ಪುತ್ತೂರು

ಬೀಡಿ ಕಳ್ಳತನ ಆರೋಪಿ ಉಳ್ಳಾಲದಲ್ಲಿ ಬಂಧನ | ಎರಡು ವರ್ಷಗಳಿಂದ ತಲೆ ಮರೆಸಿಕೊಂಡಿದ್ದ ಆರೋಪಿ

ಪುತ್ತೂರು: ಬೀಡಿ ಕಳ್ಳತನ ಆರೋಪದಲ್ಲಿ ಎರಡು ವರ್ಷಗಳಿಂದ ನ್ಯಾಯಾಲಯಕ್ಕೆ ಹಾಜರಾಗದೇ ತಲೆ ಮರೆಸಿಕೊಂಡಿದ್ದ ಆರೋಪಿಯನ್ನು ಪುತ್ತೂರು ನಗರ ಠಾಣಾ ಪೊಲೀಸರು ಉಳ್ಳಾಲದಲ್ಲಿ ಬಂಧಿಸಿದ್ದಾರೆ. ಆರೋಪಿಯು ಎರಡು ವರ್ಷಗಳ ಹಿಂದೆ ಪುತ್ತೂರಿನ ಬೀಡಿ ಬ್ರಾಂಚೊಂದರಿಂದ ಸಾವಿರಾರು ರೂಪಾಯಿ ಮೌಲ್ಯದ ಬೀಡಿಗಳನ್ನು ಕದ್ದು ಸಿಕ್ಕಿ ಹಾಕಿಕೊಂಡಿದ್ದ. ಬಂಧಿತ ಆರೋಪಿ ಕಡಬ ತಾಲೂಕಿನ ಕುದ್ಮಾರು ಗ್ರಾಮದ ಏರ್ಕಮೆ ನಿವಾಸಿ ಮಹಮ್ಮದ್  ಕುಂಞಿ ಎಂದು ಗುರುತಿಸಲಾಗಿದೆ. 2022ರಲ್ಲಿ ಕೂರ್ನಡ್ಕದ ಬೀಡಿ ಬ್ರಾಂಚೊಂದರಲ್ಲಿ ಸುಮಾರು 22 ಸಾವಿರ ರೂಪಾಯಿ ಮೌಲ್ಯದ ಬೀಡಿಗಳನ್ನು ಕಳವು ಮಾಡಿದ […]

ಬೀಡಿ ಕಳ್ಳತನ ಆರೋಪಿ ಉಳ್ಳಾಲದಲ್ಲಿ ಬಂಧನ | ಎರಡು ವರ್ಷಗಳಿಂದ ತಲೆ ಮರೆಸಿಕೊಂಡಿದ್ದ ಆರೋಪಿ Read More »

ಪಾಣಾಜೆ ಪುತ್ತಿಲ ಪರಿವಾರ ಸೇವಾ ಟ್ರಸ್ಟ್ ನಿಂದ ಶ್ರಮದಾನ

ಪುತ್ತೂರು: ಪುತ್ತಿಲ ಪರಿವಾರ ಸೇವಾ ಟ್ರಸ್ಟ್ ಪಾಣಾಜೆ , ತುಳುನಾಡು ಫ್ರೆಂಡ್ಸ್ ತೂಂಬಡ್ಕ ಓಂ ಫ್ರೆಂಡ್ಸ್  ಭರಣ್ಯ ಮತ್ತು ಗ್ರಾಮಸ್ಥರ ನೆರವಿನಿಂದ ಶ್ರಮದಾನ ನಡೆಯಿತು. ರಣಮಂಗಳ ದೇವಸ್ಥಾನ ಮತ್ತು ಪಾಣಾಜೆ ಗ್ರಾಮದ ಮೂರು ಮತ್ತು ನಾಲ್ಕನೇ ವಾರ್ಡಿನ ಪ್ರಧಾನ ಸಂಪರ್ಕ ರಸ್ತೆಯ ಗುಂಡಿಗಳನ್ನು ಶ್ರಮದಾನದ ಮೂಲಕ ಮುಚ್ಚಿ ಸುಗಮ ಸಂಚಾರಕ್ಕೆ ವ್ಯವಸ್ಥೆ ಕಲ್ಪಿಸಲಾಯಿತು. ಈ ಸಂದರ್ಭದಲ್ಲಿ ಟ್ರಸ್ಟ್ ನ ಅಧ್ಯಕ್ಷ ರಮೇಶ್ ಭಟ್ ಬೊಲ್ಲುಕಲ್ಲು, ಪ್ರವೀಣ್ ರೈ ಕೋಟೆ ಉಪಹಾರ ಮತ್ತು ತಂಪು ಪಾನೀಯದ ವ್ಯವಸ್ಥೆಯನ್ನು ಮಾಡಿದರು

