ರಾಜಕೀಯ

ಎಂಎಲ್‌ಸಿ ರಾಜೇಂದ್ರ ಹತ್ಯೆಗೆ ಸುಪಾರಿ : ಮಹಿಳೆ ಸಹಿತ ನಾಲ್ವರು ವಶ

ಆಡಿಯೋ ಬಹಿರಂಗವಾದ ಬಳಿಕ ತನಿಖೆ ಚುರುಕುಗೊಳಿಸಿದ ಪೊಲೀಸರು ಬೆಂಗಳೂರು: ಸಚಿವ ಕೆ.ಎನ್‌. ರಾಜಣ್ಣ ಅವರ ಪುತ್ರ ವಿಧಾನ ಪರಿಷತ್ ಸದಸ್ಯ ರಾಜೇಂದ್ರ ಅವರ ಹತ್ಯೆಗೆ ಸುಪಾರಿ ನೀಡಿದ ಪ್ರಕರಣಕ್ಕೆ ಸಂಬಂಧಿಸಿದ ಆಡಿಯೋ ತುಣುಕೊಂದು ಬಹಿರಂಗವಾದ ಬೆನ್ನಿಗೆ ತನಿಖೆ ಚುರುಕುಗೊಳಿಸಿರುವ ಪೊಲೀಸರು ಆಡಿಯೋದಲ್ಲಿದ್ದ ಪುಷ್ಪಾ ಎಂಬ ಮಹಿಳೆಯ ಸಹಿತ ನಾಲ್ವರನ್ನು ವಶಕ್ಕೆ ತೆಗೆದುಕೊಂಡಿದ್ದಾರೆ. ಎಂಎಲ್‌ಸಿ ರಾಜೇಂದ್ರ ಹತ್ಯೆಗೆ ಸುಪಾರಿ ಪಡೆದುಕೊಂಡಿದ್ದ ಎನ್ನಲಾದ ರೌಡಿಶೀಟರ್‌ ಸೋಮು ಎಂಬಾತನ ಕುರಿತು ರಾಕಿ ಹಾಗೂ ಪುಷ್ಪಾ ಎಂಬವರು ಮಾತುಕತೆ ನಡೆಸಿದ್ದ 18 ನಿಮಿಷದ […]

ಎಂಎಲ್‌ಸಿ ರಾಜೇಂದ್ರ ಹತ್ಯೆಗೆ ಸುಪಾರಿ : ಮಹಿಳೆ ಸಹಿತ ನಾಲ್ವರು ವಶ Read More »

ಬೆಲೆ ಏರಿಕೆ ವಿರುದ್ಧ ಬಿಜೆಪಿ ರಣಕಹಳೆ : ನಾಳೆ ಫ್ರೀಡಂ ಪಾರ್ಕಿನಲ್ಲಿ ಅಹೋರಾತ್ರಿ ಧರಣಿ

ಏ.9ರಂದು ಮಂಗಳೂರು, 10ರಂದು ಉಡುಪಿಯಲ್ಲಿ ಜನಾಕ್ರೋಶ ಹೋರಾಟ ಬೆಂಗಳೂರು : ಬೆಲೆಯೇರಿಕೆ ಖಂಡಿಸಿ ಸರ್ಕಾರದ ವಿರುದ್ಧ ರಾಜ್ಯಾದ್ಯಂತ ಹೋರಾಟ ನಡೆಸಲು ಬಿಜೆಪಿ ಮುಂದಾಗಿದ್ದು, ಏಪ್ರಿಲ್‌ 2ರಂದು ಬೆಂಗಳೂರಿನ ಫ್ರೀಡಂ ಪಾರ್ಕ್‌ನಲ್ಲಿ ಅಹೋರಾತ್ರಿ ಧರಣಿ ನಡೆಸುವುದರೊಂದಿಗೆ ಬಿಜೆಪಿಯ ಹೋರಾಟ ಪ್ರಾರಂಭವಾಗಲಿದೆ.ಏಪ್ರಿಲ್​ 2ರಿಂದ ಬೆಂಗಳೂರಿನ ಫ್ರೀಡಂಪಾರ್ಕ್​ನಲ್ಲಿ ಅಹೋರಾತ್ರಿ ಧರಣಿ ನಡೆಸುತ್ತೇವೆ. ನಮ್ಮ ಪಕ್ಷದ ಶಾಸಕರು, ಸಂಸದರು, ಪರಾಜಿತ ಅಭ್ಯರ್ಥಿಗಳು ಹಾಗೂ ಜಿಲ್ಲಾ ಘಟಕದ ಅಧ್ಯಕ್ಷರು ಅಹೋರಾತ್ರಿ ಧರಣಿಯಲ್ಲಿ ಭಾಗಿಯಾಗುತ್ತಾರೆ. ಏಪ್ರಿಲ್​ 5ರಂದು ಎಲ್ಲ ಜಿಲ್ಲೆ, ತಾಲೂಕು ಕೇಂದ್ರಗಳಲ್ಲಿ ಧರಣಿ ಮಾಡುತ್ತೇವೆ

