ಪುತ್ತೂರು

ಬಿಜೆಪಿ ದ.ಕ ಜಿಲ್ಲಾ ಅಧ್ಯಕ್ಷರ ಪುತ್ತೂರು ಮಂಡಲ ಪ್ರವಾಸ

ಪುತ್ತೂರು: ಭಾರತೀಯ ಜನತಾ ಪಾರ್ಟಿಯ ದಕ್ಷಿಣ ಕನ್ನಡ ಜಿಲ್ಲಾಧ್ಯಕ್ಷ ಸತೀಶ್ ಕುಂಪಲ ಅವರು ಪುತ್ತೂರು ಮಂಡಲ ಪ್ರವಾಸ ಮಾಡಿ ಅಟಲ್ ಸದಸ್ಯತನ ನೋಂದಾವಣೆ ಯ ಪ್ರಗತಿ ಬಗ್ಗೆ ಮಾಹಿತಿ ಪಡೆದರು. ಪುತ್ತೂರು ವಿಧಾನಸಭಾ ಕ್ಷೇತ್ರಕ್ಕೆ ನೀಡಿದ ಸದಸ್ಯತನ ಗುರಿ ಹಾಗೂ ಮುಂದಿನ ದಿನಗಳಲ್ಲಿ ಇನ್ನಷ್ಟು ಸದಸ್ಯತನ ನೋಂದಾವಣೆ ಮಾಡುವ ಬಗ್ಗೆ ಮತ್ತು ಗ್ರಾಮ ಪಂಚಾಯತ್ ಉಪಚುನಾವಣೆಯ ಕಾರ್ಯತಂತ್ರದ ಕುರಿತು ಪದಾಧಿಕಾರಿಗಳೊಂದಿಗೆ ಸಮಾಲೋಚನೆ ನಡೆಸಿದರು. ಈ ಸಂಧರ್ಭದಲ್ಲಿ ಜಿಲ್ಲಾ ಪ್ರಧಾನ ಕಾರ್ಯದರ್ಶಿಗಳಾದ ಯತೀಶ್ ಆರ್ವಾರ್, ಪ್ರೇಮಾನಂದ ಶೆಟ್ಟಿ, ಪುತ್ತೂರು […]

ಬಿಜೆಪಿ ದ.ಕ ಜಿಲ್ಲಾ ಅಧ್ಯಕ್ಷರ ಪುತ್ತೂರು ಮಂಡಲ ಪ್ರವಾಸ Read More »

ಕಸ್ತೂರಿ ರಂಗನ್ ವರದಿ ವಿರೋಧಿಸಿ ಗುಂಡ್ಯದಲ್ಲಿ ನಡೆಯುವ ಪ್ರತಿಭಟನೆಯಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಳ್ಳುವಂತೆ ದ.ಕ.ಜಿಲ್ಲಾ ಬಿಜೆಪಿ ಯುವಮೋರ್ಛದ ಜಿಲ್ಲಾ ಕಾರ್ಯದರ್ಶಿ ಶ್ರೀಕೃಷ್ಣ ಎಂ. ಆ‌ರ್. ವಿನಂತಿ

ಕಡಬ: ನ.15 ರಂದು ಗುಂಡ್ಯದಲ್ಲಿ ಕಸ್ತೂರಿರಂಗನ್ ವರದಿ ವಿರೋಧಿಸಿ ನಡೆಯುವ ಬೃಹತ್ ಪ್ರತಿಭಟನೆಗೆ ಬೆಂಬಲಿಸಿ, ಪ್ರತಿಭಟನೆಯಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸುವಂತೆ ದ.ಕ.ಜಿಲ್ಲಾ ಬಿಜೆಪಿ ಯುವಮೋರ್ಛದ ಜಿಲ್ಲಾ ಕಾರ್ಯದರ್ಶಿ ಶ್ರೀಕೃಷ್ಣ ಎಂ. ಆ‌ ರ್.ವಿನಂತಿಸಿದ್ದಾರೆ. ಈ ಪ್ರತಿಭಟನೆ ಪಶ್ಚಿಮಘಟ್ಟ ತಪ್ಪಲಿನ ಜನರ ಬದುಕಿಗೆ ಬೇಕಾಗಿ ನಡೆಯುತ್ತಿದೆ. ಇದರಲ್ಲಿ ಜಾತಿ, ಧರ್ಮ, ಪಕ್ಷ ಯಾವುದೂ ಇಲ್ಲ, ಯೋಜನೆ ಜಾರಿಯಾಗುವ ಮುನ್ನ ನಾವು ಎಚ್ಚೆತ್ತುಕೊಳ್ಳದಿದ್ದರೆ ಪಶ್ಚಿಮ ಘಟ್ಟ ತಪ್ಪಲಿನ ಮೂರು ತಾಲೂಕುಗಳ ಭಾದಿತ ಗ್ರಾಮ ಮತ್ತು ಇತರ ಗ್ರಾಮಗಳ ಅಭಿವೃದ್ಧಿ ಕುಂಠಿತವಾಗಿ

