ಪುತ್ತೂರು

ಭಾರೀ ಮಳೆಗೆ ಕೆರೆಯಂತಾದ ರಸ್ತೆ

ಪುತ್ತೂರು: ಇಂದು ಬೆಳಿಗ್ಗೆ ಸುರಿದ ಭಾರೀ ಮಳೆಗೆ ನಗರದ ಖಾಸಗಿ ಬಸ್‍ ನಿಲ್ದಾಣದ ಬಳಿಯ ರಸ್ತೆಗಳಲ್ಲಿ ನೀರು ಹರಿದ ಪರಿಣಾಮ ಸಂಚಾರಕ್ಕೆ ತೊಡಕುಂಟಾಯಿತು. ನೀರು ಹರಿದ ಪರಿಣಾಮ ಪರಿಸರ ಕೆರೆಯಂತಾಗಿತ್ತು. ಈ ಪ್ರದೇಶದಲ್ಲಿ ಸರಿಯಾದ ಚರಂಡಿ ವ್ಯವಸ್ಥೆ ಇದ್ದರೂ ಚರಂಡಿ ಬ್ಲಾಕ್‍ ಆಗಿ ನೀರೆಲ್ಲಾ ರಸ್ತೆಯಲ್ಲಿ ಹರಿದಿದೆ. ವಾಹನ ಸವಾರರು, ಪಾದಚಾರಿಗಳು ನಡೆದಾಡಲು ಹರಸಾಹಸ ಪಡಬೇಕಾಯಿತು.

ಭಾರೀ ಮಳೆಗೆ ಕೆರೆಯಂತಾದ ರಸ್ತೆ Read More »

ಕೊಂಬೆಟ್ಟು ಬಳಿ ಧರೆಗುರುಳಿದ ಮರ : ವಿದ್ಯುತ್‍ ಕಂಬಗಳಿಗೆ ಹಾನಿ

ಪುತ್ತೂರು: ಇಂದು ಮುಂಜಾನೆ  ಸುರಿದ ಭಾರೀ ಗಾಳಿ ಮಳೆಯಿಂದಾಗಿ ಕೊಂಬೆಟ್ಟು ಶ್ರೀ ಮಹಾಲಿಂಗೇಶ್ವರ ಐಟಿಐ ಬಳಿ ಭಾರೀ ಗಾತ್ರದ ಮರ ಬಿದ್ದು ರಸ್ತೆ ಸಂಚಾರ ಸಂಪೂರ್ಣ ಬಂದ್‍ ಆದ ಘಟನೆ ನಡೆದಿದೆ. ಮರ ರಸ್ತೆಗೆ ಉರುಳಿ ಬಿದ್ದ ಪರಿಣಾಮ ನಾಲ್ಕು ವಿದ್ಯುತ್‍ ಕಂಬಗಳು ಧರೆಗುರುಳಿದೆ. ಸ್ಥಳಕ್ಕೆ ಮಾಜಿ ಶಾಸಕ ಸಂಜೀವ ಮಠಂದೂರು ಭೇಟಿ ನೀಡಿ ವೀಕ್ಷಿಸಿ ವಿದ್ಯುತ್‍ ಕಂಬಗಳನ್ನು ಸರಿಪಡಿಸುವಂತೆ ಮೆಸ್ಕಾಂ ಅಧಿಕಾರಿಗಳಿಗೆ ಕರೆ ಮಾಡಿ ಸೂಚನೆ ನೀಡಿದರು.

