ರಾಜಕೀಯ

ಲೋಕಸಭೆ ಚುನಾವಣೆ : ಕೆ ಎಸ್ ಆರ್ ಟಿ ಸಿ ಬಸ್ ಸಂಚಾರದಲ್ಲಿ ವ್ಯತ್ಯಯ

ಸುಳ್ಯ: ಏಪ್ರಿಲ್ 26ರಂದು ನಡೆಯುವ ಲೋಕಸಭಾ ಚುನಾವಣೆಯ ಕರ್ತವ್ಯ ನಿಮಿತ್ತ ಕೆ ಎಸ್ ಆರ್ ಟಿ ಸಿ ಬಸ್ ಸಂಚಾರ ವ್ಯತ್ಯಯವಾಗಲಿದೆ ಎಂದು ಕೆ ಎಸ್ ಆರ್ ಟಿ ಸಿ ಸುಳ್ಯ ಘಟಕ ವ್ಯವಸ್ಥಾಪಕರು ತಿಳಿಸಿದ್ದಾರೆ. ಮತಪೆಟ್ಟಿಗೆ ಮತ್ತು ಸಿಬ್ಬಂದಿಗಳನ್ನು ಮತಕಟ್ಟೆಗಳಿಗೆ ಸಾಗಿಸುವ ಸಲುವಾಗಿ ಕೆ ಎಸ್ ಆರ್ ಟಿ ಸಿ ಬಸ್ ಗಳನ್ನು ನಿಯೋಜಿಸಿರುವುದರಿಂದ ಎ. 25 ,26 ,27ರಂದು ಗ್ರಾಮಾಂತರ ಪ್ರದೇಶಗಳಿಗೆ ಬಸ್ಸು ಸಂಚಾರ ವ್ಯತ್ಯಯವಾಗಲಿದೆ ಎಂದು ತಿಳಿದು ಬಂದಿದೆ. ಈ ನಿಟ್ಟಿನಲ್ಲಿ ಸಾರ್ವಜನಿಕರು ಸಹಕರಿಸಬೇಕಾಗಿದೆ.

ಲೋಕಸಭೆ ಚುನಾವಣೆ : ಕೆ ಎಸ್ ಆರ್ ಟಿ ಸಿ ಬಸ್ ಸಂಚಾರದಲ್ಲಿ ವ್ಯತ್ಯಯ Read More »

ಬಹಿರಂಗ ಪ್ರಚಾರಕ್ಕೆ ಕೊನೆಯ ದಿನ – ದಕ್ಷಿಣಕನ್ನಡ ಜಿಲ್ಲಾಡಳಿತ ಸಂಪೂರ್ಣ ಸಜ್ಜು

ಮಂಗಳೂರು : ಲೋಕಸಭೆ ಚುನಾವಣೆಯ ಕೊನೆಯ ಹಂತದಲ್ಲಿ ದಕ್ಷಿಣ ಕನ್ನಡ ಜಿಲ್ಲೆಗೆ   ಇಂದು ಬಹಿರಂಗ ಪ್ರಚಾರಕ್ಕೆ ಕೊನೆಯ ದಿನವಾಗಿದೆ. ಇನ್ನು ಮತದಾನಕ್ಕೆ ಜಿಲ್ಲಾಡಳಿತ ಸಂಪೂರ್ಣ ಸಜ್ಜಾಗಿದೆ. ಈ ಕುರಿತು ಸುದ್ದಿಗೋಷ್ಠಿಯಲ್ಲಿ ಮಂಗಳವಾರ ಮಾಹಿತಿ ನೀಡಿದ ಜಿಲ್ಲಾಧಿಕಾರಿ ಮುಲ್ಲೈ ಮುಗಿಲನ್ ಎಂ.ಪಿ., ಬುಧವಾರ ಸಂಜೆ 6ರ ಬಳಿಕ ರ‍್ಯಾಲಿ–ಬೀದಿ ಪ್ರಚಾರಕ್ಕೆ ಅವಕಾಶ ಇಲ್ಲ. ಮನೆ ಮನೆಗೆ ಹೋಗಿ ಪ್ರಚಾರ ಮಾಡಬಹುದು. ಈ ಕ್ಷೇತ್ರದ ಮತದಾರರಲ್ಲದ ರಾಜಕೀಯ ಮುಖಂಡರು ಕಡ್ಡಾಯವಾಗಿ ಕ್ಷೇತ್ರವನ್ನು ತೊರೆಯಬೇಕು. ಈ ಅವಧಿಯಲ್ಲಿ ನಿಷೇಧಾಜ್ಞೆ ಜಾರಿಯಲ್ಲಿರಲಿದೆ. ಮದ್ಯ

