ಕಾರ್ಕಳದಲ್ಲಿ ಯಕ್ಷಗಾನ ಪ್ರದರ್ಶನ ತಡೆಯುವ ಪ್ರಯತ್ನ ನಡೆಸಿರುವುದು ಖಂಡನೀಯ | ಆಯೋಜಕರ ಮೇಲೆ ಮೊಕದ್ದಮೆ ದಾಖಲಿಸಲು ಒತ್ತಡ ಹೇರಿದ ರಾಜಕಾರಣಿಗಳು ಜನರಲ್ಲಿ ಕ್ಷಮೆ ಕೇಳಬೇಕು : ಕಿಶೋರ್ ಕುಮಾರ್ ಪುತ್ತೂರು ಆಗ್ರಹ
ಪುತ್ತೂರು: ಕಾರ್ಕಳದಲ್ಲಿ ರಾಜಕೀಯ ದುರುದ್ದೇಶದಿಂದ ಯಕ್ಷಗಾನ ಪ್ರದರ್ಶನವನ್ನು ತಡೆಯುವ ಪ್ರಯತ್ನ ನಡೆದಿರುವುದು ಖಂಡನೀಯ ಎಂದು ವಿಧಾನ ಪರಿಷತ್ ಸದಸ್ಯ ಕಿಶೋರ್ ಕುಮಾರ್ ಪುತ್ತೂರು ತಿಳಿಸಿದ್ದಾರೆ. ಪತ್ರಿಕಾ ಹೇಳಿಕೆ ನೀಡಿರುವ ಅವರು, ಯಕ್ಷಗಾನ ಕರ್ನಾಟಕದ ಗಂಡುಕಲೆ ಎಂಬುದು ಮಾತ್ರವಲ್ಲದೆ ಆ ಕಲೆಯ ಜೊತೆಗೆ ಕರಾವಳಿಯ ಜನರ ಜೀವನ, ಭಾವನೆಗಳು ಬೆಸೆದುಕೊಂಡಿದೆ. ಕರಾವಳಿ ಜನರಿಗೆ ಯಕ್ಷಗಾನ ಕೇವಲ ಕಲಾ ಪ್ರಾಕಾರವಾಗಿ ನಿಲ್ಲದೆ ಅದನ್ನು ಮೀರಿ ನಮ್ಮ ಸಂಸ್ಕೃತಿಯ ಭಾಗವಾಗಿದೆ. ಯಕ್ಷಗಾನ ಕೇವಲ ಕರಾವಳಿಗೆ ಸೀಮಿತವಾಗಿರದೆ ರಾಜ್ಯ, ದೇಶಗಳ ಗಡಿಯನ್ನು ದಾಟಿ […]