ರಾಜಕೀಯ

ಕಾಂಗ್ರೆಸ್ಸಿನ ಒಗ್ಗಟ್ಟಿನಿಂದ ಬಿಜೆಪಿ ಕೊತಕೊತ ಕುದಿಯುತ್ತಿದೆ

ಪುತ್ತೂರು: ಪುತ್ತೂರಿನಲ್ಲಿ ಕಾಂಗ್ರೆಸ್ ಅಭ್ಯರ್ಥಿ ಪರ ಪ್ರಚಾರದಲ್ಲಿ ಕಾಂಗ್ರೆಸ್ ನಾಯಕರು ತೊಡಗಿಸಿಕೊಂಡಿದ್ದು ಕಾಂಗ್ರೆಸ್ ನಾಯಕರ ಒಗ್ಗಟ್ಟು ಕಂಡು ಬಿಜೆಪಿ ಕೊತಕೊತ ಕುದಿಯುತ್ತಿದೆ ಎಂದು ಕಾಂಗ್ರೆಸ್ ಮುಖಂಡ ಎಂ ಎಸ್ ಮಹಮ್ಮದ್ ಹೇಳಿದರು. ಅವರು ನೆಟ್ಟಣಿಗೆ ಮುಡ್ನೂರು ಗ್ರಾಮದ ಮೇನಾಲದಲ್ಲಿ ಕಾಂಗ್ರೆಸ್ ಅಭ್ಯರ್ಥಿ ಅಶೋಕ್ ರೈ ಪರ ನಡೆದ ಚುನಾವಣಾ ಪ್ರಚಾರ ಸಭೆಯಲ್ಲಿ ಮಾತನಾಡಿದರು. ಕಾಂಗ್ರೆಸ್‌ನಲ್ಲಿ 14 ಮಂದಿ ಟಕೆಟ್ ಆಕಾಂಕ್ಷಿಗಳ ಪೈಕಿ ಹೈಕಮಾಂಡ್ ಆಯ್ಕೆ ಮಾಡಿರುವ ಅಶೋಕ್ ರೈಯವ ರನ್ನು ಕಾಂಗ್ರೆಸ್ಸಿಗರು ಎಲ್ಲರೂ ಬೆಂಬಲಿಸಿ ಪ್ರಚಾರದಲ್ಲಿ ತೊಡಗಿಸಿಕೊಂಡಿದ್ದು […]

ಕಾಂಗ್ರೆಸ್ಸಿನ ಒಗ್ಗಟ್ಟಿನಿಂದ ಬಿಜೆಪಿ ಕೊತಕೊತ ಕುದಿಯುತ್ತಿದೆ Read More »

ದೇವಸ್ಥಾನದ ದುಡ್ಡು ಹೊಡೆದ ಪುತ್ತಿಲ ಯಾವ ಸೀಮೆಯ ಹಿಂದುತ್ವವಾದಿ | ದಿ. ಪ್ರವೀಣ್ ನೆಟ್ಟಾರು ಮನೆಯಲ್ಲಿ ಕಲ್ಲಡ್ಕ ಪ್ರಭಾಕರ್ ಭಟ್

ಪುತ್ತೂರು: ದೇವಸ್ಥಾನದ ದುಡ್ಡು ಹೊಡೆದ, ಹಿಂದೂಗಳ ಮೇಲೆಯೇ ದೌರ್ಜನ್ಯ ನಡೆಸಿದ ಅರುಣ್ ಕುಮಾರ್ ಪುತ್ತಿಲ ಯಾವ ಸೀಮೆಯ ಹಿಂದುತ್ವವಾದಿ ಎಂದು ಆರ್.ಎಸ್.ಎಸ್. ಮುಖಂಡ ಕಲ್ಲಡ್ಕ ಪ್ರಭಾಕರ ಭಟ್ ಪ್ರಶ್ನಿಸಿದ್ದಾರೆ. ಇತ್ತೀಚೆಗೆ ದುಷ್ಕರ್ಮಿಗಳಿಂದ ಹತ್ಯೆಗೊಳಗಾದ ಪ್ರವೀಣ್ ನೆಟ್ಟಾರು ಅವರ ನೂತನ ಮನೆಯ ಗೃಹಪ್ರವೇಶಕ್ಕೆ ಆಗಮಿಸಿ, ಮಾಧ್ಯಮದೊಂದಿಗೆ ಮಾತನಾಡಿದ ಅವರು ಅರುಣ್ ಕುಮಾರ್ ಪುತ್ತಿಲ ವಿರುದ್ಧ ಹರಿಹಾಯ್ದರು. ಹೆಣ್ಣು ಮಗಳೊಬ್ಬಳು ತನ್ನ ಕಾರಿನಡಿಗೆ ಬಿದ್ದು ಮೃತಪಟ್ಟಾಗ, ತಿರುಗಿ ನೋಡದೇ ಹೋದ ಅರುಣ್ ಪುತ್ತಿಲ ಯಾವ ಹಿಂದುತ್ವವಾದಿ. ಗೋ ಸಾಗಾಟವನ್ನು ಹಿಂದೂ

