ಪುತ್ತೂರು

ಎಸೋಸಿಯೇಶನ್ ಆಫ್ ಕನ್ಸಲ್ಟಿಂಗ್ ಸಿವಿಲ್  ಇಂಜಿನಿಯರ್ಸ್ ಪುತ್ತೂರು ಸೆಂಟರ್ ಆಶ್ರಯದಲ್ಲಿ ಇಂಜನಿಯರ್ ದಿನಾಚರಣೆ | ಆಕರ್ಷಕ ವಾಕಥಾನ್ ಜಾಥ

ಪುತ್ತೂರು: ಎಸೋಸಿಯೇಶನ್ ಆಫ್ ಕನ್ಸಲ್ಟಿಂಗ್ ಸಿವಿಲ್  ಇಂಜಿನಿಯರ್ಸ್ (ಇಂಡಿಯಾ) ಪುತ್ತೂರು ಸೆಂಟರ್ ಆಶ್ರಯದಲ್ಲಿ ಇಂಜನಿಯರ್ ದಿನಾಚರಣೆ ಪ್ರಯುಕ್ತ ಸೋಮವಾರ ಸಂಜೆ ಪುತ್ತೂರಿನಲ್ಲಿ ಆಕರ್ಷಕ ವಾಕಥಾನ್ ನಡೆಯಿತು. ಕೆಎಸ್‌ಆರ್‌ಟಿಸಿ ಬಸ್ ನಿಲ್ದಾಣ ಬಳಿಯ ಗಾಂಧಿ ಕಟ್ಟೆಯ ಎದುರು ಪುತ್ತೂರು ಡಿವೈಎಸ್‌ಪಿ  ಅರುಣ್ ನಾಗೇಗೌಡ ವಾಕಥಾನ್‌ಗೆ ಎಸಿಸಿಇ(ಐ) ಲಾಂಛನವಿರುವ ಧ್ವಜ ಹಿಡಿದು ಚಾಲನೆ ನೀಡಿದರು. ಬಳಿಕ ಎಸೋಸಿಯೇಶನ್ ಆಫ್ ಕನ್ಸಲ್ಟಿಂಗ್ ಸಿವಿಲ್  ಇಂಜಿನಿಯರ್ಸ್ (ಇಂಡಿಯಾ) ಪುತ್ತೂರು ಸೆಂಟರ್‌ನ ಸದಸ್ಯ ಎಂಜಿನಿಯರ್‌ಗಳು ಕಾಲ್ನಡಿಗೆಯಲ್ಲಿ ಮುಖ್ಯರಸ್ತೆಯಲ್ಲಿ ಸಾಗಿದರು. ಬಸ್ ನಿಲ್ದಾಣದಿಂದ ಹೊರಟ ವಾಕಥಾನ್ […]

ಎಸೋಸಿಯೇಶನ್ ಆಫ್ ಕನ್ಸಲ್ಟಿಂಗ್ ಸಿವಿಲ್  ಇಂಜಿನಿಯರ್ಸ್ ಪುತ್ತೂರು ಸೆಂಟರ್ ಆಶ್ರಯದಲ್ಲಿ ಇಂಜನಿಯರ್ ದಿನಾಚರಣೆ | ಆಕರ್ಷಕ ವಾಕಥಾನ್ ಜಾಥ Read More »

