ರಾಜಕೀಯ

ಹಿರಿತನವನ್ನು ಗುಲಾಮಗಿರಿ ಪಕ್ಷಕ್ಕೆ ಒತ್ತೆಯಿಟ್ಟಂತೆ ವರ್ತನೆ : ಖರ್ಗೆಗೆ ವಿಜಯೇಂದ್ರ ತಿರುಗೇಟು

ಗಂಗೆಯಲ್ಲಿ ಸ್ನಾನ ಮಾಡುವುದರಿಂದ ಬಡತನ ಹೋಗುತ್ತದಯೇ ಎಂದು ಟೀಕಿಸಿದ್ದ ಖರ್ಗೆ ಬೆಂಗಳೂರು: ಗಂಗಾನದಿಯಲ್ಲಿ ಸ್ನಾನ ಮಾಡುವುದರಿಂದ ಬಡತನ ಹೋಗುತ್ತದೆಯೇ ಎಂದಿರುವ ಕಾಂಗ್ರೆಸ್‌ ರಾಷ್ಟ್ರೀಯ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ವಿವಾದಕ್ಕೊಳಗಾಗಿದೆ. ಮಹಾಕುಂಭದಲ್ಲಿ ಪ್ರಧಾನಿ ನರೇಂದ್ರ ಮೋದಿ ಮತ್ತು ಅಮಿತ್ ಶಾ ಗಂಗಾ ನದಿಯಲ್ಲಿ ಪವಿತ್ರ ತೀರ್ಥ ಸ್ನಾನ ಮಾಡಿರುವುದನ್ನು ಲೇವಡಿ ಮಾಡಿ ಮಾಡಿ ಖರ್ಗೆ ಈ ಹೇಳಿಕೆ ನೀಡಿದ್ದಾರೆ. ಇದಕ್ಕೆ ತೀಕ್ಷ್ಣವಾಗಿ ಪ್ರತಿಕ್ರಿಯಿಸಿರುವ ರಾಜ್ಯ ಬಿಜೆಪಿ ಅಧ್ಯಕ್ಷ ಬಿ.ವೈ.ವಿಜಯೇಂದ್ರ, ಹಿಂದುಗಳ ಧಾರ್ಮಿಕ ಶ್ರದ್ಧೆಯನ್ನು ಅವಮಾನಿಸುವುದು ಕಾಂಗ್ರೆಸ್ಸಿಗರ ಚಾಳಿ ಎಂದಿದ್ದಾರೆ. […]

ಹಿರಿತನವನ್ನು ಗುಲಾಮಗಿರಿ ಪಕ್ಷಕ್ಕೆ ಒತ್ತೆಯಿಟ್ಟಂತೆ ವರ್ತನೆ : ಖರ್ಗೆಗೆ ವಿಜಯೇಂದ್ರ ತಿರುಗೇಟು Read More »

ಮುಡಾ ಹಗರಣ : ಸಿದ್ದರಾಮಯ್ಯ ಪತ್ನಿಗೆ ಇ.ಡಿ. ನೋಟಿಸ್‌

ಎರಡು ದಿನ ವಿಚಾರಣೆಗೆ ಹಾಜರಾಗಲು ಸೂಚನೆ ಬೆಂಗಳೂರು : ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರ (ಮುಡಾ) ಹಗರಣಕ್ಕೆ ಸಂಬಂಧಿಸಿದಂತೆ ಸೋಮವಾರ ಮತ್ತು ಮಂಗಳವಾರ ವಿಚಾರಣೆಗೆ ಹಾಜರಾಗುವಂತೆ ಜಾರಿ ನಿರ್ದೇಶನಾಲಯ ಮುಖ್ಯಮಂತ್ರಿ ಸಿದ್ದರಾಮಯ್ಯ ಪತ್ನಿ ಪಾರ್ವತಿ ಮತ್ತು ನಗರಾಭಿವೃದ್ಧಿ ಸಚಿವ ಭೈರತಿ ಸುರೇಶ್ ಅವರಿಗೆ ನೋಟಿಸ್​​ ಜಾರಿ ಮಾಡಿದೆ. ಇ.ಡಿ ನೋಟಿಸ್​ ನೀಡುತ್ತಿದ್ದಂತೆ ಪಾರ್ವತಿ ಸಿದ್ದರಾಮಯ್ಯ ಮತ್ತು ಭೈರತಿ ಸುರೇಶ್ ಕರ್ನಾಟಕ ಹೈಕೋರ್ಟ್​​ನ​ ಧಾರವಾಡ ಏಕಸದಸ್ಯ ಪೀಠಕ್ಕೆ ಎರಡು ಪ್ರತ್ಯೇಕ ಅರ್ಜಿ ಸಲ್ಲಿಸಿದ್ದಾರೆ. ಈ ಸಂಬಂಧ ತುರ್ತು ವಿಚಾರಣೆ ನಡೆಸುವಂತೆ

