ರಾಜಕೀಯ

ಮಹಾರಾಷ್ಟ್ರ, ಜಾರ್ಖಂಡ್‌ ಮತದಾನ ಪ್ರಾರಂಭ

ಭಾರಿ ಪೈಪೋಟಿಗೆ ವೇದಿಕೆಯಾದ ಎರಡು ರಾಜ್ಯಗಳ ಚುನಾವಣೆ ಮುಂಬಯಿ : ಮಹಾರಾಷ್ಟ್ರದ ಎಲ್ಲ 288 ಮತ್ತು ಮತ್ತು ಜಾರ್ಖಂಡ್‌ನ ಎರಡನೇ ಹಂತದ ಚುನಾವಣೆ ಇಂದು ನಡೆಯುತ್ತಿದೆ. ಬೆಳಗ್ಗೆ 7 ಗಂಟೆಗೆ ಮತದಾನ ಶುರುವಾಗಿದ್ದು, ಜನರು ಬೆಳಗ್ಗಿನಿಂದಲೇ ಉತ್ಸಾಹದಿಂದ ಮತಗಟ್ಟೆಯತ್ತ ಧಾವಿಸುತ್ತಿದ್ದಾರೆ. ಜೊತೆಗೆ ಉತ್ತರ ಪ್ರದೇಶ ಸೇರಿದಂತೆ ನಾಲ್ಕು ರಾಜ್ಯಗಳ 15 ವಿಧಾನಸಭಾ ಸ್ಥಾನಗಳಿಗೆ ಇಂದು ಉಪಚುನಾವಣೆಯೂ ನಡೆಯುತ್ತಿದೆ. ಮಹಾರಾಷ್ಟ್ರ ವಿಧಾನಸಭೆಯ ಎಲ್ಲಾ 288 ಸ್ಥಾನಗಳಿಗೆ ಮತ್ತು ಜಾರ್ಖಂಡ್‌ನ ಎರಡನೇ ಹಂತದ 38 ಸ್ಥಾನಗಳಿಗೆ ಇಂದು ಮತದಾನ ನಡೆಯುತ್ತಿದೆ. […]

ಮಹಾರಾಷ್ಟ್ರ, ಜಾರ್ಖಂಡ್‌ ಮತದಾನ ಪ್ರಾರಂಭ Read More »

ಕಾಂಗ್ರೆಸ್‌ ಸರಕಾರ ಬಂದ ಬಳಿಕ ನಕ್ಸಲ್‌ ಚಟುವಟಿಕೆ ಹೆಚ್ಚಳ : ಸುನಿಲ್‌ ಕುಮಾರ್‌

ಸಾಹಿತಿ, ಬುದ್ಧಿಜೀವಿಗಳ ಸೋಗಿನಲ್ಲಿ ಇರುವ ನಗರ ನಕ್ಸಲರನ್ನು ಮಟ್ಟ ಹಾಕಲು ಆಗ್ರಹ ಬೆಂಗಳೂರು: ರಾಜ್ಯದಲ್ಲಿ ಕಾಂಗ್ರೆಸ್‌ ಸರಕಾರ ಅಧಿಕಾರಿಕ್ಕೆ ಬಂದ್ಮೇಲೆ ಮತ್ತೆ ನಕ್ಸಲರ ಚಟುವಟಿಕೆಗಳು ಮತ್ತು ಇನ್ನಿತರ ಅಪರಾಧ ಕೃತ್ಯಗಳು ಹೆಚ್ಚಾಗಿವೆ ಎಂದು ಕಾರ್ಕಳ ಶಾಸಕ ಸುನೀಲ್ ಕುಮಾರ್ ಆರೋಪಿಸಿದ್ದಾರೆ.ಹೆಬ್ರಿಯ ನಕ್ಸಲ್‌ ಎನ್‌ಕೌಂಟರ್‌ ಹಿನ್ನೆಲೆಯಲ್ಲಿ ಬೆಂಗಳೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸರ್ಕಾರ ಮತ್ತು ಪೊಲೀಸರ ಕಾರ್ಯಚರಣೆಯನ್ನು ಸ್ವಾಗತ ಮಾಡುತ್ತೇನೆ. ಅನೇಕ ವರ್ಷಗಳಿಂದ ನಕ್ಸಲ್ ಚಟುವಟಿಕೆ ಸ್ತಬ್ದವಾಗಿತ್ತು. ಆದರೆ ಕಳೆದ ಒಂದೂವರೆ ವರ್ಷದಿಂದ ಮತ್ತೆ ನಕ್ಸಲ್ ಚಟುವಟಿಕೆಗಳು ಶುರುವಾಗಿವೆ.