ಬಹಿರಂಗ ಪ್ರಚಾರಕ್ಕೆ ಕೊನೆಯ ದಿನ – ದಕ್ಷಿಣಕನ್ನಡ ಜಿಲ್ಲಾಡಳಿತ ಸಂಪೂರ್ಣ ಸಜ್ಜು Read More »

ಪುತ್ತೂರಿನಲ್ಲಿ ಅಣ್ಣಾಮಲೈ ರೋಡ್ ಶೋಗೆ ಚಾಲನೆ

ಪುತ್ತೂರು: ಅಣ್ಣಾಮಲೈ ಅವರ ಬೃಹತ್ ರೋಡ್ ಶೋಗೆ ದರ್ಬೆ ವೃತ್ತದ‌ ಬಳಿ ಚಾಲನೆ ನೀಡಲಾಯಿತು. ಅಣ್ಣಾಮಲೈ ಜತೆ ದ.ಕ.ಲೋಕಸಭೆ ಬಿಜೆಪಿ ಅಭ್ಯರ್ಥಿ‌ ಕ್ಯಾ.ಬ್ರಿಜೇಶ್ ಚೌಟ, ಬೆಳ್ತಂಗಡಿ ಶಾಸಕ ಹರೀಶ್ ಪೂಂಜಾ, ಮಾಜಿ ಶಾಸಕ ಸಂಜೀವ ಮಠಂದೂರು, ಅರುಣ್ ಕುಮಾರ್ ಪುತ್ತಿಲ ಮತ್ತಿತರು ಬಿಜೆಪಿ ಮುಖಂಡರು ಉಪಸ್ಥಿತರಿದ್ದರು. ರೋಡ್ ಶೋ ದರ್ಬೆಯಿಂದ ಮುಖ್ಯ ರಸ್ತೆಯಾಗಿ ಬಸ್ ನಿಲ್ದಾಣದ ಬಳಿ‌ ಸಮಾಪನೆಗೊಳ್ಳಲಿದೆ

ಪುತ್ತೂರಿನಲ್ಲಿ ಅಣ್ಣಾಮಲೈ ರೋಡ್ ಶೋಗೆ ಚಾಲನೆ Read More »

ಇಂದು ಪುತ್ತೂರಿಗೆ ಅಣ್ಣಾಮಲೈ | ಮೆಘ ಫ್ರೂಟ್ ಪ್ರೊಸೆಸಿಂಗ್ ಸಂಸ್ಥೆಗೆ ಮಾಜಿ ಶಾಸಕ ಸಂಜೀವ ಮಠಂದೂರು ಭೇಟಿ ಮಾತುಕತೆ

ಪುತ್ತೂರು: ಇಂದು ಪುತ್ತೂರಿಗೆ ಸಿಂಗಂ ಅಣ್ಣಾಮಲೈ ಆಗಮಿಸಲಿರುವ ಹಿನ್ನಲೆಯಲ್ಲಿ ಮೇಘ ಫ್ರೂಟ್ ಪ್ರೊಸೆಸಿಂಗ್ ಸಂಸ್ಥೆಗೆ ಮಾಜಿ ಶಾಸಕ ಸಂಜೀವ ಮಠoದೂರು ಭೇಟಿ ನೀಡಿದರು. ಸಂಸ್ಥೆಯ ಮಾಲಕ ಸತ್ಯಶಂಕರ ಭಟ್ ಅವರ ಜೊತೆ ಮಾಜಿ ಶಾಸಕರು ಮಾತುಕತೆ ನಡೆಸಿದರು. ಈ ಸಂದರ್ಭದಲ್ಲಿ ಮಾಜಿ ವಿಧಾನ ಪರಿಷತ್ ಸದಸ್ಯ ಕ್ಯಾಪ್ಟನ್ ಗಣೇಶ್ ಕಾರ್ಣಿಕ್, ಚುನಾವಣಾ ಸಮಿತಿ ಸಂಚಾಲಕ ಅಧ್ಯಕ್ಷ ಚಣಿಲ ತಿಮಪ್ಪ ಶೆಟ್ಟಿ, ಮಾಜಿ ಜಿಲ್ಲಾ ಪಂಚಾಯಿತಿ ಅಧ್ಯಕ್ಷೆ ಮೀನಾಕ್ಷಿ ಶಾಂತಿಗೋಡು, ಬಿಜೆಪಿ ಪ್ರಮುಖರಾದ ಯತೀಶ್ ಅರುವಾರ, ಹರೀಶ್ ಬೀಜತ್ರೆ,