ಮುಡಾ ಹಗರಣ : ಸಿದ್ದರಾಮಯ್ಯ ಪತ್ನಿಗೆ ಇ.ಡಿ. ನೋಟಿಸ್‌ Read More »

ಕಾರು ಅಪಘಾತದಲ್ಲಿ ಗಾಯಗೊಂಡಿದ್ದ ಲಕ್ಷ್ಮೀ ಹೆಬ್ಬಾಳ್ಕರ್‌ ಆಸ್ಪತ್ರೆಯಿಂದ ಬಿಡುಗಡೆ

ಬೆಳಗಾವಿ: ಕಾರು ಅಪಘಾತದಲ್ಲಿ ಗಾಯಗೊಂಡು ಬೆಳಗಾವಿಯ ಖಾಸಗಿ ಆಸ್ಪತ್ರೆಗೆ ದಾಖಲಾಗಿದ್ದ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ಡಿಸ್ಚಾರ್ಜ್ ಆಗಿದ್ದಾರೆ. ಜನವರಿ 14ರಂದು ಬೆಂಗಳೂರಿನಿಂದ ಬೆಳಗಾವಿಗೆ ತೆರಳುವಾಗ ಅಂಬಡಗಟ್ಟಿ ಬಳಿ ಅಪಘಾತ ಸಂಭವಿಸಿತ್ತು. ಅಪಘಾತದಲ್ಲಿ ಹೆಬ್ಬಾಳ್ಕರ್ ಬೆನ್ನು ಮೂಳೆ ಮುರಿತವಾಗಿ, ಕತ್ತಿಗೆ ಗಾಯವಾಗಿತ್ತು. 13 ದಿನಗಳ ಕಾಲ ಚಿಕಿತ್ಸ ಪಡೆದ ಬಳಿಕ ಲಕ್ಷ್ಮೀ ಹೆಬ್ಬಾಳ್ಕರ್ ಆಸ್ಪತ್ರೆಯಿಂದ ಬಿಡುಗಡೆಯಾಗಿದ್ದಾರೆ.ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಲಕ್ಷ್ಮೀ ಹೆಬ್ಬಾಳ್ಕರ್, ಎಲ್ಲರಿಗೂ ಧನ್ಯವಾದ ತಿಳಿಸುತ್ತೇನೆ. ನನಗೆ ಆಗಬಾರದ ದುರ್ಘಟನೆ ಆಯಿತು. ಕೊನೇ ಹಂತ ನೋಡಿ ಹೋರಾಟ ಮಾಡಿ

ಕಾರು ಅಪಘಾತದಲ್ಲಿ ಗಾಯಗೊಂಡಿದ್ದ ಲಕ್ಷ್ಮೀ ಹೆಬ್ಬಾಳ್ಕರ್‌ ಆಸ್ಪತ್ರೆಯಿಂದ ಬಿಡುಗಡೆ Read More »

ಪ್ರತಿಷ್ಠಿತ ಪುತ್ತೂರು ಕೋ ಆಪರೇಟಿವ್ ಟೌನ್ ಬ್ಯಾಂಕ್ ಚುನಾವಣೆ | ಎಲ್ಲಾ ೧೨ ಸ್ಥಾನಗಳು ಸಹಕಾರ ಭಾರತಿ ತೆಕ್ಕೆಗೆ

