ಮಾಡ್ನೂರ್ ಗ್ರಾಮದಲ್ಲಿ ಕಾಡಾನೆಯಿಂದ ಕೃಷಿತೋಟಗಳಿಗೆ ಹಾನಿ l ಹಾನಿಗೊಳಗಾದ ಪ್ರದೇಶಕ್ಕೆ ಮಾಜಿ ಶಾಸಕ ಸಂಜೀವ ಮಠಂದೂರು ಭೇಟಿ
ಪುತ್ತೂರು : ಕೆಲವು ದಿನಗಳಿಂದ ಅರಿಯಡ್ಕ ಗ್ರಾಮ ಪಂಚಾಯತ್ ವ್ಯಾಪ್ತಿಯ ಮಾಡ್ನೂರ್ ನ ಚಾಕೋಟೆ, ಪುವಂದೂರು ವಿವಿಧ ಪ್ರದೇಶಗಳಲ್ಲಿ ಆನೆಗಳು ಕೃಷಿ ಹಾನಿ ಮಾಡಿ ಸಾರ್ವಜನಿಕರಿಗೆ ತೊಂದರೆ ನೀಡುತ್ತಿದ್ದು,. ಪುತ್ತೂರಿನ ಮಾಜಿ ಶಾಸಕ ಸಂಜೀವ ಮಠಂದೂರು ಪುವಂದೂರಿಗೆ ಭೇಟಿ ನೀಡಿ ಪರಿಶೀಲಿಸಿದರು. ಪುವಂದೂರಿನ ಸ್ವಾತಿ ಭಟ್, ರೇವತಿ ಭಟ್ ಅವರ ಕೃಷಿ ತೋಟಗಳಿಗೆ ಕಳೆದ ಒಂದು ವಾರದಿಂದ ಆನೆಗಳು ದಾಳಿ ಮಾಡಿ ಕೃಷಿ ಹಾನಿಗೊಳಿಸಿದೆ. ಕೃಷಿಕರು ಹನಿ ನೀರಾವರಿಗೆ ಹಾಕಿರುವ ಪೈಪ್ ಲೈನ್ ಗಳಿಗೆ ಹಾನಿ ಮಾಡಿದೆ. […]