ರಾಜಕೀಯ

25ರಿಂದ 30 ಸಾವಿರ ಮತಗಳ ಅಂತರದಿಂದ ಜಯ: ಅಶೋಕ್ ಕುಮಾರ್ ರೈ ವಿಶ್ವಾಸ | ಹಾರ, ಸನ್ಮಾನ ಬೇಡ, ಆ ಹಣ ಬಡವರಿಗೆ ನೀಡಿ | ಬೇರೆ ಪಕ್ಷದವರಿಗೂ ನೋವುಂಟು ಮಾಡಬೇಡಿ | ಕಾಂಗ್ರೆಸ್ ಒಗ್ಗಟ್ಟಿಗೆ ಅಭಿನಂದನೆ ತಿಳಿಸಿದ ಅಶೋಕ್ ಕುಮಾರ್ ರೈ

ಪುತ್ತೂರು: ಚುನಾವಣೆಯಲ್ಲಿ ಗೆಲುವಿನ ಅಲೆ ನಮ್ಮ ಪರವಾಗಿದೆ. ಜೊತೆಗೆ ಕಾಂಗ್ರೆಸ್ ಕಾರ್ಯಕರ್ತರು, ಮುಖಂಡರು ಒಗ್ಗಟ್ಟಾಗಿ ಕೆಲಸ ಮಾಡಿದ್ದರಿಂದ ಕಾಂಗ್ರೆಸ್ ಈ ಬಾರಿ ಗೆಲುವುದು ಖಂಡಿತಾ. ಪುತ್ತೂರಿನಲ್ಲಿ 25ರಿಂದ 30 ಸಾವಿರ ಮತಗಳ ಅಂತರದಿಂದ ಕಾಂಗ್ರೆಸ್ ಜಯಭೇರಿ ಬಾರಿಸಲಿದೆ ಎಂದು ಕಾಂಗ್ರೆಸ್ ಅಭ್ಯರ್ಥಿ ಅಶೋಕ್ ಕುಮಾರ್ ರೈ ಹೇಳಿದ್ದಾರೆ. ನ್ಯೂಸ್ ಪುತ್ತೂರು ಜೊತೆ ಮಾತನಾಡಿದ ಅವರು, ಚುನಾವಣೆ ಉತ್ತಮ ರೀತಿಯಲ್ಲಿ ನಡೆದಿರುವುದು ಎಲ್ಲರಿಗೂ ತಿಳಿದಿರುವ ಸಂಗತಿ. ಈ ಚುನಾವಣೆಯಲ್ಲಿ ಮತದಾರರು ನಮಗೆ ಆಶೀರ್ವಾದ ಮಾಡುತ್ತಾರೆ ಎಂದು ವಿಶ್ವಾಸ ವ್ಯಕ್ತಪಡಿಸಿದ […]

25ರಿಂದ 30 ಸಾವಿರ ಮತಗಳ ಅಂತರದಿಂದ ಜಯ: ಅಶೋಕ್ ಕುಮಾರ್ ರೈ ವಿಶ್ವಾಸ | ಹಾರ, ಸನ್ಮಾನ ಬೇಡ, ಆ ಹಣ ಬಡವರಿಗೆ ನೀಡಿ | ಬೇರೆ ಪಕ್ಷದವರಿಗೂ ನೋವುಂಟು ಮಾಡಬೇಡಿ | ಕಾಂಗ್ರೆಸ್ ಒಗ್ಗಟ್ಟಿಗೆ ಅಭಿನಂದನೆ ತಿಳಿಸಿದ ಅಶೋಕ್ ಕುಮಾರ್ ರೈ Read More »