ಕಾಂಗ್ರೆಸ್‌ ಸರಕಾರ ಬಂದ ಬಳಿಕ ನಕ್ಸಲ್‌ ಚಟುವಟಿಕೆ ಹೆಚ್ಚಳ : ಸುನಿಲ್‌ ಕುಮಾರ್‌ Read More »

ಮಾಜಿ ಗೃಹ ಸಚಿವರಿಗೆ ಕಲ್ಲೇಟು : ಆಸ್ಪತ್ರೆಗೆ ದಾಖಲು

ಕಾರಿನ ಮೇಲೆ ಕಲ್ಲು ತೂರಿದ ದುಷ್ಕರ್ಮಿಗಳು ಮುಂಬಯಿ: ವಿಧಾನಸಭೆ ಚುನಾವಣೆ ಕಾವು ತೀವ್ರವಾಗಿರುವ ಮಹಾರಾಷ್ಟ್ರದ ಕಟೋಲ್‌ನಲ್ಲಿ ಶರದ್ ಪವಾರ್ ಬಣದ ನಾಯಕ ಹಾಗೂ ಮಹಾರಾಷ್ಟ್ರದ ಮಾಜಿ ಗೃಹ ಸಚಿವ ಅನಿಲ್ ದೇಶಮುಖ್ ಕಾರಿನ ಮೇಲೆ ಕಲ್ಲು ತೂರಾಟ ನಡೆದು ಅನಿಲ್ ದೇಶಮುಖ್ ಗಾಯಗೊಂಡಿದ್ದಾರೆ. ದೇಶಮುಖ್ ಅವರ ತಲೆಗೆ ಕಲ್ಲು ತಾಗಿ ರಕ್ತಸ್ರಾವವಾಗಿದೆ. ತಕ್ಷಣ ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿತ್ತು. ದಾಳಿ ನಡೆಸಿದವರ ಬಗ್ಗೆ ಇನ್ನೂ ಮಾಹಿತಿ ಸಿಕ್ಕಿಲ್ಲ.ಮಹಾರಾಷ್ಟ್ರ ಚುನಾವಣಾ ಪ್ರಚಾರದ ಕೊನೆಯ ದಿನವಾದ ಸೋಮವಾರ ಸಂಜೆ ಐದು ಗಂಟೆಗೆ

ಮಾಜಿ ಗೃಹ ಸಚಿವರಿಗೆ ಕಲ್ಲೇಟು : ಆಸ್ಪತ್ರೆಗೆ ದಾಖಲು Read More »

ಅಬಕಾರಿ ಇಲಾಖೆ ಭ್ರಷ್ಟಾಚಾರ ತನಿಖೆಗೆ ಎಸ್‌ಐಟಿ ರಚಿಸಿ : ಅಶೋಕ್‌ ಆಗ್ರಹ | ಮದ್ಯ ಮಾರಾಟಗಾರರ ಆರೋಪ ಸುಳ್ಳಾದರೆ ಲೈಸೆನ್ಸ್‌ ರದ್ದುಮಾಡಿ ಎಂದು ಸವಾಲು

