ಪುತ್ತೂರು ರೋಟರಿ ಕ್ಲಬ್ ವತಿಯಿಂದ ಕ್ರಿಸ್ಮಸ್, ಹೊಸ ವರ್ಷಾಚರಣೆ | ಕ್ಲಬ್ ನ ವಜ್ರಮಹೋತ್ಸವದ ಅಂಗವಾಗಿ ನೂತನ ಲಾಂಛನ ಬಿಡುಗಡೆ
ಪುತ್ತೂರು: ರೋಟರಿ ಪುತ್ತೂರು ತನ್ನ ಸ್ವಾರ್ಥರಹಿತ ಸೇವೆಯೊಂದಿಗೆ ಮತ್ತು ಸದಸ್ಯರ ಏಕತೆಯ ಶಕ್ತಿಯೊಂದಿಗೆ ಸಮಾಜಮುಖಿ ಸೇವೆಯನ್ನು ಮಾಡುತ್ತಾ ವಜ್ರಮಹೋತ್ಸವದ ಹೊಸ್ತಿಲಲ್ಲಿದ್ದು ಸುವರ್ಣಾಕ್ಷರದಲ್ಲಿ ಬರೆದಿಡುವಂತಹ ಹೆಮ್ಮೆಯನ್ನು ಗಳಿಸಿದ್ದು, ಪುತ್ತೂರಿನಲ್ಲಿ ಹೆಗ್ಗುರುತು ಸೃಷ್ಟಿಸಿದೆ ಎಂದು ಅಂತರಾಷ್ಟ್ರೀಯ ರೋಟರಿ ಜಿಲ್ಲೆ 3181, ವಲಯ ಐದರ ಜಿಲ್ಲಾ ಗವರ್ನರ್ ವಿಕ್ರಂ ದತ್ತರವರು ಹೇಳಿದರು. ಅಂತರರಾಷ್ಟ್ರೀಯ ರೋಟರಿ ಜಿಲ್ಲೆ 3181, ವಲಯ ಐದರ ರೋಟರಿ ಕ್ಲಬ್ ಪುತ್ತೂರುನಿಂದ ಜ.19 ರಂದು ಬೊಳ್ಳಾರು ಮಹಾವೀರ ವೆಂಚರ್ಸ್ ಹವಾನಿಯಂತ್ರಿತ ಸಭಾಂಗಣದಲ್ಲಿ ಸಂಜೆ ನಡೆದ ಕ್ರಿಸ್ಮಸ್, ಹೊಸ ವರ್ಷಾಚರಣೆ […]










