ಪುತ್ತೂರು

ಮಂಗಳೂರು ವಿಶ್ವವಿದ್ಯಾನಿಲಯ ಮಟ್ಟದ ಅಂತರ್ ಕಾಲೇಜು ಖೋ ಖೋ ಪಂದ್ಯಾಟ | ವಿವೇಕಾನಂದ ಕಾಲೇಜಿನ ಬಾಲಕರ ತಂಡ ದ್ವಿತೀಯ, ಬಾಲಕಿಯರ ತಂಡ ತೃತೀಯ

ಪುತ್ತೂರು: ಮೂಡಬಿದಿರೆ ಆಳ್ವಾಸ್ ಕಾಲೇಜಿನಲ್ಲಿ ನಡೆದ ಪ್ರಸ್ತುತ ವರ್ಷದ ಮಂಗಳೂರು ವಿಶ್ವವಿದ್ಯಾನಿಲಯ ಮಟ್ಟದ ಅಂತರ್ ಕಾಲೇಜು ಖೋ ಖೋ ಪಂದ್ಯಾಟದಲ್ಲಿ ವಿವೇಕಾನಂದ ಕಾಲೇಜಿನ ಬಾಲಕರ ತಂಡವು ದ್ವಿತೀಯ ಹಾಗೂ ಬಾಲಕಿಯರ ತಂಡವು ತೃತೀಯ ಸ್ಥಾನ ಪಡೆದುಕೊಂಡಿದೆ. ಬಾಲಕಿಯರ ವಿಭಾಗದಲ್ಲಿ ದ್ವಿತೀಯ ಬಿಎ ವಿದ್ಯಾರ್ಥಿನಿ ದಿವ್ಯಾ ಆಲ್ ರೌಂಡರ್ ಪ್ರಶಸ್ತಿಯನ್ನು ಹಾಗೂ ಬಾಲಕರ ವಿಭಾಗದಲ್ಲಿ ಪ್ರಥಮ ಬಿಎಸ್ ಸ್ಸಿ ವಿದ್ಯಾರ್ಥಿ ಸುಹಾಸ್ ಬೆಸ್ಟ್ ಅಟ್ಯಾಕರ್ ಪ್ರಶಸ್ತಿಯನ್ನು ಪಡೆದುಕೊಂಡಿದ್ದಾರೆ. ಅವರಿಗೆ ಕಾಲೇಜಿನ ದೈಹಿಕ ಶಿಕ್ಷಣ ನಿರ್ದೇಶಕ ರವಿಶಂಕರ್ ವಿ.ಎಸ್, ಡಾ.ಜ್ಯೋತಿಕುಮಾರಿ […]

ಮಂಗಳೂರು ವಿಶ್ವವಿದ್ಯಾನಿಲಯ ಮಟ್ಟದ ಅಂತರ್ ಕಾಲೇಜು ಖೋ ಖೋ ಪಂದ್ಯಾಟ | ವಿವೇಕಾನಂದ ಕಾಲೇಜಿನ ಬಾಲಕರ ತಂಡ ದ್ವಿತೀಯ, ಬಾಲಕಿಯರ ತಂಡ ತೃತೀಯ Read More »

ಮಾ.22 ರಿಂದ 24 : ವಿವೇಕಾನಂದ ಸ್ವಾಯತ್ತ ಕಾಲೇಜಿನ 60ನೇ ವರ್ಷದ ಸಂಭ್ರಮಾಚರಣೆ, ಸಪ್ತಪರ್ಣೋತ್ಸವ, ವಿದ್ಯಾರ್ಥಿ ಸಂಘದ ದಿನಾಚರಣೆ, ವಾರ್ಷಿಕೋತ್ಸವ ಸಮಾರಂಭ