ಬೆಂಗಳೂರು: ಅಬಕಾರಿ ಇಲಾಖೆಯಲ್ಲಿ ನಡೆದಿರುವ 700 ಕೋಟಿ ರೂ. ಭ್ರಷ್ಟಾಚಾರ ಆರೋಪ ಕುರಿತು ಎಸ್‌ಐಟಿ ರಚನೆ ಮಾಡಿ ತನಿಖೆ ನಡೆಸಿ ಎಂದು ಸರ್ಕಾರಕ್ಕೆ ವಿರೋಧ ಪಕ್ಷದ ನಾಯಕ ಆರ್‌.ಅಶೋಕ್‌ ಆಗ್ರಹಿಸಿದ್ದಾರೆ. ಹಿಂದಿನ ಬಿಜೆಪಿ ಸರ್ಕಾರದ ವಿರುದ್ಧ ಕಾಂಗ್ರೆಸ್ ಹೊರಿಸಿದ್ದ ಶೇ.40ರಷ್ಟು ಕಮಿಷನ್ ಆರೋಪವನ್ನು ಲೋಕಾಯುಕ್ತ ಸಂಸ್ಥೆ ಸುಳ್ಳೆಂದು ಸಾಬೀತು ಮಾಡಿದೆ. ರಾಜ್ಯದ ಜನರಿಗೆ ಶೇ.40 ಪರ್ಸೆಂಟ್‌ ಸುಳ್ಳು ಹೇಳಿ ಅಧಿಕಾರಕ್ಕೆ ಬಂದ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರೇ 100 ಪರ್ಸೆಂಟ್‌ ಭ್ರಷ್ಟರಾಗಿದ್ದಾರೆ ಎಂದು ಕಿಡಿಕಾರಿದ್ದಾರೆ.18 ತಿಂಗಳ ಕಾಂಗ್ರೆಸ್ ಸರ್ಕಾರದ

ಅಬಕಾರಿ ಇಲಾಖೆ ಭ್ರಷ್ಟಾಚಾರ ತನಿಖೆಗೆ ಎಸ್‌ಐಟಿ ರಚಿಸಿ : ಅಶೋಕ್‌ ಆಗ್ರಹ | ಮದ್ಯ ಮಾರಾಟಗಾರರ ಆರೋಪ ಸುಳ್ಳಾದರೆ ಲೈಸೆನ್ಸ್‌ ರದ್ದುಮಾಡಿ ಎಂದು ಸವಾಲು Read More »

ಸುಳ್ಳು ದೂರುಗಳ ಮೂಲಕ ಹೋರಾಟ ದಮನ : ವಿಜಯೇಂದ್ರ ಆರೋಪ

ಹೋರಾಟಗಾರರ ವಿರುದ್ಧ ಛೇಲಾಗಳನ್ನು ಛೂ ಬಿಡುತ್ತಿರುವ ಸಿದ್ದರಾಮಯ್ಯ ಬೆಂಗಳೂರು: ಮುಖ್ಯಮಂತ್ರಿ ಸಿದ್ದರಾಮಯ್ಯ ಸುಳ್ಳು ದೂರುಗಳನ್ನು ದಾಖಲಿಸಿ ಸಾಮಾಜಿಕ ಕಾರ್ಯಕರ್ತ ಸ್ನೇಹಮಯಿ ಕೃಷ್ಣ ಅವರನ್ನು ಬೆದರಿಸಲು ಯತ್ನಿಸುತ್ತಿದ್ದಾರೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ಆರೋಪಿಸಿದ್ದಾರೆ. ಸ್ನೇಹಮಯಿ ಕೃಷ್ಣ ಅವರನ್ನು ತಕ್ಷಣ ಬಂಧಿಸಿ ಗಡಿಪಾರು ಮಾಡಬೇಕು ಎಂದು ಒತ್ತಾಯಿಸಿ ಕಾಂಗ್ರೆಸ್ ಮುಖಂಡರು ಮೈಸೂರಿನ ಲಕ್ಷ್ಮಿಪುರಂ ಪೊಲೀಸ್ ಠಾಣೆಗೆ ದೂರು ನೀಡಿರುವ ಹಿನ್ನೆಲೆಯಲ್ಲಿ ಸಾಮಾಜಿಕ ಜಾಲತಾಣ ಎಕ್ಸ್‌ನಲ್ಲಿ ವಿಜಯೇಂದ್ರ ತೀವ್ರವಾಗಿ ಕಿಡಿಕಾರಿದ್ದಾರೆ.ತಮ್ಮ ಹಾಗೂ ಕುಟುಂಬದ ಭ್ರಷ್ಟಾಚಾರ ಬಯಲು ಮಾಡಿ ನ್ಯಾಯಾಲಯದಲ್ಲಿ ಹೋರಾಡುತ್ತಿರುವ

ಸುಳ್ಳು ದೂರುಗಳ ಮೂಲಕ ಹೋರಾಟ ದಮನ : ವಿಜಯೇಂದ್ರ ಆರೋಪ Read More »

