ರಾಜಕೀಯ

ಮುರಳೀಕೃಷ್ಣ ಹಸಂತಡ್ಕರ ಬಂಧನ | ಸಿದ್ದರಾಮಯ್ಯ ಸರ್ಕಾರದ ಹಿಂದೂ ವಿರೋಧಿ ನೀತಿಯ ಮುಖ – ಅರುಣ್ ಕುಮಾರ್ ಪುತ್ತಿಲ

ಪುತ್ತೂರು: ಭಯೋತ್ಪಾದಕ ಚಟುವಟಿಕೆಯ ವಿರುದ್ಧ ತುಮಕೂರಿನಲ್ಲಿ ನಡೆಯಲಿದ್ದ ಪ್ರತಿಭಟನೆಗೆ ಭಾಷಣ ಮಾಡಲೆಂದು ತೆರಳುತ್ತಿದ್ದ ಬಜರಂಗದಳದ ಪ್ರಾಂತ ಸಹ ಸಂಯೋಜಕ ಮುರಳೀಕೃಷ್ಣ ಹಸಂತಡ್ಕರನ್ನು ತುಮಕೂರು ಪೊಲೀಸರು ತಮ್ಮ ವಶಕ್ಕೆ ಪಡೆದುಕೊಂಡಿರುವುದು ಖಂಡನೀಯ ಸಿದ್ದರಾಮಯ್ಯ ಸರ್ಕಾರದ ಹಿಂದೂ ವಿರೋಧಿ ಎಲ್ಲಿಯವರೆಗೆ ತಲುಪಿದೆ ಎಂದರೆ ಭಯೋತ್ಪಾದನೆಯ ವಿರುದ್ಧ ಕೂಡ ಮಾತನಾಡದ ಸ್ಥಿತಿ ರಾಜ್ಯದಲ್ಲಿ ನಿರ್ಮಾಣವಾಗಿದೆ. ರಾಜ್ಯದಲ್ಲಿ ಯಾವೂದೇ ಹಿಂದುವಿಗೆ ಅನ್ಯಾಯವಾದರೂ ನಾವು ಅವರ ಜೊತೆಗಿರುತ್ತೇವೆ ಎಂದು ಅರುಣ್ ಪುತ್ತಿಲ ತಿಳಿಸಿದ್ದಾರೆ.

ಮುರಳೀಕೃಷ್ಣ ಹಸಂತಡ್ಕರ ಬಂಧನ | ಸಿದ್ದರಾಮಯ್ಯ ಸರ್ಕಾರದ ಹಿಂದೂ ವಿರೋಧಿ ನೀತಿಯ ಮುಖ – ಅರುಣ್ ಕುಮಾರ್ ಪುತ್ತಿಲ Read More »

ಇಂದು ದಿಲ್ಲಿಯಲ್ಲಿ ಲೋಕಸಭೆ ಚುನಾವಣೆಯ ಮಹತ್ವದ ಸಭೆ | ಎರಡನೇ ಸುತ್ತಿನ ಅಭ್ಯರ್ಥಿಗಳ ಪಟ್ಟಿ ಬಿಡುಗಡೆ

ಬೆಂಗಳೂರು: ಲೋಕಸಭಾ ಚುನಾವಣೆಯ ಎರಡನೇ ಸುತ್ತಿನ ಪಟ್ಟಿ ಬಿಡುಗಡೆ ಹಿನ್ನಲೆಯಲ್ಲಿ ದಿಲ್ಲಿಯಲ್ಲಿ ಮಹತ್ವದ ಸಭೆ ಇಂದು ನಡೆಯಲಿದೆ. ಈಗಾಗಲೇ 195 ಮಂದಿ ಪ್ರಥಮ ಪಟ್ಟಿ ಬಿಡುಗಡೆಗೊಂಡಿದ್ದು, ಇಂದಿನ ಸಭೆಯಲ್ಲಿ ಕರ್ನಾಟಕದ 28 ಅಭ್ಯರ್ಥಿಗಳ ಹೆಸರು ಘೊಷಣೆಯಾಗಲಿದೆ ಎಂದು ಮಾಜಿ ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪ ತಿಳಿಸಿದ್ದಾರೆ. ಲೋಕಸಭಾ ಚುನಾವಣೆಗೆ ಬಿಜೆಪಿ ಅಭ್ಯರ್ಥಿಗಳ ಮೊದಲ ಪಟ್ಟಿ ಬಿಡುಗಡೆಯಾಗಿದೆ. ಮೊದಲ ಪಟ್ಟಿಯಲ್ಲಿ ಕರ್ನಾಟಕದ ಹೆಸರು ಇರಲಿಲ್ಲ. ಆದರೆ ಬುಧವಾರ ಬಿಡುಗಡೆಯಾಗುವ ಎರಡನೇ ಪಟ್ಟಿಯಲ್ಲಿ ರಾಜ್ಯದ 28 ಲೋಕಸಭಾ ಅಭ್ಯರ್ಥಿಗಳ ಹೆಸರು ಇರಲಿದೆ