ಪುತ್ತೂರು: ಟೌನ್ ಬ್ಯಾಂಕ್ ಚುನಾವಣೆಯಲ್ಲಿ ಬಿಜೆಪಿ ಬೆಂಬಲಿತ ಸಹಕಾರ ಭಾರತಿಯ ೧೨ ಸದಸ್ಯರು ಜಯ ಶಾಲಿಯಾಗಿದ್ದಾರೆ. ಒಂದು ಸೀಟು ಅವಿರೋಧ ಆಯ್ಕೆಯ ಬಳಿಕ ನಡೆದ ಚುನಾವಣೆಯಲ್ಲಿ ೧೨ ಕ್ಷೇತ್ರಗಳಿಗೆ ಚುನಾವಣೆ ನಡೆದಿದೆ, ಹರೀಶ್ ಬಿಜತ್ರೆ ಅವಿರೋಧವಾಗಿ ಆಯ್ಕೆಯಾಗಿದ್ದರು. ಉಳಿದಂತೆ ಕಿಶೋರ್ ಕೊಳತ್ತಾಯ, ಚಂದ್ರಶೇಖರ್ ರಾವ್ ಬಪ್ಪಳಿಗೆ, ರಾಜು ಶೆಟ್ಟಿ, ರಾಮಚಂದ್ರ ಕಾಮತ್, ಶ್ರೀಧರ್ ಪಟ್ಲ, ಸುಜೀಂದ್ರ ಪ್ರಭು, ಗಣೇಶ್ ಕೌಕ್ರಾಡಿ, ಮಲ್ಲೇಶ್, ವೀಣಾ, ಸೀಮಾ, ಕಿರಣ್ ಕುಮಾರ್, ಶ್ರೀಧರ್ ಗೌಡ ಚುನಾವಣೆಯಲ್ಲಿ ವಿಜಯ ಶಾಲಿಯಾದರು.

ಪ್ರತಿಷ್ಠಿತ ಪುತ್ತೂರು ಕೋ ಆಪರೇಟಿವ್ ಟೌನ್ ಬ್ಯಾಂಕ್ ಚುನಾವಣೆ | ಎಲ್ಲಾ ೧೨ ಸ್ಥಾನಗಳು ಸಹಕಾರ ಭಾರತಿ ತೆಕ್ಕೆಗೆ Read More »

ಇಡೀ ಗ್ರಾಮವನ್ನೇ ಖರೀದಿ ಮಾಡಿದ ಕಾಂಗ್ರೆಸ್‌ ಶಾಸಕ

ಗ್ರಾಮಸ್ಥರಿಂದ ಲೋಕಾಯುಕ್ತಕ್ಕೆ ದೂರು ರಾಮನಗರ: ವಕ್ಫ್ ಮಂಡಳಿ ರೈತರ ಜಮೀನು ಕಬಳಿಸುತ್ತಿರುವ ವಿವಾದ ಇನ್ನೂ ಜೀವಂತವಾಗಿರುವಾಗಲೇ ರಾಮನಗರದ ಕಾಂಗ್ರೆಸ್ ಶಾಸಕ ಇಕ್ಬಾಲ್‌ ಹುಸೇನ್‌ ಇಡೀ ಗ್ರಾಮವನ್ನೇ ಖರೀದಿ ಮಾಡಿದ ಗಂಭೀರ ಆರೋಪ ಕೇಳಿ ಬಂದಿದೆ. ಉಳುವವನೇ ಭೂಮಿಯ ಒಡೆಯ ಎಂಬ ಭೂ ಸುಧಾರಣಾ ಕಾಯ್ದೆಯನ್ನು ಉಲ್ಲಂಘನೆ ಮಾಡಿ ಇಡೀ ಊರನ್ನೇ ಶಾಸಕರು ಖರೀದಿ ಮಾಡಿದ್ದಾರೆಂದು ಗ್ರಾಮಸ್ಥರು ಲೋಕಾಯುಕ್ತಕ್ಕೆ ದೂರು ನೀಡಿದ್ದಾರೆ. ಉಳುವವನೇ ಭೂಮಿಯ ಒಡೆಯ ಎಂಬ ಕಾಯ್ದೆ ಜಾರಿಗೆ ಬಂದು ದಶಕಗಳೇ ಕಳೆದಿವೆ. ಈ ಕಾಯ್ದೆಯನ್ನು ಜಾರಿ

