ರಾಜಕೀಯ

ಗೃಹಲಕ್ಷ್ಮೀ ಯೋಜನೆಗೆ ಅರ್ಜಿ ಸಲ್ಲಿಕೆ ನಾಳೆಯಿಂದಲೇ (ಜೂ.16) ಆರಂಭ | ಪತ್ರಿಕಾಗೋಷ್ಠಿಯಲ್ಲಿ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ಮಾಹಿತಿ

ಬೆಂಗಳೂರು : ಮನೆಯ ಯಜಮಾನಿಗೆ 2 ಸಾವಿರ ರೂಪಾಯಿಗಳ ರಾಜ್ಯ ಸರಕಾರದ ಗೃಹಲಕ್ಷ್ಮೀ ಯೋಜನೆಗೆ ಜೂ.16 ರಿಂದ ಆನ್ ಲೈನ್, ಆಫ್‍ ಲೈನ್ ಮೂಲಕ ಅರ್ಜಿ ಸಲ್ಲಿಸಬಹುದು ಎಂದು ಮಹಿಳಾ ಮತ್ತು ಮಕ್ಕಳ ಕಲ್ಯಾಣ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ಘೋಷಣೆ ಮಾಡಿದ್ದಾರೆ. ಪತ್ರಿಕಾಗೋಷ್ಠಿಯಲ್ಲಿ ಅವರು ಇಂದು ಮಾತನಾಡಿ, ಬಿಪಿಎಲ್, ಅಂತ್ಯೋದಯ ಕಾರ್ಡ್‍ ದಾರರು ಗೃಹಲಕ್ಷ್ಮೀ ಯೋಜನೆಗೆ ಅರ್ಜಿಯನ್ನು ನಾಳೆಯಿಂದಲೇ ಸಲ್ಲಿಸಬಹುದು. ಸೇವಾಸಿಂಧು ಪೋರ್ಟಲ್, ಬೆಂಗಳೂರು ಒನ್, ಕರ್ನಾಟಕ ಒನ್ ಕೇಂದ್ರಗಳಲ್ಲಿ ಉಚಿತವಾಗಿ ಅರ್ಜಿ ಸಲ್ಲಿಸಬಹುದು. ಮಹಿಳೆಯರು ಆಧಾರ್ […]

ಗೃಹಲಕ್ಷ್ಮೀ ಯೋಜನೆಗೆ ಅರ್ಜಿ ಸಲ್ಲಿಕೆ ನಾಳೆಯಿಂದಲೇ (ಜೂ.16) ಆರಂಭ | ಪತ್ರಿಕಾಗೋಷ್ಠಿಯಲ್ಲಿ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ಮಾಹಿತಿ Read More »

ಕಾಮಗಾರಿಯ ಪಟ್ಟಿ ಕಳುಹಿಸಿ | ಬೂತ್, ವಲಯ ಅಧ್ಯಕ್ಷರುಗಳಿಗೆ ಶಾಸಕರ ಸೂಚನೆ

ಪುತ್ತೂರು: ಅನುದಾನ ಹಂಚಿಕೆ ಮಾಡುವ ಉದ್ದೇಶದಿಂದ ತಮ್ಮ ಗ್ರಾಮ ವ್ಯಾಪ್ತಿಯಲ್ಲಿ ಅಗಬೇಕಾದ ವಿವಿಧ ಕಾಮಗಾರಿಗಳ ಪಟ್ಟಿ ಕಳುಹಿಸಿಕೊಡುವಂತೆ ಬೂತ್ ಮತ್ತು ವಲಯ ಅಧ್ಯಕ್ಷರುಗಳಿಗೆ ಪುತ್ತೂರು ಶಾಸಕರಾದ ಅಶೋಕ್ ರೈಯವರು ಸೂಚನೆಯನ್ನು ನೀಡಿದ್ದಾರೆ. ಇನ್ನೇನು ಕೆಲವೇ ದಿನಗಳಲ್ಲಿ ಅನುದಾನ ಬಿಡುಗಡೆಯಾಗಲಿದ್ದು ಅನುದಾನವನ್ನು ಹಂಚಿಕೆ ಮಾಡುವ ಉದ್ದೇಶದಿಂದ ಈಗಾಗಲೇ ಸಿದ್ದತೆಯನ್ನು ಮಾಡಿಕೊಳ್ಳಲಾಗಿದೆ. ಕಾಂಗ್ರೆಸ್ ವಲಯಾಧ್ಯಕ್ಷರುಗಳು ಮತ್ತು ಬೂತ್ ಅಧ್ಯಕ್ಷರುಗಳು ಕಾಮಗಾರಿಯ ಪಟ್ಟಿಯನ್ನು ಸಿದ್ದ ಮಾಡಿ ಶಾಅಸಕರ ಕಚೇರಿಗೆ ತಲುಪಿಸುವಂತೆ ಅಥವಾ ಶಾಸಕರ ಪಿ ಎ ಬಳಿ ನೀಡುವಂತೆಯೂ ಮನವಿ ಮಾಡಿಕೊಂಡಿದ್ದಾರೆ.