ಬೆಲೆ ಏರಿಕೆ ವಿರುದ್ಧ ಬಿಜೆಪಿ ರಣಕಹಳೆ : ನಾಳೆ ಫ್ರೀಡಂ ಪಾರ್ಕಿನಲ್ಲಿ ಅಹೋರಾತ್ರಿ ಧರಣಿ Read More »

ದುಗಲಡ್ಕ- ನೀರಬಿದಿರೆ ರಸ್ತೆಯ ಅಭಿವೃದ್ಧಿಗೆ ಗುದ್ದಲಿಪೂಜೆ

ಸುಳ್ಯ ನಗರ ಪಂಚಾಯ್ ವ್ಯಾಪ್ತಿಯ  ಬಹುಬೇಡಿಕೆಯ ರಸ್ತೆ  ಕೊಡಿಯಾಲಬೈಲು- ನೀರಬಿದಿರೆ- ದುಗಲಡ್ಕ- ರಸ್ತೆಯು  45ಲಕ್ಷದ  ವೆಚ್ಚದಲ್ಲಿ ಅಭಿವೃದ್ಧಿಯಾಗಲಿದ್ದು ಇದರ ಗುದ್ದಲಿಪೂಜೆ ನಡೆಯಿತು.  ದುಗಲಡ್ಕ- ನೀರಬಿದಿರೆ ರಸ್ತೆಯ ಅಭಿವೃದ್ಧಿಗೆ ಗುದ್ದಲಿಪೂಜೆಯನ್ನು ಮಾನ್ಯ ಶಾಸಕರಾದ ಭಾಗೀರಥಿ ಮುರುಳ್ಯ ನೆರವೆರಿಸಿದರು. ಈ ಸಂದರ್ಭದಲ್ಲಿ ಸುಳ್ಯ ನಗರಪಂಚಾಯತ್ ಅಧ್ಯಕ್ಷೆ ಶಶಿಕಲಾ ನೀರಬಿದಿರೆ, ಉಪಾಧ್ಯಕ್ಷ ಬುದ್ದನಾಯ್ಕ, ಸದಸ್ಯರಾದ ಕಿಶೋರಿ ಶೇಟ್, ಬಾಲಕೃಷ್ಣ ರೈ, ನಗರ ಪಂಚಾಯತ್ ಮುಖ್ಯಾಧಿಕಾರಿ ಸುಧಾಕರ್, ಭಾಜಪ ಮಂಡಲ ಅಧ್ಯಕ್ಷ  ವೆಂಕಟ ವಳಲಂಬೆ, ನಗರ ಮಹಾಶಕ್ತಿ ಕೇಂದ್ರ ಪ್ರಮುಖರಾದ A.T ಕುಸುಮಾಧರ

ದುಗಲಡ್ಕ- ನೀರಬಿದಿರೆ ರಸ್ತೆಯ ಅಭಿವೃದ್ಧಿಗೆ ಗುದ್ದಲಿಪೂಜೆ Read More »