ಪಾಣಾಜೆ ಪುತ್ತಿಲ ಪರಿವಾರ ಸೇವಾ ಟ್ರಸ್ಟ್ ನಿಂದ ಶ್ರಮದಾನ Read More »

ಪೇಜಾವರ ಶ್ರೀಗಳನ್ನು ಪುಡಿ ರಾಜಕಾರಣಿ ಎಂದ ಕಾಂಗ್ರೇಸ್‍ ಮುಖಂಡ ಬಿ.ಕೆ ಹರಿಪ್ರಸಾದ್ ಹೇಳಿಕೆ ಖಂಡನೀಯ : ಅರುಣ್ ಕುಮಾರ್ ಪುತ್ತಿಲ

ಪುತ್ತೂರು: ಕಾಂಗ್ರೇಸ್‍  ಮುಖಂಡ ಬಿ.ಕೆ ಹರಿಪ್ರಸಾದ್  ಪೇಜಾವರ ಶ್ರೀಗಳನ್ನು ಪುಡಿ ರಾಜಕಾರಣಿ ಎಂಬ ಹೇಳಿಕೆಯನ್ನು ಹಿಂದೂ ಸಮಾಜ ತೀವ್ರ ಖಂಡಿಸುತ್ತದೆ. ಈ ರೀತಿಯ ಹೇಳಿಕೆಗಳನ್ನು ನೀಡಿ ಸಂಪ್ರದಾಯ ಮತ್ತು ನಂಬಿಕೆಗಳಿಗೆ ದ್ರೋಹ ಎಸಗುತ್ತಿರುವ ಬಿ.ಕೆ ಹರಿಪ್ರಸಾದ್ ನಾಲಗೆಯನ್ನು ಹಿಡಿತದಲ್ಲಿಟ್ಟುಕೊಂಡು ಮಾತನಾಡುವುದು ಸೂಕ್ತ. ಪೂರ್ವಾಗ್ರಹ ಪೀಡಿತರಾಗಿ ಈ ರೀತಿಯಾಗಿ ಮಾತನಾಡಿ  ಸಮಾಜದಲ್ಲಿ ಶಾಂತಿ ಕೆದಡುವ ಪ್ರಯತ್ನವಿದು. ಹಿಂದೂ ಸಮಾಜಕ್ಕೆ ಪ್ರಾತಸ್ಮರಣಿಯರಾಗಿರುವ ಶ್ರೀಗಳಿಗೆ ಈ ರೀತಿಯ ಹೇಳಿಕೆ ನೀಡಿರುವುದು ಸಮಸ್ತ ಹಿಂದೂ  ಸಮಾಜಕ್ಕೆ  ಮಾಡಿರುವ ಅವಮಾನ. ಬಿ.ಕೆ ಹರಿಪ್ರಸಾದ್ ಸ್ವಾಮಿಜೀಯವರಲ್ಲಿ ಕ್ಷಮೆಯಾಚಿಸಬೇಕು