ಕಾಮಗಾರಿಯ ಪಟ್ಟಿ ಕಳುಹಿಸಿ | ಬೂತ್, ವಲಯ ಅಧ್ಯಕ್ಷರುಗಳಿಗೆ ಶಾಸಕರ ಸೂಚನೆ Read More »

ಕಡಬ ಸಮುದಾಯ ಆಸ್ಪತ್ರೆಗೆ ಶಾಸಕಿ ಭಾಗೀರಥಿ ಮುರುಳ್ಯ ಭೇಟಿ | ಡಯಾಲಿಸಿಸ್ ಕೇಂದ್ರ ಶೀಘ್ರ ಆರಂಭಿಸಲು ಕ್ರಮದ ಭರವಸೆ

ಕಡಬ : ಸುಳ್ಯ ಶಾಸಕಿ ಭಾಗೀರಥಿ ಮುರುಳ್ಯ ಅವರು ಕಡಬ ಸಮುದಾಯ ಆಸ್ಪತ್ರೆಗೆ ಮಂಗಳವಾರ  ಭೇಟಿ ನೀಡಿ ಪರಿಶೀಲನೆ ನಡೆಸಿ ಆಸ್ಪತ್ರೆಯ ಸಿಬಂದಿ ಕೊರತೆ ನೀಗಿಸಲು ಕ್ರಮ ಕೈಗೊಳ್ಳುವುದಾಗಿ ಭರವಸೆ ನೀಡಿದ್ದಾರೆ.. ಆಸ್ಪತ್ರೆಯ ಆಡಳಿತ ವೈದ್ಯಾಧಿಕಾರಿ ಡಾ|ಸುಚಿತ್ರಾ ರಾವ್  ಆಸ್ಪತ್ರೆಯ ಸಿಬಂದಿ ಕೊರತೆ ಹಾಗೂ ಇತರ ಅಗತ್ಯತೆಗಳ ಕುರಿತು ಶಾಸಕಿಗೆ ಮಾಹಿತಿ ನೀಡಿದರು. ಆಸ್ಪತ್ರೆಗೆ  ಹೊಸ ಡಿಜಿಟಲ್ ಎಕ್ಸ್‌ರೇ ಯಂತ್ರ ನೀಡಲಾಗಿದ್ದರೂ ಎಕ್ಸ್‌ರೇ ತಂತ್ರಜ್ಞ  ಹುದ್ದೆ ಖಾಲಿ ಇರುವುದರಿಂದ ರೋಗಿಗಳಿಗೆ ತೊಂದರೆಯಾಗುತ್ತಿರುವ ಬಗ್ಗೆ ಮಾಹಿತಿ ಪಡೆದ ಶಾಸಕಿ

ಕಡಬ ಸಮುದಾಯ ಆಸ್ಪತ್ರೆಗೆ ಶಾಸಕಿ ಭಾಗೀರಥಿ ಮುರುಳ್ಯ ಭೇಟಿ | ಡಯಾಲಿಸಿಸ್ ಕೇಂದ್ರ ಶೀಘ್ರ ಆರಂಭಿಸಲು ಕ್ರಮದ ಭರವಸೆ Read More »