10ರಿಂದ 12 ಸಾವಿರ ಮತಗಳ ಅಂತರದಿಂದ ಗೆಲುವು ನಿಶ್ಚಿತ: ಬಿಜೆಪಿ ಅಭ್ಯರ್ಥಿ ಆಶಾ ತಿಮ್ಮಪ್ಪ

ಪುತ್ತೂರು: ಪ್ರಜಾಪ್ರಭುತ್ವದ ಮೌಲ್ಯವನ್ನು ಜನರು ಅರ್ಥ ಮಾಡಿಕೊಂಡಿದ್ದಾರೆ ಎನ್ನುವುದು ನಿನ್ನೆಯ ಮತದಾನದಿಂದ ತಿಳಿದುಬರುತ್ತದೆ. ಪುತ್ತೂರು ವಿಧಾನಸಭಾ ಕ್ಷೇತ್ರದಲ್ಲಿ ಉತ್ತಮ ಮತದಾನವಾಗಿದ್ದು, ಬಿಜೆಪಿ ಜಯ ಗಳಿಸುವುದು ನಿಶ್ಚಿತ ಎಂದು ಬಿಜೆಪಿ ಅಭ್ಯರ್ಥಿ ಆಶಾ ತಿಮ್ಮಪ್ಪ ವಿಶ್ವಾಸ ವ್ಯಕ್ತಪಡಿಸಿದ್ದಾರೆ. ಮತದಾನದ ಹಿನ್ನೆಲೆಯಲ್ಲಿ ನ್ಯೂಸ್ ಪುತ್ತೂರು ಜೊತೆ ಮಾತನಾಡಿದ ಅವರು, ಬಿಜೆಪಿ ಗೆಲುವು ನಿಶ್ಚಿತ. ಅದರಲ್ಲಿ ಎರಡು ಮಾತಿಲ್ಲ. ಗೆಲುವಿನ ಅಂತರ ಸುಮಾರು 10ರಿಂದ 12 ಸಾವಿರದಷ್ಟು ಇರಬಹುದು ಎಂಬ ನಿರೀಕ್ಷೆ ಇಟ್ಟುಕೊಂಡಿದ್ದೇನೆ ಎಂದು ತಿಳಿಸಿದ್ದಾರೆ. ಮತದಾನದಲ್ಲಿ ಮತದಾರರು ಉತ್ಸಾಹದಿಂದ ಪಾಲ್ಗೊಂಡಿರುವುದು

10ರಿಂದ 12 ಸಾವಿರ ಮತಗಳ ಅಂತರದಿಂದ ಗೆಲುವು ನಿಶ್ಚಿತ: ಬಿಜೆಪಿ ಅಭ್ಯರ್ಥಿ ಆಶಾ ತಿಮ್ಮಪ್ಪ Read More »

ಕದನ ವಿರಾಮ: ಪುತ್ತೂರಿನಲ್ಲಿ ಉತ್ತಮ ಮತದಾನ

ಪುತ್ತೂರು: ಚುನಾವಣೆಯ ಹಣಾಹಣಿ ಮುಕ್ತಾಯಗೊಂಡಿದೆ. ಇನ್ನೇನಿದ್ದರೂ ಮತ ಎಣಿಕೆಯಂದಿನ ಧಾವಂತ. ಅಲ್ಲಿವರೆಗೆ ಅಭ್ಯರ್ಥಿಗಳ ಭವಿಷ್ಯ ಮತಯಂತ್ರದೊಳಗೆ ಭದ್ರವಾಗಿರಲಿದೆ. ಪುತ್ತೂರು ತಾಲೂಕಿನಲ್ಲಿ ಸಂಜೆ 6 ಗಂಟೆಯವರೆಗೆ ಒಟ್ಟು ಶೇ. 79.98ರಷ್ಟು ಮತದಾನವಾಗಿದ್ದು, ದಕ್ಷಿಣ ಕನ್ನಡ ಜಿಲ್ಲೆಯಲ್ಲೇ ಇದು ಹೆಚ್ಚಿನ ಮತದಾನ ಎಂದು ಅಂದಾಜಿಸಲಾಗಿದೆ‌. ಬೆಳಿಗ್ಗೆಯಿಂದಲೇ ಮತಗಟ್ಟೆಗಳಲ್ಲಿ ಬಿಡುವಿಲ್ಲದೆ ಮತದಾನವಾಗಿದೆ. ಹೆಚ್ಚಿನ ಮತಗಟ್ಟೆಗಳಲ್ಲಿ ಉದ್ದನೆಯ ಸಾಲು ಇತ್ತು. ಆದ್ದರಿಂದ ಈ ವರ್ಷ ಹೆಚ್ಚಿನ ಪ್ರಮಾಣದಲ್ಲಿ ಮತದಾನ ಆಗುತ್ತದೆ ಎಂದು ಮಧ್ಯಾಹ್ನದ ಹೊತ್ತಿಗೆ ಸೂಚನೆ ಲಭ್ಯವಾಗಿತ್ತು.