ದೇವಸ್ಥಾನದ ದುಡ್ಡು ಹೊಡೆದ ಪುತ್ತಿಲ ಯಾವ ಸೀಮೆಯ ಹಿಂದುತ್ವವಾದಿ | ದಿ. ಪ್ರವೀಣ್ ನೆಟ್ಟಾರು ಮನೆಯಲ್ಲಿ ಕಲ್ಲಡ್ಕ ಪ್ರಭಾಕರ್ ಭಟ್ Read More »

ಪೆರ್ಲಂಪಾಡಿಯಲ್ಲಿ ಕಾಂಗ್ರೆಸ್ ಚುನಾವಣಾ ಪ್ರಚಾರ ಸಭೆ

ಪುತ್ತೂರು: ಉಳುವವನೇ ಭೂಮಿಯ ಒಡೆಯ ಎಂಬ ಕಾನೂನು ಜಾರಿಗೆ ತಂದು ಭೂಮಿಯಿಲ್ಲದ ಬಡವನನ್ನು ಭೂಮಿಯ ಒಡೆಯನನ್ನಾಗಿ ಮಾಡಿದ್ದು ಕಾಂಗ್ರೆಸ್‌ನ ಇಂದಿರಾಗಾಂಧಿ. ಅದೇ ರೀತಿ ಕರ್ನಾಟಕದಲ್ಲಿ ಕೃಷಿಗೆ ಉಚಿತ ವಿದ್ಯುತ್ ನೀಡುವ ಮೂಲಕ ಕೃಷಿಕರ ಬದುಕನ್ನು ಹಸನಾಗಿಸಿದ್ದೂ ಕಾಂಗ್ರೆಸ್ ಸರಕಾರವೇ  ಎಂದು ಪುತ್ತೂರು ಕಾಂಗ್ರೆಸ್ ಅಭ್ಯರ್ಥಿ ಅಶೋಕ್ ರೈ ಹೇಳಿದರು. ಪೆರ್ಲಂಪಾಡಿಯಲ್ಲಿ ಚುನಾವಣಾ ಪ್ರಚಾರ ಸಭೆಯಲ್ಲಿ ಮಾತನಾಡಿದ ಅವರು, ಉಳುವವನೇ ಭೂಮಿಯ ಒಡೆಯ ಕಾನೂನು ಜಾರಿಗೆ ಬಂದಾಗ ಅನೇಕ ಮಂದಿ ಭೂಮಿ ಕಳೆದುಕೊಂಡಿದ್ದಾರೆ. ಭೂಮಿ ಕಳೆದುಕೊಂಡವರೆಲ್ಲರೂ ಇಂದಿಗೂ ಕಾಂಗ್ರೆಸ್ಸಲ್ಲೇ

ಪೆರ್ಲಂಪಾಡಿಯಲ್ಲಿ ಕಾಂಗ್ರೆಸ್ ಚುನಾವಣಾ ಪ್ರಚಾರ ಸಭೆ Read More »

