ಪುತ್ತೂರು

ಪ್ರತಿಷ್ಠಿತ “ಪ್ರೇರಣಾ” ಸಂಸ್ಥೆಯ ವತಿಯಿಂದ ಐದು ದಿನಗಳ “ಪ್ರೇರಣಾ ಬೇಸಿಗೆ ಶಿಬಿರ” | ಒಕ್ಕಲಿಗ ಸೌಧ ಸಭಾಭವನದಲ್ಲಿ ಶಿಬಿರಕ್ಕೆ ಚಾಲನೆ

ಪುತ್ತೂರು: ಪುತ್ತೂರಿನ ಏಳ್ಮುಡಿಯಲ್ಲಿರುವ ಕೆನರಾ ಬ್ಯಾಂಕ್‍ ಬಳಿ ಕಾರ್ಯಾಚರಿಸುತ್ತಿರುವ ಪ್ರತಿಷ್ಠಿತ “ಪ್ರೇರಣಾ” ಸಂಸ್ಥೆ ಹಾಗೂ ಸಮರ್ಪಣಾ ಚಾರಿಟೇಬಲ್ ಟ್ರಸ್ಟ್ ನ ವತಿಯಿಂದ ಐದು ದಿನಗಳ ಕಾಲ ನಡೆಯುವ “ಪ್ರೇರಣಾ ಬೇಸಿಗೆ ಶಿಬಿರ”ಕ್ಕೆ ಶುಕ್ರವಾರ ಖಾಸಗಿ ಬಸ್‍ ನಿಲ್ದಾಣದ ಬಳಿ ಇರುವ ಒಕ್ಕಲಿಗ ಸೌಧ ಸಭಾಭವನದಲ್ಲಿ ಚಾಲನೆ ನೀಡಲಾಯಿತು. ಒಕ್ಕಲಿಗ ಸ್ವಸಹಾಯ ಟ್ರಸ್ಟ್‍ ಅಧ್ಯಕ್ಷ ಡಿ.ವಿ.ಮನೋಹರ್ ಶಿಬಿರವನ್ನು ಉದ್ಘಾಟಿಸಿ ಮಾತನಾಡಿ, ನೈಸರ್ಗಿಕ ಪರಿಸರವಾದ ಹಳ್ಳಿಗಳಲ್ಲಿ ಜೀವಿಸುವುದೇ ಪುಣ್ಯ. ಈ ನಿಟ್ಟಿನಲ್ಲಿ ಮಕ್ಕಳಿಗೆ ನೈಸರ್ಗಿಕ ಪರಿಸರದ ಕುರಿತು ತಿಳಿದುಕೊಳ್ಳಲು ಅಲ್ಲಿನ […]

ಪ್ರತಿಷ್ಠಿತ “ಪ್ರೇರಣಾ” ಸಂಸ್ಥೆಯ ವತಿಯಿಂದ ಐದು ದಿನಗಳ “ಪ್ರೇರಣಾ ಬೇಸಿಗೆ ಶಿಬಿರ” | ಒಕ್ಕಲಿಗ ಸೌಧ ಸಭಾಭವನದಲ್ಲಿ ಶಿಬಿರಕ್ಕೆ ಚಾಲನೆ Read More »

ಅನಾರೋಗ್ಯ ಪೀಡಿತೆ ಸೀತಾ ಆಶ್ರಮಕ್ಕೆ ಸೇರ್ಪಡೆ

ಪುತ್ತೂರು: ಕಬಕ ಗ್ರಾಮ ಪಂಚಾಯತ್‍ ನ  ಮುರ ಎಂಬಲ್ಲಿ ವಾಸವಾಗಿರುವ ಅನಾರೋಗ್ಯ ಪೀಡಿತೆ ಸೀತಾ ಎಂಬವರನ್ನು ಸಮಾಜ ಸೇವಕರಾದ ಕನ್ನಡ ಸಾಹಿತ್ಯ ಪರಿಷತ್ ನ ಅಧ್ಯಕ್ಷ ಉಮೇಶ್ ನಾಯಕ್, ಎವಿಜಿ ಅಸೋಸಿಯೇಟ್ ಇದರ ಮಾಲಕರಾದ  ಎ.ವಿ. ನಾರಾಯಣ ಪುತ್ತೂರು ಮತ್ತು ಮೋಹನ್ ಕಬಕ ಅವರ ಸಂಪೂರ್ಣ ಸಹಕಾರದೊಂದಿಗೆ ಆಶ್ರಮಕ್ಕೆ ಸೇರಿಸಲಾಯಿತು. ಕಳೆದ ಏಳು ತಿಂಗಳಿಂದ ಅನಾರೋಗ್ಯ ಪೀಡಿತರಾಗಿ ಪುತ್ತೂರು ಸರಕಾರಿ ಆಸ್ಪತ್ರೆ ಮತ್ತು ವೆನ್ಲಾಕ್ ಜಿಲ್ಲಾ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು. ಇದೀಗ ಸೀತಾ ಅವರು ಪುತ್ತೂರು ಸರಕಾರಿ

