ಪುತ್ತೂರು

ಗುಡಿಸಲಿಗೆ ಬೆಂಕಿ ಇಟ್ಟ ದುಷ್ಕರ್ಮಿಗಳು | ನಗದು, ದಾಖಲೆ ಪತ್ರ, ದಿನಸಿ ಸಾಮಾಗ್ರಿ ಬೆಂಕಿಗಾಹುತಿ

ಪುತ್ತೂರು: ಮಗನೊಂದಿಗೆ ವಾಸವಿದ್ದ ಬಡ ಮಹಿಳೆಯ ಗುಡಿಸಲಿಗೆ ಯಾರೋ ಕಿಡಿಗೇಡಿಗಳು ಬೆಂಕಿ ಇಟ್ಟ ಘಟನೆ ಪುತ್ತೂರು ತಾಲೂಕಿನ ಕುಂಬ್ರ ಸಮೀಪದ ಸಾರಪುಣಿಪಾದಡ್ಕ ಎಂಬಲ್ಲಿ ನಡೆದಿದೆ. ಪಾದೆಡ್ನ ನಿವಾಸಿ ಪದ್ಮಾವತಿ ಹಾಗೂ ಅವರ 8 ವರ್ಷದ ಪುತ್ರ ವಾಸ್ತವ್ಯವಿದ್ದ, ಶೀಟ್ ಅಳವಡಿಸಿರುವ ಗುಡಿಸಲು ಮನೆಯಲ್ಲಿ ಬೆಂಕಿ ಅವಘಡ ನಡೆದಿದೆ. ಬೆಂಕಿ ಅವಘಡದಿಂದ ಮನೆಯೊಳಗೆ ಬ್ಯಾಗ್‌ನಲ್ಲಿ ಇರಿಸಿದ್ದ 15 ಸಾವಿರ ನಗದು,  ಆಧಾರ್ ಕಾರ್ಡ್ ಸಹಿತ ದಾಖಲೆ ಪತ್ರಗಳು, ದಿನಸಿ ಸಾಮಗ್ರಿಗಳು ಬೆಂಕಿಗೆ ಆಹುತಿಯಾಗಿವೆ. ಗೋಡೆ ಇಲ್ಲದ ಗುಡಿಸಲಿನ ಸುತ್ತ […]

ಗುಡಿಸಲಿಗೆ ಬೆಂಕಿ ಇಟ್ಟ ದುಷ್ಕರ್ಮಿಗಳು | ನಗದು, ದಾಖಲೆ ಪತ್ರ, ದಿನಸಿ ಸಾಮಾಗ್ರಿ ಬೆಂಕಿಗಾಹುತಿ Read More »

ಶೈಕ್ಷಣಿಕ ಸಾಧನೆಗೆ ಕ್ರೀಡೆ ಪೂರಕವಾದದ್ದು : ಪಾರ್ಥ ವಾರಣಾಸಿ | ಅಂಬಿಕಾ ಪದವಿ ಪೂರ್ವ ವಿದ್ಯಾಲಯಗಳ ವಾರ್ಷಿಕ ಕ್ರೀಡಾಕೂಟ ಉದ್ಘಾಟನೆ

ಪುತ್ತೂರು: ಕ್ರೀಡೆ ಕೇವಲ ಸ್ಪರ್ಧೆಗಷ್ಟೇ ಸೀಮಿತವಲ್ಲ. ದೈಹಿಕ, ಮಾನಸಿಕ ಆರೋಗ್ಯ, ಮೆದುಳಿನ ಚುರುಕುತನಕ್ಕೆ  ಅತ್ಯಂತ ಉಪಕಾರಿ. ಅದರಲ್ಲೂ ಶೈಕ್ಷಣಿಕ ಸಾಧನೆಗೆ ಅತಿ ಅವಶ್ಯಕ. ಆದ್ದರಿಂದ ದಿನಕ್ಕೆ 30  ರಿಂದ 90 ನಿಮಿಷಗಳ ವರೆಗೆ ಆಟೋಟ, ನೃತ್ಯ ಮುಂತಾದವುಗಳಲ್ಲಿ ತೊಡಗಿಸಿಕೊಳ್ಳುವುದು ಅತ್ಯಂತ ಮುಖ್ಯ ಎಂದು ಈಜು ತರಬೇತುದಾರ ಪಾರ್ಥ ವಾರಣಾಸಿ ಹೇಳಿದರು. ಅವರು ಕೊಂಬೆಟ್ಟಿನ ತಾಲೂಕು ಕ್ರೀಡಾಂಗಣದಲ್ಲಿ ನಡೆದ ನೆಲ್ಲಿಕಟ್ಟೆ ಹಾಗೂ ಬಪ್ಪಳಿಗೆಯಲ್ಲಿನ ಅಂಬಿಕಾ ಪದವಿ ಪೂರ್ವ ವಿದ್ಯಾಲಯಗಳ ವಾರ್ಷಿಕ ಕ್ರೀಡಾಕೂಟದ ಉದ್ಘಾಟನಾ ಸಮಾರಂಭದಲ್ಲಿ ಮುಖ್ಯ ಅತಿಥಿಯಾಗಿ ಮಾತನಾಡಿದರು.

