ಪುತ್ತೂರು

ಬಾಲಕಿಯರ ಹಾಸ್ಟೇಲ್‍ ನಲ್ಲಿ ಸುತ್ತಾಡುತ್ತಿರುವ ಯುವಕ | ಪೊಲೀಸರಿಂದ ತನಿಖೆ

ಪುತ್ತೂರು: ಪುತ್ತೂರಿನ ಬಾಲಕಿಯರ ಹಾಸ್ಟೆಲ್‍ ನಲ್ಲಿ ಯುವಕನೊಬ್ಬ ಸುತ್ತಾಡುತ್ತಿದ್ದ ದೃಶ್ಯಗಳು ಸಿಸಿಟಿವಿ ಯಲ್ಲಿ ಸೆರೆಯಾಗಿದೆ. ಇದೀಗ ಈ ಘಟನೆ ಬಾರಿ ಸದ್ದು ಮಾಡುತ್ತಿದ್ದು ಸಿಸಿಟಿವಿ ಕ್ಯಾಮೆರಾದಲ್ಲಿ ದಾಖಲಾದ ದೃಶ್ಯಗಳ ಆಧಾರದ ಮೇರೆಗೆ ಪೊಲೀಸರಿಗೆ ಮಾಹಿತಿ ನೀಡಲಾಗಿದೆ. ಯುವಕ ಕಳ್ಳತನಕ್ಕೆ ಯತ್ನಿಸಿರಬಹುದೆಂಬ ಅನುಮಾನ ಮೂಡಿದ್ದು ಹೆಚ್ಚಿನ ಮಾಹಿತಿ ಇನ್ನಷ್ಟೇ ತಿಳಿಯಬೇಕಿದೆ.

ಬಾಲಕಿಯರ ಹಾಸ್ಟೇಲ್‍ ನಲ್ಲಿ ಸುತ್ತಾಡುತ್ತಿರುವ ಯುವಕ | ಪೊಲೀಸರಿಂದ ತನಿಖೆ Read More »

ಪುಣ್ಚತ್ತಾರಿನಲ್ಲಿ ಮೂರ್ತೆದಾರರ ಸೇವಾ ಸಹಕಾರಿ ಸಂಘದ 2ನೇ ನೂತನ  ಶಾಖೆ ಉದ್ಘಾಟನೆ

ಕಾಣಿಯೂರು: ನರಿಮೊಗರು ಮೂರ್ತೆದಾರರ ಸೇವಾ ಸಹಕಾರಿ ಸಂಘದ 2ನೇ ನೂತನ ಶಾಖೆಯು ಪುಣ್ಚತ್ತಾರಿನ ಇಡ್ಯಡ್ಕ ಕಾಂಪ್ಲೆಕ್ಸ್ ನಲ್ಲಿ ಇಂದು (ಭಾನುವಾರ) ಉದ್ಘಾಟನೆಗೊಂಡಿತು. ಸವಣೂರು ವಿದ್ಯಾರಶ್ಮಿ ಸಮೂಹ ಶಿಕ್ಷಣ ಸಂಸ್ಥೆಗಳ ಸಂಚಾಲಕ, ಸಹಕಾರ ರತ್ನ ಕೆ.ಸೀತಾರಾಮ ರೈ ಕಚೇರಿಯನ್ನು ಉದ್ಘಾಟಿಸಿ ಶುಭ ಹಾರೈಸಿದರು. ನರಿಮೊಗರು ಮೂರ್ತೆದಾರರ ಸೇವಾ ಸಹಕಾರಿ ಸಂಘದ ಅಧ್ಯಕ್ಷ ಸತೀಶ್ ಕುಮಾರ್ ಕೆಡೆಂಜಿ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ನ್ಯಾಯವಾದಿ ಮೋಹನ ಗೌಡ ಇಡ್ಯಡ್ಕ ಗಣಕಯಂತ್ರ, ಕಾಣಿಯೂರು ಗ್ರಾಮ ಪಂಚಾಯತ್ ಅಧ್ಯಕ್ಷ ವಿಶ್ವನಾಥ ಕೊಪ್ಪ ಇ –

