ಪುತ್ತೂರು

ಪ್ರಚೋದನಕಾರಿ ಭಾಷಣ ಆರೋಪ : ಕಲ್ಲಡ್ಕ ಪ್ರಭಾಕರ ಭಟ್‌ ವಿರುದ್ಧ ದೂರು

ಉಪ್ಪಳಿಗೆ ದೀಪೋತ್ಸವ ಕಾರ್ಯಕ್ರಮದಲ್ಲಿ ಭಾಷಣ ಮಾಡಿದ್ದ ಪ್ರಭಾಕರ ಭಟ್‌ ಪುತ್ತೂರು: ಇತ್ತೀಚೆಗೆ ನಡೆದ ಸಾರ್ವಜನಿಕ ಸಭೆಯೊಂದರಲ್ಲಿ ಪ್ರಚೋದನಕಾರಿ ಭಾಷಣ ಮಾಡಿದ್ದಾರೆ ಎಂದು ಆರೋಪಿಸಿ ಹಿಂದೂ ಮುಖಂಡ ಕಲ್ಲಡ್ಕ ಪ್ರಭಾಕರ ಭಟ್ ವಿರುದ್ಧ ಈಶ್ವರಿ ಪದ್ಮುಂಜ ಎಂಬವರು ಸಂಪ್ಯ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ. ಅ.20ರಂದು ಪುತ್ತೂರಿನ ಉಪ್ಪಳಿಗೆಯಲ್ಲಿ ನಡೆದ ದೀಪೋತ್ಸವ ಕಾರ್ಯಕ್ರಮದಲ್ಲಿ ಕಲ್ಲಡ್ಕ ಪ್ರಭಾಕರ ಭಟ್ ಮಹಿಳೆಯರನ್ನು ಅವಮಾನಿಸಿ, ಗರ್ಭಿಣಿ ಮಹಿಳೆಯರನ್ನು ನಿಂದನೆ ಮಾಡಿದ್ದಾರೆಂದು ಆರೋಪಿಸಿ ಕಲ್ಲಡ್ಕ ಪ್ರಭಾಕರ ಭಟ್ ಹಾಗೂ ಕಾರ್ಯಕ್ರಮದ ಆಯೋಜಕರ ವಿರುದ್ಧ ಈಶ್ವರಿ […]

ಪ್ರಚೋದನಕಾರಿ ಭಾಷಣ ಆರೋಪ : ಕಲ್ಲಡ್ಕ ಪ್ರಭಾಕರ ಭಟ್‌ ವಿರುದ್ಧ ದೂರು Read More »

ಸುಳ್ಯ : ಕ್ರಿಪ್ಟೋ ಕರೆನ್ಸಿ ಹೂಡಿಕೆ ನೆಪದಲ್ಲಿ 2.90 ಲ.ರೂ. ವಂಚನೆ

ಸುಳ್ಯ: ಕ್ರಿಪ್ಟೋ ಕರೆನ್ಸಿ ಇನ್‌ವೆಸ್ಟ್‌ಮೆಂಟ್‌ ಆ್ಯಂಡ್‌ ಟ್ರೇಡಿಂಗ್‌ ಹೆಸರಲ್ಲಿ ಸುಳ್ಯದ ವ್ಯಕ್ತಿಯೊಬ್ಬರಿಗೆ ಲಕ್ಷಾಂತರ ರೂಪಾಯಿ ವಂಚಿಸಿರುವ ಬಗ್ಗೆ ಮಂಗಳೂರು ಸೆನ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಆ್ಯಪೊಂದರ ಮೂಲಕ ಪರಿಚಯವಾದ ಮಹಿಳೆಯ ಮಾತು ನಂಬಿ ಅವರು ಹಣ ಕಳೆದುಉಕೊಂಡಿದ್ದಾರೆ. ಸುಳ್ಯದ ಕೆರೆಮೂಲೆಯ 50 ವರ್ಷದ ವ್ಯಕ್ತಿ ವಂಚನೆಗೊಳಗಾದವರು. ಇವರು ಮೊಬೈಲ್‌ನಲ್ಲಿ ಚಾಟ್‌ಜಿಪಿಟಿ ಮೂಲಕ ಆ್ಯಪ್‌ವೊಂದನ್ನು ಡೌನ್‌ಲೋಡ್‌ ಮಾಡಿಕೊಂಡಿದ್ದು, ಅದರ ಮೂಲಕ ಇಶಾ ಸಿಂಗ್‌ ಎಂಬವರ ಪರಿಚಯವಾಗಿ ಬಳಿಕ ಟೆಲಿಗ್ರಾಂ ಚಾಟ್‌ ಮಾಡಿಕೊಂಡಿದ್ದರು. ಈ ವೇಳೆ ಇಶಾ ಸಿಂಗ್‌ ಕ್ರಿಪ್ಟೋ