ವಿಧಾನಸಭೆಯಲ್ಲಿ ಶಾಸಕರ ಹಾಜರಾತಿ ವರದಿ | ಶಾಸಕ ಸಂಜೀವ ಮಠಂದೂರಿಗೆ 2ನೇ ಸ್ಥಾನ

ಪುತ್ತೂರು: ವಿಧಾನಸಭೆಯಲ್ಲಿ 2018ರಿಂದ 2022ರ ನಡುವೆ ನಡೆದಿರುವ ಅಧಿವೇಶನಗಳಲ್ಲಿ ಭಾಗಿಯಾದ ಶಾಸಕರ ಹಾಜರಾತಿಯ ವರದಿ ಪ್ರಕಟಗೊಂಡಿದ್ದು, ಪುತ್ತೂರು ಶಾಸಕ ಸಂಜೀವ ಮಠಂದೂರು ಅವರು 2ನೇ ಸ್ಥಾನದಲ್ಲಿ ಗುರುತಿಸಿಕೊಂಡಿದ್ದಾರೆ. 2018ರಿಂದ 2022ರ ತನಕ ನಡೆದ 15 ಅಧಿವೇಶನಗಳಲ್ಲಿ ಶಾಸಕರ ಹಾಜರಾತಿ ಬಗ್ಗೆ ಕೇಳಲಾದ ಪ್ರಶ್ನೆಗಳು, ಮಸೂದೆಗಳ ಮಂಡನೆ, ಹಾಗೂ ಅಂಗೀಕಾರ ಸೇರಿ ಇತರ ಮಾಹಿತಿ ಒಳಗೊಂಢ ಅಂಶಗಳು ಈ ವರದಿಯಲ್ಲಿವೆ. ಶಾಸಕರ ಕಾರ್ಯಕ್ಷಮತೆ ಬಗ್ಗೆ ಅಸೋಸಿಯೇಶನ್ ಫಾರ್ ಡೆಮಾಕ್ರೆಟಿಕ್ ರೀಫಾರ್ಮ್ಸ್ ವರದಿ ಮಾಡಿದೆ. ಅಧಿವೇಶನದಲ್ಲಿ ಶಾಸಕರ ಹಾಜರಾತಿ ತೀವ್ರವಾಗಿ

ವಿಧಾನಸಭೆಯಲ್ಲಿ ಶಾಸಕರ ಹಾಜರಾತಿ ವರದಿ | ಶಾಸಕ ಸಂಜೀವ ಮಠಂದೂರಿಗೆ 2ನೇ ಸ್ಥಾನ Read More »

ಹಿಂದೂಪರ ಕೆಲಸಗಳಿಗೆ ಶಾಸಕತ್ವವೇ ಬೇಕೆ? | ದೇವಸ್ಥಾನಗಳಲ್ಲಿ ಹಣ ದುರುಪಯೋಗ ಮಾಡಿದ್ದ ಪುತ್ತಿಲ | ಅರುಣ್ ಪುತ್ತಿಲ ಸಿಂಪಥೈಸರ್ | ಆಶಾ ತಿಮ್ಮಪ್ಪ ಸಮರ್ಥರು. ಅವರ ಬಗ್ಗೆ ಅಪಪ್ರಚಾರ ತರವಲ್ಲ

ಪುತ್ತೂರು: ಹಿಂದೂಪರ ಕೆಲಸ ಮಾಡಲು ಶಾಸಕನೇ ಆಗಬೇಕೆಂದು ಹಠ ಹಿಡಿದು ನಿಲ್ಲುವುದು ಸರಿಯಲ್ಲ. ಆರ್.ಎಸ್.ಎಸ್., ಬಿಜೆಪಿಯನ್ನು ಕಟ್ಟಿ ಬೆಳೆಸಿದ ಅದೆಷ್ಟೋ ಮಹನೀಯರು ಯಾವುದೇ ಹುದ್ದೆಗೆ ಆಸೆ ಪಡದೇ, ಕೆಲಸ ಮಾಡಿದ್ದಾರೆ. ಹೀಗಿರುವಾಗ ಅರುಣ್ ಕುಮಾರ್ ಪುತ್ತಿಲ ಸಿಂಪಥೈಸರ್ ಆಗಿದ್ದಾರೆ. ಅರುಣ್ ಕುಮಾರ್ ಪುತ್ತಿಲ ಅವರು ಚುನಾವಣೆ ಬಂದಾಗ ಗಲಾಟೆಗೆ ನಿಂತು ಬಿಡುವ ಪ್ರವೃತ್ತಿ ಸರಿಯಲ್ಲ ಎಂದು ವೈದ್ಯ ಡಾ. ಎಂ.ಕೆ. ಪ್ರಸಾದ್ ಹೇಳಿದರು. ಗುರುವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಪುತ್ತಿಲ ಅವರಲ್ಲಿ ಸಂಘಟನಾ ಶಕ್ತಿ ಇದೆ. ನನ್ನ

