ಪುತ್ತೂರು

ಮೇ 1-2 : ಕುಂಜೂರು ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನದ ವಾರ್ಷಿಕ ಜಾತ್ರೋತ್ಸವ

ಪುತ್ತೂರು: ತಾಲೂಕಿನ ಕುಂಜೂರು ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನದ ವಾರ್ಷಿಕ ಜಾತ್ರೋತ್ಸವವು ಮೇ 1 ಹಾಗೂ 2 ರಂದು ವಿವಿಧ ವೈಧಿಕ ಕಾರ್ಯಕ್ರಮಗಳೊಂದಿಗೆ ನಡೆಯಲಿದೆ. ಜಾತ್ರೋತ್ಸವದ ಅಂಗವಾಗಿ ಮೇ 1 ರಂದು ಕೆಮ್ಮಿಂಜೆ ಬ್ರಹ್ಮಶ್ರೀ ನಾಗೇಶ ತಂತ್ರಿಗಳ ನೇತೃತ್ವದಲ್ಲಿ ಬೆಳಿಗ್ಗೆ  9 ಕ್ಕೆ ಗಣಪತಿ ಹೋಮ, ಮಧ್ಯಾಹ್ನ 12.30 ಕ್ಕೆ ವಿಶೇಷ ಪೂಜೆ, ಮಹಾಪೂಜೆ ನಡೆದು ಬಳಿಕ ಅನ್ನಸಂತರ್ಪಣೆ ನಡೆಯಲಿದೆ. ಸಂಜೆ 6.30 ಕ್ಕೆ ಮಹಾಪೂಜೆ, ರಾತ್ರಿ 7 ರಿಂದ ಶ್ರೀ ಭೂತ ಬಲಿ ಉತ್ಸವ, ವಸಂತ ಪೂಜೆ, […]

ಮೇ 1-2 : ಕುಂಜೂರು ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನದ ವಾರ್ಷಿಕ ಜಾತ್ರೋತ್ಸವ Read More »

ಮಾಸ್ಟರ್ಸ್ ಅಥ್ಲೆಟಿಕ್ಸ್ ನಲ್ಲಿ ವೆಂಕಟೇಶ್ ಪ್ರಸಾದ್ ಗೆ ಕಂಚಿನ ಪದಕ

ಪುತ್ತೂರು: ಇಂಡಿಯನ್ ಮಾಸ್ಟರ್ಸ್ ಅಥ್ಲೆಟಿಕ್ಸ್ ವತಿಯಿಂದ ಮುಂಬಯಿಯ ಸೋಮಯ್ಯ ವಿದ್ಯಾವಿಹಾರ ವಿಶ್ವವಿದ್ಯಾಲಯ ಕ್ರೀಡಾಂಗಣದಲ್ಲಿ ನಡೆದ ರಾಷ್ಟ್ರೀಯ ಹಿರಿಯರ ಅಥ್ಲೆಟಿಕ್ಸ್ ಚಾಂಪಿಯನ್ ಶಿಪ್ ನಲ್ಲಿ ವೆಂಕಟೇಶ್ ಪ್ರಸಾದ್ ಹಲವು ಪದಕಗಳನ್ನು ಪಡೆದಿದ್ದಾರೆ.  ಮಹಾರಾಷ್ಟ್ರ ಮಾಸ್ಟರ್ಸ್ ಅಥ್ಲೆಟಿಕ್ಸ್ ಅಸೋಸಿಯೇಷನ್ ನವರು ಎಪ್ರಿಲ್ 26 ರಿಂದ 28 ರವರೆಗೆ ನಡೆಸಿಕೊಟ್ಟ 43 ನೇ ರಾಷ್ಟ್ರೀಯ ಹಿರಿಯರ ಅಥ್ಲೆಟಿಕ್ಸ್ ಚಾಂಪಿಯನ್ ಶಿಪ್ ಇದಾಗಿದ್ದು, 400 ಮೀ ಹರ್ಡಲ್ಸ್ ನಲ್ಲಿ ಕಂಚಿನ ಪದಕ, 5 ಕಿ.ಮೀ ನಡಿಗೆ, ಎತ್ತರ ಜಿಗಿತ ಮತ್ತು 110 ಮೀ