ಬಿಜೆಪಿ ಸಂಘಟನಾ ಪರ್ವ ಕಾರ್ಯಾಗಾರ

ಪುತ್ತೂರು: ಭಾರತೀಯ ಜನತಾ ಪಾರ್ಟಿ ಪುತ್ತೂರು ವಿಧಾನಸಭಾ ಕ್ಷೇತ್ರದ ನಗರ ಹಾಗೂ ಗ್ರಾಮಾಂತರ ಮಂಡಲಗಳ ಸಂಘಟನಾ ಪರ್ವದ ಕಾರ್ಯಗಾರ ಜೈನ ಭವನದಲ್ಲಿ ನಡೆಯಿತು. ಭಾರತೀಯ ಜನತಾ ಪಾರ್ಟಿ ಸಂಘಟನಾ ಪರ್ವದ ದಕ್ಷಿಣ ಕನ್ನಡ ಜಿಲ್ಲಾ ಚುನಾವಣಾಧಿಕಾರಿ ರಾಜೇಶ್ ಕಾವೇರಿ ಕಾರ್ಯಾಗಾರ ಉದ್ಘಾಟಿಸಿ,  ಸಂಘಟನಾ ಪರ್ವದ ಕುರಿತು ಮಾತನಾಡಿದರು. ಸಂಘಟನೆ ಹಾಗೂ ಸದಸ್ಯತನ ದ ಬಗ್ಗೆ ಸಂಘಟನಾ ಪರ್ವದ ಜಿಲ್ಲಾ ಸಹ ಚುನಾವಣಾಧಿಕಾರಿ ವಿಕಾಸ್ ಪುತ್ತೂರು ಮಾಹಿತಿ ನೀಡಿದರು. ಜಿಲ್ಲಾ ಬಿಜೆಪಿ ಉಪಾಧ್ಯಕ್ಷ , ಪುತ್ತೂರು ಮಂಡಲ ಪ್ರಭಾರಿ

ಬಿಜೆಪಿ ಸಂಘಟನಾ ಪರ್ವ ಕಾರ್ಯಾಗಾರ Read More »

ಪುತ್ತೂರಿನಲ್ಲಿ ಸಾರ್ವಜನಿಕರನ್ನು ಭೇಟಿಯಾದ ಸಂಸದ ಕ್ಯಾ. ಚೌಟ: ಅಹವಾಲು ಸ್ವೀಕಾರ

ಪುತ್ತೂರು: ದಕ್ಷಿಣ ಕನ್ನಡ ಸಂಸದ ಕ್ಯಾ. ಬ್ರಿಜೇಶ್ ಚೌಟ ಅವರು ಇಂದು ಪುತ್ತೂರಿಗೆ ಭೇಟಿ ನೀಡಿದ್ದು, ಈ ವೇಳೆ ಅವರು ಸ್ಥಳೀಯ ಸಾರ್ವಜನಿಕರ ಕುಂದು ಕೊರತೆಗಳನ್ನು ಆಲಿಸಿದರು. ಸಂಸದ ಕ್ಯಾ. ಚೌಟ ಅವರು ಶುಕ್ರವಾರ ಬೆಳಗ್ಗೆ ಪುತ್ತೂರಿನ ಐಬಿಯಲ್ಲಿ ಸಾರ್ವಜನಿಕರನ್ನು ಭೇಟಿ ಮಾಡಿದ್ದಾರೆ. ಈ ಸಂದರ್ಭದಲ್ಲಿ ಈ ಭಾಗದ ನಾಗರಿಕರು ರಸ್ತೆ, ವಿವಿಧ ಅಭಿವೃದ್ಧಿ ಯೋಜನೆಗಳು ಸೇರಿದಂತೆ ಅನೇಕ ವಿಚಾರಗಳ ಬಗ್ಗೆ ಸ್ಪಂದಿಸುವಂತೆ ಮನವಿ ನೀಡಿದ್ದಾರೆ. ಈ ಬಗ್ಗೆ ಪರಿಶೀಲಿಸಿದ ಸಂಸದರು, ಸಂಬಂಧಪಟ್ಟ ಅಧಿಕಾರಿಗಳೊಂದಿಗೆ ಚರ್ಚಿಸಿ ಅಗತ್ಯ

