ಪುತ್ತೂರು

ಪುತ್ತೂರು ಪ್ರೊಬೇಷನರಿ ಸಹಾಯ ಆಯುಕ್ತರಾಗಿ ಪಿ. ಶ್ರವಣ್‍ ಕುಮಾರ್

ಪುತ್ತೂರು: ಸಹಾಯಕ ಆಯಕ್ತರಾಗಿದ್ದ ಜುಬಿನ್ ಮೊಹಪಾತ್ರ ಅವರ ವರ್ಗಾವಣೆಯಿಂದಾಗಿ ತೆರವಾದ ಸ್ಥಾನಕ್ಕೆ ಪ್ರೊಬೇಷನರಿ ಐಎಎಸ್ ಅಧಿಕಾರಿ ಪಿ.ಶ್ರವಣ್ ಕುಮಾರ್ ಪ್ರಭಾರ ವಹಿಸಿಕೊಂಡಿದ್ದಾರೆ. ಜಿಲ್ಲಾಧಿಕಾರಿ ಕಚೇರಿಯಲ್ಲಿ ಪ್ರೊಬೇಷನರಿ ಐಎಎಸ್ ಅಧಿಕಾರಿಯಾಗಿ ಕಳೆದ ಜೂನ್ 1ರಿಂದ ಕರ್ತವ್ಯದಲ್ಲಿರುವ ಪಿ.ಶ್ರವಣ್ ಕುಮಾರ್ 2023ನೇ ಬ್ಯಾಚ್ ನ ಐಎಎಸ್ ಅಧಿಕಾರಿ. ಬೆಂಗಳೂರಿನ ಆರ್.ವಿ.ಕಾಲೇಜ್ ಆಫ್ ಎಂಜಿನಿಯರಿಂಗ್‌ನಿಂದ ಎಲೆಕ್ನಿಕಲ್ ಮತ್ತು ಎಲೆಕ್ಟ್ರಾನಿಕ್ಸ್‌ನಲ್ಲಿ ಎಂಜಿನಿಯರಿಂಗ್ ಪದವಿ ಪಡೆದುಕೊಂಡಿರುವ ಅವರು ಆ ಬಳಿಕ ಖಾಸಗಿ ಕಂಪನಿಯಲ್ಲಿ ಕೆಲಸ ಮಾಡಿದ್ದರು. ಭಾರತೀಯ ರಕ್ಷಣಾ ಇಲಾಖೆಯ ರಾಜ್ಯ ಸೇವೆಯಲ್ಲಿ ತರಬೇತಿಯನ್ನೂ […]

ಪುತ್ತೂರು ಪ್ರೊಬೇಷನರಿ ಸಹಾಯ ಆಯುಕ್ತರಾಗಿ ಪಿ. ಶ್ರವಣ್‍ ಕುಮಾರ್ Read More »

ಹಿರೇಬಂಡಾಡಿ ಗ್ರಾಮದಲ್ಲಿ ಬೃಹತ್ ಸ್ವಚ್ಛತಾ ಶ್ರಮದಾನ

ಪುತ್ತೂರು: ತಾಲೂಕು ವ್ಯಾಪ್ತಿಯಲ್ಲಿ ಹಮ್ಮಿಕೊಂಡಿರುವ “ನಮ್ಮ ಸಂಸ್ಕೃತಿ  ಸ್ವಚ್ಛ ಸಂಸ್ಕೃತಿ” ” ಸ್ವಚ್ಛ ಪುತ್ತೂರು”  ಬೃಹತ್ ಸ್ವಚ್ಛತಾ ಶ್ರಮದಾನ ಕಾರ್ಯಕ್ರಮದ ಅಂಗವಾಗಿ ಹಿರೇಬಂಡಾಡಿ ಗ್ರಾಮದ ಸರಕಾರಿ ಪ್ರಾಥಮಿಕ ಶಾಲೆಯಿಂದ ಗುರುಶ್ರೀ ಸಹಕಾರಿ ಬ್ಯಾಂಕ್ ವರೆಗೆ  ಸ್ವಚ್ಛತಾ ಕಾರ್ಯ ಕೈಗೊಳ್ಳಲಾಯಿತು. ಶ್ರಮದಾನದಲ್ಲಿ ಹಿರೇಬಂಡಾಡಿ ಗ್ರಾಮ ಪಂಚಾಯತ್ ಕಾರ್ಯದರ್ಶಿ , ಶಾಲಾ ಎಸ್‍ ಡಿಎಂಸಿ ಉಪಾಧ್ಯಕ್ಷರು, ಶಾಲಾ ಮುಖ್ಯ ಶಿಕ್ಷಕರು, ಶಿಕ್ಷಕರು , ಬಿಸಿಯೂಟ ಮೇಲ್ವಿಚಾರಕರು, ಲೈಬ್ರೇರಿ ಸಿಬ್ಬಂದಿ, ಉಗ್ರಾಣಿ, ಒಕ್ಕೂಟದ ಪದಾಧಿಕಾರಿ ರಸ್ತೆ ಬದಿಯ ಕಸವನ್ನು ತೆಗೆದು ಸ್ವಚ್ಛ