ಮಾಸ್ಟರ್ಸ್ ಅಥ್ಲೆಟಿಕ್ಸ್ ನಲ್ಲಿ ವೆಂಕಟೇಶ್ ಪ್ರಸಾದ್ ಗೆ ಕಂಚಿನ ಪದಕ Read More »

ಬನ್ನೂರು ನಿವಾಸಿ ನೇಣು ಬಿಗಿದು ಆತ್ಮಹತ್ಯೆ

ಪುತ್ತೂರು: ಬನ್ನೂರಿನ ಮೇಲ್ಮಜಿಲು ನಿವಾಸಿಯೊಬ್ಬರು ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡ ಘಟನೆ  ಸೋಮವಾರ ನಡೆದಿದೆ. ಸೀತಾರಾಮ ಶೆಟ್ಟಿ (45) ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಡವರು. ಖಾಸಗಿ ಗ್ಯಾಸ್ ಕಂಪೆನಿಯಲ್ಲಿ ಕಳೆದ ಹಲವಾರು ವರ್ಷಗಳಿಂದ ದುಡಿಯುತ್ತಿದ್ದ ಇವರು, ಮನೆಮನೆಗೆ ಗ್ಯಾಸ್ ಪೂರೈಕೆ ಮಾಡುತ್ತಿದ್ದರು. ಮನೆಯ ಒಳಗಡೆ ಫ್ಯಾನ್ ಗೆ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಆತ್ಮಹತ್ಯೆಗೆ ಕಾರಣ ತಿಳಿದುಬಂದಿಲ್ಲ. ಮಂಗಳೂರು ಕೆ.ಎಸ್. ಹೆಗ್ಡೆ ಆಸ್ಪತ್ರೆಯಲ್ಲಿ ಪೋಸ್ಟ್ ಮಾರ್ಟಂ ಮಾಡಲಾಗಿದ್ದು, ಪುತ್ತೂರು ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.ಮೃತರು ಪತ್ನಿ

ಬನ್ನೂರು ನಿವಾಸಿ ನೇಣು ಬಿಗಿದು ಆತ್ಮಹತ್ಯೆ Read More »

ವಿವೇಕಾನಂದ ಇಂಜಿನಿಯರಿಂಗ್ ಕಾಲೇಜಿನಲ್ಲಿ ಹಿರಿಯ ವಿದ್ಯಾರ್ಥಿಗಳ ಸಮ್ಮಿಲನ

ಪುತ್ತೂರು: ಕಲಿತು ಹೊರಬಂದ ಪ್ರತಿಯೊಬ್ಬ ಹಿರಿಯ ವಿದ್ಯಾರ್ಥಿಯೂ ಆ ವಿದ್ಯಾ ಸಂಸ್ಥೆಯ ರಾಯಭಾರಿಯಾಗುವುದರ ಜತೆಯಲ್ಲಿ ಅಲ್ಲಿನ ಸೌಲಭ್ಯಗಳ ಬಗ್ಗೆ ಮಾಹಿತಿಯನ್ನು ನೀಡುತ್ತಾ ಸಂಸ್ಥೆಯ ಬೆಳವಣಿಗೆಗೆ ಸಹಾಯಕರಾಗಬೇಕು ಎಂದು ಪುತ್ತೂರಿನ ವಿವೇಕಾನಂದ ಕಾಲೇಜ್ ಆಫ್ ಎಂಜಿನಿಯರಿಂಗ್ ಎಂಡ್ ಟೆಕ್ನಾಲಜಿಯ ಆಡಳಿತ ಮಂಡಳಿಯ ಸಂಚಾಲಕ ಸುಬ್ರಮಣ್ಯ ಭಟ್.ಟಿ.ಎಸ್ ಹೇಳಿದರು. ಅವರು ಪುತ್ತೂರಿನ ವಿವೇಕಾನಂದ ಕಾಲೇಜ್ ಆಫ್ ಎಂಜಿನಿಯರಿಂಗ್ ಎಂಡ್ ಟೆಕ್ನಾಲಜಿಯ ಶ್ರೀರಾಮ ಸಭಾಭವನದಲ್ಲಿ ನಡೆದ ಹಿರಿಯ ವಿದ್ಯಾರ್ಥಿಗಳ ಸಮ್ಮಿಲನ ಕಾರ್ಯಕ್ರಮದಲ್ಲಿ ಮಾತಾಡಿದರು. ಸಂಸ್ಥೆಯಲ್ಲಿ ಕಲಿಯುವ ಕಿರಿಯ ವಿದ್ಯಾರ್ಥಿಗಳ ಹಿತಕ್ಕಾಗಿ ಕ್ಯಾಂಪಸ್