ಕಸ್ತೂರಿ ರಂಗನ್ ವರದಿ ವಿರೋಧಿಸಿ ಗುಂಡ್ಯದಲ್ಲಿ ನಡೆಯುವ ಪ್ರತಿಭಟನೆಯಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಳ್ಳುವಂತೆ ದ.ಕ.ಜಿಲ್ಲಾ ಬಿಜೆಪಿ ಯುವಮೋರ್ಛದ ಜಿಲ್ಲಾ ಕಾರ್ಯದರ್ಶಿ ಶ್ರೀಕೃಷ್ಣ ಎಂ. ಆ‌ರ್. ವಿನಂತಿ Read More »

ರೇಡಿಯೋ ಪಾಂಚಜನ್ಯದಲ್ಲಿ ಕನ್ನಡ ಗೀತೆ ಗಾಯನ-ಚರ್ಚಾ ಸ್ಪರ್ಧೆ

ಪುತ್ತೂರು: ವಿವೇಕಾನಂದ ವಿದ್ಯಾವರ್ಧಕ ಸಂಘ ಪ್ರವರ್ತಿತ ರೇಡಿಯೋ ಪಾಂಚಜನ್ಯದ ಆಶ್ರಯದಲ್ಲಿ ಪುತ್ತೂರು ತಾಲೂಕು ಕನ್ನಡ ಸಾಹಿತ್ಯ ಪರಿಷತ್ತ್ ಮತ್ತು ರೋಟರಿ ಯುವ ವತಿಯಿಂದ ಕನ್ನಡ ರಾಜ್ಯೋತ್ಸವದ ಅಂಗವಾಗಿ ಕನ್ನಡ ಗೀತೆ ಗಾಯನ ಸ್ಪರ್ಧೆ ಮತ್ತು ಜೀವನದ ಬೆಳವಣಿಗೆಗೆ ಶಿಕ್ಷಣದಲ್ಲಿ ಕನ್ನಡ ಭಾಷೆ ಬೇಕೆ.. ? ಬೇಡವೇ….? ಚರ್ಚಾ ಸ್ಪರ್ಧೆ ನೆಹರೂನಗರ ವಿವೇಕಾನಂದ ಸ್ನಾತಕೋತ್ತರ ಕಾಲೇಜಿನಲ್ಲಿ ನಡೆಯಿತು. ಕಾರ್ಯಕ್ರಮವನ್ನು ರೇಡಿಯೋ ಪಾಂಚಜನ್ಯದ ಅಧ್ಯಕ್ಷೆ ಕೃಷ್ಣವೇಣಿ ಪ್ರಸಾದ್ ಮುಳಿಯ, ಪುತ್ತೂರು ತಾಲೂಕು ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ಉಮೇಶ್ ನಾಯಕ್

ರೇಡಿಯೋ ಪಾಂಚಜನ್ಯದಲ್ಲಿ ಕನ್ನಡ ಗೀತೆ ಗಾಯನ-ಚರ್ಚಾ ಸ್ಪರ್ಧೆ Read More »