ಇಂದು ದಿಲ್ಲಿಯಲ್ಲಿ ಲೋಕಸಭೆ ಚುನಾವಣೆಯ ಮಹತ್ವದ ಸಭೆ | ಎರಡನೇ ಸುತ್ತಿನ ಅಭ್ಯರ್ಥಿಗಳ ಪಟ್ಟಿ ಬಿಡುಗಡೆ Read More »

ಲೋಕಸಭೆ ಚುನಾವಣೆಯಲ್ಲಿ ದ.ಕ.ಜಿಲ್ಲೆಯಲ್ಲಿ ಮೂರು ಲಕ್ಷಕ್ಕೂ ಅಧಿಕ ಮತಗಳ ಲೀಡ್‍ ನಿಂದ ಗೆಲುವು | ಜಿಲ್ಲಾಧ್ಯಕ್ಷ ಸತೀಶ್ ಕುಂಪಲ

ಪುತ್ತೂರು: ಲೋಕಸಭಾ ಚುನಾವಣೆಯಲ್ಲಿ ಈ ಬಾರಿ ಮೂರು ಲಕ್ಷಕ್ಕೂ ಅಧಿಕ ಮತಗಳಿಂದ ಬಿಜೆಪಿ ದ..ಕ.ಜಿಲ್ಲೆಯಲ್ಲಿ ಗೆಲುವು ಸಾಧಿಸಲಿದೆ ಎಂದು ಬಿಜೆಪಿ ಜಿಲ್ಲಾಧ್ಯಕ್ಷ ಸತೀಶ್ ಕುಂಪಲ ವಿಶ್ವಾಸ ವ್ಯಕ್ತಪಡಿಸಿದ್ದಾರೆ. ಲೋಕಸಭೆ ಚುನಾವಣೆ ಹಿನ್ನಲೆಯಲ್ಲಿ ಪುತ್ತೂರು ಬಿಜೆಪಿ ಮಂಡಲ ವತಿಯಿಂದ ಕಲ್ಲೇಗ ಭಾರತ್ ಮಾತಾ ಸಮುದಾಯ ಭವನದಲ್ಲಿ ನಡೆದ ಗ್ರಾಮ ಚಲೋ ಕಾರ್ಯಾಗಾರ ಉದ್ಘಾಟಿಸಿ ಅವರು ಮಾತನಾಡಿದರು. ಈಗಾಗಲೇ 195 ಅಭ್ಯರ್ಥಿಗಳ ಪಟ್ಟಿ ಘೋಷಣೆಯಾಗಿದ್ದು, 3-4 ದಿನಗಳಲ್ಲಿ ದ.ಕ. ಕ್ಷೇತ್ರದ ಅಭ್ಯರ್ಥಿ ಘೋಷಣೆಯಾಗಬಹುದು. ನರೇಂದ್ರ ಮೋದಿಯವರು 10 ವರ್ಷ ಪ್ರಧಾನಿಯಾಗಿ

ಲೋಕಸಭೆ ಚುನಾವಣೆಯಲ್ಲಿ ದ.ಕ.ಜಿಲ್ಲೆಯಲ್ಲಿ ಮೂರು ಲಕ್ಷಕ್ಕೂ ಅಧಿಕ ಮತಗಳ ಲೀಡ್‍ ನಿಂದ ಗೆಲುವು | ಜಿಲ್ಲಾಧ್ಯಕ್ಷ ಸತೀಶ್ ಕುಂಪಲ Read More »