ಶೈಕ್ಷಣಿಕ ಸಾಧನೆಗೆ ಕ್ರೀಡೆ ಪೂರಕವಾದದ್ದು : ಪಾರ್ಥ ವಾರಣಾಸಿ | ಅಂಬಿಕಾ ಪದವಿ ಪೂರ್ವ ವಿದ್ಯಾಲಯಗಳ ವಾರ್ಷಿಕ ಕ್ರೀಡಾಕೂಟ ಉದ್ಘಾಟನೆ Read More »

ಸವಣೂರು ಸೀತಾರಾಮ ರೈಯವರಿಗೆ RUPSA ರಾಜ್ಯ ಪ್ರಶಸ್ತಿ | ಅ.21 ರಂದು ಬೆಂಗಳೂರಿನ ಜುಬ್ಲಿ ಅಂತರಾಷ್ಟ್ರೀಯ ಶಾಲಾ ಆಡಿಟೋರಿಯಂನಲ್ಲಿ ಪ್ರಶಸ್ತಿ ಪ್ರದಾನ

ಸವಣೂರು: ಕರ್ನಾಟಕ ರಾಜ್ಯ ಮಾನ್ಯತೆ ಪಡೆದ ಅನುದಾನರಹಿತ ಶಾಲೆಗಳ ಸಂಘ (Recognised Unaided Private Schools’ Association of Karnataka) ಪ್ರದಾನ ಮಾಡುವ ರಾಜ್ಯಮಟ್ಟದ ಉತ್ತಮ ಶಾಲಾ ಆಡಳಿತಗಾರ ಪ್ರಶಸ್ತಿಯು ಸವಣೂರಿನ ಶಿಲ್ಪಿ, ಸಹಕಾರ ರತ್ನ ಸವಣೂರು ಸೀತಾರಾಮ ರೈಯವರಿಗೆ ಒಲಿದು ಬಂದಿದೆ. ಅಕ್ಟೋಬರ್ 21ರಂದು ಬೆಂಗಳೂರಿನ ಜುಬ್ಲಿ ಅಂತರರಾಷ್ಟ್ರೀಯ ಶಾಲಾ ಆಡಿಟೋರಿಯಂನಲ್ಲಿ ನಡೆಯಲಿರುವ ಅದ್ದೂರಿ ಸಮಾರಂಭದಲ್ಲಿ ಶಿಕ್ಷಣ ಸಚಿವ ಮಧು ಬಂಗಾರಪ್ಪ ಮತ್ತು ಇತರ ಗಣ್ಯರು ಪ್ರಶಸ್ತಿ ಪ್ರದಾನ ಮಾಡಲಿದ್ದಾರೆ. ಸವಣೂರು ಸೀತಾರಾಮ ರೈ ಅವರು

ಸವಣೂರು ಸೀತಾರಾಮ ರೈಯವರಿಗೆ RUPSA ರಾಜ್ಯ ಪ್ರಶಸ್ತಿ | ಅ.21 ರಂದು ಬೆಂಗಳೂರಿನ ಜುಬ್ಲಿ ಅಂತರಾಷ್ಟ್ರೀಯ ಶಾಲಾ ಆಡಿಟೋರಿಯಂನಲ್ಲಿ ಪ್ರಶಸ್ತಿ ಪ್ರದಾನ Read More »

