ರಾಜಕೀಯ

ರಬ್ಬರ್ ನಿಗಮದಿಂದ ಬೋನಸ್ ಬಾಕಿ ವಿಚಾರ : ಶಾಸಕ ಅಶೋಕ್ ರೈಗೆ ಮನವಿ

ಪುತ್ತೂರು: ರಬ್ಬರ್ ಟ್ಯಾಪಿಂಗ್ ಕಾರ್ಮಿಕರಿಗೆ ಸಿಗಬೇಕಾದ ಬೋನಸ್ ಬಾಕಿ ಇದ್ದು ಕಳೆದ ಒಂದು ವರ್ಷದಿಂದ ನಿಗಮಕ್ಕೆ ಮನವಿ ಮಾಡುತ್ತಿದ್ದರೂ ಬೋನಸ್ ಇನ್ನೂ ಸಿಗದೇ ಇದ್ದು ಈ ವಿಚಾರವನ್ನು ಸರಕಾರದ ಗಮನಸೆಳೆಯಬೇಕೆಂದು ಆಗ್ರಹಿಸಿ ಮತ್ತು ಬೋನಸ್ ಕೊಡಿಸುವಲ್ಲಿ ನೆರವು ನೀಡಬೇಕೆಂದು ಪೆರ್ಲಂಪಾಡಿ ಸಿಆರ್‌ಸಿ ಕಾಲನಿ ರಬ್ಬರ್ ಟ್ಯಾಪಿಂಗ್ ಕಾರ್ಮಿಕರು ಸಾಸಕ ಅಶೋಕ್ ರೈಯವರನ್ನು ಭೇಟಿಯಾಗಿ ಮನವಿ ಸಲ್ಲಿಸಿದರು.  ರಬ್ಬರ್ ನಿಗಮದಲ್ಲಿ ದುಡಿಯುತ್ತಿರುವ ಕಾರ್ಮಿಕರುಗಳಿಗೆ ಪ್ರತಿ ವರ್ಷ ದೀಪಾವಳಿಯ ಸಂದರ್ಭದಲ್ಲಿ ಕನಿಷ್ಟ ಬೋನಸ್ (8.33) ನೀಡಲಾಗುತ್ತಿದೆ.  ಈ ವರ್ಷ ೨೦% […]

ರಬ್ಬರ್ ನಿಗಮದಿಂದ ಬೋನಸ್ ಬಾಕಿ ವಿಚಾರ : ಶಾಸಕ ಅಶೋಕ್ ರೈಗೆ ಮನವಿ Read More »

ಉಡುಪಿ ಘಟನೆ ಖಂಡಿಸಿ ಬಿಜೆಪಿ ವತಿಯಿಂದ ಪ್ರತಿಭಟನೆ. 

ಸುಳ್ಯ: ಉಡುಪಿಯ ಪ್ಯಾರಾ ಮೆಡಿಕಲ್ ಕಾಲೇಜಿನ ಶೌಚಾಲಯದಲ್ಲಿ ಮುಸ್ಲಿಂ ವಿದ್ಯಾರ್ಥಿನಿಯರು ರಹಸ್ಯವಾಗಿ ಹಿಂದೂ ವಿಧ್ಯಾರ್ಥಿನಿಯರ ಅರೆನಗ್ನ ವಿಡಿಯೋ ಚಿತ್ರೀಕರಿಸಿ  ಮಾನಹಾನಿ ಮಾಡಿರುವ ಮತ್ತು ಈ ಘಟನೆಯ ಬಗ್ಗೆ ಯಾವುದೇ ಕ್ರಮ ಕೈಗೊಳ್ಳಲು ಹಿಂಜರಿಯುತ್ತಿರುವ ಕಾಂಗ್ರೆಸ್ ನೇತೃತ್ವದ ರಾಜ್ಯ ಸರಕಾರದ ವಿರುದ್ಧ ಪ್ರತಿಭಟನೆ ಮಂಗಳೂರು ಪುರಭವನದಲ್ಲಿ ನಡೆಯಿತು. ಪ್ರತಿಭಟನೆಯನ್ನುದ್ದೇಶಿಸಿ ಸುಳ್ಯ ಶಾಸಕಿ ಭಾಗೀರಥಿ ಮುರುಳ್ಯ ಮಾತನಾಡಿದರು. ವೇದಿಕೆಯಲ್ಲಿ ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್, ಮಾಜಿ ಸಚಿವ ಕೋಟ ಶ್ರೀನಿವಾಸ ಪೂಜಾರಿ, ಬಂಟ್ವಾಳ ಶಾಸಕ ರಾಜೇಶ್ ನಾಯಕ್, ಬೆಳ್ತಂಗಡಿ