ಪೇಜಾವರ ಶ್ರೀಗಳನ್ನು ಪುಡಿ ರಾಜಕಾರಣಿ ಎಂದ ಕಾಂಗ್ರೇಸ್‍ ಮುಖಂಡ ಬಿ.ಕೆ ಹರಿಪ್ರಸಾದ್ ಹೇಳಿಕೆ ಖಂಡನೀಯ : ಅರುಣ್ ಕುಮಾರ್ ಪುತ್ತಿಲ Read More »

ಅಕ್ಷಯ ಕಾಲೇಜಿನಲ್ಲಿ “ಡೆಲಿಸಿಯಾ” ಹಾಸ್ಪಿಟಲಿಟಿ ಕ್ಲಬ್ ಆತಿಥ್ಯ ಉದ್ಯಮದ ಕುರಿತು ಸಂವಾದ

ಪುತ್ತೂರು: ಪುತ್ತೂರು : ಅಕ್ಷಯ ಎಜುಕೇಶನ್ ಚಾರಿಟೇಬಲ್ ಟ್ರಸ್ಟ್ ಅಧೀನದಲ್ಲಿ  ಕಾರ್ಯಾಚರಿಸುತ್ತಿರುವ ಅಕ್ಷಯ ಕಾಲೇಜಿನಲ್ಲಿ ಬಿ.ಎಚ್.ಎಸ್. ವಿಭಾಗ ಮತ್ತು ಆಂತರಿಕ ಗುಣಮಟ್ಟದ ಭರವಸೆ ಕೋಶ ಸಹಭಾಗಿತ್ವದಲ್ಲಿ   “ಡೆಲಿಸಿಯಾ” ಹಾಸ್ಪಿಟಲಿಟಿ ಕ್ಲಬ್  ಆತಿಥ್ಯ ಉದ್ಯಮದ  ಕುರಿತು  ಸಂವಾದ ಕಾರ್ಯಕ್ರಮ ನಡೆಯಿತು. ಸಂಪನ್ಮೂಲ ವ್ಯಕ್ತಿಯಾಗಿ ಪೆಸ್ಟ್ರಿ ಶೇಫ್ Ncl ಕ್ರೂಸ್ ಲೈನ್ ನ ಯತೀರಾಜ್ ಪೂಜಾರಿ ವಿದ್ಯಾರ್ಥಿಗಳಿಗೆ ಮಾರ್ಗದರ್ಶನ ನೀಡಿ, ಹಾಸ್ಪಿಟಾಲಿಟಿ ಸೈನ್ಸ್  ಗ್ರಾಹಕರಿಗೆ ಆಹಾರ ಮತ್ತು ವಸತಿ ಅಗತ್ಯಗಳನ್ನು ಪೂರೈಸುವ ಸೇವಾ ಉದ್ಯಮವಾಗಿದೆ. ಹಾಸ್ಪಿಟಾಲಿಟಿ ಸೈನ್ಸ್ ನಲ್ಲಿ ವಿವಿಧ ಆಡಳಿತಾತ್ಮಕ,ವ್ಯವಸ್ಥಾಪನಾ

ಅಕ್ಷಯ ಕಾಲೇಜಿನಲ್ಲಿ “ಡೆಲಿಸಿಯಾ” ಹಾಸ್ಪಿಟಲಿಟಿ ಕ್ಲಬ್ ಆತಿಥ್ಯ ಉದ್ಯಮದ ಕುರಿತು ಸಂವಾದ Read More »

ಕೊಕ್ಕಡ ರಾಷ್ಟ್ರೀಕೃತ ಬ್ಯಾಂಕ್‍ ನಲ್ಲಿ ಖಾತೆ ಹೊಂದಿರುವ ಬಡ ಮಹಿಳೆಯರ ಖಾತೆಯಿಂದ ಹಣ ಲಪಟಾಯಿಸಿ ವಂಚನೆ | ಜಾಣ ಕುರುಡರಂತೆ ವರ್ತಿಸುತ್ತಿರುವ ಅಧಿಕಾರಿಗಳು