ಅರಣ್ಯಾಧಿಕಾರಿ ಸಂಜೀವ ಪೂಜಾರಿ ಬೆಳ್ಳಾರೆ ಪೊಲೀಸ್ ವಶಕ್ಕೆ | ಹಿಂಜಾವೇ ಪ್ರತಿಭಟನೆಗೆ ಮಣಿದ ಪೊಲೀಸ್ ಇಲಾಖೆ

ಪುತ್ತೂರು: ಬಿಲ್ಲವ ಸಮುದಾಯದ ಹೆಣ್ಣು ಮಕ್ಕಳ ಕುರಿತು ನಾಲಗೆ ಹರಿಬಿಟ್ಟ ಸಂಜೀವ ಪೂಜಾರಿ ವಿರುದ್ಧ ಹಿಂದೂ ಜಾಗರಣ ವೇದಿಕೆ ಪ್ರತಿಭಟನೆ ನಡೆಸಿದ ಬೆನ್ನಲ್ಲೇ ಪಂಜ ಉಪವಲಯ ಅರಣ್ಯ ಅಧಿಕಾರಿ ಸಂಜೀವ ಪೂಜಾರಿ ಕಾಣಿಯೂರು ಅವರನ್ನು ಬೆಳ್ಳಾರೆ ಪೊಲೀಸರು ವಶಕ್ಕೆ ಪಡೆದಿದ್ದಾರೆ. ಯುವತಿಯರು ಹಾಗೂ ಭಜನೆ ಕುರಿತು ಅವರು ಕೀಳುಮಟ್ಟದ ಹೇಳಿಕೆ ನೀಡಿದ್ದನ್ನು ವಿರೋಧಿಸಿ ಬೆಳ್ಳಾರೆ ಠಾಣೆಯಲ್ಲಿ ಗುರುವಾರ ಸಂಜೀವ ಪೂಜಾರಿ ವಿರುದ್ಧ ಪ್ರಕರಣ ದಾಖಲಾಗಿತ್ತು. ಇಂದು ಪುತ್ತೂರು ಡಿವೈಎಸ್ಪಿ ಕಚೇರಿ ಮುಂಭಾಗ ಹಿಂದೂ ಜಾಗರಣ ವೇದಿಕೆ ವತಿಯಿಂದ

ಅರಣ್ಯಾಧಿಕಾರಿ ಸಂಜೀವ ಪೂಜಾರಿ ಬೆಳ್ಳಾರೆ ಪೊಲೀಸ್ ವಶಕ್ಕೆ | ಹಿಂಜಾವೇ ಪ್ರತಿಭಟನೆಗೆ ಮಣಿದ ಪೊಲೀಸ್ ಇಲಾಖೆ Read More »

ಹಿಂದೂ ಹೆಣ್ಣುಮಕ್ಕಳ ಕುರಿತು ನಾಲಗೆ ಹರಿಬಿಟ್ಟ ಸಂಜೀವ ಪೂಜಾರಿ | ಹಿಂದೂ ಜಾಗರಣಾ ವೇದಿಕೆ ವತಿಯಿಂದ ಬೃಹತ್‍ ಪ್ರತಿಭಟನೆ | ಇಂದು ಸಂಜೆಯೊಳಗೆ ಸಂಜೀವ ಪೂಜಾರಿಯನ್ನು ಬಂಧಿಸದಿದ್ದರೆ ಮುಂದೆ ಆಗುವ ಅನಾಹುತಕ್ಕೆ ಪೊಲೀಸ್ ಇಲಾಖೆ ಹೊಣೆಯ ಎಚ್ಚರಿಕೆ

