ಪುತ್ತೂರು

ಸ್ಕೂಟರ್–ಬೈಕ್ ಅಪಘಾತ : ಮೂರು ಮಂದಿಗೆ ಗಾಯ

ಪುತ್ತೂರು: ಬೈಕ್ ಹಾಗೂ ಸ್ಕೂಟರ್ ನಡುವೆ ಸಂಭವಿಸಿದ ಅಪಘಾತದಲ್ಲಿ ಮೂವರು ಗಾಯಗೊಂಡ ಘಟನೆ ಪುತ್ತೂರು – ಉಪ್ಪಿನಂಗಡಿ ರಸ್ತೆಯ ಕೇಪುಳು ಜಂಕ್ಷನ್ ನಲ್ಲಿ ನಡೆದಿದೆ. ಪುತ್ತೂರಿನಿಂದ ಉಪ್ಪಿನಂಗಡಿಗೆ ತೆರಳುತ್ತಿದ್ದ ಬೈಕ್ ಮತ್ತು ಕೇವುಳು ರಸ್ತೆಯಿಂದ ಮುಖ್ಯ ರಸ್ತೆಗೆ ಬರುತ್ತಿದ್ದ ಸ್ಕೂಟರ್ ನಡುವೆ ಅಪಘಾತ ಸಂಭವಿಸಿದೆ. ಸ್ಕೂಟರ್ ನಲ್ಲಿದ್ದ ಸವಾರ ಮತ್ತು ಹಿಂಬದಿ ಸವಾರ ಹಾಗು ಬೈಕ್ ಸವಾರನಿಗೆ ಗಾಯವಾಗಿದೆ.

ಸ್ಕೂಟರ್–ಬೈಕ್ ಅಪಘಾತ : ಮೂರು ಮಂದಿಗೆ ಗಾಯ Read More »

ನಾಳೆ (ಅ.28) : ಸಾಂದೀಪನಿ ವಿದ್ಯಾಸಂಸ್ಥೆಯಲ್ಲಿ ಪುತ್ತೂರು ಶೈಕ್ಷಣಿಕ ವಲಯದ ತಾಲೂಕು ಮಟ್ಟದ ಕ್ರೀಡಾಕೂಟ

ಪುತ್ತೂರು: 2024-25ನೇ ಸಾಲಿನ ಪುತ್ತೂರು ಶೈಕ್ಷಣಿಕ ವಲಯದ ತಾಲೂಕು ಮಟ್ಟದ ಕ್ರೀಡಾಕೂಟ ಅ.28 ರಂದು ಸಾಂದೀಪನಿ ಕ್ರೀಡಾಂಗಣದಲ್ಲಿ ನಡೆಯಲಿದೆ. ಪ್ರಾಥಮಿಕ ಹಾಗೂ ಪ್ರೌಢಶಾಲಾ ಬಾಲಕ-ಬಾಲಕಿಯರ ಕ್ರೀಡಾಕೂಟ ಇದಾಗಿದೆ. ದ.ಕ.ಜಿಲ್ಲಾ ಪಂಚಾಯತ್, ಶಾಲಾ ಶಿಕ್ಷಣ ಇಲಾಖೆ, ಪುತ್ತೂರು ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಚೇರಿ ಹಾಗೂ ನರಿಮೊಗರು ಸಾಂದೀಪನಿ ಗ್ರಾಮೀಣ ಆಂಗ್ಲ ಮಾಧ್ಯಮ ವಿದ್ಯಾಸಂಸ್ಥೆಗಳ ಸಂಯುಕ್ತ ಆಶ್ರಯದಲ್ಲಿ ಕ್ರೀಡಾಕೂಟ ನಡೆಯಲಿದೆ ಎಂದು ಪ್ರಕಟಣೆ ತಿಳಿಸಿದೆ.

