ರಾಜಕೀಯ

ಪುತ್ತೂರಿಗೆ ಆಗಮಿಸಿದ ಫೈರ್ ಬ್ರಾಂಡ್ ಯತ್ನಾಳ್

ಪುತ್ತೂರು: ಬಿಜೆಪಿ ಫೈರ್ ಬ್ರಾಂಡ್ ನಾಯಕ ಬಸನಗೌಡ ಪಾಟೀಲ್ ಯತ್ನಾಳ್ ಪುತ್ತೂರಿಗೆ ಆಗಮಿಸಿದ್ದಾರೆ. ಪೊಲೀಸ್ ದೌರ್ಜನ್ಯಕ್ಕೆ ಒಳಗಾದ ಯುವಕರ ಆರೋಗ್ಯ ವಿಚಾರಿಸಿ, ಸೂಕ್ತ ನ್ಯಾಯ ಒದಗಿಸಿಕೊಡುವ ಸಲುವಾಗಿ ಆಗಮಿಸಿರುವ ಯತ್ನಾಳ್ ಅವರ ಭೇಟಿ ಮಹತ್ವ ಪಡೆದುಕೊಂಡಿದೆ. ವಿಮಾನದ ಮೂಲಕ ಮಂಗಳೂರಿಗೆ ಆಗಮಿಸಿದ ಯತ್ನಾಳ್ ಅವರು, ಅಲ್ಲಿಂದ ವಾಹನದಲ್ಲಿ ಪುತ್ತೂರಿಗೆ ಆಗಮಿಸಿದರು. ಬೆಳಿಗ್ಗೆಯಿಂದಲೇ ಪುತ್ತೂರಿನಲ್ಲಿ ತಮ್ಮ ನೆಚ್ಚಿನ ನಾಯಕನಿಗಾಗಿ ಕಾದು ಕುಳಿತಿದ್ದ ಅಭಿಮಾನಿಗಳು, ಯತ್ನಾಳ್ ಬರುತ್ತಿದ್ದಂತೆ ಮುತ್ತಿಕ್ಕಿದರು.

ಪುತ್ತೂರಿಗೆ ಆಗಮಿಸಿದ ಫೈರ್ ಬ್ರಾಂಡ್ ಯತ್ನಾಳ್ Read More »

ಡಿವೈಎಸ್ಪಿ ಹುದ್ದೆಗೆ ಕಳಂಕ ತಂದ ಪುತ್ತೂರು ಡಿವೈಎಸ್ಪಿಯ ಅಮಾನತು ಮಾಡಿ

ಕಡಬ: ಪುತ್ತೂರು ಬ್ಯಾನರ್ ಪ್ರಕರಣಕ್ಕೆ ಸಂಬಂಧಿಸಿ ತಮ್ಮ ಹುದ್ದೆಯನ್ನು ಅರಿಯದ ಸಾಮಾನ್ಯ ವ್ಯಕ್ತಿಯಂತೆ ಹಲ್ಲೆ ನಡೆಸಿದ ಪುತ್ತೂರು ಡಿವೈಎಸ್ಪಿಯನ್ನು ಕೂಡಲೇ ಅಮಾನತು ಮಾಡಬೇಕೆಂದು ವಿ.ಹಿಂ.ಪ. ಕಡಬ ಪ್ರಖಂಡ ಕಾರ್ಯದರ್ಶಿ ಪ್ರಮೋದ್ ರೈ ನಂದುಗುರಿ ಆಗ್ರಹಿಸಿದ್ದಾರೆ. ಈ ಬಗ್ಗೆ ಅವರು ಮಾತನಾಡಿ, ಇದೇ ಡಿವೈಎಸ್ಪಿ ಕೊಂಬಾರು ಆನೆ ದಾಳಿ ಪ್ರಕರಣದಲ್ಲಿ ಕೂಡ ತಾನೂ ಡಿವೈಎಸ್ಪಿ ಎಂಬುದನ್ನು ಮರೆತು ಅನಾಗರಿಕನಂತೆ ವರ್ತಿಸಿದ್ದಾರೆ. ಸಮಸ್ಯೆಗಳು ಬಂದಾಗ ಅದನ್ನು ಬಗೆಹರಿಸುವ ಬಗ್ಗೆ ಯೋಚಿಸದೆ ಒಟ್ಟಾರೆಯಾಗಿ ವರ್ತಿಸಿರುವುದು ಕಂಡು ಬಂದಿದೆ. ಸಾಮಾನ್ಯ ಜನರಿಗೆ ಕಾನೂನು

