ರಾಜಕೀಯ

ಬಿಳಿಯೂರು-ಪಾದೆಬರಿಯಲ್ಲಿ ಆಶಾ ತಿಮ್ಮಪ್ಪ ಪರ ಮತ ಯಾಚನೆ

ಪುತ್ತೂರು: ಪುತ್ತೂರು ಬಿಜೆಪಿ ಅಭ್ಯರ್ಥಿ ಆಶಾ ತಿಮ್ಮಪ್ಪ ಪರ ಬಂಟ್ವಾಳ ತಾಲೂಕಿನ ಬಿಳಿಯೂರು-ಪಾದೆಬರಿಯಲ್ಲಿ ಮತ ಯಾಚನೆ ನಡೆಯಿತು. ಶಾಸಕ ಸಂಜೀವ ಮಠಂದೂರು ಅವರ ನೇತೃತ್ವದಲ್ಲಿ ನಡೆದ ಮತ ಯಾಚನೆ ಸಭೆಯಲ್ಲಿ ಆಶಾ ತಿಮ್ಮಪ್ಪ ಅವರನ್ನು ಗೆಲ್ಲಿಸಿಕೊಂಡುವಂತೆ ವಿನಂತಿಸಲಾಯಿತು. ಈ ಸಂದರ್ಭದಲ್ಲಿ ಬಿಜೆಪಿ ಕಾರ್ಯಕರ್ತರು, ಸ್ಥಳೀಯರು ಉಪಸ್ಥಿತರಿದ್ದರು.

ಬಿಳಿಯೂರು-ಪಾದೆಬರಿಯಲ್ಲಿ ಆಶಾ ತಿಮ್ಮಪ್ಪ ಪರ ಮತ ಯಾಚನೆ Read More »

ಹಿಂದೂಗಳ ರಕ್ಷಣೆಗೆ ಬಿಜೆಪಿ ಸರಕಾರ ಅವಶ್ಯ |ಭಜರಂಗದಳ ನಿಷೇಧ, ಗೋ ಹತ್ಯೆ ನಿಷೇಧ ವಾಪಾಸ್ ಮೊದಲಾದ ಕಾಂಗ್ರೆಸಿನ ಬೆದರಿಕೆಗೆ ಪ್ರತ್ಯುತ್ತರ ನೀಡಲೇಬೇಕು | ಪಾಂಗಲಾಯಿಯಲ್ಲಿ ನಡೆದ ಭಾರತ ಮಾತಾ ಪೂಜನಾದಲ್ಲಿ ಮುರಳೀಕೃಷ್ಣ ಹಸಂತ್ತಡ್ಕ

ಪುತ್ತೂರು: ಈಗಾಗಲೇ ಕಾಂಗ್ರೆಸ್ ತಿಳಿಸಿರುವಂತೆ ಅಧಿಕಾರಕ್ಕೆ ಬಂದರೆ ಬಜರಂಗದಳಕ್ಕೆ ನಿಷೇಧ ಹೇರುತ್ತಾರಂತೆ. ಗೋ ಹತ್ಯೆ ನಿಷೇಧ ಮಸೂದೆಯನ್ನು ವಾಪಾಸ್ ಮಾಡುವುದಾಗಿ ತಿಳಿಸಿದ್ದಾರೆ. ಹಾಗಾಗಿ ಕಾಂಗ್ರೆಸ್ ಅಧಿಕಾರಕ್ಕೆ ಬಾರದಂತೆ ತಡೆಯುವ ಅವಶ್ಯಕತೆ ಇದೆ. ಇದನ್ನು ತಡೆಯಲು ವ್ಯಕ್ತಿಯೋರ್ವನಿಂದ ಅಸಾಧ್ಯ. ಸಂಘಟನೆಯ ಶಕ್ತಿಯಿರುವ ಬಿಜೆಪಿ ಸರಕಾರ ಅಧಿಕಾರಕ್ಕೆ ಬರಲೇಬೇಕು ಎಂದು ಭಜರಂಗದಳದ ಪ್ರಾಂತ ಸಹಸಂಯೋಜಕ ಮುರಳೀಕೃಷ್ಣ ಹಸಂತ್ತಡ್ಕ ಹೇಳಿದರು. ಪಾಂಗಲಾಯಿಯ ಸಂತೋಷ್ ಬೋನಂತಾಯ ಅವರ ಮನೆಯಲ್ಲಿ ಭಾನುವಾರ ಸಂಜೆ ನಡೆದ ಭಾರತ ಮಾತಾ ಪೂಜನಾ ಕಾರ್ಯಕ್ರಮದಲ್ಲಿ ಅವರು ದಿಕ್ಸೂಚಿ ಭಾಷಣ