ವಿವೇಕಾನಂದ ಇಂಜಿನಿಯರಿಂಗ್ ಕಾಲೇಜಿನಲ್ಲಿ ಹಿರಿಯ ವಿದ್ಯಾರ್ಥಿಗಳ ಸಮ್ಮಿಲನ Read More »

ನೆಹರುನಗರ ವಿವೇಕಾನಂದ ಕಾಲೇಜು ಸಂಪರ್ಕ ರೈಲ್ವೇ ಮೇಲ್ಸೇತುವೆ ಸಂಚಾರಕ್ಕೆ ಮುಕ್ತ

ಪುತ್ತೂರು: ನೆಹರುನಗರ ವಿವೇಕಾನಂದ ಕಾಲೇಜು ಸಂಪರ್ಕ ರೈಲ್ವೇ ಮೇಲ್ಸೇತುವೆ ಕಾಮಗಾರಿ ಸಂಪೂರ್ಣಗೊಂಡಿದ್ದು, ಇದೀಗ ಪಾದಚಾರಿಗಳ, ವಾಹನ ಸಂಚಾರಕ್ಕೆ ತೆರದುಕೊಂಡಿದೆ. ಕಳೆದ ಹಲವಾರು ವರ್ಷಗಳ ಬೇಡಿಕೆಯಾಗಿದ್ದ ಈ ಸೇತುವೆ ಅಗಲ ಕಿರಿದಾಗಿತ್ತು. ಒಂದು ಬಾರಿಗೆ ಒಂದೇ ನಾಲ್ಕು ಚಕ್ರದ ವಾಹನ ಚಲಿಸುವಂತಿತ್ತು. ಇದೀಗ ಹಲವು ವರ್ಷಗಳ ಬೇಡಿಕೆ ಈಡೇರಿದಂತಾಗಿದೆ. ಆದರೆ ಚುನಾವಣೆ ನೀತಿ ಸಂಹಿತೆ ಇರುವುದರಿಂದ ಯಾವುದೇ ಕಾರ್ಯಕ್ರಮದ ಮೂಲಕ ಉದ್ಘಾಟನೆ ಮಾಡುವ ಹಾಗಿಲ್ಲ. ಅಂತೂ ವಾಹನಗಳು, ಪಾದಚಾರಿಗಳು ಇದೀಗ ಸಂಚರಿಸುವಂತಾಗಿದೆ.

ನೆಹರುನಗರ ವಿವೇಕಾನಂದ ಕಾಲೇಜು ಸಂಪರ್ಕ ರೈಲ್ವೇ ಮೇಲ್ಸೇತುವೆ ಸಂಚಾರಕ್ಕೆ ಮುಕ್ತ Read More »

ಗುರು ಪರಂಪರೆ ಅತ್ಯಂತ ಶ್ರೇಷ್ಠ ಪರಂಪರೆ : ಡಾ. ಶ್ರೀಧರ ಹೆಚ್.ಜಿ | ವಿವೇಕಾನಂದ ಕಾಲೇಜಿನಲ್ಲಿ ಭವಿಷ್ ಶಿಬಿರ ಉದ್ಘಾಟನೆ