ಪುತ್ತೂರು: ಭಜನೆಯಲ್ಲಿ ಪಾಲ್ಗೊಂಡ ಒಂದು ಲಕ್ಷ ಮಹಿಳಾ ಬಿಲ್ಲವರು ವ್ಯಭಿಚಾರಿಗಳಾಗಿದ್ದಾರೆ ಎಂದು ಸಂಜೀವ ಪೂಜಾರಿ ವಿರುದ್ಧ ಹಿಂದೂ ಜಾಗರಣಾ ವೇದಿಕೆ ವತಿಯಿಂದ ಡಿವೈಎಸ್‍ ಪಿ ಕಚೇರಿ ಮುಂದೆ ಬೃಹತ್ ಪ್ರತಿಭಟನೆ ನಡೆಸಿದರು. ಕಾರ್ಯಕರ್ತನೋರ್ವನ ಜೊತೆ ಮಾತನಾಡಿದ ಆಡಿಯೋ ಜಿಲ್ಲೆಯಾದ್ಯಂತ ವೈರಲ್ ಆದ ಪರಿಣಾಮ ಭಜನೆಯಲ್ಲಿ ಪಾಲ್ಗೊಂಡ ಒಂದು ಲಕ್ಷ ಬಿಲ್ಲವ ಯುವತಿಯರು ವ್ಯಭಿಚಾರಿಗಳಾಗಿದ್ದಾರೆ ಎನ್ನುವ ಮೂಲಕ ಕಿಚ್ಚು ಹಚ್ಚಿದ್ದರು. ಈ ಪರಿಣಾಮ ಕೆರಳಿರುವ ಹಿಂದೂ ಪರ ಸಂಘಟನೆಗಳು ಇಂದು ಪುತ್ತೂರಿನ ಡಿವೈಎಸ್ಪಿ ಕಚೇರಿ ಮುಂಭಾಗ ಪ್ರತಿಭಟನೆ ನಡೆಸಿ,

ಹಿಂದೂ ಹೆಣ್ಣುಮಕ್ಕಳ ಕುರಿತು ನಾಲಗೆ ಹರಿಬಿಟ್ಟ ಸಂಜೀವ ಪೂಜಾರಿ | ಹಿಂದೂ ಜಾಗರಣಾ ವೇದಿಕೆ ವತಿಯಿಂದ ಬೃಹತ್‍ ಪ್ರತಿಭಟನೆ | ಇಂದು ಸಂಜೆಯೊಳಗೆ ಸಂಜೀವ ಪೂಜಾರಿಯನ್ನು ಬಂಧಿಸದಿದ್ದರೆ ಮುಂದೆ ಆಗುವ ಅನಾಹುತಕ್ಕೆ ಪೊಲೀಸ್ ಇಲಾಖೆ ಹೊಣೆಯ ಎಚ್ಚರಿಕೆ Read More »

ವಿವೇಕಾನಂದ ವಿದ್ಯಾವರ್ಧಕ ಸಂಘದ ಕಾರ್ಯನಿರ್ವಹಣಾಧಿಕಾರಿ ಭಾಸ್ಕರ್ ನಿಧನ

ಪುತ್ತೂರು: ವಿವೇಕಾನಂದ ವಿದ್ಯಾವರ್ಧಕ ಸಂಘದ ಕಾರ್ಯನಿರ್ವಹಣಾಧಿಕಾರಿ ಭಾಸ್ಕರ್ (49) ಅಪಘಾತದಿಂದಾಗಿ ಇಂದು ಬೆಳಿಗ್ಗೆ ನಿಧನರಾಗಿದ್ದಾರೆ. ನೇರಳಕಟ್ಟೆ ಪೆರಾಜೆ ಬೀರಕೋಡಿ ನಿವಾಸಿಯಾಗಿರುವ ಭಾಸ್ಕರ್ ಅವರು ಗುರುವಾರ ಮಂಗಳೂರಿನಲ್ಲಿ ಬೈಕ್ ಚಲಾಯಿಸುತ್ತಿದ್ದ ಸಂದರ್ಭ ನ್ಯಾನೋ ಕಾರು ಡಿಕ್ಕಿ ಹೊಡೆದಿತ್ತು. ತೀವೃ ಗಾಯಗೊಂಡ ಅವರನ್ನು ಮಂಗಳೂರು ಆಸ್ಪತ್ರೆಯಲ್ಲಿ ದಾಖಲಿಸಲಾಗಿತ್ತು. ಅಲ್ಲಿ ಅವರು ಚಿಕಿತ್ಸೆಗೆ ಸ್ಪಂದಿಸದೆ ಇಂದು ಬೆಳಿಗ್ಗೆ ನಿಧನರಾದರು.