ಹಿಂದೂಗಳ ರಕ್ಷಣೆಗೆ ಬಿಜೆಪಿ ಸರಕಾರ ಅವಶ್ಯ |ಭಜರಂಗದಳ ನಿಷೇಧ, ಗೋ ಹತ್ಯೆ ನಿಷೇಧ ವಾಪಾಸ್ ಮೊದಲಾದ ಕಾಂಗ್ರೆಸಿನ ಬೆದರಿಕೆಗೆ ಪ್ರತ್ಯುತ್ತರ ನೀಡಲೇಬೇಕು | ಪಾಂಗಲಾಯಿಯಲ್ಲಿ ನಡೆದ ಭಾರತ ಮಾತಾ ಪೂಜನಾದಲ್ಲಿ ಮುರಳೀಕೃಷ್ಣ ಹಸಂತ್ತಡ್ಕ Read More »

ತಾಲೂಕು ಸ್ವೀಪ್ ಸಮಿತಿ ವತಿಯಿಂದ ಮತದಾನ ಜಾಗೃತಿ

ಪುತ್ತೂರು: ತಾಲೂಕು ಸ್ವೀಪ್ ಸಮಿತಿ ವತಿಯಿಂದ ಪುತ್ತೂರು ವಿಧಾನಸಭಾ ಕ್ಷೇತ್ರ ಮಟ್ಟದ ಮತದಾನ ಜಾಗೃತಿ ಕಾರ್ಯಕ್ರಮವನ್ನು ಭಾನುವಾರ ಹಮ್ಮಿಕೊಳ್ಳಲಾಗಿತ್ತು. ಕಾರ್ಯಕ್ರಮದಲ್ಲಿ  ಸಾರ್ವಜನಿಕರಿಗೆ ಆಯೋಗದಿಂದ ನೀಡಿದ ವಿವಿಧ ಮತದಾನ ಜಾಗೃತಿ ವಿಡಿಯೋ ಗಳನ್ನು ಪ್ರದರ್ಶನ ಮಾಡಲಾಯಿತು. ಮತದಾನ ಜಾಗೃತಿಗೆ ಸಂಬಂಧಿತ ಭಿತ್ತಿಪತ್ರ ಪತ್ರಗಳನ್ನು ಪ್ರದರ್ಶಿಸಿ, ಸಾರ್ವಜನಿಕರಿಗೆ ಹಂಚಿಕೆ ಮಾಡಲಾಯಿತು.  ಈ ಸಂದರ್ಭದಲ್ಲಿ ತಾಲೂಕು ಸ್ವೀಪ್ ಸಮಿತಿ ಅಧ್ಯಕ್ಷ ನವೀನ್ ಕುಮಾರ್ ಭಂಡಾರಿ, ನಗರಸಭೆ ಪೌರಾಯುಕ್ತ ಮಧು ಎಸ್ ಮನೋಹರ್,  ತಾಲೂಕು ಮಟ್ಟದ ಅಧಿಕಾರಿಗಳು, ಸಿಬ್ಬಂದಿ ವರ್ಗದವರು ಹಾಜರಿದ್ದರು.

ತಾಲೂಕು ಸ್ವೀಪ್ ಸಮಿತಿ ವತಿಯಿಂದ ಮತದಾನ ಜಾಗೃತಿ Read More »

ಕಾಂಗ್ರೆಸ್ ಅಭ್ಯರ್ಥಿ ಅಶೋಕ್ ಕುಮಾರ್ ರೈ ಗ್ರಾಮೀಣ ಪ್ರದೇಶಕ್ಕೆ ಭೇಟಿ | ಮತದಾರರ ಭೇಟಿ |  ಮತಯಾಚನೆ