ಪುಣ್ಚತ್ತಾರಿನಲ್ಲಿ ಮೂರ್ತೆದಾರರ ಸೇವಾ ಸಹಕಾರಿ ಸಂಘದ 2ನೇ ನೂತನ  ಶಾಖೆ ಉದ್ಘಾಟನೆ Read More »

ಕುಂಬ್ರ ಅಮೋಘ ಕಾಂಪ್ಲೆಕ್ಸ್‍ ನಲ್ಲಿ ‘ಶ್ರೀ ಲಕ್ಷ್ಮೀ’ ಎಣ್ಣೆ ಮಿಲ್, ಹಿಟ್ಟಿನ ಗಿರಣಿ ಶುಭಾರಂಭ

ಪುತ್ತೂರು: ಕೃಷ್ಣಪ್ರಸಾದ್ ಕೆ.ಎಸ್ ಅವರ ಮಾಲಕತ್ವದ ‘ಶ್ರೀ ಲಕ್ಸ್ಮಿ’ ಎಣ್ಣೆ ಮಿಲ್ ಮತ್ತು ಹಿಟ್ಟಿನ ಗಿರಣಿ ಕುಂಬ್ರದ ಅಮೋಘ ಕಾಂಪ್ಲೆಕ್ಸ್ ನಲ್ಲಿ ಶುಭಾರಂಭಗೊಂಡಿತು. ಜಿಲ್ಲಾ ಗಾಣಿಗ ಸಂಘದ ಅಧ್ಯಕ್ಷ ಶ್ರೀರಾಮ ಮುಗ್ರೋಡಿ ಸಂಸ್ಥೆಯನ್ನು ಉದ್ಘಾಟಿಸಿ ಶುಭ ಹಾರೈಸಿರು. ಕರೋಪಾಡಿ ಚೋರ್ಲವಾಣಿಯರ ತರವಾಡು ಸಂಚಾಲಕ ರಾಮಕೃಷ್ಣ ಮಾಂಬಾಡಿ ಯಂತ್ರದ ಚಾಲನೆ ಗೈದರು. ಈ ಸಂದರ್ಭದಲ್ಲಿ ಕುಂಬ್ರ ಚಂದನ್ ಕಾಂಪ್ಲೆಕ್ಸ್ ಮಾಲಕ ರಾಮ್ ಮೋಹನ್, ಹಿರಿಯ ಧಾರ್ಮಿಕ ಮುಖಂಡ ಅರುಣಕುಮಾರ್ ಪುತ್ತಿಲ, ಸಾಂದೀಪನಿ ವಿದ್ಯಾ ಸಂಸ್ಥೆಯ ಸಂಚಾಲಕ ಭಾಸ್ಕರ ಆಚಾರ್,

ಕುಂಬ್ರ ಅಮೋಘ ಕಾಂಪ್ಲೆಕ್ಸ್‍ ನಲ್ಲಿ ‘ಶ್ರೀ ಲಕ್ಷ್ಮೀ’ ಎಣ್ಣೆ ಮಿಲ್, ಹಿಟ್ಟಿನ ಗಿರಣಿ ಶುಭಾರಂಭ Read More »

ಇಂದು (ನ.10) : ವಿಶ್ವ ಹಿಂದೂ ಪರಿಷದ್ ಪುತ್ತೂರು ಜಿಲ್ಲಾ ಕಾರ್ಯಾಲಯದಲ್ಲಿ ಗೋಪೂಜೆ, ಧಾರ್ಮಿಕ ಸಭಾ ಕಾರ್ಯಕ್ರಮ ಮತ್ತು ದೀಪಾವಳಿ ಆಚರಣೆ