ಕೊಕ್ಕಡ: ರಾಷ್ಟ್ರೀಕೃತ ಬ್ಯಾಂಕ್ ಕೊಕ್ಕಡ ಶಾಖೆಯಲ್ಲಿ ಇತ್ತೀಚಿನ ದಿನಗಳಲ್ಲಿ ಬಡ ಮಹಿಳೆಯರ ಖಾತೆಯಿಂದ ಒಂದಿಲ್ಲೊಂದು ರೀತಿಯಲ್ಲಿ ಹಣ ವರ್ಗಾವಣೆಗೊಳ್ಳುತ್ತಿರುವ ಪ್ರಕರಣ ನಡೆಯುತ್ತಿದ್ದರು ಜಾಣ ಕುರುಡರಂತೆ ವರ್ತಿಸುತ್ತಿರುವ ಅಧಿಕಾರಿಗಳು. ಅ.25ರಂದು ಮಧ್ಯಾಹ್ನ 12.45ಕ್ಕೆ ಬ್ಯಾಂಕ್ ಮ್ಯಾನೇಜರ್ ಎಂದು ಫೋನ್ ಕರೆಯ ಮೂಲಕ ನಂಬಿಸಿ. ವಾಟ್ಸಪ್ ಮುಖಾಂತರ ಮಹಿಳೆಯ ಪಾಸ್ ಬುಕ್ ನಕಲನ್ನು ಪಡೆದು ಮಹಿಳೆಯೋರ್ವರಿಗೆ ರೂ.6,500 ವಂಚಿಸಿದ ಘಟನೆ ನಡೆದಿದೆ. ಕೊಕ್ಕಡ ಗ್ರಾಮದ ಹಾರ ನಿವಾಸಿ ಟಿ.ಜೆ.ರೀನಾ ಅವರ ಬ್ಯಾಂಕ್ ಖಾತೆಯಿಂದ ರೂ. 6,500 ಅನ್ನು ಅಪರಿಚಿತ ವ್ಯಕ್ತಿ

ಕೊಕ್ಕಡ ರಾಷ್ಟ್ರೀಕೃತ ಬ್ಯಾಂಕ್‍ ನಲ್ಲಿ ಖಾತೆ ಹೊಂದಿರುವ ಬಡ ಮಹಿಳೆಯರ ಖಾತೆಯಿಂದ ಹಣ ಲಪಟಾಯಿಸಿ ವಂಚನೆ | ಜಾಣ ಕುರುಡರಂತೆ ವರ್ತಿಸುತ್ತಿರುವ ಅಧಿಕಾರಿಗಳು Read More »

ಬೆಂಗಳೂರಿನಲ್ಲಿ ಸ್ನಾತಕೋತ್ತರ ಪದವಿ ಸ್ವೀಕರಿಸಿದ ಪುತ್ತೂರಿನ ಲಹರಿ ಕೆ.ಎಂ.

ಪುತ್ತೂರು: ಪುತ್ತೂರಿನ ಲಹರಿ ಕೆ. ಎಂ. ಅವರು ಎಂ.ಬಿ.ಎ. ಸ್ನಾತಕೋತ್ತರ ಪದವಿಯನ್ನು ಬೆಂಗಳೂರಿನ ದಯಾನಂದ ಸಾಗರ್ ಸಂಸ್ಥೆಗಳು ಏರ್ಪಡಿಸಿದ್ದ ಘಟಿಕೋತ್ಸವ ಸಮಾರಂಭದಲ್ಲಿ ಸ್ವೀಕರಿಸಿದರು. ಅವರು ದಯಾನಂದ ಸಾಗರ್ ಕಾಲೇಜ್ ಆಫ್ ಆರ್ಟ್ಸ್ ಸೈನ್ಸ್ ಅಂಡ್ ಕಾಮರ್ಸ್ ನ ವಿದ್ಯಾರ್ಥಿನಿಯಾಗಿದ್ದಾರೆ. ಲಹರಿ ಕೆ.ಎಂ. ಪುತ್ತೂರು ವಕೀಲರ ಸಂಘದ ನಿಕಟಪೂರ್ವ ಅಧ್ಯಕ್ಷ ಮನೋಹರ್ ಕೆ ವಿ ಮತ್ತು ಮಮತಾ ಕೆ. ಎ. ದಂಪತಿ ಪುತ್ರಿ,