ಇಂದು ಪುತ್ತೂರಿಗೆ ಅಣ್ಣಾಮಲೈ | ಮೆಘ ಫ್ರೂಟ್ ಪ್ರೊಸೆಸಿಂಗ್ ಸಂಸ್ಥೆಗೆ ಮಾಜಿ ಶಾಸಕ ಸಂಜೀವ ಮಠಂದೂರು ಭೇಟಿ ಮಾತುಕತೆ Read More »

ಲೋಕಸಭಾ ಚುನಾವಣೆ : ಸೂರತ್ ನಲ್ಲಿ ಅವಿರೋಧ ಆಯ್ಕೆ ಮೂಲಕ ಖಾತೆ ತೆರೆದ ಬಿಜೆಪಿ

ನವದೆಹಲಿ: ಸೂರತ್ ಲೋಕಸಭಾ ಕ್ಷೇತ್ರದಲ್ಲಿ ಬಿಜೆಪಿ ಪಕ್ಷದ ಅಭ್ಯರ್ಥಿ ಮುಖೇಶ್ ದಲಾಲ್ ಅವಿರೋಧವಾಗಿ ಆಯ್ಕೆಯಾಗುವ ಮೂಲಕ 2024 ರ ಲೋಕಸಭೆಯಲ್ಲಿ ಬಿಜೆಪಿ ಮೊದಲ ಖಾತೆಯನ್ನು ತೆರೆದಿದೆ. ಈ ಹಿಂದೆ ಕಾಂಗ್ರೆಸ್ ಅಭ್ಯರ್ಥಿ ನಿಲೇಶ್ ಕುಂಬಾನಿ ಅವರ ನಾಮಪತ್ರಕ್ಕೆ ಸಹಿ ಹಾಕಿಲ್ಲ ಎಂದು ಅವರ ಪ್ರಸ್ತಾಪಕರು ಹೇಳಿದ ನಂತರ ಚುನಾವಣಾ ಆಯೋಗ ಅವರ ನಾಮಪತ್ರವನ್ನು ತಿರಸ್ಕರಿಸಿತ್ತು. ಸೂರತ್ ಲೋಕಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ನಿಲೇಶ್ ಕುಂಭಾನಿ ಅವರ ನಾಮಪತ್ರವೂ ತಿರಸ್ಕೃತಗೊಂಡಿದೆ. ಕಾಂಗ್ರೆಸ್ ಬೆಂಬಲಿತ ಅಭ್ಯರ್ಥಿ ಸುರೇಶ್ ಪಡ್ವಾಲ ಅವರಿಗೂ

ಲೋಕಸಭಾ ಚುನಾವಣೆ : ಸೂರತ್ ನಲ್ಲಿ ಅವಿರೋಧ ಆಯ್ಕೆ ಮೂಲಕ ಖಾತೆ ತೆರೆದ ಬಿಜೆಪಿ Read More »

ದ.ಕ.ಲೋಕಸಭಾ ಬಿಜೆಪಿ ಅಭ್ಯರ್ಥಿ ಕ್ಯಾ.ಬ್ರಿಜೇಶ್ ಚೌಟ ಕುರಿತು ಪ್ರಧಾನಿಯಿಂದ ಪತ್ರದ ಮೂಲಕ ಮೆಚ್ಚುಗೆ ಮಾತುಗಳು