ಸುಳ್ಯ : ಕ್ರಿಪ್ಟೋ ಕರೆನ್ಸಿ ಹೂಡಿಕೆ ನೆಪದಲ್ಲಿ 2.90 ಲ.ರೂ. ವಂಚನೆ Read More »

ಸುಳ್ಳು ನಿರೂಪಣೆ ಸೃಷ್ಟಿಸಿ ಪ್ರಚಾರ ಮಾಡಿದರೆ ಕಠಿಣ ಕ್ರಮ : ಎಸ್‌ಪಿ ವಾರ್ನಿಂಗ್‌

ಜಾನುವಾರು ಸಾಗಿಸುತ್ತಿದ್ದವನ ಕಾಲಿಗೆ ಗುಂಡು ಹಾರಿಸಿದ ಪ್ರಕರಣಕ್ಕೆ ಸಂಬಂಧಿಸಿ ಖಡಕ್‌ ಎಚ್ಚರಿಕೆ ನೀಡಿದ ಎಸ್‌ಪಿ ಪುತ್ತೂರು: ಘಟನೆಯನ್ನು ಎಲ್ಲರೂ ವಿಮರ್ಶೆ ಮಾಡಬಹುದು, ಆದರೆ ಸತ್ಯವನ್ನು ತಿರುಚಿ ಸುಳ್ಳು ನಿರೂಪಣೆ ಸೃಷ್ಟಿಸಿ ಪ್ರಚಾರಕ್ಕೆ ಬಳಸಿಕೊಳ್ಳುವುದು ಕಂಡು ಬಂದಲ್ಲಿ ಅಂತಹವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂದು ದ.ಕ. ಎಸ್‌ಪಿ ಅರುಣ್‌ ಕುಮಾರ್‌ ಪುತ್ತೂರಿನಲ್ಲಿ ಅಕ್ರಮವಾಗಿ ಜಾನುವಾರು ಸಾಗಿಸುತ್ತಿದ್ದವನ ಕಾಲಿಗೆ ಪೊಲೀಸರು ಗುಂಡು ಹಾರಿಸಿದ ಪ್ರಕರಣದ ಹಿನ್ನೆಲೆಯಲ್ಲಿ ಎಚ್ಚರಿಸಿದ್ದಾರೆ. ಈಶ್ವರಮಂಗಲದಲ್ಲಿ ಲಾರಿಯೊಂದರಲ್ಲಿ ಅನಧಿಕೃತ ಗೋ ಸಾಗಾಟ ಪ್ರಕರಣದಲ್ಲಿ 12 ಗೋವುಗಳನ್ನು

ಸುಳ್ಳು ನಿರೂಪಣೆ ಸೃಷ್ಟಿಸಿ ಪ್ರಚಾರ ಮಾಡಿದರೆ ಕಠಿಣ ಕ್ರಮ : ಎಸ್‌ಪಿ ವಾರ್ನಿಂಗ್‌ Read More »