ಪುತ್ತೂರು: ಭಾರತೀಯ ಸಂಸ್ಕೃತಿಯಲ್ಲಿ ಗುರು ಪರಂಪರೆ ಎನ್ನುವುದು ಅತ್ಯಂತ ಶ್ರೇಷ್ಠವಾದ ಪರಂಪರೆ. ರಾಮಾಯಣ, ಮಹಾಭಾರತ, ವೈದಿಕ ಸಂಸ್ಕೃತಿಯಲ್ಲಿ ಗುರುವಿಗೆ ಮಹತ್ತರವಾದ ಸ್ಥಾನವಿದೆ. ಜ್ಞಾನದ ದಾರಿಯಲ್ಲಿ ಪ್ರವೇಶ ಮಾಡಲು ಮೊದಲು ಮನಸ್ಸನ್ನು ನಿಗ್ರಹಿಸಬೇಕು. ನಮ್ಮ ಜ್ಞಾನದ ಹಾದಿಯನ್ನು ನಾವೇ ಹುಡುಕಿ ಅದರಲ್ಲಿ ಮುನ್ನುಗ್ಗಬೇಕು. ಜೀವನದಲ್ಲಿ ಅಧ್ಯಯನವಿಲ್ಲದೆ ಯಾವುದು ಪರಿಪೂರ್ಣವಾಗುವುದಿಲ್ಲ. ಅಧ್ಯಯನ ಮಾಡಲು ಆಸಕ್ತಿ ಮುಖ್ಯ ಎಂದು ವಿವೇಕಾನಂದ ಕಾಲೇಜಿನ ಪರೀಕ್ಷಾಂಗ ಕುಲ ಸಚಿವ ಡಾ.ಶ್ರೀಧರ್ ಹೆಚ್.ಜಿ ಹೇಳಿದರು. ಅವರು ವಿವೇಕಾನಂದ ಕಲಾ, ವಿಜ್ಞಾನ ಮತ್ತು ವಾಣಿಜ್ಯ ಮಹಾವಿದ್ಯಾಲಯದ (ಸ್ವಾಯತ್ತ)

ಗುರು ಪರಂಪರೆ ಅತ್ಯಂತ ಶ್ರೇಷ್ಠ ಪರಂಪರೆ : ಡಾ. ಶ್ರೀಧರ ಹೆಚ್.ಜಿ | ವಿವೇಕಾನಂದ ಕಾಲೇಜಿನಲ್ಲಿ ಭವಿಷ್ ಶಿಬಿರ ಉದ್ಘಾಟನೆ Read More »

ಸಂತ ಫಿಲೋಮಿನಾ ಕಾಲೇಜಿನ ಎನ್ ಎಸ್ ಎಸ್ ವಾರ್ಷಿಕ ವಿಶೇಷ ಶಿಬಿರಕ್ಕೆ ಬಿಳಿಯೂರು ಶಾಲೆಯಲ್ಲಿ ಚಾಲನೆ

ಪುತ್ತೂರು: ಸಂತ ಫಿಲೋಮಿನಾ ಕಾಲೇಜಿನ ರಾಷ್ಟ್ರೀಯ ಸೇವಾಯೋಜನೆಯ ವಾರ್ಷಿಕ ವಿಶೇಷ ಶಿಬಿರ ಏ.28 ರಿಂದ ಮೇ4 ರ ತನಕ ನಡೆಯಲಿದ್ದು, ಬಿಳಿಯೂರು ಹಿ. ಪ್ರಾ ಶಾಲೆಯಲ್ಲಿ ಭಾನುವಾರ ಚಾಲನೆ ನೀಡಲಾಯಿತು. ವಿಜ್ಞಾನ ಮತ್ತು ವೈಜ್ಞಾನಿಕ ಮನೋಧರ್ಮಕ್ಕಾಗಿ ಯುವಜನತೆ ಎಂಬ ಶಿರೋನಾಮೆಯಲ್ಲಿ ಸಶಕ್ತ ಭಾರತಕ್ಕಾಗಿ ಯುವಜನತೆ ಎಂಬ ಘೋಷಣೆಯೊಂದಿಗೆ ಏಳು ದಿನಗಳ ಕಾಲ ನಡೆಯಲಿರುವ ಕಾಲೇಜಿನ ಎನ್ ಎಸ್ ಎಸ್ ಘಟಕಗಳ ವಾರ್ಷಿಕ ವಿಶೇಷ ಶಿಬಿರವನ್ನು ಬಿಳಿಯೂರು ಶಾಲಾಭಿವೃದ್ಧಿ ಸಮಿತಿಯ ಅಧ್ಯಕ್ಷ ನಳಿನಿ ಉದ್ಘಾಟಿಸಿ, ಫಿಲೋಮಿನಾ ಕಾಲೇಜಿನ ವಿದ್ಯಾರ್ಥಿಗಳು