ಇಡೀ ಗ್ರಾಮವನ್ನೇ ಖರೀದಿ ಮಾಡಿದ ಕಾಂಗ್ರೆಸ್‌ ಶಾಸಕ Read More »

ಕೋಟೆಕಾರು ದರೋಡೆ ಕೃತ್ಯಕ್ಕೆ ಸಹಕರಿಸಿದವರಿಗೆ ರಾಜಕೀಯ ರಕ್ಷಣೆ : ಭರತ್‌ ಶೆಟ್ಟಿ

ಸಂಚಿನಲ್ಲಿ ಭಾಗಿಯಾದವರ ಹೆಸರು ಹೊರಗೆ ಬಾರದಂತೆ ತಡೆದಿದ್ದಾರೆ ಎಂದು ಆರೋಪ ಮಂಗಳೂರು: ಕೋಟೆಕಾರು ಸಹಕಾರಿ ಬ್ಯಾಂಕ್‌ನ ಕೆ.ಸಿ ರೋಡ್‌ ಶಾಖೆಯಲ್ಲಿ ಕಳೆದ ಶುಕ್ರವಾರ ಹಾಡಹಗಲೇ ನಡೆದಿರುವ ದರೋಡೆಯಲ್ಲಿ ಸ್ಥಳೀಯರ ಕೈವಾಡವಿದ್ದರೂ ರಾಜಕೀಯ ಕಾರಣಗಳಿಗಾಗಿ ಅವರ ಹೆಸರು ಹೊರಬಾರದಂತೆ ಮಾಡಲಾಗಿದೆ ಎಂದು ಶಾಸಕ ಭರತ್‌ ಶೆಟ್ಟಿ ಬಾಂಬ್‌ ಸಿಡಿಸಿದ್ದಾರೆ. ಸ್ಥಳೀಯರ ಕೈವಾಡವನ್ನು ಮುಚ್ಚಿ ಹಾಕಲು ವ್ಯವಸ್ಥಿತ ಪ್ರಯತ್ನ ಮಾಡಲಾಗುತ್ತಿದೆ. ಪೊಲೀಸರು ದರೋಡೆ ಮಾಡಿದವರನ್ನು ಬಂಧಿಸಿ ಮೂರು ದಿನ ಆದರೂ ದರೋಡೆಗೆ ಪ್ಲಾನ್‌ ಮಾಡಿದವರ ಕುರಿತು ಇನ್ನೂ ಯಾವುದೇ ಮಾಹಿತಿ

ಕೋಟೆಕಾರು ದರೋಡೆ ಕೃತ್ಯಕ್ಕೆ ಸಹಕರಿಸಿದವರಿಗೆ ರಾಜಕೀಯ ರಕ್ಷಣೆ : ಭರತ್‌ ಶೆಟ್ಟಿ Read More »

ಮುಡಾ ಹಗರಣ: ಸಿದ್ದರಾಮಯ್ಯಗೆ ಲೋಕಾಯುಕ್ತ ಕ್ಲೀನ್‌ಚಿಟ್‌

ಇದು ನಿರೀಕ್ಷಿತ ತನಿಖಾ ವರದಿ ಎಂದ ಸ್ನೇಹಮಯಿ ಕೃಷ್ಣ ಬೆಂಗಳೂರು: ಮುಡಾ ಹಗರಣದ ಲೋಕಾಯುಕ್ತ ತನಿಖೆ ಪೂರ್ಣಗೊಂಡಿದ್ದು, ನಿರೀಕ್ಷಿಸಿದಂತೆ ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಅವರ ಪತ್ನಿ ಪಾವರ್ತಿಯವರಿಗೆ ಕ್ಲೀನ್‌ಚಿಟ್‌ ನೀಡಿದೆ. ಮುಡಾ ಹಗರಣದಲ್ಲಿ ಸಿಎಂ ಸಿದ್ದರಾಮಯ್ಯ ಪಾತ್ರ ಎಲ್ಲೂ ಕಂಡು ಬಂದಿಲ್ಲ. ಡಿನೋಟಿಫೈ ಮಾಡುವಾಗ, ಭೂಪರಿವರ್ತನೆ ಮಾಡುವಾಗ ಅಧಿಕಾರಿಗಳು ನಿಯಮಗಳನ್ನು ಉಲ್ಲಂಘನೆ ಮಾಡಿದ್ದಾರೆ ಎಂದು ಲೋಕಾಯುಕ್ತ ತನಿಖಾ ವರದಿಯಲ್ಲಿ ಉಲ್ಲೇಖಿಸಲಾಗಿದೆ ಎಂದು ಮೂಲವೊಂದು ತಿಳಿಸಿದೆ. ಮುಡಾ ಆಯುಕ್ತರು, ರೆವಿನ್ಯೂ ಅಧಿಕಾರಿಗಳು ನಿಯಮಗಳನ್ನು ಗಾಳಿಗೆ ತೂರಿರುವುದು ಕಂಡು ಬಂದಿದೆ.