ಮಗಳ ಬರ್ತ್‌ಡೇ ದಿನವೇ ಎಂಎಲ್‌ಸಿ ರಾಜೇಂದ್ರ ಹತ್ಯೆಗೆ ಪ್ಲ್ಯಾನ್‌

ಆಡಿಯೊ ಕ್ಲಿಪ್ಪಿಂಗ್‌ನಿಂದ ಬಯಲಾಯಿತು ಸುಪಾರಿ ಹಿಂದಿನ ಮರ್ಮ ಬೆಂಗಳೂರು: ಸಚಿವ ಕೆ.ಎನ್‌ ರಾಜಣ್ಣ ಅವರ ಪುತ್ರ, ಎಂಎಲ್‌ಸಿ ರಾಜೇಂದ್ರ ಹತ್ಯೆಗೆ ಅವರ ಮಗಳ ಬರ್ತ್‌ಡೇ ದಿನವೇ ಯತ್ನಿಸಲಾಗಿತ್ತು ಎಂಬ ಸ್ಫೋಟಕ ಮಾಹಿತಿ ಬಹಿರಂಗವಾಗಿದೆ. ತನ್ನ ಹತ್ಯಾಯತ್ನದ ಬಗ್ಗೆ ರಾಜೇಂದ್ರ ಅವರೇ ದೂರಿನ ಜೊತೆಗೆ ನೀಡಿದ್ದ ಆಡಿಯೊ ಕ್ಲಿಪ್ಪಿಂಗ್‌ ಈಗ ಬಯಲಾಗಿದ್ದು, ಇದರಲ್ಲಿ ಪುಷ್ಪಾ ಎಂದು ಹೇಳಿಕೊಂಡಿರುವ ಮಹಿಳೆ ರಾಕಿ ಎಂಬಾತನಿಗೆ ರಾಜೇಂದ್ರ ಅವರ ಹತ್ಯೆಯ ಪ್ಲ್ಯಾನ್‌ ವಿವರಿಸಿದ ಸಂಭಾಷಣೆಯಿದೆ. ರಾಜೇಂದ್ರ ತುಮಕೂರು ಎಸ್ಪಿಗೆ ನೀಡಿದ ಆಡಿಯೋದಲ್ಲಿ ಸುಪಾರಿ

ಮಗಳ ಬರ್ತ್‌ಡೇ ದಿನವೇ ಎಂಎಲ್‌ಸಿ ರಾಜೇಂದ್ರ ಹತ್ಯೆಗೆ ಪ್ಲ್ಯಾನ್‌ Read More »

ಹತ್ಯೆಗೆ ಸುಪಾರಿ : ದೂರು ದಾಖಲಿಸಿದ ಎಂಎಲ್‌ಸಿ ರಾಜೇಂದ್ರ

ಸಾಯಿಸಲು ರೌಡಿಶೀಟರ್‌ಗೆ 70 ಲ.ರೂ. ಸುಪಾರಿ ನೀಡಿದ್ದಾರೆ ಎಂದು ಆರೋಪ ತುಮಕೂರು: ಸದನದಲ್ಲಿ ಹನಿಟ್ರ್ಯಾಪ್‌ ಬಾಂಬ್‌ ಸಿಡಿಸಿದ ಸಹಕಾರ ಸಚಿವ ಕೆ.ಎನ್. ರಾಜಣ್ಣ ಅವರ ಪುತ್ರ ವಿಧಾನ ಪರಿಷತ್‌ ಸದಸ್ಯ ರಾಜೇಂದ್ರ ಅವರು ತನ್ನ ಹತ್ಯೆಗೆ ಯತ್ನ ನಡೆಯುತ್ತಿದೆ ಎಂದು ತುಮಕೂರಿನಲ್ಲಿ ದೂರು ದಾಖಲಿಸಿದ್ದಾರೆ. ರಾಜೇಂದ್ರ ನೀಡಿದ ದೂರಿನ ಪ್ರಕಾರ ತುಮಕೂರಿನ ಕ್ಯಾತ್ಸಂದ್ರ ಪೊಲೀಸರು ರೌಡಿ ಶೀಟರ್ ಸೋಮು ಸೇರಿದಂತೆ ಐದು ಜನರ ವಿರುದ್ಧ ಎಫ್‌ಐಆರ್ ದಾಖಲಿಸಿದ್ದಾರೆ. ಭರತ್, ಅಮಿತ್, ಗುಂಡಾ ಮತ್ತು ಯತೀಶ್ ಇತರ ಆರೋಪಿಗಳು.