ಸಂತ ಫಿಲೋಮಿನಾ ಕಾಲೇಜಿನ ಎನ್ ಎಸ್ ಎಸ್ ವಾರ್ಷಿಕ ವಿಶೇಷ ಶಿಬಿರಕ್ಕೆ ಬಿಳಿಯೂರು ಶಾಲೆಯಲ್ಲಿ ಚಾಲನೆ Read More »

ಕೆರೆಮೂಲೆ ದಿವಾಕರ ನಾಪತ್ತೆ !

ಪುತ್ತೂರು: ಕೆದಂಬಾಡಿ ಗ್ರಾಮದ ಕೆರೆಮೂಲೆ ನಿವಾಸಿಯೊಬ್ಬರು ನಾಪತ್ತೆಯಾದ ಕುರಿತು ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಕೆರೆಮೂಲೆ ದಿ.ಸಂಖಪ್ಪ ಪೂಜಾರಿ ಅವರ ಪುತ್ರ ದಿವಾಕರ (38) ನಾಪತ್ತೆಯಾದವರು. ಅರಿಯಡ್ಕ ಗ್ರಾಮದ ಕೆರೆಮೂಲೆಯವರಾದ ದಿವಾಕರ ಅಡುಗೆ ಕೆಲಸಕ್ಕೆ ಸಹಾಯಕರಾಗಿ ಹೋಗುತ್ತಿದ್ದು, ಏ.27 ರಂದು ಮನೆಯಿಂದ ಹೊರಗೆ ಹೋದವರು ವಾಪಾಸು ಮನೆಗೆ ಬಾರದೆ ನಾಪತ್ತೆಯಾಗಿದ್ದಾರೆ ಎನ್ನಲಾಗಿದೆ. ದಿವಾಕರ ಅವರ ಮೊಬೈಲ್ ಸ್ವಿಚ್ ಆಫ್‍ ಆಗಿದೆ ಎಂದು ಅವರ ಚಿಕ್ಕಪ್ಪ ಸೀತಾರಾಮ ಪೂಜಾರಿಯವರು ಗ್ರಾಮಾಂತರ ಠಾಣೆಗೆ ದೂರು ನೀಡಿದ್ದಾರೆ.

ಕೆರೆಮೂಲೆ ದಿವಾಕರ ನಾಪತ್ತೆ ! Read More »

ಮಳೆಗಾಗಿ ಶ್ರೀ‌ ಮಹಾಲಿಂಗೇಶ್ವರ ದೇವಸ್ಥಾನದಲ್ಲಿ‌ ಪರ್ಜನ್ಯ ಜಪ

ಪುತ್ತೂರು: ಮಳೆ ಇಲ್ಲದೆ ಕರಾವಳಿ ಬಿಸಿ ತಾಪದಿಂದ ಕೂಡಿದ್ದು ಜನ‌ಸಂಕಷ್ಡ ಎದುರಿಸುವಂತಾಗಿದ್ದು ಶೀಘ್ರ ಮಳೆ ಪ್ರಾಪ್ತಿಗಾಗಿ ಪುತ್ತೂರಿನ ಶ್ರೀ‌ಮಹಾಲಿಂಗೇಶ್ವರ ದೇವಳದಲ್ಲಿ‌ಶಾಸಕರ ಸೂಚನೆಯಂತೆ ಪರ್ಜನ್ಯ ಜ‌ಪ ಭಾನುವಾರ ನೆರವೇರಿತು. ಜಪ ಕಾರ್ಯಕ್ರಮದಲ್ಲಿ‌ಶಾಸಕ ಅಶೋಕ್ ರೈಭಾಗವಹಿಸಿ ಮಳೆಗಾಗಿ ದೇವರಲ್ಲಿ‌ ಪ್ರಾರ್ಥನೆ ಮಾಡಿದರು. ಈ‌ಸಂದರ್ಭದಲ್ಲಿ ಪಂಜಿಗುಡ್ಡೆ ಈಶ್ವರ ಭಟ್, ನ್ಯಾಯವಾದಿ ಜಗನ್ನಿವಾಸ್ ರಾವ್, ಕೋಡಿಂಬಾಡಿ ಗ್ರಾಪಂ ಉಪಾಧ್ಯಕ್ಷರಾದ ಜಯಪ್ರಕಾಶ್ ಬದಿನಾರ್, ರಂಜಿತ್ ಬಂಗೇರ ಮೊದಲಾದವರು ಉಪಸ್ಥಿತರಿದ್ದರು.