ಪುತ್ತೂರು: ವಿವೇಕಾನಂದ ಕಲಾ ವಿಜ್ಞಾನ ಮತ್ತು ವಾಣಿಜ್ಯ ಮಹಾವಿದ್ಯಾಲಯ (ಸ್ವಾಯತ್ತ) ಇದರ ಸ್ನಾತಕೋತರ ವಿಭಾಗದ ದಶಮಾನೋತ್ಸವ ಮತ್ತು ಪದವಿ ಕಾಲೇಜಿನ 60ನೇ ವರ್ಷದ ಸಂಭ್ರಮಾಚರಣೆ ಮಾ.22 ರಂದು ನಡೆಯಲಿದೆ. ಮಾ.23ಕ್ಕೆ ಸಪ್ತಪರ್ಣೋತ್ಸವ, ವಿದ್ಯಾರ್ಥಿ ಸಂಘದ ದಿನಾಚರಣೆ ಹಾಗು ಮಾ.24ಕ್ಕೆ ಕಾಲೇಜು ವಾರ್ಷಿಕೋತ್ಸವ ವಿವೇಕಾನಂದ ಸ್ವಾಯತ್ತ ಮಹಾವಿದ್ಯಾಲಯದ ಆವರಣದಲ್ಲಿ ಜರುಗಲಿದೆ ಎಂದು ವಿವೇಕಾನಂದ ಕಲಾ, ವಿಜ್ಞಾನ ಮತ್ತು ವಾಣಿಜ್ಯ ಮಹಾವಿದ್ಯಾಲಯ (ಸ್ವಾಯತ್ತ) ಇದರ ಸಂಚಾಲಕ, ನ್ಯಾಯವಾದಿ ಮುರಳಿಕೃಷ್ಣ ಕೆ.ಎನ್. ತಿಳಿಸಿದ್ದಾರೆ. ಪತ್ರಿಕಾಗೋಷ್ಠಿಯಲ್ಲಿ ಅವರು ಮಾತನಾಡಿ, ಸ್ನಾತಕೋತ್ತರ ವಿಭಾಗದ ದಶಮಾನೋತ್ಸವ

ಮಾ.22 ರಿಂದ 24 : ವಿವೇಕಾನಂದ ಸ್ವಾಯತ್ತ ಕಾಲೇಜಿನ 60ನೇ ವರ್ಷದ ಸಂಭ್ರಮಾಚರಣೆ, ಸಪ್ತಪರ್ಣೋತ್ಸವ, ವಿದ್ಯಾರ್ಥಿ ಸಂಘದ ದಿನಾಚರಣೆ, ವಾರ್ಷಿಕೋತ್ಸವ ಸಮಾರಂಭ Read More »

ಬೆಳಗಾವಿ ವಿವಿ ಎಂಜಿನಿಯರಿಂಗ್‍ ಕಾಲೇಜುಗಳ ರಾಜ್ಯಮಟ್ಟದ ಅಥ್ಲೆಟಿಕ್ಸ್ ಕೂಟ | ಪುತ್ತೂರಿನ ಅನಘಾ 4×400 ಹರ್ಡಲ್ಸ್ ನಲ್ಲಿ ಪ್ರಥಮ

ಪುತ್ತೂರು :  ಬೆಳಗಾವಿಯ ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವವಿದ್ಯಾಲಯ (ವಿಟಿಯು) ವ್ಯಾಪ್ತಿಯ ಎಂಜಿನಿಯರಿಂಗ್ ಕಾಲೇಜುಗಳ ರಾಜ್ಯಮಟ್ಟದ ಅಥ್ಲೆಟಿಕ್ಸ್ ಕೂಟದ ಮಹಿಳಾ ವಿಭಾಗದ 4×400 ಮೀ. ಹರ್ಡಲ್ಸ್ ನಲ್ಲಿ ಪುತ್ತೂರಿನ ಕೆ.ಎ.ಅನಘಾ ಪ್ರಥಮ ಸ್ಥಾನ ಪಡೆದಿದ್ದಾರೆ. ಅನಘಾ ಪುತ್ತೂರು ನಗರ ಮಂಡಲ ಬಿಜೆಪಿ ಪ್ರಧಾನ ಕಾರ್ಯದರ್ಶಿ ಅನಿಲ್ ತೆಂಕಿಲ ಹಾಗೂ ಕವಿತ ಅನಿಲ್ ದಂಪತಿ ಪುತ್ರಿ. ಪ್ರಸ್ತುತ ಮಂಗಳೂರಿನ ಸೆಂಟ್‍ ಜೋಸೆಫ್‍ ಎಂಜಿನಿಯರಿಂಗ್‍ ಕಾಲೇಜಿನ ವಿದ್ಯಾರ್ಥಿನಿಯಾಗಿದ್ದಾರೆ.