ಬೋಳೋಡಿ ಎಂಆರ್‌ಎಫ್ ಘಟಕಕ್ಕೆ ಶಾಸಕರ ಭೇಟಿ | ಕಾಮಗಾರಿ ವೀಕ್ಷಣೆ

ಪುತ್ತೂರು: ಕೆದಂಬಾಡಿ ಗ್ರಾಮದ ಬೋಳೋಡಿಯಲ್ಲಿರುವ ಎಂಆರ್‌ಎಫ್ ತ್ಯಾಜ್ಯ ನಿರ್ವಹಣಾ ಘಟಕಕ್ಕೆ ಪುತ್ತೂರು ಶಾಸಕರಾದ ಅಶೋಕ್ ರೈ ಭೇಟಿ ನೀಡಿ ಕಾಮಗಾರಿ ಪ್ರಗತಿಪರಿಶೀಲನೆ ಮಾಡಿದರು. ಕಾಮಗಾರಿ ಕೆಲವೇ ದಿನಗಳಲ್ಲಿ ಪೂರ್ಣಗೊಳ್ಳಲಿದ್ದು ಇದರ ಉದ್ಘಾಟನಾ ಕಾರ್ಯವೂ ನಡೆಯಲಿದೆ. ಅಕ್ಕಪಕ್ಕದ  ಮೂರು ತಾಲೂಕುಗಳ ತ್ಯಾಜ್ಯಗಳನ್ನು ಇಲ್ಲಿ ವಿಲೇವಾರಿ ಮಾಡಿ ಅದನ್ನು ಮರುಬಳಕೆ ಮಾಡುವ ತ್ಯಾಜ್ಯ ನಿರ್ವಹಣಾ ಘಟಕ ಇದಾಗಿದ್ದು ಗ್ರಾಪಂ ಗಳ ಅನುದಾನದಿಂದ ಇಲ್ಲಿ ಘಟಕವನ್ನು ನಿರ್ಮಿಸಲಾಗಿದೆ. ಶಾಸಕರ ಜೊತೆ ಕೆದಂಬಾಡಿ ಗ್ರಾಮದ ಕಾಂಗ್ರೆಸ್ ಪ್ರಮುಖರಾದ ಬೋಳೋಡಿ ಚಂಧ್ರಹಾಸ ರೈ, ಪುರಂದರ್

ಬೋಳೋಡಿ ಎಂಆರ್‌ಎಫ್ ಘಟಕಕ್ಕೆ ಶಾಸಕರ ಭೇಟಿ | ಕಾಮಗಾರಿ ವೀಕ್ಷಣೆ Read More »

ಕೆಯ್ಯೂರು ವಲಯ ಕಾಂಗ್ರೆಸ್ ಕಾರ್ಯಕರ್ತರಸಭೆ

ಪುತ್ತೂರು: ಮನೆ ಇಲ್ಲದೆ ಬಾಡಿಗೆ ಮನೆಯಲ್ಲಿ ವಾಸ ಮಾಡುತ್ತಿದ್ದೇವೆ ನಮಗೊಂದು ಮೂರು ಸೆಂಟ್ಸ್ ಜಾಗ ಕೊಡಿ ಎಂದು ಅನೇಕ ಅರ್ಜಿಗಳು ಗ್ರಾಮೀಣ ಭಾಗದಿಂದ ಬಂದಿದ್ದು ಪ್ರತೀ ಗ್ರಾಮದಲ್ಲಿ ಎರಡರಿಂದ ಮೂರು ಎಕ್ರೆ ಜಾಗ ಗುರುತಿಸಿ ಅದನ್ನು ಮನೆ ಇಲ್ಲದ ಬಡವರಿಗೆ ಹಂಚಿಕೆ ಮಾಡುವಲ್ಲಿ ಕ್ರಮಕೈಗೊಳ್ಳಲಿದ್ದೇನೆ ಈ ಕಾರ್ಯಕ್ಕೆ ಹೆಚ್ಚಿನ ಆದ್ಯತೆ ನೀಡಲಿದ್ದು ಈಗಾಗಲೇ ಜಾಗ ಹುಡಕುವಂತೆ ಕಂದಾಯ ಇಲಾಖೆಗೆ ಸೂಚನೆ ನೀಡಿದ್ದೇನೆ ಎಂದು ಶಾಸಕ ಅಶೋಕ್ ರೈ ಹೇಳಿದರು. ಕೆಯ್ಯೂರಿನಲ್ಲಿ ಸೋಮವಾರ ನಡೆದ ಕೆಯ್ಯೂರು ವಲಯ ಕಾಂಗ್ರೆಸ್

ಕೆಯ್ಯೂರು ವಲಯ ಕಾಂಗ್ರೆಸ್ ಕಾರ್ಯಕರ್ತರಸಭೆ Read More »