ಮಂಗಳೂರು : ಭಾರತೀಯ ಭೂ ಸೇನೆಯಲ್ಲಿ ಪ್ರತಿದಾಳಿ ಕಾರ್ಯಾಚರಣೆಗೆ ಹೆಸರಾಗಿರುವ “ಗೂರ್ಖಾ ರೆಜಿಮೆಂಟ್ ನಲ್ಲಿ ಸೇವೆ ಸಲ್ಲಿಸಿರುವುದು ಶ್ಲಾಘನೀಯ. ಅಲ್ಲದೆ, ‘ಮಂಗಳೂರು ಲಿಟ್ ಫೆಸ್ಟ್’ ಆಯೋಜಿಸುವ ಮೂಲಕ ಸಾಹಿತ್ಯ, ಸಂಸ್ಕೃತಿ ಕುರಿತ ಬದ್ಧತೆ ತೋರಿಸಿದ್ದೀರಿ. ದಕ್ಷಿಣ ಕನ್ನಡ ಜಿಲ್ಲೆಯ ಅಭಿವೃದ್ಧಿ ಮತ್ತು ಜನರ ಕಲ್ಯಾಣಕ್ಕಾಗಿ ನೀವು ತೊಡಗಿಸಿಕೊಳ್ಳುತ್ತೀರಿ ಎಂದು ಖಚಿತವಾಗಿ ಹೇಳಬಲ್ಲೆ. ಹೀಗೆಂದು ಪ್ರಧಾನಿ ನರೇಂದ್ರ ಮೋದಿಯವರು ದ.ಕ.ಲೋಕಸಭಾ ಬಿಜೆಪಿ ಅಭ್ಯರ್ಥಿ ಕ್ಯಾ.ಬ್ರಿಜೇಶ್ ಚೌಟ ಕುರಿತು ಪತ್ರದಲ್ಲಿ ಮೆಚ್ಚುಗೆಯ ಮಾತುಗಳನ್ನಾಡಿದ್ದಾರೆ. ಜಿಲ್ಲೆಯ ಜನರ ಆಶೀರ್ವಾದ ಪಡೆದು ನೀವು

ದ.ಕ.ಲೋಕಸಭಾ ಬಿಜೆಪಿ ಅಭ್ಯರ್ಥಿ ಕ್ಯಾ.ಬ್ರಿಜೇಶ್ ಚೌಟ ಕುರಿತು ಪ್ರಧಾನಿಯಿಂದ ಪತ್ರದ ಮೂಲಕ ಮೆಚ್ಚುಗೆ ಮಾತುಗಳು Read More »

“ನಮ್ಮ ನಡೆ ಮತಗಟ್ಟೆ ಕಡೆ” ಜಾಗೃತಿ ಅಭಿಯಾನಕ್ಕೆ ಚಾಲನೆ | ವಿವಿಧ ಮತಗಟ್ಟೆಗಳಲ್ಲಿ ಧ್ವಜಾರೋಹಣ

ಪುತ್ತೂರು: ಮತದಾರರಿಗೆ ಮತಗಟ್ಟೆಯನ್ನು ಪರಿಚಯಿಸುವ ನಿಟ್ಟಿನಲ್ಲಿ ಚುನಾವಣಾ ಆಯೋಗ ʼನಮ್ಮ ನಡೆ ಮತಗಟ್ಟೆ ಕಡೆʼ ಎಂಬ ಕಾರ್ಯಕ್ರಮವನ್ನು ಹಮ್ಮಿಕೊಂಡು ಹೆಚ್ಚಿನ ಸಂಖ್ಯೆಯಲ್ಲಿ ಮತದಾನವಾಗಬೇಕೆಂಬ ಆಶಯ ಹೊಂದಿದೆ. 206 ಪುತ್ತೂರು ವಿಧಾನಸಭಾ ಕ್ಷೇತ್ರಕ್ಕೆ ಸಂಬಂಧಿಸಿದ 221 ಮತಗಟ್ಟೆಗಳಲ್ಲಿಯೂ ಈ ಕಾರ್ಯಕ್ರಮ ನಡೆದಿದೆ ಎಂದು ಕಾರ್ಯನಿರ್ವಾಹಕ ಅಧಿಕಾರಿ ಹನಮ ರೆಡ್ಡಿ ಹೇಳಿದರು. ಅವರು ಇಂದು ಆಡಳಿತ ಸೌಧದ ಮುಂದೆ ಭಾರತ ಚುನಾವಣಾ ಆಯೋಗ, ದಕ್ಷಿಣ ಕನ್ನಡ ಜಿಲ್ಲಾ ಸ್ವೀಪ್‌ ಸಮಿತಿ, ಪುತ್ತೂರು ತಾಲೂಕು ಆಡಳಿತ, ತಾಲೂಕು ಪಂಚಾಯಿತಿ ಹಾಗೂ ಪುತ್ತೂರು

