ರಾಜಕೀಯ

ಮೇ 1ರಂದು ಪುತ್ತೂರಿನಲ್ಲಿ ಎಸ್.ಸಿ. ಸಮಾವೇಶ|ಎಸ್.ಸಿ. ಸಮುದಾಯಕ್ಕೆ ಬಿಜೆಪಿ ನೀಡಿದ ಕೊಡುಗೆಗಳ ವಿವರ ನೀಡಿದ ಅಣ್ಣಪ್ಪ ಕಾರೆಕ್ಕಾಡ್

ಪುತ್ತೂರು: ಮೇ 1ರಂದು ಬೆಳಿಗ್ಗೆ 10.30ಕ್ಕೆ ಪುತ್ತೂರಿನ ದರ್ಶನ್ ಹಾಲಿನಲ್ಲಿ ಎಸ್.ಸಿ. ಸಮಾವೇಶ ನಡೆಯಲಿದೆ ಎಂದು ಎಸ್.ಸಿ. ಮೋರ್ಚಾ ಜಿಲ್ಲಾ ಸದಸ್ಯ ಬಿ.ಕೆ. ಅಣ್ಣಪ್ಪ ಕಾರೆಕ್ಕಾಡ್ ಹೇಳಿದರು. ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಬಿಜೆಪಿಯು ಸಾಕಷ್ಟು ಅಭಿವೃದ್ಧಿ ಕಾರ್ಯಗಳನ್ನು ಮಾಡಿದೆ. ಇದನ್ನು ನೋಡಿಕೊಂಡು ಜನರು ಮತ ಚಲಾಯಿಸಬೇಕು. ಯಾವುದೇ ಆಮಿಷಗಳಿಗೂ ಜನರು ಒಳಗಾಗಬಾರದು ಎಂದ ಅವರು, ಬಿಜೆಪಿ ನೀಡಿರುವ ಯೋಜನೆಗಳು ಹಾಗೂ ಕೆಲಸಗಳ ವಿವರ ನೀಡಿದರು. 1. ಬಿಜೆಪಿ ಮಾಜಿ ಪ್ರಧಾನ ಮಂತ್ರಿ ಅಟಲ್ ಬಿಹಾರಿ ವಾಜಪಾಯಿ ಹಳ್ಳಿ […]

ಮೇ 1ರಂದು ಪುತ್ತೂರಿನಲ್ಲಿ ಎಸ್.ಸಿ. ಸಮಾವೇಶ|ಎಸ್.ಸಿ. ಸಮುದಾಯಕ್ಕೆ ಬಿಜೆಪಿ ನೀಡಿದ ಕೊಡುಗೆಗಳ ವಿವರ ನೀಡಿದ ಅಣ್ಣಪ್ಪ ಕಾರೆಕ್ಕಾಡ್ Read More »

ಪುತ್ತೂರು, ಸುಳ್ಯದಲ್ಲಿ ಮಹಿಳಾ ಅಭ್ಯರ್ಥಿಗಳಿಗೆ ಅವಕಾಶ; ಗೆದ್ದೇ ಗೆಲ್ತೀವಿ: ಅಣ್ಣಾಮಲೈ

ಪುತ್ತೂರು: ಬಹಳ  ಧೈರ್ಯಶಾಲಿ  ಕ್ರಮವನ್ನು ಮೋದಿ ತೆಗೆದುಕೊಂಡಿದ್ದಾರೆ ಎಂದರೆ ಅದಕ್ಕೆ ಮತದಾರರು ಕಾರಣ. ಮುಂದೆಯೂ ಇಂತಹ ಕ್ರಮ ಕೈಗೊಳ್ಳುವ ಅವಶ್ಯಕತೆ ಇದೆ. ಅದಕ್ಕಾಗಿ ರಾಜ್ಯದಲ್ಲಿ ಬಿಜೆಪಿ 130ಕ್ಕೂ ಅಧಿಕ ಸೀಟ್ ಪಡೆದುಕೊಳ್ಳಬೇಕು. ಇದಕ್ಕೆ ಪೂರಕವಾಗಿ ಬಿಜೆಪಿಯ ಭದ್ರ ಬುನಾದಿ ಇರುವ ಪುತ್ತೂರಿನಲ್ಲೂ ಬಿಜೆಪಿ ಗೆಲ್ಲಲಿದೆ ಎಂದು ಕರ್ನಾಟಕ ಬಿಜೆಪಿ ಚುನಾವಣಾ ಸಹ ಪ್ರಭಾರಿ ಅಣ್ಣಾಮಲೈ ಹೇಳಿದರು. ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಬಂಡಾಯ, ಪಕ್ಷೇತರ ಅಭ್ಯರ್ಥಿಗಳ ಬಗ್ಗೆ ಮಾತನಾಡಲ್ಲ. ಕರಾವಳಿಯಲ್ಲಿ ಬಿಜೆಪಿ ಭದ್ರಬುನಾದಿ ಇರುವ ಕಾರಣ, ಪಕ್ಷೇತರರು ಬಿಜೆಪಿಯಲ್ಲಿ

