ಪುತ್ತೂರು

ಆಲಂಕಾರು  ಹಿರಿಯ ಪ್ರಾಥಮಿಕ ಶಾಲಾ ಪ್ರಾರಂಭೋತ್ಸವ

ಕಡಬ: ಆಲಂಕಾರು  ಹಿರಿಯ ಪ್ರಾಥಮಿಕ ಶಾಲಾ ಪ್ರಾರಂಭೋತ್ಸವ ಹಾಗೂ ಪುಸ್ತಕ ವಿತರಣಾ ಕಾರ್ಯಕ್ರಮ ನಡೆಯಿತು. ಶಾಲಾ ಮುಖ್ಯೋಪಾಧ್ಯಾಯರು ವಿಶ್ವ ನಾಯಕ್ , ಶಿಕ್ಷಕರು, ಹಾಗೂ ದಯಾನಂದ ಆಲಂಕಾರ್, ಅಬೂಬಕ್ಕರ್ ಎನ್ ಆಲಂಕಾರ್, ಹಾಗೂ ಎಸ್ ಡಿ ಎಂ ಸಿ ಪದಾಧಿಕಾರಿಗಳು ಉಪಸ್ಥಿತರಿದ್ದರು.  ಈ ಸಂದರ್ಭದಲ್ಲಿ ಶಾಲಾ ವಿದ್ಯಾರ್ಥಿಗಳಿಗೆ ಪುಸ್ತಕ ವಿತರಣೆಯನ್ನು ವಿತರಿಸಿದರು.

ಆಲಂಕಾರು  ಹಿರಿಯ ಪ್ರಾಥಮಿಕ ಶಾಲಾ ಪ್ರಾರಂಭೋತ್ಸವ Read More »

ವಿಧಾನಪರಿಷತ್ ಚುನಾವಣೆ | ಮತದಾನ ಮಾಡಿದ ಸಂಜೀವ ಮಠಂದೂರು

ಪುತ್ತೂರು: ವಿಧಾನಪರಿಷತ್ ಗೆ ಪದವೀಧರರ ಕ್ಷೇತ್ರ ಹಾಗೂ ಶಿಕ್ಷಕರ ಕ್ಷೇತ್ರದ ಮತದಾನ ಆರಂಭಗೊಂಡಿದ್ದು, ಮಾಜಿ ಶಾಸಕ ಸಂಜೀವ ಮಠಂದೂರು ಪದವೀಧರರ ಕ್ಷೇತ್ರದಿಂದ ತಾಲೂಕು ಪಂಚಾಯಿತಿ ಕಾರ್ಯಾಲಯದ ಆವರಣದಲ್ಲಿ ಮತದಾನ ಮಾಡಿದರು. ಇಂದೂ ಮುಂಜಾನೆಯಿಂದಲೇ ಸರದಿ ಸಾಲಿನಲ್ಲಿ ನಿಂತು ಮತದಾರರು ಮತದಾನ ಮಾಡಿದರು. ಮತದಾನ ಪ್ರಕ್ರಿಯೆ ಸಂಜೆ 4 ಗಂಟೆ ತನಕ ನಡೆಯಲಿದೆ.

ವಿಧಾನಪರಿಷತ್ ಚುನಾವಣೆ | ಮತದಾನ ಮಾಡಿದ ಸಂಜೀವ ಮಠಂದೂರು Read More »

ಕೆಸಿಇಟಿ  ಫಲಿತಾಂಶ : ಅಂಬಿಕಾ ವಿದ್ಯಾಲಯಕ್ಕೆ 64ನೇ ರ್‍ಯಾಂಕ್, 500 ರ ಒಳಗೆ 8 ರ್‍ಯಾಂಕ್ ಗಳು, 1000 ದ ಒಳಗೆ 12 ರ್‍ಯಾಂಕ್ ಗಳು

