ಪುತ್ತೂರು

ಮಾ. 9 :  ಗ್ರಾಮ ದೈವ  ಶ್ರೀ ಶಿರಾಡಿ  ರಾಜನ್ ದೈವ  ಹಾಗೂ  ಸಪರಿವಾರ  ದೈವಗಳ ನೇಮೋತ್ಸವ 

ಕುದ್ಮಾರು : ಗ್ರಾಮ ದೈವ  ಶ್ರೀ  ಶಿರಾಡಿ  ರಾಜನ್ ದೈವ ಹಾಗೂ ಸಪರಿವಾರ  ದೈವಗಳ  ನೇಮೋತ್ಸವವು  ಮಾ.  9 ಭಾನುವಾರದಂದು  ಕುದ್ಮಾರು  ಗ್ರಾಮದ  ಅನ್ಯಾಡಿಯಲ್ಲಿ  ಕಟ್ಟತ್ತಾರು ಕಟ್ಟೆ ಯಲ್ಲಿ ನಡೆಯಲಿದೆ. ನೇಮೋತ್ಸವದಂದು ಬೆಳಗ್ಗೆ 8 ಗಂಟೆಗೆ ಗಣಪತಿ ಹೋಮ, ಸಂಜೆ 7 ಗಂಟೆಗೆ ಗ್ರಾಮ ದೈವ ಶ್ರೀ ಶಿರಾಡಿ ರಾಜನ್‍ ದೈವದ ದೈವಸ್ಥಾನ ಅನ್ಯಾಡಿಯ ಗ್ರಾಮ ಚಾವಡಿಯಿಂದ ದೈವದ ಭಂಡಾರ ತೆಗೆಯುವುದು. ರಾತ್ರಿ 8:30 ಕ್ಕೆ ದೈವಕ್ಕೆ ಎಣ್ಣೆ ಬೂಳ್ಯ ನೀಡುವುದು. ರಾತ್ರಿ 9 ಗಂಟೆಗೆ ಅನ್ನಸಂತರ್ಪಣೆ […]

ಮಾ. 9 :  ಗ್ರಾಮ ದೈವ  ಶ್ರೀ ಶಿರಾಡಿ  ರಾಜನ್ ದೈವ  ಹಾಗೂ  ಸಪರಿವಾರ  ದೈವಗಳ ನೇಮೋತ್ಸವ  Read More »

ಯಮುನಾ ರಾಮಣ್ಣ ಗೌಡ ಹೇಮಳ ಅವರಿಗೆ ಶ್ರದ್ಧಾಂಜಲಿ

ಹೇಮಳ : ಇತ್ತೀಚೆಗೆ ನಿಧನರಾದ ಯಮುನಾ ರಾಮಣ್ಣ ಗೌಡ ಹೇಮಳ ಅವರ ವೈಕುಂಠ ಸಮಾರಾಧನೆ ಶುಕ್ರವಾರ (ಇಂದು) ಹೇಮಳದಲ್ಲಿರುವ ಮೃತರ ಮನೆಯಲ್ಲಿ ನಡೆಯಿತು. ಯಮುನಾ ರಾಮಣ್ಣ ಗೌಡ ಅವರು ಫೆ.19 ರಂದು ಅಲ್ಪಕಾಲದ ಅನಾರೋಗ್ಯದಿಂದ ನಿಧನರಾಗಿದ್ದು, ಮಾ.1 ರಂದು ಅವರ ದೇಹಶುದ್ಧಿ ಕಾರ್ಯಕ್ರಮ ನಡೆದಿತ್ತು. ವೈಕುಂಠ ಸಮಾರಾಧಾನೆಗೆ ಬಾಲಕೃಷ್ಣ ಕೆ ಹೇಮಳ ಹಾಗೂ ಕುಟುಂಬಸ್ಥರು ಉಪಸ್ಥಿತರಿದ್ದು, ಬಂಧುಗಳು, ಹಿತೈಷಿಗಳು ಆಗಮಿಸಿ ಮೃತರ ಆತ್ಮಕ್ಕೆ ಚಿರಶಾಂತಿ ಕೋರಿದರು.  

