ಪುತ್ತೂರಿನಲ್ಲಿ ಮೆಡಿಕಲ್ ಕಾಲೇಜು ಚಿಂತನೆಯನ್ನು ಹುಟ್ಟು ಹಾಕಿದ್ದೇ ಭಾರತೀಯ ಜನತಾ ಪಾರ್ಟಿ | ಕಾಲೇಜು ನಿರ್ಮಾಣ ಚಿಂತನೆಯ ಹಿಂದೆ ಶಾಸಕರ ಪಾತ್ರ ಮಹತ್ವದ್ದು
ಪುತ್ತೂರು: ಪುತ್ತೂರಿನ ಜನತೆಯ ಮುಖ್ಯ ಬೇಡಿಕೆಯಾದ ಮೆಡಿಕಲ್ ಕಾಲೇಜಿಗೆ ಪೂರಕವಾದ ವ್ಯವಸ್ಥೆಯನ್ನು ಜೋಡಿಸಿರುವುದು ಭಾರತೀಯ ಜನತಾ ಪಾರ್ಟಿ. ಕಾಲೇಜು ನಿರ್ಮಾಣದ ಚಿಂತನೆಯ ಹಿಂದೆ ಪುತ್ತೂರು ಶಾಸಕರ ಪಾತ್ರ ಮಹತ್ತರವಾಗಿದೆ ಎಂದು ಬಿಜೆಪಿ ಜಿಲ್ಲಾ ಓಬಿಸಿ ಮೋರ್ಚಾದ ಆರ್.ಸಿ. ನಾರಾಯಣ ಹೇಳಿದರು. ಬುಧವಾರ ಪತ್ರಿಕಾಗೊಷ್ಠಿಯಲ್ಲಿ ಮಾತನಾಡಿದ ಅವರು, ಕಾಲೇಜು ನಿರ್ಮಾಣಕ್ಕೆ ಏನೆಲ್ಲಾ ಪೂರ್ವ ತಯಾರಿ ಬೇಕಾಗಿದೆ ಅದನ್ನು ಈಗಾಗಲೇ ಶಾಸಕರ ನೇತೃತ್ವದಲ್ಲಿ ಮಾಡಲಾಗಿದೆ. ಈಗಾಗಲೇ ಪುತ್ತೂರು ಸರಕಾರಿ ಆಸ್ಪತ್ರೆಗೆ 5.1 ಎಕ್ರೆ ವಿಸ್ತೀರ್ಣ ಹೊಂದಿದ್ದು, ಪಕ್ಕದ ಸಬ್ ರಿಜಿಸ್ಟ್ರಾರ್ […]