ಈ ಬಾರಿ ದ.ಕ.ಜಿಲ್ಲೆಯಿಂದ ಲೋಕಸಭಾ ಟಿಕೇಟ್ ಒಕ್ಕಲಿಗ ಸಮುದಾಯದ  ಪ್ರಭಾವಿ ನಾಯಕ ಕಿರಣ್ ಬುಡ್ಲೆಗುತ್ತುಗೆ | ಕಿರಣ್ ಬುಡ್ಲೆಗುತ್ತು ಹೆಸರು ಮುಂಚೂಣಿಯಲ್ಲಿ

ಮಂಗಳೂರು : ಈ ಬಾರಿ ದಕ್ಷಿಣ ಕನ್ನಡ ಜಿಲ್ಲೆಯಿಂದ ಸುಳ್ಯ ಮೂಲದ ಯುವ ನಾಯಕ ಕಿರಣ್ ಬುಡ್ಲೆಗುತ್ತು ಅವರಿಗೆ ಲೋಕಸಭಾ ಟಿಕೇಟ್ ನೀಡುವ ಎಲ್ಲಾ ಸಾಧ್ಯತೆಗಳು ದಟ್ಟವಾಗಿದೆ. ಡಿಕೆಶಿ ಆಪ್ತ ವಲಯದಲ್ಲಿ ಕಾಣಿಸಿಕೊಂಡಿರುವ ಒಕ್ಕಲಿಗ ಸಮುದಾಯದ ಪ್ರಭಾವಿ ನಾಯಕ ಕಿರಣ್ ಬುಡ್ಲೆಗುತ್ತು ವಿಗೆ ಹೈಕಮಾಂಡ್ ಕೃಪಾಕಟಾಕ್ಷ ತೋರಿದೆ ಎಂಬುದು ಬಹಿರಂಗವಾಗಿದೆ. ಉಳಿದ ಆಕಾಂಕ್ಷಿಗಳಾದ ರಮಾನಾಥ ರೈ, ವಿನಯ್ ಕುಮಾರ್ ಸೊರಕೆ, ಪದ್ಮರಾಜ್ ಈ ಮೂವರ ನಡುವೆ ಕಿರಣ್ ಬುಡ್ಲೆಗುತ್ತು ಹೆಸರು ಮುಂಚೂಣಿಯಲ್ಲಿದೆ ಎಂಬ ಮಾಹಿತಿ ಲಭ್ಯವಾಗಿದೆ. ಕಿರಣ್

ಈ ಬಾರಿ ದ.ಕ.ಜಿಲ್ಲೆಯಿಂದ ಲೋಕಸಭಾ ಟಿಕೇಟ್ ಒಕ್ಕಲಿಗ ಸಮುದಾಯದ  ಪ್ರಭಾವಿ ನಾಯಕ ಕಿರಣ್ ಬುಡ್ಲೆಗುತ್ತುಗೆ | ಕಿರಣ್ ಬುಡ್ಲೆಗುತ್ತು ಹೆಸರು ಮುಂಚೂಣಿಯಲ್ಲಿ Read More »

ಲೋಕಸಭೆ ಚುನಾವಣೆ | ಕಾಸರಗೋಡು ಕ್ಷೇತ್ರದಿಂದ ಸಮರ್ಥ ಅಭ್ಯರ್ಥಿ, ವಿದ್ಯಾವಂತೆ ಅಶ್ವಿನಿ ಎಂ.ಎಲ್.ಗೆ ಟಿಕೇಟ್

ಕಾಸರಗೋಡು ಲೋಕಸಭಾ ಕ್ಷೇತ್ರದ‌ ಸಮರ್ಥ ಅಭ್ಯರ್ಥಿಯಾಗಿ‌ ಅಶ್ವಿನಿ ಎಂ.ಎಲ್ ಅವರ ಹೆಸರು ಘೋಷಣೆ ಆಗಿದೆ.. ಈ ಮೂಲಕ ಒಂದು ವಿದ್ಯಾವಂತ, ಚುರುಕಾದ ಅಭ್ಯರ್ಥಿಯೊಬ್ಬರು ಕಾಸರಗೋಡಿಗೆ ಸಿಕ್ಕಿದ್ದಾರೆ. ಬೆಂಗಳೂರಿನಲ್ಲಿ ಬೆಳೆದು ಮಂಜೇಶ್ವರದ ಸೊಸೆಯಾಗಿ ಬಂದು, ಮಂಜೇಶ್ವರ ವರ್ಕಾಡಿಯ ಖಾಸಗಿ ಶಾಲೆಯಲ್ಲಿ ಅಧ್ಯಾಪಕಿ ವೃತ್ತಿಯಲ್ಲಿ ತೊಡಗಿಸಿಕೊಂಡು ಮಂಜೇಶ್ವರದ ಹಿಂದುಳಿದ ಸಾಮಾಜಿಕ ಸ್ಥಿತಿಗತಿಗಳನ್ನು ಮನಗಂಡು ‌ಸಮಾಜ ಸೇವೆಗೆ ಇಳಿಯಬೇಕೆಂಬ ತುಡಿತದಿಂದ ಸಮಾಜ ಸೇವೆಗೆ ರಾಜಕೀಯ ಶಕ್ತಿಯೂ ಜೊತೆಗಿರಬೇಕು ಎಂಬ ಆಲೋಚನೆಯಿಂದ ಭಾರತೀಯ ಜನತಾ ಪಕ್ಷದ ಸದಸ್ಯತ್ವ ಪಡೆದು ಜನರ ಬಳಿಗೆ ತೆರಳಿದವರು