ಹತ್ಯೆಗೆ ಸುಪಾರಿ : ದೂರು ದಾಖಲಿಸಿದ ಎಂಎಲ್‌ಸಿ ರಾಜೇಂದ್ರ Read More »

ಅಂಬೇಡ್ಕರ್‌ ಜಯಂತಿಗೆ ಸಾರ್ವತ್ರಿಕ ರಜೆ ಘೋಷಣೆ

ಕೇಂದ್ರ ಸರಕಾರಿ ಕಚೇರಿಗಳು, ಕೈಗಾರಿಕಾ ಸಂಸ್ಥೆಗಳಿಗೆ ಏ.14ರಂದು ರಜೆ ನವದೆಹಲಿ : ಸಂವಿಧಾನ ಶಿಲ್ಪಿ ಡಾ.ಬಿ.ಆರ್‌.ಅಂಬೇಡ್ಕರ್‌ ಜನ್ಮದಿನವಾದ ಏ.14ರಂದು ಸಾರ್ವತ್ರಿಕ ರಜೆ ಘೋಷಿಸಿ ಕೇಂದ್ರ ಸರಕಾರ ಆದೇಶ ಹೊರಡಿಸಿದೆ. ಕೇಂದ್ರದ ಎಲ್ಲ ಸರ್ಕಾರಿ ಕಚೇರಿಗಳಿಗೆ ಅಂದು ರಜೆಯಿರುತ್ತದೆ.ಅಂಬೇಡ್ಕರರ ಜಯಂತಿ ದಿನದಂದು ರಾಷ್ಟ್ರೀಯ ರಜೆ ಇರಲಿದೆ ಎಂದು ಕೇಂದ್ರ ಸಂಸ್ಕೃತಿ ಸಚಿವ ಗಜೇಂದ್ರ ಸಿಂಗ್ ಶೇಖಾವತ್ ಅವರು ಘೋಷಣೆ ಮಾಡಿದ್ದಾರೆ. ಸಮಾಜದಲ್ಲಿ ಸಮಾನತೆಯ ಹೊಸ ಯುಗವನ್ನು ಸ್ಥಾಪಿಸಿದ ಸಂವಿಧಾನ ಶಿಲ್ಪಿ, ನಮ್ಮ ಬಾಬಾ ಸಾಹೇಬ್ ಪೂಜ್ಯ ಡಾ.ಭೀಮರಾವ್ ಅಂಬೇಡ್ಕರ್‌ಜಿ

ಅಂಬೇಡ್ಕರ್‌ ಜಯಂತಿಗೆ ಸಾರ್ವತ್ರಿಕ ರಜೆ ಘೋಷಣೆ Read More »

ಸಂಪಾದಕೀಯ- ಈಗ ಬೆಲೆ ಏರಿಕೆಯೇ ಸರಕಾರದ ಗ್ಯಾರಂಟಿ

ದರ ಹೆಚ್ಚಳದಿಂದ ಜನಸಾಮಾನ್ಯರು ಹೈರಾಣಾದರೂ ಆಳುವವರು ಡೋಂಟ್‌ಕೇರ್‌ ರಾಜ್ಯ ಸರಕಾರ ನಿನ್ನೆ ಮತ್ತೊಮ್ಮೆ ಹಾಲಿನ ಬೆಲೆಯನ್ನು ಲೀಟರಿಗೆ 4 ರೂಪಾಯಿಯಂತೆ ಏರಿಸಿದೆ. ಇದರ ಬೆನ್ನಿಗೆ ವಿದ್ಯುತ್‌ ದರವೂ ಏರಿಕೆಯಾಗಿದ್ದು, ರಾಜ್ಯದ ಜನರಿಗೆ ಒಟ್ಟೊಟ್ಟಿಗೆ ಎರಡೆರಡು ಬರೆ ಬಿದ್ದಿದೆ. ಅಂದು ಚುನಾವಣೆ ಸಂದರ್ಭದಲ್ಲಿ ಬೆಲೆ ಏರಿಕೆಯನ್ನೇ ಮುಖ್ಯ ವಿಷಯ ಮಾಡಿಕೊಂಡು ಬಡವರಿಗೆ ಗ್ಯಾರಂಟಿ ಕೊಡುಗೆಗಳನ್ನು ಕೊಟ್ಟು ಬೆಲೆ ಏರಿಕೆಯ ಬಿಸಿಯಿಂದ ಪಾರು ಮಾಡುವುದಾಗಿ ಹೇಳಿಕೊಂಡಿದ್ದ ಕಾಂಗ್ರೆಸ್‌ ಅಧಿಕಾರ ದಕ್ಕುತ್ತಿದ್ದಂತೆಯೇ ಉಲ್ಟಾ ಹೊಡೆದು ಈಗ ಬೆಲೆ ಏರಿಕೆಯೇ ತನ್ನ ಗ್ಯಾರಂಟಿ