ಪುತ್ತೂರು: 2024 ನೇ ಶೈಕ್ಷಣಿಕ ವರ್ಷದ ಕೆ ಸಿ ಇ ಟಿ ಫಲಿತಾಂಶ ಪ್ರಕಟವಾಗಿದ್ದು, ಅಂಬಿಕಾ ಸಂಸ್ಥೆಯ ವಿದ್ಯಾರ್ಥಿಗಳು 500 ರ ಒಳಗೆ 8 ರ್‍ಯಾಂಕ್ ಗಳು ಹಾಗೂ  1000 ದ ಒಳಗಿನ 12 ರ್‍ಯಾಂಕ್ ಗಳನ್ನು ಪಡೆದುಕೊಂಡು ಅಮೋಘ ಸಾಧನೆ ಮಾಡಿದ್ದಾರೆ. ಸಂಸ್ಥೆಯ ವಿದ್ಯಾರ್ಥಿಗಳಾದ ಕೆ. ಪ್ರಮಿತ್ ರೈ. ಇಂಜಿನಿಯರಿಂಗ್ ವಿಭಾಗದಲ್ಲಿ 64 ನೇ ರ್‍ಯಾಂಕ್  (258 ಫಾರ್ಮ ಡಿ), ಶೃಂಗಾ  ನಾಯಕ್ 320 (ಅಗ್ರಿಕಲ್ಚರ್ ಬಿಎಸ್ಸಿ) 493 (ಬಿಎನ್‌ವೈಎಸ್ ) 810(ವೆಟರ್ನರಿ ಸೈನ್ಸ್) 811(ಬಿ.ಎಸ್ಸಿ.ನರ್ಸಿಂಗ್)

ಕೆಸಿಇಟಿ  ಫಲಿತಾಂಶ : ಅಂಬಿಕಾ ವಿದ್ಯಾಲಯಕ್ಕೆ 64ನೇ ರ್‍ಯಾಂಕ್, 500 ರ ಒಳಗೆ 8 ರ್‍ಯಾಂಕ್ ಗಳು, 1000 ದ ಒಳಗೆ 12 ರ್‍ಯಾಂಕ್ ಗಳು Read More »

ನಿವೃತ್ತಿ ಹಾಗೂ ಪದೋನ್ನತಿ ಹೊಂದಿದವರಿಗೆ ನಗರ ಪೊಲೀಸ್ ಠಾಣೆಯಲ್ಲಿ ಬೀಳ್ಕೊಡುಗೆ ಸಮಾರಂಭ

ಪುತ್ತೂರು: ಪುತ್ತೂರು ಸಂಚಾರ ಪೊಲೀಸ್ ಠಾಣೆಯಲ್ಲಿ ಎ.ಆರ್.ಎಸ್.ಐ ಆಗಿದ್ದು ನಿವೃತ್ತಿಗೊಂಡ ನಾರಾಯಣ ಗೌಡ ಮತ್ತು ಎ.ಎಸ್.ಐ ಆಗಿ ಪದೋನ್ನತಿ ಹೊಂದಿ ಸಂಪ್ಯ ಪೊಲೀಸ್ ಠಾಣೆಗೆ ವರ್ಗಾವಣೆಗೊಂಡ ಪರಮೇಶ್ವರ ಗೌಡ ಅವರಿಗೆ ಠಾಣೆಯಲ್ಲಿ ಬೀಳ್ಕೊಡುಗೆ ಕಾರ್ಯಕ್ರಮ ನಡೆಯಿತು. ಪುತ್ತೂರು ನಗರ ಪೊಲೀಸ್ ಠಾಣೆಯ ಇನ್‌ಸ್ಪೆಕ್ಟರ್ ಸತೀಶ್ ಜಿ.ಜೆ, ಮಹಿಳಾ ಪೊಲೀಸ್ ಠಾಣಾ ಇನ್‌ಸ್ಪೆಕ್ಟರ್ ಸುನಿಲ್ ಕುಮಾರ್, ಸಂಚಾರ ಪೊಲೀಸ್ ಠಾಣೆಯ ಎಸ್.ಐ ಸೈಯದ್ ಅಪ್ರೀದಿ ಶುಭ ಹಾರೈಸಿದರು. ಹೆಡ್‌ಕಾನ್‌ಸ್ಟೇಬಲ್ ಸ್ಕರಿಯ ಅನಿಸಿಕೆ ವ್ಯಕ್ತಪಡಿಸಿದರು. ಸಂಚಾರ ಪೊಲೀಸ್ ಠಾಣೆಯ ಕಾನ್‌ಸ್ಟೇಬಲ್