ನಾಳೆ (ಅ.28) : ಸಾಂದೀಪನಿ ವಿದ್ಯಾಸಂಸ್ಥೆಯಲ್ಲಿ ಪುತ್ತೂರು ಶೈಕ್ಷಣಿಕ ವಲಯದ ತಾಲೂಕು ಮಟ್ಟದ ಕ್ರೀಡಾಕೂಟ Read More »

ವಿವೇಕಾನಂದ ಕಾಲೇಜಿನಲ್ಲಿ ಫುಡ್‌ ಕಾರ್ನಿವಲ್-2024 ಉದ್ಘಾಟನೆ

ಪುತ್ತೂರು: ಕಾಲೇಜು ದಿನಗಳಲ್ಲೇ ವಿದ್ಯಾರ್ಥಿಗಳಲ್ಲಿ ಉದ್ಯಮಶೀಲತೆ ಬೆಳೆಸುವುದು ಅಗತ್ಯ. ಉದ್ಯಮ ಯಾರು ಬೇಕಾದರೂ ಆರಂಭಿಸಬಹುದು. ಅದರಲ್ಲಿ ಲಾಭ ಗಳಿಸಿದಾಗ ಮಾತ್ರವೇ ಯಶಸ್ವಿ ಉದ್ಯಮಿ ಎನಿಸಿಕೊಳ್ಳಲು ಸಾಧ್ಯ. ಕಾಲೇಜು ದಿನಗಳಲ್ಲೇ ಹಮ್ಮಿಕೊಳ್ಳುವ ಇಂತಹ ಫುಡ್ ಕಾರ್ನಿವಲ್‌ ಗಳಿಂದ ವ್ಯವಹಾರಜ್ಞಾನ ಅಭಿವೃದ್ಧಿಯಾಗುತ್ತದೆ. ಗ್ರಾಹಕರನ್ನು ಸೆಳೆಯುವ ಕೌಶಲ್ಯವೂ ಕರಗತವಾಗುತ್ತದೆ ಎಂದು ವಿವೇಕಾನಂದ ಕಾಲೇಜಿನ ಹಿರಿಯ ವಿದ್ಯಾರ್ಥಿ, ತೇಜಸ್ ಕೆ. ಹೇಳಿದರು. ಪುತ್ತೂರಿನ ವಿವೇಕಾನಂದ ಕಲಾ, ವಿಜ್ಞಾನ ಹಾಗೂ ವಾಣಿಜ್ಯ(ಸ್ವಾಯತ್ತ) ಕಾಲೇಜಿನ ವ್ಯವಹಾರ ಆಡಳಿತ ನಿರ್ವಹಣಾ ಸಂಘ ಮತ್ತು ಐಕ್ಯೂಎಸಿ ಘಟಕದ ಜಂಟಿ

ವಿವೇಕಾನಂದ ಕಾಲೇಜಿನಲ್ಲಿ ಫುಡ್‌ ಕಾರ್ನಿವಲ್-2024 ಉದ್ಘಾಟನೆ Read More »

ನ.4 : ದರ್ಬೆಯಲ್ಲಿ ‘ದೊನ್ನೆ ಬಿರಿಯಾನಿ’ ರೆಸ್ಟೋರೆಂಟ್ ಶುಭಾರಂಭ | ಪುತ್ತೂರಿನಲ್ಲೂ ಘಮಘಮಿಸಲಿದೆ ಬೆಂಗಳೂರಿನ ದೊನ್ನೆ ಬಿರಿಯಾನಿ

ಪುತ್ತೂರು: ಬೆಂಗಳೂರಿನಂತಹ ಮಹಾನಗರಗಳಲ್ಲಿ ಸಿಗುವ ಘಮಘಮಿಸುವ ದೊನ್ನೆ ಬಿರಿಯಾನಿ ಇನ್ನು ಪುತ್ತೂರಿನಲ್ಲೂ ಲಭಿಸಲಿದೆ. ದರ್ಬೆಯ ರಿಲಯನ್ಸ್ ಡಿಜಿಟಲ್ ಪಕ್ಕದಲ್ಲಿ ‘ದೊನ್ನೆ ಬಿರಿಯಾನಿ’ ರೆಸ್ಟೋರೆಂಟ್ ನ.4 ರಂದು ಶುಭಾರಂಭಗೊಳ್ಳಲಿದೆ. ಈ ಮೂಲಕ ಬೆಂಗಳೂರಿನ ದೊನ್ನೆ ಬಿರಿಯಾನಿ ಇನ್ನು ಪುತ್ತೂರಿನಲ್ಲೂ ಮಾಂಸಾಹಾರಿ ಪ್ರಿಯರನ್ನು ಆಕರ್ಷಿಸಲಿದೆ. ಈ ರೆಸ್ಟೋರೆಂಟ್‍ ನಲ್ಲಿ ಕರಾವಳಿ ಶೈಲಿಯ ಬಾಳೆಎಲೆ ಮೀನೂಟ, ಮೀನು ಖಾದಗಳು, ಚಿಕನ್ ಖಾದ್ಯಗಳು, ಶವರ್ಮಾ, ಗ್ರಿಲ್, ಟಿಕ್ಕಾ ಹಾಗೂ ವಿವಿಧ ನಾನ್‌ ವೆಜ್ ಖಾದ್ಯಗಳು, ಜ್ಯೂಸ್‌ಗಳು ಇಲ್ಲಿ ಲಭ್ಯವಿದೆ ಎಂದು ಮಾಲಕರು ತಿಳಿಸಿದ್ದಾರೆ.

