ಪುತ್ತೂರು

ಎ.6 : ಪಾದೆಬಂಬಿಲ ಶ್ರೀ ದುರ್ಗಾಭಜನಾ ಮಂದಿರದಲ್ಲಿ 24ನೇ ವರ್ಷದ ಶನೈಶ್ಚರ ಪೂಜೆ | ಆಮಂತ್ರಣ ಬಿಡುಗಡೆ

ಸವಣೂರು : ಪಾಲ್ತಾಡಿ ಗ್ರಾಮದ ಪಾದೆಬಂಬಿಲ ಶಕ್ತಿ ನಗರ ಶ್ರೀ ದುರ್ಗಾಭಜನಾ ಮಂಡಳಿಯ ವತಿಯಿಂದ ಎ.6ರಂದು ನಡೆಯಲಿರುವ 24ನೇ ವರ್ಷದ ಶನೈಶ್ಚರ ಪೂಜೆ ಹಾಗೂ ಭಗವದ್ಗೀತೆ ಪಾರಾಯಣ ,ಅರ್ಧ ಏಕಾಹ ಭಜನೆಯ ಆಮಂತ್ರಣ ಬಿಡುಗಡೆ ಶ್ರೀದುರ್ಗಾ ಭಜನಾ ಮಂದಿರದಲ್ಲಿ ನಡೆಯಿತು. ಆಮಂತ್ರಣವನ್ನು ಭಜನಾ ಮಂದಿರದ ಗೌರವಾಧ್ಯಕ್ಷ ಗಿರಿಶಂಕರ ಸುಲಾಯ ಹಾಗೂ ಪಾಲ್ತಾಡಿ ಗ್ರಾಮ ವಿಕಾಸ ಸಮಿತಿ ಅಧ್ಯಕ್ಷ ಪ್ರವೀಣ್ ಚೆನ್ನಾವರ ಅವರು ಬಿಡುಗಡೆಗೊಳಿಸಿದರು. ಈ ಸಂದರ್ಭದಲ್ಲಿ ಭಜನಾ ಮಂಡಳಿಯ ಪದಾಧಿಕಾರಿಗಳು ಉಪಸ್ಥಿತರಿದ್ದರು.

ಎ.6 : ಪಾದೆಬಂಬಿಲ ಶ್ರೀ ದುರ್ಗಾಭಜನಾ ಮಂದಿರದಲ್ಲಿ 24ನೇ ವರ್ಷದ ಶನೈಶ್ಚರ ಪೂಜೆ | ಆಮಂತ್ರಣ ಬಿಡುಗಡೆ Read More »

ಪಡುಮಲೆ ಗೆಜ್ಜೆಗಿರಿ ನಂದನ ಬಿತ್ತಿಲ್ ಕ್ಷೇತ್ರಕ್ಕೆ ಭೇಟಿ ನೀಡಿ ಪ್ರಾರ್ಥನೆ ಸಲ್ಲಿಸಿದ ಕಾಂಗ್ರೆಸ್ ಅಭ್ಯರ್ಥಿ ಪದ್ಮರಾಜ್ ಆರ್.

ಪುತ್ತೂರು: ಲೋಕಸಭಾ ಚುನಾವಣೆಯ ಕಾಂಗ್ರೆಸ್ ಅಭ್ಯರ್ಥಿ ಪದ್ಮರಾಜ್ ಅವರು ಸೋಮವಾರ ಗೆಜ್ಜೆಗಿರಿ ನಂದನ ಬಿತ್ತ್’ಲ್ ಕ್ಷೇತ್ರಕ್ಕೆ ಭೇಟಿ ನೀಡಿ ಪ್ರಾರ್ಥನೆ ಸಲ್ಲಿಸಿ ಬಳಿಕ ಚುನಾವಣಾ ಪ್ರಚಾರ ಕಾರ್ಯ ಆರಂಭಿಸಿದರು. ಕ್ಷೇತ್ರದ ಆದಿದೈವ ದೂಮಾವತಿ ನಡೆಯಲ್ಲಿ ಪ್ರಾರ್ಥಿಸಿ, ಸತ್ಯಧರ್ಮ ಚಾವಡಿಯಲ್ಲಿ ದೇಯಿ ಬೈದೆತಿ ಸಾನಿಧ್ಯದಲ್ಲಿ ಪ್ರಸಾದ ಸ್ವೀಕರಿಸಿದರು. ಪಡುಮಲೆ ಪೂಮಾಣಿ, ಕಿನ್ನಿಮಾಣಿ, ವ್ಯಾಘ್ರ ಚಾಮುಂಡಿ ಕ್ಷೇತ್ರಕ್ಕೆ ತೆರಳಿ ದೈವಗಳಿಗೆ ಪ್ರಾರ್ಥನೆ ಸಲ್ಲಿಸಿ, ಪ್ರಸಾದ ಸ್ವೀಕರಿಸಿದರು. ಪಡುಮಲೆ ನಾಗ ಬೆರ್ಮೆರ್ ಗುಡಿ, ನಾಗ ಸಾನಿಧ್ಯಕ್ಕೆ ತೆರಳಿ, ಪ್ರಾರ್ಥನೆ ಸಲ್ಲಿಸಿದರು. ಈ

