ರಾಜಕೀಯ

ಪ್ರಜಾಪ್ರಭುತ್ವದ ಹಬ್ಬ ಒಗ್ಗಟ್ಟಾಗಿ ಆಚರಣೆ | ಅಭಿವೃದ್ಧಿ ಕೆಲಸ, ಕಾರ್ಯಕರ್ತರ ಶ್ರಮ, ಮುಖಂಡರ ಬೆಂಬಲ ಮತವಾಗಿ ಪರಿವರ್ತನೆ |ಆಶಾ ತಿಮ್ಮಪ್ಪ ಜೊತೆ ಮಠಂದೂರು ಪತ್ರಿಕಾಗೋಷ್ಠಿ

ಪುತ್ತೂರು: ಪ್ರಜಾಪ್ರಭುತ್ವದ ಹಬ್ಬವನ್ನು ಒಗ್ಗಟ್ಟಾಗಿ ಆಚರಿಸಲು ನಾವು ಸಿದ್ಧರಾಗಿದ್ದೇವೆ. ಅಭಿವೃದ್ಧಿ ಕೆಲಸ, ಕಾರ್ಯಕರ್ತರ ಶ್ರಮ, ನಾಯಕರ ಪ್ರೋತ್ಸಾಹ ಮತವಾಗಿ ಪರಿವರ್ತನೆ ಆಗಲಿದೆ ಎಂದು ಆಶಾ ತಿಮ್ಮಪ್ಪ ಅವರ ಜೊತೆ ಪತ್ರಿಕಾಗೋಷ್ಠಿಯಲ್ಲಿ ಶಾಸಕ ಸಂಜೀವ ಮಠಂದೂರು ಹೇಳಿದರು. ಜನರ‌ಧ್ವನಿಯಾಗಿ, ಮಹಿಳಾ ಮತದಾರರ ಪ್ರಾತಿನಿಧ್ಯವೆಂಬಂತೆ, ಪುತ್ತೂರು ತಾಲೂಕಿನ ಸೊಸೆ ಆಶಾ ತಿಮ್ಮಪ್ಪ ಅವರನ್ನು ಪಕ್ಷ ಆರಿಸಿದೆ. ಅವರನ್ನು 20000 ಮತಗಳ ಅಂತರದಿಂದ ಗೆಲುವು ಪಡೆದುಕೊಳ್ಳಲಿದ್ದೇವೆ ಎಂದು ವಿಶ್ವಾಸ ವ್ಯಕ್ತಪಡಿಸಿದ ಮಠಂದೂರು, ಆಶಾ ತಿಮ್ಮಪ್ಪ ಅವರ ಗೆಲುವಿಗೆ ಶ್ರಮಿಸಲಾಗುವುದು ಎಂದರು. ಬಿಜೆಪಿ […]

ಪ್ರಜಾಪ್ರಭುತ್ವದ ಹಬ್ಬ ಒಗ್ಗಟ್ಟಾಗಿ ಆಚರಣೆ | ಅಭಿವೃದ್ಧಿ ಕೆಲಸ, ಕಾರ್ಯಕರ್ತರ ಶ್ರಮ, ಮುಖಂಡರ ಬೆಂಬಲ ಮತವಾಗಿ ಪರಿವರ್ತನೆ |ಆಶಾ ತಿಮ್ಮಪ್ಪ ಜೊತೆ ಮಠಂದೂರು ಪತ್ರಿಕಾಗೋಷ್ಠಿ Read More »

