ಪುತ್ತೂರು ಶಾಸಕರಿಗೆ ಮನವಿ ನೀಡಲು ಹೋದದ್ದು ಹೊರತು ಕಾಂಗ್ರೆಸ್ ಪಕ್ಷಕ್ಕೆ ಸೇರ್ಪಡೆಯಲ್ಲ’-ಪುತ್ತೂರು ತಾಲೂಕು ಒಳಮೊಗ್ರು ಬಿಜೆಪಿ ಕಾರ್ಯಕರ್ತರಿಂದ ಸ್ಪಷ್ಟನೆ.
ಪುತ್ತೂರು: ರಸ್ತೆ ಅಭಿವೃದ್ಧಿಯ ಕುರಿತು ಮನವಿ ನೀಡಲು ಹೋದ ವೇಳೆ ಕಾಂಗ್ರೆಸ್ ಪಕ್ಷದ ಶಲ್ಯವನ್ನು ಹಾಕಿ ಫೋಟೋ ತೆಗೆದು ಪತ್ರಿಕೆಗೆ ಬಿಜೆಪಿ ಕಾರ್ಯಕರ್ತರು ಕಾಂಗ್ರೆಸ್ ಸೇರ್ಪಡೆ ಎಂದು ಬಿಂಬಿಸಿದ್ದಾರೆ ಹೊರತು ನಾವು ಕಾಂಗ್ರೆಸ್ ಪಕ್ಷಕ್ಕೆ ಸೇರಿಲ್ಲ ಎಂದು ಒಳಮೊಗ್ರು ಗ್ರಾಮದ ಮುಡಾಲಮೂಲೆಯ ಬಿಜೆಪಿ ಕಾರ್ಯಕರ್ತರು ಸೆ.20ರಂದು ಸಂಜೆ ಬಿಜೆಪಿ ಕಚೇರಿಗೆ ಆಗಮಿಸಿ ಪುತ್ತೂರಿನ ಮಾಜಿ ಶಾಸಕ ಸಂಜೀವ ಮಠಂದೂರುರವರಲ್ಲಿ ವಿಷಯ ತಿಳಿಸಿ ನಾವು ಎಂದೆಂದೂ ಬಿಜೆಪಿಗರೇ ಎಂದು ಸ್ಪಷ್ಟಪಡಿಸಿದ್ದಾರೆ. ಒಳಮೊಗ್ರು ಗ್ರಾಮದ ಮುಡಾಲಮೂಲೆ ಬಿಜೆಪಿ ಕಾರ್ಯಕರ್ತರಾದ ಬಾಳಪ್ಪ […]