ನಿವೃತ್ತಿ ಹಾಗೂ ಪದೋನ್ನತಿ ಹೊಂದಿದವರಿಗೆ ನಗರ ಪೊಲೀಸ್ ಠಾಣೆಯಲ್ಲಿ ಬೀಳ್ಕೊಡುಗೆ ಸಮಾರಂಭ Read More »

ನಾಳೆ ವಿಧಾನಪರಿಷತ್ ಚುನಾವಣೆ : ಸಂತೆ ಪ್ರವೇಶಕ್ಕೆ ಸಾರ್ವಜನಿಕರಿಗೆ ಹಿಂಬದಿ ದ್ವಾರದಿಂದ ಅವಕಾಶ

ಪುತ್ತೂರು: ನಾಳೆ ನಡೆಯಲಿರುವ ಕರ್ನಾಟಕ ವಿಧಾನಪರಿಷತ್ತಿಗೆ ಕರ್ನಾಟಕ ನೈರುತ್ಯ ಪದವೀಧರರ ಕ್ಷೇತ್ರ ಮತ್ತು ನೈರುತ್ಯ ಶಿಕ್ಷಕರ ಕ್ಷೇತ್ರಗಳ ಚುನಾವಣೆಗೆ ಸಂಬಂಧಿಸಿ ಪುತ್ತೂರು ಕಿಲ್ಲೇ ಮೈದಾನದಲ್ಲಿ ನಡೆಯುವ ಸಂತೆಯನ್ನು ರದ್ದುಗೊಳಿಸದೇ ಸಂತೆಯ ಪ್ರವೇಶ ದ್ವಾರವನ್ನು ಬಂದ್ ಮಾಡುವ ಮೂಲಕ ಸಂತೆ ಗ್ರಾಹಕರಿಗೆ ಹಿಂಬದಿ ದ್ವಾರದಿಂದ ಪ್ರವೇಶಿಸುವಂತೆ ಅವಕಾಶ ಕಲ್ಪಿಸಲಾಗುವುದು ಎಂದು ತಹಸೀಲ್ದಾರ್‍ ಕುಂಞಿ ಅಹಮ್ಮದ್ ತಿಳಿಸಿದ್ದಾರೆ, ಭಾನುವಾರ ಆಡಳಿತ ಸೌಧದಲ್ಲಿರುವ ತಾಲೂಕು ಪಂಚಾಯಿತಿ ಸಭಾಂಗಣದಲ್ಲಿ  ನಡದ ಪತ್ರಿಕಾಗೋಷ್ಠಿಯಲ್ಲಿ ಮಾಹಿತಿ ನೀಡಿದರು. ಮತದಾನ ಪ್ರಕ್ರಿಯೆ ಕಾನೂನು ಸುವ್ಯವಸ್ಥೆ ಕಾಪಾಡುವ ಮತ್ತು

ನಾಳೆ ವಿಧಾನಪರಿಷತ್ ಚುನಾವಣೆ : ಸಂತೆ ಪ್ರವೇಶಕ್ಕೆ ಸಾರ್ವಜನಿಕರಿಗೆ ಹಿಂಬದಿ ದ್ವಾರದಿಂದ ಅವಕಾಶ Read More »

