ಪುತ್ತೂರಿನ ಸರಕಾರಿ ಇಲಾಖೆಗಳಲ್ಲಿ ತಾಂಡವ ವಾಡುತ್ತಿರುವ ಭ್ರಷ್ಟಾಚಾರ | ನಾನು ಹೊಡೆದಂತೆ ಮಾಡುತ್ತೇನೆ, ನೀವು ಕೂಗಿದಂತೆ ಮಾಡಿ ಎಂದು ಅಧಿಕಾರಿಗಳಿಗೆ ಹೇಳಿದ್ದಾರೋ ಎಂಬುದು ಅರ್ಥವಾಗುತ್ತಿಲ್ಲ: ಹರೀಶ್ ಬಿಜತ್ರೆ
ಪುತ್ತೂರು: ಪುತ್ತೂರಿನ ಸರಕಾರಿ ಇಲಾಖೆಗಳಲ್ಲಿ ಭ್ರಷ್ಟಾಚಾರ ತಾಂಡವ ವಾಡುತ್ತಿದ್ದು, ಭ್ರಷ್ಟಾಚಾರ ನಿರ್ಮೂಲನೆ ಮಾಡುತ್ತೇನೆ ಎಂದು ಪುತ್ತೂರು ಶಾಸಕ ಹೇಳಿಕೆಗಳು ಕೇವಲ ಗಾಳಿ ಮಾತಿಗೆ ಮೀಸಲಾಗಿದ್ದು, ನಾನು ಹೊಡೆದಂತೆ ಮಾಡುತ್ತೇನೆ, ನೀವು ಕೂಗಿದಂತೆ ಮಾಡಿ ಎಂದು ಅಧಿಕಾರಿಗಳಿಗೆ ಹೇಳಿದ್ದಾರೋ ಎಂಬುದು ಅರ್ಥವಾಗುತ್ತಿಲ್ಲ ಎಂದು ಜಿಲ್ಲಾ ಎಸ್.ಟಿ.ಮೋರ್ಚಾ ಅಧ್ಯಕ್ಷ, ಮಾಜಿ ತಾಪಂ ಅಧ್ಯಕ್ಷ ಹರೀಶ್ ಬಿಜತ್ರೆ ತಿಳಿಸಿದ್ದಾರೆ. ಪತ್ರಿಕಾ ಪ್ರಕಟಣೆ ನೀಡಿರುವ ಅವರು, ರಾಜ್ಯದ ಮುಖ್ಯಮಂತ್ರಿಗಳು ಸೇರಿದಂತೆ ಸಂಪುಟದ ಸಚಿವರುಗಳು ಹಗರಣಗಳಲ್ಲಿ ಸಿಲುಕಿ ಕದ್ದ ಮಾಲನ್ನು ಹಿಂತಿರುಗಿಸಿ ನಾವುಗಳು ಸಾಚಾ […]