ಕದನ ವಿರಾಮ: ಪುತ್ತೂರಿನಲ್ಲಿ ಉತ್ತಮ ಮತದಾನ Read More »

ಮತ ಚಲಾಯಿಸಿದ ಆದಿಚುಂಚನಗಿರಿ ಮಹಾಸಂಸ್ಥಾನದ ಶ್ರೀ ನಿರ್ಮಲಾನಂದನಾಥ ಮಹಾಸ್ವಾಮೀಜಿ

ಪುತ್ತೂರು: ಶ್ರೀ ಆದಿಚುಂಚನಗಿರಿ ಮಹಾಸಂಸ್ಥಾನದ ಶ್ರೀ ನಿರ್ಮಲಾನಂದನಾಥ ಮಹಾಸ್ವಾಮೀಜಿಯವರು ಮಂಡ್ಯ ಜಿಲ್ಲೆಯ ನಾಗಮಂಗಲ ತಾಲೂಕಿನ ಮತಗಟ್ಟೆಯಲ್ಲಿ ಮತದಾನ ಮಾಡಿದರು. ಶ್ರೀ ಸಂಸ್ಥಾನದ ಸ್ವಾಮೀಜಿಯವರು ಅವರೊಂದಿಗೆ ಮತದಾನ ಮಾಡಿದರು. ಈ ಸಂದರ್ಭದಲ್ಲಿ ಅವರು ತಮ್ಮ ಮತ ಚೀಟಿಯನ್ನು ಪ್ರದರ್ಶಿಸಿ ಮತದಾನ ಮಾಡುವಂತೆ ಸಂದೇಶ ನೀಡಿದರು.

ಮತ ಚಲಾಯಿಸಿದ ಆದಿಚುಂಚನಗಿರಿ ಮಹಾಸಂಸ್ಥಾನದ ಶ್ರೀ ನಿರ್ಮಲಾನಂದನಾಥ ಮಹಾಸ್ವಾಮೀಜಿ Read More »

ಸುಳ್ ಅಭ್ಯರ್ಥಿ ಭಾಗೀರಥಿ ಮುರುಳ್ಯ ಹಿರೇಬಂಡಾಡಿ ಕ್ಷೇತ್ರಕ್ಕೆ ಭೇಟಿ

ಪುತ್ತೂರು: ಸುಳ್ಯ ಬಿಜೆಪಿ ಅಭ್ಯರ್ಥಿ ಭಾಗೀರಥಿ ಮುರುಳ್ಯ  ಅವರು ಬೂತ್ ಪ್ರವಾಸದ ಮಧ್ಯೆ ಪುತ್ತೂರು ವಿಧಾನಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಆಶಾ ತಿಮ್ಮಪ್ಪ ಅವರ ಕ್ಷೇತ್ರದ ಹಿರೇಬಂಡಾಡಿ ಬೂತಿಗೆ ಭೇಟಿ ನೀಡಿದರು. ಭೇಟಿ ನೀಡಿದ ಅವರು ಅಲ್ಲಿನ ಕಾರ್ಯಕರ್ತರ ಜತೆ ಫೋಟೊ ಕ್ಲಿಕ್ಕಿಸಿಕೊಂಡರು. ಈ ಸಂದರ್ಭದಲ್ಲಿ ಪಕ್ಷದ ಪ್ರಮುಖರು, ಕಾರ್ಯಕರ್ತರು ಉಪಸ್ಥಿತರಿದ್ದರು.

ಸುಳ್ ಅಭ್ಯರ್ಥಿ ಭಾಗೀರಥಿ ಮುರುಳ್ಯ ಹಿರೇಬಂಡಾಡಿ ಕ್ಷೇತ್ರಕ್ಕೆ ಭೇಟಿ Read More »

ಒಬ್ಬರ ಮತ ಇನ್ನೊಬ್ಬರಿಂದ ಚಲಾವಣೆ: ಮಾತಿನ ಚಕಮಕಿ | ಮತದಾನ ಅವಕಾಶ ಕಳೆದುಕೊಂಡ ಮತದಾರ

ಕಡಬ: ತಾಲೂಕಿನ‌ 102 ನೆಕ್ಕಿಲಾಡಿ ಗ್ರಾಮದ ಕರ್ಮಾಯಿ ಶಾಲಾ 101ನೇ ಮತಗಟ್ಟೆಯಲ್ಲಿ ಸಾದಿಕ್ ಎಂಬವರು ಸಾದಿಕ್ ಕೆ ಎಂಬವರ ಮತವನ್ನು ಚಲಾಯಿಸಿದ್ದು, ಸ್ವಲ್ಪ ಹೊತ್ತು ಗೊಂದಲದ ವಾತಾವರಣ ನಿರ್ಮಾಣವಾಯಿತು. ಇಬ್ಬರ ತಂದೆಯ ಹೆಸರು ಅಬೂಬಕ್ಕರ್ ಆಗಿದ್ದುದೇ ಗೊಂದಲಕ್ಕೆ ಕಾರಣ. ಸ್ವಲ್ಪ ಹೊತ್ತು ಅಧಿಕಾರಿಗಳು ಗಲಬಿಲಿಗೊಂಡರು. ಮತಗಟ್ಟೆಯ ಅಧಿಕಾರಿಗಳ ಎಡವಟ್ಟಿನಿಂದ ಈ ಪ್ರಮಾದ ನಡೆದಿದ್ದು. ಸಾಧಿಕ್ ಕೆ ಎಂಬವರಿಗೆ ಮತದಾನದ ಅವಕಾಶ ಇಲ್ಲದಂತಾಯಿತು. ಸ್ಥಳದಲ್ಲಿ ಮಾತಿನ ಚಕಮಕಿ, ವಾಗ್ಯುದ್ದ ನಡೆಯಿತು. ಎಷ್ಟೇ ಚರ್ಚೆ ನಡೆದರು ಸಾದಿಕ್ ಕೆ ಅವರಿಗೆ