ಸುಳ್ಯ ಶಾಸಕಿ ಭಾಗೀರಥಿ ಮುರುಳ್ಯ ಅವರ ಕಚೇರಿ ಕಾರ್ಯಾರಂಭ

ಸುಳ್ಯ :ಸುಳ್ಯ ವಿಧಾನಸಭಾ ಕ್ಷೇತ್ರದ ನೂತನ ಶಾಸಕಿ ಭಾಗೀರಥಿ ಮುರುಳ್ಯ ಅವರ ಕಚೇರಿ ಕಾರ್ಯಾರಂಭದ ಸುಳ್ಯ ತಾಲೂಕು ಪಂಚಾಯತ್ ಕಟ್ಟಡದಲ್ಲಿ ಜೂ.12 ಬೆಳಗ್ಗೆ 6.00 ಗಂಟೆಗೆ ಗಣಹೋಮ ಪೂಜೆಯೊಂದಿಗೆ ಪಿ ಕೆ ಉಮೇಶ್ ಅವರು ದೀಪ ಪ್ರಜ್ವಲನೆ ಮಾಡುವ ಮೂಲಕ ಉದ್ಘಾಟಿಸಿದರು. ಈ ಸಂದರ್ಭದಲ್ಲಿ ಪಕ್ಷದ ಪ್ರಮುಖರಾದ ಹರೀಶ್ ಕಂಜಿಪಿಲಿ, ಎ ವಿ ತೀರ್ಥರಾಮ, ಎಸ್ ಎನ್ ಮನ್ಮಥ, ಎನ್ ಎ ರಾಮಚಂದ್ರ, ರಾಕೇಶ್ ರೈ ಕೆಡೆಂಜಿ, ವೆಂಕಟ್ ವಳಳಂಬೆ, ಸುಬೋದ್ ಶೆಟ್ಟಿ, ವಿನಯ್ ಕುಮಾರ್ ಕಂದಡ್ಕ,

ಸುಳ್ಯ ಶಾಸಕಿ ಭಾಗೀರಥಿ ಮುರುಳ್ಯ ಅವರ ಕಚೇರಿ ಕಾರ್ಯಾರಂಭ Read More »

ಯಶಶ್ವಿನಿ ಆರೋಗ್ಯ ವಿಮಾ ಯೋಜನೆಯನ್ನು ಮುಂದುವರೆಸಿ | ಉಸ್ತುವಾರಿ ಸಚಿವರಿಗೆ ಶಾಸಕ ಅಶೋಕ್ ರೈ ಮನವಿ

ಪುತ್ತೂರು: ಆರೋಗ್ಯ ತುರ್ತು ಸಂದರ್ಭದಲ್ಲಿ ಬಡವರಿಗೆ ವರದಾನವಾಗಿ ಯಶಸ್ವಿನಿ ಆರೋಗ್ಯ ವಿಮಾ ಯೋಜನೆಯನ್ನು ಹಿಂದಿನ ಸರಕಾರ ನಿಷ್ಕ್ರೀಯಗೊಳಿಸಿದ್ದು ಅದನ್ನು ಮುಂದುವರೆಸುವಂತೆ ಆರೋಗ್ಯ ಹಾಗೂ ಕುಟುಂಬ ಕಲ್ಯಾಣ ಮತ್ತು ಜಿಲ್ಲಾ ಉಸ್ತುವಾರಿ ಸಚಿವ ದಿನೇಶ್ ಗುಂಡೂರಾವ್ ರವರಿಗೆ ಪುತ್ತೂರು ಶಾಸಕರಾದ ಅಶೋಕ್ ರೈ ಮನವಿ ಮಾಡಿದ್ದಾರೆ.  ಗ್ರಾಮೀಣ ಪ್ರದೇಶಗಳ ಸಹಾಕಾರಿ ಸಂಘಗಳ ಸದಸ್ಯರು, ಸ್ತ್ರೀ ಶಕ್ತಿ ಗುಂಪು ಸ್ವ-ಸಹಾಯ ಸಂಘ ಸದಸ್ಯರು ಹಾಗೂ ಗ್ರಾಮೀಣ ಪ್ರದೇಶದಲ್ಲಿರುವ ಸಹಕಾರಿ ಸಂಘ ಸಹಕಾರಿ ಬ್ಯಾಂಕ್‌ಗಳಲ್ಲಿ ಹಣಕಾಸಿನ ವಹಿವಾಟು ಹೊಂದಿರುವ ಸ್ವ-ಸಹಾಯ ಗುಂಪಿನ