ಅಕ್ಷಯ ಸಮೂಹ ಶಿಕ್ಷಣ ಸಂಸ್ಥೆಗಳಲ್ಲಿ ಅದ್ದೂರಿಯಾಗಿ ಸಂಪನ್ನಗೊಂಡ ಶಾರದಾ ಪೂಜೆ ಮತ್ತು ಆಯುಧ ಪೂಜೆ

ವಿದ್ಯೆಯಿಂದ ವಿನಯ, ವಿನಯದಿಂದ ಭ್ರಾತ್ವತ್ವ-ಶ್ರೀ ರಾಜಶೇಖರಾನಂದ ಸ್ವಾಮೀಜಿ ಪುತ್ತೂರು : ಮನುಷ್ಯನ  ಜೀವನದಲ್ಲಿ ಸಂಸ್ಕೃತಿ ಎಂಬುದು ಅವಿಭಾಜ್ಯ ಅಂಗ. ಸಂಸ್ಕೃತಿ, ಸಂಸ್ಕಾರದ ಜೊತೆಗೆ ಶಿಕ್ಷಣ    ಸಾಗಬೇಕು. ವಿದ್ಯೆಯಿಂದ   ವಿನಯ, ವಿನಯದಿಂದ ಭ್ರಾತೃತ್ವ ಹಾಗೂ ಭ್ರಾತೃತ್ವದಿಂದ ಧನ  ಗಳಿಸಬಹುದು. ಆದರೆ ಸುಖವು ಧನ ಅಥವ ಸಂಪತ್ತನ್ನು ಹೇಗೆ ಬಳಸುತ್ತೇವೆ ಎಂಬುವುದರಿಂದ ಪ್ರಾಪ್ತವಾಗುತ್ತದೆ ಎಂದು ಗುರುಪುರ ವಜ್ರದೇಹಿ ಮಠದ ಶ್ರೀ ರಾಜಶೇಖರಾನಂದ ಸ್ವಾಮೀಜಿರವರು ಹೇಳಿದರು. ಅಕ್ಷಯ ಸಮೂಹ ಶಿಕ್ಷಣ ಸಂಸ್ಥೆಗಳ ವತಿಯಿಂದ ಅದ್ದೂರಿಯಾಗಿ ಸಂಪನ್ನಗೊಂಡ ಶಾರದಾ ಪೂಜೆ ಮತ್ತು ಆಯುಧ

ಅಕ್ಷಯ ಸಮೂಹ ಶಿಕ್ಷಣ ಸಂಸ್ಥೆಗಳಲ್ಲಿ ಅದ್ದೂರಿಯಾಗಿ ಸಂಪನ್ನಗೊಂಡ ಶಾರದಾ ಪೂಜೆ ಮತ್ತು ಆಯುಧ ಪೂಜೆ Read More »

ಗ್ಯಾಸ್ ಸಿಲಿಂಡರ್ ಸೋರಿಕೆಯಿಂದ ಬೆಂಕಿ: ಯುವಕನ ಸಮಯ ಪ್ರಜ್ಞೆಯಿಂದ ತಪ್ಪಿದ ಅನಾಹುತ

ವಿಟ್ಲ: ಅನಂತಾಡಿಯ ಬಾಬನಕಟ್ಟೆಯಲ್ಲಿ ಯುವಕನೊಬ್ಬ ಸಮಯ ಪ್ರಜ್ಞೆ ಮೆರೆದ ಪರಿಣಾಮ ಗ್ಯಾಸ್ ಸಿಲಿಂಡರ್ ಅವಘಡದಿಂದ ಕುಟುಂಬವೊಂದು ಪಾರಾದ ಘಟನೆ ನಡೆದಿದೆ. ಹಿರ್ತಂದ ಬೈಲು ಎಂಬಲ್ಲಿ ಅ.22ರಂದು ರಾತ್ರಿ 9.45ರ ಸುಮಾರಿಗೆ ಘಟನೆ ನಡೆದಿದೆ. ಘಟನೆಯಲ್ಲಿ ಸಮಯಪ್ರಜ್ಞೆ ಮೆರೆದ ಯುವಕ ಜಯರಾಜ್‌ನ ಮುಖ ಹಾಗೂ ಕೈಗೆ ಗಾಯಗಳಾಗಿದೆ. ಘಟನೆಯಲ್ಲಿ ದ್ವಿಚಕ್ರವಾಹನ ಸಹಿತ ಮನೆಯಲ್ಲಿದ್ದ ಹಲವು ಉಪಕರಣಗಳಿಗೆ ಹಾನಿಯಾಗಿದೆ. ತಾಯಿ ಸುಶೀಲ ಜೊತೆ ಜಯರಾಜ್ ವಾಸ್ತವ್ಯವಿರುವ ಮನೆಯಲ್ಲಿ ಅ.22ರಂದು ಗ್ಯಾಸ್ ಸಿಲಿಂಡ‌ರ್ ಮುಗಿದ ಹಿನ್ನೆಲೆಯಲ್ಲಿ ಹೊಸ ಸಿಲಿಂಡ‌ರ್ ಅಳವಡಿಸಿದ್ದು, ರೆಗ್ಯೂಲೇಟ‌ರ್