ಪಡುಮಲೆ ಗೆಜ್ಜೆಗಿರಿ ನಂದನ ಬಿತ್ತಿಲ್ ಕ್ಷೇತ್ರಕ್ಕೆ ಭೇಟಿ ನೀಡಿ ಪ್ರಾರ್ಥನೆ ಸಲ್ಲಿಸಿದ ಕಾಂಗ್ರೆಸ್ ಅಭ್ಯರ್ಥಿ ಪದ್ಮರಾಜ್ ಆರ್. Read More »

ಪುತ್ತೂರು ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ವರ್ಷಾವಧಿ ಜಾತ್ರೋತ್ಸವಕ್ಕೆ ಗೊನೆ ಮುಹೂರ್ತ

ಪುತ್ತೂರು: ಇತಿಹಾಸ ಪ್ರಸಿದ್ಧ ಪುತ್ತೂರು ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ವರ್ಷಾವಧಿ ಜಾತ್ರೋತ್ಸವಕ್ಕೆ ಗೊನೆಮುಹೂರ್ತ ಸೋಮವಾರ ನಡೆಯಿತು. ಏ.10 ರಿಂದ 17 ರ ತನಕ ಶ್ರೀ ಮಹಾಲಿಂಗೇಶ್ವರ ದೇವರ ವೈಭವದ ಜಾತ್ರೋತ್ಸವ ನಡೆಯಲಿದ್ದು, ಪೂರ್ವಭಾವಿಯಾಗಿ ಇಂದು ಬೆಳಿಗ್ಗೆ ಪೂರ್ವ ಶಿಷ್ಟ ಸಂಪ್ರದಾಯದಂತೆ ದೇವಸ್ಥಾನದ ಗರ್ಭಗುಡಿ ಎದುರು ಪ್ರಾರ್ಥನೆ ಸಲ್ಲಿಸಿದ ಬಳಿ ವಾದ್ಯದೊಂದಿಗೆ ತೆರಳಿ ಗೊನೆ ಮುಹೂರ್ತ ನಡೆಯಿತು. ದೇವಸ್ಥಾನದ ಪ್ರಧಾನ ಅರ್ಚಕ ವೇ.ಮೂ. ವಿ.ಎಸ್‍. ಭಟ್ ಗೊನೆ ಮುಹೂರ್ತ ನೆರವೇರಿಸಿದರು. ಪ್ರಧಾನ ಅರ್ಚಕ ವಸಂತ ಕೆದಿಲಾಯ ಸಹಕರಿಸಿದರು. ಈ

ಪುತ್ತೂರು ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ವರ್ಷಾವಧಿ ಜಾತ್ರೋತ್ಸವಕ್ಕೆ ಗೊನೆ ಮುಹೂರ್ತ Read More »

ಉಪ್ಪಿನಂಗಡಿ ಕಂಬಳದಲ್ಲಿ ಪಾಲ್ಗೊಂಡ ಕಾಂಗ್ರೆಸ್ ಅಭ್ಯರ್ಥಿ ಪದ್ಮರಾಜ್ ಆರ್. | ಕನ್ನಡ ಸಿನಿಮಾ ‘ಕಲಹ’ದ ಪೋಸ್ಟರ್ ಬಿಡುಗಡೆ