ಯಮುನಾ ರಾಮಣ್ಣ ಗೌಡ ಹೇಮಳ ಅವರಿಗೆ ಶ್ರದ್ಧಾಂಜಲಿ Read More »

ಅನಂತಾಡಿ ಶ್ರೀ ಉಳ್ಳಾಲ್ತಿ ದೈವಸ್ಥಾನದಲ್ಲಿ ಶ್ರೀ ಉಳ್ಳಾಲ್ತಿ ಅಮ್ಮನವರ ಕಾಲಾವಧಿ ಮೆಚ್ಚಿ ಜಾತ್ರೆಯ ಗೊನೆ ಕಾರ್ಯಕ್ರಮ

ಅನಂತಾಡಿ: ಇತಿಹಾಸ ಪ್ರಸಿದ್ದ ಅನಂತಾಡಿ ಶ್ರೀ ಉಳ್ಳಾಲ್ತಿ ದೈವಸ್ಥಾನದಲ್ಲಿ ಶ್ರೀ ಉಳ್ಳಾಲ್ತಿ ಅಮ್ಮನವರ ಕಾಲಾವಧಿ ಮೆಚ್ಚಿ ಜಾತ್ರೆ ಮಾರ್ಚ್ 14 ನೇ ಶುಕ್ರವಾರದಂದು ನಡೆಯಲಿದೆ. ಜಾತ್ರೋತ್ಸವದ ಗೊನೆ ಮುಹೂರ್ತ ಕಾರ್ಯಕ್ರಮ ನಿನ್ನೆ ನಡೆಯಿತು.  ಬಳಿಕ ಶ್ರೀ ಉಳ್ಳಾಲ್ತಿ ಅಮ್ಮನವರಿಗೆ ಪೂಜಾ ವಿಧಿ ವಿಧಾನಗಳು ನಡೆಯಿತು. ಮಾ.13  ಗುರುವಾರ ರಾತ್ರಿ ಭಂಡಾರವೇರಿ ಮಾ. 14 ಶುಕ್ರವಾರ ಬೆಳಗ್ಗೆ 9 ಗಂಟೆಯಿಂದ ಮೆಚ್ಚಿ ಜಾತ್ರೆ ನಡೆಯಲಿದೆ. ಈ ಸಂದರ್ಭದಲ್ಲಿ ನರೇಂದ್ರ ರೈ ನೇಳ್ಕೊಟ್ಟು ಮನೆ, ಅನಂತಾಡಿ ದೊಡ್ಡ ಮನೆತನದವರು ಮತ್ತು

ಅನಂತಾಡಿ ಶ್ರೀ ಉಳ್ಳಾಲ್ತಿ ದೈವಸ್ಥಾನದಲ್ಲಿ ಶ್ರೀ ಉಳ್ಳಾಲ್ತಿ ಅಮ್ಮನವರ ಕಾಲಾವಧಿ ಮೆಚ್ಚಿ ಜಾತ್ರೆಯ ಗೊನೆ ಕಾರ್ಯಕ್ರಮ Read More »

ಮೂರನೇ ವಾರಕ್ಕೆ ದಾಪುಗಾಲಿಟ್ಟ “ಭಾವ ತೀರ ಯಾನ” | ಪುತ್ತೂರಿನ ಭಾರತ್‍ ಸಿನಿಮಾಸ್‍ನಲ್ಲಿ  ಇಂದು ಸಂಜೆ 7:15ಕ್ಕೆ ಚಿತ್ರ ಪ್ರದರ್ಶನ