ಪುತ್ತೂರು, ಸುಳ್ಯದಲ್ಲಿ ಮಹಿಳಾ ಅಭ್ಯರ್ಥಿಗಳಿಗೆ ಅವಕಾಶ; ಗೆದ್ದೇ ಗೆಲ್ತೀವಿ: ಅಣ್ಣಾಮಲೈ Read More »

ಕೇರಳ ಬಿಜೆಪಿ ರಾಜ್ಯ ಕಾರ್ಯದರ್ಶಿ ಸುರೇಶ್ ಪುತ್ತೂರು ಬಿಜೆಪಿ ಕಚೇರಿಗೆ ಭೇಟಿ

ಪುತ್ತೂರು: ಚುನಾವಣಾ ಹಿನ್ನೆಲೆಯಲ್ಲಿ ಕೇರಳ ರಾಜ್ಯದ ಬಿಜೆಪಿ ಕಾರ್ಯದರ್ಶಿ, ಅಡ್ವೊಕೇಟ್ ಸುರೇಶ್ ಅವರು ಶನಿವಾರ ಪುತ್ತೂರು ಬಿಜೆಪಿ ಕಚೇರಿಗೆ ಭೇಟಿ ನೀಡಿದರು. ಅಶ್ಮಿ ಕಂಫರ್ಟಿನಲ್ಲಿರುವ ಬಿಜೆಪಿ ಕಚೇರಿಗೆ ಭೇಟಿ ನೀಡಿ, ಮಾತುಕತೆ ನಡೆಸಿದರು. ಈ ಸಂದರ್ಭ ರಾಷ್ಟ್ರೀಯ ಮಹಿಳಾ ಮೋರ್ಚಾ ಕಾರ್ಯಕಾರಿಣಿ ಸದಸ್ಯೆ ಬಿಂದು ಸುರೇಶ್, ದ.ಕ. ಜಿಲ್ಲಾ ಬಿಜೆಪಿ ಉಪಾಧ್ಯಕ್ಷ ಬೂಡಿಯಾರು ರಾಧಾಕೃಷ್ಣ ರೈ ಉಪಸ್ಥಿತರಿದ್ದರು.

ಕೇರಳ ಬಿಜೆಪಿ ರಾಜ್ಯ ಕಾರ್ಯದರ್ಶಿ ಸುರೇಶ್ ಪುತ್ತೂರು ಬಿಜೆಪಿ ಕಚೇರಿಗೆ ಭೇಟಿ Read More »