ಗ್ಯಾಸ್ ಸಿಲಿಂಡರ್ ಸೋರಿಕೆಯಿಂದ ಬೆಂಕಿ: ಯುವಕನ ಸಮಯ ಪ್ರಜ್ಞೆಯಿಂದ ತಪ್ಪಿದ ಅನಾಹುತ Read More »

ಅಕ್ಷಯ ಕಾಲೇಜಿನಲ್ಲಿ ವಾಣಿಜ್ಯ ವಿಭಾಗದ ” Com- Acumen 2k25″  ಇಂಟ್ರಾ ಡಿಪಾರ್ಟ್ಮೆಂಟ್ ಕಾಮರ್ಸ್ ಫೆಸ್ಟ್ :

ಅಕ್ಷಯ ಕಾಲೇಜು ಪುತ್ತೂರು ಇಲ್ಲಿನಾ ವಾಣಿಜ್ಯ ವಿಭಾಗದ ಇನ್ವಿಕ್ತಾ ಕಾಮರ್ಸ್ ಅಸೋಸಿಯೇಷನ್ ಮತ್ತು ಐಕ್ಯೂಎಸಿ ಇದರ ಸಹಯೋಗದಲ್ಲಿ  ‘ಕಾಮ್ ಅಕ್ಯೂಮನ್ 2K25  . ಇನ್ಟ್ರಾ ಡಿಪಾರ್ಟ್ಮೆಂಟ್ ವಾಣಿಜ್ಯ ಫೆಸ್ಟ್  ನಡೆಯಿತು. ಈ ಕಾರ್ಯಕ್ರಮವನ್ನು ಶ್ರೀ ಮತಿ ಕಲಾವತಿ ಜಯಂತ್ ಇವರು ಉದ್ಘಾಟಿಸಿ ವಿದ್ಯಾರ್ಥಿಗಳಿಗೆ ಶುಭ ಹಾರೈಸಿದರು.ಈ ಕಾರ್ಯಕ್ರಮದಲ್ಲಿ ವಿದ್ಯಾರ್ಥಿಗಳು  ತಯಾರಿಸಿದ  ತಮ್ಮ  ಸಂಘದ ಲೋಗೋ ಮತ್ತು ರೋಲಿಂಗ್ ಟ್ರೋಫಿಯನ್ನು ಬಿಡುಗಡೆ ಮಾಡಲಾಯಿತು ಸಮರೋಪ ಕಾರ್ಯಕ್ರಮಕ್ಕೆ ಮುಖ್ಯ ಅತಿಥಿಗಳಾಗಿ ಆಗಮಿಸಿದ ನಿಹಾಲ್ ಪಿ ಶೆಟ್ಟಿ ಉದ್ಯಮಿ ಸದಸ್ಯರು ಪುತ್ತೂರು

ಅಕ್ಷಯ ಕಾಲೇಜಿನಲ್ಲಿ ವಾಣಿಜ್ಯ ವಿಭಾಗದ ” Com- Acumen 2k25″  ಇಂಟ್ರಾ ಡಿಪಾರ್ಟ್ಮೆಂಟ್ ಕಾಮರ್ಸ್ ಫೆಸ್ಟ್ : Read More »