ಕೊಂಬೆಟ್ಟು ಬಳಿ ಧರೆಗುರುಳಿದ ಮರ : ವಿದ್ಯುತ್‍ ಕಂಬಗಳಿಗೆ ಹಾನಿ Read More »

ಬಸ್ಸಿನಲ್ಲಿ ಅಪ್ರಾಪ್ತ ಯುವತಿಗೆ ಕಿರುಕುಳ | ಆರೋಪಿಗೆ ಮಹಿಳೆಯರಿಂದ ಗೂಸಾ

ಮಂಗಳೂರು: ಮೌಲ್ವಿಯೊಬ್ಬ ಬೆಂಗಳೂರಿನಿಂದ ಮಂಗಳೂರಿಗೆ ಸಂಚರಿಸುತ್ತಿದ್ದ ಕೆಎಸ್‌ಆರ್‌ಟಿಸಿ ಬಸ್‌ನಲ್ಲಿ ಅಪ್ರಾಪ್ತಗೆ ಕಿರುಕುಳ ನೀಡಿದ ಸಂದರ್ಭ ಬಾಲಕಿಯ ತಾಯಿ ಹಾಗೂ ಇತರ ಮಹಿಳಾ ಪ್ರಯಾಣಿಕರೇ ಸೇರಿ ಯದ್ವಾತದ್ವಾ ಗೂಸಾ ನೀಡಿರುವ ಘಟನೆ ನಡೆದಿದ್ದು, ಸಾಮಾಜಿಕ ಜಾಲತಾಣಗಳಲ್ಲಿ ವೀಡಿಯೋ ವೈರಲ್ ಆಗಿದೆ. ಬೆಂಗಳೂರಿನಿಂದ ಮಂಗಳೂರಿಗೆ ಆಗಮಿಸುತ್ತಿದ್ದ ಕೆಎಸ್‌ಆರ್‌ಟಿಸಿ ಬಸ್‌ನಲ್ಲಿ ಆರೋಪಿ ಪ್ರಯಾಣಿಸುತ್ತಿದ್ದ. ಈತನ ಪಕ್ಕದ ಸೀಟ್‌ನಲ್ಲಿ ಅಪ್ರಾಪ್ತಯೊಬ್ಬಳು ಕುಳಿತಿದ್ದಳು. ಬಸ್ ಸಕಲೇಶಪುರ ತಳುಪುತ್ತಿದ್ದ ವೇಳೆ ಬಾಲಕಿಯನ್ನು ಆರೋಪಿ ಮೆತ್ತಗೆ ಸ್ಪರ್ಶಿಸುತ್ತಿರುವುದನ್ನು ಗಮನಿಸಿ ಮತ್ತೊಂದು ಸೀಟ್‌ನಲ್ಲಿದ್ದ ಪ್ರಯಾಣಿಕ ವೀಡಿಯೋ ಮಾಡಿದ್ದಾನೆ. ಬಳಿಕ

ಬಸ್ಸಿನಲ್ಲಿ ಅಪ್ರಾಪ್ತ ಯುವತಿಗೆ ಕಿರುಕುಳ | ಆರೋಪಿಗೆ ಮಹಿಳೆಯರಿಂದ ಗೂಸಾ Read More »

ನಾಳೆ (ಜು.15) : ‘ವಿವೇಕ ಸಂಜೀವಿನಿ’ ಹಸಿರು ಆವರಣ ಅಭಿಯಾನಕ್ಕೆ ಚಾಲನೆ

ಪುತ್ತೂರು: ಪುತ್ತೂರಿನ ವಿವೇಕಾನಂದ ವಿದ್ಯಾವರ್ಧಕ ಸಂಘ ಆಶ್ರಯದಲ್ಲಿ ವಿಶೇಷ ಮೌಲ್ಯಗಳುಳ್ಳ ಔಷಧೀಯ ಸಸ್ಯಗಳು, ಹಣ್ಣು-ಹಂಪಲುಗಳ ಗಿಡಗಳು ಹಾಗೂ ಇತರ ಗಿಡ-ಮರಗಳನ್ನು ನೆಟ್ಟು ಇಳೆಯನ್ನು ಸಸ್ಯ ಶ್ಯಾಮಲೆಯಾಗಿಸುವ ವಿವೇಕ ಸಂಜೀವಿನಿ ಹಸಿರು ಆವರಣ ಅಭಿಯಾನವನ್ನು ನಡೆಸಲಾಗುತ್ತಿದ್ದು, ಜು.15 ರಂದು ವಿವೇಕಾನಂದ ಪ್ರವೇಶ ದ್ವಾರದ ಬಳಿ ಚಾಲನೆ ನೀಡಲಾಗುವುದು. ಕಳೆದ ವರ್ಷ ವಿವೇಕ ಸಂಜೀವಿನಿ ಕಾರ್ಯಕ್ರಮದಲ್ಲಿ ಸುತ್ತಮುತ್ತಲಿನ ಔಷಧೀಯ ಸಸ್ಯಗಳ ಪರಿಚಯ ಪ್ರಾತ್ಯಕ್ಷಿಯನ್ನು ನಡೆಸಲಾಗಿದ್ದು ವಿದ್ಯಾರ್ಥಿಗಳ ಮೂಲಕ ಸಹಸ್ರಾರು ಔಷಧೀಯ ಗುಣಗಳುಳ್ಳ ಗಿಡಗಳನ್ನು ನಾಟಿ ಮಾಡಲಾಗಿತ್ತು. ಅದರ ಮುಂದುವರಿದ ಭಾಗವಾಗಿ