ಡಿವೈಎಸ್ಪಿ ಹುದ್ದೆಗೆ ಕಳಂಕ ತಂದ ಪುತ್ತೂರು ಡಿವೈಎಸ್ಪಿಯ ಅಮಾನತು ಮಾಡಿ Read More »

ಬ್ಯಾನರ್ ಪ್ರಕರಣದಲ್ಲಿ ಬಿಜೆಪಿ ನಾಯಕರಿಂದ ಪೊಲೀಸರಿಗೆ ಒತ್ತಡ : ಬೇಕಿದ್ದರೆ ಕಾಲ್ ಲಿಸ್ಟ್ ತೆಗೆಯಿರಿ : ಅಶೋಕ್ ಕುಮಾರ್ ರೈ

ಪುತ್ತೂರು: ಬಿಜೆಪಿ ನಾಯಕರ ಬ್ಯಾನರ್ ಚಪ್ಪಲಿ ಹಾರ ಹಾಕಿರುವ ಪ್ರಕರಣಕ್ಕೆ ಸಂಬಂಧಪಟ್ಟಂತೆ ಪೊಲೀಸ್ ಅಧಿಕಾರಿಗಳ ಮೇಲೆ ಒತ್ತಡ ಹಾಕಿರುವುದು ಬಿಜೆಪಿ ನಾಯಕರೇ. ಬೇಕಿದ್ದರೆ ಕಾಲ್ ಲಿಸ್ಟ್ ತೆಗೆಯಿರಿ ಎಂದು ಶಾಸಕ ಅಶೋಕ್ ಕುಮಾರ್ ರೈ ಸವಾಲು ಹಾಕಿದ್ದಾರೆ. ಬಿಜೆಪಿ ನಾಯಕರ ಬ್ಯಾನರ್ ಹಾಕಿ, ಅದಕ್ಕೆ ಚಪ್ಪಲಿ ಹಾರ ಹಾಕಿರುವ ಪ್ರಕರಣ ಇದೀಗ ವಿವಿಧ ಮಗ್ಗುಲು ಬದಲಿಸಿಕೊಳ್ಳುತ್ತಿದೆ. ಇದರ ನಡುವೆ ಪುತ್ತೂರಿಗೆ ಆಗಮಿಸಿದ್ದ ಡಾ. ಪ್ರಭಾಕರ ಭಟ್ ಕಲ್ಲಡ್ಕ ಮಾತನಾಡಿ, ಕಾಂಗ್ರೆಸ್ ಸರಕಾರದ ಮೇಲೆ ಆರೋಪ ಹೊರಿಸಿದ್ದರು. ಇದಕ್ಕೆ

ಬ್ಯಾನರ್ ಪ್ರಕರಣದಲ್ಲಿ ಬಿಜೆಪಿ ನಾಯಕರಿಂದ ಪೊಲೀಸರಿಗೆ ಒತ್ತಡ : ಬೇಕಿದ್ದರೆ ಕಾಲ್ ಲಿಸ್ಟ್ ತೆಗೆಯಿರಿ : ಅಶೋಕ್ ಕುಮಾರ್ ರೈ Read More »