ಕುಂದಾಪುರ ಶಾಸಕ ಹಾಲಾಡಿಯವರಿಂದ ಆಶೀರ್ವಾದ ಪಡೆದ ಬೈಂದೂರು ಶಾಸಕ ಗಂಟಿಹೊಳೆ

ಉಡುಪಿ : ವಿಧಾನಸಭಾ ಚುನಾವಣೆ ಹಿನ್ನೆಲೆಯಲ್ಲಿ ರಾಜಕೀಯ ಪಕ್ಷಗಳು ಪ್ರಚಾರ ಕಾರ್ಯಗಳನ್ನು ಚುರುಕುಗೊಳಿಸುತ್ತಿವೆ. ಸಭೆ-ಸಮಾರಂಭಗಳನ್ನು ಏರ್ಪಡಿಸುವುದು, ರಾಜಕೀಯ ಮುಖಂಡರನ್ನು ಭೇಟಿ ಮಾಡಿ ಸಹಕಾರ ಕೋರುತ್ತಿದ್ದಾರೆ. ಈಗ ಬೈಂದೂರು ಬಿಜೆಪಿ ಅಭ್ಯರ್ಥಿ ಗುರುರಾಜ ಗಂಟಿಹೊಳೆ ಅವರು ಕುಂದಾಪುರ ಶಾಸಕ ಹಾಲಾಡಿ ಶ್ರೀನಿವಾಸ ಶೆಟ್ಟಿ ಅವರ ಮನೆಗೆ ಭೇಟಿ ನೀಡಿ ಆಶೀರ್ವಾದ ಕೋರಿದ್ದಾರೆ. ಬೈಂದೂರು ವಿಧಾನಸಭಾ ಕ್ಷೇತ್ರದಲ್ಲಿ ಶಾಸಕ ಸುಕಮಾರ ಶೆಟ್ಟಿ ಬದಲಾಗಿ ಬಿಜೆಪಿ ಅಭ್ಯರ್ಥಿಯಾಗಿ ಆಯ್ಕೆಯಾಗಿರುವ ಗುರುರಾಜ್ ಗಂಟಿಹೊಳೆ ಅವರು ಈಗ ಹಿರಿಯ ನಾಯಕರನ್ನು ಭೇಟಿ ಮಾಡಿ ಆಶೀರ್ವಾದ

ಕುಂದಾಪುರ ಶಾಸಕ ಹಾಲಾಡಿಯವರಿಂದ ಆಶೀರ್ವಾದ ಪಡೆದ ಬೈಂದೂರು ಶಾಸಕ ಗಂಟಿಹೊಳೆ Read More »

ಹಿಂದೂ ಫೈರ್ ಬ್ರಾಂಡ್ ಪುತ್ತಿಲ ಪಕ್ಷೇತರ ಅಭ್ಯರ್ಥಿ | ಏ. 17ರಂದು ಮೆರವಣಿಗೆಯಲ್ಲಿ ತೆರಳಿ ನಾಮಪತ್ರ ಸಲ್ಲಿಕೆ

ಪುತ್ತೂರು: ಹಿಂದೂ ಫೈರ್ ಬ್ರಾಂಡ್ ಅರುಣ್ ಕುಮಾರ್ ಪುತ್ತಿಲ ಪಕ್ಷೇತರ ಅಭ್ಯರ್ಥಿಯಾಗಿ ಕಣಕ್ಕಿಳಿಯುತ್ತಿದ್ದು, ಏ. 17ರಂದು ನಾಮಪತ್ರ ಸಲ್ಲಿಸಲಿದ್ದಾರೆ. ಶನಿವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅರುಣ್ ಕುಮಾರ್ ಪುತ್ತಿಲ ಅವರು, ಕಾರ್ಯಕರ್ತರ ಆಕಾಂಕ್ಷೆಯಂತೆ ಹಿಂದುತ್ವದ ಧ್ವನಿಯಾಗಿ ಪಕ್ಷೇತರ ಅಭ್ಯರ್ಥಿಯಾಗಿ ಕಣಕ್ಕಿಳಿಯಲಿದ್ದೇನೆ ಎಂದು ಘೋಷಿಸಿದರು. ಏ. 17ರಂದು ಬೆಳಿಗ್ಗೆ ಪುತ್ತೂರು ಶ್ರೀ ಮಹಾಲಿಂಗೇಶ್ವರ ದೇವಸ್ಥಾನದಲ್ಲಿ ವಿಶೇಷ ಪ್ರಾರ್ಥನೆ ಸಲ್ಲಿಸಿ, ಬೆಳಿಗ್ಗೆ 10 ಗಂಟೆಯಿಂದ ದರ್ಬೆ ವೃತ್ತದಿಂದ ಪುತ್ತೂರು ತಾಲೂಕು ಆಡಳಿತ ಸೌಧದವರೆಗೆ ಮೆರವಣಿಗೆಯಲ್ಲಿ ತೆರಳಲಿದ್ದಾರೆ. ಬಳಿಕ ನಾಮಪತ್ರ ಸಲ್ಲಿಸಲಿದ್ದಾರೆ ಎಂದು