ಹಿಂದೂಪರ ಕೆಲಸಗಳಿಗೆ ಶಾಸಕತ್ವವೇ ಬೇಕೆ? | ದೇವಸ್ಥಾನಗಳಲ್ಲಿ ಹಣ ದುರುಪಯೋಗ ಮಾಡಿದ್ದ ಪುತ್ತಿಲ | ಅರುಣ್ ಪುತ್ತಿಲ ಸಿಂಪಥೈಸರ್ | ಆಶಾ ತಿಮ್ಮಪ್ಪ ಸಮರ್ಥರು. ಅವರ ಬಗ್ಗೆ ಅಪಪ್ರಚಾರ ತರವಲ್ಲ Read More »

ಆಶ್ಮಿ ಕಂಫರ್ಟ್ ನಲ್ಲಿ ಪುತ್ತೂರು ಬಿಜೆಪಿ ಚುನಾವಣಾ ಕಚೇರಿ ಉದ್ಘಾಟನೆ

ಪುತ್ತೂರು : ಬೈಪಾಸ್ ರಸ್ತೆಯಲ್ಲಿರುವ ಆಶ್ಮಿ ಕಂಫರ್ಟ್ ನಲ್ಲಿ ಬಿಜೆಪಿ ಚುನಾವಣಾ ಕಚೇರಿ ಗುರುವಾರ ಬೆಳಿಗ್ಗೆ ಉದ್ಘಾಟನೆಗೊಂಡಿತು. ಗಣಹೋಮ ನೆರವೇರಿಸುವ ಮೂಲಕ ಕಚೇರಿ ಉದ್ಘಾಟನೆಗೊಂಡು ಚುನಾವಣೆಯ ಕಾರ್ಯಚಟುವಟಿಕೆಗಳಿಗೆ ಚಾಲನೆ ನೀಡಲಾಯಿತು. ಪ್ರಧಾನಿ ನರೇಂದ್ರ ಮೋದಿಯವರು ಗುರುವಾರ ಬೆಳಿಗ್ಗೆ ಕರ್ನಾಟಕದ ಬಿಜೆಪಿ ಮುಖಂಡರು, ಕಾರ್ಯಕರ್ತರನ್ನು ಉದ್ದೇಶಿಸಿ ಮಾತನಾಡುವ ಸಂದರ್ಭದಲ್ಲೇ  ಕಚೇರಿ ಉದ್ಘಾಟನೆಗೊಂಡಿತು. ಗಣಹೋಮ ನೆರವೇರಿದ ಬಳಿಕ ಬಿಜೆಪಿ ಮುಂಖಡರು, ಕಾರ್ಯಕರ್ತರು ಎಲ್ ಇಡಿ ಪರದೆ ಮೂಲಕ ನರೇಂದ್ರ ಮೋದಿಯರ ಭಾಷಣಕ್ಕೆ ಕಿವಿಯಾದರು. ಈ ಸಂದರ್ಭದಲ್ಲಿ ಶಾಸಕ ಸಂಜೀವ ಮಠಂದೂರು,

ಆಶ್ಮಿ ಕಂಫರ್ಟ್ ನಲ್ಲಿ ಪುತ್ತೂರು ಬಿಜೆಪಿ ಚುನಾವಣಾ ಕಚೇರಿ ಉದ್ಘಾಟನೆ Read More »