ಹಿರೇಬಂಡಾಡಿ ಗ್ರಾಮದಲ್ಲಿ ಆಶಾ ತಿಮ್ಮಪ್ಪ ಮತಯಾಚನೆ

ಪುತ್ತೂರು: ಹಿರೇಬಂಡಾಡಿ ಗ್ರಾಮದ 48 ನೇ ಬೂತ್ ನಲ್ಲಿ ಬಿಜೆಪಿ ಅಭ್ಯರ್ಥಿ ಆಶಾ ತಿಮ್ಮಪ್ಪ ಮತಯಾಚನೆ ಮಾಡಿದರು. ಹಿರೇಬಂಡಾಡಿ ಗ್ರಾಮದ 48 ನೇ ಬೂತ್ ನಲ್ಲಿ ಬೆಳಿಯಪ್ಪ ಗೌಡ ಅವರ ಮನೆಗೆ ಭೇಟಿ ನೀಡಿ, ಕರಪತ್ರ ವಿತರಿಸಿದರು. ಈ ಸಂದರ್ಭ ಶಕ್ತಿಯ ಕೇಂದ್ರ ಪ್ರಮುಖರಾದ ದಯಾನಂದ ಸರೋಳಿ, ನವೀನ್ ಕುಬಲ, ರಕ್ಷಿತ್, ವಿಶ್ವನಾಥ, ಸತೀಶ, ನಾರಾಯಾಣ ಮೊದಲಾದವರು ಉಪಸ್ಥಿತರಿದ್ದರು.

ಹಿರೇಬಂಡಾಡಿ ಗ್ರಾಮದಲ್ಲಿ ಆಶಾ ತಿಮ್ಮಪ್ಪ ಮತಯಾಚನೆ Read More »

ಕೇಪು ಬಿಜೆಪಿ ಶಕ್ತಿ ಕೇಂದ್ರದಲ್ಲಿ ಪ್ರಚಾರ ಸಭೆ

ವಿಟ್ಲ: ಪುತ್ತೂರು ವಿಧಾನಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಆಶಾ ತಿಮ್ಮಪ್ಪ ಅವರ ಪರವಾಗಿ ಕೇಪು ಬಿಜೆಪಿ ಶಕ್ತಿ ಕೇಂದ್ರದಲ್ಲಿ ಪ್ರಚಾರ ಸಭೆ ನಡೆಯಿತು. ಅಭ್ಯರ್ಥಿ ಆಶಾ ತಿಮ್ಮಪ್ಪ ಮಾತನಾಡಿ, ಹಿಂದುತ್ವ ಹಾಗೂ ಅಭಿವೃದ್ಧಿಯ ನೆಲೆಯಲ್ಲಿ ಕೆಲಸ ಮಾಡುತ್ತಿರುವ ಪಕ್ಷ ಬಿಜೆಪಿ. ಹಿಂದುತ್ವ ಪರವಾಗಿ ಸಾಕಷ್ಟು ಯೋಜನೆಗಳನ್ನು ಜಾರಿಗೆ ತಂದಿರುವ ಬಿಜೆಪಿ ಸರಕಾರ, ಪುತ್ತೂರು ವಿಧಾನಸಭಾ ಕ್ಷೇತ್ರಕ್ಕೆ ಸಾವಿರ ಕೋಟಿ ರೂ.ಗೂ ಮಿಕ್ಕಿ ಅನುದಾನವನ್ನು ನೀಡಿದೆ. ಆದ್ದರಿಂದ ಬಿಜೆಪಿಯನ್ನು ಮತ್ತೊಮ್ಮೆ ಅಧಿಕಾರಕ್ಕೆ ತರಬೇಕು ಎಂದು ವಿನಂತಿಸಿದರು. ಅಭ್ಯರ್ಥಿ ಆಶಾ

ಕೇಪು ಬಿಜೆಪಿ ಶಕ್ತಿ ಕೇಂದ್ರದಲ್ಲಿ ಪ್ರಚಾರ ಸಭೆ Read More »