ಸಂಪಾದಕೀಯ- ಈಗ ಬೆಲೆ ಏರಿಕೆಯೇ ಸರಕಾರದ ಗ್ಯಾರಂಟಿ Read More »

ಸದನದೊಳಗೆ ಪ್ರಿಯಾಂಕ ಗಾಂಧಿಯ ಕೆನ್ನೆ ಸವರಿದ ರಾಹುಲ್‌ ಗಾಂಧಿ

ಸಹೋದರಿಯ ಮೇಲಿನ ಪ್ರೀತಿಯನ್ನು ಸಂಸತ್ತಿನೊಳಗೆ ತೋರಿಸಿ ಎಡವಟ್ಟು ನವದೆಹಲಿ : ಸಂಸತ್ತಿನ ಒಳಗೂ ಏನಾದರೊಂದು ಎಡವಟ್ಟು ಮಾಡಿಕೊಂಡು ಟೀಕೆಗಳಿಗೆ ಗುರಿಯಾಗುತ್ತಿರುವ ಲೋಕಸಭೆಯ ವಿಪಕ್ಷ ನಾಯಕ ರಾಹುಲ್‌ ಗಾಂಧಿ ಈಗ ಸದನದ ಒಳಗೆ ಸಹೋದರಿ ಪ್ರಿಯಾಂಕ ವಾಡ್ರಾ ಗಾಂಧಿಯ ಕೆನ್ನೆ ಸವರಿ ಕಾಂಗ್ರೆಸ್‌ಗೆ ತಿವ್ರ ಮುಜುಗರವುಂಟುಮಾಡಿದ್ದಾರೆ.ಎರಡು ವರ್ಷದ ಹಿಂದೆ ಹಮ್ಮಿಕೊಂಡ ಭಾರತ್‌ ಜೋಡೊ ಯಾತ್ರೆ ಉತ್ತರ ಪ್ರದೇಶದಲ್ಲಿ ನಡೆಯುತ್ತಿದ್ದಾಗ ಯಾತ್ರೆಯನ್ನು ಸೇರಿಕೊಂಡ ಪ್ರಿಯಾಂಕ ಗಾಂಧಿಯನ್ನು ರಾಹುಲ್‌ ಗಾಂಧಿ ಸಾರ್ವಜನಿಕರ ಎದುರೇ ಬರಸೆಳೆದು ಅಪ್ಪಿ ಹಿಡಿದು ಕೆನ್ನೆಗೆ ಮುತ್ತಿಕ್ಕಿದ ವೀಡಿಯೊ

ಸದನದೊಳಗೆ ಪ್ರಿಯಾಂಕ ಗಾಂಧಿಯ ಕೆನ್ನೆ ಸವರಿದ ರಾಹುಲ್‌ ಗಾಂಧಿ Read More »

ಯತ್ನಾಳ ಉಚ್ಚಾಟನೆಯಿಂದ ಆಗುವ ಪರಿಣಾಮ ಏನು?