ಒಬ್ಬರ ಮತ ಇನ್ನೊಬ್ಬರಿಂದ ಚಲಾವಣೆ: ಮಾತಿನ ಚಕಮಕಿ | ಮತದಾನ ಅವಕಾಶ ಕಳೆದುಕೊಂಡ ಮತದಾರ Read More »

ಕೈಕೊಟ್ಟ ಮತಯಂತ್ರದಿಂದ ಮತದಾನ ವಿಳಂಬ

ಕಡಬ: ಕಡಬ ತಾಲೂಕಿನಲ್ಲಿ ಮುಂಜಾನೆಯಿಂದಲೇ ಬಿರುಸಿನ ಮತದಾನ ಶಾಂತಿಯುತವಾಗಿ ನಡೆಯುತ್ತಿದೆ. ಅಲ್ಲಲ್ಲಿ ಮತಯಂತ್ರ ಕೆಟ್ಟು ಹೋಗಿ  ಮತದಾನ ಸ್ವಲ್ಪ ಮಟ್ಟಿನ‌ ವಿಳಂಬವಾಗಿತ್ತು. ಕೊಯಿಲ ಗ್ರಾಮದ ಸಬಳೂರು ಸರಕಾರಿ ಶಾಲೆಯಲ್ಲಿನ ಮತಕೇಂದ್ರದಲ್ಲಿ ಮತಯಂತ್ರ ಕೈಕೊಟ್ಟು ಸುಮಾರು ಅರ್ಧ ಗಂಟೆ ಹೊತ್ತು ಮತದಾರರು ಹಾಗೂ ಮತಗಟ್ಟೆಯ ಅಧಿಕಾರಿಗಳು ಚಡಪಡಿಸುವಂತಾಗಿತ್ತು. ಮತದಾನ ಮಾಡಲು ಬಂದವರ ಸರತಿ ಸಾಲು ಹನುಮಂತನ ಬಾಲದಂತೆ ಉದ್ದವಾಗುತ್ತಾ ಹೊಯಿತು. ಮತಯಂತ್ರ ದುರಸ್ತಿಯಾದ ಬಳಿಕ  ಮತದಾನ ಸಲೀಸಾಗಿ ನಡೆಯಿತು. ಇದೇ ಪರಿಸ್ಥಿತಿ ತಾಲೂಕಿನ ಬಲ್ಯ ಗ್ರಾಮದ ಬಲ್ಯ ಮತಗಟ್ಟೆ

ಕೈಕೊಟ್ಟ ಮತಯಂತ್ರದಿಂದ ಮತದಾನ ವಿಳಂಬ Read More »

ಆಟೋದಲ್ಲಿ ಬಂದು ಮತದಾನ ಮಾಡಿದ ಒಡಿಯೂರು ಶ್ರೀ | ಸರಳತೆಯ ಸಂದೇಶ ಸಾರಿದ ಸ್ವಾಮೀಜಿ

ಪುತ್ತೂರು: ಒಡಿಯೂರು ಸಂಸ್ಥಾನದ ಶ್ರೀ ಗುರುದೇವಾನಂದ ಸ್ವಾಮೀಜಿ ಅವರು ಬುಧವಾರ ಆಟೊ ರಿಕ್ಷಾದಲ್ಲಿ ಬಂದು ಮತದಾನ ಮಾಡಿದರು. ಪ್ರಜಾಪ್ರಭುತ್ವದ ಬಹುದೊಡ್ಡ ಹಬ್ಬವೆಂದೇ ಹೇಳಲಾಗುವ ಮತದಾನಕ್ಕೆ ರಿಕ್ಷಾದಲ್ಲಿ ಬಂದು, ಸರಳತೆಯ ಟಚ್ ನೀಡಿದರು. ಮತದಾನದ ಪ್ರಕ್ರಿಯೆಯಲ್ಲಿ ಪ್ರತಿಯೊಬ್ಬರೂ ಪಾಲ್ಗೊಳ್ಳಬೇಕು ಎಂಬ ಸಂದೇಶವನ್ನು ನೀಡಿದರು.