ಉಪ್ಪಿನಂಗಡಿ: ವಿಜಯ – ವಿಕ್ರಮ ಜೋಡುಕರೆ ಕಂಬಳೋತ್ಸವದಲ್ಲಿ ಪಾಲ್ಗೊಂಡ ಲೋಕಸಭಾ ಚುನಾವಣೆಯ ಕಾಂಗ್ರೆಸ್ ಅಭ್ಯರ್ಥಿ ಪದ್ಮರಾಜ್ ಆರ್. ಅವರು, ಕಲಹ ಕನ್ನಡ ಸಿನಿಮಾದ ಪೋಸ್ಟರ್ ಅನಾವರಣಗೊಳಿಸಿದರು. ಪುತ್ತೂರು ಶಾಸಕ, ಉಪ್ಪಿನಂಗಡಿ ವಿಜಯ – ವಿಕ್ರಮ ಜೋಡುಕರೆ ಕಂಬಳ ಸಮಿತಿ ಅಧ್ಯಕ್ಷ ಅಶೋಕ್ ಕುಮಾರ್ ರೈ ಅಧ್ಯಕ್ಷತೆ ವಹಿಸಿದ್ದರು. ಕಂಬಳಕ್ಕೆ ತನ್ನದೇ ಆದ ವಿಶೇಷ ಕೊಡುಗೆ ನೀಡಿರುವ ವಲೇರಿಯನ್ ಡಯಾಸ್ (ಅಪ್ಪಣ್ಣ) ಅವರನ್ನು ಈ ಸಂದರ್ಭ ಸನ್ಮಾನಿಸಿ, ಗೌರವಿಸಲಾಯಿತು. ವೇದಿಕೆಯಲ್ಲಿ ಉಪ್ಪಿನಂಗಡಿ ಶ್ರೀ ಸಹಸ್ರಲಿಂಗೇಶ್ವರ- ಮಹಾಕಾಳಿ ದೇವಾಲಯದ ವ್ಯವಸ್ಥಾಪನಾ

ಉಪ್ಪಿನಂಗಡಿ ಕಂಬಳದಲ್ಲಿ ಪಾಲ್ಗೊಂಡ ಕಾಂಗ್ರೆಸ್ ಅಭ್ಯರ್ಥಿ ಪದ್ಮರಾಜ್ ಆರ್. | ಕನ್ನಡ ಸಿನಿಮಾ ‘ಕಲಹ’ದ ಪೋಸ್ಟರ್ ಬಿಡುಗಡೆ Read More »

ನ್ಯೂಸ್ ಪುತ್ತೂರು ವ್ಯವಸ್ಥಿತ ರೀತಿಯಲ್ಲಿ ಕಾರ್ಯಾಚರಿಸುತ್ತಿದೆ | ಸಮರ್ಪಣಾ ಚಾರಿಟೇಬಲ್ ಟ್ರಸ್ಟ್ ನಿಂದ ಸನ್ಮಾನ ಸ್ವೀಕರಿಸಿ ಕೆ.ರಾಧಾಕೃಷ್ಣ ನಾಯ್ಕ್  

ಪುತ್ತೂರು: ಉಪ್ಪಿನಂಗಡಿ ಶ್ರೀ ಸಹಸ್ರಲಿಂಗೇಶ್ವರ ದೇವಸ್ಥಾನದ ನೂತನ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷರಾಗಿ ಆಯ್ಕೆಯಾದ ಕೆ.ರಾಧಾಕೃಷ್ಣ ನಾಯ್ಕ್ ಏಳ್ನಾಡುಗುತ್ತು ಅವರನ್ನು ಪುತ್ತೂರು ಸಮರ್ಪಣಾ ಚಾರಿಟೇಬಲ್ ಟ್ರಸ್ಟ್ ವತಿಯಿಂದ ನ್ಯೂಸ್ ಪುತ್ತೂರು ಕಚೇರಿಯಲ್ಲಿ ಸನ್ಮಾನಿಸಲಾಯಿತು. ಸನ್ಮಾನ ಸ್ವೀಕರಿಸಿ ಮಾತನಾಡಿದ ಕೆ.ರಾಧಾಕೃಷ್ಣ ನಾಯ್ಕ್, ಪ್ರಾಮಾಣಿಕತೆಗೆ ಯಾವತ್ತೂ ಬೆಲೆ ಇದೆ. ಜಗತ್ತು ನಾವು ನೋಡಿದ ಹಾಗೆ ಇಲ್ಲ. ಜಗತ್ತನ್ನು ವಾಸ್ತವಾಂಶವಾಗಿ ನಾವು ಕಾಣುವುದು ಬೇರೆಯೇ. ನಾವು ನೋಡುತ್ತಿರುವ ಜಗತ್ತು ಬೇರೆಯೇ. ನ್ಯೂಸ್ ಪುತ್ತೂರು ಇಷ್ಟೊಂದು ವ್ಯವಸ್ಥಿತವಾಗಿ ಇದೆ ಎಂಬುದು ನನಗೆ ಇಂದು ಗೊತ್ತಾಗಿದೆ