ಪುತ್ತಿಲ ಪರ ಸೀತಾ ಪರಿವಾರ | ಪುತ್ತೂರು ಬದಲಾಯಿಸಲು ಪರ್ವ ಕಾಲ

ಪುತ್ತೂರು: ಪಕ್ಷೇತರ ಅಭ್ಯರ್ಥಿ ಅರುಣ್ ಕುಮಾರ್ ಪುತ್ತಿಲ ಅವರ ಪರವಾಗಿ ಮಹಿಳಾ ಸಮಾವೇಶ ‘ಸೀತಾ ಪರಿವಾರ’ ಕಾರ್ಯಕ್ರಮ ಶುಕ್ರವಾರ ಸಂಜೆ ಸುಭದ್ರ ಸಭಾಮಂದಿರದಲ್ಲಿ ಜರಗಿತು. ದಿಕ್ಸೂಚಿ ಭಾಷಣ ಮಾಡಿದ ಅಕ್ಷಯ ಗೋಖಲೆ, ಪುತ್ತೂರಿನ ಮಹಿಳೆಯರು ಮನಸು ಮಾಡಿದಲ್ಲಿ ಅರುಣ್ ಕುಮಾರ್ ಪುತ್ತಿಲ ಅವರು ಜಯಶಾಲಿಯಾಗುವರು. ಪುತ್ತೂರನ್ನು ಬದಲಾಯಿಸಲು ಬೇಕಾದ ಸಮಯ ಬಂದಿದೆ. ಈಗ ಬೇಕಾಗಿರುವುದು ಮನಸ್ಸು ಮತ್ತು ಹೃದಯ ಎಂದರು. ಪಕ್ಷೇತರ ಅಭ್ಯರ್ಥಿ ಅರುಣ್ ಕುಮಾರ್ ಪುತ್ತಿಲ ಮಾತನಾಡಿ, ಅಧಿಕಾರಕ್ಕಾಗಿ ಚುನಾವಣೆಗೆ ನಿಂತದಲ್ಲ. ಸಮಾಜದ ಅಸ್ಮಿತೆಯ ಪ್ರತೀಕವಾದ

ಪುತ್ತಿಲ ಪರ ಸೀತಾ ಪರಿವಾರ | ಪುತ್ತೂರು ಬದಲಾಯಿಸಲು ಪರ್ವ ಕಾಲ Read More »

ಹಣ ನೀಡಿದರೆ ಮಾತ್ರ ಕಾಂಗ್ರೆಸಿನಲ್ಲಿ ಅಭ್ಯರ್ಥಿ : ಮೋನಪ್ಪ ಭಂಡಾರಿ ಆರೋಪ | ರಾಜ್ಯದಲ್ಲಿ ಬಿಜೆಪಿಗೆ 130ಕ್ಕೂ ಅಧಿಕ ಸ್ಥಾನ ಗೆಲ್ಲುವ ವಿಶ್ವಾಸ

ಪುತ್ತೂರು: ಹಣ ನೀಡಿದರೆ ಮಾತ್ರ ಕಾಂಗ್ರೆಸ್ ಪಕ್ಷದಲ್ಲಿ ಅಭ್ಯರ್ಥಿಯಾಗಲು ಸಾಧ್ಯ. ಹೀಗಿದ್ದರೂ ಬಿಜೆಪಿ ಸರಕಾರದ ಮೇಲೆ ಆರೋಪ ಮಾಡುವ ಕಾಂಗ್ರೆಸ್ ಬಳಿ ಯಾವುದೇ ಸಾಕ್ಷ್ಯಾಧಾರಗಳಿಲ್ಲ. ಕಾಂಗ್ರೆಸ್ ಪಕ್ಷ ಒಂದು ಮುಳುಗುವ ಹಡಗು ಎಂದು ವಿಧಾನಪರಿಷತ್ ಮಾಜಿ ಸದಸ್ಯ ಮೋನಪ್ಪ ಭಂಡಾರಿ ಆರೋಪಿಸಿದರು. ಪುತ್ತೂರು ಪ್ರೆಸ್ ಕ್ಲಬ್‍ನಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಮೋಸ, ವಂಚನೆ, ಭ್ರಷ್ಟಾಚಾರ ಕಾಂಗ್ರೆಸ್ ನ ಜನ್ಮಸಿದ್ಧ ಹಕ್ಕು, ಚುನಾವಣೆಯಲ್ಲಿ ಅಭ್ಯರ್ಥಿಗಳಾಗಲು ಕಾಂಗ್ರೆಸ್ ಪಕ್ಷಕ್ಕೆ ಹಣ ಕೊಡಬೇಕು ಎಂದು ಅವರ ಪಕ್ಷದವರೇ ಬಹಿರಂಗವಾಗಿ ಆರೋಪ