ಪುತ್ತೂರು: ವಿಶ್ವ ಹಿಂದೂ ಪರಿಷದ್‌ ಬಜರಂಗದಳ,ಮಾತೃಶಕ್ತಿ,ದುರ್ಗಾವಾಹಿನಿ ಪುತ್ತೂರು ನಗರ ಪ್ರಖಂಡ ವತಿಯಿಂದ  ಗೋಪೂಜೆ ಮತ್ತು ವಿವಿಧ ಕಾರ್ಯಕ್ರಮಗಳು ಇಂದು ಸಂಜೆ ವಿಶ್ವ ಹಿಂದೂ ಪರಿಷದ್ ಪುತ್ತೂರು ಜಿಲ್ಲಾ ಕಾರ್ಯಾಲಯದ ನಿವೇಶನ ಜಾಗದಲ್ಲಿ ನಡೆಯಲಿದೆ. ಸಂಜೆ ಗಂಟೆ 5 ರಂದು ಅಟಲ್ ಉದ್ಯಾನ ದಾರ್ಮಿಕ ಶಿಕ್ಷಣ ಕೇಂದ್ರ 3 ಇದರ ಮಕ್ಕಳಿಂದ ಕುಣಿತ ಭಜನೆ ನಡೆಯಲಿದೆ. ಸಂಜೆ 6 ಗಂಟೆಗೆ ಗೋಪೂಜೆ ಹಾಗೂ ಧಾರ್ಮಿಕ ಸಭಾ ಕಾರ್ಯಕ್ರಮ ನಡೆಯಲಿದೆ. ನಂತರ ನಂತರ ದೀಪಾವಳಿ ಆಚರಣೆ ನಡೆಯಲಿದೆ ಎಂದು ಪ್ರಕಟಣೆ

ಇಂದು (ನ.10) : ವಿಶ್ವ ಹಿಂದೂ ಪರಿಷದ್ ಪುತ್ತೂರು ಜಿಲ್ಲಾ ಕಾರ್ಯಾಲಯದಲ್ಲಿ ಗೋಪೂಜೆ, ಧಾರ್ಮಿಕ ಸಭಾ ಕಾರ್ಯಕ್ರಮ ಮತ್ತು ದೀಪಾವಳಿ ಆಚರಣೆ Read More »

ಕುಂಬ್ರ ನಿವಾಸಿ ಯುವ ವಕೀಲ ಚಂದ್ರಕಾಂತ್ ಅಡೂರ್ ನಿಧನ

ಪುತ್ತೂರು: ಅನಾರೋಗ್ಯದ ಹಿನ್ನಲೆಯಲ್ಲಿ ಯುವ ವಕೀಲ ಕುಂಬ್ರ ನಿವಾಸಿ ಚಂದ್ರಕಾಂತ್ ಅಡೂರ್ (38) ಮೃತಪಟ್ಟಿದ್ದಾರೆ. ವೃತ್ತಿಯಲ್ಲಿ ವಕೀಲರಾಗಿದ್ದ ಚಂದ್ರಕಾಂತ್ ರವರು ವಕೀಲ ಸಂಘದ ಕಾರ್ಯಕ್ರಮಗಳಲ್ಲಿ ಸಕ್ರಿಯರಾಗಿದ್ದರು. ಉತ್ತಮ ಕ್ರೀಡಾಪಟುವಾಗಿದ್ದ ಅವರು, ಅನಾರೋಗ್ಯದ ಹಿನ್ನಲೆ ಅವರನ್ನು ಪುತ್ತೂರಿನ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿತ್ತು ಬಳಿಕ ಹೆಚ್ಚಿನ ಚಿಕಿತ್ಸೆಗೆ ಮಂಗಳೂರಿನ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿತ್ತು ಆದರೆ ಚಿಕಿತ್ಸೆ ಫಲಕಾರಿಯಾಗದೆ ಅವರು ಮೃತಪಟ್ಟಿದ್ದಾರೆ ಎಂದು ತಿಳಿದು ಬಂದಿದೆ. ಮೃತರು ಪತ್ನಿ, ಮಗು, ಕುಟುಂಬಸ್ಥರನ್ನು ಹಾಗೂ ಅಪಾರ ಬಂದು ಮಿತ್ರರನ್ನು ಆಗಲಿದ್ದಾರೆ.