ನ.4 : ದರ್ಬೆಯಲ್ಲಿ ‘ದೊನ್ನೆ ಬಿರಿಯಾನಿ’ ರೆಸ್ಟೋರೆಂಟ್ ಶುಭಾರಂಭ | ಪುತ್ತೂರಿನಲ್ಲೂ ಘಮಘಮಿಸಲಿದೆ ಬೆಂಗಳೂರಿನ ದೊನ್ನೆ ಬಿರಿಯಾನಿ Read More »

ಜನ ಸೇವೆ ದೇವರ ಸೇವೆ ಎಂದು ತಿಳಿದು ಕೆಲಸ ಕಾರ್ಯ ಮಾಡುತ್ತೇನೆ : ಕಿಶೋರ್ ಕುಮಾರ್ ಪುತ್ತೂರು | ಪುತ್ತೂರಿನಲ್ಲಿ ವಿಧಾನ ಪರಿಷತ್ ಸದಸ್ಯ ಕಿಶೋರ್ ಕುಮಾರ್ ರಿಗೆ ಸಾರ್ವಜನಿಕ ಅಭಿನಂದನಾ ಸಮಾರಂಭ

ಪುತ್ತೂರು: ಹಿಂದುತ್ವದ ಆಧಾರದಲ್ಲಿ ಪ್ರತಿಯೊಂದು ಹೆಜ್ಜೆ ಹೆಜ್ಜೆಗೂ ಸತ್ಯ, ಧರ್ಮ, ನಿಷ್ಠೆಯಿಂದ ಸ್ಥಳೀಯಾಡಳಿತ ಸಂಸ್ಥೆಗಳ ಸಮಸ್ಯೆಗಳನ್ನು ಪರಿಹರಿಸುವ ನಿಟ್ಟಿನಲ್ಲಿ ಕೆಲಸ ಕಾರ್ಯಗಳನ್ನು ಮಾಡುತ್ತೇನೆ. ಹೀಗೆಂದು ಹೇಳಿದರು ವಿಧಾನಪರಿಷತ್ ಸದಸ್ಯ ಕಿಶೋರ್ ಕುಮಾರ್ ಪುತ್ತೂರು. ಪುತ್ತೂರು ಬಿಜೆಪಿ ವತಿಯಿಂದ ಜೈನ ಭವನದಲ್ಲಿ ಶನಿವಾರ ನಡೆದ ಸಾರ್ವಜನಿಕ ಅಭಿನಂದನಾ ಸಮಾರಂಭದಲ್ಲಿ ಅವರು ಮಾತನಾಡಿದರು. ಇಷ್ಟು ವರ್ಷಗಳ ಕಾಲ ಬಿಜೆಪಿಗಾಗಿ, ಹಿಂದುತ್ವಕ್ಕಾಗಿ ಸಮಯದ ನೀಡಿದ ನನಗೆ ಈ ಜವಾಬ್ದಾರಿ ಸಿಕ್ಕಿದೆ. ಈ ನಿಟ್ಟಿನಲ್ಲಿ ವಿಜಯೋತ್ಸವ ಸಂದರ್ಭ ನನಗೆ ಹಾಕಿದ ಹೂವಿನ ಹಾರದ

ಜನ ಸೇವೆ ದೇವರ ಸೇವೆ ಎಂದು ತಿಳಿದು ಕೆಲಸ ಕಾರ್ಯ ಮಾಡುತ್ತೇನೆ : ಕಿಶೋರ್ ಕುಮಾರ್ ಪುತ್ತೂರು | ಪುತ್ತೂರಿನಲ್ಲಿ ವಿಧಾನ ಪರಿಷತ್ ಸದಸ್ಯ ಕಿಶೋರ್ ಕುಮಾರ್ ರಿಗೆ ಸಾರ್ವಜನಿಕ ಅಭಿನಂದನಾ ಸಮಾರಂಭ Read More »

ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಬಿ. ಸಿ ಟ್ರಸ್ಟ್ ನಿಂದ ಪುತ್ತೂರು-ಉಪ್ಪಿನಂಗಡಿ ವಲಯ ತಂಡಗಳ ಸದಸ್ಯರ ತರಬೇತಿ ಕಾರ್ಯಗಾರ

ಉಪ್ಪಿನಂಗಡಿ: ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಬಿ. ಸಿ ಟ್ರಸ್ಟ್  ಪುತ್ತೂರು-ಉಪ್ಪಿನಂಗಡಿ ವಲಯ ತಂಡಗಳ ಸಕ್ರಿಯ ಸದಸ್ಯರ ತರಬೇತಿ ಕಾರ್ಯಗಾರ ಉಪ್ಪಿನಂಗಡಿ ಗಾಣಿಗರ ಸಭಾಭವನದಲ್ಲಿ ಶನಿವಾರ ನಡೆಯಿತು. ಪ್ರಗತಿ ಬಂದು ಒಕ್ಕೂಟದ ವಲಯ್ಯಾಧ್ಯಕ್ಷ ನಾರಾಯಣ ಕೆಳಗಿನಮನೆ ಕಾರ್ಯಾಗಾರ ಉದ್ಘಾಟಿಸಿ ಶುಭ ಹಾರೈಸಿದರು. ಭಜನಾ ಪರಿಷತ್ ತಾಲೂಕು ವೇದಿಕೆ ಅಧ್ಯಕ್ಷ ಲೋಕೇಶ್ ಬೆತ್ತೋಡಿ ಮತ್ತು 10 ಒಕ್ಕೂಟದ ಅಧ್ಯಕ್ಷರುಗಳು ಉಪಸ್ಥಿತರಿದ್ದರು. ಜಿಲ್ಲಾ ನಿರ್ದೇಶಕ ಪ್ರವೀಣ್ ಕುಮಾರ್ ಪ್ರಾಸ್ತಾವಿಕವಾಗಿ ಮಾತನಾಡಿ, ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಬೆಳೆದು ಬಂದ ರೀತಿ,

ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಬಿ. ಸಿ ಟ್ರಸ್ಟ್ ನಿಂದ ಪುತ್ತೂರು-ಉಪ್ಪಿನಂಗಡಿ ವಲಯ ತಂಡಗಳ ಸದಸ್ಯರ ತರಬೇತಿ ಕಾರ್ಯಗಾರ Read More »

ಕಿಶೋರ್ ಕುಮಾರ್ ಅವರಿಗೆ ಸಾರ್ವಜನಿಕ ಅಭಿನಂದನೆ | ತೆರೆದ ವಾಹನದಲ್ಲಿ ವಿಜಯೋತ್ಸವ

ಪುತ್ತೂರು: ವಿಧಾನಪರಿಷತ್ ಉಪಚುನಾವಣೆಯಲ್ಲಿ ಅಭೂತಪೂರ್ವ ಗೆಲುವು ಸಾಧಿಸಿದ ಕಿಶೋರ್‍ ಕುಮಾರ್ ಅವರಿಗೆ ಸಾರ್ವಜನಿಕ ಅಭಿನಂದನೆ ಹಿನ್ನಲೆಯಲ್ಲಿ ವಿಜಯೋತ್ಸವ ಮೆರವಣಿಗೆ ಪುತ್ತೂರಿನಲ್ಲಿ ಶನಿವಾರ ನಡೆಯಿತು. ದರ್ಬೆ ವೃತ್ತದಿಂದ ತೆರೆದ ವಾಹನದಲ್ಲಿ ಕಿಶೋರ್ ಕುಮಾರ್ ಪುತ್ತೂರು ಅವರನ್ನು ಕರೆದೊಯ್ಯುವ ಮೂಲಕ ವಾಹನ ಮೆರವಣಿಗೆ ಮುಖ್ಯ ರಸ್ತೆಯಿಂದ ಸಾಗಿ ಬಳಿಕ ಶ್ರೀ ಮಹಾಲಿಂಗೇಶ್ವರ ದೇವಸ್ಥಾನಕ್ಕೆ ತೆರಳಿತು. ಈ ಸಂದರ್ಭದಲ್ಲಿ ಮಾಜಿ ವಿಧಾನ ಪರಿಷತ್ ಸದಸ್ಯ ಪ್ರತಾಪ ಸಿಂಹ ನಾಯಕ್, ದ.ಕ.ಜಿಲ್ಲಾ ಬಿಜೆಪಿ ಅಧ್ಯಕ್ಷ ಸತೀಶ್‍ ಕುಂಪಲ ಸೇರಿದಂತೆ ಬಿಜೆಪಿ ಪ್ರಮುಖರು ಪಾಲ್ಗೊಂಡಿದ್ದರು.