ಜಾನುವಾರು ಸಾಗಿಸಿದವನ ಕಾಲಿಗೆ ಗುಂಡಿಕ್ಕಿದ ಪ್ರಕರಣ : ಅಪಪ್ರಚಾರ ಮಾಡಿದರೆ ಕಠಿಣ ಕ್ರಮ

ಕೃತ್ಯಕ್ಕೆ ಧರ್ಮ, ಜಾತಿ, ರಾಜಕೀಯವನ್ನು ಎಳೆದು ತರಬಾರದೆಂದು ಎಚ್ಚರಿಕೆ ಪುತ್ತೂರು: ಪುತ್ತೂರು ಗ್ರಾಮಾಂತರ ಪೊಲೀಸ್ ಠಾಣಾ ವ್ಯಾಪ್ತಿಯ ಈಶ್ವರಮಂಗಲ ಸಮೀಪ ಬೆಳಗ್ಗೆ ಬುಧವಾರ ಜಾನುವಾರಗಳನ್ನು ಅಕ್ರಮವಾಗಿ ಸಾಗಾಟ ಮಾಡುತ್ತಿದ್ದ ಆರೋಪಿಯ ಕಾಲಿಗೆ ಗುಂಡಿಕ್ಕಿ ಬಂಧಿಸಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದ್ದ ತಪ್ಪು ಪ್ರಚಾರಕ್ಕೆ ಪೊಲೀಸರು ಸ್ಪಷ್ಟನೆ ನೀಡಿದ್ದಾರೆ. ಟೆಂಪೊದಲ್ಲಿ ಹತ್ತು ಜಾನುವಾರುಗಳನ್ನು ಹಿಂಸಾತ್ಮಕವಾಗಿ ಸಾಗಿಸಲಾಗುತ್ತಿತ್ತು. ಪೊಲೀಸರು ಸುಮಾರು 10 ಕಿ.ಮೀ. ತನಕ ಬೆನ್ನಟ್ಟಿ ಗೋ ಸಾಗಾಟ ಮಾಡುತ್ತಿದ್ದವರನ್ನು ತಡೆದಿದ್ದು, ಈ ಸಂದರ್ಭ ಟೆಂಪೊ ಚಾಲಕ ಅಬ್ದುಲ್ಲ

ಜಾನುವಾರು ಸಾಗಿಸಿದವನ ಕಾಲಿಗೆ ಗುಂಡಿಕ್ಕಿದ ಪ್ರಕರಣ : ಅಪಪ್ರಚಾರ ಮಾಡಿದರೆ ಕಠಿಣ ಕ್ರಮ Read More »

ಬೆಂಗಳೂರಿನ ಲಾಡ್ಜ್‌ನಲ್ಲಿ ಪುತ್ತೂರಿನ ಯುವಕ ಅನುಮಾನಾಸ್ಪದ ಸಾವು : ಜೊತೆಗಿದ್ದ ಯುವತಿ ಎಸ್ಕೇಪ್‌