ಹಿಂದೂ ಸಮಾಜವನ್ನು ಕೆಣಕುವ ಮುನ್ನ ಇತಿಹಾಸವನ್ನು ತಿರುಗಿನೋಡಿ : ದಯಾನಂದ ಶೆಟ್ಟಿ ಉಜಿರೆಮಾರು

ಪುತ್ತೂರು: ಹಿಂದೂ ಸಮಾಜ ಮೌನವಾಗಿದೆ, ಎದ್ದು ನಿಲ್ಲಲ್ಲ ಎಂದು ಭಾವಿಸಿ ಈ ರೀತಿ ನಾಲಿಗೆ ಹರಿಬಿಟ್ಟು ಹಿಂದೂ ಸಮಾಜಕ್ಕೆ ಸವಾಲು ಹಾಕಿದ್ರೆ ಅದೂ ನಿಮ್ಮ ಮೂರ್ಖತನ. ಹಿಂದೂ ಸಮಾಜ ತಾಳ್ಮೆ ಕಳೆದುಕೊಂಡು ಕ್ರಿಯೆಗೆ ಪ್ರತಿಕ್ರಿಯೆ  ನೀಡಲು ಹೊರಟರೆ ಏನಾಗಬಹುದೂ ಎಂದೂ ಕರಾವಳಿಯ ಇತಿಹಾಸವನ್ನು ತಿರುಗಿ ನೋಡಿಕೊಂಡರೆ ಒಳಿತು ಎಂದು ಪುತ್ತೂರು ಗ್ರಾಮಾಂತರ ಮಂಡಲ ಅಧ್ಯಕ್ಷ ದಯಾನಂದ ಶೆಟ್ಟಿ ಉಜಿರೆಮಾರು ಎಚ್ಚರಿಕೆ ನೀಡಿದ್ದಾರೆ. ಪತ್ರಿಕಾ ಹೇಳಿಕೆ ನೀಡಿರುವ ಅವರು, ಹಿಂದೂ ನಾಯಕ ಶರಣ್ ಪಂಪುವೆಲ್ ರವರಿಗೆ ಸಾಮಾಜಿಕ ಜಾಲತಾಣದ

ಹಿಂದೂ ಸಮಾಜವನ್ನು ಕೆಣಕುವ ಮುನ್ನ ಇತಿಹಾಸವನ್ನು ತಿರುಗಿನೋಡಿ : ದಯಾನಂದ ಶೆಟ್ಟಿ ಉಜಿರೆಮಾರು Read More »

ಪುತ್ತೂರು ಮೆಡಿಕಲ್ ಕಾಲೇಜು ಹೋರಾಟ ಸಮಿತಿ ಸಭೆ | ಸರಕಾರದಿಂದ ಕಾಲೇಜು ಮಂಜೂರುಗೊಳ್ಳದಿದ್ದರೆ ಪುತ್ತೂರಿನಿಂದ ಬೆಂಗಳೂರಿಗೆ ಜಾಥಾ : ಅಶೋಕ್ ಕುಮಾರ್ ರೈ

ಪುತ್ತೂರು: ಸರಕಾರಿ ಮೆಡಿಕಲ್ ಕಾಲೇಜು ತಂದೇ ಸಿದ್ಧ. ಒಂದು ವೇಳೆ ಸರಕಾರದಿಂದ ಕಾಲೇಜು ಸಿಗದಿದ್ದರೆ ಯಾವುದೇ ಹೋರಾಟಕ್ಕೆ ಸಿದ್ಧವಿದ್ದು, ಪುತ್ತೂರಿನಿಂದ ರಾಜಕೀಯ ವ್ಯಕ್ತಿಗಳು, ಜನಪ್ರತಿನಿಧಿಗಳು, ಸಂಘ ಸಂಸ್ಥೆಗಳನ್ನು ಸೇರಿಸಿಕೊಂಡು ಬೆಂಗಳೂರಿಗೆ ಜಾಥಾ ನಡೆಸಲಾಗುವುದು ಎಂದು ಶಾಸಕ ಅಶೋಕ್ ಕುಮಾರ್ ರೈ ಹೇಳಿದರು. ಪುತ್ತೂರು ಸರಕಾರಿ ಮೆಡಿಕಲ್ ಕಾಲೇಜು ಹೋರಾಟ ಸಮಿತಿ ವತಿಯಿಂದ ಮಂಜಲ್ಪಡ್ಪು ಉದಯಗಿರಿ ಹೊಟೇಲ್ ಹಾಲ್‍ ನಲ್ಲಿ ಭಾನುವಾರ ಸಂಜೆ ನಡೆದ ಸಭೆಯಲ್ಲಿ ಅವರು ಮಾತನಾಡಿದರು. ನಾನು ಶಾಸಕನಾದ ಮೇಲೆ ಪುತ್ತೂರಿನ ಅಭಿವೃದ್ಧಿ ನಿಟ್ಟಿನಲ್ಲಿ ಕೆಲವು