ಹೊಸ ಸರ್ಕಾರ ಬಂದಾಕ್ಷಣ ಹಿಂದೂ ಕಾರ್ಯಕರ್ತರಿಗೆ ದೌರ್ಜನ್ಯ: ಡಾ. ಕಲ್ಲಡ್ಕ ಪ್ರಭಾಕರ ಭಟ್

ಪುತ್ತೂರು: ಹೊಸ ಸರ್ಕಾರ ಬಂದ ತಕ್ಷಣ ಮುಂದಿನ‌ 5 ವರ್ಷ ಏನಾಗ್ತದೆ ಎಂಬುದಕ್ಕೆ ಸಾಕ್ಷಿ ಈ ಘಟನೆ. ಕಂಬಳದಲ್ಲಿ ಕೋಣಗಳ ಮೇಲೆ ಹೊಡೆಯಬಾರದು ಎಂದು ಹೇಳುತ್ತಾರೆ. ಅದಕ್ಕಿಂತಲೂ ಅಮಾನವೀಯವಾದ ಕೃತ್ಯ. ಆದ್ದರಿಂದ ಈ ಘಟನೆಗೆ ಕಾರಣರಾದ ಡಿವೈಎಸ್ಪಿಯನ್ನೇ ಅಮಾನತು ಮಾಡುವಂತೆ ಹಿಂದೂ ಮುಖಂಡ ಡಾ. ಪ್ರಭಾಕರ ಭಟ್ ಕಲ್ಲಡ್ಕ ಆಗ್ರಹಿಸಿದರು. ಗುರುವಾರ ಪುತ್ತೂರು ಮಹಾವೀರ ಆಸ್ಪತ್ರೆಗೆ ಆಗಮಿಸಿ ಪೊಲೀಸರಿಂದ ಹಲ್ಲೆಗೊಳಗಾಗಿ ದಾಖಲಾಗಿರುವ ಯುವಕರ ಆರೋಗ್ಯ ವಿಚಾರಿಸಿ ಮಾಧ್ಯಮಗಳ ಜೊತೆ ಮಾತನಾಡಿದರು. ಸರ್ಕಾರ ಬಂದು 2-3 ದಿನ ಆಗಿದೆಯಷ್ಟೇ.

ಹೊಸ ಸರ್ಕಾರ ಬಂದಾಕ್ಷಣ ಹಿಂದೂ ಕಾರ್ಯಕರ್ತರಿಗೆ ದೌರ್ಜನ್ಯ: ಡಾ. ಕಲ್ಲಡ್ಕ ಪ್ರಭಾಕರ ಭಟ್ Read More »

ಪೊಲೀಸ್ ದೌರ್ಜನ್ಯಕ್ಕೊಳಗಾದ ಯುವಕರ ಆರೋಗ್ಯ ವಿಚಾರಿಸಿದ ಆಶಾ ತಿಮ್ಮಪ್ಪ

ಪುತ್ತೂರು: ಪೊಲೀಸ್ ದೌರ್ಜನ್ಯಕ್ಕೆ ಒಳಗಾಗಿ ಆಸ್ಪತ್ರೆಗೆ ದಾಖಲಾದ ಯುವಕರನ್ನು ಆಶಾ ತಿಮ್ಮಪ್ಪ ಅವರು ಗುರುವಾರ ಭೇಟಿಯಾದರು. ಪುತ್ತೂರು ವಿಧಾನಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿಯಾಗಿದ್ದ ಆಶಾ ತಿಮ್ಮಪ್ಪಅವರು ಯುವಕರ ಆರೋಗ್ಯ ವಿಚಾರಿಸಿದರು. ಇದೇ ಸಂದರ್ಭ ಪ್ರಮುಖರು ಉಪಸ್ಥಿತರಿದ್ದರು.

