸೇನೆಯಿಂದ ಜಿಲ್ಲಾಧಿಕಾರಿಗಳಿಗೆ ಮನವಿ Read More »

ಬಿಜೆಪಿ ಒಳಮೊಗ್ರು ಶಕ್ತಿಕೇಂದ್ರದ ಸಭೆ

ಪುತ್ತೂರು: ಬಿಜೆಪಿ ಒಳಮೊಗ್ರು ಶಕ್ತಿಕೇಂದ್ರ ಲೋಕಸಭಾ ಚುನಾವಣೆ ಹಾಗೂ ಅಭ್ಯರ್ಥಿಯ ಮಹಾಶಕ್ತಿ ಕೇಂದ್ರ ಭೇಟಿಯ ಹಿನ್ನೆಲೆಯಲ್ಲಿ ಪೂರ್ವಭಾವಿ ಸಭೆ ಬೂತ್ ಸಮಿತಿ ಅಧ್ಯಕ್ಷ ಪುರಂದರ ಶೆಟ್ಟಿ ಮುಡಾಲ ಅವರ ಮನೆಯಲ್ಲಿ ನಡೆಯಿತು. ಸಭೆಯಲ್ಲಿ ಚುನಾವಣಾ ಸಮಿತಿ ಸಂಚಾಲಕ ಚನಿಲ ತಿಮ್ಮಪ್ಪ ಶೆಟ್ಟಿ, ಚುನಾವಣಾ ಬೂತ್ ಕಾರ್ಯ ಹಾಗೂ ಅಭ್ಯರ್ಥಿ ಭೇಟಿ ಕಾರ್ಯಕ್ರಮದ ಬಗ್ಗೆ ಮಾಹಿತಿ ನೀಡಿದರು. ಸಭೆಯಲ್ಲಿ ಗ್ರಾಮಾಂತರ ಮಂಡಲ ಪ್ರಧಾನ ಕಾರ್ಯದರ್ಶಿ ನಿತೀಶ್ ಕುಮಾರ್ ಶಾಂತಿವನ , ಜಿಲ್ಲಾ ಎಸ್ ಟಿ ಮೋರ್ಚಾ ಅಧ್ಯಕ್ಷ ಹರೀಶ್

ಬಿಜೆಪಿ ಒಳಮೊಗ್ರು ಶಕ್ತಿಕೇಂದ್ರದ ಸಭೆ Read More »

error: Content is protected !!
Scroll to Top