ಪುತ್ತೂರು: ಪುತ್ತೂರು ವಿಧಾನಸಭಾ ಕ್ಷೆತ್ರದ ವಿವಿಧ ಗ್ರಾಮಗಳಿಗೆಭೇಟಿ ನೀಡಿ ಕಾಂಗ್ರೆಸ್ ಅಭ್ಯರ್ಥಿ ಶನಿವಾರ ಮತಯಾಚನೆ ನಡೆಸಿದರು. ಮುಖ್ಯವಾಗಿ ದಲಿತ ಕಾಲನಿಗಳು ಹಾಗೂ ಮನೆ ಮನೆಗೆ ಭೇಟಿ ನೀಡುವ ಮೂಲಕ ಕಾಂಗ್ರೆಸ್ ಪಕ್ಷವನ್ನು ಗೆಲ್ಲಿಸುವಂತೆ ಮತದಾರರಲ್ಲಿ ಮನವಿ ಮಾಡಿದರು. ಉಪ್ಪಿನಂಗಡಿ, ನೆಕ್ಕಿಲಾಡಿ, ಹಿರೆಬಂಡಾಡಿ, ಬನ್ನೂರು, ಒಳಮೊಗ್ರು, ಅರಿಯಡ್ಕ, ಬಜತ್ತೂರು, ಸೇರಿದಂತೆ ಹಲವು ಗ್ರಾಮಗಳಿಗೆ ಭೇಟಿ ನೀಡಿದ್ದರು. ಈ ವೇಳೆ ಹಲವಾರು ಕಾರ್ಯಕರ್ತರು ಇವರ ಜೊತೆಗಿದ್ದು ಅಭ್ಯರ್ಥಿ ಪರ ಮತಯಾಚನೆ ನಡೆಸಿದರು. ಈ ಸಂಧರ್ಭದಲ್ಲಿ ಮಾತನಾಡಿದ ಅಶೋಕ್ ರೈ ಬಹುತೇಕ

ಕಾಂಗ್ರೆಸ್ ಅಭ್ಯರ್ಥಿ ಅಶೋಕ್ ಕುಮಾರ್ ರೈ ಗ್ರಾಮೀಣ ಪ್ರದೇಶಕ್ಕೆ ಭೇಟಿ | ಮತದಾರರ ಭೇಟಿ |  ಮತಯಾಚನೆ Read More »

ಜೆಡಿಎಸ್ ಅಭ್ಯರ್ಥಿ ದಿವ್ಯಪ್ರಭಾ ಗೌಡರಿಂದ ಮತ ಯಾಚನೆ

ಪುತ್ತೂರು: ಪುತ್ತೂರು ವಿಧಾನಸಭಾ ಜೆಡಿಎಸ್ ಅಭ್ಯರ್ಥಿ ದಿವ್ಯ ಪ್ರಭಾ ಗೌಡ ಪುತ್ತೂರು ನೆಹರುನಗರದಲ್ಲಿ ಮತ ಯಾಚಿಸಿದರು. ನೆಹರೂನಗರದ ಪ್ರಖ್ಯಾತ ಮಳಿಗೆ ಮಂಗಲ್ ಸ್ಟೋರ್ಸ್ ಗೆ ಭೇಟಿ ನೀಡಿ ಮತ ಯಾಚನೆ ನಡೆಸಿದರು. ಈ ಸಂಧರ್ಭದಲ್ಲಿ  ರಾಜ್ಯ ಜೆಡಿಎಸ್ ವಕ್ತಾರೆ ಜೋಹರ ನಿಸಾರ್ ಅಹ್ಮದ್, ಗಧಾದರ್ ಮಲಾರ್, ಐ ಸಿ ಕೈಲಾಶ್ ಗೌಡ ಮತ್ತಿತರರು ಉಪಸ್ಥಿತರಿದ್ದರು.

ಜೆಡಿಎಸ್ ಅಭ್ಯರ್ಥಿ ದಿವ್ಯಪ್ರಭಾ ಗೌಡರಿಂದ ಮತ ಯಾಚನೆ Read More »