ಪೊಲೀಸ್ ದೌರ್ಜನ್ಯಕ್ಕೊಳಗಾದ ಯುವಕರ ಆರೋಗ್ಯ ವಿಚಾರಿಸಿದ ಆಶಾ ತಿಮ್ಮಪ್ಪ Read More »

ಟ್ವೀಟ್‌ ಮೂಲಕ ಕ್ಷಮೆ ಯಾಚಿಸಿದ ಪ್ರತಾಪ್‌ ಸಿಂಹ

ಪುತ್ತೂರು: ಪೊಲೀಸ್ ದೌರ್ಜನ್ಯಕ್ಕೆ ಒಳಗಾದ ಹಿಂದೂ ಕಾರ್ಯಕರ್ತರಲ್ಲಿ ಸಂಸದ ಪ್ರತಾಪ್‌ ಸಿಂಹ ಅವರು ಟ್ವೀಟ್ ಮೂಲಕ ಕ್ಷಮೆ ಯಾಚಿಸಿದ್ದಾರೆ. ನಮ್ಮ ಪರವಾಗಿ ಮತ ಕೇಳುವ, ಬ್ಯಾನರ್ ಬಂಟಿಂಗ್ ಕಟ್ಟುವ, ಮನೆ ಮಠ ಬಿಟ್ಟು ಪಕ್ಷಕ್ಕಾಗಿ ದುಡಿಯುವ ಹಾಗೂ ಗೆದ್ದಾಗ ಹೊತ್ತು ಮೆರೆಯುವ ಕಾರ್ಯಕರ್ತನಿಗೆ ಪಕ್ಷ ಸೋತಾಗ ನಮ್ಮ ಮೇಲೆ ಸಿಟ್ಟನ್ನು ತೀಕ್ಷ್ಣವಾಗಿ ಹೊರಹಾಕುವ ಹಕ್ಕೂ ಇರುತ್ತದೆ. ಘಟನೆಗೆ ಸಂಬಂಧಿಸಿದಂತೆ ಪಕ್ಷ ಸೋತಾಗ ಅನಾಥನಾಗುವುದು, ಅಪಾಯಕ್ಕೆ ಸಿಲುಕುವುದು ಕಾರ್ಯಕರ್ತನೇ ಹೊರತು ಯಾವ ನಾಯಕನೂ ಅಲ್ಲ. ದಯವಿಟ್ಟು ನಮ್ಮನ್ನು ಕ್ಷಮಿಸಿ

ಟ್ವೀಟ್‌ ಮೂಲಕ ಕ್ಷಮೆ ಯಾಚಿಸಿದ ಪ್ರತಾಪ್‌ ಸಿಂಹ Read More »

ಪೊಲೀಸರ ಕೃತ್ಯ ಅಮಾನುಷ : ಪೊಲೀಸ್ ದೌರ್ಜನ್ಯಕ್ಕೊಳಗಾದ ಯುವಕರನ್ನು ಭೇಟಿಯಾದ ಚಕ್ರವರ್ತಿ ಸೂಲಿಬೆಲೆ

ಪುತ್ತೂರು: ದೌರ್ಜನ್ಯಕ್ಕೆ ಒಳಗಾದ ಯುವಕರ ಫೊಟೋ ನೋಡಿ ಎದೆ ಝಲ್ಲೆನಿಸಿತು. ಪೊಲೀಸರ ಕೃತ್ಯ ಅಮಾನುಷ. ಇಂತಹ ಪರಿಸ್ಥಿತಿ ಬೇರಾರಿಗೂ ಬರಬಾರದು ಎಂದು ವಾಗ್ಮಿ ಚಕ್ರವರ್ತಿ ಸೂಲಿಬೆಲೆ ಹೇಳಿದರು. ಪೊಲೀಸ್ ರಿಂದ ದೌರ್ಜನ್ಯಕ್ಕೊಳಗಾದ ಬಿಜೆಪಿ ಕಾರ್ಯಕರ್ತರನ್ನು ಚಕ್ರವರ್ತಿ ಸೂಲಿಬೆಲೆಯವರು ಪುತ್ತೂರು ಆಸ್ಪತ್ರೆಗೆ ಭೇಟಿ ಕೊಟ್ಟು ಆರೋಗ್ಯ ವಿಚಾರಿಸಿ, ಮಾತನಾಡಿದರು. ತೇಜೋವಧೆ, ಅವಮಾನ ಮಾಡುವುದನ್ನು ನಾವು ಸಹಿಸಿಕೊಳ್ಳಬೇಕಾದ ಸಂದರ್ಭಗಳು ಜೀವನದಲ್ಲಿ ಬರುತ್ತವೆ. ಅದರಲ್ಲೂ ಪಕ್ಷಕ್ಕೆ ಸೋಲಾದಾಗ ಇಂತಹ ಘಟನೆಗಳು ಸಹಜ. ಹಾಗೆಂದು ನೋವುಂಟಾದವರು ಎಲ್ಲರೂ ನರೇಂದ್ರ ಮೋದಿಯನ್ನು ನೋಡಬೇಕು. ಅವರಷ್ಟು