ಹಿಂದೂ ಫೈರ್ ಬ್ರಾಂಡ್ ಪುತ್ತಿಲ ಪಕ್ಷೇತರ ಅಭ್ಯರ್ಥಿ | ಏ. 17ರಂದು ಮೆರವಣಿಗೆಯಲ್ಲಿ ತೆರಳಿ ನಾಮಪತ್ರ ಸಲ್ಲಿಕೆ Read More »

ಏ. 16 ರಂದು ರಾಹುಲ್ ಗಾಂಧಿ ಕರ್ನಾಟಕಕ್ಕೆ ಭೇಟಿ

ಬೆಂಗಳೂರು : ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಕರ್ನಾಟಕಕ್ಕೆ ಭಾನುವಾರ (ನಾಳೆ) ಆಗಮಿಸಲಿದ್ದು, ಮೊದಲ ದಿನ ಕೋಲಾರದಲ್ಲಿ ಬೃಹತ್ ಸಾರ್ವಜನಿಕ ಸಮಾವೇಶದಲ್ಲಿ ಭಾಗಿಯಾಗಲಿದ್ದಾರೆ. ಕಳೆದ ಬಾರಿ ವಿಧಾನಸಭೆ ಚುನಾವಣೆಯ ಸಂದರ್ಭದಲ್ಲಿ ರಾಹುಲ್ ಗಾಂಧಿ ಕೋಲಾರದಲ್ಲಿ ಪ್ರಧಾನಿ ನರೇಂದ್ರ ಮೋದಿ ಸರ್ ನೇಮ್ ಕುರಿತಾಗಿ ಮಾಡಿದ್ದ ಭಾಷಣ ಅವರ ಸಂಸತ್ ಸದಸ್ಯತ್ವ ಅನರ್ಹಕ್ಕೆ ಕಾರಣವಾಗಿತ್ತು. ಇದೀಗ ಕೋಲಾರದಲ್ಲೇ ಬೃಹತ್ ಸಾರ್ವಜನಿಕ ಸಮಾವೇಶದಲ್ಲಿ ರಾಹುಲ್ ಭಾಗಿಯಾಗಲಿದ್ದು, ಈ ಮೂಲಕ ಕರ್ನಾಟಕ ಚುನಾವಣಾ ಪ್ರಚಾರಕ್ಕೆ ಚಾಲನೆ ನೀಡಲಿದ್ದಾರೆ. ಭಾನುವಾರ ಮಧ್ಯಾಹ್ಮ 12.

ಏ. 16 ರಂದು ರಾಹುಲ್ ಗಾಂಧಿ ಕರ್ನಾಟಕಕ್ಕೆ ಭೇಟಿ Read More »

ಸರ್ಕಾರಿ ನಿವಾಸ ಖಾಲಿ ಮಾಡಿದ ರಾಹುಲ್ ಗಾಂಧಿ

ದೆಹಲಿ : ಮೋದಿ ಉಪನಾಮವನ್ನು ಲೇವಡಿ ಮಾಡಿ 2 ವರ್ಷಗಳ ಕಾಲ ಜೈಲು ಶಿಕ್ಷೆಗೊಳಗಾಗಿ, ಸಂಸತ್‌ ಸದಸ್ಯತ್ವದಿಂದ ಅನರ್ಹಗೊಂಡಿರುವ ರಾಹುಲ್‌ ಗಾಂಧಿ ಇದೀಗ ತನ್ನ ಸರಕಾರಿ ಬಂಗಲೆಯನ್ನು ಖಾಲಿ ಮಾಡಿದ್ದಾರೆ. ದಿಲ್ಲಿಯ ಲುಟೆನ್ಸ್‌ ನಲ್ಲಿರುವ ಸರಕಾರಿ ಬಂಗಲೆಯಿಂದ ನಿನ್ನೆ ಲಾರಿಗಳಲ್ಲಿ ಸಾಮಾನು ಸರಂಜಾಮು ಸಾಗಿಸುವ ಪ್ರಕ್ರಿಯೆ ಶುರುವಾಗಿದೆ. ಅಪರಾಧ ಸಾಬೀತಾದ ಕಾರಣ ಲೋಕಸಭೆಯ ಸದಸ್ಯತ್ವದಿಂದ ಅನರ್ಹಗೊಂಡ ಒಂದು ತಿಂಗಳಲ್ಲಿ ಸರಕಾರಿ ಬಂಗಲೆಯನ್ನು ಖಾಲಿ ಮಾಡಬೇಕು. ಅದಕ್ಕಾಗಿ ಅವರಿಗೆ ನೋಟೀಸ್‌ ಜಾರಿಗೊಳಿಸಲಾಗಿತ್ತು. ಏ. 22 ರೊಳಗೆ ಅಧಿಕೃತ ನಿವಾಸವನ್ನು