ಜೆ.ಕೆ.ಕನ್‍ ಸ್ಟ್ರಕ್ಷನ್‍ ಕಚೇರಿಯಲ್ಲಿ ಮೂರನೇ ವರ್ಷದ ಪೂಜಾ ಸಂಭ್ರಮ

ಪುತ್ತೂರು: ಏಳ್ಮುಡಿಯ ಮುಖ್ಯರಸ್ತೆಯಲ್ಲಿರುವ ಪ್ರಾವಿಡೆನ್ಸ್ ಕಾಂಪ್ಲೆಕ್ಸ್‍ ನ ಎರಡನೇ ಮಹಡಿಯಲ್ಲಿ ಕಾರ್ಯಾಚರಿಸುತ್ತಿರುವ ಜೆ.ಕೆ.ಕನ್‍ ಸ್ಟ್ರಕ್ಷನ್ ಮೂರನೇ ವರ್ಷದ ಪೂಜಾ ಸಂಭ್ರಮ ಬುಧವಾರ ನಡೆಯಿತು. ಈ ಪ್ರಯುಕ್ತ ಕಚೇರಿಯಲ್ಲಿ ಪೂಜಾ ವಿಧಿವಿಧಾನ ಬುಧವಾರ ನಡೆಯಿತು. ಈ ಸಂದರ್ಭದಲ್ಲಿ ಸಂಸ್ಥೆಯ ಮಾಲಕರಾದ ಜಯಕುಮಾರ್ ನಾಯರ್, ಪತ್ನಿ ಸುನಿತಾ ಜೆ.ಕೆ. ನಾಯರ್, ಪುತ್ರ ಸಿದ್ಧಾರ್ಥ್‍ ಜೆ.ಕೆ.ನಾಯರ್, ಪುತ್ರಿ ಶಿಂಧ್ಯ ಜೆ.ಕೆ.ನಾಯರ್ ಉಪಸ್ಥಿತರಿದ್ದರು. ಕಾರ್ಯಕ್ರಮದಲ್ಲಿ ನಗರಸಭೆ ಮಾಜಿ ಅಧ್ಯಕ್ಷ ಜೀವಂಧರ್ ಜೈನ್, ನ್ಯೂಸ್ ಪುತ್ತೂರು ಕಾರ್ಯನಿರ್ವಾಹಕ ನಿರ್ದೇಶಕ ನಾಗೇಶ್‍ ಕೆಡೆಂಜಿ, ಉದ್ಯಮಿ ಶಿವರಾಮ

ಜೆ.ಕೆ.ಕನ್‍ ಸ್ಟ್ರಕ್ಷನ್‍ ಕಚೇರಿಯಲ್ಲಿ ಮೂರನೇ ವರ್ಷದ ಪೂಜಾ ಸಂಭ್ರಮ Read More »

ಒಕ್ಕಲಿಗ ಸ್ವಸಹಾಯ ಟ್ರಸ್ಟ್ ದಶಮಾನೋತ್ಸವದ ಅಂಗವಾಗಿ ನೂತನ ಸಭಾಂಗಣ ನಿರ್ಮಾಣದ ಕಾಮಗಾರಿಗೆ ಚಾಲನೆ, ದಶಮಾನೋತ್ಸವ ಕಾರ್ಯಾಲಯ ಉದ್ಘಾಟನೆ