ಲೋಕಸಭೆ ಚುನಾವಣೆ | ಕಾಸರಗೋಡು ಕ್ಷೇತ್ರದಿಂದ ಸಮರ್ಥ ಅಭ್ಯರ್ಥಿ, ವಿದ್ಯಾವಂತೆ ಅಶ್ವಿನಿ ಎಂ.ಎಲ್.ಗೆ ಟಿಕೇಟ್ Read More »

ಲೋಕಸಭೆ ಚುನಾವಣೆ | ಬಿಜೆಪಿ ಮೊದಲ ಪಟ್ಟಿ ಬಿಡುಗಡೆ

ಹೊಸದಿಲ್ಲಿ: ಲೋಕಸಭೆ ಚುನಾವಣೆ ಸಂಬಂಧಿಸಿದಂತೆ ಭಾರತೀಯ ಜನತಾ ಪಾರ್ಟಿಯಿಂದ ಮೊದಲ ಪಟ್ಟಿ ಬಿಡುಗಡೆಯಾಗಿದೆ. ಪಟ್ಟಿಯ ಆಧಾರದಲ್ಲಿ ವಾರಣಾಸಿ ಕ್ಷೇತ್ರದಿಂದ ಪ್ರಧಾನಿ ನರೇಂದ್ರ ಮೋದಿ, ಮಾಡುವುದು ಖಚಿತಗೊಂಡಿದ್ದು, ಗಾಂಧಿನಗರದಿಂದ ಅಮಿತ್ ಶಾ, ಲಖನೌದಿಂದ ರಾಜನಾಥ ಸಿಂಗ್, ತಿರುವನಂತಪುರದಿಂದ ರಾಜೀವ್ ಚಂದ್ರಶೇಖರ್, ವಿದಿಶಾದಿಂದ ಮಧ್ಯಪ್ರದೇಶದ ಮಾಜಿ ಸಿ.ಎಂ.ಶಿವರಾಜ್ ಸಿಂಗ್ ಚೌಹಾಣ್ ಸ್ಪರ್ಧಿಸಲಿದ್ದಾರೆ. ಇದೀಗ ಬಿಡುಗಡೆಯಾದ ಮೊದಲ ಪಟ್ಟಿಯಲ್ಲಿ 195 ಮಂದಿಗೆ ಟಿಕೇಟ್ ಘೋಷಣೆಯಾಗಿದೆ. ಆದರೆ ಕರ್ನಾಟಕ ಕ್ಷೇತ್ರಗಳಿಗೆ ಅಭ್ಯರ್ಥಿಗಳ ಘೋಷಣ ಆಗಿಲ್ಲ.

ಲೋಕಸಭೆ ಚುನಾವಣೆ | ಬಿಜೆಪಿ ಮೊದಲ ಪಟ್ಟಿ ಬಿಡುಗಡೆ Read More »

ಅರುಣ್ ಕುಮಾರ್ ಪುತ್ತಿಲ ಬಿಜೆಪಿ ಸೇರ್ಪಡೆಗೆ ಮುಕ್ತ ಅವಕಾಶ | ಯಾವ ಕಾರಣಕ್ಕೆ ಸೇರ್ಪಡೆಗೊಳ್ಳುತ್ತಿಲ ಎಂಬುದಕ್ಕೆ ಅವರೇ ಉತ್ತರ ನೀಡಬೇಕು | ಪತ್ರಿಕಾಗೋಷ್ಠಿಯಲ್ಲಿ ಬಿಜೆಪಿ ಜಿಲ್ಲಾಧ್ಯಕ್ಷ ಸತೀಶ್ ಕುಂಪಲ