ಸರ್ಕಾರಿ ನಿವಾಸ ಖಾಲಿ ಮಾಡಿದ ರಾಹುಲ್ ಗಾಂಧಿ Read More »

ಜನರ ಸಮಸ್ಯೆಗಳಿಗೆ ಸ್ಪಂದನೆಯ ಜತೆಗೆ ಇಲಾಖೆಗಳಲ್ಲಿ ಲಂಚ ರಹಿತ ಕೆಲಸವಾಗುವಂತೆ ನೋಡಿಕೊಳ್ಳುವೆ – ಭಾಗೀರಥಿ ಮುರುಳ್ಯ

ಸುಳ್ಯ: ನಾನು ಶಾಸಕಿಯಾಗಿ ಆಯ್ಕೆಯಾದ ಬಳಿಕ ಜನರ ಸಮಸ್ಯೆಗಳಿಗೆ ಸ್ಪಂದಿಸುವ ಜತೆಗೆ ಇಲಾಖೆಗಳಲ್ಲಿ ಲಂಚ ರಹಿತ ಕೆಲಸ ಕಾರ್ಯಗಳು ನಡೆಯುವಂತೆ ಮಾಡುತ್ತೇನೆ ಎಂದು ಸುಳ್ಯ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಕು.ಭಾಗೀರಥಿ ಮುರುಳ್ಯ ಹೇಳಿದ್ದಾರೆ. ಅವರು ಶುಕ್ರವಾರ ಸುಳ್ಯ ಪ್ರೆಸ್ ಕ್ಲಬ್‌ನಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ನನಗೆ ಪಕ್ಷ ಮತ್ತು ಸಂಘಟನೆ ಈ ಅವಕಾಶ ನೀಡಿದೆ. ಎಲ್ಲರ ಆಶೀರ್ವಾದದಿಂದ ಸುಳ್ಯದಲ್ಲಿ ಬಿಜೆಪಿ ಜಯ ಗಳಿಸಲಿದೆ ಎಂದು ಹೇಳಿದ ಅವರು, ನಾನು ಜನರ ಸಮಸ್ಯೆಗೆ ಸ್ಪಂದಿಸುವಲ್ಲಿ ಮೊದಲ ಆದ್ಯತೆ ನೀಡುವೆ ಎಂದು

ಜನರ ಸಮಸ್ಯೆಗಳಿಗೆ ಸ್ಪಂದನೆಯ ಜತೆಗೆ ಇಲಾಖೆಗಳಲ್ಲಿ ಲಂಚ ರಹಿತ ಕೆಲಸವಾಗುವಂತೆ ನೋಡಿಕೊಳ್ಳುವೆ – ಭಾಗೀರಥಿ ಮುರುಳ್ಯ Read More »

ರಾಘವೇಶ್ವರ ಶ್ರೀಗಳ ಆಶೀರ್ವಾದ ಪಡೆದ ಆಶಾ ತಿಮ್ಮಪ್ಪ

ಪುತ್ತೂರು: ಮುಡಿಪು ಬಳಿಯ ಕಟ್ಟೆಮಾರು ಪೆದಮಲೆಗೆ ಆಗಮಿಸಿದ್ದ ರಾಮಚಂದ್ರಾಪುರ ಮಠದ ಶ್ರೀ ರಾಘವೇಶ್ವರ ಭಾರತೀ ಸ್ವಾಮೀಜಿ ಅವರನ್ನು ಭೇಟಿ ಮಾಡಿರುವ ಪುತ್ತೂರು ವಿಧಾನಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಆಶಾ ತಿಮ್ಮಪ್ಪ ಅವರು ಭೇಟಿಯಾಗಿ, ಆಶೀರ್ವಾದ ಪಡೆದುಕೊಂಡರು. ಆಶಾ ತಿಮ್ಮಪ್ಪ ಅವರು ಬಿಜೆಪಿ ಅಭ್ಯರ್ಥಿಯಾಗಿ ಆಯ್ಕೆಯಾಗಿದ್ದು, ಪೆದಮಲೆ ನಾಗರಾಜ ಭಟ್ಟರ ಮನೆಯಲ್ಲಿ ರಾಘವೇಶ್ವರ ಶ್ರೀಗಳ ಆಶೀರ್ವಾದ ಪಡೆದರು. ಇದೇ ಸಂದರ್ಭ ಡಾ. ಪ್ರಭಾಕರ ಭಟ್ ಕಲ್ಲಡ್ಕ, ಜಿ.ಪಂ. ಮಾಜಿ ಅಧ್ಯಕ್ಷೆ ಮೀನಾಕ್ಷಿ ಶಾಂತಿಗೋಡು ಉಪಸ್ಥಿತರಿದ್ದರು.