ಅರಿಯಡ್ಕ ಗ್ರಾಮ ಪಂಚಾಯಿತಿ ಸಭಾಂಗಣದಲ್ಲಿ ರಕ್ತದಾನ ಶಿಬಿರ

ಪುತ್ತೂರು: ಸಂತ ಫಿಲೋಮಿನಾ ಕಾಲೇಜಿನ ಸ್ನಾತಕೋತ್ತರ ಸಮಾಜ ಕಾರ್ಯ ವಿಭಾಗ, ಪಾಪೆಮಜಲು ಕೋಟಿ-ಚೆನ್ನಯ ಗೆಳೆಯರ ಬಳಗ ಪಾಪೆಮಜಲು, ರೋಟರಿ ಕ್ಯಾಂಫ್ಕೋ ಬಡ್ಲ್ ಸೆಂಟರ್, ಮತ್ತು ಅರಿಯಡ್ಕ ಗ್ರಾಮ ಪಂಚಾಯಿತಿ ಸಂಯುಕ್ತ ಆಶ್ರಯದಲ್ಲಿ ರಕ್ತದಾನ ಶಿಬಿರ ಅರಿಯಡ್ಕ ಗ್ರಾಮ ಪಂಚಾಯಿತಿ ಸಭಾಂಗಣದಲ್ಲಿ ನಡೆಯಿತು. ಸಂತ ಫಿಲೋಮಿನಾ ಕಾಲೇಜಿನ ಪ್ರಾಂಶುಪಾಲ ವಂ. ಡಾ. ಆ್ಯಂಟನಿ ಪ್ರಕಾಶ್‌ಮೊಂತೇರೊ ಶಿಬಿರ ಉದ್ಘಾಟಿಸಿ, ರಕ್ತದಾನದ ಮಹತ್ವದ ಬಗ್ಗೆ ತಿಳಿಸಿದರು. ಸಂಪನ್ಮೂಲ ವ್ಯಕ್ತಿ ರೋಟರಿ ಕ್ಯಾಂಪ್ಕೋ ಬ್ಲಡ್ ಬ್ಯಾಂಕ್‍ವೈದ್ಯಾಧಿಕಾರಿ ಡಾ. ಸೀತಾರಾಮ್ ಭಟ್, ರಕ್ತದಾನದ ಮಹತ್ವ,

ಅರಿಯಡ್ಕ ಗ್ರಾಮ ಪಂಚಾಯಿತಿ ಸಭಾಂಗಣದಲ್ಲಿ ರಕ್ತದಾನ ಶಿಬಿರ Read More »

ಸಮರ್ಪಣಾ ಚಾರಿಟೇಬಲ್ ಟ್ರಸ್ಟ್ ನಡಿ ಕಾರ್ಯಾಚರಿಸುತ್ತಿರುವ ನ್ಯೂಸ್ ಪುತ್ತೂರು ಇದರ “ಶಿವಾಮೃತ” ಸಂಚಿಕೆ ಶ್ರೀ ಮಹಾಲಿಂಗೇಶ್ವರ ದೇವರಿಗೆ ಸಮರ್ಪಣೆ

ಪುತ್ತೂರು: ಸಮರ್ಪಣಾ ಚಾರಿಟೇಬಲ್‍ ಟ್ರಸ್ಟ್ ನಡಿ ಕಾರ್ಯಾಚರಿಸುತ್ತಿರುವ ನ್ಯೂಸ್ ಪುತ್ತೂರಿನ ವತಿಯಿಂದ ಇತಿಹಾಸ ಪ್ರಸಿದ್ಧ ಪುತ್ತೂರು ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ಜಾತ್ರೋತ್ಸವ ಸಂದರ್ಭದಲ್ಲಿ ಹೊರತಂದ “ಶಿವಾಮೃತ” ಸಂಚಿಕೆ ಇಂದು ಶ್ರೀ ಮಹಾಲಿಂಗೇಶ್ವರ ದೇವರಿಗೆ ಸಮರ್ಪಣೆಯಾಯಿತು. ಬೆಳಿಗ್ಗೆ ವಿಶೇಷ ಪೂಜೆಯೊಂದಿಗೆ “ಶಿವಾಮೃತ” ಸಂಚಿಕೆಯನ್ನು ಶ್ರೀ ದೇವರಿಗೆ ಸಮರ್ಪಿಸಲಾಯಿತು. ಈ ಸಂದರ್ಭದಲ್ಲಿ ಸಮರ್ಪಣಾ ಚಾರಿಟೇಬಲ್ ಟ್ರಸ್ಟ್ ಅಧ್ಯಕ್ಷರಾದ ರಾಜೇಂದ್ರ ಪ್ರಸಾದ್ ಶೆಟ್ಟಿ, ನಿರ್ದೇಶಕರಾದ ಚಿದಾನಂದ ಬೈಲಾಡಿ, ಶಿವಾಮೃತದ ಸಂಪಾದಕರೂ, ನಿರ್ದೇಶಕರಾದ ಸೀತಾರಾಮ ಕೇವಳ,  ಪ್ರವೀಣ್‍ ಕುಂಟ್ಯಾಣ, ಸತೀಶ್‍ ಪಾಂಬಾರು, ವಸಂತ

ಸಮರ್ಪಣಾ ಚಾರಿಟೇಬಲ್ ಟ್ರಸ್ಟ್ ನಡಿ ಕಾರ್ಯಾಚರಿಸುತ್ತಿರುವ ನ್ಯೂಸ್ ಪುತ್ತೂರು ಇದರ “ಶಿವಾಮೃತ” ಸಂಚಿಕೆ ಶ್ರೀ ಮಹಾಲಿಂಗೇಶ್ವರ ದೇವರಿಗೆ ಸಮರ್ಪಣೆ Read More »