ಪುತ್ತೂರು ಮೆಡಿಕಲ್ ಕಾಲೇಜು ಹೋರಾಟ ಸಮಿತಿ ಸಭೆ | ಸರಕಾರದಿಂದ ಕಾಲೇಜು ಮಂಜೂರುಗೊಳ್ಳದಿದ್ದರೆ ಪುತ್ತೂರಿನಿಂದ ಬೆಂಗಳೂರಿಗೆ ಜಾಥಾ : ಅಶೋಕ್ ಕುಮಾರ್ ರೈ Read More »

ನರಿಮೊಗರು ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ವಾರ್ಷಿಕ ಮಹಾಸಭೆ | ವರದಿ ವರ್ಷದಲ್ಲಿ 2.45 ಕೋಟಿ ರೂ. ಲಾಭ, ಸದಸ್ಯರಿಗೆ ಶೇ.18 ಡಿವಿಡೆಂಡ್ ಘೋಷಣೆ : ನವೀನ್ ಡಿ.

ಪುತ್ತೂರು: ನರಿಮೊಗರು ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ವಾರ್ಷಿಕ ಮಹಾಸಭೆ ಭಾನುವಾರ ಸಂಘದ ರೈತ ಭವನದಲ್ಲಿ ನಡೆಯಿತು. ಸಂಘದ ಅಧ್ಯಕ್ಷ ನವೀನ್ ಡಿ. ಮಹಾಸಭೆಯ ಅಧ್ಯಕ್ಷತೆ ವಹಿಸಿ, ಸಂಘವು 2022-23ನೇ ಸಾಲಿನಲ್ಲಿ 1.70 ಕೋಟಿ ರೂ. ಲಾಭಗಳಿಸಿದ್ದು, ವರದಿ ವರ್ಷದಲ್ಲಿ 2.45 ಕೋಟಿ ರೂ. ಲಾಭ ಗಳಿಸಿದೆ. ಸದಸ್ಯರಿಗೆ ಶೇ. 18 ಲಾಭಾಂಶ ವಿತರಿಸಲು ಆಡಳಿತ ಮಂಡಳಿಯು ನಿರ್ಧರಿಸಿದೆ ಎಂದು ತಿಳಿಸಿದರು. ಸದಸ್ಯರ ಸಹಕಾರದಿಂದ ವರದಿ ಸಾಲಿನಲ್ಲಿ ಸಂಘಕ್ಕೆ ‘ಎ’ ತರಗತಿ ಆಡಿಟ್ ವರ್ಗೀಕರಣ ದೊರೆತಿದ್ದು,

ನರಿಮೊಗರು ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ವಾರ್ಷಿಕ ಮಹಾಸಭೆ | ವರದಿ ವರ್ಷದಲ್ಲಿ 2.45 ಕೋಟಿ ರೂ. ಲಾಭ, ಸದಸ್ಯರಿಗೆ ಶೇ.18 ಡಿವಿಡೆಂಡ್ ಘೋಷಣೆ : ನವೀನ್ ಡಿ. Read More »

ಸವಣೂರು ಕೃಷಿ ಪತ್ತಿನ ಸಹಕಾರ ಸಂಘದ ವಾರ್ಷಿಕ ಮಹಾಸಭೆ | ವರದಿ ವರ್ಷದಲ್ಲಿ 1.52 ಕೋಟಿ ರೂ. ಲಾಭ, ಸದಸ್ಯರಿಗೆ 14 ಶೇ. ಡಿವಿಡೆಂಡ್ ಘೋಷಣೆ : ತಾರನಾಥ ಕಾಯರ್ಗ