ಯಶಶ್ವಿನಿ ಆರೋಗ್ಯ ವಿಮಾ ಯೋಜನೆಯನ್ನು ಮುಂದುವರೆಸಿ | ಉಸ್ತುವಾರಿ ಸಚಿವರಿಗೆ ಶಾಸಕ ಅಶೋಕ್ ರೈ ಮನವಿ Read More »

ಮಹಿಳೆಯರಿಗೆ ಉಚಿತ ಬಸ್ ಪ್ರಯಾಣದ ಶಕ್ತಿ ಯೋಜನೆಗೆ ಕಡಬದಲ್ಲಿ ಚಾಲನೆ

ಕಡಬ: ರಾಜ್ಯ ಸರಕಾರದ ಮಹಾತ್ವಾಕಾಂಕ್ಷೆಯ ಮಹಿಳೆಯರಿಗೆ ಉಚಿತ ಬಸ್ ಪ್ರಯಾಣದ ಶಕ್ತಿ ಯೋಜನೆಗೆ ಕಡಬದಲ್ಲಿ ಕಾಂಗ್ರೇಸ್ ನಾಯಕರು ಹಾಗೂ ಕಾರ್ಯಕರ್ತರು ಸಂಭ್ರಮ ಸಡಗರದಿಂದ ಚಾಲನೆ ನೀಡಿದರು. ಕಡಬ-ಶಾಂತಿಮೊಗೇರು-ಪುತ್ತೂರು ಸರಕಾರಿ ಬಸ್ಸಿಗೆ ಕಡಬದಲ್ಲಿ ಶೃಂಗಾರ ಮಾಡಿ ಕಾಂಗ್ರೇಸ್ ಕಾರ್ಯಕರ್ತರು ಕಾಂಗ್ರೇಸ್ ಧ್ವಜ ಹಿಡಿದು ಮುಖ್ಯ ಮಂತ್ರಿ ಸಿದ್ದರಾಮಯ್ಯ , ಉಪಮುಖ್ಯ ಮಂತ್ರಿ ಡಿ.ಕೆ.ಶಿವಕುಮಾರ್ ಅವರ ಪರವಾಗಿ ಘೋಷಣೆ ಕೂಗಿದರು. ಬಳಿಕ ಕಡಬ ಬ್ಲಾಕ್ ಕಾಂಗ್ರೇಸ್ ಪ್ರಧಾನ ಕಾರ್ಯದರ್ಶಿ ಸತೀಶ್ ನಾಕ್ ಮೇಲಿನ ಮನೆ ತೆಂಗಿನ ಕಾಯಿ ಒಡೆಯುವ ಮೂಲಕ

ಮಹಿಳೆಯರಿಗೆ ಉಚಿತ ಬಸ್ ಪ್ರಯಾಣದ ಶಕ್ತಿ ಯೋಜನೆಗೆ ಕಡಬದಲ್ಲಿ ಚಾಲನೆ Read More »

