ವಿವೇಕಾನಂದ ಕಾಲೇಜಿನಲ್ಲಿ ಪತ್ರಿಕೋದ್ಯಮ ವಿಭಾಗದಿಂದ ರಾಷ್ಟ್ರೀಯ ಮಟ್ಟದ ಪ್ರತಿಭಾನ್ವೇಷಣೆ ‘ವಿವೇಕ ಚೇತನ-2024’
ಪುತ್ತೂರು: ಇಂದು ಇಡೀ ವಿಶ್ವದಲ್ಲಿಯೇ ಭಾರತ ಅದ್ಭುತ ಸ್ಥಾನಕ್ಕೆ ಏರುತಿದೆ. ಹೀಗಿರುವಾಗ ಮಾಧ್ಯಮಗಳಿಗೆ ದೇಶದಲ್ಲಿ ಕಂಡುಬರುವ ಎಲ್ಲಾ ಒಳ್ಳೆಯ ವಿಚಾರಗಳನ್ನು ಜಗತ್ತಿಗೆ ಪರಿಚಯಿಸಿ ರಾಷ್ಟ್ರವನ್ನು ಉನ್ನತ ಮಟ್ಟಕ್ಕೆ ಕೊಂಡೊಯ್ಯುವ ಜವಾಬ್ದಾರಿ ಇದೆ. ಪತ್ರಕರ್ತರು ಯಾರ ಪರವಾಗಿಯೂ ನಿಲ್ಲದೆ, ಸತ್ಯದ ಪರ, ರಾಷ್ಟ್ರದ ಪರ ನಿಲ್ಲಬೇಕು. ಸಮಾಜದಲ್ಲಿ ಕಂಡುಬರುವ ಒಳ್ಳೆತನವನ್ನು ಗಮನಿಸಿ ಅವುಗಳನ್ನು ಗುರುತಿಸುವ ಜವಾಬ್ದಾರಿ ಪತ್ರಕರ್ತರಿಗಿದೆ ಎಂದು ವಿವೇಕಾನಂದ ವಿದ್ಯಾವರ್ಧಕ ಸಂಘದ ಅಧ್ಯಕ್ಷ ಡಾ.ಪ್ರಭಾಕರ ಭಟ್ ಕಲ್ಲಡ್ಕ ಹೇಳಿದರು. ಅವರು ವಿವೇಕಾನಂದ ಕಲಾ, ವಿಜ್ಞಾನ ಮತ್ತು ವಾಣಿಜ್ಯ […]