ಸವಣೂರು: ಸವಣೂರು ಕೃಷಿ ಪತ್ತಿನ ಸಹಕಾರ ಸಂಘದ ವಾರ್ಷಿಕ ಮಹಾಸಭೆ ಸಂಘದ ಸಭಾಭವನದಲ್ಲಿ ಭಾನುವಾರ ನಡೆಯಿತು. ಸಂಘದ ಅಧ್ಯಕ್ಷ ತಾರನಾಥ ಕಾಯರ್ಗ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿ, ವರದಿ ಸಾಲಿನಲ್ಲಿ ಸಂಘ 365.50 ಕೋಟಿ ವಾರ್ಷಿಕ ವ್ಯವಹಾರ ನಡೆಸಿ 1.52 ಕೋಟಿ ರೂ. ಲಾಭಗಳಿಸಿದೆ. ಸದಸ್ಯರಿಗೆ 14 ಶೇ. ಡಿವಿಡೆಂಡ್ ಘೊಷಿಸಲಾಗಿದೆ ಎಂದು ಹೇಳಿದರು. ಸದಸ್ಯರ ಸಹಕಾರದಿಂದ ಸತತವಾಗಿ 22ನೇ ಬಾರಿಗೆ ‘ಎ’ ತರಗತಿ ಆಡಿಟ್ ವರ್ಗೀಕರಣದೊಂದಿಗೆ, ಶೇಕಡಾ 99.22 ವಸೂಲಾತಿ ಸಾಧನೆ ಮಾಡಲಾಗಿದೆ. ವರದಿ ವರ್ಷದಲ್ಲಿ

ಸವಣೂರು ಕೃಷಿ ಪತ್ತಿನ ಸಹಕಾರ ಸಂಘದ ವಾರ್ಷಿಕ ಮಹಾಸಭೆ | ವರದಿ ವರ್ಷದಲ್ಲಿ 1.52 ಕೋಟಿ ರೂ. ಲಾಭ, ಸದಸ್ಯರಿಗೆ 14 ಶೇ. ಡಿವಿಡೆಂಡ್ ಘೋಷಣೆ : ತಾರನಾಥ ಕಾಯರ್ಗ Read More »

ಕೆದಂಬಾಡಿ ಬಿಜೆಪಿ 186 ಬೂತ್ ನಲ್ಲಿ ಸದಸ್ಯತ್ವ ಅಭಿಯಾನಕ್ಕೆ ಚಾಲನೆ

ಪುತ್ತೂರು: ಬಿಜೆಪಿ ಕೆದಂಬಾಡಿ 186 ಬೂತ್ ಸಮಿತಿ ಸಭೆ ಹಾಗೂ ಸದಸ್ಯತ್ವ ಅಭಿಯಾನಕ್ಕೆ ಭಾನುವಾರ ಚಾಲನೆ ನೀಡಲಾಯಿತು ಬೂತ್ ಅಧ್ಯಕ್ಷ ಸೀತಾರಾಮ ಗೌಡ ಅವರ ಅದ್ಯಕ್ಷತೆಯಲ್ಲಿ ಬಾಲಕೃಷ್ಣ ಎಂಬವರ ನಿವಾಸದಲ್ಲಿ ನಡೆಯಿತು. ಬೂತ್ ಸದಸ್ಯತ್ವ ಅಬಿಯಾನದ ಸಂಯೋಜಕರಾಗಿ ನೇಮಿರಾಜ್ ರೈ ಕುರಿಕ್ಕಾರ, ಸಹ ಸಂಯೋಜಕರಾಗಿ ರಕ್ಷಿತ್ ಗೌಡ ಇದ್ಯಪ್ಪೆ ಆಯ್ಕೆಯಾದರು. ಬೂತ್ ಮನ್ ಕೀ ಬಾತ್ ಸಾಯೋಜಕರಾಗಿ ಸ್ವಸ್ತಿಕ್ ರೈ ಕುಯ್ಯಾರು ಅವರನ್ನು ನೇಮಿಸಲಾಯಿತು. ಸಭೆಯಲ್ಲಿ ಮಂಡಲ ಕಾರ್ಯದರ್ಶಿ ರತನ್ ರೈ ಕುಂಬ್ರ. ಶಕ್ತಿಕೇಂದ್ರ ಸಂಚಾಲಕ ಶರತ್