ಕಿಶೋರ್ ಕುಮಾರ್ ಅವರಿಗೆ ಸಾರ್ವಜನಿಕ ಅಭಿನಂದನೆ | ತೆರೆದ ವಾಹನದಲ್ಲಿ ವಿಜಯೋತ್ಸವ Read More »

ಮಾಸ್ಟರ್ಸ್ ಸ್ವಿಮ್ಮಿಂಗ್ ಚಾಂಪಿಯನ್ ಶಿಪ್ : ಧನುಷ್ ರೈ ರಾಷ್ಟ್ರಮಟ್ಟಕ್ಕೆ ಆಯ್ಕೆ          

ಪುತ್ತೂರು: 25ನೇ ರಾಜ್ಯಮಟ್ಟದ ಮಾಸ್ಟರ್ಸ್ ಸ್ವಿಮ್ಮಿಂಗ್ ಚಾಂಪಿಯನ್ ಶಿಪ್ -2024 ವತಿಯಿಂದ ಬೆಂಗಳೂರಿನಲ್ಲಿ ನಡೆದ ಈಜು ಸ್ಪರ್ಧೆಯಲ್ಲಿ ಧನುಷ್ ಎನ್. ರೈ ಒಂದು ಬೆಳ್ಳಿ ಮತ್ತು ಎರಡು ಕಂಚಿನ ಪದಕಗಳನ್ನು ಗೆದ್ದು ರಾಷ್ಟ್ರಮಟ್ಟದ ಸ್ಪರ್ಧೆಗೆ ಆಯ್ಕೆಯಾಗಿದ್ದಾರೆ. ದಕ್ಷಿಣ ಕನ್ನಡ ಜಿಲ್ಲೆಯಿಂದ ಧನುಷ್ ಭಾಗವಹಿಸಿ 50 ಮೀ. ಬ್ರೆಸ್ಟ್ ಸ್ಟ್ರೋಕ್ , 100 ಮೀ. ಬ್ರೆಸ್ಟ್ ಸ್ಟ್ರೋಕ್  ಹಾಗೂ 4× 50 ಮೀ ಫ್ರೀ ಸ್ಟೈಲ್ ರಿಲೇ ವಿಭಾಗದಲ್ಲಿ ಭಾಗವಹಿಸಿ ಒಂದು ಬೆಳ್ಳಿ ಹಾಗೂ ಎರಡು ಕಂಚಿನ ಪದಕಗಳನ್ನು

ಮಾಸ್ಟರ್ಸ್ ಸ್ವಿಮ್ಮಿಂಗ್ ಚಾಂಪಿಯನ್ ಶಿಪ್ : ಧನುಷ್ ರೈ ರಾಷ್ಟ್ರಮಟ್ಟಕ್ಕೆ ಆಯ್ಕೆ           Read More »

ನಾಳೆ (ಅ.26) : ವಿಧಾನ ಪರಿಷತ್ ನಲ್ಲಿ ಗೆಲುವು ಸಾಧಿಸಿದ ಕಿಶೋರ್ ಕುಮಾರ್ ರಿಗೆ ಪುತ್ತೂರಿನಲ್ಲಿ ಸಾರ್ವಜನಿಕ ಅಭಿನಂದನೆ