ರೈಲು ಹಳಿಗೆ ತಲೆಕೊಟ್ಟು ಆತ್ಮಹತ್ಯೆ ಮಾಡಿಕೊಂಡ ಛತ್ತೀಸ್ ಗಢದ ಯುವಕ

ಪುತ್ತೂರು: ಯುವಕನೊಬ್ಬ ರೈಲ್ವೇ ಹಳಿಗೆ ತಲೆ ಕೊಟ್ಟು ಆತ್ಮಹತ್ಯೆ ಮಾಡಿಕೊಂಡ ಘಟನೆ ಮುರ ಎಂಬಲ್ಲಿ ನಿನ್ನೆ ಬೆಳಕಿಗೆ ಬಂದಿದ್ದು, ಛತ್ತೀಸ್‌ಗಢದ ಮನಮೋಹನದಾಸ್ (24) ಎಂದು ತಿಳಿದು ಬಂದಿದೆ. ಪ್ರೇಮ ವೈಫಲ್ಯಕ್ಕೆ ಒಳಗಾಗಿ ಮನಮೋಹನದಾಸ್ ಆತ್ಮಹತ್ಯೆ ಮಾಡಿಕೊಂಡಿರಬಹುದು ಎಂದು ಶಂಕಿಸಲಾಗಿದೆ. ಛತ್ತೀಸ್‌ಗಢದ ಯುವತಿಯನ್ನು ಪ್ರೀತಿಸುತ್ತಿದ್ದ ಎನ್ನಲಾಗಿದೆ. ಅವರಿಬ್ಬರ ಮಧ್ಯೆ ವಿರಸ ಉಂಟಾಗಿದ್ದು ಪ್ರೇಮ ವೈಫಲ್ಯದ ಹಿನ್ನೆಲೆಯಲ್ಲಿ ಪ್ರೇಯಸಿಯ ದೂರವಾಣಿಗೆ ಸಂದೇಶ ಕಳುಹಿಸಿ ತಾನು ಆತ್ಮಹತ್ಯೆ ಮಾಡಿಕೊಂಡಿದ್ದಾನೆ ಎಂದು ತಿಳಿದು ಬಂದಿದೆ. ಕಳೆದ ಒಂದು ತಿಂಗಳಿನಿಂದ ಪುತ್ತೂರಿನಲ್ಲಿ ಎಳನೀರು ಕೀಳುವ

ರೈಲು ಹಳಿಗೆ ತಲೆಕೊಟ್ಟು ಆತ್ಮಹತ್ಯೆ ಮಾಡಿಕೊಂಡ ಛತ್ತೀಸ್ ಗಢದ ಯುವಕ Read More »

ಪುತ್ತೂರಿನಲ್ಲಿ ಪದವೀಧರ ಹಾಗೂ ಶಿಕ್ಷಕರ ಕ್ಷೇತ್ರದಿಂದ ಒಟ್ಟು 3324 ಮತದಾರರು | ಮತದಾನ ಪ್ರಕ್ರಿಯೆಗೆ ಸಿದ್ಧತೆ ಸಂಪೂರ್ಣ : ತಹಶೀಲ್ದಾರ್ ಕುಂಞಿ ಅಹಮ್ಮದ್