“ನಮ್ಮ ನಡೆ ಮತಗಟ್ಟೆ ಕಡೆ” ಜಾಗೃತಿ ಅಭಿಯಾನಕ್ಕೆ ಚಾಲನೆ | ವಿವಿಧ ಮತಗಟ್ಟೆಗಳಲ್ಲಿ ಧ್ವಜಾರೋಹಣ Read More »

ಬಿಜೆಪಿ ಮನೆ ಮನೆ ಭೇಟಿ ಮಹಾ ಅಭಿಯಾನಕ್ಕೆ ಚಾಲನೆ | ಬೂತ್ 49 ರಲ್ಲಿ ಮಾಜಿ ಶಾಸಕ ಸಂಜೀವ ಮಠಂದೂರುರವರಿಂದ ಮತ ಯಾಚನೆ

ಉಪ್ಪಿನಂಗಡಿ: ಬಿಜೆಪಿ ವತಿಯಿಂದ ಮನೆ ಮನೆ ಭೇಟಿ ಮಹಾ ಅಭಿಯಾನಕ್ಕೆ ಇಂದು ಮುಂಜಾನೆ ಚಾಲನೆ ನೀಡಲಾಗಿದೆ. ಹಿರೇಬಂಡಾಡಿ ಬೂತ್ ಸಂಖ್ಯೆ 49 ರಲ್ಲಿ ಮಾಜಿ ಶಾಸಕರಾದ ಸಂಜೀವ ಮಠಂದೂರು ಮನೆ ಮನೆ ಭೇಟಿ ನೀಡಿ ಮತ ಯಾಚನೆ ಮಾಡಿದರು. ಈ ಸಂದರ್ಭದಲ್ಲಿ ಸ್ಥಳೀಯ ಬಿಜೆಪಿ ಪ್ರಮುಖರಾದ ಜನಾರ್ದನ ಅನಂತಿಮಾರ್, ವಿಶ್ವನಾಥ ಕೆಮ್ಮಟೆ, ನಿತಿನ್ ತಾರಿತ್ತಡಿ, ಲಕ್ಷ್ಮೀಶ ನಿಡ್ಡೆಂಕಿ, ಸುರೇಶ್ ಹಳೆಮನೆ, ಡೀಕಯ್ಯ ಪನ್ನೊಟ್ಟು, ಭರತ್ ಜಾಲು ಉಪಸ್ಥಿತರಿದ್ದರು.

ಬಿಜೆಪಿ ಮನೆ ಮನೆ ಭೇಟಿ ಮಹಾ ಅಭಿಯಾನಕ್ಕೆ ಚಾಲನೆ | ಬೂತ್ 49 ರಲ್ಲಿ ಮಾಜಿ ಶಾಸಕ ಸಂಜೀವ ಮಠಂದೂರುರವರಿಂದ ಮತ ಯಾಚನೆ Read More »