ಪುತ್ತೂರಿನಲ್ಲಿ ಸಾರ್ವಜನಿಕರನ್ನು ಭೇಟಿಯಾದ ಸಂಸದ ಕ್ಯಾ. ಚೌಟ: ಅಹವಾಲು ಸ್ವೀಕಾರ Read More »

ಪೀಠ ಪತನಗೊಳ್ಳುವ ಭೀತಿಯಲ್ಲಿ ಬೆಚ್ಚಿಬೀಳುತ್ತಿರುವ ಸಿದ್ದರಾಮಯ್ಯ : ಸುನಿಲ್‌ ಕುಮಾರ್‌ ಲೇವಡಿ

ಉಪಚುನಾವಣೆ ಸೋಲಿನ ವಾಸನೆ ಬಡಿದು ಬಡಬಡಿಕೆ ಎಂದು ಟೀಕೆ ಕಾರ್ಕಳ : ಉಪಚುನಾವಣೆ ಫಲಿತಾಂಶ ಬರುವ ಮೊದಲೇ ಮುಖ್ಯಮಂತ್ರಿ ಸಿದ್ದರಾಮಯ್ಯನವರು ಭೀತಿಗೊಂಡಿದ್ದಾರೆ. ಪೀಠದಿಂದ ಪತನಗೊಳ್ಳುವ ಕನಸು ಬೀಳುತ್ತಿರುವುದರಿಂದ ಪದೇಪದೆ ಬೆಚ್ಚಿ ಬೀಳುತ್ತಿದ್ದಾರೆ. ನಿರಾಯಾಸವಾಗಿ ಸಿಕ್ಕಿದ ಮುಖ್ಯಮಂತ್ರಿ ಗಾದಿಯನ್ನು ತಮ್ಮದೇ ಪಕ್ಷದವರು ಇನ್ನು ಕೆಲವೇ ದಿನಗಳಲ್ಲಿ ಕಸಿದುಕೊಳ್ಳುತ್ತಾರೆ ಎಂಬ ವಾಸನೆ ಬಡಿಯುತ್ತಿದ್ದಂತೆ ಪ್ರತಿಪಕ್ಷದ ಹೆಗಲ ಮೇಲೆ ಬಂದೂಕು ಇಟ್ಟು ಸ್ವಪಕ್ಷೀಯರನ್ನು ಬೆದರಿಸಲು ಹೊರಟಿದ್ದಾರೆ ಎಂದು ಶಾಸಕ ಸುನೀಲ್‌ ಕುಮಾರ್‌ ಲೇವಡಿ ಮಾಡಿದ್ದಾರೆ. ಕಾಂಗ್ರೆಸ್‌ನ ಒಬ್ಬೊಬ್ಬ ಶಾಸಕರಿಗೆ ಬಿಜೆಪಿ ತಲಾ

ಪೀಠ ಪತನಗೊಳ್ಳುವ ಭೀತಿಯಲ್ಲಿ ಬೆಚ್ಚಿಬೀಳುತ್ತಿರುವ ಸಿದ್ದರಾಮಯ್ಯ : ಸುನಿಲ್‌ ಕುಮಾರ್‌ ಲೇವಡಿ Read More »

ಮುಡಾ ಹಗರಣದಲ್ಲಿ ಇಬ್ಬರು ಸಚಿವರೂ ಭಾಗಿ?