ಬೆಳಗಾವಿ ವಿವಿ ಎಂಜಿನಿಯರಿಂಗ್‍ ಕಾಲೇಜುಗಳ ರಾಜ್ಯಮಟ್ಟದ ಅಥ್ಲೆಟಿಕ್ಸ್ ಕೂಟ | ಪುತ್ತೂರಿನ ಅನಘಾ 4×400 ಹರ್ಡಲ್ಸ್ ನಲ್ಲಿ ಪ್ರಥಮ Read More »

ರಾಷ್ಟ್ರೀಯ ಮಟ್ಟದ ಮ್ಯಾನೇಜ್ಮೆಂಟ್ ಅಂಡ್ ಕಲ್ಚರ್ ಫೆಸ್ಟಿವಲ್ ನಲ್ಲಿ ಕೆ.ಎಸ್.ಎಸ್ ಕಾಲೇಜಿಗೆ ಬಹುಮಾನ

ಶ್ರೀದೇವಿ ಇನ್ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ ಮಂಗಳೂರು ಅವರು ಆಯೋಜಿಸಿರುವ ರಾಷ್ಟ್ರೀಯ ಮಟ್ಟದ ಮ್ಯಾನೇಜ್ಮೆಂಟ್ ಹಾಗೂ ಕಲ್ಚರಲ್ ಫೆಸ್ಟ್ ಕಾರ್ಯಕ್ರಮ ನಡೆಯಿತು. ಇದರಲ್ಲಿ ಕುಕ್ಕೆ ಶ್ರೀ ಸುಬ್ರಹ್ಮಣ್ಯೇಶ್ವರ ಮಹಾವಿದ್ಯಾಲಯದ ವಿದ್ಯಾರ್ಥಿಗಳು ಭಾಗವಹಿಸಿ ಬ್ರಾಂಡ್ ರಂಗೋಲಿ ಸ್ಪರ್ಧೆಯಲ್ಲಿ  ಸಿಂಚನ ಪಿ ಹಾಗೂ ಭಾರತಿ ಎಂ ದ್ವಿತೀಯ ಸ್ಥಾನವನ್ನು ಪಡೆದುಕೊಂಡಿದ್ದಾರೆ. ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಕಾಲೇಜ್ (ಸ್ವಾಯತ್ತ) ಉಜಿರೆ, ಆಯೋಜಿಸಿದಂತಹ ರಾಷ್ಟ್ರೀಯ ಮಟ್ಟದ ಅಂತರ್ ಕಾಲೇಜು ಕಾಮರ್ಸ್ ಹಾಗೂ ಮ್ಯಾನೇಜ್ಮೆಂಟ್ ಫೆಸ್ಟ್ ನಲ್ಲಿ  ಕುಕ್ಕೆ ಶ್ರೀ ಸುಬ್ರಹ್ಮಣ್ಯೇಶ್ವರ ಮಹಾವಿದ್ಯಾಲಯದ ವಿದ್ಯಾರ್ಥಿಗಳು ಭಾಗವಹಿಸಿ

ರಾಷ್ಟ್ರೀಯ ಮಟ್ಟದ ಮ್ಯಾನೇಜ್ಮೆಂಟ್ ಅಂಡ್ ಕಲ್ಚರ್ ಫೆಸ್ಟಿವಲ್ ನಲ್ಲಿ ಕೆ.ಎಸ್.ಎಸ್ ಕಾಲೇಜಿಗೆ ಬಹುಮಾನ Read More »