ಪುತ್ತೂರು : ಸುಳ್ಯದ ಯುವ ಸಂಗೀತ ನಿರ್ದೇಶಕ ಮಯೂರ ಅಂಬೆಕಲ್ಲು ಹಾಗು ತೇಜಸ್‍ ಕಿರಣ್‍ ರವರ ನಿರ್ದೇಶನದಿಂದ ಮೂಡಿಬಂದ “ಭಾವ ತೀರ ಯಾನ” ಸಿನಿಮಾ ರಾಜ್ಯಾದ್ಯಂತ ಪ್ರೇಕ್ಷಕರ  ಮೆಚ್ಚುಗೆ ಪಡೆದು ಇಂದು ಮೂರನೇ ವಾರಕ್ಕೆ ಕಾಲಿಟ್ಟಿದೆ. ಪುತ್ತೂರಿನ ಭಾರತ್ ಸಿನಿಮಾಸ್‍ನಲ್ಲಿ ಭಾವ ತೀರ ಯಾನಕ್ಕೆ ಬೇಡಿಕೆ ಬರುತ್ತಿರುವ ಹಿನ್ನೆಲೆಯಲ್ಲಿ  ಮಾ. 7 ರಂದು ಸಂಜೆ 7.15 ಕ್ಕೆ ಶೋ ನೀಡಲು ನಿರ್ಧರಿಸಲಾಗಿದೆ.  ಕೌಂಟ‌ರ್’ನಲ್ಲಿ ಟಿಕೆಟ್ ಪಡೆದುಕೊಳ್ಳಲು ಕಷ್ಟ ಸಾಧ್ಯವಾಗುವವರು Book My Show Appನಲ್ಲಿ  ticketಗಳನ್ನು ಕಾಯ್ದಿರಿಸಿಕೊಳ್ಳಬಹುದು

ಮೂರನೇ ವಾರಕ್ಕೆ ದಾಪುಗಾಲಿಟ್ಟ “ಭಾವ ತೀರ ಯಾನ” | ಪುತ್ತೂರಿನ ಭಾರತ್‍ ಸಿನಿಮಾಸ್‍ನಲ್ಲಿ  ಇಂದು ಸಂಜೆ 7:15ಕ್ಕೆ ಚಿತ್ರ ಪ್ರದರ್ಶನ Read More »

ಮಾ.9 ವಾಹನ ಚಾಲಕರಿಗೆ ಕಾರ್ಮಿಕ ಕಾರ್ಡು ವಿತರಣೆ | ರಾಜ್ಯ ಸರಕಾರದ ಹೊಸ ಯೋಜನೆಯ ಲಾಭ ಪಡೆದುಕೊಳ್ಳಿ: ಸುದೇಶ್ ಶೆಟ್ಟಿ

ಪುತ್ತೂರು: ಪುತ್ತೂರು ಶಾಸಕ ಅಶೋಕ್ ರೈ ಅವರ ನಿರಂತರ ಹೋರಾಟದ ಫಲವಾಗಿ ಕರ್ನಾಟಕ ಸರಕಾರ ಕಾರ್ಮಿಕ ಇಲಾಖಾ ವ್ಯಾಪ್ತಿಗೆ ಚಾಲಕರನ್ನು ಸೇರಿಸಿದ್ದು, ಇದು ಬಡ ಚಾಲಕರಿಗೆ ವರದಾನವಾಗಿದೆ. ಕಾರ್ಮಿಕ ಇಲಾಖೆಗೆ ಚಾಲಕರು ತನ್ಮ ಹೆಸರು ನೋಂದಾಯಿಸಿಕೊಂಡಲ್ಲಿ ಸರಕಾರದಿಂದ ಸೌಲಭ್ಯವನ್ನು ಪಡೆದುಕೊಳ್ಳಬಹುದಾಗಿದೆ ಎಂದು ರೈ ಎಸ್ಟೇಟ್ಸ್ ಎಜುಕೇಶನಲ್ ಆಂಡ್ ಚಾರಿಟೇಬಲ್ ಟ್ರಸ್ಟ್ ಇದರ ಕಾರ್ಯಾಧ್ಯಕ್ಷರಾದ ಸುದೇಶ್ ಶೆಟ್ಟಿ ಹೇಳಿದರು.  ಅವರು ಪುತ್ತೂರು ಶಾಸಕರ ಕಚೇರಿ ಸಭಾಂಗಣದಲ್ಲಿಕರ್ನಾಟಕ ರಾಜ್ಯ ಮೋಟಾರು ಸಾರಿಗೆ ಮತ್ತು ಇತರ ಸಂಬಂಧಿಸಿದ ಕಾರ್ಮಿಕ ರ ಭದ್ರತಾ