ಅನಾರೋಗ್ಯ ಪೀಡಿತೆ ಸೀತಾ ಆಶ್ರಮಕ್ಕೆ ಸೇರ್ಪಡೆ Read More »

51 ನೇ ದಿನಕ್ಕೆ ಕಾಲಿರಿಸಿದ ಭಾವ ತೀರ ಯಾನ |  ನಾಳೆ ಬೆಳಗ್ಗೆ 11 ಗಂಟೆಗೆ ಚಿತ್ರ ಪ್ರದರ್ಶನ

ಪುತ್ತೂರು : ಸುಳ್ಯದ ಯುವ ಸಂಗೀತ ಹಾಗೂ ಚಿತ್ರ ನಿರ್ದೇಶಕ ಮಯೂರ ಅಂಬೆಕಲ್ಲು ನಿರ್ಮಾಣದ “ಭಾವ ತೀರ ಯಾನ’ ಸಿನಿಮಾ ಪ್ರೇಕ್ಷಕರ ಮೆಚ್ಚುಗೆ ಪಡೆದು 51ನೇ ವಾರದಲ್ಲಿ ಯಶಸ್ವಿಯಾಗಿ ಮುನ್ನಡೆಯುತ್ತಿದ್ದು ಚಿತ್ರಕ್ಕೆ ವ್ಯಾಪಕ ಬೆಂಬಲ ವ್ಯಕ್ತವಾಗುತ್ತಿದೆ. ನಾಳೆ ಏ.12 ಶನಿವಾರದಂದು ಬೆಳಗ್ಗೆ 11:00 ಗಂಟೆಗೆ ಚಿತ್ರ ಪ್ರದರ್ಶನಗೊಳ್ಳಲಿದೆ.

51 ನೇ ದಿನಕ್ಕೆ ಕಾಲಿರಿಸಿದ ಭಾವ ತೀರ ಯಾನ |  ನಾಳೆ ಬೆಳಗ್ಗೆ 11 ಗಂಟೆಗೆ ಚಿತ್ರ ಪ್ರದರ್ಶನ Read More »

ಅಕ್ಷಯ ಕಾಲೇಜಿನಲ್ಲಿ ‘ಅಕ್ಷಯ ವೈಭವ’ ಫ್ಯಾಶನ್ ಶೋ | ವಿದ್ಯಾರ್ಥಿಗಳಲ್ಲಿ ಉದ್ಯೋಗದ ಹೊಸತನ ಮೂಡಿಸುತ್ತಿದೆ ಅಕ್ಷಯ ಕಾಲೇಜು-ಬಲರಾಂ ಆಚಾರ್ಯ