ಆಟೋದಲ್ಲಿ ಬಂದು ಮತದಾನ ಮಾಡಿದ ಒಡಿಯೂರು ಶ್ರೀ | ಸರಳತೆಯ ಸಂದೇಶ ಸಾರಿದ ಸ್ವಾಮೀಜಿ Read More »

ಬೂತ್ ಬೂತ್ ಗೆ ತೆರಳಿ ಕಾರ್ಯಕರ್ತರಿಗೆ ಹುರುಪು ತುಂಬಿದ ಆಶಾ ತಿಮ್ಮಪ್ಪ

ಪುತ್ತೂರು: ಒಂದೆಡೆ ಚುನಾವಣೆ ನಡೆಯುತ್ತಿದ್ದಂತೆ ಇನ್ನೊಂದೆಡೆ ಬಿಜೆಪಿ ಅಭ್ಯರ್ಥಿ ಆಶಾ ತಿಮ್ಮಪ್ಪ ಅವರು ಬೂತ್ ಬೂತ್ ಗಳಿಗೆ ತೆರಳಿ ಕಾರ್ಯಕರ್ತರಿಗೆ ಹುರುಪು ತುಂಬಿದರು. ಮತಗಟ್ಟೆಯ ಹೊರಗಡೆ ಹಾಕಲಾಗಿರುವ ಬೂತ್ ಗಳಲ್ಲಿ ಬಿಜೆಪಿ ಕಾರ್ಯಕರ್ತರು ಅಭ್ಯರ್ಥಿ ಪರ ಪ್ರಚಾರ ನಡೆಸುತ್ತಿದ್ದರು. ಇದಕ್ಕೆ ಪೂರಕವಾಗಿ ಆಶಾ ತಿಮ್ಪಪ್ಪ ಅವರು ಬೂತ್ ಬೂತ್ ಗಳಿಗೆ ತೆರಳಿ, ಕಾರ್ಯಕರ್ತ ಕೆಲಸವನ್ನು ಪ್ರಶಂಸಿಸಿದರು. ಆಶಾ ತಿಮ್ಮಪ್ಪ  ಅವರ ಜೊತೆಗೆ ಕಿಶೋರ್ ಕುಮಾರ್ ಬೊಟ್ಯಾಡಿ, ಬೂತ್ ಪ್ರಮುಖರು ಉಪಸ್ಥಿತರಿದ್ದರು.

ಬೂತ್ ಬೂತ್ ಗೆ ತೆರಳಿ ಕಾರ್ಯಕರ್ತರಿಗೆ ಹುರುಪು ತುಂಬಿದ ಆಶಾ ತಿಮ್ಮಪ್ಪ Read More »

ಸರತಿ ಸಾಲಿನಲ್ಲಿ ನಿಂತು ಮತ ಚಲಾಯಿಸಿದ ಅಶೋಕ್ ಕುಮಾರ್ ರೈ

ಪುತ್ತೂರು: ಕಾಂಗ್ರೆಸ್ ಅಭ್ಯರ್ಥಿ ಅಶೋಕ್ ಕುಮಾರ್ ರೈ ಅವರು ಕೋಡಿಂಬಾಡಿ ಮತಗಟ್ಟೆಯಲ್ಲಿ ಮತ ಚಲಾಯಿಸಿದರು. ಬೆಳಿಗ್ಗೆ ಕೋಡಿಂಬಾಡಿ ಶ್ರೀ ಮಹಿಷಮರ್ಧಿನಿ ದೇವಸ್ಥಾನ ಹಾಗೂ ಪುತ್ತೂರು ಶ್ರೀ ಮಹಾಲಿಂಗೇಶ್ವರ ದೇವಸ್ಥಾನಗಳಿಗೆ ಭೇಟಿ ನೀಡಿ, ವಿಶೇಷ ಪ್ರಾರ್ಥನೆ ಸಲ್ಲಿಸಿದರು. ಬಳಿಕ ಕೋಡಿಂಬಾಡಿ ಮತಗಟ್ಟೆಗೆ ಆಗಮಿಸಿ, ಸರತಿ ಸಾಲಿನಲ್ಲಿ ನಿಂತು ಮತ ಚಲಾಯಿಸಿದರು.

ಸರತಿ ಸಾಲಿನಲ್ಲಿ ನಿಂತು ಮತ ಚಲಾಯಿಸಿದ ಅಶೋಕ್ ಕುಮಾರ್ ರೈ Read More »

error: Content is protected !!
Scroll to Top