ಮಾ.9 ವಾಹನ ಚಾಲಕರಿಗೆ ಕಾರ್ಮಿಕ ಕಾರ್ಡು ವಿತರಣೆ | ರಾಜ್ಯ ಸರಕಾರದ ಹೊಸ ಯೋಜನೆಯ ಲಾಭ ಪಡೆದುಕೊಳ್ಳಿ: ಸುದೇಶ್ ಶೆಟ್ಟಿ Read More »

ಬೈಕ್‍ ಗೆ ಪಿಕಪ್‍ ಡಿಕ್ಕಿ : ಬೈಕ್‍ ಸವಾರ ಮೃತ್ಯು

ಪುತ್ತೂರು: ಮಾಣಿ ಮೈಸೂರು ಹೆದ್ದಾರಿಯ ಮುಕ್ರಂಪಾಡಿಯಲ್ಲಿ ದ್ವಿಚಕ್ರವಾಹನಕ್ಕೆ ಪಿಕಪ್ ಡಿಕ್ಕಿಹೊಡೆದು ಪರಾರಿಯಾಗಿದ್ದು ಪರಿಣಾಮ ದ್ಚಿಚಕ್ರ ವಾಹನ ಸವಾರ ಗಂಭೀರ ಗಾಯಗೊಂಡು ಮಂಗಳೂರು ಆಸ್ಪತ್ರೆಗೆ ಕರೆತಂದರೂ ಚಿಕಿತ್ಸೆ ಫಲಕಾರಿಯಾಗದೆ ಮೃತ ಘಟನೆ ಇಂದು ಸಂಜೆ ನಡೆದಿದೆ. ಪಂಜ ಕೂತ್ಕುಂಜ ಗ್ರಾಮದ ಸಂಪ ನಿವಾಸಿ ನಿವೃತ್ತ ಶಿಕ್ಷಕ ಕೃಷ್ಣ ಭಟ್ ಮೃತಪಟ್ಟ ಬೈಕ್ ಸವಾರರಾಗಿದ್ದಾರೆ. ಕಾರ್ಯ ನಿಮಿತ್ತ ಕೃಷ್ಣ ಭಟ್ ಅವರು ಪಂಜದಿಂದ ಪುತ್ತೂರಿಗೆ ಬೈಕ್ ನಲ್ಲಿ ಬೈಕ್ ನಲ್ಲಿ ಬರುತ್ತಿದ್ದ ವೇಳೆ ಪಿಕಪ್ ವಾಹನವೊಂದು ಡಿಕ್ಕಿ ಹೊಡೆದಿದೆ. ಈ

ಬೈಕ್‍ ಗೆ ಪಿಕಪ್‍ ಡಿಕ್ಕಿ : ಬೈಕ್‍ ಸವಾರ ಮೃತ್ಯು Read More »

ಮನನೊಂದ ಡೆಂಟಲ್ ಕಾಲೇಜಿನ ವಿದ್ಯಾರ್ಥಿ ಆತ್ಮಹತ್ಯೆಗೆ ಶರಣು  | ಪುತ್ತೂರಿನ ಯುವಕ ನಾಪತ್ತೆ |  ಪ್ರಕರಣ ದಾಖಲು

ಪುತ್ತೂರು:  ಸುಳ್ಯದ ಡೆಂಟಲ್ ಕಾಲೇಜಿನಲ್ಲಿ ಓದುತ್ತಿದ್ದ ಯುವತಿಯೊಬ್ಬಳು ವಸತಿ ಗೃಹದಲ್ಲಿ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡ ಘಟನೆ ನಡೆದಿದೆ. ಬೆಳಗಾವಿ ಜಿಲ್ಲೆಯ ತೆಲಸಂಗ ಗ್ರಾಮದ ಕೃತಿಕಾ ಸಿದ್ದಣ್ಣ ನಿಡೋಣಿ ಆತ್ಮಹತ್ಯೆ ಮಾಡಿಕೊಂಡ ಯುವತಿ ಎನ್ನಲಾಗಿದೆ. ಮೃತಳ ತಂದೆ ನೀಡಿದ ದೂರಿನ ಮೇರೆಗೆ ಪುತ್ತೂರಿನ ನವೀನ್ ಮತ್ತು ವಸತಿ ಗ್ರಹದ ಮೇಲ್ವಿಚಾರಕಿ ತಾರ ಕುಮಾರಿ ಎಂಬವರ ವಿರುದ್ಧ ಪ್ರಕರಣ ದಾಖಲಾಗಿದೆ. ಯುವತಿಗೆ ಪುತ್ತೂರಿನ ನವೀನ್ ಎಂಬಾತ ಪದೇ ಪದೇ ಕರೆ ಮಾಡಿ ತೊಂದರೆ ನೀಡಿ ಫೋಟೋ ವಿಡಿಯೋಗಳನ್ನು ತಂದೆಗೆ