ಪುತ್ತೂರು : ಪ್ರಸಕ್ತ ಸನ್ನಿವೇಶದಲ್ಲಿ ನಿರುದ್ಯೋಗ’ದ ಸಮಸ್ಯೆಯನ್ನು ಎದುರಿಸುತ್ತಿರುವ ಈ ಸಂದರ್ಭದಲ್ಲಿ ವಿದ್ಯಾರ್ಥಿಗಳ ಮನಸ್ಸಿನಲ್ಲಿಉದ್ಯೋಗ’ ಎಂಬ ಭರವಸೆಯ ಕಲ್ಪನೆಯನ್ನು ಮೂಡಿಸುತ್ತಿರುವ ಅಕ್ಷಯ ಕಾಲೇಜು ನಿಜಕ್ಕೂ ವಿದ್ಯಾರ್ಥಿಗಳ ಬದುಕಿನಲ್ಲಿ ಹೊಸತನವನ್ನು ಧಾರೆ ಎರೆಯುತ್ತಿರುವುದು ಶ್ಲಾಘನೀಯ ಎಂದು ಪುತ್ತೂರು ಜಿ.ಎಲ್ ಆಚಾರ್ಯ ಸಮೂಹ ಸಂಸ್ಥೆಗಳ ಮಾಲಕರಾದ ಬಲರಾಮ ಆಚಾರ್ಯರವರು ಹೇಳಿದರು. ಸಂಪ್ಯದಲ್ಲಿ ಅಕ್ಷಯ ಎಜ್ಯುಕೇಶನಲ್ ಆ್ಯಂಡ್ ಚಾರಿಟೇಬಲ್ ಟ್ರಸ್ಟ್ನಡಿಯಲ್ಲಿ ಕಾರ್ಯಾಚರಿಸುತ್ತಿರುವ ಅಕ್ಷಯ ಕಾಲೇಜಿನಲ್ಲಿ ಎರಡು ದಿನಗಳ ಅಕ್ಷಯ ವೈಭವ’ ಕಾರ್ಯಕ್ರಮ ಜರಗಲಿದ್ದು, ಎ.೯ ರಂದುಡಿ-ವಾಕ್’ ಹೆಸರಿನಲ್ಲಿ ಜರಗಿದ ಫ್ಯಾಶನ್ ಶೋ

ಅಕ್ಷಯ ಕಾಲೇಜಿನಲ್ಲಿ ‘ಅಕ್ಷಯ ವೈಭವ’ ಫ್ಯಾಶನ್ ಶೋ | ವಿದ್ಯಾರ್ಥಿಗಳಲ್ಲಿ ಉದ್ಯೋಗದ ಹೊಸತನ ಮೂಡಿಸುತ್ತಿದೆ ಅಕ್ಷಯ ಕಾಲೇಜು-ಬಲರಾಂ ಆಚಾರ್ಯ Read More »

ಕಾಮತ್ ರೆಸ್ಟೋರೆಂಟ್‍ ನ ಮಾಲಕರ ಪತ್ನಿ ವಿನುತಾ ದಿನೇಶ್ ಕಾಮತ್ ನಿಧನ

ಪುತ್ತೂರು: ಕೆ ಎಸ್ ಆರ್ ಟಿ ಸಿ ಬಸ್ ನಿಲ್ದಾಣದ ಬಳಿಯ ಕಾಮತ್ ರೆಸ್ಟೋರೆಂಟ್‍ ನ ಮಾಲಕ ದಿನೇಶ್ ಕಾಮತ್ ರವರ ಪತ್ನಿ ವಿನುತಾ ದಿನೇಶ್ ಕಾಮತ್ (47) ಅಸೌಖ್ಯದಿಂದ ಎ.11 ಇಂದು ನಿಧನರಾದರು. ಪುತ್ತೂರು ಕಲ್ಲಾರೆ ನಿವಾಸಿಯಾಗಿರುವ ವಿನುತಾ ಅವರು ಪುತ್ತೂರು ಖಾಸಗಿ ಆಸ್ಪತ್ರೆಯಲ್ಲಿ ನಿಧನರಾಗಿದ್ದಾರೆ. ಮೃತರು ಪತಿ ದಿನೇಶ್ ಕಾಮತ್ ಮತ್ತು ಇಬ್ಬರು ಪುತ್ರರನ್ನು ಅಗಲಿದ್ದಾರೆ.

ಕಾಮತ್ ರೆಸ್ಟೋರೆಂಟ್‍ ನ ಮಾಲಕರ ಪತ್ನಿ ವಿನುತಾ ದಿನೇಶ್ ಕಾಮತ್ ನಿಧನ Read More »

ಮುಳಿಯ –  ಹೊಸ ಲೋಗೋ-  ಅನಾವರಣ | ಮುಳಿಯ ಜುವೆಲ್ಸ್ – ಇನ್ನು ಮುಂದೆ ಮುಳಿಯ ಗೋಲ್ಡ್ ಆ್ಯಂಡ್ ಡೈಮಂಡ್ಸ್