ರಾಘವೇಶ್ವರ ಶ್ರೀಗಳ ಆಶೀರ್ವಾದ ಪಡೆದ ಆಶಾ ತಿಮ್ಮಪ್ಪ Read More »

ಅಣ್ಣಾಮಲೈ ಬಿಡುಗಡೆ ಮಾಡಿರುವ ಡಿಎಂಕೆ ಫೈಲ್ಸ್ ಗೆ ಡಿಎಂಕೆ ಎಚ್ಚರಿಕೆ

ಚೆನ್ನೈ : ತಮಿಳುನಾಡಿನ ಆಡಳಿತಾರೂಢ ಡಿಎಂಕೆ (DMK) ಪಕ್ಷದ ವಿರುದ್ಧ ರಾಜ್ಯ ಬಿಜೆಪಿ ಘಟಕದ ಅಧ್ಯಕ್ಷ ಅಣ್ಣಾಮಲೈ (Annamalai) ಬಿಡುಗಡೆ ಮಾಡಿರುವ ‘ಡಿಎಂಕೆ ಫೈಲ್ಸ್’ ಈಗ ರಾಜ್ಯದಲ್ಲಿ ರಾಜಕೀಯ ಕಿಡಿ ಹೊತ್ತಿಸಿದೆ. ಅಣ್ಣಾಮಲೈ ಅವರು ನಮ್ಮ ವಿರುದ್ಧ ಮಾಡಿರುವ ಆರೋಪಗಳಿಗೆ ದಾಖಲೆ ಬಿಡುಗಡೆ ಮಾಡದಿದ್ದರೆ ಎಲ್ಲ ಶಾಸಕರೂ ಅವರ ವಿರುದ್ಧ ಕ್ರಿಮಿನಲ್ ಮೊಕದ್ದಮೆ ಹೂಡಲಿದ್ದೇವೆ ಎಂದು ಡಿಎಂಕೆ ಎಚ್ಚರಿಕೆ ನೀಡಿದೆ. ‘ಡಿಎಂಕೆ ಫೈಲ್ಸ್’ ಬಿಡುಗಡೆ ಮಾಡಿದ ಕೆಲವೇ ಗಂಅಟೆಗಳಲ್ಲಿ ಆ ಕುರಿತು ಪ್ರತಿಕ್ರಿಯಿಸಿರುವ ಡಿಎಂಕೆ, ತಾಕತ್ತಿದ್ದರೆ ದಾಖಲೆಗಳನ್ನು

ಅಣ್ಣಾಮಲೈ ಬಿಡುಗಡೆ ಮಾಡಿರುವ ಡಿಎಂಕೆ ಫೈಲ್ಸ್ ಗೆ ಡಿಎಂಕೆ ಎಚ್ಚರಿಕೆ Read More »