ಹಣ ನೀಡಿದರೆ ಮಾತ್ರ ಕಾಂಗ್ರೆಸಿನಲ್ಲಿ ಅಭ್ಯರ್ಥಿ : ಮೋನಪ್ಪ ಭಂಡಾರಿ ಆರೋಪ | ರಾಜ್ಯದಲ್ಲಿ ಬಿಜೆಪಿಗೆ 130ಕ್ಕೂ ಅಧಿಕ ಸ್ಥಾನ ಗೆಲ್ಲುವ ವಿಶ್ವಾಸ Read More »

ಸಂಘಟನೆಗಿಂತ ನಾನೇ ಮಿಗಿಲು ಎಂದವರನ್ನು ಸಂಘ ಸಾಕಷ್ಟು ನೋಡಿದೆ: ಭಜರಂಗದಳ | ಸಂಘಟನೆ ಹೋರಾಟಕ್ಕೆ ಬಿಜೆಪಿ ಸರಕಾರ ಧ್ವನಿ: ಮುರಳೀಕೃಷ್ಣ ಹಸಂತಡ್ಕ

ಪುತ್ತೂರು: ಸಂಘಟನೆಗಿಂತ ನಾನೇ ಮಿಗಿಲು ಎಂದ ಸಾಕಷ್ಟು ನಾಯಕರನ್ನು  ರಾಷ್ಟ್ರೀಯ ಸ್ವಯಂಸೇವಕ ಸಂಘ ಕಂಡಿದ್ದು, ಇದರಲ್ಲಿ ಪುತ್ತೂರಿನ ಪಕ್ಷೇತರ ಅಭ್ಯರ್ಥಿಯೂ ಸೇರಿಕೊಳ್ಳುತ್ತಾರೆ ಎಂದು ಭಜರಂಗ ದಳ ದಕ್ಷಿಣ ಪ್ರಾಂತ ಸಹ ಸಂಚಾಲಕ ಮುರಳೀಕೃಷ್ಣ ಹಸಂತಡ್ಕ ಹೇಳಿದರು. ಪುತ್ತೂರು ಪ್ರೆಸ್ ಕ್ಲಬ್ ನಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ವ್ಯಕ್ತಿ ನಿರ್ಮಾಣ ಕಾರ್ಯವನ್ನು ಸಂಘ ನಿರಂತರವಾಗಿ ಮಾಡಿಕೊಂಡು ಬರುತ್ತಿದೆ. ಆದರೆ ಸಂಘದ ಚೌಕಟ್ಟನ್ನು ಮೀರಿ ಸಂಘದಿಂದ ಹೊರ ನಡೆದ ಹಲವಾರು ಮಹಾನ್ ನಾಯಕರು ದೇಶದಲ್ಲಿದ್ದಾರೆ. ಕಲ್ಯಾಣ್ ಸಿಂಗ್ ,

ಸಂಘಟನೆಗಿಂತ ನಾನೇ ಮಿಗಿಲು ಎಂದವರನ್ನು ಸಂಘ ಸಾಕಷ್ಟು ನೋಡಿದೆ: ಭಜರಂಗದಳ | ಸಂಘಟನೆ ಹೋರಾಟಕ್ಕೆ ಬಿಜೆಪಿ ಸರಕಾರ ಧ್ವನಿ: ಮುರಳೀಕೃಷ್ಣ ಹಸಂತಡ್ಕ Read More »

ಪುತ್ತೂರು ಚುನಾವಣಾ ಆಖಾಡದಲ್ಲಿ ಹಿಂದುತ್ವ v/s ಹಿಂದುತ್ವ | ಮುಖಂಡರ ಮೌನದಿಂದ ಬಡವಾದೀತೆ ಬಿಜೆಪಿ