ರಾಜ್ಯ ಸರಕಾರದ ಮಹಿಳೆಯರಿಗೆ ಬಸ್ ಗಳಲ್ಲಿ ಉಚಿತ ಪ್ರಯಾಣ “ಶಕ್ತಿ” ಯೋಜನೆಗೆ ಚಾಲನೆ

ಪುತ್ತೂರು: ಕಾಂಗ್ರೆಸ್ ಸರಕಾರದ ಐದು ಗ್ಯಾರಂಟಿಗಳಲ್ಲಿ ಒಂದಾದ ಸರಕಾರಿ ಬಸ್ ನಲ್ಲಿ ಮಹಿಳೆಯರಿಗೆ ಉಚಿತ ಪ್ರಯಾಣದ “ಶಕ್ತಿ” ಯೋಜನೆಗೆ ಭಾನುವಾರ ನಗರದ ಕೋಟಿ-ಚೆನ್ನಯ  ಬಸ್ ನಿಲ್ದಾಣದಲ್ಲಿ ಚಾಲನೆ ನೀಡಲಾಯಿತು. ಕಿಕ್ಕಿರಿದು ತುಂಬಿದ ಮಹಿಳೆಯರು, ಸಾರ್ವಜನಿಕರು ಈ ಐತಿಹಾಸಿಕ ಯೋಜನೆಗೆ ಸಾಕ್ಷಿಯಾದರು. ಉದ್ಘಾಟನೆಗೆ ಮುನ್ನ ಪುತ್ತೂರು ಶಾಸಕ ಅಶೋಕ್ ಕುಮಾರ್ ರೈ ಹಾಗೂ ಅತಿಥಿಗಳನ್ನು ಬ್ಯಾಂಡ್ ವಾದ್ಯದ ಮೂಲಕ ವೇದಿಕೆಗೆ ಕರೆ ತರಲಾಯಿತು. ಬಳಿಕ ದೀಪ ಬೆಳಗಿಸುವ ಮೂಲಕ ಶಾಸಕರು “ಶಕ್ತಿ” ಯೋಜನೆಗೆ ಚಾಲನೆ ನೀಡಿದರು. ಸಮಾರಂಭದ ಉದ್ಘಾಟನೆ

ರಾಜ್ಯ ಸರಕಾರದ ಮಹಿಳೆಯರಿಗೆ ಬಸ್ ಗಳಲ್ಲಿ ಉಚಿತ ಪ್ರಯಾಣ “ಶಕ್ತಿ” ಯೋಜನೆಗೆ ಚಾಲನೆ Read More »

ಪುತ್ತೂರು ಸರಕಾರಿ ಆಸ್ಪತ್ರೆಗಳ ಸೌಲಭ್ಯ ಹೆಚ್ಚಿಸಿ | ಉಸ್ತುವಾರಿ ಸಚಿವರಿಗೆ ಮನವಿ ನೀಡಿದ ಶಾಸಕ ಅಶೋಕ್ ರೈ

ಪುತ್ತೂರು: ಪುತ್ತೂರು ಸರಕಾರಿ ಆಸ್ಪತ್ರೆಯಲ್ಲಿ ಕೆಲವೊಂದು ಸೌಲಭ್ಯಗಳ ಕೊರತೆ ಇದ್ದು ಆಕೊರತೆಯನ್ನು ನೀಗಿಸಿ ಜನರಿಗೆ ಸೇವೆ ನೀಡುವಲ್ಲಿ ವ್ಯವಸ್ಥೆಯನ್ನು ಕೈಗೊಳ್ಳುವಂತೆ ಆರೋಗ್ಯ ಹಾಗೂ ಕುಟುಂಬ ಕಲ್ಯಾನ ಮತ್ತು ಜಿಲ್ಲಾ ಉಸ್ತುವಾರಿ ಸಚಿವರಾದ ದಿನೇಶ್ ಗುಂಡೂರಾವ್ ರವರಿಗೆ ಶಾಸಕರಾದ ಅಶೋಕ್ ರೈ ಮನವಿ ಸಲ್ಲಿಸಿದರು. ಸಾಮಾನ್ಯ ಮಹಿಳಾ ರೋಗಿಗಳಿಗೆ ಕೊಠಡಿ ವ್ಯವಸ್ಥೆ, ೫೦ ಹಾಸಿಗೆಗಳನ್ನು ಹಾಕುವಲ್ಲಿ ನೂತನ ಕೊಠಡಿಯನ್ನು ನಿರ್ಮಾಣ ಮಾಡುವುದು, ಆಸ್ಪತ್ರೆಯ ಆವರಣದ ಬಾಕಿ ಇರುವಲ್ಲಿ ಇಂಟರ್‌ಲಾಕ್ ಅಳವಡಿಸುವುದು, ರಕ್ತ ಶೇಖರಣಾ ಘಟಕದ ನವೀಕರಣ ಮಾಡುವುದು, ಆಸ್ಪತ್ರೆಯಲ್ಲಿ

ಪುತ್ತೂರು ಸರಕಾರಿ ಆಸ್ಪತ್ರೆಗಳ ಸೌಲಭ್ಯ ಹೆಚ್ಚಿಸಿ | ಉಸ್ತುವಾರಿ ಸಚಿವರಿಗೆ ಮನವಿ ನೀಡಿದ ಶಾಸಕ ಅಶೋಕ್ ರೈ Read More »

error: Content is protected !!
Scroll to Top