ಪುತ್ತೂರು: ಒಕ್ಕಲಿಗ ಸ್ವಸಹಾಯ ಟ್ರಸ್ಟ್ ನ ದಶಮಾನೋತ್ಸವದ ಅಂಗವಾಗಿ ಟ್ರಸ್ಟ್ ಕಚೇರಿಯ ಮೇಲ್ಭಾಗದಲ್ಲಿ ನೂತನ ಸಭಾಂಗಣ ನಿರ್ಮಾಣದ ಕಾಮಗಾರಿಗೆ ಚಾಲನೆ ಹಾಗೂ ಟ್ರಸ್ಟ್ ಕಾರ್ಯಾಲಯದ ಉದ್ಘಾಟನೆ ಬುಧವಾರ ನಡೆಯಿತು. ಒಕ್ಕಲಿಗ ಸ್ವಸಹಾಯ ಟ್ರಸ್ಟ್ ಕಾರ್ಯಾಲಯವನ್ನು ಪುತ್ತೂರು ಭೂ ಅಭಿವೃದ್ಧಿ ಬ್ಯಾಂಕ್‍ ಅಧ್ಯಕ್ಷ ಭಾಸ್ಕರ ಗೌಡ ಇಚ್ಲಂಪಾಡಿ ರಿಬ್ಬನ್ ಕತ್ತರಿಸುವ ಮೂಲಕ ಉದ್ಘಾಟಿಸಿ ಮಾತನಾಡಿ, ಪ್ರತಿಯೊಬ್ಬರಿಗೂ ನಮ್ಮ ಸಮಾಜ ಎಂದು ಬಾಯಲ್ಲಿ ಹೇಳಿಕೊಳ್ಳುವುದು ಮಾತ್ರವಲ್ಲ. ಬದಲಾಗಿ ಹೃದಯದಿಂದ ಬರಬೇಕು. ಟ್ರಸ್ಟ್ ನ ವತಿಯಿಂದ ಇಚ್ಲಂಪಾಡಿಯಲ್ಲಿ ಗ್ರಾಮ ಸಮಿತಿ ಮಾಡುವಲ್ಲಿ

ಒಕ್ಕಲಿಗ ಸ್ವಸಹಾಯ ಟ್ರಸ್ಟ್ ದಶಮಾನೋತ್ಸವದ ಅಂಗವಾಗಿ ನೂತನ ಸಭಾಂಗಣ ನಿರ್ಮಾಣದ ಕಾಮಗಾರಿಗೆ ಚಾಲನೆ, ದಶಮಾನೋತ್ಸವ ಕಾರ್ಯಾಲಯ ಉದ್ಘಾಟನೆ Read More »

ನ.15 : ಕಸ್ತೂರಿ ರಂಗನ್ ವರದಿ ವಿರೋಧಿಸಿ ಗುಂಡ್ಯದಲ್ಲಿ ಪ್ರತಿಭಟನೆ | ಜನರ ಭವಿಷ್ಯದ ಮೇಲಾಗುವ ಪರಿಣಾಮಕ್ಕೆ ಪರಿಹಾರ ಕಂಡುಕೊಳ್ಳುವಲ್ಲಿ ಸಮುದಾಯದವರು ಪಾಲ್ಗೊಳ್ಳಿ : ಸುರೇಶ್‍ ಬೈಲು

ಕಡಬ: ನ.15 ಶುಕ್ರವಾರ ಕಸ್ತೂರಿರಂಗನ್ ವರದಿ ವಿರೋಧಿಸಿ ಗುಂಡ್ಯದಲ್ಲಿ ನಡೆಯುವ ಪ್ರತಿಭಟನೆಯಲ್ಲಿ ಈ ಭಾಗದ ಜನರು ಭಾಗವಹಿಸುವ ಮೂಲಕ ಜನರ ಭವಿಷ್ಯದ ಮೇಲಾಗುವ ಪರಿಣಾಮಕ್ಕೆ ಪರಿಹಾರ ಕಂಡುಕೊಳ್ಳಬೇಕಾಗಿದೆ ಎಂದು ಕಡಬ ತಾಲೂಕು ಒಕ್ಕಲಿಗ ಗೌಡ ಸೇವಾ ಸಂಘದ ಅಧ್ಯಕ್ಷ ಸುರೇಶ್ ಬೈಲು ಕರೆ ನೀಡಿದ್ದಾರೆ. ವರದಿ ಜಾರಿಗೆ ತುದಿಕಾಲಲ್ಲಿ ನಿಂತಿರುವ ವ್ಯವಸ್ಥೆಯ ವಿರುದ್ಧ ನಾವು ಸಂಘಟಿತವಾಗಿ ಹೋರಾಟ ಮಾಡಬೇಕಾಗಿತ್ತು. ಈ ಹಿನ್ನಲೆಯಲ್ಲಿ ನ.15ರಂದು ಗುಂಡ್ಯದಲ್ಲಿ ನಡೆಯುವ ಬೃಹತ್ ಪ್ರತಿಭಟನೆಗೆ ಕಡಬ ತಾಲೂಕು ಒಕ್ಕಲಿಗ ಗೌಡ ಸೇವಾ ಸಂಘದ