ಮನನೊಂದ ಡೆಂಟಲ್ ಕಾಲೇಜಿನ ವಿದ್ಯಾರ್ಥಿ ಆತ್ಮಹತ್ಯೆಗೆ ಶರಣು  | ಪುತ್ತೂರಿನ ಯುವಕ ನಾಪತ್ತೆ |  ಪ್ರಕರಣ ದಾಖಲು Read More »

ಮಾ.8 ರಿಂದ 14 : ಪುತ್ತೂರು ಶ್ರೀ ಮಹಾಲಿಂಗೇಶ್ವರ ದೇವಸ್ಥಾನದಲ್ಲಿ ಪ್ರಶ್ನಾ ಚಿಂತನೆಯ ಪರಿಹಾರ ಕಾರ್ಯಕ್ರಮ

ಪುತ್ತೂರು: ಮಹತೋಭಾರ ಪುತ್ತೂರು ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ಅಭಿವೃದ್ಧಿ ಕೆಲಸಗಳ ಬಗ್ಗೆ ನಡೆದ ತಾಂಬೂಲ ಪ್ರಶ್ನಾ ಚಿಂತನೆಯ ಪರಿಹಾರ ಕಾರ್ಯಕ್ರಮ ಮಾ. 8 ರಿಂದ 14 ರ ವರೆಗೆ ನಡೆಯಲಿದೆ. ಮಾ. 8 ರಂದು ಸಂಜೆ 6 ರಿಂದ ಅಘೋರ ಹೋಮ, ಬಾದೋಚ್ಚಾಟನೆ, ವನದುರ್ಗಾಹೋಮ ನಡೆಯಲಿದೆ.ಮಾ. 9ರ ಆದಿತ್ಯವಾರ ಬೆಳಗ್ಗೆ 8 ಗಂಟೆಯಿಂದ ಸಾಮೂಹಿಕ ಪ್ರಾರ್ಥನೆ, ಗಣಪತಿ ಹೋಮ, ನವಗ್ರಹ ಶಾಂತಿ ಹೋಮ, ಮೃತ್ಯುಂಜಯ ಹೋಮ, ಸಂಜೆ ಗಂಟೆ 4ರಿಂದ ದುರ್ಗಾಪೂಜೆ, ರಾತ್ರಿ 8ಕ್ಕೆ ದೈವ ತಂಬಿಲ

ಮಾ.8 ರಿಂದ 14 : ಪುತ್ತೂರು ಶ್ರೀ ಮಹಾಲಿಂಗೇಶ್ವರ ದೇವಸ್ಥಾನದಲ್ಲಿ ಪ್ರಶ್ನಾ ಚಿಂತನೆಯ ಪರಿಹಾರ ಕಾರ್ಯಕ್ರಮ Read More »