ಗೃಹ ನಿರ್ಮಾಣ ಸಹಕಾರ ಸಂಘದ ಅಧ್ಯಕ್ಷರಾಗಿ ಪಾಂಡುರಂಗ ಹೆಗ್ಡೆ ಮತ್ತು ಉಪಾಧ್ಯಕ್ಷರಾಗಿ ರಾಮಮೋಹನ್ ರೈ ಆಯ್ಕೆ

ಪುತ್ತೂರು: ಬೊಳುವಾರಿನಲ್ಲಿ ಕಾರ್ಯಾಚರಿಸುತ್ತಿರುವ ದ.ಕ.ಜಿಲ್ಲಾ ಗೃಹ ನಿರ್ಮಾಣ ಸಹಕಾರ ಸಂಘದ ಮುಂದಿನ 5 ವರ್ಷಗಳ ಅವಧಿಗೆ ಅಧ್ಯಕ್ಷರಾಗಿ ಪಾಂಡುರಂಗ ಹೆಗ್ಡೆ ಮತ್ತು ಉಪಾಧ್ಯಕ್ಷರಾಗಿ ರಾಮಮೋಹನ್ ರೈ ಅವರು ಅಯ್ಕೆಯಾಗಿದ್ದಾರೆ. ಗೃಹ ನಿರ್ಮಾಣ ಸಹಕಾರ ಸಂಘದ ಚುನಾವಣೆಗೆ ಮಾ.20ಕ್ಕೆ ನಾಮಪತ್ರ ಸಲ್ಲಿಸಿ, ಅದೇ ದಿನ ನಾಮಪತ್ರ ಹಿಂಪಡೆಯಲು ಹಾಗು ಬಳಿಕ ಮತದಾನವೂ ಒಂದೆ ದಿನಕ್ಕೆ ನಿಗದಿ ಮಾಡಿದಂತೆ ಎಲ್ಲಾ 13 ಸದಸ್ಯರು ಅವಿರೋಧವಾಗಿ ಆಯ್ಕೆಗೊಂಡಿದ್ದಾರೆ. ಅಜಿತ್ ಕುಮಾರ್ ಕೆ, ರಾಮಮೋಹನ್ ರೈ ಎಂ.ಕೆ, ರಘುನಾಥ ಬಿ, ಎ.ನಾಗೇಶ ರಾವ್,

ಗೃಹ ನಿರ್ಮಾಣ ಸಹಕಾರ ಸಂಘದ ಅಧ್ಯಕ್ಷರಾಗಿ ಪಾಂಡುರಂಗ ಹೆಗ್ಡೆ ಮತ್ತು ಉಪಾಧ್ಯಕ್ಷರಾಗಿ ರಾಮಮೋಹನ್ ರೈ ಆಯ್ಕೆ Read More »

ವೀರಮಂಗಲ ಪಿಎಂಶ್ರೀ ಶಾಲೆಯಲ್ಲಿ *ಅಖಿಲನಿನಾದ “

ಪುತ್ತೂರು: ವೀರಮಂಗಲ ಪಿಎಂಶ್ರೀ ಶಾಲೆಯಲ್ಲಿ ಮಕ್ಕಳಿಂದು ಅಖಿಲ ನಿನಾದದ ಸವಿಯುಂಡರು. ಪರೀಕ್ಷೆ ಮುಗಿಸಿ ಸಂಗೀತ ಕ್ಷೇತ್ರದಲ್ಲಿ ಸಾಧನೆಯನ್ನು ಗುರುತಿಸಲು ಸಂಗೀತ ವೇದಿಕೆಯನ್ನು ಸಜ್ಜು ಗೊಳಿಸಲಾಗಿತ್ತು. ವಿಶೇಷವಾಗಿ  ಸಂಪನ್ಮೂಲ ವ್ಯಕ್ತಿಯನ್ನು ಆಹ್ವಾನಿಸಿ ಆ ಮೂಲಕ ಸಂಗೀತ ಭೂಮಿಕೆಯನ್ನು ನಿರ್ಮಿಸಲಾಗಿತ್ತು. ಸಂಗೀತ ದೇಸಿ ಕಲೆ : ಸಂಗೀತವೊಂದು ಸಮ್ಮೋಹನ ಕಲೆ. ಅದು ಎಲ್ಲಾ ಜೀವಿಗಳಿಗೂ ಇಷ್ಟವಾಗುವ ಕಲೆ. ಸಂಗೀತವನ್ನು ಆಲಿಸಿದ ದನಗಳು ಯತೇಚ್ಛವಾಗಿ ಹಾಲು ಕೊಡುತ್ತದೆ. ಮರಗಳು ಹೂ,ಕಾಯಿ, ಹಣ್ಣು ಕೊಡುತ್ತದೆ. ಇಡೀ ಪರಿಸರವೇ ಧನಾತ್ಮಕವಾಗಿ ಇರುತ್ತದೆ. ಅಂತಹ ಅದ್ಭುತ