ಪುತ್ತೂರು  : ಪುತ್ತೂರು ಮೂಲದ 81+ ವರ್ಷ ಪರಂಪರೆಯ ಮುಳಿಯ ಜ್ಯುವೆಲ್ಸ್ ಇನ್ನು ಮುಂದೆ ಹೊಸ ಲೋಗೊದೊಂದಿಗೆ ನಿಮ್ಮ ಮುಂದಿದೆ. ಜನಪ್ರಿಯ ಸೆಲೆಬ್ರಿಟಿ ರಮೇಶ್ ಅರವಿಂದ್ ಈ ಹೊಸ ಲಾಂಛನವನ್ನು ಬಿಡುಗಡೆ ಮಾಡಿದರು. ಮುಳಿಯ ಇನ್ನು ಮುಂದೆ ಮತ್ತಷ್ಟು ಹೊಸತನದೊಂದಿಗೆ ಸದಾ ಸಂತೋಷ ( creating happiness)  ನೀಡುವ ಧ್ಯೇಯ ವಾಕ್ಯದೊಂದಿಗೆ ಮುಂದುವರಿಯಲಿದೆ.  “ಇದೇ ತಿಂಗಳು ಹೊಚ್ಚ ಹೊಸತನದೊಂದಿಗೆ ಮುಳಿಯ ಗೋಲ್ಡ್ ಆ್ಯಂಡ್ ಡೈಮಂಡ್ಸ್ ಎಂದು ಮರುನಾಮಕರಣಗೊಳ್ಳಲಿದೆ.  ಗ್ರಾಹಕರಿಗೆ ಯಾವಾಗಲೂ ಹೊಸತನ ನೀಡುವುದು ಮುಳಿಯ ವಿಶೇಷ. ಈ

ಮುಳಿಯ –  ಹೊಸ ಲೋಗೋ-  ಅನಾವರಣ | ಮುಳಿಯ ಜುವೆಲ್ಸ್ – ಇನ್ನು ಮುಂದೆ ಮುಳಿಯ ಗೋಲ್ಡ್ ಆ್ಯಂಡ್ ಡೈಮಂಡ್ಸ್ Read More »

ಸಾಮಾಜಿಕ ಜಾಲತಾಣದಲ್ಲಿ ತಲವಾರು ಹಿಡಿದು ಫೋಸ್‍ | ಇಬ್ಬರು ಆರೋಪಿಗಳ ಬಂಧನ

ಪುತ್ತೂರು: ಸಾಮಾಜಿಕ ಜಾಲತಾಣದಲ್ಲಿ ಮಾರಕಾಸ್ತ್ರವಾದ ತಲವಾರುವನ್ನು  ಹಿಡಿದುಕೊಂಡು ಭಾವಚಿತ್ರವನ್ನು ಸಾಮಾಜಿಕ ಜಾಲತಾಣದಲ್ಲಿ ಹರಿದಾಡಿದ ಆರೋಪದಲ್ಲಿ ಪುತ್ತೂರು ಗ್ರಾಮಾಂತರ ಪೊಲೀಸರು ಆರೋಪಿಗಳ ವಿರುದ್ಧ ಸುಮೊಟೋ ಕೇಸ್ ದಾಖಲಿಸಿ ಬಂಧಿಸಿರುವ ಘಟನೆ ನಡೆದಿದೆ. ಬಂಧಿತ ಆರೋಪಿಗಳನ್ನು ಪುತ್ತೂರು ಕುರಿಯ ಗ್ರಾಮದ ನಿವಾಸಿ ಸುಜಿತ್ (36) ಹಾಗೂ ಪುತ್ತೂರು ಆರ್ಯಾಪು ಗ್ರಾಮದ ನಿವಾಸಿ ಪುಟ್ಟಣ್ಣ (32) ಎಂದು ಪತ್ತೆಹಚ್ಚಲಾಗಿದೆ. ಆರೋಪಿಗಳು ತಲವಾರು ಹಿಡಿದಿರುವ ಫೋಟೋ ಹಾಕಿ ಸಮಯ ಎಂದು ಶೀರ್ಷಿಕೆ ಬರೆದು ಸಾರ್ವಜನಿಕರಲ್ಲಿ ಭಯ ಹುಟ್ಟಿಸಿದ್ದರು. ಆರೋಪಿಗಳು ತಲವಾರು ಹಿಡಿದು ಫೋಟೋ