ಪುತ್ತೂರು: ಕಾಂಗ್ರೆಸಿನೊಳಗಡೆಯಿದ್ದ ಬಂಡಾಯ, ಕೆಸರೆರಚಾಟ ಈ ಬಾರಿ ಬಿಜೆಪಿಗೆ ಶಿಫ್ಟ್ ಆಗಿದೆ. ಶಿಸ್ತಿಗೆ ಹೆಸರಾಗಿದ್ದ ಪಕ್ಷ ಬಿಜೆಪಿ. ಇಲ್ಲಿ ಎಲ್ಲದಕ್ಕೂ ಒಂದು ಚೌಕಟ್ಟು ಇದೆ. ನಿಯಮ ಇದೆ. ಹೈಕಮಾಂಡ್ ಹೇಳಿದ್ದಕ್ಕೆ ಇಲ್ಲ ಎನ್ನುವವರೇ ಇಲ್ಲ. ಆದರೆ ಈ ಬಾರಿ ಬಿಜೆಪಿ ಲಂಗು ಲಗಾಮಿಲ್ಲದ ಕುದುರೆಯಂತಾಗಿದೆ. ಹೇಳುವವರು – ಕೇಳುವವರು ಯಾರೂ ಇಲ್ಲ ಎಂಬಂತಾಗಿದೆ. ಪ್ರತಿ ಬಾರಿಯೂ ಚುನಾವಣೆ ಸಮೀಪಿಸುತ್ತಿದ್ದಂತೆ ಕಾಂಗ್ರೆಸ್ ಪಕ್ಷದೊಳಗೆ ಕೆಸರೆರಚಾಟ ಸಾಮಾನ್ಯವಾಗಿತ್ತು. ಆದರೆ ಈ ಬಾರಿ ಒಗ್ಗಟ್ಟೇ ಒಗ್ಗಟ್ಟು. ತಳಮಟ್ಟದಲ್ಲೇ ಭಾರೀ ಪ್ರಚಾರ ನಡೆಯುತ್ತಿದೆ.

ಪುತ್ತೂರು ಚುನಾವಣಾ ಆಖಾಡದಲ್ಲಿ ಹಿಂದುತ್ವ v/s ಹಿಂದುತ್ವ | ಮುಖಂಡರ ಮೌನದಿಂದ ಬಡವಾದೀತೆ ಬಿಜೆಪಿ Read More »

ಪುತ್ತೂರು ಬ್ಲಾಕ್ ಕಾಂಗ್ರೆಸ್ ನಗರ, ಗ್ರಾಮೀಣ ಪ್ರಚಾರ ಸಮಿತಿಗೆ ಆಯ್ಕೆ

ಪುತ್ತೂರು: ಪುತ್ತೂರು ಬ್ಲಾಕ್ ಕಾಂಗ್ರೆಸ್ ನಗರ ಹಾಗೂ ಗ್ರಾಮೀಣ ಪ್ರಚಾರ ಸಮಿತಿಗೆ ಸಂಚಾಲಕರು ಹಾಗೂ ಸಹಸಂಚಾಲಕರನ್ನು ನೇಮಕ ಮಾಡಲಾಗಿದೆ. ನಗರ ಸಮಿತಿ ಸಂಚಾಲಕರಾಗಿ ಪ್ರಸನ್ನ ಕುಮಾರ್ ಶೆಟ್ಟಿ, ಸಹಸಂಚಾಲಕರಾಗಿ ಶಿವನಾಥ ರೈ ಮೇಗಿನಗುತ್ತು ಹಾಗೂ ಹರ್ಷದ್ ದರ್ಬೆ ಅವರನ್ನು ನೇಮಕ ಮಾಡಲಾಗಿದೆ. ಗ್ರಾಮೀಣ ಪ್ರಚಾರ ಸಮಿತಿ ಸಹಸಂಚಾಲಕರಾಗಿ ಶಶಿಕಿರಣ್ ರೈ ನೂಜಿಬೈಲು, ಬೂಡಿಯಾರ್ ಪುರುಷೋತ್ತಮ ರೈ ಅವರನ್ನು ನೇಮಕ ಮಾಡಲಾಗಿದೆ. ಪುತ್ತೂರು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಎಂ.ಬಿ.ವಿಶ್ವನಾಥ ರೈ, ಪ್ರಚಾರ ಸಮಿತಿ ಅಧ್ಯಕ್ಷ ಭಾಸ್ಕರ ಗೌಡ ಕೋಡಿಂಬಾಳ

ಪುತ್ತೂರು ಬ್ಲಾಕ್ ಕಾಂಗ್ರೆಸ್ ನಗರ, ಗ್ರಾಮೀಣ ಪ್ರಚಾರ ಸಮಿತಿಗೆ ಆಯ್ಕೆ Read More »

error: Content is protected !!
Scroll to Top