ವೀರಮಂಗಲ ಪಿಎಂಶ್ರೀ ಶಾಲೆಯಲ್ಲಿ *ಅಖಿಲನಿನಾದ “ Read More »

ಮಾ.22-23 : ಬಾಲ್ಯೊಟ್ಟು ನಮ್ಮ ಮನೆಯಲ್ಲಿ ರಾಜನ್ ದೈವದ ಧರ್ಮನೇಮೋತ್ಸವ

ಪುತ್ತೂರು : ಬಾಲ್ಯೊಟ್ಟು ನಮ್ಮ ಮನೆಯಲ್ಲಿ ರಾಜನ್ ದೈವದ ಧರ್ಮನೇಮ ಮಾ.22 ಶನಿವಾರದಿಂದ ಮಾ. 23 ಭಾನುವಾರದವರೆಗೆ ನಡೆಯಲಿದೆ.ಮಾ.22 ರಂದು ಶನಿವಾರ ಬೆಳಗ್ಗೆ 4ಗಂಟೆಗೆ ಶ್ರೀ ರಣಮಂಗಲ ಸುಬ್ರಹ್ಮಣ್ಯೇಶ್ವರ ಕ್ಷೇತ್ರದಿಂದ ದೈವಗಲ ಭಂಡಾರ ಶ್ರೀ ವಿಷ್ಣುಮೂರ್ತಿ ದೇವಾಲಯಕ್ಕೆ ಆಗಮಿಸಲಿದೆ. ರಾತ್ರಿ 7ಗಂಟೆಗೆ ಶ್ರೀ ಕ್ಷೇತ್ರದಲ್ಲಿ ದೈವಗಳ ತಂಬಿಲ, ರಾತ್ರಿ 8ಗಂಟೆಗೆ ಶ್ರೀ ಕ್ಷೇತ್ರದಲ್ಲಿ ಶ್ರೀ ವಿಷ್ಣುಮೂರ್ತಿ ದೇವರಿಗೆ ರಂಗಪೂಜೆ, ರಾತ್ರಿ 9ಗಂಟೆಗೆ ಶ್ರೀ ಕ್ಷೇತ್ರದಿಂದ ದೈವಗಳ ಭಂಡಾರ ಬಾಲ್ಯೊಟ್ಟು ಮನೆಗೆ ಬರಲಿದೆ. ಬಳಿಕ ಅನ್ನಸಂತರ್ಪಣೆ ನಡೆಯಲಿದೆ. ಮಾ,23

ಮಾ.22-23 : ಬಾಲ್ಯೊಟ್ಟು ನಮ್ಮ ಮನೆಯಲ್ಲಿ ರಾಜನ್ ದೈವದ ಧರ್ಮನೇಮೋತ್ಸವ Read More »

ಒಂದು ತಿಂಗಳು ಪೂರೈಸಿದ ಸಿನಿಮಾ – ಭಾವ ತೀರ ಯಾನ | 21ರಂದು ಸಂಜೆ 4 ಗಂಟೆಯ ಪ್ರದರ್ಶನದಲ್ಲಿ ಸಂಭ್ರಮಾಚರಣೆ| ಚಿತ್ರ ತಂಡದ ನಟ-ನಟಿಯರ ಉಪಸ್ಥಿತಿ-ಸಂವಾದ