ನ್ಯೂಸ್ ಪುತ್ತೂರು ವ್ಯವಸ್ಥಿತ ರೀತಿಯಲ್ಲಿ ಕಾರ್ಯಾಚರಿಸುತ್ತಿದೆ | ಸಮರ್ಪಣಾ ಚಾರಿಟೇಬಲ್ ಟ್ರಸ್ಟ್ ನಿಂದ ಸನ್ಮಾನ ಸ್ವೀಕರಿಸಿ ಕೆ.ರಾಧಾಕೃಷ್ಣ ನಾಯ್ಕ್   Read More »

ಬಿಜೆಪಿ ವತಿಯಿಂದ ಬೊಳುವಾರು ಶಕ್ತಿ ಕೇಂದ್ರದ ಬೂತ್ ಸಭೆ

ಪುತ್ತೂರು: ಬಿಜೆಪಿ ಪುತ್ತೂರು ನಗರ ಮಂಡಲ ಬೊಳುವಾರು ಶಕ್ತಿಕೇಂದ್ರದ ಬೂತ್ ಸಂ.123,124,129 ರ ಸಭೆ ಕೊಂಬೆಟ್ಟು ಗಣೇಶ್ ಬಾಳಿಗರ ಮನೆಯಲ್ಲಿ ನಡೆಯಿತು. ಸಭೆಯಲ್ಲಿ ಲೋಕಸಭಾ ಚುನಾವಣೆಯಲ್ಲಿ ದ.ಕ.ಜಿಲ್ಲೆಯಲ್ಲಿ ಕ್ಯಾ.ಬ್ರಿಜೇಶ್‍ ಚೌಟರನ್ನು ಗೆಲ್ಲಿಸುವ ಮೂಲಕ ನರೇಂದ್ರ ಮೋದಯವರನ್ನು ಮತ್ತೊಮ್ಮೆ ಪ್ರಧಾನಿ ಮಾಡುವ ಕುರಿತು ಚರ್ಚಿಸಲಾಯಿತು. ಈ ಸಂದರ್ಭದಲ್ಲಿ ಹಿರಿಯರಾದ ರಂಗನಾಥ ರಾವ್, ನಗರ ಮಂಡಲ ಅಧ್ಯಕ್ಷ ಪಿ.ಜಿ.ಜಗನ್ನಿವಾಸ ರಾವ್, ಪ್ರಧಾನ ಕಾರ್ಯದರ್ಶಿ ಯುವರಾಜ್ ಪೆರಿಯತ್ತೋಡಿ, ನಗರ ಸಭಾ ಸದಸ್ಯ ಸಂತೋಷ್ ಕುಮಾರ್ ಬೊಳುವಾರು, ಶಕ್ತಿ ಕೇಂದ್ರ ಪ್ರಮುಖ್ ನೀಲಂತ್

ಬಿಜೆಪಿ ವತಿಯಿಂದ ಬೊಳುವಾರು ಶಕ್ತಿ ಕೇಂದ್ರದ ಬೂತ್ ಸಭೆ Read More »