ಕೆದಂಬಾಡಿ ಬಿಜೆಪಿ 186 ಬೂತ್ ನಲ್ಲಿ ಸದಸ್ಯತ್ವ ಅಭಿಯಾನಕ್ಕೆ ಚಾಲನೆ Read More »

ಉಪ್ಪಿನಂಗಡಿಯಲ್ಲಿ ಸಂಸ್ಮರಣೆ, ಸನ್ಮಾನ ಮತ್ತು ತಾಳಮದ್ದಳೆ

ಉಪ್ಪಿನಂಗಡಿ: ಶ್ರೀ ಕಾಳಿಕಾಂಬ ಯಕ್ಷಗಾನ ಕಲಾಸೇವಾ ಸಂಘದ 50ನೇ ವರ್ಷದ ನಿಮಿತ್ತ ನಡೆಸಲಾಗುತ್ತಿರುವ ಮಹಾಭಾರತ ಸರಣಿಯ ಕಾರ್ಯಕ್ರಮವಾಗಿ ಪೆರಿಯಡ್ಕ ಮದುವನದಲ್ಲಿ ಮಧುರ ಮನಸು ಸ್ನೇಹಕೂಟವೆಂಬ ವಿಶೇಷ ಕಾರ್ಯಕ್ರಮ ಜರಗಿತು. ತೀರ್ಥರೂಪರಾದ ದಿ. ತಿರುಮಲೇಶ್ವರ ಭಟ್ ಕಟ್ಟದಮೂಲೆ ಸಂಸ್ಮರಣೆಯನ್ನು ಶ್ರೀ ನೀರ್ಚಾಲು ಸುಬ್ರಹ್ಮಣ್ಯ ಮಧ್ಯಸ್ಥರು ಮಾಡಿದರು. ಈ ಸಂದರ್ಭದಲ್ಲಿ ನಿವೃತ್ತ ಪ್ರೊಫೆಸರ್ ಬಿ. ವಿ ಆರ್ತಿಕಜೆ  ಪುತ್ತೂರು, ನೀ.ಸು.ಮಧ್ಯಸ್ಥ, ಭಾಗವತ ಗೋವಿಂದ ನಾಯಕ್ ಪಾಲೆಚ್ಚಾರು, ಕಾಳಿಕಾಂಬ ಯಕ್ಷಗಾನ ಸೇವಾ ಸಂಘದ ಅಧ್ಯಕ್ಷ ದಿವಾಕರ ಆಚಾರ್ಯ ಗೇರುಕಟ್ಟೆ, ಭಾಗವತ ಡಿ.ಕೆ.ಆಚಾರ್ಯ

ಉಪ್ಪಿನಂಗಡಿಯಲ್ಲಿ ಸಂಸ್ಮರಣೆ, ಸನ್ಮಾನ ಮತ್ತು ತಾಳಮದ್ದಳೆ Read More »