ಕುಂಬ್ರ ನಿವಾಸಿ ಯುವ ವಕೀಲ ಚಂದ್ರಕಾಂತ್ ಅಡೂರ್ ನಿಧನ Read More »

ಎಂಬಿಎ ಕಲಿಕೆ ಕುರಿತು ಮಾರ್ಗದರ್ಶನ ಶಿಬಿರ

ಪುತ್ತೂರು: ವಿವೇಕಾನಂದ ಕಾಲೇಜ್ ಆಫ್ ಎಂಜಿನಿಯರಿಂಗ್ ಎಂಡ್ ಟೆಕ್ನಾಲಜಿಯ ಎಂಬಿಎ ವಿಭಾಗದ ಆಶ್ರಯದಲ್ಲಿ ವಿವೇಕಾನಂದ ಪದವಿ ಕಾಲೇಜಿನ ಸಹಯೋಗದೊಂದಿಗೆ ಎಂಬಿಎ ಕಲಿಕೆಯ ಮೂಲಕ ತಮ್ಮ ವೃತ್ತಿಪರ ಬದುಕನ್ನು ಎತ್ತರಿಸಿಕೊಳ್ಳುವುದು ಹೇಗೆ ಎನ್ನುವ ವಿಷಯದ ಬಗ್ಗೆ ಪದವಿ ವಿದ್ಯಾರ್ಥಿಗಳಿಗೆ ಒಂದು ದಿನದ ಮಾರ್ಗದರ್ಶನ ಶಿಬಿರವನ್ನು ಏರ್ಪಡಿಸಲಾಯಿತು. ಒಟ್ಟು ನಾಲ್ಕು ಅವಧಿಯಲ್ಲಿ ನಡೆದ ಈ ಕಾರ್ಯಾಗಾರದಲ್ಲಿ ಎಂಬಿಎ ಕಲಿಕೆಯಿಂದ ಆಗುವ ಪ್ರಯೋಜನಗಳು, ಸಿಗಬಹುದಾದ ವಿವಿಧ ಅವಕಾಶಗಳ ಬಗ್ಗೆ ವಿದ್ಯಾರ್ಥಿಗಳಿಗೆ ಮಾರ್ಗದರ್ಶನವನ್ನು ನೀಡಲಾಯಿತು. ಮೊದಲ ಅವಧಿಯಲ್ಲಿ ಎಂಬಿಎ ಯಾಕೆ ಎಂಬ ವಿಷಯದ

ಎಂಬಿಎ ಕಲಿಕೆ ಕುರಿತು ಮಾರ್ಗದರ್ಶನ ಶಿಬಿರ Read More »

ಜಾಗದ ವಿವಾದ : ಕೃಷಿಕ ರಮೇಶ್‍ ಗೌಡರನ್ನು ಹತ್ಯೆಗೈದ ಆರೋಪಿ ಹರೀಶ್‍ ಬಂಧನ

ಕಡಬ: ಕೃಷಿಕ ರಮೇಶ್‍ ಗೌಡ ಎಂಬವರನ್ನು ಜಾಗದ ವಿವಾದ ಹಿನ್ನಲೆಯಲ್ಲಿ ಕೊಲೆಗೈದ ಆರೋಪಿ ಪರ್ಲ ಕಲ್ಲಂಡದ ಹರೀಶ್‍ (29) ಎಂಬಾತನನ್ನು ಉಪ್ಪಿನಂಗಡಿ ಪೊಲೀಸರು ಬಂಧಿಸಿದ್ದಾರೆ. ಚೆರ್ಲ ಪರಿಸರದಲ್ಲಿ ಉಪ್ಪಿನಂಗಡಿ ಪೊಲೀಸರು ಹರೀಶವನ್ನು ವಶಕ್ಕೆ ಪಡೆದುಕೊಂಡಿದ್ದಾರೆ. ನ.8ರ ರಾತ್ರಿ ರಮೇಶ ಗೌಡ ಎಂಬವರನ್ನು ದಾರಿಯಲ್ಲಿ ಕಾದು ಕುಳಿತು ರಮೇಶ್ ಗೌಡನನ್ನು ಆಟ್ಯಾಡಿಸಿ, ಕತ್ತಿಯಿಂದ ಕಡಿದು ಕೊಲೆ ಮಾಡಲಾಗಿತ್ತು. ಈ ಪ್ರಕರಣಕ್ಕೆ ಸಂಬಂಧಿಸಿ ಕೊಲೆಯಾದ ಶ್ರೀಧರ ಗೌಡರ ಪತ್ನಿ ಉಪ್ಪಿನಂಗಡಿ ಪೊಲೀಸರಿಗೆ ದೂರು ನೀಡಿದ್ದು, ಈ ಕೊಲೆ ಪ್ರಕರಣದಲ್ಲಿ ಆರೋಪಿ