ಮಳೆಗಾಗಿ ಶ್ರೀ‌ ಮಹಾಲಿಂಗೇಶ್ವರ ದೇವಸ್ಥಾನದಲ್ಲಿ‌ ಪರ್ಜನ್ಯ ಜಪ Read More »

ಬಲ್ನಾಡು ಶ್ರೀ ದಂಡನಾಯಕ-ಉಳ್ಳಾಲ್ತಿ, ದೈವಗಳ ನೇಮ ನಡಾವಳಿ | ಮುಂಜಾನೆಯಿಂದಲೇ ಸರತಿ ಸಾಲಿನಲ್ಲಿ ನಿಂತ ಭಕ್ತಾದಿಗಳಿಂದ ಮಲ್ಲಿಗೆ, ಪಟ್ಟೆಸೀರೆ ಅರ್ಪಣೆ

ಪುತ್ತೂರು: ಬಲ್ನಾಡು ಶ್ರೀ ದಂಡನಾಯಕ- ಉಳ್ಳಾಲ್ತಿ, ಹಾಗೂ ಪರಿವಾರ ದೈವಗಳ ನೇಮ ನಡಾವಳಿ ಏ.28 ಭಾನುವಾರ ನಡೆಯಿತು. ಶನಿವಾರ ರಾತ್ರಿ ಗಂಟೆ 7 ರಿಂದ ಶ್ರೀ ದೈವಗಳ ಭಂಡಾರ ತೆಗೆದು ಬಳಿಕ ತಂಬಿಲಾದಿಗಳು ಜರಗಿತು. ನಂತರ ಪ್ರಸಾದ ವಿತರಣೆ, ಅನ್ನಸಂತರ್ಪಣೆ ನಡೆಯಿತು. ಏ.28 ಭಾನುವಾರ ಮುಂಜಾನೆಯಿಂದಲೇ ಸಹಸ್ರಾರು ಭಕ್ತಾದಿಗಳು ಸರತಿ ಸಾಲಿನಲ್ಲಿ ನಿಂತು ಮಲ್ಲಿಗೆ ಪ್ರಿಯೆ ಉ:ಳ್ಳಾಲ್ತಿ ಅಮ್ಮನವರಿಗೆ ಮಲ್ಲಿಗೆ, ಪಟ್ಟೆ ಸೀರೆಗಳನ್ನು ಸಮರ್ಪಿಸಿದರು. ಬೆಳಿಗ್ಗೆ 6 ರಿಂದ ಶ್ರೀ ದಂಡನಾಯಕ ದೈವದ ವಾಲಸರಿ ನೇಮ ನಡೆದು

ಬಲ್ನಾಡು ಶ್ರೀ ದಂಡನಾಯಕ-ಉಳ್ಳಾಲ್ತಿ, ದೈವಗಳ ನೇಮ ನಡಾವಳಿ | ಮುಂಜಾನೆಯಿಂದಲೇ ಸರತಿ ಸಾಲಿನಲ್ಲಿ ನಿಂತ ಭಕ್ತಾದಿಗಳಿಂದ ಮಲ್ಲಿಗೆ, ಪಟ್ಟೆಸೀರೆ ಅರ್ಪಣೆ Read More »

error: Content is protected !!
Scroll to Top