ಹಿರೇಬಂಡಾಡಿ ಗ್ರಾಮದಲ್ಲಿ ಬೃಹತ್ ಸ್ವಚ್ಛತಾ ಶ್ರಮದಾನ Read More »

ಜ.30 : ವಿದ್ಯುತ್ ನಿಲುಗಡೆ | ಎಲ್ಲೆಲ್ಲಿ : ಇಲ್ಲಿದೆ ಡಿಟೈಲ್ಸ್

ಪುತ್ತೂರು: ನಿರ್ವಹಣಾ ಕಾಮಗಾರಿ ನಿಮಿತ್ತ ಜ.30 ಗುರುವಾರ ಬೆಳಗ್ಗೆ 10 ರಿಂದ ರಿಂದ ಸಂಜೆ 5 ರ ತನಕ 33/11  ಕೆವಿ ಸವಣೂರು ವಿದ್ಯುತ್ ಉಪಕೇಂದ್ರದಲ್ಲಿ ವಿದ್ಯುತ್‍ ನಿಲುಗಡೆ ಮಾಡಲಾಗುವುದು ಸವಣೂರು ವಿದ್ಯುತ್‍ ಉಪಕೇಂದ್ರದಿಂದ ಹೊರಡುವ ಏಣಿತ್ತಡ್ಕ, ಭಕ್ತಕೋಡಿ, ವೀರಮಂಗಲ, ಚಾರ್ವಾಕ, ಕಾಣಿಯೂರು, ದೋಳ್ಪಾಡಿ, ಶಾಂತಿಮೊಗರು ಹಾಗೂ ಪುಣ್ಚಪ್ಪಾಡಿ ಫಿಡರ್ ಗಳಲ್ಲಿ ವಿದ್ಯುತ್ ನಿಲುಗಡೆಯಾಗಲಿದೆ. ಆದ್ದರಿಂದ ವಿದ್ಯುತ್ ಬಳಕೆದಾರರು ಗಮನಿಸಬೇಕಾಗಿ ಮೆಸ್ಕಾಂ ಪ್ರಕಟಣೆಯಲ್ಲಿ ತಿಳಿಸಿದೆ.

ಜ.30 : ವಿದ್ಯುತ್ ನಿಲುಗಡೆ | ಎಲ್ಲೆಲ್ಲಿ : ಇಲ್ಲಿದೆ ಡಿಟೈಲ್ಸ್ Read More »

ಮಾ.1-2 : ಇತಿಹಾಸ ಪ್ರಸಿದ್ಧ ಪುತ್ತೂರು ಕೋಟಿ-ಚೆನ್ನಯ ಜೋಡು ಕರೆ ಕಂಬಳ | ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ದೇವರಮಾರು ಗದ್ದೆಯಲ್ಲಿ ನಡೆದ ಕರೆ ಮುಹೂರ್ತ