ನ.15 : ಕಸ್ತೂರಿ ರಂಗನ್ ವರದಿ ವಿರೋಧಿಸಿ ಗುಂಡ್ಯದಲ್ಲಿ ಪ್ರತಿಭಟನೆ | ಜನರ ಭವಿಷ್ಯದ ಮೇಲಾಗುವ ಪರಿಣಾಮಕ್ಕೆ ಪರಿಹಾರ ಕಂಡುಕೊಳ್ಳುವಲ್ಲಿ ಸಮುದಾಯದವರು ಪಾಲ್ಗೊಳ್ಳಿ : ಸುರೇಶ್‍ ಬೈಲು Read More »

ಅಂಬಿಕಾದಲ್ಲಿ ಧಾರ್ಮಿಕ ಶಿಕ್ಷಣ ತರಗತಿಗಳ ಉದ್ಘಾಟನೆ | ಆಧುನಿಕ ಶಿಕ್ಷಣದೊಂದಿಗೆ ಧರ್ಮದ ಜ್ಞಾನವೂ ಅಗತ್ಯ : ಬಾಲಚಂದ್ರ ನಟ್ಟೋಜ

ಪುತ್ತೂರು: ಆಧುನಿಕ ಶಿಕ್ಷಣದ ಜೊತೆಗೆ ಸನಾತನ ಧರ್ಮದ ಜ್ಞಾನವೂ ಸಿಕ್ಕಿದಾಗ ಶಿಕ್ಷಣ ವ್ಯವಸ್ಥೆಗೆ ನ್ಯಾಯ ಕೊಟ್ಟಂತಾಗುತ್ತದೆ. ರಸಾಯನಶಾಸ್ತ್ರ, ಭೌತಶಾಸ್ತ್ರದಂತಹ ವಿಷಯಗಳ ಜತೆಗೆ ಧರ್ಮ ಶಿಕ್ಷಣವನ್ನೂ ಕೊಟ್ಟಾಗ ನಿಜವಾದ ಶಿಕ್ಷಣ ಸಾಕಾರಗೊಳ್ಳುತ್ತದೆ. ಧರ್ಮದ ಜೊತೆಗೆ ಜಾಗೃತಿಯನ್ನೂ ಮೂಡಿಸುವುದು ಅಗತ್ಯ ಎಂದು ಪುಣೆಯ ದೀಪಕ್ ಫರ್ಟಿಲೈಝರ್ಸ್ ಆಂಡ್ ಕೆಮಿಕಲ್ಸ್‌ನ ವಿಶ್ರಾಂತ ಜನರಲ್ ಮ್ಯಾನೇಜರ್ ಬಾಲಚಂದ್ರ ನಟ್ಟೋಜ ಹೇಳಿದರು. ಅವರು ನೆಲ್ಲಿಕಟ್ಟೆಯ ಅಂಬಿಕಾ ಪದವಿ ಪೂರ್ವ ವಿದ್ಯಾಲಯದಲ್ಲಿ ಆರಂಭಿಸಲಾದ ಧಾರ್ಮಿಕ ಶಿಕ್ಷಣ ವ್ಯವಸ್ಥೆಯನ್ನು ಉದ್ಘಾಟಿಸಿ ಮಾತನಾಡಿದರು.ಪರಪೀಡನೆ ಮಾಡದೆ ಪರೋಪಕಾರ ಮಾಡುತ್ತಾ ಮುಕ್ತಿಯತ್ತ

ಅಂಬಿಕಾದಲ್ಲಿ ಧಾರ್ಮಿಕ ಶಿಕ್ಷಣ ತರಗತಿಗಳ ಉದ್ಘಾಟನೆ | ಆಧುನಿಕ ಶಿಕ್ಷಣದೊಂದಿಗೆ ಧರ್ಮದ ಜ್ಞಾನವೂ ಅಗತ್ಯ : ಬಾಲಚಂದ್ರ ನಟ್ಟೋಜ Read More »