ಮೇ8 : ಉಪ್ಪಿನಂಗಡಿಯಲ್ಲಿ ಬೃಹತ್ ರೋಡ್ ಶೋ : ಪೂರ್ವಭಾವಿ ಸಭೆ

ಪುತ್ತೂರು: ಮೇ8 ರಂದು ಉಪ್ಪಿನಂಗಡಿಯಲ್ಲಿ ನಡೆಯಲಿರುವ  ಬೃಹತ್ ರೋಡ್ ಶೋ ಯಶಸ್ಸಿಗಾಗಿ ಪೂರ್ವಭಾವಿ ಸಭೆ ಉಪ್ಪಿನಂಗಡಿ ಶ್ರೀ ಶಾರದಾ ಕಲಾ ಮಂಟಪದಲ್ಲಿ ನಡೆಯಿತು. ಶಾಸಕ ಸಂಜೀವ ಮಟಂದೂರು ಅವರ  ನೇತೃತ್ವದಲ್ಲಿ ನಡೆದ ಸಭೆಯಲ್ಲಿ ಜಾಥಾದ ಯಶಸ್ಸಿಸ ರೂಪುರೇಷೆಗಳ ಕುರಿತು ಚರ್ಚಿಸಲಾಯಿತು. ಈ ಸಂದರ್ಭದಲ್ಲಿ ಪಕ್ಷದ ಪ್ರಮುಖರು,ಶಕ್ತಿಕೇಂದ್ರ ಸಂಚಾಲಕರು, ಕಾರ್ಯಕರ್ತರು ಉಪಸ್ಥಿತರಿದ್ದರು.

ಮೇ8 : ಉಪ್ಪಿನಂಗಡಿಯಲ್ಲಿ ಬೃಹತ್ ರೋಡ್ ಶೋ : ಪೂರ್ವಭಾವಿ ಸಭೆ Read More »

ಬಿಜೆಪಿಯಲ್ಲಿ ನಿಷ್ಠಾವಂತರಿಗೆ ಪ್ರಾತಿನಿಧ್ಯ ಇಲ್ಲ : ಬಾಲಕೃಷ್ಣ ಬೋರ್ಕರ್

ಪುತ್ತೂರು: ಭಾರತೀಯ ಜನತಾ ಪಾರ್ಟಿಯಲ್ಲಿ ನಿಷ್ಟಾವಂತರಿಗೆ ಪ್ರಾತಿನಿಧ್ಯ ಇಲ್ಲ. ಬದಲಾಗಿ ವಾಹನ ಚಲಾಯಿಸಿದಂತೆ ಬ್ರೇಕ್, ಕ್ಲಚ್ ಯಾರದೋ ಕೈಯಲ್ಲಿ ಎಂಬಂತಾಗಿದೆ ಎಂದು ಮಾಜಿ ಜಿಲ್ಲಾ ಪಂಚಾಯಿತಿ ಅಧ್ಯಕ್ಷ, ಮಾಜಿ ಜಿಲ್ಲಾ ಬಿಜೆಪಿ ಅಧ್ಯಕ್ಷ ಬಾಲಕೃಷ್ಣ ಬೋರ್ಕರ್ ಹೇಳಿದ್ದಾರೆ. ಅವರು ಶನಿವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ಬಿಜೆಪಿ ಗ್ರಾಮ ಪಂಚಾಯಿತಿ, ತಾಲೂಕು ಪಂಚಾಯಿತಿ, ಜಿಲ್ಲಾ ಪಂಚಾಯಿತಿ ವ್ಯವಸ್ಥೆಯಲ್ಲಿ ಒಟ್ಟಾರೆಯಾಗಿ ತಳಮಟ್ಟದಿಂದಲೇ ನೀತಿ, ನಿಯಮಗಳಿಗೆ ಬದ್ಧತೆಯಿಂದ ಹಿಂದೆ ಪಕ್ಷವನ್ನು ಕಟ್ಟಿ ಬೆಳೆಸಿದ್ದರೂ ಪ್ರಸ್ತುತ ಇಲ್ಲ. ತೆರೆಮರೆಯಲ್ಲಿ ಕುಳಿತು  ತನ್ನದೇ ವೈಯಕ್ತಿಕ, ಆತ್ಮೀಯ

ಬಿಜೆಪಿಯಲ್ಲಿ ನಿಷ್ಠಾವಂತರಿಗೆ ಪ್ರಾತಿನಿಧ್ಯ ಇಲ್ಲ : ಬಾಲಕೃಷ್ಣ ಬೋರ್ಕರ್ Read More »