ಮಂಗಳೂರು : ಅರುಣ್ ಕುಮಾರ್ ಪುತ್ತಿಲ ಬಿಜೆಪಿ ಸೇರ್ಪಡೆಗೆ ಮುಕ್ತ ಅವಕಾಶ ಕಲ್ಪಿಸಲಾಗಿದ್ದು, ಆಹ್ವಾನ ನೀಡಲಾಗಿದೆ. ಆದರೆ ಯಾವ ಕಾರಣಕ್ಕೆ ಬರುತ್ತಿಲ್ಲ ಎಂದು ಅವರೇ ಉತ್ತರ ಕೊಡಬೇಕು. ಇಂದಿಗೂ ನಾವು ಮಾತುಕತೆ ಹಂತದಲ್ಲಿದ್ದೇವೆ ಎಂದು ಬಿಜೆಪಿ ಜಿಲ್ಲಾಧ್ಯಕ್ಷ ಸತೀಶ್ ಕುಂಪಲ ತಿಳಿಸಿದ್ದಾರೆ. ಶನಿವಾರ ಮಂಗಳೂರು ಬಿಜೆಪಿ ಚುನಾವಣಾ ಕಚೇರಿಯಲ್ಲಿ ನಡೆದ  ಪತ್ರಿಕಾಗೋಷ್ಠಿಯಲ್ಲಿ ಅವರು ಈ ವಿಷಯ ತಿಳಿಸಿದ್ದಾರೆ. ಅರುಣ್‌ ಕುಮಾ‌ರ್ ಪುತ್ತಿಲ ಅವರ ವಿಚಾರ ದೊಡ್ಡ ಮಟ್ಟದಲ್ಲಿ ಚರ್ಚೆ ಆಗುತ್ತಿದೆ. ಈ ಕುರಿತು ಸತ್ಯ ತಿಳಿಸಲು ಪತ್ರಿಕಾಗೋಷ್ಠಿ

ಅರುಣ್ ಕುಮಾರ್ ಪುತ್ತಿಲ ಬಿಜೆಪಿ ಸೇರ್ಪಡೆಗೆ ಮುಕ್ತ ಅವಕಾಶ | ಯಾವ ಕಾರಣಕ್ಕೆ ಸೇರ್ಪಡೆಗೊಳ್ಳುತ್ತಿಲ ಎಂಬುದಕ್ಕೆ ಅವರೇ ಉತ್ತರ ನೀಡಬೇಕು | ಪತ್ರಿಕಾಗೋಷ್ಠಿಯಲ್ಲಿ ಬಿಜೆಪಿ ಜಿಲ್ಲಾಧ್ಯಕ್ಷ ಸತೀಶ್ ಕುಂಪಲ Read More »

ಬಿಜೆಪಿ ಪಕ್ಷದಿಂದ ತುರ್ತು ಕೋರ್ ಕಮಿಟಿ ಸಭೆ

ಪುತ್ತೂರು: ಬಿಜೆಪಿ ವತಿಯಿಂದ ಕೋರ್ ಕಮಿಟಿ ಸಭೆ ನಡೆಯಿತು. ಸಭೆಯಲ್ಲಿ ಮುಂದಿನ ಲೋಕಸಭಾ ಚುನಾವಣೆಯ ಪೂರ್ವ ತಯಾರಿ ಹಿನ್ನಲೆಯಲ್ಲಿ ಸಭೆ ನಡೆಸಲಾಯಿತು. ಸಭೆಯಲ್ಲಿ ಜಿಲ್ಲಾ ಬಿಜೆಪಿ ಅಧ್ಯಕ್ಷ ಸತೀಶ್ ಕುಂಪಲ ಮತ್ತಿತರ ಪ್ರಮುಖರು ಭಾಗವಹಿಸಿದ್ದರು.