ನಾಳೆ (ಜು.15) : ‘ವಿವೇಕ ಸಂಜೀವಿನಿ’ ಹಸಿರು ಆವರಣ ಅಭಿಯಾನಕ್ಕೆ ಚಾಲನೆ Read More »

ಮಾರಕ ಡೆಂಗ್ಯು ಕಾಯಿಲೆಗೆ ಹಲವಾರು ಮಂದಿ ಬಲಿ | ಡೆಂಗ್ಯು ಹರದಡಂತೆ ಕ್ರಮ ಕೈಗೊಳ್ಳಲು ಬಿ.ಎಂ.ಭಟ್ ಆಗ್ರಹ

ಪುತ್ತೂರು: ಮಳೆಗಾಲದಲ್ಲಿ ಕೊಳಚೆ ಪ್ರದೇಶದ ಸ್ವಚ್ಚತೆ, ವೈರಸ್ ಉತ್ಪತ್ತಿ ಆಗುವ ಪ್ರದೇಶಗಳ ಗುರುತಿಸಿ ಕ್ರಿಮಿನಾಶಕ‌ ಸಿಂಪಡಿಸುವುದು ಸೇರಿದಂತೆ ಜನರ ಆರೋಗ್ಯ ರಕ್ಷಣೆಗೆ ಸೂಕ್ತ ಮುನ್ನೆಚ್ಚರಿಕೆ ಕ್ರಮ ಕೈಗೊಳ್ಳುವಂತೆ ಸಿಪಿಐಎಂ ಮುಖಂಡ ಬಿ.ಎಂ.ಭಟ್ ಆಗ್ರಹಿಸಿದ್ದಾರೆ. ಯಾವುದೇ ರೋಗ ಹರಡದಂತೆ ರಕ್ಷಣೆ ಒದಗಿಸಬೇಕಾದ್ದು ಸರಕಾರ, ಆರೋಗ್ಯ ಇಲಾಖೆಯ ಕರ್ತವ್ಯವಾಗಿದೆ. ಆದರೆ ಆರೋಗ್ಯ ಇಲಾಖೆ ಏನು ಮಾಡುತ್ತಿದೆ. ಜನ ಡೆಂಗ್ಯು ಮೊದಲಾದ ಮಾರಕ ಕಾಯಿಲೆಗೆ ಬಲಿಯಾಗುತ್ತಿದ್ದಾರೆ ಎಂದು ಆರೋಪಿಸಿರುವ ಅವರು, ಜಿಲ್ಲೆಗೆ 8 ಜನ ಶಾಸಕರಿದ್ದರೂ ಜನರ ಆರೋಗ್ಯ ಬಗ್ಗೆ ಯಾವಯದೇ

ಮಾರಕ ಡೆಂಗ್ಯು ಕಾಯಿಲೆಗೆ ಹಲವಾರು ಮಂದಿ ಬಲಿ | ಡೆಂಗ್ಯು ಹರದಡಂತೆ ಕ್ರಮ ಕೈಗೊಳ್ಳಲು ಬಿ.ಎಂ.ಭಟ್ ಆಗ್ರಹ Read More »