ಪುತ್ತೂರಿನಲ್ಲಿ ಬೃಹತ್ ರೋಡ್ ಶೋ ನಡೆಸಿದ ಉತ್ತರ ಪ್ರದೇಶ ಸಿಎಂ ಯೋಗಿ

ಪುತ್ತೂರು: ಅಸಂಖ್ಯಾತ ಕಾರ್ಯಕರ್ತರ ಘೋಷಣೆಗಳ ನಡುವೆ ಉತ್ತರಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರು ಪುತ್ತೂರಿನಲ್ಲಿ ಬೃಹತ್ ರೋಡ್ ಶೋ ನಡೆಸಿದರು. ಪುತ್ತೂರು ಶ್ರೀ ಮಹಾಲಿಂಗೇಶ್ವರ ದೇವಸ್ಥಾನದಲ್ಲಿ ವಿಶೇಷ ಪ್ರಾರ್ಥನೆ ಸಲ್ಲಿಸಿ ಬಳಿಕ ರೋಡ್ ಶೋಗೆ ಚಾಲನೆ ನೀಡಲಾಯಿತು. ವಿಜಯಪಥ ಬಿಜೆಪಿ ಪಕ್ಷದ ವಾಹನದ ಮುಂಭಾಗದಲ್ಲಿ ಬಿಜೆಪಿ ಅಭ್ಯರ್ಥಿ ಆಶಾ ತಿಮ್ಮಪ್ಪ ಅವರೊಂದಿಗೆ ನಿಂತ ಯೋಗಿ ಆದಿತ್ಯನಾಥ್ ಅವರು ಕಾರ್ಯಕರ್ತರಿಗೆ ಕೈಬೀಸಿದರು. ಪೋಸ್ಟ್ ಆಫೀಸ್ ಕಚೇರಿಯ ಬಳಿಯಿಂದ ಶ್ರೀಧರ್ ಭಟ್ ಮಳಿಗೆಯಾಗಿ ಕಿಲ್ಲೆ ಮೈದಾನದ ರಸ್ತೆಯುದ್ಧಕ್ಕೂ ಪೊಲೀಸ್ ಬಿಗುಬಂದೋಬಸ್ತ್

ಪುತ್ತೂರಿನಲ್ಲಿ ಬೃಹತ್ ರೋಡ್ ಶೋ ನಡೆಸಿದ ಉತ್ತರ ಪ್ರದೇಶ ಸಿಎಂ ಯೋಗಿ Read More »

ಮಹಾಲಿಂಗೇಶ್ವರನಿಗೆ ಆರತಿ ಬೆಳಗಿದ ಗೋರಖ್ ಪುರದ ಸಂತ | ಪುತ್ತೂರ ಈಶನಿಗೆ ವಿಶೇಷ ಪ್ರಾರ್ಥನೆ ಸಲ್ಲಿಸಿದ ಯೋಗಿ ಆದಿತ್ಯನಾಥ್

ಪುತ್ತೂರು: ಬಿಜೆಪಿ ಅಭ್ಯರ್ಥಿ ಆಶಾ ತಿಮ್ಮಪ್ಪ ಅವರ ಪರವಾಗಿ ಚುನಾವಣಾ ಪ್ರಚಾರಕ್ಕೆ ಆಗಮಿಸಿದ ಗೋರಖಪುರದ ಸಂತ, ಉತ್ತರಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರನ್ನು ಪುತ್ತೂರು ಶ್ರೀ ಮಹಾಲಿಂಗೇಶ್ವರ ದೇವಸ್ಥಾನದಲ್ಲಿ ತುಳಸಿ ಹಾರವನ್ನು ಹಾಕಿ ಸ್ವಾಗತಿಸಲಾಯಿತು. ಬಳಿಕ ಶ್ರೀ ಮಹಾಲಿಂಗೇಶ್ವರ ದೇವರ ಗರ್ಭಗುಡಿಯ ಮುಂಭಾಗದಲ್ಲಿ ದೇವರಿಗೆ ಆರತಿ ಬೆಳಗಿ, ವಿಶೇಷ ಪ್ರಾರ್ಥನೆ ಸಲ್ಲಿಸಿದರು. ದೇವಸ್ಥಾನದ ಪ್ರಧಾನ ಅರ್ಚಕ ವಸಂತ ಕೆದಿಲಾಯ ಅವರು ಧಾರ್ಮಿಕ ವಿಧಿವಿಧಾನ ನೆರವೇರಿಸಿದರು. ಈ ಸಂದರ್ಭ ಪುತ್ತೂರು ಬಿಜೆಪಿ ಅಭ್ಯರ್ಥಿ ಆಶಾ ತಿಮ್ಮಪ್ಪ, ಸಂಸದ ನಳಿನ್

ಮಹಾಲಿಂಗೇಶ್ವರನಿಗೆ ಆರತಿ ಬೆಳಗಿದ ಗೋರಖ್ ಪುರದ ಸಂತ | ಪುತ್ತೂರ ಈಶನಿಗೆ ವಿಶೇಷ ಪ್ರಾರ್ಥನೆ ಸಲ್ಲಿಸಿದ ಯೋಗಿ ಆದಿತ್ಯನಾಥ್ Read More »