ಉಡುಪಿ ಘಟನೆ ಖಂಡಿಸಿ ಬಿಜೆಪಿ ವತಿಯಿಂದ ಪ್ರತಿಭಟನೆ.  Read More »

ಸರಕಾರದ ಗ್ಯಾರಂಟಿ ಯೋಜನೆಗಳನ್ನು ಮತವಾಗಿ ಪರಿವರ್ತಿಸಿ: ಶಾಸಕ ಅಶೋಕ್ ರೈ  | ವಿಟ್ಲದಲ್ಲಿ ಕಾಂಗ್ರೆಸ್ ಕಾರ್ಯಕರ್ತರ ಸಭೆ

ವಿಟ್ಲ : ರಾಜ್ಯದಲ್ಲಿ ಕಾಂಗ್ರೆಸ್ ಸರಕಾರ ಅಧಿಕಾರಕ್ಕೆ ಬಂದ ಬಳಿಕ ಜನ ನೆಮ್ಮದಿಯಲ್ಲಿದ್ದಾರೆ, ಸರಕಾರದ ಐದು ಗ್ಯಾರಂಟಿ ಯೋಜನೆಗಳು ಪ್ರತೀ ಕುಟುಂಬಕ್ಕೂ ದೊರೆಯುತ್ತಿದೆ, ಈ ಯೋಜನೆಗಳು ಜನರಿಗೆ ಪ್ರಯೋಜನವಾಗಿದ್ದು ಜನ ಸರಕರದ ಯೋಜನೆಗೆ ಬೆಂಬಲ ನೀಡುತ್ತಿದ್ದಾರೆ, ಕಾರ್ಯಕರ್ತರು ಪ್ರತೀ ಮನೆಗೆ ತೆರಳಿ ಕಾಂಗ್ರೆಸ್ ಸಾಧನೆಯನ್ನು ತಿಳಿಸಿ ಅದನ್ನು ಮತವಾಗಿ ಪರಿವರ್ತನೆ ಮಾಡಬೇಕಾಗಿದೆ ಎಂದು ಪುತ್ತೂರು ಶಾಸಕ ಅಶೋಕ್ ಕುಮಾರ್ ರೈ ಹೇಳಿದರು. ಅವರು ವಿಟ್ಲ ಬ್ಲಾಕ್ ಕಾಂಗ್ರೆಸ್ ಕಚೇರಿಯಲ್ಲಿ ನಡೆದ ಕಾಂಗ್ರೆಸ್ ಕಾರ್ಯಕರ್ತರ ಸಭೆಯಲ್ಲಿ ಮಾತನಾಡಿದರು. ಬೆಲೆ

ಸರಕಾರದ ಗ್ಯಾರಂಟಿ ಯೋಜನೆಗಳನ್ನು ಮತವಾಗಿ ಪರಿವರ್ತಿಸಿ: ಶಾಸಕ ಅಶೋಕ್ ರೈ  | ವಿಟ್ಲದಲ್ಲಿ ಕಾಂಗ್ರೆಸ್ ಕಾರ್ಯಕರ್ತರ ಸಭೆ Read More »