ಪುತ್ತೂರು : ಫೆಬ್ರುವರಿ 21ರಂದು ರಾಜ್ಯಾದ್ಯಂತ ತೆರೆ ಕಂಡು ಪ್ರೇಕ್ಷಕರ ಮನಗೆದ್ದ ಇದೀಗ 30 ದಿನಗಳ ಯಶಸ್ವೀ ಪ್ರದರ್ಶನದೊಂದಿಗೆ ಮುನ್ನುಗ್ಗುತ್ತಿರುವ ಭಾವ ತೀರ ಯಾನ ಚಿತ್ರ ಮಾರ್ಚ್ 21ರಂದು ತಿಂಗಳ ಸಂಭ್ರಮಾಚರಣೆ ನಡೆಸಲಿದೆ. ನ್ಯೂಸ್ ಪುತ್ತೂರು ಮೀಡಿಯಾ ಪಾರ್ಟ್ನರ್ ಆಗಿ ಪುತ್ತೂರಿನ GL ONE ಮಾಲ್ ನ ಭಾರತ್ ಸಿನಿಮಾಸ್ ನಲ್ಲಿ ‘ಭಾವ ತೀರ ಯಾನ’ ತೆರೆ ಕಂಡಿತ್ತು. ಮಾರ್ಚ್ 21ರಂದು  ಸಂಜೆ 4ಕ್ಕೆ ನಡೆಯುವ ಪ್ರದರ್ಶನದಲ್ಲಿ ಚಿತ್ರತಂಡದ ತಾರೆಯರು ಮತ್ತು ನಿರ್ಮಾಪಕ, ನಿರ್ದೇಶಕರು ಭಾಗವಹಿಸಲಿದ್ದಾರೆ. ಇದೇ

ಒಂದು ತಿಂಗಳು ಪೂರೈಸಿದ ಸಿನಿಮಾ – ಭಾವ ತೀರ ಯಾನ | 21ರಂದು ಸಂಜೆ 4 ಗಂಟೆಯ ಪ್ರದರ್ಶನದಲ್ಲಿ ಸಂಭ್ರಮಾಚರಣೆ| ಚಿತ್ರ ತಂಡದ ನಟ-ನಟಿಯರ ಉಪಸ್ಥಿತಿ-ಸಂವಾದ Read More »

ಧಮ೯ಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಜ್ಞಾನವಿಕಾಸ ಕಾರ್ಯಕ್ರಮದಡಿಯಲ್ಲಿ 3 ತಿಂಗಳ ಉಚಿತ ಟೈಲರಿಂಗ್ ಕ್ಲಾಸ್ ತರಬೇತಿಯ ಸಮಾರೋಪ ಕಾಯ೯ಕ್ರಮ

ಪುತ್ತೂರು ತಾಲೂಕಿನ  ಜ್ಞಾನವಿಕಾಸ ಕಾರ್ಯಕ್ರಮದಡಿಯಲ್ಲಿ 3 ತಿಂಗಳ ಉಚಿತ  ಟೈಲರಿಂಗ್ ಕ್ಲಾಸ್ ತರಬೇತಿ ನಡೆಸಿದ್ದು ಮಾ.13 ರಂದು ಸಮಾರೋಪ ಸಮಾರಂಭ ಕಾರ್ಯಕ್ರಮ ನಡೆಯಿತು. ಕಾರ್ಯಕ್ರಮದ ಉದ್ಘಾಟನೆಯನ್ನು ಹಾಲು ಉತ್ಪಾದಕರ ಸಹಕಾರ ಸಂಘದ ಅಧ್ಯಕ್ಷರಾದ ವಸಂತ ಇವರು ನೆರವೇರಿಸಿದರು. ಕಾರ್ಯಕ್ರಮಕ್ಕೆ ಆಗಮಿಸಿದ ಜ್ಞಾನವಿಕಾಸ ವಿಭಾಗದ ನಿರ್ದೇಶಕರಾದ ವಿಠಲ್ ಪೂಜಾರಿ   ಮಾತನಾಡಿ, ತಾಯಿಯ ತ್ಯಾಗ, ಪ್ರೀತಿ, ಕರುಣೆ ಎಂದರೆ ಹೇಗೆ, ತಂದೆ ಮಕ್ಕಳಿಗೆ ತೋರಿಸುವ ಪ್ರೀತಿ ಮಮಕಾರ ಹೇಗೆ ಮಕ್ಕಳಿಗೆ ತಾವು ಕೇಳಿದಂತಹ ವಸ್ತುಗಳನ್ನು ನೇರವಾಗಿ ತೆಗೆದುಕೊಡುವ ಮೊದಲು ತಂದೆ-ತಾಯಿಯ

