ತೆಂಗಿನಕಾಯಿ ಗೆರಟೆಯಲ್ಲಿ ನೀರು ತುಂಬಿಸಿ ಮರದ ಕೊಂಬೆಗಳಿಗೆ ಕಟ್ಟಿ ಹಕ್ಕಿಗಳ ದಾಹ ತೀರಿಸುವ ವಿನೂತನ ಕಾರ್ಯ | ವಿವೇಕಾನಂದ ಕಾಲೇಜಿನ ಸ್ನಾತಕೋತ್ತರ ಪತ್ರಿಕೋದ್ಯಮ ವಿಭಾಗದಿಂದ ಈ ವಿನೂತನ ಅಭಿಯಾನ
ಪುತ್ತೂರು: ಬೇಸಿಗೆಯ ಬೇಗೆಗೆ ದಣಿದ ಪಕ್ಷಿಗಳ ನೀರಡಿಕೆ ನೀಗಿಸುವ ವಿನೂತನ ಕಾರ್ಯಕ್ಕೆ ವಿವೇಕಾನಂದ ಕಾಲೇಜಿನ ಸ್ನಾತಕೋತ್ತರ ಪತ್ರಿಕೋದ್ಯಮ ವಿಭಾಗ ಕೈ ಹಾಕಿದ್ದು, ತೆಂಗಿನಕಾಯಿಯ ಗೆರಟೆಯಲ್ಲಿ ನೀರು ತುಂಬಿಸಿ ಅದನ್ನು ಮರದ ಕೊಂಬೆಗಳಿಗೆ ಕಟ್ಟುವ ಮೂಲಕ ಹಕ್ಕಿಗಳ ದಾಹವನ್ನು ನೀಗಿಸುವ ವಿಶೇಷ ಅಭಿಯಾನ ಇದಾಗಿದೆ. ಕಾಲೇಜಿನ ಆಡಳಿತ ಮಂಡಳಿ ಅಧ್ಯಕ್ಷ ಪ್ರೊ.ಶ್ರೀಪತಿ ಕಲ್ಲೂರಾಯ ಕಾರ್ಯಕ್ರಮವನ್ನು ಸಾಂಕೇತಿಕವಾಗಿ ಉದ್ಘಾಟಿಸಿ ಮಾತನಾಡಿ, ಬಿಸಿಲ ಝಳ ಇಡೀ ಜೀವಸಂಕುಲವನ್ನೇ ಕಾಡುತ್ತಿದೆ. ಇಂತಹ ಅಭಿಯಾನವನ್ನು ಮಾಡುವ ಅವಶ್ಯಕತೆಯಿದ್ದು, ಇದು ಒಂದು ದಿನಕ್ಕೆ ಸೀಮಿತವಾಗಿರದೆ ಪ್ರತೀ […]