ಸೌಜನ್ಯ ಪ್ರಕರಣ ಮರು ತನಿಖೆ ಕುರಿತು ಮಹತ್ವದ ಹೇಳಿಕೆ ನೀಡಿದ ಸಿಎಂ ಸಿದ್ದರಾಮಯ್ಯ

ಬೆಂಗಳೂರು: ಧರ್ಮಸ್ಥಳ ಸೌಜನ್ಯ ಅತ್ಯಾಚಾರ ಹಾಗೂ ಕೊಲೆ ಪ್ರಕರಣದ ಮರು ತನಿಖೆಗೆ ವಿಚಾರವಾಗಿ ಕರ್ನಾಟಕದ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಮಹತ್ವದ ಹೇಳಿಕೆಯೊಂದನ್ನು ನೀಡಿದ್ದಾರೆ. ದೇಶಾದ್ಯಂತ ಸದ್ದು ಮಾಡಿ, ಮತ್ತೆ ನ್ಯಾಯಕ್ಕಾಗಿ ಎಲ್ಲೆಡೆ ಸಂಚಲನ ಮೂಡಿಸುತ್ತಿರುವ ಧರ್ಮಸ್ಥಳ ಸೌಜನ್ಯ ಅತ್ಯಾಚಾರ ಹಾಗೂ ಕೊಲೆ ಪ್ರಕರಣವನ್ನು ಮರು ತನಿಖೆಗೆ ಆಗ್ರಹಿಸಿ ಇತ್ತೀಚೆಗೆ ಬೆಳ್ತಂಗಡಿ ಕ್ಷೇತ್ರದ ಶಾಸರು ಹಾಗೂ ಕುಟುಂಬದವರು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಪತ್ರದ ಮೂಲಕ ಮನವಿ ಸಲ್ಲಿಸಿದ್ದರು. ಇದರ ಬೆನ್ನಲ್ಲೇ ಈ ಕುರಿತು ಪ್ರತಿಕ್ರಿಯಿಸಿದ ಸಿಎಂ ಸಿದ್ದರಾಮಯ್ಯನವರು ಮರುತನಿಖೆ

ಸೌಜನ್ಯ ಪ್ರಕರಣ ಮರು ತನಿಖೆ ಕುರಿತು ಮಹತ್ವದ ಹೇಳಿಕೆ ನೀಡಿದ ಸಿಎಂ ಸಿದ್ದರಾಮಯ್ಯ Read More »

ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಹುದ್ದೆಯಿಂದ ಸಿ.ಟಿ.ರವಿಗೆ ಕೋಕ್

ಬೆಂಗಳೂರು: ಭಾರತೀಯ ಜನತಾ ಪಕ್ಷ (ಬಿಜೆಪಿ) ತನ್ನ ರಾಷ್ಟ್ರೀಯ ಮಂಡಳಿಯನ್ನು ಪುನರ್ ರಚಿಸಿ ಹೊಸ ಪಟ್ಟಿಯನ್ನು ಬಿಡುಗಡೆ ಮಾಡಿದ್ದು, ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಹುದ್ದೆಯಿಂದ ಸಿ.ಟಿ ರವಿಗೆ ಕೋಕ್ ನೀಡಲಾಗಿದೆ. ಎಂಟು ನಾಯಕರನ್ನು ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿಗಳಾಗಿ ನೇಮಕ ಮಾಡಲಾಗಿದೆ. 13 ನಾಯಕರನ್ನು ರಾಷ್ಟ್ರೀಯ ಉಪಾಧ್ಯಕ್ಷರನ್ನಾಗಿ ನೇಮಕ ಮಾಡಲಾಗಿದೆ. ತೆಲಂಗಾಣದ ಬಿಜೆಪಿ ಮಾಜಿ ರಾಜ್ಯಾಧ್ಯಕ್ಷ ಬಂಡಿ ಸಂಜಯ್ ಕುಮಾರ್ ಅವರನ್ನು ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿಯಾಗಿ ನೇಮಿಸಲಾಗಿದೆ. ರಾಷ್ಟ್ರೀಯ ಸಂಘಟನಾ ಪ್ರಧಾನ ಕಾರ್ಯದರ್ಶಿಯನ್ನಾಗಿ ಬಿ.ಎಲ್. ಸಂತೋಷ್ ಅವರನ್ನು ಮುಂದುವರೆಸಲಾಗಿದೆ.

ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಹುದ್ದೆಯಿಂದ ಸಿ.ಟಿ.ರವಿಗೆ ಕೋಕ್ Read More »

ಅನುದಾನ ಬಿಡುಗಡೆ ಮಾಡಲು ಕಮಿಷನ್ | ಇಂದು ಕಾಂಗ್ರೆಸ್ ಶಾಸಕಾಂಗ ಸಭೆ

ಬೆಂಗಳೂರು : ಅನುದಾನ ಬಿಡುಗಡೆ ಮಾಡಲು ಕೂಡ ಸಚಿವರು ಕಮಿಷನ್ ಕೇಳುತ್ತಿದ್ದಾರೆಂದು ಅಸಮಾಧಾನ ವ್ಯಕ್ತಪಡಿಸಿ ಶಾಸಕರು ಬರೆದಿರುವ ಪತ್ರದ ಹಿನ್ನೆಲೆಯಲ್ಲಿ ಇಂದು ಕಾಂಗ್ರೆಸ್‌ನ ಶಾಸಕಾಂಗ ಸಭೆ ನಡೆಯಲಿದೆ. ಸಂಜೆ ಬೆಂಗಳೂರಿನ ಖಾಸಗಿ ಹೋಟೆಲ್‌ನಲ್ಲಿ ಕಾಂಗ್ರೆಸ್ ಶಾಸಕಾಂಗ ಸಭೆ ಕರೆಯಲಾಗಿದೆ. ಮುಖ್ಯಮಂತ್ರಿ ಸಿದ್ದರಾಮಯ್ಯ ಕರೆದಿರುವ ಈ ಶಾಸಕಾಂಗ ಸಭೆ ಬಹಳ ಕುತೂಹಲ ಮೂಡಿಸಿದೆ. ಬಿ.ಆರ್.ಪಾಟೀಲ್, ಬಸವರಾಜ ರಾಯರೆಡ್ಡಿ, ಎಂ.ಕೃಷ್ಣಪ್ಪ ಸೇರಿದಂತೆ ಹಲವು ಹಿರಿಯ ಶಾಸಕರೇ ಶಾಸಕಾಂಗ ಸಭೆ ಕರೆಯುವಂತೆ ಒತ್ತಡ ಹಾಕಿದ್ದಾರೆ. ಅಲ್ಲದೆ ಸಚಿವರ ವಿರುದ್ಧ ಶಾಸಕರ ಪತ್ರ

ಅನುದಾನ ಬಿಡುಗಡೆ ಮಾಡಲು ಕಮಿಷನ್ | ಇಂದು ಕಾಂಗ್ರೆಸ್ ಶಾಸಕಾಂಗ ಸಭೆ Read More »

ಆರ್ಯಾಪು ಗ್ರಾಪಂ ಉಪ ಚುನಾವಣೆ | ಪುತ್ತಿಲ ಬೆಂಬಲಿತ ಅಭ್ಯರ್ಥಿ ಗೆಲುವು | ವಿಜಯೋತ್ಸವ ಮೆರವಣಿಗೆ

ಪುತ್ತೂರು: ಆರ್ಯಾಪು ಗ್ರಾಮ ಪಂಚಾಯಿತಿ ಒಂದು ಸ್ಥಾನಕ್ಕೆ ನಡೆದ ಉಪ ಚುನಾವಣೆಯಲ್ಲಿ ಪುತ್ತಿಲ ಪರಿವಾರ ಬೆಂಬಲಿತ ಅಭ್ಯರ್ಥಿ ಸುಬ್ರಹ್ಮಣ್ಯ ಬಲ್ಯಾಯ ಜಯಭೇರಿ ಗಳಿಸಿದ ಹಿನ್ನಲೆಯಲ್ಲಿ ಪುತ್ತಿಲ ಪರಿವಾರದಿಂದ ವಿಜಯೋತ್ಸವ ಬುಧವಾರ ನಡೆಯಿತು. ಆಡಳಿತ ಸೌಧದ ಬಳಿ ಪಟಾಕಿ ಸಿಡಿಸಿ ಸಂಭ್ರಮ ಆಚರಿಸಿದ ಬಳಿಕ ತೆರೆದ ವಾಹನದಲ್ಲಿ ಆಡಳಿತ ಸೌಧದ ಬಳಿಯಿಂದ ವಿಜಯೋತ್ಸವ ಮೆರವಣಿಗೆ ಸಾಗಿ ಮುಖ್ಯ ರಸ್ತೆಯಲ್ಲಿ ಸಂಚರಿಸಿತು. ಈ ಸಂದರ್ಭದಲ್ಲಿ ಹಿಂದೂ ಮುಖಂಡ ಅರುಣ್ ಕುಮಾರ್ ಪುತ್ತಿಲ, ಪುತ್ತಿಲ ಪರಿವಾರದ ಸದಸ್ಯರು ಪಾಲ್ಗೊಂಡಿದ್ದರು.