ಅಪ್ರಾಪ್ತ ಬಾಲಕಿಗೆ ಲೈಂಗಿಕ ಕಿರುಕುಳ | ಆರೋಪಿಗೆ 3 ವರ್ಷಗಳ ಜೈಲು ಶಿಕ್ಷೆ ವಿಧಿಸಿದ ಜಿಲ್ಲಾ ಸತ್ರ ನ್ಯಾಯಾಲಯ

ಪುತ್ತೂರು: ಅಪ್ರಾಪ್ತ ಬಾಲಕಿಯ ಜೊತೆಗೆ ಅನುಚಿತವಾಗಿ ವರ್ತಿಸಿದ ಪ್ರಕರಣಕ್ಕೆ ಸಂಬಂಧಿಸಿ ಪುತ್ತೂರಿನ ಐದನೇ ಹೆಚ್ಚುವರಿ ಜಿಲ್ಲಾ ಸತ್ರ ನ್ಯಾಯಾಲಯ ಅಪರಾಧಿಗೆ ಪೋಕ್ಸೋ ಕಾಯ್ದೆಯಡಿ 3 ವರ್ಷಗಳ ಜೈಲು ಶಿಕ್ಷೆ ಮತ್ತು ರೂ.20 ಸಾವಿರ ದಂಡ ವಿಧಿಸಿದೆ. ದಂಡ ತೆರಲು ತಪ್ಪಿದಲ್ಲಿ ಮತ್ತೆ 6 ತಿಂಗಳ ಕಾರಾಗೃಹ ಶಿಕ್ಷೆ ವಿಧಿಸಿ ಪುತ್ತೂರು ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಲಯದ ನ್ಯಾಯಧೀಶ ಸರಿತಾ ಡಿ ಅವರು ತೀರ್ಪು ನೀಡಿದ್ದಾರೆ. ಕಬಕ ಗ್ರಾಮದ ವಿದ್ಯಾಪುರ ನಿವಾಸಿ ಮಹಮ್ಮದ್ ಮುಸ್ತಾಫ ಯಾನೆ ಮುಸ್ತಾಫ

ಅಪ್ರಾಪ್ತ ಬಾಲಕಿಗೆ ಲೈಂಗಿಕ ಕಿರುಕುಳ | ಆರೋಪಿಗೆ 3 ವರ್ಷಗಳ ಜೈಲು ಶಿಕ್ಷೆ ವಿಧಿಸಿದ ಜಿಲ್ಲಾ ಸತ್ರ ನ್ಯಾಯಾಲಯ Read More »

ನ.14-15 : ವಿವೇಕಾನಂದ ಕಲಾ, ವಿಜ್ಞಾನ ಮತ್ತು ವಾಣಿಜ್ಯ ಮಹಾವಿದ್ಯಾಲಯದ  ಆಶ್ರಯದಲ್ಲಿ ಎರಡು ದಿನಗಳ ರಾಷ್ಟ್ರಮಟ್ಟದ ವಿಚಾರ ಸಂಕಿರಣ

ಪುತ್ತೂರು: ವಿವೇಕಾನಂದ ಕಲಾ, ವಿಜ್ಞಾನ ಮತ್ತು ವಾಣಿಜ್ಯ ಮಹಾವಿದ್ಯಾಲಯದ (ಸ್ವಾಯತ್ತ) ಆಶ್ರಯದಲ್ಲಿ ಎರಡು ದಿನಗಳ ರಾಷ್ಟ್ರಮಟ್ಟದ ವಿಚಾರ ಸಂಕಿರಣ ನ.14 ಹಾಗೂ 15 ರಂದು ಕಾಲೇಜಿನ ಸುವರ್ಣ ಮಹೋತ್ಸವ ಸಭಾಭವನದಲ್ಲಿ ನಡೆಯಲಿದೆ ಎಂದು ಐಕ್ಯೂಎಸಿ ವಿಭಾಗದ ಡೀನ್ ಪ್ರೊ.ಶಿವಪ್ರಸಾದ್ ಕೆ.ಎಸ್. ತಿಳಿಸಿದ್ದಾರೆ. ಮಂಗಳವಾರ ಪತ್ರಿಕಾಗೋಷ್ಠಿಯಲ್ಲಿ ಅವರು ಮಾತನಾಡಿ, ವಿವೇಕಾನಂದ ಪದವಿ ಹಾಗೂ ಸ್ನಾತಕೋತ್ತರ ಅಧ್ಯಯನ ಕೇಂದ್ರ 2022 ರಲ್ಲಿ ಸ್ವಾಯತ್ತ ಸ್ಥಾನಮಾನ ಪಡೆದುಕೊಂಡಿದ್ದು, ಪ್ರಸ್ತುತ ಶಿಕ್ಷಣ ಕ್ಷೇತ್ರದಲ್ಲಿ ಸಮಾಜ ಹಾಗೂ ವಿಜ್ಞಾನ ಕ್ಷೇತ್ರ ಸಹಿತ ಭಾಷಾ ವಿಭಾಗದಲ್ಲಿ