ಅಕ್ಷಯ ಕಾಲೇಜಿನಲ್ಲಿ ಸ್ಪೋಕನ್ ಇಂಗ್ಲೀಷ್ ತರಗತಿಗಳ ಉದ್ಘಾಟನೆ

ಪುತ್ತೂರು:  ಅಕ್ಷಯ ಎಜುಕೇಶನಲ್ ಚಾರಿಟೇಬಲ್ ಟ್ರಸ್ಟ್ ಅಧೀನದಲ್ಲಿ ಕಾರ್ಯಾಚರಿಸುತ್ತಿರುವ ಅಕ್ಷಯ ಕಾಲೇಜಿನಲ್ಲಿ ಇಂಗ್ಲೀಷ್ ವಿಭಾಗ ಮತ್ತುಆಂತರಿಕ ಗುಣಮಟ್ಟದ ಭರವಸೆ ಕೋಶ ಸಹಭಾಗಿತ್ವದಲ್ಲಿ ವಿದ್ಯಾರ್ಥಿಗಳಿಗೆ   ಸ್ಪೋಕನ್ ಇಂಗ್ಲೀಷ್  ತರಗತಿಗಳ ಉದ್ಘಾಟನಾ ಸಮಾರಂಭ ನಡೆಯಿತು. ಸುಳ್ಯ ಎನ್ಎಂಸಿ ಕಾಲೇಜು ಪ್ರಾಂಶುಪಾಲ ಮಿಥಾಲಿ ಪಿ. ರೈ ಸಮಾರಂಭದ ಉದ್ಘಾಟಿಸಿ ಮಾತನಾಡಿ, ಭಾರತದ ರಾಷ್ಟ್ರ ಭಾಷೆ ಹಿಂದಿಯಾದರು  ರಾಷ್ಟ್ರೀಯ ಮತ್ತು ಅಂತರಾಷ್ಟ್ರೀಯ ಮಟ್ಟದಲ್ಲಿ ವ್ಯಾಪಕವಾಗಿ ಬಳಸಲ್ಪಡುವ ಭಾಷೆ ಇಂಗ್ಲೀಷ್ ಆಗಿದೆ.  ಈ ನಿಟ್ಟಿನಲ್ಲಿ ನಮ್ಮ ಮಾತೃಭಾಷೆಯ ರೀತಿ ಸರಳವಾಗಿ ಇಂಗ್ಲೀಷ್ ಮಾತನಾಡಲು ಕಲಿಯುವುದು

ಅಕ್ಷಯ ಕಾಲೇಜಿನಲ್ಲಿ ಸ್ಪೋಕನ್ ಇಂಗ್ಲೀಷ್ ತರಗತಿಗಳ ಉದ್ಘಾಟನೆ Read More »

ಸಂತ ಫಿಲೋಮಿನಾ ಕಾಲೇಜಿನಲ್ಲಿ ಇಂಟರ್ನಲ್‌ ಹ್ಯಾಕಥಾನ್‌ ಗೆ ವಿಧ್ಯುಕ್ತ ಚಾಲನೆ

ಪುತ್ತೂರು: ಸಂತ ಫಿಲೋಮಿನಾ ಕಾಲೇಜಿನ ಇನ್‌ಸ್ಟಿಟ್ಯೂಶನ್ಸ್‌ ಇನ್ನೊವೇಶನ್‌ ಕೌನ್ಸಿಲ್‌ ಹಾಗೂ ಗಣಕವಿಜ್ಞಾನ ವಿಭಾಗಗಳ ವತಿಯಿಂದ ಸ್ಮಾರ್ಟ್‌ ಇಂಡಿಯಾ ಹ್ಯಾಕಥಾನ್‌ ಗೆ ಭಾಗವಹಿಸುವ ಪೂರ್ವತಯಾರಿಯಾಗಿ ಕಾಲೇಜಿನ ವಿದ್ಯಾರ್ಥಿಗಳಿಗಾಗಿ ಇಂಟರ್ ನಲ್‌ ಹ್ಯಾಕಥಾನ್‌ ಉದ್ಘಾಟಿಸಲಾಯಿತು. ಮಂಗಳೂರು ಸೈಂಟ್‌ ಜೋಸೆಫ್‌ ಇಂಜಿನಿಯರಿಂಗ್‌ ಕಾಲೇಜಿನ ಇಲೆಕ್ಟ್ರಾನಿಕ್ಸ್‌ ಆ್ಯಂಡ್‌ ಕಮ್ಯುನಿಕೇಶನ್‌ ವಿಭಾಗದ ಸಹಾಯಕ ಪ್ರಾಧ್ಯಾಪಕ, ಗ್ಲೆನ್ಸನ್‌ ಟೋನಿ ಚಾಲನೆ ನೀಡಿ ಮಾತನಾಡಿ, ಭಾರತದ ಉತ್ಕೃಷ್ಟ ಸಂಪನ್ಮೂಲಗಳನ್ನು ಬಳಸಿ ಉನ್ನತ ವಿದ್ಯಾಭ್ಯಾಸ ನಡೆಸಿದ ಅದೆಷ್ಟೋ ಪ್ರತಿಭಾವಂತ ಜನರು ಉದ್ಯೋಗಗಳನ್ನರಸಿ ವಿದೇಶಗಳಿಗೆ ಹೋಗುತ್ತಿದ್ದಾರೆ. ಈ ಪ್ರತಿಭಾ ಪಲಾಯನವನ್ನು