ಬಿಜೆಪಿ ಪಕ್ಷದಿಂದ ತುರ್ತು ಕೋರ್ ಕಮಿಟಿ ಸಭೆ Read More »

ಸವಣೂರಿನ ಮೂರು ಮಂದಿಗೆ ಬಿಜೆಪಿಯ ಉನ್ನತ ಹುದ್ದೆ

ಪುತ್ತೂರು: ಸವಣೂರು ಮಹಾ ಶಕ್ತಿ ಕೇಂದ್ರದ ನೂತನ ಅಧ್ಯಕ್ಷರಾಗಿ ಸವಣೂರು ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಅಧ್ಯಕ್ಷ ತಾರಾನಾಥ ಕಾಯರ್ಗ ಆಯ್ಕೆಯಾಗಿದ್ದಾರೆ. ಸುಳ್ಯ ಮಂಡಲದ ಮಹಿಳಾ ಮೋರ್ಚಾದ ನೂತನ ಅಧ್ಯಕ್ಷರಾಗಿ ಸವಣೂರು ಗ್ರಾಮ ಪಂಚಾಯತ್ ಮಾಜಿ ಅಧ್ಯಕ್ಷೆ ಇಂದಿರಾ ಬಿ.ಕೆ ಆಯ್ಕೆಯಾಗಿದ್ದು, ಸುಳ್ಯ ಮಂಡಲ ಎಸ್ ಟಿ ಮೋರ್ಚಾದ ಅಧ್ಯಕ್ಷರಾಗಿ ಸವಣೂರು ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ನಿರ್ದೇಶಕ ಗಂಗಾಧರ ಪೆರಿಯಡ್ಕ ಆಯ್ಕೆಯಾಗಿದ್ದಾರೆ. ಈ ಮೂಲಕ ಸವಣೂರಿನ ಮೂವರಿಗೆ ಬಿಜೆಪಿ ಪಕ್ಷದಲ್ಲಿ ಉನ್ನತ ಜವಾಬ್ದಾರಿ ಲಭಿಸಿದಂತಾಗಿದೆ.

ಸವಣೂರಿನ ಮೂರು ಮಂದಿಗೆ ಬಿಜೆಪಿಯ ಉನ್ನತ ಹುದ್ದೆ Read More »

ಎನ್‍ಡಿಎಗೆ 377 ಸೀಟು | ಇಂಡಿಯಾ ಕೂಟಕ್ಕೆ 93 ಸ್ಥಾನ | ಕರ್ನಾಟಕದಲ್ಲಿ ಎನ್‍ಡಿಎ 23, ಕಾಂಗ್ರೆಸ್ 5 ಸ್ಥಾನ | ಸಮೀಕ್ಷೆ ನೀಡಿದ ಝೀ ನ್ಯೂಸ್

ನವದೆಹಲಿ: ಈಗ ಲೋಕಸಭೆ ಚುನಾವಣೆ ನಡೆದರೆ ಬಿಜೆಪಿ ನೇತೃತ್ವದ ಎನ್ ಡಿ ಎ ಗೆ 377 ಸೀಟು ಗೆಲ್ಲಲಿದೆ. ಇಂಡಿಯಾ ಕೂಟಕ್ಕೆ ಕೇವಲ 93 ಸೀಟು ಬರಲಿವೆ ಎಂದು ಝೀ ನ್ಯೂಸ್ – ಮ್ಯಾಟ್ರಿಜ್ ಚುನಾವಣಾ ಪೂರ್ವ ಸಮೀಕ್ಷೆ ಹೇಳಿದೆ. ಕಳೆದ ಚುನಾವಣೆಯಲ್ಲಿ ಎನ್ ಡಿ ಎ 351 ಹಾಗೂ ಯುಪಿಎ 90 ಸ್ಥಾನ ಗಳಿಸಿದ್ದವು. ಇದೇ ವೇಳೆ, ಕರ್ನಾಟಕದಲ್ಲಿ ಎನ್ ಡಿ ಎ 23 ಹಾಗೂ ಕಾಂಗ್ರೆಸ್ 5 ಸ್ಥಾನ ಗೆಲ್ಲಲ್ಲಿದೆ ಎಂದು ಸಮೀಕ್ಷೆ ಹೇಳಿದೆ.

ಎನ್‍ಡಿಎಗೆ 377 ಸೀಟು | ಇಂಡಿಯಾ ಕೂಟಕ್ಕೆ 93 ಸ್ಥಾನ | ಕರ್ನಾಟಕದಲ್ಲಿ ಎನ್‍ಡಿಎ 23, ಕಾಂಗ್ರೆಸ್ 5 ಸ್ಥಾನ | ಸಮೀಕ್ಷೆ ನೀಡಿದ ಝೀ ನ್ಯೂಸ್ Read More »

error: Content is protected !!
Scroll to Top