ಸಾಮಾಜಿಕ ಜಾಲತಾಣದಲ್ಲಿ ತಲವಾರು ಹಿಡಿದು ಫೋಸ್‍ | ಇಬ್ಬರು ಆರೋಪಿಗಳ ಬಂಧನ Read More »

ನಾಳೆಯಿಂದ ಪ್ರತಿಷ್ಠಿತ ‘ಪ್ರೇರಣಾ’ ಸಂಸ್ಥೆಯಿಂದ ಒಕ್ಕಲಿಗ ಸೌಧ ಸಭಾಭವನದಲ್ಲಿ ‘ಪ್ರೇರಣಾ ಸಮ್ಮರ್ ಕ್ಯಾಂಪ್’

ಪುತ್ತೂರು: ಕೆನರಾ ಬ್ಯಾಂಕ್ ಬಳಿ ಮುಖ್ಯರಸ್ತೆಯಲ್ಲಿರುವ ಪ್ರಭು ಬಿಲ್ಡಿಂಗ್ ನಲ್ಲಿ ಕಾರ್ಯಾಚರಿಸುತ್ತಿರುವ ಪ್ರತಿಷ್ಠಿತ ‘ಪ್ರೇರಣಾ’ ಸಂಸ್ಥೆಯಿಂದ ‘ಪ್ರೇರಣಾ ಸಮ್ಮರ್ ಕ್ಯಾಂಪ್’ ಏ.11 ರಿಂದ ಎ.15 ರ ತನಕ ಪುತ್ತೂರು ಖಾಸಗಿ ಬಸ್ ನಿಲ್ದಾಣದ ಎದುರು ಇರುವ ಒಕ್ಕಲಿಗ ಸೌಧ ಸಭಾಭವನದಲ್ಲಿ ನಡೆಯಲಿದೆ. ಐದು ದಿನಗಳ ಕಾಲ ನಡೆಯುವ ‘ಪ್ರೇರಣಾ ಸಮ್ಮರ್ ಕ್ಯಾಂಪ್’ ನಲ್ಲಿ ವಿವಿಧ ಚಟುವಟಿಕೆಗಳಾದ ಒರಿಗಾಮಿ, ಸ್ಪೀಚ್ & ಆ್ಯಂಕರಿಂಗ್, ಆರ್ಟಿಸ್ಟಿಕ್ ಆರ್ಟ್, ಕಾಸ್ಟ್ ಆರ್ಟ್, ಫಿಂಗರ್ ಪಪ್ಪೆಟ್, ಫೇಸ್ ಮಾಸ್ಕ್, ಮಾರ್ಬಲ್ ಆರ್ಟ್ ಸೇರಿದಂತೆ

ನಾಳೆಯಿಂದ ಪ್ರತಿಷ್ಠಿತ ‘ಪ್ರೇರಣಾ’ ಸಂಸ್ಥೆಯಿಂದ ಒಕ್ಕಲಿಗ ಸೌಧ ಸಭಾಭವನದಲ್ಲಿ ‘ಪ್ರೇರಣಾ ಸಮ್ಮರ್ ಕ್ಯಾಂಪ್’ Read More »

ಪುತ್ತೂರಿನ ಸಿನಿಮಾ ಪ್ರದರ್ಶನದ ಇತಿಹಾಸದಲ್ಲಿ ಅಪರೂಪದ ದಾಖಲೆ – ಭಾವ ತೀರ ಯಾನ 50ನೇ ದಿನದ ಪ್ರದರ್ಶನ