ಬಿಜೆಪಿಯಿಂದ ಮನೆ ಸಂಪರ್ಕ ಅಭಿಯಾನಕ್ಕೆ ಚಾಲನೆ

ಪುತ್ತೂರು: ಭಾರತೀಯ ಜನತಾ ಪಾರ್ಟಿಯ ಪುತ್ತೂರು ವಿಧಾನಸಭಾ ಕ್ಷೇತ್ರದ ಪುತ್ತೂರು ನಗರ ಮಂಡಲದ‌ ಮನೆ ಸಂಪರ್ಕ ಅಭಿಯಾನಕ್ಕೆ ನೆಲಪ್ಪಾಲಿನ ಬೂತ್ ಸಂಖ್ಯೆ 63 ರಲ್ಲಿ ಭಾನುವಾರ ಚಾಲನೆ ನೀಡಲಾಯಿತು. ಈ ಸಂದರ್ಭದಲ್ಲಿ ಎ.2 ರಂದು ನಡೆಯುವ ಕಾರ್ಯಕರ್ತರ ಸಮಾವೇಶದ ಕುರಿತು ಮಾಹಿತಿ ನೀಡಲಾಯಿತು. ಅಭಿಯಾನದಲ್ಲಿ ಮಾಜಿ ಶಾಸಕ ಸಂಜೀವ ಮಠಂದೂರು, ಮಂಗಳೂರು ವಿಭಾಗದ ಸಹ ಪ್ರಭಾರಿ ಗೋಪಾಲಕೃಷ್ಣ ಹೇರಳೆ, ನಗರ ಮಂಡಲದ ಪ್ರಧಾನ ಕಾರ್ಯದರ್ಶಿ ಯುವರಾಜ ಪೆರಿಯತ್ತೋಡಿ, ನಗರಸಭೆ ನಿಕಟಪೂರ್ವ ಅಧ್ಯಕ್ಷ ಜೀವಂದರ್ ಜೈನ್, ಬೂತ್ ಅಧ್ಯಕ್ಷ

ಬಿಜೆಪಿಯಿಂದ ಮನೆ ಸಂಪರ್ಕ ಅಭಿಯಾನಕ್ಕೆ ಚಾಲನೆ Read More »

ಲೋಕಸಭೆ ಚುನಾವಣೆ | ಜಾಹೀರಾತು ನೀಡಿ ನೀತಿ ಸಂಹಿತೆ ಉಲ್ಲಂಘಿಸಿದ ಶಾಸಕ ಅಶೋಕ್ ಕುಮಾರ್ ರೈ ವಿರುದ್ಧ ಚುನಾವಣಾ ಆಯೋಗಕ್ಕೆ ದೂರು

ಉಪ್ಪಿನಂಗಡಿ: ಲೊಕಸಭೆ ಚುನಾವಣೆ ಹಿನ್ನಲೆಯಲ್ಲಿ ನೀತಿ ಸಂಹಿತೆ ಜಾರಿಯಲ್ಲಿದ್ದರೂ ಪತ್ರಿಕೆಯೊಂದಕ್ಕೆ ಜಾಹೀರಾತು ನೀಡಿದ ಶಾಸಕ ಅಶೋಕ್ ಕುಮಾರ್ ರೈ ಅವರ ವಿರುದ್ಧ ಚುನಾವಣಾ ಆಯೋಗಕ್ಕೆ ದೂರು ನೀಡಲಾಗಿದೆ. ನೀತಿ ಸಂಹಿತೆ ಜಾರಿಯಲ್ಲಿದ್ದರೂ ಕಂಬಳದ ಜಾಹೀರಾತು ನೀಡಲಾಗಿದೆ. ಈ ಕುರಿತು ಪರಿಶೀಲನೆ ನಡೆಸಿ ಕ್ರಮ ಕೈಗೊಳ್ಳುವಂತೆ ದೂರಿನಲ್ಲಿ ತಿಳಿಸಲಾಗಿದೆ.

ಲೋಕಸಭೆ ಚುನಾವಣೆ | ಜಾಹೀರಾತು ನೀಡಿ ನೀತಿ ಸಂಹಿತೆ ಉಲ್ಲಂಘಿಸಿದ ಶಾಸಕ ಅಶೋಕ್ ಕುಮಾರ್ ರೈ ವಿರುದ್ಧ ಚುನಾವಣಾ ಆಯೋಗಕ್ಕೆ ದೂರು Read More »