ಪುತ್ತೂರು: ಜೂ.3 ಸೋಮವಾರ ನಡೆಯಲಿರುವ ಪದವೀಧರರ ಕ್ಷೇತ್ರ ಹಾಗೂ ಶಿಕ್ಷಕರ ಕ್ಷೇತ್ರಗಳಿಗೆ ನಡೆಯಲಿರುವ ಚುನಾವಣೆ ಹಿನ್ನಲೆಯಲ್ಲಿ ತಾಲೂಕಿನಲ್ಲಿ ಪದವೀಧರರ ಕ್ಷೇತ್ರದಲ್ಲಿ 2520 ಹಾಗೂ ಶಿಕ್ಷಕರ ಕ್ಷೇತ್ರದಲ್ಲಿ 804 ಮತದಾರರಿದ್ದಾರೆ ಎಂದು ತಹಶೀಲ್ದಾರ್‍ಕುಂಞಿ ಅಹಮ್ಮದ್ ತಿಳಿಸಿದ್ದಾರೆ. ಅವರು ಶನಿವಾರ ತಾಲೂಕು ಪಂಚಾಯಿತಿ ಸಭಾಂಗಣದಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾಹಿತಿ ನೀಡಿ, ಈಗಾಗಲೇ ಚುನಾವಣೆ ಹಿನ್ನಲೆಯಲ್ಲಿ  ಎಲ್ಲಾ ಸಿದ್ಧತೆಗಳು ನಡೆದಿದ್ದು, ತಾಲೂಕು ಪಂಚಾಯಿತಿಯಲ್ಲಿ ಪದವೀಧರರ ಮೂರು ಮತದಾನ ಕೇಂದ್ರ ಹಾಗೂ ಆಡಳಿತ ಸೌಧದಲ್ಲಿ ಒಂದು ಶಿಕ್ಷಕರ ಮತದಾನ ಕೇಂದ್ರ ಕಾರ್ಯಾಚರಿಸಲಿದೆ ಎಂದು

ಪುತ್ತೂರಿನಲ್ಲಿ ಪದವೀಧರ ಹಾಗೂ ಶಿಕ್ಷಕರ ಕ್ಷೇತ್ರದಿಂದ ಒಟ್ಟು 3324 ಮತದಾರರು | ಮತದಾನ ಪ್ರಕ್ರಿಯೆಗೆ ಸಿದ್ಧತೆ ಸಂಪೂರ್ಣ : ತಹಶೀಲ್ದಾರ್ ಕುಂಞಿ ಅಹಮ್ಮದ್ Read More »

ಅಕ್ಷಯ ಕಾಲೇಜಿನಲ್ಲಿ ಕ್ಯಾಂಪಸ್ ಡ್ರೈವ್-2024

ಪುತ್ತೂರು: ಸಂಪ್ಯದಲ್ಲಿ ಕಾರ್ಯಾಚರಿಸುತ್ತಿರುವ ಅಕ್ಷಯ ಕಾಲೇಜಿನಲ್ಲಿ ವಿದ್ಯಾರ್ಥಿಗಳಿಗೆ ಕ್ಯಾಂಪಸ್ ಡ್ರೈವ್ -2024 ಉದ್ಯೋಗ ಮೇಳ ಶನಿವಾರ ನಡೆಯಿತು. ಕಾಲೇಜಿನ ಅಂತಿಮ ಪದವಿ ವಿಭಾಗದ ಬಿ.ಕಾಂ, ಫ್ಯಾಶನ್ ಡಿಸೈನ್ ಹಾಗೂ ಇಂಟೀಯರ್ ಡಿಸೈನ್ ಎಲ್ಲಾ ವಿದ್ಯಾರ್ಥಿಗಳು ಭಾಗವಹಿಸಿದ್ದರು. ವಿವಿಧ ಜಾಗತೀಕ ಉದ್ಯೋಗ ವಲಯದ ಪ್ರಚಲಿತದಲ್ಲಿರುವ ಸುಮಾರು 15 ಕ್ಕೂ ಅಧಿಕ ಕಂಪೆನಿಗಳು ಭಾಗವಹಿಸಿದ್ದವು. ಹೋಟೇಲ್ ಅವತಾರ್, ಹೋಟೆಲ್ ಸ್ಕೈ ವ್ಯೂವ್, ಗ್ಲೋ ಟಚ್, ಮಾಸ್ಟರ್ ಪ್ಲಾನರಿ, ದ್ವಾರಕ ಕನ್‌ಸ್ಟ್ರಕ್ಷನ್, ಹ್ಯೂಂಡಯ್, ರಿಲಯನ್ಸ್, ಎಸ್.ಬಿ.ಐ, ಟೊಯೊಟಾದಂತಹ ಹಲವು ಕಂಪೆನಿಗಳು ಭಾಗವಹಿಸಿದ್ದವು.

ಅಕ್ಷಯ ಕಾಲೇಜಿನಲ್ಲಿ ಕ್ಯಾಂಪಸ್ ಡ್ರೈವ್-2024 Read More »

error: Content is protected !!
Scroll to Top