ಧಮ೯ಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಜ್ಞಾನವಿಕಾಸ ಕಾರ್ಯಕ್ರಮದಡಿಯಲ್ಲಿ 3 ತಿಂಗಳ ಉಚಿತ ಟೈಲರಿಂಗ್ ಕ್ಲಾಸ್ ತರಬೇತಿಯ ಸಮಾರೋಪ ಕಾಯ೯ಕ್ರಮ Read More »

ಮಾ. 22: ಸಂತ ಫಿಲೋಮಿನಾ ಕಾಲೇಜಿನಲ್ಲಿ ‘ಕಾಲೇಜಿನ ಸ್ವಾಯತ್ತ ಸ್ಥಾನಮಾನದ’ ಉದ್ಘಾಟನೆ

ಪುತ್ತೂರು: ಕ್ಯಾಥೊಲಿಕ್ ಶಿಕ್ಷಣ ಮಂಡಳಿಯ ಅಧೀನಕ್ಕೊಳಪಟ್ಟ ಪುತ್ತೂರಿನ ಸಂತ  ಫಿಲೋಮಿನಾ ಕಾಲೇಜು, ಕರ್ನಾಟಕ ಸರಕಾರದ ಅನುಮೋದನೆಯೊಂದಿಗೆ, ಮಂಗಳೂರು ವಿಶ್ವವಿದ್ಯಾಲಯ ಮತ್ತು ಯುಜಿಸಿಯಿಂದ ಮಂಗಳೂರು ವಿಶ್ವವಿದ್ಯಾನಿಯದ ಅಧೀನಕ್ಕೊಳಪಟ್ಟ ಸ್ವಾಯತ್ತ ಕಾಲೇಜು ಎಂದು ಘೋಷಿಸಲ್ಪಟ್ಟಿದ್ದು, ಕಾಲೇಜಿಗೆ ದೊರೆತ ಸ್ವಾಯತ್ತ ಸ್ಥಾನಮಾನದ ಉದ್ಘಾಟನಾ ಸಮಾರಂಭ ಮಾ. 22 ರಂದು ಕಾಲೇಜಿನ ಸಭಾಂಗಣದಲ್ಲಿ ಎಂದು ಮಾಯಿದೇ ದೇವುಸ್ ಚರ್ಚ್‍ ಪ್ರಧಾನ ಧರ್ಮಗುರು, ಕಾಲೇಜಿನ ಸಂಚಾಲಕ ಫಾ.ಲಾರೆನ್ಸ್‍ ಮಸ್ಕರೇನಸ್ ತಿಳಿಸಿದ್ದಾರೆ. ಬುಧವಾರ ಪತ್ರಿಕಾಗೋಷ್ಠಿಯಲ್ಲಿ ಅವರು ಮಾತನಾಡಿ, ಕಾರ್ಯಕ್ರಮದ ಅಧ್ಯಕ್ಷತೆಯನ್ನು ಮಂಗಳೂರು ಧರ್ಮಪ್ರಾಂತ್ಯದ ಬಿಷಪ್ ಅತಿ

ಮಾ. 22: ಸಂತ ಫಿಲೋಮಿನಾ ಕಾಲೇಜಿನಲ್ಲಿ ‘ಕಾಲೇಜಿನ ಸ್ವಾಯತ್ತ ಸ್ಥಾನಮಾನದ’ ಉದ್ಘಾಟನೆ Read More »

error: Content is protected !!
Scroll to Top