ಪೊಲೀಸರ ಕೃತ್ಯ ಅಮಾನುಷ : ಪೊಲೀಸ್ ದೌರ್ಜನ್ಯಕ್ಕೊಳಗಾದ ಯುವಕರನ್ನು ಭೇಟಿಯಾದ ಚಕ್ರವರ್ತಿ ಸೂಲಿಬೆಲೆ Read More »

ಸಿಎಂ ಸಿದ್ದರಾಮಯ್ಯ, ಡಿಸಿಎಂ ಡಿ.ಕೆ. ಶಿವಕುಮಾರ್|ಎಐಸಿಸಿ ಪ್ರ. ಕಾರ್ಯದರ್ಶಿ ರಣದೀಪ್ ಸುರ್ಜೆವಾಲಾ ಪತ್ರಿಕಾಗೋಷ್ಠಿಯಲ್ಲಿ ಮಾಹಿತಿ

ಪುತ್ತೂರು: ರಾಜ್ಯದ ಮುಖ್ಯಮಂತ್ರಿಯಾಗಿ ಸಿದ್ಧರಾಮಯ್ಯ ಹಾಗೂ ಉಪ ಮುಖ್ಯಮಂತ್ರಿಯಾಗಿ ಡಿ.ಕೆ. ಶಿವಕುಮಾರ್ ನೇಮಕವಾಗಿದ್ದು, ಮೇ 20ರಂದು ಮಧ್ಯಾಹ್ನ 12.30ಕ್ಕೆ ಪ್ರಮಾಣವಚನ ನಡೆಯಲಿದೆ ಎಂದು ಎಐಸಿಸಿ ಪ್ರ. ಕಾರ್ಯದರ್ಶಿ ರಣದೀಪ್ ಸುರ್ಜೆವಾಲಾ ಮಾಹಿತಿ ನೀಡಿದ್ದಾರೆ. ಇದೇ ಸಂದರ್ಭ ಕೆಲ ಸಚಿವರ ಪ್ರಮಾಣವಚನವೂ ನಡೆಯಲಿದೆ. ನವದೆಹಲಿಯಲ್ಲಿ ಪತ್ರಿಕಾಗೋಷ್ಠಿ ಉದ್ದೇಶಿಸಿ ಅವರು ಮಾತನಾಡಿದರು.

ಸಿಎಂ ಸಿದ್ದರಾಮಯ್ಯ, ಡಿಸಿಎಂ ಡಿ.ಕೆ. ಶಿವಕುಮಾರ್|ಎಐಸಿಸಿ ಪ್ರ. ಕಾರ್ಯದರ್ಶಿ ರಣದೀಪ್ ಸುರ್ಜೆವಾಲಾ ಪತ್ರಿಕಾಗೋಷ್ಠಿಯಲ್ಲಿ ಮಾಹಿತಿ Read More »