ಹೆತ್ತವರು ಮಕ್ಕಳಿಗಾಗಿ ಆಸ್ತಿ ಮಾಡಬೇಡಿ, ಬದಲಾಗಿ ಮಕ್ಕಳನ್ನು ಆಸ್ತಿಯನ್ನಾಗಿ ಮಾಡಿ : ಶ್ರೀ ಡಾ.ಧರ್ಮಪಾಲನಾಥ ಸ್ವಾಮೀಜಿ | ಪುತ್ತೂರು ಒಕ್ಕಲಿಗ ಸಮುದಾಯ ಪತ್ತಿನ ಸಹಕಾರ ಸಂಘದ 10ನೇ ಶಾಖೆ ವಿಟ್ಲದಲ್ಲಿ ಶುಭಾರಂಭ | ಸಂಘ ವಿಸ್ತೃತವಾಗಿ ಬೆಳೆದಿರುವುದು ದೇಶದ ಆರ್ಥಿಕ ಬೆಳವಣಿಗೆಗೆ ಸಮನಾಗಿದೆ : ಡಿ.ವಿ.ಸದಾನಂದ ಗೌಡ | ಇತರ ಸಮುದಾಯ ಬೆಳೆಯುವ ಶ್ರೇಯೋಭಿವೃದ್ಧಿಯನ್ನು ಸಂಘ ಹೊಂದಿದೆ : ಸಂಜೀವ ಮಠಂದೂರು | ಸಂಘ ಸತತ 8 ವರ್ಷಗಳಿಂದ ಆಡಿಟ್ ವರದಿಯಲ್ಲಿ  ‘ಎ’ ಗ್ರೇಡ್ ಪಡೆದುಕೊಂಡಿದೆ : ಚಿದಾನಂದ ಬೈಲಾಡಿ | ಪಾರದರ್ಶಕ ಆಡಳಿತ ಮಂಡಳಿ, ಜವಾಬ್ದಾರಿಯುತ ಸಿಬ್ಬಂದಿಗಳಿಂದ ಸಂಘ ಬೆಳೆದಿದೆ : ಶಶಿಕುಮಾರ್ ರೈ ಬಾಲ್ಯೊಟ್ಟು

ವಿಟ್ಲ: ಪುತ್ತೂರು ಒಕ್ಕಲಿಗ ಸಮುದಾಯ ಪತ್ತಿನ ಸಹಕಾರ ಸಂಘದ 10ನೇ ಶಾಖೆ ವಿಟ್ಲ ಎಂಪೈರ್ ಮಹಲ್‍ನಲ್ಲಿ ಶನಿವಾರ ಶುಭಾರಂಭಗೊಂಡಿತು. ಶ್ರೀ ಆದಿಚುಂಚನಗಿರಿ ಮಂಗಳೂರು ಶಾಖಾ ಮಠದ ಪರಮಪೂಜ್ಯ ಶ್ರೀ ಡಾ.ಧರ್ಮಪಾಲನಾಥ ಸ್ವಾಮೀಜಿಯವರು ದೀಪ ಪ್ರಜ್ವಲನೆ ಮಾಡಿ, ಆಶೀರ್ವಚನ ನೀಡಿ, ಒಬ್ಬರಿಗೊಬ್ಬರು ಪರಸ್ಪರ ನಂಬಿಕೆ, ವಿಶ್ವಾಸದಿಂದ ಬಂಡವಾಳ ಹಾಕಿ ವ್ಯಾಪಾರ ಶುರು ಮಾಡಿದ್ದೀರಿ. ಹಣ ದ್ರವದ ರೂಪದಲ್ಲಿ ಹರಿಯಬೇಕು. ಹಣ ಮತ್ತು ರಕ್ತ ಸ್ಟ್ರಕ್ ಆಗಬಾರದು.. ಮಕ್ಕಳಿಗೆ ಆಸ್ತಿ ಮಾಡುವುದನ್ನು ಬಿಟ್ಟು ಮಕ್ಕಳನ್ನು ಸಮಾಜದ ಆಸ್ತಿಗಳನ್ನಾಗಿ ಮಾಡಿ ಎಂದ