ಪುತ್ತೂರು : ಪಶ್ಚಿಮ ಕರಾವಳಿಯ ಸುಳ್ಯದ ಯುವ ಸಂಗೀತ ಪ್ರತಿಭೆ ಮಯೂರ್ ಅಂಬೆಕಲ್ಲು ಸಂಗೀತ ನೀಡಿ, ಕಥೆ ಮತ್ತು ಚಿತ್ರಕಥೆಯೊಂದಿಗೆ ದಿಗ್ದರ್ಶಿಸಿದ ಸಿನಿಮಾ ಭಾವ ತೀರ ಯಾನದ 50ನೇ ದಿನದ ಪ್ರದರ್ಶನ ಪುತ್ತೂರಿನ GL ONE  ಮಾಲ್ ನಲ್ಲಿ ನಡೆಯಲಿದೆ. ಇತಿಹಾಸ ನಿರ್ಮಾಣ ಈಚಿನ ವರ್ಷಗಳ ಇತಿಹಾಸದಲ್ಲಿ ತುಳು ಚಿತ್ರಗಳನ್ನು ಹೊರತುಪಡಿಸಿ  ಯಾವುದೇ ಕನ್ನಡ ಸಿನಿಮಾವು ಪುತ್ತೂರಿನಲ್ಲಿ ಸತತ 50 ದಿನಗಳ ಪ್ರದರ್ಶನ ಕಂಡದ್ದಿಲ್ಲ. ಅಂತಹ ಒಂದು ಇತಿಹಾಸ ನಿರ್ಮಾಣದ ಸಂದರ್ಭವೂ ಇದಾಗಿದೆ. ಪುನರಪಿ ವೀಕ್ಷಣೆ ಅನೇಕ

ಪುತ್ತೂರಿನ ಸಿನಿಮಾ ಪ್ರದರ್ಶನದ ಇತಿಹಾಸದಲ್ಲಿ ಅಪರೂಪದ ದಾಖಲೆ – ಭಾವ ತೀರ ಯಾನ 50ನೇ ದಿನದ ಪ್ರದರ್ಶನ Read More »

ಇಂದಿನಿಂದ ಪುತ್ತೂರು ಒಡೆಯ ಶ್ರೀ ಮಹಾಲಿಂಗೇಶ್ವರ ದೇವರ ಜಾತ್ರೋತ್ಸವ | ಭಕ್ತರ ಜಯಘೋಷದೊಂದಿಗೆ ನೆರವೇರಿದ ಧ್ವಜಾರೋಹಣ | ಸಾವಿರಾರು ಭಕ್ತಾದಿಗಳ ಪಾಲ್ಗೊಳ್ಳುವಿಕೆ

ಪುತ್ತೂರು: ಏ.10 ರಿಂದ 20 ರ ತನಕ ನಡೆಯುವ ಇತಿಹಾಸ ಪ್ರಸಿದ್ಧ ಪುತ್ತೂರು ಶ್ರೀ ಮಹಾಲಿಂಗೇಶ್ವರ ದೇವರ ಜಾತ್ರೋತ್ಸವಕ್ಕೆ ಧ್ವಜಾರೋಹಣ ಗುರುವಾರ ಬೆಳಿಗ್ಗೆ ಸಾವಿರಾರು ಭಕ್ತಾದಿಗಳ ಜಯಘೋಷದೊಂದಿಗೆ ನಡೆಯಿತು. ಬೆಳಿಗ್ಗೆ ಶ್ರೀ ದೇವಸ್ಥಾನದಲ್ಲಿ ಪ್ರಧಾನ ಅರ್ಚಕ ವಿ.ಎಸ್. ಭಟ್ ಅವರು ವೈದಿಕ ವಿಧಾನಗಳನ್ನು ನೆರವೇರಿಸಿದರು. ಅರ್ಚಕ ವಸಂತ ಕೆದಿಲಾಯ ಸಹಕರಿಸಿದರು. ಬಳಿಕ ಭಕ್ತಾದಿಗಳ ಜಯಘೋಷದೊಂದಿಗೆ ಧ್ವಜಾರೋಹಣ ನಡೆಯಿತು. ಈ ಸಂದರ್ಭದಲ್ಲಿ ಶಾಸಕ ಅಶೋಕ್ ಕುಮಾರ್ ರೈ, ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಪಂಜಿಗುಡ್ಡೆ ಈಶ್ವರ ಭಟ್, ಸದಸ್ಯರಾದ

ಇಂದಿನಿಂದ ಪುತ್ತೂರು ಒಡೆಯ ಶ್ರೀ ಮಹಾಲಿಂಗೇಶ್ವರ ದೇವರ ಜಾತ್ರೋತ್ಸವ | ಭಕ್ತರ ಜಯಘೋಷದೊಂದಿಗೆ ನೆರವೇರಿದ ಧ್ವಜಾರೋಹಣ | ಸಾವಿರಾರು ಭಕ್ತಾದಿಗಳ ಪಾಲ್ಗೊಳ್ಳುವಿಕೆ Read More »

error: Content is protected !!
Scroll to Top