ರಾಜಕೀಯ ನಿವೃತ್ತಿ ಘೋಷಣೆಯಿಂದ ಹಿಂದೆ ಸರಿದ ಅಂಗಾರ

ಸುಳ್ಯ : ಬಿಜೆಪಿ ಅಭ್ಯರ್ಥಿ ಘೋಷಣೆ ವೇಳೆ ಅಭ್ಯರ್ಥಿ ಸ್ಥಾನ ಸಿಗದ ನೋವಿನಿಂದ ಅಂದಿನ ದಿನದ ರಾಜಕೀಯ ನಿವೃತ್ತಿ ಹೇಳಿಕೆ ನೀಡಿದ್ದೇನೆ. ಆದರೆ ಬಳಿಕ ನನ್ನ ನಿರ್ಧಾರ ಬದಲಾಯಿಸಿದ್ದೇನೆ. ಮುಂದೆಯೂ ಬಿಜೆಪಿ ಪಕ್ಷದಲ್ಲಿದ್ದುಕೊಂಡು ಪಕ್ಷದ ಅಭ್ಯರ್ಥಿ ಭಾಗೀರಥಿ ಮುರುಳ್ಯ ಅವರ ಗೆಲುವಿಗೆ ಸಂಪೂರ್ಣವಾಗಿ ತೊಡಗಿಕೊಂಡು ಪೂರಕ ಕೆಲಸ ಮಾಡುತ್ತೇನೆ ಎಂದು ಸಚಿವ ಎಸ್.ಅಂಗಾರ ತಿಳಿಸಿದರು. ಅವರು ಎ.14 ರಂದು ಸುಳ್ಯ ಪ್ರೆಸ್‌ ಕ್ಲಬ್‌ ನಲ್ಲಿ ಪತ್ರಿಕಾಗೋಷ್ಠಿ ನಡೆಸಿ ಈ ಬಗ್ಗೆ ಹೇಳಿಕೆ ನೀಡಿದರು. ನಾನೆಂದೂ ಟಿಕೆಟ್ ಕೊಡಿ

ರಾಜಕೀಯ ನಿವೃತ್ತಿ ಘೋಷಣೆಯಿಂದ ಹಿಂದೆ ಸರಿದ ಅಂಗಾರ Read More »

ರಾಜಕಾರಣಕ್ಕೆ ನಿವೃತಿ ಘೋಷಿಸಿ ಪ್ರಚಾರ ಕಾರ್ಯದಿಂದ ದೂರ ಹೇಳಿಕೆಯನ್ನು ಹಿಂಪಡೆದ ಎಸ್.ಅಂಗಾರ

ಸುಳ್ಯ: ಈ ಬಾರಿ ಸುಳ್ಯ ವಿಧಾನಸಭಾ ಕ್ಷೇತ್ರದಲ್ಲಿ ಚುನಾವಣೆಗೆ ಸ್ಪರ್ಧಿಸಲು ಅವಕಾಶ ವಂಚಿತರಾದ ಸಚಿವ ಎಸ್.ಅಂಗಾರ ಅವರು ಅಕ್ರೀಯ ರಾಜಕಾರಣದಿಂದ ನಿವೃತ್ತಿ ಘೋಷಿಸಿ ಚುನಾವಣಾ ಪ್ರಚಾರ ಕಾರ್ಯದಿಂದ ಹಿಂದೆ ಸರಿದಿದ್ದೇನೆ ಎಂದು ಮಾಧ್ಯಮಗಳಿಗೆ ಹೇಳಿಕೆ ನೀಡಿದ್ದು, ಈ ಹೇಳಿಕೆಯನ್ನು ಇದೀಗ ಅವರು ಹಿಂಪಡೆದಿದ್ದಾರೆ. ಸುಳ್ಯದಲ್ಲಿ ಏರ್ಪಡಿಸಿದ ಪತ್ರಿಕಾಗೋಷ್ಠಿಯಲ್ಲಿ ಸಚಿವ ಅಂಗಾರ ಅವರು, ಸಕ್ರೀಯ ರಾಜಕಾರಣಕ್ಕೆ ನಿವೃತ್ತಿ ಹೇಳಿಕೆ ನೋವಿನಿಂದ ಹೇಳಿದ್ದೇನೆ . ಆದರೆ ನಾನು ಮೊದಲಿನಂತೆ ಸಕ್ರೀಯವಾಗಿದ್ದು ಭಾಗೀರಥಿ ಮುರುಳ್ಯ ಅವರ ಗೆಲುವೊಂದೇ ನಮ್ಮ ಮುಂದಿನ ನಡೆ

ರಾಜಕಾರಣಕ್ಕೆ ನಿವೃತಿ ಘೋಷಿಸಿ ಪ್ರಚಾರ ಕಾರ್ಯದಿಂದ ದೂರ ಹೇಳಿಕೆಯನ್ನು ಹಿಂಪಡೆದ ಎಸ್.ಅಂಗಾರ Read More »

error: Content is protected !!
Scroll to Top