ಹೆತ್ತವರು ಮಕ್ಕಳಿಗಾಗಿ ಆಸ್ತಿ ಮಾಡಬೇಡಿ, ಬದಲಾಗಿ ಮಕ್ಕಳನ್ನು ಆಸ್ತಿಯನ್ನಾಗಿ ಮಾಡಿ : ಶ್ರೀ ಡಾ.ಧರ್ಮಪಾಲನಾಥ ಸ್ವಾಮೀಜಿ | ಪುತ್ತೂರು ಒಕ್ಕಲಿಗ ಸಮುದಾಯ ಪತ್ತಿನ ಸಹಕಾರ ಸಂಘದ 10ನೇ ಶಾಖೆ ವಿಟ್ಲದಲ್ಲಿ ಶುಭಾರಂಭ | ಸಂಘ ವಿಸ್ತೃತವಾಗಿ ಬೆಳೆದಿರುವುದು ದೇಶದ ಆರ್ಥಿಕ ಬೆಳವಣಿಗೆಗೆ ಸಮನಾಗಿದೆ : ಡಿ.ವಿ.ಸದಾನಂದ ಗೌಡ | ಇತರ ಸಮುದಾಯ ಬೆಳೆಯುವ ಶ್ರೇಯೋಭಿವೃದ್ಧಿಯನ್ನು ಸಂಘ ಹೊಂದಿದೆ : ಸಂಜೀವ ಮಠಂದೂರು | ಸಂಘ ಸತತ 8 ವರ್ಷಗಳಿಂದ ಆಡಿಟ್ ವರದಿಯಲ್ಲಿ  ‘ಎ’ ಗ್ರೇಡ್ ಪಡೆದುಕೊಂಡಿದೆ : ಚಿದಾನಂದ ಬೈಲಾಡಿ | ಪಾರದರ್ಶಕ ಆಡಳಿತ ಮಂಡಳಿ, ಜವಾಬ್ದಾರಿಯುತ ಸಿಬ್ಬಂದಿಗಳಿಂದ ಸಂಘ ಬೆಳೆದಿದೆ : ಶಶಿಕುಮಾರ್ ರೈ ಬಾಲ್ಯೊಟ್ಟು Read More »

ಎವಿಜಿಯಲ್ಲಿ ಸುಂದರ ಗೌಡರಿಗೆ ಸನ್ಮಾನ

ಪುತ್ತೂರು: ಬನ್ನೂರಿನಲ್ಲಿ ಕಾರ್ಯಾಚರಿಸುತ್ತಿರುವ ಎವಿಜಿ ಆಂಗ್ಲ ಮಾಧ್ಯಮ ಶಾಲೆಯಲ್ಲಿ ಪುತ್ತೂರು ತಾಲೂಕು ದೈಹಿಕ ಶಿಕ್ಷಣ ಪರಿವೀಕ್ಷಣಾಧಿಕಾರಿ ಸುಂದರ ಗೌಡರಿಗೆ ಅಭಿನಂದನೆ ಸಲ್ಲಿಸಿ, ಸನ್ಮಾನ ಮಾಡಲಾಯಿತು. ಅವರು ರಾಮನಗರ ಜಿಲ್ಲೆಗೆ ದೈಹಿಕ ಶಿಕ್ಷಣ ಪರಿವೀಕ್ಷಣಾಧಿಕಾರಿಯಾಗಿ ಪದೋನ್ನತಿ ಹೊಂದಿದ ಹಿನ್ನಲೆಯಲ್ಲಿ ಅವರನ್ನು ಆತ್ಮೀಯವಾಗಿ ಗೌರವಿಸಲಾಯಿತು. ಶಾಲಾ ಅಧ್ಯಕ್ಷ ಕಳುವಾಜೆ ವೆಂಕಟ್ರಮಣ ಗೌಡರ ಅಧ್ಯಕ್ಷತೆ ವಹಿಸಿದ್ದರು. ಶಾಲಾ ಕಾರ್ಯದರ್ಶಿ ಗುಡ್ಡಪ್ಪ ಗೌಡ ಅಭಿನಂದನಾ ಭಾಷಣ ಮಾಡಿ, ಸುಂದರ ಗೌಡ ಅವರ ಪ್ರಾಮಾಣಿಕತೆ, ಕಾರ್ಯ ತತ್ಪರತೆ ಇಲಾಖೆ ಹಾಗೂ ಶಿಕ್ಷಕರ ಬಗ್ಗೆ ಅವರಿಗಿದ್ದ