ಮುಡಾ ಹಗರಣ: ಸಿದ್ದರಾಮಯ್ಯಗೆ ಲೋಕಾಯುಕ್ತ ಕ್ಲೀನ್‌ಚಿಟ್‌ Read More »

ಬಿಜೆಪಿಯಲ್ಲೀಗ ರಾಮುಲು-ರೆಡ್ಡಿ ಕಲಹ

ಒಂದು ಕಾಲದ ಗೆಳೆಯರ ನಡುವೆ ತೀವ್ರ ಕಚ್ಚಾಟ ಬೆಂಗಳೂರು: ರಾಜಕೀಯದಲ್ಲಿ ಏನು ಬೇಕಾದರೂ ಆಗಬಹುದು ಎನ್ನುವುದಕ್ಕೆ ಬಿಜೆಪಿಯಲ್ಲಿ ಈಗ ನಡೆಯುತ್ತಿರುವ ಶ್ರೀ ರಾಮುಲು ಮತ್ತು ಜನಾರ್ದನ ರೆಡ್ಡಿ ಕಲಹವೇ ಸಾಕ್ಷಿ. ಬಳ್ಳಾರಿಯ ಪ್ರಭಾವಿ ರಾಜಕೀಯ ನಾಯಕರಾಗಿದ್ದ ಶ್ರೀರಾಮುಲು ಮತ್ತು ರೆಡ್ಡಿ ಒಂದು ಕಾಲದಲ್ಲಿ ರಾಮ-ಲಕ್ಷ್ಮಣರಂತೆ ಪಕ್ಷಕ್ಕಾಗಿ ದುಡಿದವರು. ಆದರೆ ಈಗ ಪರಸ್ಪರರ ವಿರುದ್ಧ ಕತ್ತಿ ಮಸೆಯುವ ಹಂತಕ್ಕೆ ಅವರ ದ್ವೇಷ ಬಂದಿದೆ. ಜನಾರ್ದನ ರೆಡ್ಡಿ ಮತ್ತು ಶ್ರೀರಾಮುಲು ಮಧ್ಯೆ ಕಿಡಿ ಹಚ್ಚಿದ್ದು ಉಪಚುನಾವಣೆಯ ಪರಾಜಿತ ಅಭ್ಯರ್ಥಿ ಬಂಗಾರು

ಬಿಜೆಪಿಯಲ್ಲೀಗ ರಾಮುಲು-ರೆಡ್ಡಿ ಕಲಹ Read More »

ರಾಜ್ಯ ಬಿಜೆಪಿ ಉಸ್ತುವಾರಿ ರಾಧಾ ಮೋಹನ್ ಅಗರ್ ವಾಲ್‍ ಬೆಂಗಳೂರಿಗೆ | ಸ್ವಾಗತಿಸಿದ ಕಿಶೋರ್ ಕುಮಾರ್ ಪುತ್ತೂರು

ಬೆಂಗಳೂರು : ರಾಜ್ಯ ಬಿಜೆಪಿ ಉಸ್ತುವಾರಿ ರಾಧಾ ಮೋಹನ್ ಅಗರ್ ವಾಲ್ ಇಂದು ಬೆಂಗಳೂರಿಗೆ ಆಗಮಿಸಿದರು. ಬೆಂಗಳೂರು ವಿಮಾನ ನಿಲ್ದಾಣದಲ್ಲಿ ಅವರನ್ನು ವಿಧಾನ ಪರಿಷತ್ ಸದಸ್ಯರಾದ ಕಿಶೋರ್ ಕುಮಾರ್ ಪುತ್ತೂರು ಸ್ವಾಗತಿಸಿದರು. ಈ ಸಂದರ್ಭದಲ್ಲಿ ಶಾಸಕರಾದ ವೇದವ್ಯಾಸ ಕಾಮತ್‍, ಹರೀಶ್‍ ಪೂಂಜಾ, ಮತ್ತಿತರ ಬಿಜೆಪಿ ಪ್ರಮುಖರು ಉಪಸ್ಥಿತರಿದ್ದರು.