ಪುತ್ತೂರು : ವಿಧಾನ ಪರಿಷತ್ ಚುನಾವಣೆಯಲ್ಲಿ ಅಭೂತಪೂರ್ವ ಗೆಲುವು ಸಾಧಿಸಿದ ಕಿಶೋರ್ ಕುಮಾರ್ ಪುತ್ತೂರು ಅವರಿಗೆ ಸಾರ್ವಜನಿಕ ಅಭಿನಂದನಾ ಸಮಾರಂಭ ಅ.26 ಶನಿವಾರ ಪುತ್ತೂರು ಜೈನಭವನದಲ್ಲಿ ನಡೆಯಲಿದೆ. ಕಿಶೋರ್ ಕುಮಾರ್ ಪುತ್ತೂರು ಅವರನ್ನು ಕಬಕದಲ್ಲಿ ಸ್ವಾಗತಿಸಿದ ಬಳಿಕ ಪುತ್ತೂರು ಶ್ರೀ ಮಹಾಲಿಂಗೇಶ್ವರ ದೇವಸ್ಥಾನಕ್ಕೆ ಆಗಮಿಸಲಿದ್ದು, ಬಳಿಕ ಸಾರ್ವಜನಿಕ ಅಭಿನಂದನಾ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲಿದ್ದಾರೆ. ಸಮಾರಂಭದಲ್ಲಿ ಸಂಸದರು, ಜಿಲ್ಲೆಯ, ಮಂಡಲದ ಪ್ರಮುಖರು ಪಾಲ್ಗೊಳ್ಳಲಿದ್ದಾರೆ ಎಂದು ಬಿಜೆಪಿ ಪ್ರಕಟಣೆ ತಿಳಿಸಿದೆ.

ನಾಳೆ (ಅ.26) : ವಿಧಾನ ಪರಿಷತ್ ನಲ್ಲಿ ಗೆಲುವು ಸಾಧಿಸಿದ ಕಿಶೋರ್ ಕುಮಾರ್ ರಿಗೆ ಪುತ್ತೂರಿನಲ್ಲಿ ಸಾರ್ವಜನಿಕ ಅಭಿನಂದನೆ Read More »

ವಲಯ ಮಟ್ಟದ ಕ್ರೀಡಾಕೂಟ : ಸವಣೂರು ವಿದ್ಯಾರಶ್ಮಿ ವಿದ್ಯಾಲಯದ ವಿದ್ಯಾರ್ಥಿಗಳು ತಾಲೂಕು ಮಟ್ಟಕ್ಕೆ       

ಸವಣೂರು: ಪಟ್ಟೆ ವಿದ್ಯಾಸ೦ಸ್ಥೆಯಲ್ಲಿ ನಡೆದ ಸವಣೂರು ವಲಯ ಮಟ್ಟದ ಕ್ರೀಡಾಕೂಟದಲ್ಲಿ ವಿದ್ಯಾರಶ್ಮಿ ವಿದ್ಯಾಲಯದ ವಿದ್ಯಾರ್ಥಿ ಮೂವರು  ತಾಲೂಕು ಮಟ್ಟದ ಕ್ರೀಡಾಕೂಟಕ್ಕೆ ಆಯ್ಕೆಯಾಗಿದ್ದಾರೆ. ವಿದ್ಯಾರ್ಥಿಗಳಾದ 7ನೇ ತರಗತಿಯ ಮಿಲನ್ ಜಿ. 100 ಮೀ. ಮತ್ತು 200 ಮೀ. ಓಟದಲ್ಲಿ ಪ್ರಥಮ ಸ್ಥಾನ, ಗು೦ಡೆಸೆತದಲ್ಲಿ ತೃತೀಯ, 8ನೇ ತರಗತಿಯ ಹೃತೇಶ್ ಬಿ.ಎಸ್. 200 ಮೀ ಓಟದಲ್ಲಿ ದ್ವಿತೀಯ, ಮತ್ತು 100 ಮೀ. ಓಟದಲ್ಲಿ ತೃತೀಯ,  10ನೇ ತರಗತಿಯ ಮಹಮ್ಮದ್ ಶಮ್ಮಾಸ್ 400 ಮೀ ಓಟದಲ್ಲಿ ತೃತೀಯ ಸ್ಥಾನ ಗಳಿಸಿ ತಾಲೂಕು

ವಲಯ ಮಟ್ಟದ ಕ್ರೀಡಾಕೂಟ : ಸವಣೂರು ವಿದ್ಯಾರಶ್ಮಿ ವಿದ್ಯಾಲಯದ ವಿದ್ಯಾರ್ಥಿಗಳು ತಾಲೂಕು ಮಟ್ಟಕ್ಕೆ        Read More »

error: Content is protected !!
Scroll to Top