ಎವಿಜಿಯಲ್ಲಿ ಸುಂದರ ಗೌಡರಿಗೆ ಸನ್ಮಾನ Read More »

ಪಾಪೆಮಜಲು ಸರಕಾರಿ ಹಿ ಪ್ರಾ ಶಾಲಾ ನೂತನ ಸಭಾಂಗಣ ಉದ್ಘಾಟನೆ

ಪುತ್ತೂರು: ಶಾಲೆಗಳು ಊರಿನ‌ ದೇಗುಲ ಇದ್ದಂತೆ. ಅವುಗಳ‌ ಮೇಲೆ ಗ್ರಾಮಸ್ಥರಿಗೆ ಪ್ರೀತಿ ಇರಬೇಕು. ಎಲ್ಲರೂ ಒಟ್ಡಾಗಿ ಶಾಲೆಯ ಬಗ್ಗೆ ಒಲವು ತೋರಿಸಿದ್ದಲ್ಲಿ ಶಾಲೆಗಳು ಬೆಳಗುತ್ತದೆ ಎಂದು‌ ಶಾಸಕ ಅಶೋಕ್ ರೈ ಹೇಳಿದರು. ಅವರು ಪಾಪೆಮಜಲು ಸರಕಾರಿ ಹಿ ಪ್ರಾ ಶಾಲೆಯಲ್ಲಿ ಸಿಎಸ್ ಆರ್ ಅನುದಾನದಿಂದ ನಿರ್ಮಾಣವಾದ ನೂತನ ಶಾಲಾ ಸಭಾಂಗಣವನ್ನು ಉದ್ಘಾಟಿಸಿ‌ ಮಾತನಾಡಿದರು. ಮಕ್ಕಳ ಸಂಖ್ಯೇ ತೀರಾ ಕಡಿಮೆ ಇದೆ ಇದು ಅಪಾಯಕಾರಿ. ಶಾಲೆ ಉಳಿಯಬೇಕಾದರೆ ಮಕ್ಕಳು ಬೇಕಾಗುತ್ತದೆ.‌ ಮಕ್ಕಳು ಕಡಿಮೆ ಇರುವ ಶಾಲೆಗಳನ್ನು ಹೆಚ್ಚು‌ಮಕ್ಕಳಿರುವ ಶಾಲೆಗೆ

ಪಾಪೆಮಜಲು ಸರಕಾರಿ ಹಿ ಪ್ರಾ ಶಾಲಾ ನೂತನ ಸಭಾಂಗಣ ಉದ್ಘಾಟನೆ Read More »