ರಾಜ್ಯ ಬಿಜೆಪಿ ಉಸ್ತುವಾರಿ ರಾಧಾ ಮೋಹನ್ ಅಗರ್ ವಾಲ್‍ ಬೆಂಗಳೂರಿಗೆ | ಸ್ವಾಗತಿಸಿದ ಕಿಶೋರ್ ಕುಮಾರ್ ಪುತ್ತೂರು Read More »

ಜ.25 : ಪ್ರತಿಷ್ಠಿತ ಕೋ ಓಪರೇಟಿವ್ ಟೌನ್‍ ಬ್ಯಾಂಕ್‍ ಆಡಳಿತ ಮಂಡಳಿಗೆ ಚುನಾವಣೆ | ನನ್ನ ಸ್ವಂತ ನಿರ್ಧಾರದಿಂದ ನಾನು ಪಕ್ಷೇತರನಾಗಿ ಸ್ಪರ್ಧಿಸುತ್ತಿದ್ದೇನೆ : ಸದಾಶಿವ ಪೈ

ಪುತ್ತೂರು : ಪ್ರತಿಷ್ಠಿತ ಪುತ್ತೂರು ಕೋ ಓಪರೇಟಿವ್ ಟೌನ್‍ ಬ್ಯಾಂಕ್‍ ಆಡಳಿತ ಮಂಡಳಿಗೆ ಜ.25 ಶನಿವಾರ ಚುನಾವಣೆ ನಡೆಯಲಿದ್ದು, ಕಳೆದ 20 ವರ್ಷಗಳಿಂದ ಬಿಜೆಪಿ ಬೆಂಬಲಿತ ಸಹಕಾರಿ ಭಾರತಿಯಲ್ಲಿ ನಿರ್ದೇಶಕನಾಗಿ ಗುರುತಿಸಿಕೊಂಡ ನನಗೆ ಈ ಬಾರಿ ಸಹಕಾರ ಭಾರತಿಯಿಂದ ಅವಕಾಶ ವಂಚಿತನಾಗಿದ್ದು, ಈ ನಿಟ್ಟಿನಲ್ಲಿ ಈ ಬಾರಿ ಪಕ್ಷೇತರನಾಗಿ ಸ್ಪರ್ಧಿಸುತ್ತಿದ್ದೇನೆ. ಮತದಾರರು ನನ್ನನ್ನು ಗೆಲ್ಲಿಸಬೇಕಾಗಿ ಪಕ್ಷೇತರ ಅಭ್ಯರ್ಥಿ ಸದಾಶಿವ ಪೈ ತಿಳಿಸಿದ್ದಾರೆ. ಮಂಗಳವಾರ ಪತ್ರಿಕಾಗೋಷ್ಠಿಯಲ್ಲಿ ಅವರು ಮಾತನಾಡಿ, ಕೆಲವೊಂದು ಆಂತರಿಕ ಕಾರಣ ಸಹಿತ ಅವಕಾಶವಾದಿಗಳ ಕಾರಣದಿಂದ ನನಗೆ

ಜ.25 : ಪ್ರತಿಷ್ಠಿತ ಕೋ ಓಪರೇಟಿವ್ ಟೌನ್‍ ಬ್ಯಾಂಕ್‍ ಆಡಳಿತ ಮಂಡಳಿಗೆ ಚುನಾವಣೆ | ನನ್ನ ಸ್ವಂತ ನಿರ್ಧಾರದಿಂದ ನಾನು ಪಕ್ಷೇತರನಾಗಿ ಸ್ಪರ್ಧಿಸುತ್ತಿದ್ದೇನೆ : ಸದಾಶಿವ ಪೈ Read More »

error: Content is protected !!
Scroll to Top