ಜಾಗದ ವಿವಾದ : ಕೃಷಿಕ ರಮೇಶ್‍ ಗೌಡರನ್ನು ಹತ್ಯೆಗೈದ ಆರೋಪಿ ಹರೀಶ್‍ ಬಂಧನ Read More »

ನಾಳೆ ಮುಕ್ವೆ ಶಾಲೆ ಹಿರಿಯ ವಿದ್ಯಾರ್ಥಿಗಳ ಕ್ರೀಡಾಕೂಟ

ಪುತ್ತೂರು: ಸ.ಉ.ಹಿ.ಪ್ರಾ. ಶಾಲೆ ಮುಕ್ವೆ ಹಿರಿಯ ವಿದ್ಯಾರ್ಥಿ ಸಂಘ ಮುಕ್ವೆ ಆಶ್ರಯದಲ್ಲಿ ನ.10ರಂದು ಹಿರಿಯ ವಿದ್ಯಾರ್ಥಿಗಳ ಕ್ರೀಡಾಕೂಟಸ.ಉ.ಹಿ.ಪ್ರಾ. ಶಾಲೆ ಮುಕ್ವೆ ಶಾಲಾ ಮೈದಾನ ಹಿರಿಯ ವಿದ್ಯಾರ್ಥಿ ಸಂಘ ಮುಕ್ವೆ ನರಿಮೊಗರು ಇಲ್ಲಿ ಬೆಳಗ್ಗೆ 8.30ರಿಂ ಸಂಜೆ 5.30ರ ತನಕ ನಡೆಯಲಿದೆ ಸ್ಪರ್ಧೆಗಳ ವಿವರ ಪುರುಷರಿಗೆ : ಕ್ರಿಕೆಟ್, ವಾಲಿಬಾಲ್, ಕಬಡ್ಡಿ, ಹಗ್ಗಜಗ್ಗಾಟ, 100ಮೀ ಓಟ ಮಹಿಳೆಯರಿಗೆ : ತ್ರೋಬಾಲ್, ಹಗ್ಗಜಗ್ಗಾಟ, ಗುಂಡೆಸೆತ, 100ಮೀ ಓಟ ಸಂಜೆ 5.30ಕ್ಕೆ : ಸಮಾರೋಪ ಸಮಾರಂಭ ನಡೆಯಲಿದೆ. ಪ್ರತಿ ಸದಸ್ಯರು 100

ನಾಳೆ ಮುಕ್ವೆ ಶಾಲೆ ಹಿರಿಯ ವಿದ್ಯಾರ್ಥಿಗಳ ಕ್ರೀಡಾಕೂಟ Read More »

ನ 10:ಕಾವು ವಿಶ್ವ ಹಿಂದೂ ಪರಿಷತ್ ಬಜರಂಗದಳ  ಗೋಪೂಜಾ ಸಮಿತಿಯಿಂದ ಸಾಮೂಹಿಕ ಗೋಪೂಜೆ ಧಾರ್ಮಿಕ ಸಭಾ ಕಾರ್ಯಕ್ರಮ