ಎಸಿಪಿ ಹವಾಲ್ದಾರ್ ಚಂದ್ರಶೇಖರ ಗೌಡ ಕೋಟೆಪಾಲು ಇಂದು ಸೇವಾ ನಿವೃತ್ತಿ

ಪುತ್ತೂರು: ಭಾರತೀಯ ಸೇನೆಯಲ್ಲಿ ಎಸಿಪಿ ಹವಾಲ್ದಾರ್ ಆಗಿ 22 ವರ್ಷಗಳ ಕಾಲ ಸೇವೆ ಸಲ್ಲಿಸಿರುವ ಚಂದ್ರಶೇಖರ ಗೌಡ ಕೋಟಿಪಾಲು ಇಚ್ಲಂಪಾಡಿ ಇಂದು ಸೇವೆಯಿಂದ ನಿವೃತ್ತಿ ಹೊಂದಲಿದ್ದಾರೆ. ಕಡಬ ತಾಲೂಕಿನ ಇಚ್ಲಂಪಾಡಿ ಗ್ರಾಮದ ಕೋಟೆಪಾಲು ಮನೆ ನಿವಾಸಿ ಈಶ್ವರಪ್ಪ ಗೌಡ ಹಾಗೂ ಯಮುನಾ ದಂಪತಿಯ ದ್ವಿತೀಯ ಪುತ್ರರಾಗಿರುವ ಚಂದ್ರಶೇಖರ ಕೆ. ಅವರು 1981 ನೇ ಒಕ್ಟೋಬರ್ 14 ರಂದು ಜನಿಸಿ ಬಳಕ ತನ್ನ ಪ್ರಾಥಮಿಕ ಶಿಕ್ಷಣವನ್ನು ಚಾರ್ವಕ  ಗ್ರಾಮದ ಕೊಪ್ಪ ದ.ಕ.ಜಿ.ಪ ಹಿರಿಯ ಪ್ರಾಥಮಿಕ ಶಾಲೆಯಲ್ಲಿ, ಬಳಿಕ ಇಚ್ಲಂಪಾಡಿ

ಎಸಿಪಿ ಹವಾಲ್ದಾರ್ ಚಂದ್ರಶೇಖರ ಗೌಡ ಕೋಟೆಪಾಲು ಇಂದು ಸೇವಾ ನಿವೃತ್ತಿ Read More »

ಜಿ.ಎಲ್.ಆಚಾರ್ಯ ಜ್ಯುವೆಲ್ಲರ್ಸ್‍ ನಲ್ಲಿ ಜಿ.ಎಲ್. ಶಾಪಿಂಗ್ ಹಬ್ಬ “ವರುಷದ ಹರುಷ”

ಪುತ್ತೂರು: ಪುತ್ತೂರಿನ ಮುಖ್ಯ ರಸ್ತೆಯಲ್ಲಿರುವ ಪ್ರತಿಷ್ಠಿತ ಚಿನ್ನಾಭರಣಗಳ ಮಳಿಗೆ ಜಿ.ಎಲ್.ಆಚಾರ್ಯ ಜ್ಯುವೆಲ್ಲರ್ಸ್‍  ಸಂಸ್ಥೆ ಪುತ್ತೂರು, ಮೂಡಬಿದ್ರೆ, ಸುಳ್ಯ, ಹಾಸನ ಮತ್ತು ಕುಶಾಲನಗರದಲ್ಲಿರುವ ತಮ್ಮ ಶಾಖೆಗಳಲ್ಲಿ ವಾರ್ಷಿಕೋತ್ಸವ ಸಂಭ್ರಮದ ಪ್ರಯುಕ್ತ ನೆಚ್ಚಿನ ಗ್ರಾಹಕರಿಗೆ ಜಿ.ಎಲ್‍.ಶಾಪಿಂಗ್ ಹಬ್ಬ “ವರುಷದ ಹಬ್ಬ” ವಿಶಿಷ್ಟ ಶಾಪಿಂಗ್ ಹಬ್ಬವನ್ನು ಏ.1 ರಿಂದ 7 ರ ವರೆಗೆ ಆಯೋಜಿಸಿದೆ. ಗ್ರಾಹಕರಿಗೆ ವಜ್ರದ ಆಭರಣಗಳು, ಚಿನ್ನದ ಆಭರಣಗಳು ಹಾಗೂ ಬೆಳ್ಳಿಯ ಆಭರಣಗಳ ಖರೀದಿಗೆ ಅದ್ಭುತ ರಿಯಾಯಿತಿಗಳನ್ನು ಪ್ರಕಟಿಸಲಾಗಿದೆ. ಚಿನ್ನಾಭರಣ ಖರೀದಿಗೆ ಪ್ರತೀ ಗ್ರಾಂಗೆ 150 ರೂ. ವರೆಗೆ

ಜಿ.ಎಲ್.ಆಚಾರ್ಯ ಜ್ಯುವೆಲ್ಲರ್ಸ್‍ ನಲ್ಲಿ ಜಿ.ಎಲ್. ಶಾಪಿಂಗ್ ಹಬ್ಬ “ವರುಷದ ಹರುಷ” Read More »

error: Content is protected !!
Scroll to Top