ಆರ್ಯಾಪು ಗ್ರಾಪಂ ಉಪ ಚುನಾವಣೆ | ಪುತ್ತಿಲ ಬೆಂಬಲಿತ ಅಭ್ಯರ್ಥಿ ಗೆಲುವು | ವಿಜಯೋತ್ಸವ ಮೆರವಣಿಗೆ Read More »

ಗ್ರಾಪಂ ಉಪಚುನಾವಣೆ | ಕಾಂಗ್ರೆಸ್ ಗೆ ಒಲಿದ ನಿಡ್ಪಳ್ಳಿ ಕ್ಷೇತ್ರ

ನಿಡ್ಪಳ್ಳಿ: ನಿಡ್ಪಳ್ಳಿ ಗ್ರಾಪಂ ಉಪಚುನಾವಣೆಯಲ್ಲಿ ಕಾಂಗ್ರೆಸ್ ಬೆಂಬಲಿತ ಅಭ್ಯರ್ಥಿ ಸತೀಶ್ ಶೆಟ್ಟಿ ಅವರಿಗೆ ಜಯ ಲಭಿಸಿದೆ. ವಾರ್ಡ್ 1 ರ ಸಾಮಾನ್ಯ ಮೀಸಲು ಕ್ಷೇತ್ರದ ಬಿಜೆಪಿ ಬೆಂಬಲಿತ ಸದಸ್ಯ ಮುರಳೀಕೃಷ್ಣ ಅವರ ನಿಧನದಿಂದ ತರವಾದ ಸ್ಥಾನಕ್ಕೆ ಜು.23 ರಂದು ಉಪಚುನಾವಣೆ ನಡೆದಿತ್ತು. ಒಟ್ಟು 607 ಮತಗಳ ಪೈಕಿ 529 ಮತ ಚಲಾವಣೆಯಾಗಿದ್ದು, ಪುತ್ತಿಲ ಪರಿವಾರ ಬೆಂಬಲಿತ ಅಭ್ಯರ್ಥಿ ಜಗನ್ನಾಥ ರೈ 208 ಮತ, ಕಾಂಗ್ರೆಸ್ನ ಸತೀಶ್ ಶೆಟ್ಟಿ 235 ಮತ ಹಾಗೂ ಬಿಜೆಪಿ ಬೆಂಬಲಿತ ಅಭ್ಯರ್ಥಿ ಚಂದ್ರಶೇಖರ

ಗ್ರಾಪಂ ಉಪಚುನಾವಣೆ | ಕಾಂಗ್ರೆಸ್ ಗೆ ಒಲಿದ ನಿಡ್ಪಳ್ಳಿ ಕ್ಷೇತ್ರ Read More »

ಗ್ರಾಪಂ ಉಪ ಚುನಾವಣೆ | ಆರ್ಯಾಪು ಗ್ರಾಪಂನಿಂದ ಪುತ್ತಿಲ ಪರಿವಾರ ಅಭ್ಯರ್ಥಿ ಸುಬ್ರಹ್ಮಣ್ಯ ಬಲ್ಯಾಯರಿಗೆ ಗೆಲುವು