ಸುಳ್ಯ ಆಮ್ ಆದ್ಮಿ ಪಕ್ಷದ ಅಭ್ಯರ್ಥಿ ಸುಮನಾ ಬೊಳ್ನಾರ್ಕರ್ ರಿಂದ ಪ್ರಚಾರ ಕಾರ್ಯ

ಸುಳ್ಯ: ಸುಳ್ಯ ವಿಧಾನಸಭಾ ಕ್ಷೇತ್ರದ ಆಮ್ ಆದ್ಮಿ ಪಕ್ಷದ ಅಭ್ಯರ್ಥಿ ಸುಮನಾ ಬೊಳ್ನಾರ್ಕರ್ ಸುಳ್ಯ ತಾಲೂಕಿನ ಹಲವೆಡೆ ಪ್ರಚಾರ ಕಾರ್ಯ ನಡೆಸಿದರು. ಅಜ್ಜಾವರ, ಅಡ್ಕ, ಮಾವಿನಪಳ್ಳ ಸೇರಿದಂತೆ ಹಲವಾರು ಕಡೆ ಚುನಾವಣಾ ಪ್ರಚಾರ ನಡೆಸಿ, ಕಾರ್ನರ್ ಸಭೆ ನಡೆಸಿ ಮತ ಯಾಚಿಸಿದರು. ಈ ಸಂದರ್ಭದಲ್ಲಿ ಸುಮಾರು 50 ಕ್ಕೂ ಅಧಿಕ ಮಂದಿ ಪಕ್ಷಕ್ಕೆ ಸೇರ್ಪಡೆಗೊಂಡರು. ಈ ಸಂದರ್ಭದಲ್ಲಿ ಪಕ್ಷದ ಮುಖಂಡರಾದ ಗುರುಪ್ರಸಾದ್ ಮೆರ್ಕಜೆ, ಖಲಂದರ್ ಎಲಿಮಲೆ, ಗಣೇಶ್ ಕುಂಡಡ್ಕ, ರಾಮಕೃಷ್ಣ ಬೀರಮಂಗಿಲ, ಸಂಶುದ್ದೀನ್ ಕೆ.ಎಂ., ವಸಂತ, ಸಿಂಚನ,

ಸುಳ್ಯ ಆಮ್ ಆದ್ಮಿ ಪಕ್ಷದ ಅಭ್ಯರ್ಥಿ ಸುಮನಾ ಬೊಳ್ನಾರ್ಕರ್ ರಿಂದ ಪ್ರಚಾರ ಕಾರ್ಯ Read More »

ತಲೆಬೈಲು ಮಠದಲ್ಲಿ ಬೊಟ್ಯಾಡಿ ವಿಶೇಷ ಪ್ರಾರ್ಥನೆ

ಪುತ್ತೂರು: ಶತ್ರುನಿಗ್ರಹ ಕ್ಷೇತ್ರ ಶ್ರೀ ತಲೆಬೈಲು ನರಸಿಂಹ ದೇವರ ಮಠದಲ್ಲಿ ಕರ್ನಾಟಕ ರಾಜ್ಯ ವಿದ್ಯುಚ್ಛಕ್ತಿ ಮಂಡಳಿಯ ನಿರ್ದೇಶಕ ಕಿಶೋರ್ ಕುಮಾರ್ ಬೊಟ್ಯಾಡಿ ಅವರು ವಿಶೇಷ ಪ್ರಾರ್ಥನೆ ಸಲ್ಲಿಸಿದರು. ರಾಜ್ಯದಲ್ಲಿ ಹಾಗೂ ಪುತ್ತೂರಿನಲ್ಲಿ ಬಿಜೆಪಿ ಸರಕಾರ ಅಧಿಕಾರಕ್ಕೆ ಬರುವಂತೆ ಪ್ರಾರ್ಥಿಸಿದರು. ಇದೇ ಸಂದರ್ಭ ಮಠದ ಮಂಜುನಾಥ್ ಉಡುಪ ಅವರು ಕಿಶೋರ್ ಕುಮಾರ್ ಬೊಟ್ಯಾಡಿ ಅವರನ್ನು ಶಾಲು ಹೊದಿಸಿ ಸನ್ಮಾನಿಸಿದರು.

ತಲೆಬೈಲು ಮಠದಲ್ಲಿ ಬೊಟ್ಯಾಡಿ ವಿಶೇಷ ಪ್ರಾರ್ಥನೆ Read More »

ಪುತ್ತಿಲ ಪ್ರಣಾಳಿಕೆಯಲ್ಲಿ ಏನೇನಿದೆ? | ಎಂಡೋ ಸಲ್ಫಾನ್ ಪರಿಹಾರ, ಜಿಲ್ಲಾಕೇಂದ್ರ, 24×7 ಹೆಲ್ಪ್ ಲೈನ್ ಇತ್ಯಾದಿ ಪ್ರಣಾಳಿಕೆಯಲ್ಲಿವೆ