ಬೆಂಗಳೂರಿನಲ್ಲಿ ಸ್ನಾತಕೋತ್ತರ ಪದವಿ ಸ್ವೀಕರಿಸಿದ ಪುತ್ತೂರಿನ ಲಹರಿ ಕೆ.ಎಂ. Read More »

ಭಾರತೀಯ ಅರೆಸೇನಾ ಪಡೆಗಳ ಮಾಜಿ ಯೋಧರ ಸಂಘ ದ.ಕ., ಉಡುಪಿ ಜಿಲ್ಲಾ ವಲಯ ಸಂಘಟನಾ ಪುತ್ತೂರು ಘಟಕದ ತ್ರೈಮಾಸಿಕ ಸಭೆ | ನ.18 ರಂದು ಗುರುವಾಯನಕೆರೆಯಲ್ಲಿ ಸಂಘದ ವಾರ್ಷಿಕೋತ್ಸವ ಸಮಾರಂಭ

ಪುತ್ತೂರು: ಭಾರತೀಯ ಅರೆಸೇನಾ ಪಡೆಗಳ ಮಾಜಿ ಯೋಧರ ಸಂಘ ದ.ಕ., ಉಡುಪಿ ಜಿಲ್ಲಾ ವಲಯ ಸಂಘಟನಾ ಪುತ್ತೂರು ಘಟಕದ ತ್ರೈಮಾಸಿಕ ಸಭೆ ಭಾನುವಾರ ಕುಂಬ್ರ ರೈತ ಸಮುದಾಯ ಭವನದಲ್ಲಿ ನಡೆಯಿತು. ಸಂಘದ ಜಿಲ್ಲಾ ಸಂಘಟನಾ ಕಾರ್ಯದರ್ಶಿ ಕೆ.ಪಿ.ಗೌಡ ದೀಪ ಬೆಳಗಿಸಿ ಸಭೆಯನ್ನು ಉದ್ಘಾಟಿಸಿ ಮಾತನಾಡಿ, ನ.18 ರಂದು ಗುರುವಾಯನಕೆರೆಯಲ್ಲಿ ನಡೆಯುವ ಸಂಘ ವಾರ್ಷಿಕೋತ್ಸವ ಕಾರ್ಯಕ್ರಮವನ್ನು ಯಶಸ್ವಿಗೊಳಿಸುವುದು ಸಭೆಯ ಉದ್ದೇಶವಾಗಿದ್ದು, ಕಾರ್ಯಕ್ರಮಕ್ಕೆ ಹೊರಗಿನಿಂದ ಯಾವುದೇ ಫಂಡ್‍ ಬರುವುದಿಲ್ಲ. ಈ ನಿಟ್ಟಿನಲ್ಲಿ ಪ್ರತಿಯೊಬ್ಬ ಸದಸ್ಯರು ಧನ ಸಹಾಯ ನೀಡುವಂತೆ ಅವರು

ಭಾರತೀಯ ಅರೆಸೇನಾ ಪಡೆಗಳ ಮಾಜಿ ಯೋಧರ ಸಂಘ ದ.ಕ., ಉಡುಪಿ ಜಿಲ್ಲಾ ವಲಯ ಸಂಘಟನಾ ಪುತ್ತೂರು ಘಟಕದ ತ್ರೈಮಾಸಿಕ ಸಭೆ | ನ.18 ರಂದು ಗುರುವಾಯನಕೆರೆಯಲ್ಲಿ ಸಂಘದ ವಾರ್ಷಿಕೋತ್ಸವ ಸಮಾರಂಭ Read More »

ವಿವೇಕಾನಂದ ಕಾನೂನು ಮಹಾವಿದ್ಯಾಲಯದಲ್ಲಿ ವಿಶೇಷ ಉಪನ್ಯಾಸ | ‘ನನಗಲ್ಲ ನಿನಗೆ’ ಎನ್ನುವ ಸೇವಾ ಭಾವನೆಯೇ ದೇಶ ಸೇವೆಯ ಮೊದಲ ಹೆಜ್ಜೆ : ಡಾ.ನಂದೀಶ್ ವೈ.ಡಿ.