ವಿವೇಕಾನಂದ ವಿದ್ಯಾವರ್ಧಕ ಸಂಘದ ಕಾರ್ಯನಿರ್ವಹಣಾಧಿಕಾರಿ ಭಾಸ್ಕರ್ ನಿಧನ Read More »

ನಿರ್ಮಲ ಮನಸ್ಸು ಕಟ್ಟುವ ಕೆಲಸವನ್ನು ಕಲೆಗಳು ಮಾಡುತ್ತಿವೆ | ಮೂಕಾಂಬಿಕ ಕಲ್ಚರಲ್ ಅಕಾಡೆಮಿ ಅರ್ಪಿಸುವ ‘ನೃತ್ಯೋತ್ಕ್ರಮಣ-2024’ ಉದ್ಘಾಟಿಸಿ ಡಾ.ಮೋಹನ್ ಆಳ್ವ

ಪುತ್ತೂರು: ಭಾರತ ದೇಶದ ಸಾಂಸ್ಕೃತಿಕ ಪರಂಪರೆ ಹೊಂದಿರುವ ವಿವಿಧ ಪ್ರಾಕಾರದ ಕಲೆಗಳು ಸವಕಲು ನಾಣ್ಯವಾಗದೆ ಚಲಾವಣೆಯ ನಾಣ್ಯಗಳಾಗಿ ನಿರಂತರ ನಡೆಯುತ್ತಿರಬೇಕು. ಈ ಮೂಲಕ ಕಲೆಗಳನ್ನು ಉಳಿಸಿ ಬೆಳೆಸುವ ಕರ್ತವ್ಯ ನಮ್ಮೆಲ್ಲರದ್ದಾಗಿದೆ ಎಂದು ಮೂಡಬಿದಿರೆ ಆಳ್ವಾಸ್ ಶಿಕ್ಷಣ ಸಂಸ್ಥೆಯ ಅಧ್ಯಕ್ಷ ಡಾ.ಮೋಹನ ಆಳ್ವ ಹೇಳಿದರು. ಅವರು ಪುತ್ತೂರು ಮೂಕಾಂಬಿಕ ಕಲ್ಚರಲ್ ಅಕಾಡೆಮಿ ಅರ್ಪಿಸುವ ಯುಗಳ ನೃತ್ಯ- ವಿದ್ವಾನ್‍ ದೀಪಕ್ ಕುಮಾರ್ ಹಾಗೂ ವಿದುಷಿ ಪ್ರೀತಿಕಲಾ ದಂಪತಿಗಳಿಂದ ಪ್ರದರ್ಶನಗೊಂಡ ‘ನೃತ್ಯೋತ್ಕ್ರಮಣ-2024’ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಮಾತನಾಡಿದರು. ನಮ್ಮಲ್ಲಿ 8 ಬಗೆಯ

ನಿರ್ಮಲ ಮನಸ್ಸು ಕಟ್ಟುವ ಕೆಲಸವನ್ನು ಕಲೆಗಳು ಮಾಡುತ್ತಿವೆ | ಮೂಕಾಂಬಿಕ ಕಲ್ಚರಲ್ ಅಕಾಡೆಮಿ ಅರ್ಪಿಸುವ ‘ನೃತ್ಯೋತ್ಕ್ರಮಣ-2024’ ಉದ್ಘಾಟಿಸಿ ಡಾ.ಮೋಹನ್ ಆಳ್ವ Read More »