ಸಂತ ಫಿಲೋಮಿನಾ ಕಾಲೇಜಿನಲ್ಲಿ ಇಂಟರ್ನಲ್‌ ಹ್ಯಾಕಥಾನ್‌ ಗೆ ವಿಧ್ಯುಕ್ತ ಚಾಲನೆ Read More »

ಮುಡಿಪು ಪಿ.ಎಂ.ಶ್ರೀ ಜವಾಹರ್ ನವೋದಯ ವಿದ್ಯಾಲಯದಲ್ಲಿ ಪಿಟಿಸಿ ಜನರಲ್ ಬಾಡಿ ಸಭೆ, ಓಣಂ ಆಚರಣೆ | ಸಮಾರಂಭ ಉದ್ಘಾಟಿಸಿದ ಸಂಸದ ಕ್ಯಾ.ಬ್ರಿಜೇಶ್‍ ಚೌಟ

ಮುಡಿಪು: ದ.ಕ.ಜಿಲ್ಲೆಯ ಮುಡಿಪು ಪಿ.ಎಂ.ಶ್ರೀ ಜವಹಾರ್ ನವೋದಯ ವಿದ್ಯಾಲಯದಲ್ಲಿ ಪಿಟಿಸಿ ಜನರಲ್ ಬಾಡಿ ಸಭೆ ಹಾಗೂ ಓಣಂ ಆಚರಣೆ ಇಂದು ವಿದ್ಯಾಲಯದ ಸಭಾಭವನದಲ್ಲಿ ನಡೆಯಿತು. ಮುಖ್ಯ ಅತಿಥಿಯಾಗಿ ದ.ಕ.ಜಿಲ್ಲಾ ಸಂಸದ ಕ್ಯಾ.ಬ್ರಿಜೇಶ್‍ ಚೌಟ ಪಾಲ್ಗೊಂಡು ಸಮಾರಂಭದ ಉದ್ಘಾಟಿಸಿ ಶುಭ ಹಾರೈಸಿದರು. ನವೋದಯ ವಿದ್ಯಾಲಯದ ಪ್ರಾಂಶುಪಾಲ ಪಿ.ರಾಜೇಶ್‍ ಸಮಾರಂಭದ ಅಧ್ಯಕ್ಷತೆ ವಹಿಸಿದ್ದರು. ವೇದಿಕೆಯಲ್ಲಿ ಪುತ್ತೂರು ಸಮರ್ಪಣಾ ಚಾರಿಟೇಬಲ್ ಟ್ರಸ್ಟ್ ಅಧ್ಯಕ್ಷ ರಾಜೇಂದ್ರ ಪ್ರಸಾದ್ ಶೆಟ್ಟಿ, ಸಹಿತ ವಿವಿಧ ಗಣ್ಯರು ಉಪಸ್ಥಿತರಿದ್ದು ಶುಭ ಹಾರೈಸಿದರು. ಸಮಾರಂಭದಲ್ಲಿ ವಿವಿಧ ಚಟುವಟಿಕೆಗಳ ಕುರಿತು

ಮುಡಿಪು ಪಿ.ಎಂ.ಶ್ರೀ ಜವಾಹರ್ ನವೋದಯ ವಿದ್ಯಾಲಯದಲ್ಲಿ ಪಿಟಿಸಿ ಜನರಲ್ ಬಾಡಿ ಸಭೆ, ಓಣಂ ಆಚರಣೆ | ಸಮಾರಂಭ ಉದ್ಘಾಟಿಸಿದ ಸಂಸದ ಕ್ಯಾ.ಬ್ರಿಜೇಶ್‍ ಚೌಟ Read More »

error: Content is protected !!
Scroll to Top