ಪುತ್ತೂರು: ವಿವೇಕಾನಂದ ಕಾನೂನು ಮಹಾವಿದ್ಯಾಲಯದ ರಾಷ್ಟ್ರೀಯ ಸೇವಾ ಯೋಜನಾ ಘಟಕದ 2023-24ನೇ ಸಾಲಿನ ಎನ್. ಎಸ್. ಎಸ್. ಚಟುವಟಿಕೆಗಳ ಸಮಾರೋಪ ಸಮಾರಂಭ ಹಾಗೂ ವಿಶೇಷ ಉಪನ್ಯಾಸ ಕಾರ್ಯಕ್ರಮ ನಡೆಯಿತು. ಮುಖ್ಯ ಅತಿಥಿಯಾಗಿ ಉಪ್ಪಿನಂಗಡಿ ಸರಕಾರಿ ಪ್ರಥಮ ದರ್ಜೆ ಕಾಲೇಜಿನ ಸಮಾಜಕಾರ್ಯ ವಿಭಾಗದ ಮುಖ್ಯಸ್ಥ, ಸಹಾಯಕ ಪ್ರಾಧ್ಯಾಪಕ ಡಾ. ನಂದೀಶ್ ವೈ. ಡಿ., ಭಾವನಾತ್ಮಕ ಬುದ್ಧಿವಂತಿಕೆ ಮತ್ತು ದೇಶ ಪ್ರೇಮ ಎಂಬ ವಿಷಯದ ಕುರಿತು ವಿಶೇಷ ಉಪನ್ಯಾಸ ನೀಡಿ ನಮ್ಮ ಮನಸ್ಸು ಯಾವ ರೀತಿ ಯೋಚನೆ ಮಾಡುತ್ತದೆಯೋ ಅದೇ

ವಿವೇಕಾನಂದ ಕಾನೂನು ಮಹಾವಿದ್ಯಾಲಯದಲ್ಲಿ ವಿಶೇಷ ಉಪನ್ಯಾಸ | ‘ನನಗಲ್ಲ ನಿನಗೆ’ ಎನ್ನುವ ಸೇವಾ ಭಾವನೆಯೇ ದೇಶ ಸೇವೆಯ ಮೊದಲ ಹೆಜ್ಜೆ : ಡಾ.ನಂದೀಶ್ ವೈ.ಡಿ. Read More »