ಪುತ್ತೂರು: ಪುತ್ತೂರು ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ದೇವರಮಾರು ಗದ್ದೆಯಲ್ಲಿ ಮಾರ್ಚ್1 ಮತ್ತು 2 ರಂದು ನಡೆಯಲಿರುವ 32ನೇ ವರ್ಷದ ಕೋಟಿ ಚೆನ್ನಯ ಜೋಡುಕರೆ ಕಂಬಳಕ್ಕೆ ಸೋಮವಾರ ಕರೆ ಮುಹೂರ್ತ ನೆರವೇರಿಸಲಾಯಿತು. ಬೆಳಗ್ಗೆ ಶ್ರೀ ಮಹಾಲಿಂಗೇಶ್ವರ ದೇವಸ್ಥಾನದಲ್ಲಿ ಕೋಟಿ ಚೆನ್ನಯ ಕಂಬಳ ಸಮಿತಿಯ ವತಿಯಿಂದ ವಿಶೇಷ ಪ್ರಾರ್ಥನೆ ಸಲ್ಲಿಸಿ ಸೇವೆ ಸಲ್ಲಿಸಲಾಯಿತು. ಬಳಿಕ ದೇವರಮಾರು ಗದ್ದೆಯಲ್ಲಿರುವ ಕ್ಷೇತ್ರದ ಮೂಲ ಸಾಗ ಸಾನಿಧ್ಯದಲ್ಲಿ ಪ್ರಾರ್ಥನೆ ಸಲ್ಲಿಸಲಾಯಿತು. ಇದಾದ ಬಳಿಕ ಕಂಬಳದ ಕರೆಯ ಮಂಜೊಟ್ಟಿಯಲ್ಲಿ ನಿಂತು ಸಾಮೂಹಿಕ ಪ್ರಾರ್ಥನೆ ಸಲ್ಲಿಸಲಾಯಿತು. ದೇವಸ್ಥಾನದ 

ಮಾ.1-2 : ಇತಿಹಾಸ ಪ್ರಸಿದ್ಧ ಪುತ್ತೂರು ಕೋಟಿ-ಚೆನ್ನಯ ಜೋಡು ಕರೆ ಕಂಬಳ | ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ದೇವರಮಾರು ಗದ್ದೆಯಲ್ಲಿ ನಡೆದ ಕರೆ ಮುಹೂರ್ತ Read More »

ಕರ್ನಾಟಕ ಖೋಖೋ ತಂಡದ ಸಹಾಯಕ ತರಬೇತುದಾರರಾಗಿ ಪುತ್ತೂರಿನ ಕಾರ್ತಿಕ್ ಎನ್. ಆಯ್ಕೆ

ಪುತ್ತೂರು: ಜ.28 ರಿಂದ ಫೆ.1 ತನಕ ಉತ್ತರಾಖಂಡ್ ರಾಜ್ಯದಲ್ಲಿ ನಡೆಯಲಿರುವ ರಾಷ್ಟ್ರೀಯ ಕ್ರೀಡಾಕೂಟದಲ್ಲಿ ಭಾಗವಹಿಸುವ ಕರ್ನಾಟಕ ರಾಜ್ಯ ಪುರುಷರ ಖೋಖೋ ತಂಡದ ಸಹಾಯಕ ತರಬೇತುದಾರರಾಗಿ ಪುತ್ತೂರಿನ ಕಾರ್ತಿಕ್ ಎನ್. ಆಯ್ಕೆಯಾಗಿದ್ದಾರೆ. ಖೋಖೋ ಕೋಚಿಂಗ್‌ನಲ್ಲಿ ಎನ್.ಐ.ಎಸ್ ಅರ್ಹತೆ ಇರುವ ತರಬೇತುದಾರರಾಗಿರುವ ಅವರು ಪ್ರಸ್ತುತ ಮಂಗಳೂರಿನ ಕೆನರಾ ಕಾಲೇಜಿನಲ್ಲಿ ದೈಹಿಕ ಶಿಕ್ಷಣ ನಿರ್ದೇಶಕರಾಗಿ ಕಾರ್ಯನಿರ್ವಹಿಸುತಿದ್ದಾರೆ. ಪ್ರಾಥಮಿಕ ಶಿಕ್ಷಣವನ್ನು ಬಿ.ಇ.ಎಂ ಶಾಲೆ, ಪ್ರೌಢ ಶಿಕ್ಷಣವನ್ನು ವಿವೇಕಾನಂದ ಕನ್ನಡ ಮಾಧ್ಯಮ ಶಾಲೆ, ಪಿಯು ಶಿಕ್ಷಣವನ್ನು ಕೊಂಬೆಟ್ಟು ಸರಕಾರಿ ಪ.ಪೂ ಕಾಲೇಜು ಹಾಗೂ ಪದವಿಯನ್ನು

ಕರ್ನಾಟಕ ಖೋಖೋ ತಂಡದ ಸಹಾಯಕ ತರಬೇತುದಾರರಾಗಿ ಪುತ್ತೂರಿನ ಕಾರ್ತಿಕ್ ಎನ್. ಆಯ್ಕೆ Read More »