ಮಾಜಿ ಮೇಯರ್ ಕವಿತಾ ಸನಿಲ್‌ ಬಿಜೆಪಿ ಸೇರ್ಪಡೆ

ಮಂಗಳೂರು: ಮಂಗಳೂರು ಮಹಾನಗರ ಪಾಲಿಕೆಯ ಮಾಜಿ ಮೇಯ‌ರ್, ಕಾಂಗ್ರೆಸ್‌ ನಾಯಕಿ ಕವಿತಾ ಸನಿಲ್ ಬಿಜೆಪಿ ಗೆ ಸೇರ್ಪಡೆಗೊಂಡರು. ಶನಿವಾರ ಬಂಟ್ವಾಳದಲ್ಲಿ ನಡೆದ ಕಾರ್ಯಕ್ರಮದಲ್ಲಿ ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ. ವಿಜಯೇಂದ್ರ ಸಮ್ಮುಖದಲ್ಲಿ ಬಿಜೆಪಿ ಸೇರ್ಪಡೆಯಾದರು. ಪಕ್ಷದ ಧ್ವಜ ನೀಡಿ ವಿಜಯೇಂದ್ರ ಕವಿತಾ ಸನಿಲ್‌ ಅವರನ್ನು ಪಕ್ಷಕ್ಕೆ ಬರಮಾಡಿಕೊಂಡರು. ಬಿಜೆಪಿ ಸೇರ್ಪಡೆ ಬಳಿಕ ಮಾತನಾಡಿದ ಕವಿತಾ ಸನಿಲ್, ಪಕ್ಷದ ತತ್ವ ಸಿದ್ಧಾಂತಗಳನ್ನು ಒಪ್ಪಿ ನಾನು ಪಕ್ಷ ಸೇರ್ಪಡೆಯಾಗಿದ್ದೇನೆ ಎಂದರು.

ಮಾಜಿ ಮೇಯರ್ ಕವಿತಾ ಸನಿಲ್‌ ಬಿಜೆಪಿ ಸೇರ್ಪಡೆ Read More »

ಏ.23 : ಅಣ್ಣಾಮಲೈಯಿಂದ ಸುಳ್ಯ, ಪುತ್ತೂರು, ಉಪ್ಪಿನಂಗಡಿ, ವಿಟ್ಲದಲ್ಲಿ ರೋಡ್ ಶೋ | ನಾಳೆ ಮನೆ ಮನೆ ಭೇಟಿ ಮಹಾ ಅಭಿಯಾನ

ಪುತ್ತೂರು: ಪುತ್ತೂರು ವಿಧಾನಸಭಾ ಕ್ಷೇತ್ರದ 221 ಬೂತ್‍ಗಳಲ್ಲಿ ಮನೆ ಮನೆ ಭೇಟಿ ಕಾರ್ಯಕ್ರಮದ ಮಹಾ ಅಭಿಯಾನ ಏ.21 ಭಾನುವಾರ ನಡೆಯಲಿದ್ದು, ಇದಕ್ಕಾಗಿ ಎಲ್ಲಾ ಪೂರ್ವ ತಯಾರಿ ನಡೆಸಲಾಗಿದೆ ಎಂದು ಪುತ್ತೂರು ವಿಧಾನಸಭಾ ಕ್ಷೇತ್ರದ ಚುನಾವಣಾ ಸಮಿತಿ ಸಂಚಾಲಕ ಚನಿಲ ತಿಮ್ಮಪ್ಪ ಶೆಟ್ಟಿ ತಿಳಿಸಿದ್ದಾರೆ. ಶನಿವಾರ ಪತ್ರಿಕಾಗೋಷ್ಠಿಯಲ್ಲಿ ಅವರು ಮಾತನಾಡಿ, ಬೆಳಿಗ್ಗೆಯಿಂದ ಸಂಜೆ ತನಕ ಮನೆ ಮನೆ ಭೇಟಿ ನಡೆಯಲಿದ್ದು, ಕೇಂದ್ರ ಸರಕಾರದ ಯೋಜನೆ ಹಾಗೂ ಪ್ರಣಾಳಿಕೆ ಕುರಿತು ಮನವರಿಕೆ ಮಾಡಲಾಗುವುದು ಎಂದು ತಿಳಿಸಿದರು. ಈಗಾಗಲೇ ಪ್ರತಾಪಸಿಂಹ ನಾಯಕ್

ಏ.23 : ಅಣ್ಣಾಮಲೈಯಿಂದ ಸುಳ್ಯ, ಪುತ್ತೂರು, ಉಪ್ಪಿನಂಗಡಿ, ವಿಟ್ಲದಲ್ಲಿ ರೋಡ್ ಶೋ | ನಾಳೆ ಮನೆ ಮನೆ ಭೇಟಿ ಮಹಾ ಅಭಿಯಾನ Read More »

error: Content is protected !!
Scroll to Top