ಬಸನಗೌಡ ಪಾಟೀಲ್ ಯತ್ನಾಳ್ ನಾಳೆ ಪುತ್ತೂರಿಗೆ

ಪುತ್ತೂರು: ಫೈರ್ ಬ್ರಾಂಡ್ ನಾಯಕ ಬಸನಗೌಡ ಪಾಟೀಲ್ ಯತ್ನಾಳ್ ಅವರು ಶುಕ್ರವಾರ ಪುತ್ತೂರಿಗೆ ಆಗಮಿಸಲಿದ್ದಾರೆ ಎಂದು ತಿಳಿದುಬಂದಿದೆ. ಪುತ್ತೂರಿನಲ್ಲಿ ನಡೆಯುತ್ತಿರುವ ಅಹಿತಕರ ಘಟನೆಗಳ ಹಿನ್ನೆಲೆಯಲ್ಲಿ ಯತ್ನಾಳ್ ಭೇಟಿ ಮಹತ್ವ ಪಡೆದುಕೊಂಡಿದೆ. ಬಿಜೆಪಿ ನಾಯಕರ ಭಾವಚಿತ್ರಕ್ಕೆ ಚಪ್ಪಲಿ ಹಾರ ಹಾಕಿದ ಪ್ರಕರಣಕ್ಕೆ ಸಂಬಂಧಪಟ್ಟಂತೆ ಒಂಭತ್ತು ಮಂದಿಯನ್ನು ವಿಚಾರಣೆಗೆ ಒಳಪಡಿಸಲಾಗಿತ್ತು. ಅವರ ಮೇಲೆ ಪೊಲೀಸ್ ದೌರ್ಜನ್ಯ ನಡೆದಿದ್ದು, ರಾಜ್ಯದಲ್ಲಿ ಭಾರೀ ಸುದ್ದಿಯಾಗುತ್ತಿದೆ.

ಬಸನಗೌಡ ಪಾಟೀಲ್ ಯತ್ನಾಳ್ ನಾಳೆ ಪುತ್ತೂರಿಗೆ Read More »

ಕಾರ್ಯಕರ್ತರ ಮೇಲೆ ಪೊಲೀಸ್ ದೌರ್ಜನ್ಯ ಇಲಾಖೆಗೇ ಕಪ್ಪುಚುಕ್ಕಿ: ಸಂಸದ ನಳಿನ್ ಕುಮಾರ್ ಕಟೀಲ್

ಪುತ್ತೂರು: ಹಿಂದೂ ಯುವಕರ ಮೇಲೆ ಪುತ್ತೂರಿನಲ್ಲಿ ದಾಖಲಾದ ಪ್ರಕರಣದಲ್ಲಿ ಪೊಲೀಸರ ವರ್ತನೆ ಪೊಲೀಸ್ ಇಲಾಖೆಗೆ ಕಪ್ಪುಚುಕ್ಕಿ ಎಂದು ಸಂಸದ, ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ ಪ್ರತಿಕ್ರಿಯಿಸಿದ್ದಾರೆ. ಸರ್ಕಾರಿ ಬಸ್ ನಿಲ್ದಾಣದ ಮುಂಭಾಗ ಬಿಜೆಪಿ ನಾಯಕರ ಫೋಟೋವಿದ್ದ ಬ್ಯಾನರ್ ಗೆ ಚಪ್ಪಲಿ ಹಾರ ಹಾಕಿದ ಪ್ರಕರಣದಲ್ಲಿ ಒಂಭತ್ತು ಮಂದಿಯನ್ನು ವಶಕ್ಕೆ ಪಡೆದ ಪೊಲೀಸರು ಅವರಿಗೆ ಥಳಿಸಿ ದೌರ್ಜನ್ಯ ಎಸಗಿದ್ದಾರೆಂಬ ಆರೋಪ ಕೇಳಿ ಬರುತ್ತಿದ್ದು, ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ ರವರು ಪ್ರತಿಕ್ರಿಯಿಸಿದ್ದಾರೆ.

ಕಾರ್ಯಕರ್ತರ ಮೇಲೆ ಪೊಲೀಸ್ ದೌರ್ಜನ್ಯ ಇಲಾಖೆಗೇ ಕಪ್ಪುಚುಕ್ಕಿ: ಸಂಸದ ನಳಿನ್ ಕುಮಾರ್ ಕಟೀಲ್ Read More »

error: Content is protected !!
Scroll to Top