ಬಾವಿಗೆ ಬಿದ್ದ ಬೆಕ್ಕು | ರಕ್ಷಣೆಗೆ ಬಂದ ಅಗ್ನಿಶಾಮಕ ದಳದ ಸಿಬ್ಬಂದಿಗಳನ್ನು ಕಚ್ಚಿ ಗಾಯಗೊಳಿಸಿದ ಬೆಕ್ಕು

ಪುತ್ತೂರು : ರಕ್ಷಣೆಗೆಂದು ಬಂದ ಅಗ್ನಿಶಾಮಕದಳದ ಸಿಬ್ಬಂದಿಗಳ ಮೇಲೆ ಬೆಕ್ಕೊಂದು ಅಟ್ಯಾಕ್ ಮಾಡಿರುವ ಘಟನೆ ಪುತ್ತೂರಿನ ತೆಂಕಿಲ ಕ್ರಾಸ್ ಬಳಿ ನಡೆದಿದೆ. ಅಗ್ನಿಶಾಮಕ ದಳದ ಸಿದ್ಧರೂಢ ಮತ್ತು ಮೌನೇಶ್ ಎಂಬವರಿಗೆ ಗಂಭೀರ ಗಾಯಗಳಾಗಿವೆ. ಸೋಮವಾರ ತೆಂಕಿಲ ಬಳಿಯ ಲಕ್ಷ್ಮೀ ಎಂಬವರ ಮನೆಯ ಬಾವಿಗೆ ಬೆಕ್ಕೊಂದು ಬಿದ್ದಿತ್ತು. ಮಂಗಳವಾರ ಬೆಕ್ಕಿನ ರಕ್ಷಣೆಗೆ ಅಗ್ನಿಶಾಮಕ ದಳದ ಸಿಬ್ಬಂದಿಗಳು ಧಾವಿಸಿದ್ದರು. ಬೆಕ್ಕನ್ನ ಹಿಡಿಯಲು ಬಾವಿಯೊಳಗಡೆ ಸಿದ್ಧರೂಢ ಮತ್ತು ಮೌನೇಶ್ ಎಂಬವರು ಇಳಿದಿದ್ದರು. ಬಾವಿಯೊಳಗಿನ ಒಂದು ಬಿಲದೊಳಗೆ ಬೆಕ್ಕು ಅವಿತುಕೊಂಡಿತ್ತು. ಬೆಕ್ಕನ್ನ ಹಿಡಿಯಲು

ಬಾವಿಗೆ ಬಿದ್ದ ಬೆಕ್ಕು | ರಕ್ಷಣೆಗೆ ಬಂದ ಅಗ್ನಿಶಾಮಕ ದಳದ ಸಿಬ್ಬಂದಿಗಳನ್ನು ಕಚ್ಚಿ ಗಾಯಗೊಳಿಸಿದ ಬೆಕ್ಕು Read More »

ಪುತ್ತೂರನ್ನು ಹೊಸ ಜಿಲ್ಲೆಯಾಗಿ ಸರಕಾರ ಘೋಷಿಸಬೇಕು : ಅನ್ವರ್ ಸಾದತ್

ಪುತ್ತೂರು: ಜಿಲ್ಲಾ ಕೇಂದ್ರವಾಗಲು ಎಲ್ಲಾ ಸೌಲಭ್ಯಗಳಿರುವ ಪುತ್ತೂರನ್ನು ಸರಕಾರ ಹೊಸ ಜಿಲ್ಲೆಯಾಗಿ ಘೋಷಿಸಬೇಕು ಎಂದು ಎಸ್‍ ಡಿಪಿಐ ಪಕ್ಷದ ಮಂಗಳೂರು ಗ್ರಾಮಾಂತರ ಜಿಲ್ಲಾ ಅಧ್ಯಕ್ಷ ಅನ್ವರ್ ಸಾದತ್ ಆಗ್ರಹಿಸಿದ್ದಾರೆ. ಮಂಗಳವಾರ ಪತ್ರಿಕಾಗೋಷ್ಠಿಯಲ್ಲಿ ಅವರು ಮಾತನಾಡಿ, ದ.ಕ.ಜಿಲ್ಲೆ ಭೌಗೋಳಿಕವಾಗಿ ವಿಶಾಲ ಪ್ರವೇಶವಾಗಿದ್ದು, ಆಡಳಿತಾತ್ಮಕ ಸುಲಭ ನಿರ್ವಹಣೆ ಮತ್ತು ಸಾವರ್ಜನಿಕರ ಅನುಕೂಲಕ್ಕಾಗಿ ಪುತ್ತೂರನ್ನು ಜಿಲ್ಲೆಯನ್ನಾಗಿ ಘೋಷಿಸಬೇಕು ಎಂದು ಅವರು ಸರಕಾರವನ್ನು ಒತ್ತಾಯಿಸಿದ್ದಾರೆ.ಈಗಾಗಲೇ ರಾಜ್ಯ ಸರಕಾರದ ಶಕ್ತಿ ಯೋಜನೆ ಜಾರಿಗೆ ಬಂದ ಬಳಿಕ ಬಸ್‍ ಗಳ ಓಡಾಟದಲ್ಲಿ ಕಡಿತ ಕಂಡು ಬಂದಿದೆ.