ರಿಕ್ಷಾ ಚಾಲಕ ವಿಶ್ವನಾಥ ಗೌಡ ನಿಧನ

ಪುತ್ತೂರು: ಮಾಡ್ನೂರು ಗ್ರಾಮದ ಕಾವು – ಕಮಲಡ್ಕ ನಿವಾಸಿ, ಹಿರಿಯ ರಿಕ್ಷಾ ಚಾಲಕ ವಿಶ್ವನಾಥ ಗೌಡ (55) ಅಸ್ವಸ್ಥಗೊಂಡು ನಿಧನರಾದರು. ಕೆಲವು ತಿಂಗಳ ಹಿಂದೆಯಷ್ಟೇ ನೂತನ ಗೃಹ ಪ್ರವೇಶ ಮಾಡಿಕೊ೦ಡಿದ್ದ ಸರಳ ವ್ಯಕ್ತಿತ್ವದಿಂದ ಕೂಡಿದ ವಿಶ್ವನಾಥ ಅವರಿಗೆ ಅನಾರೋಗ್ಯದಲ್ಲಿ ಹಠಾತ್ತನೇ ಏರಿಳಿತ ಉಂಟಾಗಿ ನಿಧನ ಹೊಂದಿದರು. ಅವರು ಪತ್ನಿ, ಪುತ್ರ, ಪುತ್ರಿ, ಸಹೋದರರು ಮತ್ತು ಸಹೋದರಿ .ಹಾಗೂ ಅಪಾರ ಬಂಧು ಬಳಗವನ್ನು ಅಗಲಿದ್ದಾರೆ.

ರಿಕ್ಷಾ ಚಾಲಕ ವಿಶ್ವನಾಥ ಗೌಡ ನಿಧನ Read More »

ಕಾಂಗ್ರೆಸ್ ಹಿರಿಯ ನಾಯಕ, ಪುಡಾ ಅಧ್ಯಕ್ಷ ಭಾಸ್ಕರ ಕೋಡಿಂಬಾಳ ದಿಢೀರ್ ರಾಜೀನಾಮೆ |  ಪತ್ರಿಕಾಗೋಷ್ಠಿಯಲ್ಲಿ ಏನಂದ್ರು ಗೊತ್ತಾ ?

ಪುತ್ತೂರು: ಪುಡಾ ನೂತನ ಅಧ್ಯಕ್ಷರಾಗಿ ಇತ್ತೀಚೆಗೆ ಆಯ್ಕೆಯಾದ ಕೆ.ಭಾಸ್ಕರ ಕೋಡಿಂಬಾಳ ಅಧ್ಯಕ್ಷ ಸ್ಥಾನಕ್ಕೆ ದಿಢೀರ್ ರಾಜೀನಾಮೆ ನೀಡಿದ್ದಾರೆ. ಈ ಕುರಿತು ಶನಿವಾರ ಪತ್ರಿಕಾಗೋಷ್ಟಿಯಲ್ಲಿ ಅವರು ಮಾತನಾಡಿ, ಶಾಸಕ ಅಶೋಕ್ ರೈ ಮಾತಿನಿಂದ ನೊಂದು ಈ ರಾಜೀನಾಮೆ ನೀಡುತ್ತಿದ್ದೇನೆ ಎಂದು ತಿಳಿಸಿದರು. ಪುತ್ತೂರು ಕಾಂಗ್ರೆಸ್ಸಿನ ಹಿರಿಯ ನಾಯಕನ ಈ ರಾಜೀನಾಮೆ ನಿರ್ಧಾರ ರಾಜಕೀಯ ವಲಯದಲ್ಲಿ ಸಂಚಲನ ಮೂಡಿಸಿದ್ದು, ಜೂ 11 ರಂದು ಬೆಂಗಳೂರಿನಿಂದ ಕರೆ ಮಾಡಿದ ಶಾಸಕರು, ಪುತ್ತೂರು ನಗರ ಅಭಿವೃದ್ಧಿ ಯೋಜನಾ ಪ್ರಾಧಿಕಾರ ಸತ್ತಿದೆ. ನಿಮ್ಮ ಕಾರ್ಯವೈಖರಿ

ಕಾಂಗ್ರೆಸ್ ಹಿರಿಯ ನಾಯಕ, ಪುಡಾ ಅಧ್ಯಕ್ಷ ಭಾಸ್ಕರ ಕೋಡಿಂಬಾಳ ದಿಢೀರ್ ರಾಜೀನಾಮೆ |  ಪತ್ರಿಕಾಗೋಷ್ಠಿಯಲ್ಲಿ ಏನಂದ್ರು ಗೊತ್ತಾ ? Read More »

error: Content is protected !!
Scroll to Top