ಪುತ್ತೂರು: ಪಕ್ಷೇತರ ಅಭ್ಯರ್ಥಿಯಾಗಿ ಕಣಕ್ಕಿಳಿದಿರುವ ಅರುಣ್ ಕುಮಾರ್ ಪುತ್ತಿಲ ಅವರು 31 ವಿಷಯಗಳನ್ನು ಮುಂದಿಟ್ಟುಕೊಂಡು ಪ್ರಣಾಳಿಕೆಯನ್ನು ಬಿಡುಗಡೆಗೊಳಿಸಿದರು. ದರ್ಬೆ ಸುಭದ್ರ ಕಲಾಣ ಮಂಟಪದ ಬಳಿಯಲ್ಲಿ ನಡೆದ ಕಾರ್ಯಕ್ರಮದಲ್ಲಿ ಪ್ರಣಾಳಿಕೆಯನ್ನು ಬಿಡುಗಡೆಗೊಳಿಸಲಾಯಿತು. ಸತೀಶ್ ರೈ ನೀರ್ಪಾಡಿ, ಪ್ರಮೋದ್ ರೈ, ಮನ್ಮಥ ಶೆಟ್ಟಿ ಅವರು ಪ್ರಣಾಳಿಕೆ ತಯಾರಿಸುವ ನೇತೃತ್ವ ವಹಿಸಿದ್ದರು. ಅಭ್ಯರ್ಥಿ ಅರುಣ್ ಕುಮಾರ್ ಪುತ್ತಿಲ, ಸುನಿಲ್ ಬೋರ್ಕರ್, ಭಾಸ್ಕರ್ ಆಚಾರ್ಯ ಹಿಂದಾರು, ಸೇಡಿಯಾಪು ಜನಾರ್ದನ ಭಟ್, ಡಾ.ಗಣೇಶ್ ಪ್ರಸಾದ್ ಮುದ್ರಾಜೆ, ಪ್ರಸನ್ನ ಕುಮಾರ್ ಮಾರ್ತಾ, ಸ್ನೇಹ ಸಿಲ್ಕ್ ನ

ಪುತ್ತಿಲ ಪ್ರಣಾಳಿಕೆಯಲ್ಲಿ ಏನೇನಿದೆ? | ಎಂಡೋ ಸಲ್ಫಾನ್ ಪರಿಹಾರ, ಜಿಲ್ಲಾಕೇಂದ್ರ, 24×7 ಹೆಲ್ಪ್ ಲೈನ್ ಇತ್ಯಾದಿ ಪ್ರಣಾಳಿಕೆಯಲ್ಲಿವೆ Read More »

ಆಮ್ ಆದ್ಮಿ ಅಭ್ಯರ್ಥಿ ಡಾ. ಬಿ.ಕೆ. ವಿಶು ಕುಮಾರ್ ಬಿರುಸಿನ ಪ್ರಚಾರ

ಪುತ್ತೂರು: ಆಮ್ ಆದ್ಮಿ ಪಾರ್ಟಿಯ ಪುತ್ತೂರು ವಿಧಾನಸಭಾ ಕ್ಷೇತ್ರದ ಅಭ್ಯರ್ಥಿ ಡಾ. ಬಿ.ಕೆ. ವಿಶು ಕುಮಾರ್ ಅವರು ಕಬಕ ವಿದ್ಯಾಪುರದಲ್ಲಿ ಬಿರುಸಿನ ಪ್ರಚಾರ ನಡೆಸಿದರು. ಪ್ರಚಾರ ಕಾರ್ಯದ ನಡುವೆ ಹಲವರನ್ನು ಆಮ್ ಆದ್ಮಿ ಪಕ್ಷಕ್ಕೆ ಸೇರ್ಪಡೆಗೊಳಿಸಲಾಯಿತು. ವಿದ್ಯಾಪುರದಲ್ಲಿ ಆಮ್ ಆದ್ಮಿ ಪಕ್ಷಕ್ಕೆ ಉತ್ತಮ ಬೆಂಬಲ ವ್ಯಕ್ತವಾಗಿದ್ದು, ಪಕ್ಷದ ಪರವಾಗಿ ಒಲವು ವ್ಯಕ್ತಪಡಿಸಿದ್ದಾರೆ. ಪಕ್ಷ ಅಧಿಕಾರಕ್ಕೆ ಬಂದರೆ, ಅಭಿವೃದ್ಧಿ ಕಾರ್ಯಕ್ಕೆ ವೇಗ ನೀಡುವ ಬಗ್ಗೆ ಭರವಸೆ ನೀಡಲಾಯಿತು ಎಂದು ಡಾ. ಬಿ.ಕೆ. ವಿಶು ಕುಮಾರ್ ತಿಳಿಸಿದ್ದಾರೆ.

ಆಮ್ ಆದ್ಮಿ ಅಭ್ಯರ್ಥಿ ಡಾ. ಬಿ.ಕೆ. ವಿಶು ಕುಮಾರ್ ಬಿರುಸಿನ ಪ್ರಚಾರ Read More »

error: Content is protected !!
Scroll to Top