ಪುತ್ತೂರನ್ನು ಹೊಸ ಜಿಲ್ಲೆಯಾಗಿ ಸರಕಾರ ಘೋಷಿಸಬೇಕು : ಅನ್ವರ್ ಸಾದತ್ Read More »

ಶ್ರೀ ಮಹಾಭಾರತ ಸರಣಿಯ  62ನೇ ತಾಳಮದ್ದಳೆ

ಉಪ್ಪಿನಂಗಡಿ : ಶ್ರೀ ಕಾಳಿಕಾಂಬ ಯಕ್ಷಗಾನ ಕಲಾ ಸೇವಾ ಸಂಘ ಉಪಿನಂಗಡಿ 50ನೇ ವರ್ಷದ ನಿಮಿತ್ತ ನಡೆಸಲಾಗುತ್ತಿರುವ   ಶ್ರೀ ಮಹಾಭಾರತ ಸರಣಿಯಲ್ಲಿ 62 ನೇ ತಾಳಮದ್ದಳೆ ಕನಕಾಂಗಿ ಕಲ್ಯಾಣ ಉಪ್ಪಿನಂಗಡಿ ಶ್ರೀ ಸಹಸ್ರಲಿಂಗೇಶ್ವರ ದೇವಸ್ಥಾನದಲ್ಲಿ ಜರಗಿತು. ಡಾ. ಹನೀಶ್ ಕಿರಣ್ ಪಿ.ಟಿ ರಾಮನಗರ ಕಾರ್ಯಕ್ರಮದ ಪ್ರಾಯೋಜಕರಾಗಿದ್ದರು. ಭಾಗವತರಾಗಿ ಪದ್ಮನಾಭ ಕುಲಾಲ್, ಕಿಶೋರ್ ಶೆಟ್ಟಿ ಮೂಡಾಯಿರು,  ಹರೀಶ್ ಆಚಾರ್ಯ ಬಾರ್ಯ, ಹಿಮ್ಮೇಳದಲ್ಲಿ ಶ್ರೀಪತಿ ಭಟ್ ಉಪ್ಪಿನಂಗಡಿ, ಪ್ರಚೇತ್ ಆಳ್ವ ಬಾರ್ಯ, ಅರ್ಥದಾರಿಗಳಾಗಿ  ಪಾತಾಳ ಅಂಬಾ ಪ್ರಸಾದ್ (ಸುಭದ್ರೆ1), ಹರೀಶ

ಶ್ರೀ ಮಹಾಭಾರತ ಸರಣಿಯ  62ನೇ ತಾಳಮದ್ದಳೆ Read More »

ಶಿಕ್ಷಣ ವ್ಯವಸ್ಥೆಯೊಳಗಿನ ಪರೀಕ್ಷೆಗಳು ಜೀವನದ ಅವಿಭಾಜ್ಯ ಅಂಗವೆಂದರಿಯಿರಿ : ಡಾ. ಅನುರಾಧಾ ಕುರುಂಜಿ