ಸವಣೂರು ಶಕ್ತಿ ಕೇಂದ್ರ ಬೂತ್ 65 ರಲ್ಲಿ ನರೇಂದ್ರ ಮೋದಿಯವರ ಮನ್ ಕೀ ಬಾತ್ ಕಾರ್ಯಕ್ರಮ ವೀಕ್ಷಣೆ

ಸವಣೂರು: ಶಕ್ತಿ ಕೇಂದ್ರ ಬೂತ್ 65 ರಲ್ಲಿ ಭಾನುವಾರ ನರೇಂದ್ರ ಮೋದಿ ಯವರ ಮನ್ ಕೀ ಬಾತ್ ಕಾರ್ಯಕ್ರಮದ ವೀಕ್ಷಣೆ ಮಾಡಲಾಯಿತು. ಉಮೇಶ್ ಆಚಾರ್ಯ ಅಟ್ಟೊಳೆ ಅವರ ಮನೆಯಲ್ಲಿ ಮನ್‍ ಕೀ ಬಾತ್ ವೀಕ್ಷಣೆ ಮಾಡಲಾಯಿತು. ಕಾರ್ಯಕ್ರಮದಲ್ಲಿ ಬಿಜೆಪಿ ಜಿಲ್ಲಾ ಉಪಾಧ್ಯಕ್ಷ ರಾಕೇಶ್ ರೈ ಕೆಡಂಜಿ, ಸವಣೂರು ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಉಪಾಧ್ಯಕ್ಷ ಚೇತನ್ ಕೋಡಿ ಬೈಲು, ಬೂತ್ ಸಂಖ್ಯೆ 65 ರ ಅಧ್ಯಕ್ಷ ತೀರ್ಥರಾಮ ಕೆಡಂಜಿ, ಕಾರ್ಯದರ್ಶಿ ಸತೀಶ್ ಬಲ್ಯಾಯ, ಪಂಚಾಯತ್ ಸದಸ್ಯರಾದ

ಸವಣೂರು ಶಕ್ತಿ ಕೇಂದ್ರ ಬೂತ್ 65 ರಲ್ಲಿ ನರೇಂದ್ರ ಮೋದಿಯವರ ಮನ್ ಕೀ ಬಾತ್ ಕಾರ್ಯಕ್ರಮ ವೀಕ್ಷಣೆ Read More »

ಪಾಲೆತ್ತಾಡಿ ನಿವಾಸಿ ರಾಮಣ್ಣ ಗೌಡ ಹೃದಯಾಘಾತದಿಂದ ನಿಧನ

ಉಪ್ಪಿನಂಗಡಿ: ಬಜತ್ತೂರು ಗ್ರಾಮದ ಮಣಿಕ್ಕಳ ಪಾಲೆತ್ತಾಡಿ ನಿವಾಸಿ ರಾಮಣ್ಣ ಗೌಡ (69) ಅ.26 ರಂದು ಹೃದಯಾಘಾತದಿಂದ ಸ್ವಗೃಹದಲ್ಲಿ ನಿಧನರಾದರು. ಪ್ರಗತಿಪರ ಕೃಷಿಕರಾಗಿರುವ ರಾಮಣ್ಣ ಗೌಡರು ಮಧ್ಯಾಹ್ನದವರೆಗೂ ತೋಟದಲ್ಲಿ ಕೆಲಸ ಮಾಡಿಕೊಂಡಿದ್ದರು. ಹಠಾತ್ರನೆ ಎದೆನೋವು ಕಾಣಿಸಿಕೊಂಡಿದ್ದು, ಉಪ್ಪಿನಂಗಡಿ ಆಸ್ಪತ್ರೆಗೆ ಕರೆತರುವಷ್ಟರಲ್ಲಿ ಮೃತಪಟ್ಟಿದ್ದರು. ಮೃತ ರಾಮಣ್ಯಗೌಡರವರು ಪತ್ನಿ ಚಂದ್ರಾವತಿ, ಪುತ್ರಿಯರಾದ ಶಶಿಕಲಾ, ಚೈತ್ರ, ಪುತ್ರರಾದ ಧನಂಜಯ, ಲೋಕೇಶ್ ಹಾಗೂ ಸಹೋದರಾರದ ಮುಂಬೈ ಕರ್ನಾಟಕ ಮಲ್ಲ ಪತ್ರಿಕೆಯ ಸಂಪಾದಕ ಚಂದ್ರಶೇಖರ ಪಾಲೆಕ್ಕಡಿ, ಸಂಯುಕ್ತ ಕರ್ನಾಟಕ ಪುತ್ತೂರು ತಾಲೂಕು ವರದಿಗಾರ ಮೇಘ ಪಾಲೆತ್ತಡಿ

ಪಾಲೆತ್ತಾಡಿ ನಿವಾಸಿ ರಾಮಣ್ಣ ಗೌಡ ಹೃದಯಾಘಾತದಿಂದ ನಿಧನ Read More »

error: Content is protected !!
Scroll to Top