ಪುತ್ತೂರು: ತಾಲೂಕಿನ ಆರ್ಯಾಪು ಗ್ರಾಪಂನ ವಾರ್ಡ್ -2 ನಡೆದ ಉಪ ಚುನಾವಣೆಯಲ್ಲಿ ಪುತ್ತಿಲ ಪರಿವಾರ ಬೆಂಬಲಿತ ಅಭ್ಯರ್ಥಿ ಸುಬ್ರಹ್ಮಣ್ಯ ಬಲ್ಯಾಯ 499 ಮತಗಳನ್ನು ಪಡೆದು ಜಯಗಳಿಸಿದ್ದಾರೆ. ವಾರ್ಡ್ -2 ರ ಹಿಂದುಳಿದ ವರ್ಗ “ಎ” ಮೀಸಲು ಕ್ಷೇತ್ರದ ಬಿಜೆಪಿ ಬೆಂಬಲಿತ ಸದಸ್ಯ ರುಕ್ಮಯ್ಯ ಮೂಲ್ಯರ ನಿಧನದಿಂದ ತೆರವಾದ ಸ್ಥಾನಕ್ಕೆ ಜು.23 ರಂದು ಉಪ ಚುನಾವಣೆ ನಡೆದಿತ್ತು. ಒಟ್ಟು 1237 ಮತಗಳ ಪೈಕಿ 999 ಮತ ಚಲಾವಣೆಯಾಗಿತ್ತು. ಈ ಪೈಕಿ ಪುತ್ತಿಲ ಪರಿವಾರದ ಸುಬ್ರಹ್ಮಣ್ಯ ಬಲ್ಯಾಯ 499 ಮತ,

ಗ್ರಾಪಂ ಉಪ ಚುನಾವಣೆ | ಆರ್ಯಾಪು ಗ್ರಾಪಂನಿಂದ ಪುತ್ತಿಲ ಪರಿವಾರ ಅಭ್ಯರ್ಥಿ ಸುಬ್ರಹ್ಮಣ್ಯ ಬಲ್ಯಾಯರಿಗೆ ಗೆಲುವು Read More »

ಶಾಂತಿಯುತವಾಗಿ ನಡೆದ ನಿಡಳ್ಳಿ, ಆರ್ಯಾಪು ಗ್ರಾ.ಪಂ. ಉಪಚುನಾವಣೆ

ಪುತ್ತೂರು : ಪುತ್ತೂರು ತಾಲೂಕಿನ ಆರ್ಯಾಪು ಹಾಗೂ ನಿಡ್ಪಳ್ಳಿ ಗ್ರಾಪಂಗಳಲ್ಲಿ ಸದಸ್ಯರಿಬ್ಬರ ನಿಧನದಿಂದ ತೆರವಾಗಿರುವ ಎರಡು ಸ್ಥಾನಗಳಿಗೆ ಸದಸ್ಯರ ಆಯ್ಕೆಗೆ ಮತದಾನ ಪ್ರಕ್ರಿಯೆ ಭಾನುವಾರ ಶಾಂತಿಯುತವಾಗಿ ನಡೆಯಿತು. ಎರಡು ಪಂಚಾಯಿತಿಗಳಿಗೆ ತಲಾ ಒಂದು ಸ್ಥಾನಗಳಿಗೆ ಶಾಂತಿಯುತ ಮತದಾನ ನಡೆಯಿತು. ಚುನಾವಣೆ ಅಂತಿಮ ಹಂತದಲ್ಲಿ ಆರ್ಯಾಪು ಗ್ರಾ.ಪಂ. ನಲ್ಲಿ 85.79 ಶೇ. ಹಾಗೂ ನಿಡ್ಪಳ್ಳಿ ಗ್ರಾ.ಪಂ.ನಲ್ಲಿ 87.14 ಶೇ. ಮತ ಚಲಾವಣೆಯಾಗಿದೆ.  ಚುನಾವಣೆಯಲ್ಲಿ ಕಾಂಗ್ರೆಸ್, ಬಿಜೆಪಿ ಹಾಗೂ ಪುತ್ತಿಲ ಪರಿವಾರ ಬೆಂಬಲಿತ ಅಭ್ಯರ್ಥಿಗಳು ಎರಡೂ ಕಡೆ ಸ್ಪರ್ಧಿಸುತ್ತಿದ್ದು, ತ್ರಿಕೋನ

ಶಾಂತಿಯುತವಾಗಿ ನಡೆದ ನಿಡಳ್ಳಿ, ಆರ್ಯಾಪು ಗ್ರಾ.ಪಂ. ಉಪಚುನಾವಣೆ Read More »

error: Content is protected !!
Scroll to Top