ಪುತ್ತೂರು ಬಿಜೆಪಿ ಮಹಿಳಾ ಮೋರ್ಚಾದಿಂದ ಮಹಿಳಾ ದಿನಾಚರಣೆ

ಪುತ್ತೂರು: ಪುತ್ತೂರು ಬಿಜೆಪಿ ಮಹಿಳಾ ಮೋರ್ಚಾದಿಂದ ಮಹಿಳಾ ದಿನಾಚರಣೆ ಗುರುವಾರ ಪುತ್ತೂರು ಬಿಜೆಪಿ ಕಚೇರಿಯಲ್ಲಿ ನಡೆಯಿತು. ಬಿಜೆಪಿ ಜಿಲ್ಲಾ ಕಾರ್ಯದರ್ಶಿ ವಿದ್ಯಾ ಆರ್‍. ಗೌರಿ ಪ್ರಾಸ್ತಾವಿಕವಾಗಿ ಮಾತನಾಡಿ, ವೇತನ, ರಜೆ, ಮೂಲಭೂತ ಸೌಲ್ಯಗಳನ್ನು ಪಡೆದುಕೊಳ್ಳುವಲ್ಲಿ ತಾರತಮ್ಯ ಧೋರಣೆ ಇದ್ದ ಸಂದರ್ಭದಲ್ಲಿ ಪುರುಷರಷ್ಟೇ ಸಮಾನ ಹಕ್ಕುಗಳನ್ನು ಪಡೆದುಕೊಳ್ಳಲು 1909 ರಲ್ಲಿ ಮಹಿಳೆಯರು ದಂಗೆ ಎದ್ದು ತಮ್ಮ ಹಕ್ಕುಗಳನ್ನು ಪಡೆದುಕೊಳ್ಳುವಲ್ಲಿ ಪ್ರತಿಭಟನೆ ಮಾಡಿ ಇದೊಂದು ಕ್ರಾಂತಿಯಾದ ಪರಿಣಾಮ ಮಹಿಳಾ ದಿನಾಚರಣೆ ಹಮ್ಮಿಕೊಳ್ಳಲಾಯಿತು. ಮೋದಿ ಸರಕಾರ ಬಂದ ನಂತರ ಮಹಿಳಾ ಸಬಲೀಕರಣಗೊಳ್ಳುವಲ್ಲಿ

ಪುತ್ತೂರು ಬಿಜೆಪಿ ಮಹಿಳಾ ಮೋರ್ಚಾದಿಂದ ಮಹಿಳಾ ದಿನಾಚರಣೆ Read More »

ಪೋಷಕರೊಂದಿಗೆ ಸಂವಾದ ಕಾರ್ಯಕ್ರಮ

ಪುತ್ತೂರು: ವಿವೇಕಾನಂದ ಕನ್ನಡ ಶಾಲೆಯಲ್ಲಿ ಚಟುವಟಿಕೆ ಆಧಾರಿತ ಕಲಿಕೆ ಸಂಬಂಧಿಸಿ ಪೋಷಕರಿಗೆ ಕಾರ್ಯಾಗಾರ ಗುರುವಾರ ನಡೆಯಿತು. ವಿದ್ಯಾಭಾರತಿ ಕ್ಷೇತ್ರೀಯ ಶಿಶುಶಿಕ್ಷಣ ಸಹಪ್ರಮುಖರಾದ ತಾರಾ ಕಾಳಿಚರಣ್ ಬೆಂಗಳೂರು ಶಾಲಾ ಪೂರ್ವ ಪ್ರಾಥಮಿಕ, ಒಂದನೇ ಹಾಗೂ 2ನೇ ತರಗತಿ ಪೋಷಕರೊಂದಿಗೆ ಮಾತನಾಡಿ, ಸೊನ್ನೆಯಿಂದ 9 ವರ್ಷದ ವರೆಗಿನ ಮಗುವಿನ ಬೆಳವಣಿಗೆಯಲ್ಲಿ ಮನೆ, ಶಾಲೆ, ಸಮಾಜ ಪ್ರಮುಖ ಪಾತ್ರ ವಹಿಸುತ್ತಿದ್ದು ಮನೆ ಮತ್ತು ಶಾಲೆ ಒಂದೇ ನಾಣ್ಯದ ಮುಖಗಳಂತೆ ಕಾರ್ಯನಿರ್ವಹಿಸಬೇಕು. ಈ ಸಂದರ್ಭ ಮಗು ನೋಡಿ ಕಲಿಯುವ ಸಂಗತಿಗಳೇ ಅತೀ ಹೆಚ್ಚಾಗಿರುವುದರಿಂದ

ಪೋಷಕರೊಂದಿಗೆ ಸಂವಾದ ಕಾರ್ಯಕ್ರಮ Read More »

error: Content is protected !!
Scroll to Top