ಸಾಮಾನ್ಯ ಕಾರ್ಯಕರ್ತೆ ಆಶಾ ತಿಮ್ಮಪ್ಪ ಅವರನ್ನು ವಿಧಾನಸಭೆಗೆ ಕಳುಹಿಸಿಕೊಡಿರೆಂದು ಮನವಿ ಮಾಡಿಕೊಂಡ ಯೋಗಿ | ರಾಮನ ಅಸ್ತಿತ್ವ ಪ್ರಶ್ನಿಸುವ ಕಾಂಗ್ರೆಸ್ ಅವಸಾನದ ಅಂಚಿಗೆ | ಕರ್ನಾಟಕ ವಿಕಾಸ, ರಾಷ್ಟ್ರ ನಿರ್ಮಾಣಕ್ಕಾಗಿ ಈ ಚುನಾವಣೆ | ಕನ್ನಡದಲ್ಲಿ ಮಾತು ಆರಂಭಿಸಿದ ಗೋರಖ್ ಪುರದ ಸಂತ

ಪುತ್ತೂರು: ‘ಪುತ್ತೂರಿನ ಮುತ್ತಿನಂತಹ ಜನತೆಗೆ ನನ್ನ ಪ್ರೀತಿಯ ನಮಸ್ಕಾರಗಳು’ ಎಂದು ಕನ್ನಡದಲ್ಲಿ ಮಾತು ಆರಂಭಿಸಿದ ಉತ್ತರಪ್ರದೇಶದ ಮುಖ್ಯಮಂತ್ರಿ, ಬುಲ್ಡೋಜರ್ ಬಾಬಾ ಖ್ಯಾತಿಯ ಯೋಗಿ ಆದಿತ್ಯನಾಥ್ ಅವರು, ಬಿಜೆಪಿ ಅಭ್ಯರ್ಥಿ ಆಶಾ ತಿಮ್ಮಪ್ಪ ಅವರನ್ನು ಗೆಲ್ಲಿಸಿಕೊಡಿರೆಂದು ಮನವಿ ಮಾಡಿಕೊಂಡರು. ಕರ್ನಾಟಕ ವಿಕಾಸಕ್ಕಾಗಿ, ರಾಷ್ಟ್ರ ನಿರ್ಮಾಣಕ್ಕಾಗಿ ಈ ಚುನಾವಣೆ ನಡೆಯುತ್ತಿದ್ದು, ಪಕ್ಷ – ಸಿದ್ಧಾಂತ ನಂಬಿಕೊಂಡ ಓರ್ವ ಸಾಮಾನ್ಯ ಕಾರ್ಯಕರ್ತೆ ಆಶಾ ತಿಮ್ಮಪ್ಪ ಅವರನ್ನು ವಿಧಾನಸಭೆ ಕಳುಹಿಸಿಕೊಡಿರೆಂದು ಪುತ್ತೂರಿನ ಮತದಾರರಲ್ಲಿ ಕೇಳಿಕೊಂಡರು. ಪುತ್ತೂರು ಶ್ರೀ ಮಹಾಲಿಂಗೇಶ್ವರ ದೇವಸ್ಥಾನಕ್ಕೆ ಭೇಟಿ ನೀಡಿ,

ಸಾಮಾನ್ಯ ಕಾರ್ಯಕರ್ತೆ ಆಶಾ ತಿಮ್ಮಪ್ಪ ಅವರನ್ನು ವಿಧಾನಸಭೆಗೆ ಕಳುಹಿಸಿಕೊಡಿರೆಂದು ಮನವಿ ಮಾಡಿಕೊಂಡ ಯೋಗಿ | ರಾಮನ ಅಸ್ತಿತ್ವ ಪ್ರಶ್ನಿಸುವ ಕಾಂಗ್ರೆಸ್ ಅವಸಾನದ ಅಂಚಿಗೆ | ಕರ್ನಾಟಕ ವಿಕಾಸ, ರಾಷ್ಟ್ರ ನಿರ್ಮಾಣಕ್ಕಾಗಿ ಈ ಚುನಾವಣೆ | ಕನ್ನಡದಲ್ಲಿ ಮಾತು ಆರಂಭಿಸಿದ ಗೋರಖ್ ಪುರದ ಸಂತ Read More »

error: Content is protected !!
Scroll to Top