ಒಂದು ವಾರದಿಂದ ಹೋಟೆಲ್‌ ಕೊಠಡಿಯಲ್ಲಿ ತಂಗಿದ್ದ ಯುವಕ-ಯುವತಿ ಬೆಂಗಳೂರು: ಎಂಟು ದಿನ ಪ್ರೇಯಸಿ ಜೊತೆಗೆ ಹೋಟೆಲಿನಲ್ಲಿ ತಂಗಿದ್ದ ಪುತ್ತೂರಿನ ಯುವಕ ಸಾವನ್ನಪ್ಪಿರುವ ಘಟನೆ ಬೆಂಗಳೂರಿನ ಮಡಿವಾಳದ ಲಾಡ್ಜ್‌ವೊಂದರಲ್ಲಿ ಸಂಭವಿಸಿದ್ದು, ಈ ಘಟನೆ ನಾನಾ ರೀತಿಯ ಅನುಮಾನಗಳಿಗೆ ಕಾರಣವಾಗಿದೆ. ಯುವಕನನ್ನು ಪುತ್ತೂರಿನ ತಕ್ಷಿತ್ (20) ಎಂದು ಗುರುತಿಸಲಾಗಿದೆ. ಅವನ ಜೊತೆಗಿದ್ದ ಯುವತಿ ಎಸ್ಕೇಪ್‌ ಆಗಿದ್ದಾಳೆ. ಶುಕ್ರವಾರ (ಅ.18) ಯುವಕ ಸಾವನ್ನಪ್ಪಿದ್ದು, ಬೆಳಗ್ಗೆ ಲಾಡ್ಜ್ ಸಿಬ್ಬಂದಿ ರೂಂ ಬಾಗಿಲು ತೆಗೆದಾಗ ಘಟನೆ ಬೆಳಕಿಗೆ ಬಂದಿದೆ. ಕಳೆದ ವಾರ ತನ್ನ ಪ್ರೇಯಸಿಯೊಂದಿಗೆ

ಬೆಂಗಳೂರಿನ ಲಾಡ್ಜ್‌ನಲ್ಲಿ ಪುತ್ತೂರಿನ ಯುವಕ ಅನುಮಾನಾಸ್ಪದ ಸಾವು : ಜೊತೆಗಿದ್ದ ಯುವತಿ ಎಸ್ಕೇಪ್‌ Read More »

ಜಿಡೆಕಲ್ಲಿನಲ್ಲಿ ಸಾಹಿತ್ಯ ವಿಚಾರಗೋಷ್ಟಿಯ ಸಮಾಪನ

ಪುತ್ತೂರು: ಜಿಡೆಕಲ್ಲಿನಲ್ಲಿರುವ ಪುತ್ತೂರು ಸರಕಾರಿ ಪ್ರಥಮ ದರ್ಜೆ ಕಾಲೇಜು ಮತ್ತು ಮಂಗಳೂರಿನ ಕರಾವಳಿ ಲೇಖಕಿಯರ-ವಾಚಕಿಯರ ಸಂಘ ಹಾಗೂ ಕಾಲೇಜಿನ ಆಂತರಿಕ ಗುಣಮಟ್ಟ ಭರವಸಾ ಕೋಶಗಳ ಸಹಯೋಗದಲ್ಲಿ ಸಾಹಿತ್ಯ ವಿಚಾರ ಗೋಷ್ಠಿ ಮತ್ತು ದತ್ತಿ ನಿಧಿ ವಿತರಣೆಯ ಒಂದು ದಿನದ ಕಾರ್ಯಕ್ರಮ ನಡೆಯಿತು. ಗೋಷ್ಟಿ – 1ಉದ್ಘಾಟನ ಸಮಾರಂಭದ ಬಳಿಕ ನಡೆದ ಮೊದಲ ಗೋಷ್ಠಿಯ ಅಧ್ಯಕ್ಷತೆಯನ್ನು ವಾಮದಪದವಿನ ಸ.ಪ್ರ.ಕಾಲೇಜಿನ ಕನ್ನಡ ಉಪನ್ಯಾಸಕಿ ಶ್ರೀಮತಿ ರೇಶ್ಮಾ ಭಟ್ ವಹಿಸಿ ಮಾತನಾಡಿ ಸಾಹಿತ್ಯದಲ್ಲಿ ಕಾಲಕಾಲಕ್ಕೆ ಗಮನ ಸೆಳೆಯುವ ದೃಷ್ಟಿಯಿಂದ ಬದಲಾವಣೆಗಳಾಗುತ್ತಾ ಇರುತ್ತವೆ.

ಜಿಡೆಕಲ್ಲಿನಲ್ಲಿ ಸಾಹಿತ್ಯ ವಿಚಾರಗೋಷ್ಟಿಯ ಸಮಾಪನ Read More »

error: Content is protected !!
Scroll to Top