ಎಡಮಂಗಲ : ಶಿಕ್ಷಣ ವ್ಯಕ್ತಿಯ ಬದುಕನ್ನು ರೂಪಿಸುವುದರೊಂದಿಗೆ ಮೌಲ್ಯಯುತ ಜೀವನವನ್ನು ನಿರ್ವಹಿಸಲು ಸಾಧ್ಯವಾಗಬೇಕು. ಆ ನಿಟ್ಟಿನಲ್ಲಿ  ಶಿಕ್ಷಣ ವ್ಯವಸ್ಥೆಯ ಪರೀಕ್ಷೆ ನಿಮ್ಮ ಜೀವನದ ಅವಿಭಾಜ್ಯ ಅಂಗವೆಂದರಿಯಿರಿ. ಆ ಮೂಲಕ ನೀವು ಪಡೆದ ಶಿಕ್ಷಣ ಸಾರ್ಥಕವಾಗಲಿ. ಎಂದು ವ್ಯಕ್ತಿತ್ವ ವಿಕಸನ ತರಬೇತುದಾರರಾದ ಡಾ. ಅನುರಾಧಾ ಕುರುಂಜಿಯವರು ಅಭಿಪ್ರಾಯ ಪಟ್ಟರು. ಅವರು ಸರ್ಕಾರಿ ಪ್ರೌಢಶಾಲೆ ಎಡಮಂಗಲ ಶಾಲೆಯ ಮುಖ್ಯೋಪಾಧ್ಯಾಯರಾದ ಅಬ್ದುಲ್ ಖಾದರ್ ಅವರ ನೇತೃತ್ವದಲ್ಲಿ  8, 9 ಮತ್ತು 10ನೇ ತರಗತಿಯ ವಿದ್ಯಾರ್ಥಿಗಳಿಗೆ ಹಮ್ಮಿಕೊಂಡ ಪರೀಕ್ಷಾ ತಯಾರಿ ಹಾಗೂ ವೃತ್ತಿ

ಶಿಕ್ಷಣ ವ್ಯವಸ್ಥೆಯೊಳಗಿನ ಪರೀಕ್ಷೆಗಳು ಜೀವನದ ಅವಿಭಾಜ್ಯ ಅಂಗವೆಂದರಿಯಿರಿ : ಡಾ. ಅನುರಾಧಾ ಕುರುಂಜಿ Read More »

ಕಾವು ಶ್ರೀ ಮುತ್ತು ಮಾರಿಯಮ್ಮ ದೇವಸ್ಥಾನದ ಜಾತ್ರೋತ್ಸವದ ಆಮಂತ್ರಣ ಪತ್ರಿಕೆ ಬಿಡುಗಡೆ

ಕಾವು : ಶ್ರೀ ಮುತ್ತುಮಾರಿಯಮ್ಮ ದೇವಸ್ಥಾನ ಕಾವು ಜಾತ್ರೋತ್ಸವವು ಫೆ. 28 ರಿಂದ ಮೂರು ದಿನಗಳ ಕಾಲ ನಡೆಯಲಿದ್ದು, ಇದರ ಆಮಂತ್ರಣ ಪತ್ರಿಕೆ ಬಿಡುಗಡೆ ಕಾರ್ಯಕ್ರಮ ನಿನ್ನೆ ಸಂಜೆ ದೇವಸ್ಥಾನದ ವಠಾರದಲ್ಲಿ ನಡೆಯಿತು. ಈ ಸಂದರ್ಭದಲ್ಲಿ ಕೆರೆಮಾರು ಶ್ರೀ ಅಯ್ಯಪ್ಪ ಭಜನಾ ಮಂದಿರದ ಸ್ಥಾಪಕಾಧ್ಯಕ್ಷ ಸುಂದರ ಪೂಜಾರಿ ಕೆರೆಮಾರು, ಯುವ ಉದ್ಯಮಿ ಹರೀಶ್ ಕುಂಜತ್ತಾಯ, ಗ್ರಾಮ ಪಂಚಾಯತ್ ಸದಸ್ಯ  ಲೋಕೇಶ್ ಚಾಕೋಟೆ, ಹಿರಿಯ ಕರಸೇವಕರಾದ ನಾರಾಯಣ ಆಚಾರ್ಯ ಮಳಿ, ಹಿರಿಯ ಭಜನಾಪಟು ಶೇಷಪ್ಪ ಗೌಡ ಪರ ನೀರು,

ಕಾವು ಶ್ರೀ ಮುತ್ತು ಮಾರಿಯಮ್ಮ ದೇವಸ್ಥಾನದ ಜಾತ್ರೋತ್ಸವದ ಆಮಂತ್ರಣ ಪತ್ರಿಕೆ ಬಿಡುಗಡೆ Read More »

error: Content is protected !!
Scroll to Top