ಆಟೋದಲ್ಲಿ ಹಿಂಸಾತ್ಮಕ ರೀತಿಯಲ್ಲಿ ಗೋ  ಸಾಗಾಟ | ಬಂಧಿತ ಮೂವರು ಆರೋಪಿಗಳಿಗೆ ನ್ಯಾಯಾಂಗ ಬಂಧನ

ಪುತ್ತೂರು: ಆಟೋ ರಿಕ್ಷಾವೊಂದರಲ್ಲಿ ಹಿಂಸಾತ್ಮಕ ರೀತಿಯಲ್ಲಿ ಗೋಸಾಗಟ ಮಾಡುತ್ತಿದ್ದ ಆರೋಪದ ಮೇಲೆ ರಿಕ್ಷಾ ಚಾಲಕ ಹಾಗೂ ರಿಕ್ಷಾದಲ್ಲಿದ್ದ ಇಬ್ಬರು ಮಹಿಳೆಯರನ್ನು ಪೊಲೀಸರು ಬಂಧಿಸಿದ್ದು, ನ್ಯಾಯಾಂಗ ಬಂಧನ ವಿಧಿಸಿದೆ. ಪುತ್ತೂರಿನ ದರ್ಬೆ ಬೈಪಾಸ್‌ ರಸ್ತೆಯಲ್ಲಿ ಅ.16 ರಂದು ಈ ಘಟನೆ ನಡೆದಿದ್ದು, ಬಜರಂಗದಳದ ಕಾರ್ಯಕರ್ತರು ಗೋ ಸಾಗಿಸುತ್ತಿದ್ದ ವಾಹನವನ್ನು ತಡೆದು, ಪೊಲೀಸರಿಗೆ ಒಪ್ಪಿಸಿದ್ದರು. ಬನ್ನೂರು ನಿವಾಸಿಗಳಾದ ಆಟೋ ರಿಕ್ಷಾ ಚಾಲಕ ಇಬ್ರಾಹಿಂ, ಆಟೋದಲ್ಲಿದ್ದ ರೆಹಮತ್, ಸಫಿಯಾ ಬಂಧಿತ ಆರೋಪಿಗಳಾಗಿದ್ದು, ಪೊಲೀಸರು ನ್ಯಾಯಾಲಯಕ್ಕೆ ಒಪ್ಪಿಸಿದ್ದರು. ಇದೀಗ ನ್ಯಾಯಾಂಗ ಬಂಧನ ವಿಧಿಸಲಾಗಿದೆ.

ಆಟೋದಲ್ಲಿ ಹಿಂಸಾತ್ಮಕ ರೀತಿಯಲ್ಲಿ ಗೋ  ಸಾಗಾಟ | ಬಂಧಿತ ಮೂವರು ಆರೋಪಿಗಳಿಗೆ ನ್ಯಾಯಾಂಗ ಬಂಧನ Read More »

ಹಿಂದೂ ಸಂಘಟನೆಯ ಮುಖಂಡ ಅರ್ಜುನ್ ಮಾಡೂರಿಗೆ ಅನ್ಯಕೋಮಿನ ವ್ಯಕ್ತಿಯಿಂದ ಹಲ್ಲೆ | ಠಾಣೆಗೆ ಆಗಮಿಸಿದ ಬಿಜೆಪಿ ಹಾಗೂ ಸಂಘಪರಿವಾರದ ಪ್ರಮುಖರು

ಪುತ್ತೂರು: ಹಿಂದೂ ಸಂಘಟನೆಯ ಮುಖಂಡರೋರ್ವರಿಗೆ ಕೇರಳದ ಅನ್ಯಮತಿಯ ವ್ಯಕ್ತಿಯೋರ್ವ ಠಾಣೆಯೊಳಗಡೆಯೇ ಹಲ್ಲೆ ನಡೆಸಿದ ಘಟನೆ ಉಳ್ಳಾಲದಲ್ಲಿ ನಿನ್ನೆ ತಡರಾತ್ರಿ ನಡೆದಿದೆ. ಎಸ್.ಕೆ.ಬಿ ಟೈಗರ್ಸ್ ಪ್ರಮುಖರಾದ ಶರತ್ ರ ಕಾರು ಹಾಗೂ ಕೇರಳದ ಮಂಜೇಶ್ವರದ ವ್ಯಕ್ತಿ ಕಾರು ನಡುವೆ ಅಪಘಾತ ಸಂಭವಿಸಿ ನಂತರ ಉಳ್ಳಾಲ ಠಾಣೆಯಲ್ಲಿ ಮಾತುಕತೆ ಸಂಧರ್ಭ ಉಳ್ಳಾಲ ಬಜರಂಗದಳದ ಮುಖಂಡರೋರಾದ ಅರ್ಜುನ್ ಮಾಡೂರುರವರಿಗೆ ಕೇರಳದ ಅನ್ಯಮತಿಯ ವ್ಯಕ್ತಿಯೋರ್ವ ಠಾಣೆಯೊಳಗಡೆಯೇ ಹಲ್ಲೆ ನಡೆಸಿದ ಘಟನೆ  ತಡರಾತ್ರಿ ನಡೆದಿತ್ತು. ಘಟನೆಯ ವಿಷಯ ತಿಳಿಯುತ್ತಿದ್ದಂತೆ ಬಿಜೆಪಿ  ಜಿಲ್ಲಾಧ್ಯಕ್ಷರಾದ ಸತೀಶ್ ಕುಂಪಲ,