ಸೋಷಿಯಲ್‌ ಮೀಡಿಯಾದಲ್ಲಿ ನಡೆಯುತ್ತಿದೆ ಪರ-ವಿರೋಧ ಚರ್ಚೆ ಬೆಂಗಳೂರು : ಫಯರ್‌ಬ್ರಾಂಡ್‌ ನಾಯಕ ಎಂದು ಗುರುತಿಸಿಕೊಂಡಿರುವ ವಿಜಯಪುರದ ಶಾಸಕ ಬಸನಗೌಡ ಪಾಟೀಲ್‌ ಯತ್ನಾಳ ಅವರನ್ನು ಬಿಜೆಪಿ ಹೈಕಮಾಂಡ್‌ ಪಕ್ಷ ವಿರೋಧಿ ಚಟುವಟಿಕೆ ನಡೆಸಿದ ಆಪಾದನೆ ಹೊರಿಸಿ ಆರು ವರ್ಷದ ಮಟ್ಟಿಗೆ ಉಚ್ಚಾಟಿಸಿದ ಸಾಧಕ ಬಾಧಕಗಳ ಕುರಿತು ಭಾರಿ ಚರ್ಚೆಯಾಗುತ್ತಿದೆ.ಉರಿ ನಾಲಗೆಯ ಯತ್ನಾಳ ಹಿಂದುತ್ವದ ಕಟ್ಟಾ ಪ್ರತಿಪಾದಕರಾಗಿದ್ದರು. ಎದುರಾಳಿಗಳನ್ನು ಮುಲಾಜಿಲ್ಲದೆ ಕಟುಶಬ್ದಗಳಲ್ಲಿ ಟೀಕಿಸುತ್ತಿದ್ದರು. ಇಂಥ ಟೀಕೆಗಳಿಂದ ಅವರು ಲೆಕ್ಕವಿಲ್ಲದಷ್ಟು ವಿವಾದಗಳನ್ನು ಮೈಮೇಲೆ ಎಳೆದುಕೊಂಡಿದ್ದರೂ ಇದಕ್ಕೆಲ್ಲ ಎದೆಗುಂದುವ ವ್ಯಕ್ತಿತ್ವ ಅವರದ್ದಲ್ಲ. ಅವರ

ಯತ್ನಾಳ ಉಚ್ಚಾಟನೆಯಿಂದ ಆಗುವ ಪರಿಣಾಮ ಏನು? Read More »

ಸಾವಿರ ಕುತೂಹಲ ಹುಟ್ಟುಹಾಕಿದ ಸಾಹುಕಾರ್‌ ನಡೆ

ಕುಮಾರಸ್ವಾಮಿ, ದೇವೇಗೌಡ ಭೇಟಿಯ ಹಿಂದಿನ ಮರ್ಮವೇನು? ಬೆಂಗಳೂರು: ಹನಿಟ್ರ್ಯಾಪ್‌ ಪ್ರಕರಣ ಬಯಲಾದ ಬಳಿಕ ರಾಜ್ಯ ರಾಜಕೀಯದಲ್ಲಿ ನಡೆಯುತ್ತಿರುವ ಕ್ಷಿಪ್ರ ಬೆಳವಣಿಗೆಗಳು ಕುತೂಹಲ ಹುಟ್ಟಿಸಿವೆ. ಅದರಲ್ಲೂ ಕರ್ನಾಟಕ ರಾಜಕೀಯ ವಲಯದಲ್ಲಿ ಸಾಹುಕಾರ್‌ ಎಂದೇ ಅರಿಯಲ್ಪಡುವ ಲೋಕೋಪಯೋಗಿ ಸಚಿವ ಸತೀಶ್‌ ಜಾರಕಿಹೊಳಿ ದಿಲ್ಲಿಗೆ ಹೋದ ಬಳಿಕ ನಡೆದಿರುವ ವಿದ್ಯಮಾನಗಳು ಸಾವಿರ ಕುತೂಹಲ ಹುಟ್ಟಿಸಿವೆ. ಹನಿಟ್ರ್ಯಾಪ್‌ ಪ್ರಕರಣವನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಗೃಹ ಸಚಿವ ಜಿ.ಪರಮೇಶ್ವರ್‌ ಬಹಳ ಹಗುರವಾಗಿ ಪರಿಗಣಿಸಿರುವುದರಿಂದ ಕೆರಳಿರುವ ಸತೀಶ್‌ ಜಾರಕಿಹೊಳಿ ಹೈಕಮಾಂಡ್​ಗೆ ದೂರು ನೀಡುತ್ತೇನೆ ಎಂದು ದೆಹಲಿಗೆ

ಸಾವಿರ ಕುತೂಹಲ ಹುಟ್ಟುಹಾಕಿದ ಸಾಹುಕಾರ್‌ ನಡೆ Read More »

error: Content is protected !!
Scroll to Top