ವಿಚಾರಣೆ ವೇಳೆ ಒತ್ತಡ ಹಾಕಿದವರ ಹೆಸರು ಬಾಯಿಬಿಟ್ಟ ಮುಡಾ ಅಧಿಕಾರಿಗಳು ಬೆಂಗಳೂರು: ಮುಖ್ಯಮಂತ್ರಿ ಸಿದ್ದರಾಮಯ್ಯನವರು ಮುಖ್ಯ ಆರೋಪಿಯಾಗಿರುವ ಮುಡಾ ಹಗರಣ ಈಗ ಇಬ್ಬರು ಸಚಿವರಿಗೂ ಸುತ್ತಿಕೊಳ್ಳುವ ಸಾಧ್ಯತೆ ಗೋಚರಿಸಿದೆ. ಜಾರಿ ನಿರ್ದೇಶನಾಲಯದ ತನಿಖೆ ತೀವ್ರಗೊಳ್ಳುತ್ತಿದ್ದಂತೆ ಮುಡಾದ ಅಧಿಕಾರಿಗಳು ಸೈಟ್‌ ನೀಡಲು ತಮ್ಮ ಮೇಲೆ ಒತ್ತಡ ಹಾಕಿದವರ ಹೆಸರು ಬಾಯಿಬಿಟ್ಟಿದ್ದು, ಈ ಪೈಕಿ ಇಬ್ಬರು ಸಚಿವರೂ ಇದ್ದಾರೆ ಎನ್ನಲಾಗುತ್ತಿದೆ.ಇ.ಡಿ ಮುಡಾದಲ್ಲಿ ಹಿಂದೆ ಕೆಲಸ ಮಾಡಿದ ಉನ್ನತ ಅಧಿಕಾರಿಗಳನ್ನು ವಿಚಾರಣೆಗೆ ಒಳಪಡಿಸಿದೆ. ಈ ವೇಳೆ 50:50 ಅನುಪಾತದಲ್ಲಿ ಸೈಟ್ ಹಂಚಿಕೆ

ಮುಡಾ ಹಗರಣದಲ್ಲಿ ಇಬ್ಬರು ಸಚಿವರೂ ಭಾಗಿ? Read More »

ಮುಡಾ ಹಗರಣ : ಹೈಕೋರ್ಟ್​ ವಿಭಾಗೀಯ ಪೀಠಕ್ಕೆ ಸಿದ್ದರಾಮಯ್ಯ ಮೇಲ್ಮನವಿ

ನ.23ರಂದು ವಿಚಾರಣೆಗೆ ದಿನ ನಿಗದಿ ಬೆಂಗಳೂರು : ಮುಡಾ ಹಗರಣಕ್ಕೆ ಸಂಬಂಧಿಸಿದಂತೆ ಹೈಕೋರ್ಟ್​ ಆದೇಶ ಪ್ರಶ್ನಿಸಿ ಮುಖ್ಯಮಂತ್ರಿ ಸಿದ್ದರಾಮಯ್ಯ ಹೈಕೋರ್ಟ್​ ವಿಭಾಗೀಯ ಪೀಠಕ್ಕೆ ಮೇಲ್ಮನವಿ ಸಲ್ಲಿಸಿದ್ದಾರೆ. ನ್ಯಾಯಮೂರ್ತಿಗಳು ತುರ್ತು ವಿಚಾರಣೆಯ ಅಗತ್ಯವಿದೆಯೇ ಎಂದು ಪ್ರಶ್ನಿಸಿದಾಗ ತುರ್ತು ಅವಶ್ಯಕತೆ ಸೃಷ್ಟಿಯಾಗಿದೆ ನವೆಂಬರ್ 23ಕ್ಕೆ ವಿಚಾರಣೆ ನಡೆಸಬೇಕೆಂದು ಮುಖ್ಯಮಂತ್ರಿ ಪರ ವಕೀಲ ಅಭಿಷೇಕ್ ಸಿಂಘ್ವಿ ಮನವಿ ಮಾಡಿದ್ದಾರೆ ಎನ್ನಲಾಗಿದೆ. ಮನವಿ ಆಲಿಸಿ ವಿಚಾರಣೆಯನ್ನು ನವೆಂಬರ್ 23ಕ್ಕೆ ಹೈಕೋರ್ಟ್​ ವಿಭಾಗೀಯಪೀಠ ನಿಗದಿಪಡಿಸಿದೆ. ಹೈಕೋರ್ಟ್‌ ನೀಡಿರುವ ತೀರ್ಪನ್ನು ಪ್ರಶ್ನಿಸಿ ಕಾನೂನು ಹೋರಾಟ ನಡೆಸಲು

ಮುಡಾ ಹಗರಣ : ಹೈಕೋರ್ಟ್​ ವಿಭಾಗೀಯ ಪೀಠಕ್ಕೆ ಸಿದ್ದರಾಮಯ್ಯ ಮೇಲ್ಮನವಿ Read More »

error: Content is protected !!
Scroll to Top