ಹಿಂದೂ ಸಂಘಟನೆಯ ಮುಖಂಡ ಅರ್ಜುನ್ ಮಾಡೂರಿಗೆ ಅನ್ಯಕೋಮಿನ ವ್ಯಕ್ತಿಯಿಂದ ಹಲ್ಲೆ | ಠಾಣೆಗೆ ಆಗಮಿಸಿದ ಬಿಜೆಪಿ ಹಾಗೂ ಸಂಘಪರಿವಾರದ ಪ್ರಮುಖರು Read More »

ಪವಿತ್ರ ಗ್ರಂಥ ರಾಮಾಯಣವನ್ನು ದೇಶಕ್ಕೆ ಸಮರ್ಪಿಸಿದ ಮಹರ್ಷಿ ವಾಲ್ಮೀಕಿ ಜಯಂತಿ ಪ್ರಸ್ತುತ ಅರ್ಥಪೂರ್ಣ : ಪುರಂದರ ಹೆಗ್ಡೆ | ರಾಷ್ಟ್ರೀಯ ಹಬ್ಬಗಳ ಆಚರಣಾ ಸಮಿತಿಯಿಂದ ಮಹರ್ಷಿ ವಾಲ್ಮೀಕಿ ಜಯಂತಿ

ಪುತ್ತೂರು: ಸುಮಾರು 5 ಸಾವಿರ ವರ್ಷಗಳ ಇತಿಹಾಸ ಇರುವ, ಜನಸಮುದಾಯಕ್ಕೆ ಭಕ್ತಿ, ಭಾವನೆಗಳನ್ನು ನೀಡಿರುವ ರಾಮಾಯಣವನ್ನು ದೇಶಕ್ಕೆ ಸಮರ್ಪಣೆ ಮಾಡಿರುವ ಮಹಾನ್ ವ್ಯಕ್ತಿ ವಾಲ್ಮೀಕಿ ಮಹರ್ಷಿಗಳ ಜಯಂತಿ ಆಚರಣೆ ಪ್ರಸ್ತುತ ಅರ್ಥಪೂರ್ಣ ಎಂದು ಪುತ್ತೂರು ತಹಸೀಲ್ದಾರ್ ಪುರಂದರ ಹೆಗ್ಡೆ ಹೇಳಿದರು. ಅವರು ಪುತ್ತೂರು ರಾಷ್ಟ್ರೀಯ ಹಬ್ಬಗಳ ಆಚರಣಾ ಸಮಿತಿ ವತಿಯಿಂದ ಆಡಳಿತ ಸೌಧದಲ್ಲಿ ನಡೆದ ವಾಲ್ಮೀಕಿ ಮಹರ್ಷಿ ಜಯಂತಿ ಉದ್ಘಾಟಿಸಿ, ಸಮಾರಂಭದ ಅಧ್ಯಕ್ಷತೆ ವಹಿಸಿ ಮಾತನಾಡಿದರು. ಹೊಡಿ-ಬಡಿ ವ್ಯವಸ್ಥೆಯ ಮೂಲಕ ಜನರನ್ನು ದೋಚುವ, ಬೇಡ ಜನಾಂಗದಲ್ಲಿ ಹುಟ್ಟಿದ

ಪವಿತ್ರ ಗ್ರಂಥ ರಾಮಾಯಣವನ್ನು ದೇಶಕ್ಕೆ ಸಮರ್ಪಿಸಿದ ಮಹರ್ಷಿ ವಾಲ್ಮೀಕಿ ಜಯಂತಿ ಪ್ರಸ್ತುತ ಅರ್ಥಪೂರ್ಣ : ಪುರಂದರ ಹೆಗ್ಡೆ | ರಾಷ್ಟ್ರೀಯ ಹಬ್ಬಗಳ ಆಚರಣಾ ಸಮಿತಿಯಿಂದ ಮಹರ್ಷಿ ವಾಲ್ಮೀಕಿ ಜಯಂತಿ Read More »

error: Content is protected !!
Scroll to Top