ನ.14-15 : ವಿವೇಕಾನಂದ ಕಲಾ, ವಿಜ್ಞಾನ ಮತ್ತು ವಾಣಿಜ್ಯ ಮಹಾವಿದ್ಯಾಲಯದ  ಆಶ್ರಯದಲ್ಲಿ ಎರಡು ದಿನಗಳ ರಾಷ್ಟ್ರಮಟ್ಟದ ವಿಚಾರ ಸಂಕಿರಣ Read More »

ಬಿಳಿಯೂರು ಒಂದನೆ ವಾರ್ಡು ಉಪಚುನಾವಣೆಗೆ ಬಿಜೆಪಿ ಅಭ್ಯರ್ಥಿ ಪ್ರತಿಮಾ ರಾಜೀವ ನಾಮಪತ್ರ ಸಲ್ಲಿಕೆ

ಪುತ್ತೂರು ವಿಧಾನಸಭಾ ಕ್ಷೇತ್ರದ ಬಂಟ್ವಾಳ ತಾಲೂಕಿನ ಪೆರ್ಣೆ ಬಿಳಿಯೂರು ಪಂಚಾಯತಿನ ಬಿಳಿಯೂರಿನ ಒಂದನೇ ವಾರ್ಡಿನ ಉಪಚುನಾವಣೆಗೆ ಅಭ್ಯರ್ಥಿಯಾಗಿ ಪ್ರತಿಮಾ ರಾಜೀವ ರವರು ಬಿಜೆಪಿ ಬೆಂಬಲಿತ  ಉಮೇದುದಾರರಾಗಿ ನಾಮಪತ್ರ ಸಲ್ಲಿಸಿದರು. ಬಿಳಿಯೂರು ಪಂಚಾಯಿತಿಗೆ ತೆರಳಿ ಅಲ್ಲಿ ನಾಮಪತ್ರ ಸಲ್ಲಿಸಿದರು. ಈ ಸಂದರ್ಭದಲ್ಲಿ ಗ್ರಾಮಾಂತರ ಮಂಡಲ ಅಧ್ಯಕ್ಷ ದಯಾನಂದ ಶೆಟ್ಟಿ, ಮಾಜಿ ಶಾಸಕ ಸಂಜೀವ ಮಠಂದೂರು, ಮಂಡಲ ಉಪಾಧ್ಯಕ್ಷರುಗಳಾದ ಹರಿಪ್ರಸಾದ್ ಯಾದವ್, ವಿದ್ಯಾಧರ್ ಜೈನ್, ಮಂಡಲ ಕಾರ್ಯದರ್ಶಿ ಪುನೀತ್ ಮಾಡತ್ತಾರು, ಮಹಾಶಕ್ತೀ ಕೇಂದ್ರ ಅಧ್ಯಕ್ಷ ರಾಜೇಶ್ ಬಾಳೆಕಲ್ಲು,ಕಾರ್ಯದರ್ಶಿ ಕಿರಣ್ ಶೆಟ್ಟಿ,

ಬಿಳಿಯೂರು ಒಂದನೆ ವಾರ್ಡು ಉಪಚುನಾವಣೆಗೆ ಬಿಜೆಪಿ ಅಭ್ಯರ್ಥಿ ಪ್ರತಿಮಾ ರಾಜೀವ ನಾಮಪತ್ರ ಸಲ್ಲಿಕೆ Read More »

error: Content is protected !!
Scroll to Top