ಕಾವು: ವಿಶ್ವ ಹಿಂದೂ ಪರಿಷತ್ ಬಜರಂಗದಳ ಮತ್ತು ಗೋಪೂಜಾ ಸಮಿತಿ ಕಾವು ಇದರ ನೇತೃತ್ವದಲ್ಲಿ 13 ನೇ ವರ್ಷದ ಸಾಮೂಹಿಕ ಗೋಪೂಜೆ, ಮತ್ತು ಧಾರ್ಮಿಕ ಸಭಾ ಕಾರ್ಯಕ್ರಮ ಕಾವು ಶ್ರೀ ಪಂಚಲಿಂಗೇಶ್ವರ ದೇವಾಲಯದ ವಠಾರದಲ್ಲಿ ನ 10 ರಂದು ನಡೆಯಲಿದೆ. ಸಾಮೂಹಿಕ ಗೋಪೂಜೆ ಸಂಜೆ ಗಂಟೆ 6.30 ಕ್ಕೆ ವೇದಮೂರ್ತಿ ಶ್ರೀ ಶಿವಪ್ರಸಾದ್ ಕಡಮಣ್ಣಾಯ ಇವರ ಪೌರೋಹಿತ್ಯದಲ್ಲಿ ಸಾಮೂಹಿಕ ಗೋಪೂಜೆ ಕಾರ್ಯಕ್ರಮ ನಡೆಯಲಿದೆ. ಧಾರ್ಮಿಕ ಸಭಾ ಕಾರ್ಯಕ್ರಮ ಸಂಜೆ  ಗಂಟೆ 7 ಕ್ಕೆ ನಡೆಯುವ ಧಾರ್ಮಿಕ ಸಭಾ

ನ 10:ಕಾವು ವಿಶ್ವ ಹಿಂದೂ ಪರಿಷತ್ ಬಜರಂಗದಳ  ಗೋಪೂಜಾ ಸಮಿತಿಯಿಂದ ಸಾಮೂಹಿಕ ಗೋಪೂಜೆ ಧಾರ್ಮಿಕ ಸಭಾ ಕಾರ್ಯಕ್ರಮ Read More »

ವಿವೇಕಾನಂದ ಕಾಲೇಜಿನಲ್ಲಿ’ಎನ್ವೋಟೆಕ್ -2024’ ರಾಜ್ಯ ಮಟ್ಟದ  ವಿಚಾರ ಸಂಕಿರಣ,  ಸ್ಪರ್ಧೆ ಉದ್ಘಾಟನೆ

ಪುತ್ತೂರು: ಪ್ರಸ್ತುತ ದಿನಗಳಲ್ಲಿ ಅಭಿವೃದ್ಧಿಯ ಭರಾಟೆಗೆ ಪರಿಸರ ಬಲಿ ಆಗುತ್ತಿರುವುದು ಖೇದಕರ ಸಂಗತಿ. ಕೇವಲ ತಂತ್ರಜ್ಞಾನದ ಮುಖೇನ ಪರಿಸರದ ಸಮತೋಲನವನ್ನು ಕಾಪಾಡಲು ಸಾಧ್ಯವಿಲ್ಲ. ಬದಲಾಗಿ ಪರಿಸರದ ಮೂಲವನ್ನು ಅಧ್ಯಯನ ಮಾಡಿ ಸಾಂಪ್ರದಾಯಿಕವಾಗಿ ಹಾಗೂ ತಾಂತ್ರಿಕವಾಗಿ ಸುಸ್ಥಿರತೆಯನ್ನು ಕಾಪಾಡಬಹುದು ಎಂದು ಮಣಿಪಾಲ ಎಂಐಟಿಯ ಜಿಯೋಲಾಜಿ ವಿಭಾಗದ ಮುಖ್ಯಸ್ಥ ಡಾ. ಕೆ. ಬಾಲಕೃಷ್ಣ ಹೇಳಿದರು. ವಿವೇಕಾನಂದ ಕಲಾ, ವಿಜ್ಞಾನ ಮತ್ತು ವಾಣಿಜ್ಯ ಮಹಾವಿದ್ಯಾಲಯ (ಸ್ವಾಯತ್ತ ) ದ ಸ್ನಾತಕೋತ್ತರ ಅಧ್ಯಯನ ಕೇಂದ್ರದ ದಶಮಾನೋತ್ಸವದ ಪ್ರಯುಕ್ತ  ಕಾಲೇಜಿನ  ಐಕ್ಯೂಎಸಿ ಹಾಗೂ ವಿವೇಕಾನಂದ

ವಿವೇಕಾನಂದ ಕಾಲೇಜಿನಲ್ಲಿ’ಎನ್ವೋಟೆಕ್ -2024’ ರಾಜ್ಯ ಮಟ್ಟದ  ವಿಚಾರ ಸಂಕಿರಣ,  ಸ್ಪರ್ಧೆ ಉದ್ಘಾಟನೆ Read More »

error: Content is protected !!
Scroll to Top